ಜೀರಾ ರೈಸ್

ಜೀರಾ ರೈಸ್ ಒಂದು ಭಾರತೀಯ ಮತ್ತು ಪಾಕಿಸ್ತಾನಿ ಖಾದ್ಯವಾಗಿದ್ದು ಅನ್ನ ಮತ್ತು ಜೀರಿಗೆ ಬೀಜಗಳನ್ನು ಹೊಂದಿರುತ್ತದೆ.[೧] ಇದು ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ದಿನನಿತ್ಯದ ಅನ್ನದ ಖಾದ್ಯವಾಗಿ ಜನಪ್ರಿಯವಾಗಿದೆ.[೨] ಬಿರಿಯಾನಿಗೆ ಭಿನ್ನವಾಗಿ ಇದು ತಯಾರಿಸಲು ಸುಲಭವಾಗಿದೆ. "ಜೀರಾ" ಎಂಬುದು ಜೀರಿಗೆ ಬೀಜಗಳಿಗೆ ಹಿಂದಿ ಶಬ್ದವಾಗಿದೆ. ಬಳಸಲಾದ ಘಟಕಾಂಶಗಳೆಂದರೆ ಅನ್ನ, ಜೀರಿಗೆ ಬೀಜಗಳು, ವನಸ್ಪತಿ ಎಣ್ಣೆ, ಈರುಳ್ಳಿ ಮತ್ತು ಕೊತ್ತುಂಬರಿ ಎಲೆಗಳು.

ತಯಾರಿಕೆ

ಬಿಸಿ ಎಣ್ಣೆಯಲ್ಲಿ ಜೀರಿಗೆ ಬೀಜಗಳನ್ನು ಕರಿಯಲಾಗುತ್ತದೆ. ಉದ್ದ ಧಾನ್ಯದ ಬಾಸ್ಮತಿ ಅಕ್ಕಿ ಮತ್ತು ಉಪ್ಪನ್ನು ಅದಕ್ಕೆ ಸೇರಿಸಲಾಗುತ್ತದೆ. ಹೆಚ್ಚುಕಡಿಮೆ ಅಕ್ಕಿಯ ದುಪ್ಪಟ್ಟು ಪ್ರಮಾಣದ ನೀರನ್ನು ಸುರಿದು ಮುಚ್ಚಳವನ್ನು ಮುಚ್ಚಿ ಹೆಚ್ಚಿನ ಉರಿಯಲ್ಲಿ ಬೇಯಲು ಬಿಡಲಾಗುತ್ತದೆ. ನಂತರ ಅಕ್ಕಿಯನ್ನು ಕಡಿಮೆ ಉರಿಯಲ್ಲಿ ಬೇಯಿಸಿ ಎಲ್ಲ ನೀರು ಹೀರಿಕೊಳ್ಳಲ್ಪಡುವವರೆಗೆ ಬಿಡಲಾಗುತ್ತದೆ.

ಜೀರಾ ರೈಸ್‌ನ್ನು ಸಾಮಾನ್ಯವಾಗಿ ಸಣ್ಣಗೆ ಕತ್ತರಿಸಿದ ತಾಜಾ ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ