ಹೀಕ್ ಕಮೆರ್ಲಿಂಗ್ ಒನ್ನೆಸ್

ಹೀಕ್ ಕಮೆರ್ಲಿಂಗ್ ಒನ್ನೆಸ್ ೨೧ ಸೆಪ್ಟೆಂಬರ್ ೧೮೫೩ – ೨೧ ಫೆಬ್ರುವರಿ ೧೯೨೬) ನೆದರ್‍ಲ್ಯಾಂಡ್ದೇಶದ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿಪಡೆದ ವಿಜ್ಞಾನಿ.ಅಧಿವಾಹಕತೆ(superconductivity)ಯ ಪರಿಶೋಧನೆಗಾಗಿ ಇವರಿಗೆ ೧೯೧೩ನೆಯ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧]

ಹೀಕ್ ಕಮೆರ್ಲಿಂಗ್ ಒನ್ನೆಸ್
ಜನನHeike Kamerlingh Onnes
(೧೮೫೩-೦೯-೨೧)೨೧ ಸೆಪ್ಟೆಂಬರ್ ೧೮೫೩
Groningen, Netherlands
ಮರಣ21 February 1926(1926-02-21) (aged 72)
Leiden, Netherlands
ರಾಷ್ಟ್ರೀಯತೆNetherlands
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುUniversity of Leiden
Delft Polytechnic
ಅಭ್ಯಸಿಸಿದ ವಿದ್ಯಾಪೀಠHeidelberg University
University of Groningen
ಡಾಕ್ಟರೇಟ್ ಸಲಹೆಗಾರರುRudolf Adriaan Mees
Other academic advisorsRobert Bunsen
Gustav Kirchhoff
Johannes Bosscha
ಡಾಕ್ಟರೇಟ್ ವಿದ್ಯಾರ್ಥಿಗಳುJacob Clay
Claude Crommelin
Wander de Haas
Gilles Holst
Johannes Kuenen
Remmelt Sissingh
Ewoud van Everdingen
Jules Verschaffelt
Pieter Zeeman
ಪ್ರಸಿದ್ಧಿಗೆ ಕಾರಣOnnes-effect
Superfluidity
Superconductivity
Virial Equation of State
ಗಮನಾರ್ಹ ಪ್ರಶಸ್ತಿಗಳು
  1. REDIRECT ಟೆಂಪ್ಲೇಟು:No wrap

ಬಾಲ್ಯ ಮತ್ತು ಜೀವನ

ಹುಟ್ಟಿದ್ದು ಹಾಲೆಂಡಿನ ಗ್ರ್ಯೂನಿಂಗೆನ್ ನಗರದಲ್ಲಿ, 1853 ಸೆಪ್ಟೆಂಬರ್ 21ರಂದು. ಅಲ್ಲೇ ಬೆಳೆದು ಭೌತವಿಜ್ಞಾನ ಮತ್ತು ಗಣಿತ ವಿಜ್ಞಾನಗಳನ್ನು ಓದಿದ. 1871ರಂದು ಜರ್ಮನಿಯ ಹೈಡೆಲ್ ಬರ್ಗ್ ನಗರಕ್ಕೆ ಹೋಗಿ ಬುನ್ಸೆನ್ ಮತ್ತು ಕಿರ್ಕಾಫರೊಂದಿಗೆ ಓದಿ ಮತ್ತೆ ಗ್ರ್ಯೂನಿಂಗಿಗೆ ಹಿಂತಿರುಗಿ ಅಲ್ಲಿ 1879ರಂದು ಡಾಕ್ಟೊರೇಟನ್ನು ಪಡೆದ.

ವೃತ್ತಿ ಜೀವನ ಮತ್ತು ಸಂಶೋಧನೆಗಳು

ಅನಂತರ ಹಾಲೆಂಡಿನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ(1882-1923) ಸಾಯುವುದಕ್ಕೆ ಕೆಲವು ವರ್ಷ ಮುಂಚಿನವರೆಗೂ ಇದ್ದ. ಅಲ್ಲಿ 1894ರಂದು ಉಪಕರಣಗಳಿಂದ ಸಜ್ಜಿತವಾದ ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿ ದ್ರವ ಮತ್ತು ಅನಿಲಗಳ ಮೇಲೆ ಒತ್ತಡದ ಮತ್ತು ಅಲ್ಪತಾಪದ ಪರಿಣಾಮಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದ ನೋಡಿ-(ಅಲ್ಪತಾಪ ಮತ್ತು ಅತಿವಾಹಕತ್ವ). ಇದರ ಫಲವಾಗಿ 1908ರಂದು ಹೀಲಿಯಂ ಅನಿಲವನ್ನು ದ್ರವೀಕರಿಸಿದ (ನೋಡಿ-ಅನಿಲ ದ್ರವೀಕರಣ) ಮತ್ತು 269ಲಿ ಸೆಂ. ಅಥವಾ 1ಲಿ ಏ ತಾಪವನ್ನು ಉಂಟುಮಾಡಿದ. ಇಂಥ ಅಲ್ಪತಾಪದಲ್ಲಿ ಲೋಹಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅತಿವಾಹಕತ್ವವನ್ನು ಕಂಡುಹಿಡಿದ.

ಪ್ರಶಸ್ತಿಗಳು

ಈ ರೀತಿ ಓನ್ಸ್‌ ನಡೆಸಿದ ಅತ್ಯುತ್ತಮ ಅಲ್ಪತಾಪ ಭೌತವಿಜ್ಞಾನದ ಪ್ರಯೋಗಗಳಿಗಾಗಿ ಮತ್ತು ಹೀಲಿಯಂ ಅನಿಲವನ್ನು ದ್ರವೀಕರಿಸಿದ್ದಕ್ಕಾಗಿ ಅವನಿಗೆ 1913ರಂದು ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು. ಓನ್ಸ್‌ ಭೌತವಿಜ್ಞಾನದ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ.

ನಿಧನ

1926 ಫೆಬ್ರವರಿ 21ನೆಯ ತಾರೀಖು ಲೈಡನ್ ನಗರದಲ್ಲಿ ಈತ ಅಸುನೀಗಿದ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ