ಹಾರುವ ಮೀನುಗಳು

ಹಾರುವ ಮೀನು
ಸೈಲ್‌ಫಿನ್ ಹಾರುವ ಮೀನು
Parexocoetus brachypterus
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Actinopterygii
ಗಣ:
Beloniformes
ಕುಟುಂಬ:
Exocoetidae


ಹಾರುವ ಮೀನುಗಳು ಸಮುದ್ರವಾಸಿ ಮೀನುಗಳಲ್ಲಿ ಸುಮಾರು ೫೦ ತಳಿಗಳಿಗೆ ಸೇರಿದವಾಗಿವೆ. ಈ ಮೀನುಗಳ ಕುಟುಂಬಕ್ಕೆ ಶಾಸ್ತ್ರೀಯವಾಗಿ ಎಕ್ಸೋಕೋಟಿಡೇ ಎಂದು ಹೆಸರು. ವಿಶ್ವದ ಎಲ್ಲ ಮಹಾಸಾಗರಗಳಲ್ಲಿ ಕಾಣಬರುವ ಹಾರುವ ಮೀನುಗಳು ಈ ಸಾಗರಗಳ ನೀರು ಬೆಚ್ಚಗಿರುವ ಪ್ರದೇಶಗಳಲ್ಲಿ (ಉಷ್ಣವಲಯದಲ್ಲಿ)ಹೆಚ್ಚಾಗಿ ಜೀವಿಸುತ್ತವೆ. ಈ ಮೀನುಗಳಿಗೆ ದೊಡ್ಡದಾದ ರೆಕ್ಕೆಗಳಂತಹ ರಚನೆಯಿದ್ದು ಈ ರೆಕ್ಕೆಗಳ ಸಹಾಯದಿಂದ ಇವು ಸಾಕಷ್ಟು ದೂರ ಗಾಳಿಯಲ್ಲಿ ತೇಲಬಲ್ಲವು. ಸಾಮಾನ್ಯವಾಗಿ ೫೦ ಮೀಟರ್‌ಗಳವರೆಗೆ ಸರಾಗವಾಗಿ ಗಾಳಿಯಲ್ಲಿ ತೇಲಿಕೊಂಡು ಸಾಗುವ ಹಾರುವ ಮೀನುಗಳು ದೊಡ್ಡ ಅಲೆಗಳು ಉಬ್ಬುವಾಗ ಉಂಟಾಗುವ ಗಾಳಿಯ ಒತ್ತಡವನ್ನು ಬಳಸಿ ೪೦೦ ಮೀಟರ್‌ಗಳವರೆಗೆ ಸುಲಭವಾಗಿ ತೇಲಿಕೊಂಡು ಸಾಗಬಲ್ಲವು. ೨೦೦೮ರ ಮೇ ನಲ್ಲಿ ಜಪಾನಿನ ಸಾಗರತೀರದಾಚೆ ಒಂದು ಹಾರುವ ಮೀನು ೪೫ ಸೆಕೆಂಡುಗಳ ಕಾಲ ಗಾಳಿಯಲ್ಲಿ ತೇಲಿಕೊಂಡು ಸಾಗಿದುದನ್ನು ಚಿತ್ರೀಕರಿಸಲಾಯಿತು. ಸದ್ಯಕ್ಕೆ ಇದು ದಾಖಲೆಯಾಗಿದೆ. ಇತರ ಮೀನುಗಳಂತೆ ಹಾರುವ ಮೀನುಗಳನ್ನು ಸಹ ಜಗತ್ತಿನೆಲ್ಲೆಡೆ ಮಾನವನು ಆಹಾರವಾಗಿ ಬಳಸುವನು.

ಬಾಹ್ಯ ಸಂಪರ್ಕಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ