ಸ್ವರ್ಣಯುಗ

ಸ್ವರ್ಣಯುಗ (ಸುವರ್ಣಯುಗ) ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್‍ನ ಕೃತಿಯಿಂದ. ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ.

ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ಶಾಂತಿ ಮತ್ತು ಸಾಮರಸ್ಯಗಳು ಪ್ರಚಲಿತವಾಗಿದ್ದವು, ಜನರು ತಮ್ಮ ಆಹಾರಕ್ಕಾಗಿ ಕೆಲಸ ಮಾಡಬೇಕಾಗಿರಲಿಲ್ಲ, ಏಕೆಂದರೆ ಭೂಮಿಯು ಹೇರಳವಾಗಿ ಆಹಾರವನ್ನು ಒದಗಿಸುತ್ತಿತ್ತು. ಜನರು ಬಹಳ ವಯಸ್ಸಿನವರೆಗೆ ಯುವರೂಪದಿಂದಿಗೆ ಬಾಳುತ್ತಿದ್ದರು. ಅಂತಿಮವಾಗಿ ಶಾಂತಿಯಿಂದ ಸಾಯುತ್ತಿದ್ದರು, ಮತ್ತು ಅವರ ಆತ್ಮಗಳು ಸಂರಕ್ಷಕರಾಗಿ ಇರುತ್ತಿದ್ದವು.

ದಕ್ಷಿಣ ಏಷ್ಯಾ ಉಪಖಂಡದ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಸಂಪ್ರದಾಯಗಳಲ್ಲಿ ಹೋಲುವ ಪರಿಕಲ್ಪನೆಗಳಿವೆ. ಉದಾಹರಣೆಗೆ, ವೈದಿಕ ಅಥವಾ ಪ್ರಾಚೀನ ಹಿಂದೂ ಸಂಸ್ಕೃತಿಯು ಇತಿಹಾಸವನ್ನು ಆವರ್ತಕವೆಂದು, ಸರತಿಯಾಗಿ ಬರುವ ಅಂಧಕಾರ ಮತ್ತು ಸುವರ್ಣ ಯುಗಗಳಿಂದ ಕೂಡಿದ್ದೆಂದು ಕಂಡಿತು. ಕಲಿ ಯುಗ (ಕಬ್ಬಿಣದ ಯುಗ), ದ್ವಾಪರ ಯುಗ (ಕಂಚಿನ ಯುಗ), ತ್ರೇತಾಯುಗ (ಬೆಳ್ಳಿ ಯುಗ) ಮತ್ತು ಸತ್ಯಯುಗಗಳು (ಸ್ವರ್ಣಯುಗ) ನಾಲ್ಕು ಗ್ರೀಕ್ ಯುಗಗಳಿಗೆ ಅನುರೂಪವಾಗಿವೆ. ಅದೇ ರೀತಿಯ ನಂಬಿಕೆಗಳು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಪ್ರಾಚೀನ ವಿಶ್ವದಾದ್ಯಂತ ಕೂಡ ಇವೆ.[೧]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ