ಸ್ಟೀರಾಯ್ಡ್

ಸ್ಟೀರಾಯ್ಡ್ ಎಂದರೆ ಜೀವಿಗಳಲ್ಲಿರುವ ಅನೇಕ ಸಂಕೀರ್ಣ ಹೈಡ್ರೊಕಾರ್ಬನ್‍ಗಳ ಪೈಕಿ ಯಾವುದೇ ಒಂದು.[೧] ಇವೆಲ್ಲವೂ ಒಂದು ಜಾತಿಯ ರಾಸಾಯನಿಕಗಳು. ಇವುಗಳ ಮೂಲರಚನೆಯಲ್ಲಿ ಒಂದು ಚಕ್ರವಿದೆ. ಈ ಗುಂಪಿಗೆ 11 ಬಗೆಯವು ಸೇರಿವೆ. ಪ್ರೊಜೆಸ್ಟಿರಾನ್, ಅಡ್ರಿನಲ್ ಕಾರ್ಟಿಕಲ್ ಹಾರ್ಮೋನ್, ಜನನ ಗ್ರಂಥಿಗಳ ಹಾರ್ಮೋನ್, ಹೃದಯ ಗ್ಲೈಕೊಸೈಡ್, ಪಿತ್ತಾಮ್ಲ, ಕೊಲೆಸ್ಟಿರಾಲ್, ಕಪ್ಪೆ ವಿಷ, ಸ್ಯಾಪೊನಿನ್‌ಗಳು, ಕ್ಯಾನ್ಸರ್‌ಕಾರಕ ಹೈಡ್ರೊಕಾರ್ಬನ್, ಉಪಚಯಕ (ಅನಬಾಲಿಕ್) ಸ್ಟೀರಾಯ್ಡ್ ಮತ್ತು ಟೆಸ್ಟೊಸ್ಟಿರಾನ್.[೨]: 10–19  ಹಲವು ಬಗೆಯ ಕಾಯಿಲೆಗಳಲ್ಲಿ ಇವನ್ನು ಔಷಧಿಗಳಾಗಿ ಬಳಸುತ್ತಾರೆ.

ಅತ್ಯಂತ ಸರಳ ಸ್ಟೀರಾಯ್ಡ್ ಆದ ಗೊನೇನ್

ಉತ್ಪಾದನೆ

ಇದು ಮುಖ್ಯವಾಗಿ ಅಡ್ರಿನಲ್ ಮತ್ತು ಜನನ ಗ್ರಂಥಿಗಳಲ್ಲಿ ನಡೆಯುತ್ತದೆ. ಕೆಲವು ಸಸ್ಯಮೂಲ ರಾಸಾಯನಿಕಗಳನ್ನು ಪರಿವರ್ತಿಸಿ ಸ್ಟೀರಾಯ್ಡ್‌ಗಳನ್ನು ತಯಾರಿಸುವುದು ಸಾಧ್ಯವೆಂದು ಗೊತ್ತಾಗಿದೆ. ಇಂಥವುಗಳ ತಯಾರಿಕೆ ಕಡಿಮೆ ವೆಚ್ಚದಲ್ಲಿ ಸಾಧ್ಯ.

ಉಪಯೋಗಗಳು

ಅಲರ್ಜಿ, ಊತ, ಉರಿಯೂತ, ತ್ವಚೆಯ ಉರಿಯೂತ — ಇಂಥ ಅಸುಖಗಳ ನಿವಾರಣೆಗೂ, ಜನನ ನಿರೋಧಕಗಳಾಗಿ ಮತ್ತು ಹಾರ್ಮೋನ್ ಅಭಾವ ನಿವಾರಕಗಳಾಗಿಯೂ ಸ್ಟೀರಾಯ್ಡುಗಳ ಉಪಯೋಗ ಉಂಟು.

ಕಾರ್ಟಿಸೋನ್, ಆಲ್ಡೊಸ್ಟಿರೋನ್, ಪ್ರೆಡ್ನಿಸೋನ್ ಮತ್ತು ಪ್ರೆಡ್ನಿಸಲೋನ್ ಪ್ರಮುಖ ಸ್ಟೀರಾಯ್ಡುಗಳು. ಈಚಿನ ದಿನಗಳಲ್ಲಿ ಸ್ಟೀರಾಯ್ಡುಗಳನ್ನು ಜೈವತಂತ್ರವಿದ್ಯಾವಿಧಾನದಿAದ ತಯಾರಿಸಲಾಗುತ್ತಿದೆ.

ಉಲ್ಲೇಖಗಳು

ಗ್ರಂಥಸೂಚಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ