ಸುಹಾಸ್ ಗೋಪಿನಾಥ್
- ಲೇಖನ
- ಚರ್ಚೆ
ಸುಹಾಸ್ ಗೋಪಿನಾಥ್ | |
---|---|
![]() ಯುವ ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಹಾಸ್ ಗೋಪಿನಾಥ್. | |
ಜನನ | ನವೆಂಬರ್, ೦೪, ೧೯೮೬ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಜಾನ್ ಎಫ್. ಕೆನಡಿ ಸರ್ಕಾರಿ ಶಾಲೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜಾಗತೀಕ ನಾಯಕತ್ವ ಹಾಗು ಸಾರ್ವಜನಿಕ ನಿಯಮಾವಳಿಗಳ ವಿಚಾರದಲ್ಲಿ ಡಿಪ್ಲೋಮ ಪದವಿ |
ವೃತ್ತಿ | ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಹಾಗು ಸಿ ಇ ಓ |
Known for | ಯುವ ಉದ್ಯಮಿ, ೨೦೦೫ನೆ ಸಾಲಿನ ಪ್ರಪಚದ ಅತಿ ಕಿರಿಯ ಸಿ ಇ ಓ ಹೆಗ್ಗಳಿಕೆ |
ಸುಹಾಸ್ ಗೋಪಿನಾಥ್ (ಜನನ: ನವೆಂಬರ್ ೪, ೧೯೮೬ ಬೆಂಗಳೂರು) ಒಬ್ಬ ಭಾರತದ ಯುವ ಉದ್ಯಮಿ. ಇವರು ಬಹುರಾಷ್ಟ್ರೀಯ ಕಂಪನಿಯಯಾದ ಗ್ಲೋಬಲ್ಸ್ ಇಂಕ್ ನ ಸಂಸ್ಥಾಪಕ ಅಧ್ಯಕ್ಷರು, ಸಿ ಇ ಓ ಹಾಗು ಛೇರ್ಮನ್. ತಮ್ಮ ೧೪ನೆ ವಯಸ್ಸಿನಲ್ಲಿಯೇ ಮಾಹಿತಿ ತಂತ್ರಜ್ಞಾನ ಕಂಪನಿಯೊಂದನ್ನು ಸ್ಥಾಪಿಸಿ ಅವರಿಗೆ ಹದಿನೇಳು ವರ್ಷವಾಗುವಷ್ಟರಲ್ಲಿ ಕಂಪನಿಯ ಮುಖ್ಯಾಧಿಕಾರಿ ಸ್ಥಾನ ಅಲಂಕರಿಸಿ ಪ್ರಪಂಚದ ಅತೀ ಕಿರಿಯ ಸಿ ಇ ಓ ಆಗಿ ದಾಖಲೆ ಬರೆದರು.
ಗೋಪಿನಾಥ್ ಜನಿಸಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನವೆಂಬರ್ ೪ ೧೯೮೬ ರಲ್ಲಿ. ಇವರ ತಂದೆ ಭಾರತೀಯ ಸೇನೆಗೆ ವಿಜ್ಞಾನಿಯಾಗಿದ್ದರು ಹಾಗು ತಾಯಿ ಗೃಹಿಣಿ[೧]. ಇವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಜಾಲತಾಣಗಳನ್ನು ರಚಿಸುವ ಬಗೆಯನ್ನು ತಾವೇ ಸ್ವತಃ ಕಲಿತು ತಮ್ಮದೇ ಆದ ಜಾಲ ತಾಣ www.coolhindustan.com ರಚಿಸಿದರು. ಅದೇ ವರ್ಷ ಗ್ಲೋಬಲ್ಸ್ ಇಂಕ್ ಎನ್ನುವ ಕಂಪನಿಯನ್ನು ಆರಂಭಿಸಿದರು. ಮುಂದೆ ಅವರಿಗೆ ಹದಿನೇಳು ವರ್ಷವಾದಾಗ ಅದೇ ಕಂಪನಿ ಗೆ ಸಿ ಇ ಓ ಆಗಿ ಉನ್ನತಾಧಿಕಾರಕ್ಕೇರಿದರು. ಆ ಸಮಯದಲ್ಲಿ ಪ್ರಪಂಚದಲ್ಲಿಯೇ ಅತೀ ಕಿರಿಯ ಸಿ ಇ ಓ ಎಂಬ ಕೀರ್ತಿಗೆ ಭಾಜನರಾಗಿದ್ದರು ಸುಹಾಸ್ ಗೋಪಿನಾಥ್.