ಸುಳ್ಳು ಹೇಳುವ ರೋಗ

ಸುಳ್ಳು ಹೇಳುವ ರೋಗ, ಇದನ್ನು ಮೈಥೋಮೇನಿಯಾ ಮತ್ತು ಸ್ಯೂಡೋಲಾಜಿಯಾ ಫೆಂಟಾಸ್ಟಿಕಾ ಎಂದೂ ಕರೆಯುತ್ತಾರೆ, ಇದು ಸಮಸ್ಯಾತ್ಮಕ ನಡವಳಿಕೆಯಾಗಿದ್ದು, ಈ ಕಾಯಿಲೆಗೊಳಗಾದ ವ್ಯಕ್ತಿಗೆ ಸುಳ್ಳು ಹೇಳುವುದು ಅಭ್ಯಾಸವಾಗಿರುತ್ತದೆ. [೧] [೨] [೩] [೪] [೫] ಈ ಸುಳ್ಳುಗಳು ಸಂದರ್ಭಕ್ಕೆ ಅನುಗುಣವಾಗಿ ತನ್ನನ್ನು ತಾನು ನಾಯಕ ಅಥವಾ ಬಲಿಪಶು ಎಂದು ಬಣ್ಣಿಸಿಕೊಳ್ಳುವುದನ್ನು ಹೊರತುಪಡಿಸಿ ಯಾವುದೇ ಸ್ಪಷ್ಟ ಉದ್ದೇಶವನ್ನು ಹೊಂದಿರುವುದಿಲ್ಲ. [೬] [೭] [೮] [೯]

ಇದನ್ನು ವಿವರಿಸಿದ ಮೊದಲ ವ್ಯಕ್ತಿ ಆ್ಯಂಟೋನ್ ಡೆಲ್ಬ್ರಕ್. ಅವರು ೧೮೯೫ ರಲ್ಲಿ ಈ ಕುರಿತಾದ ಲೇಖನವನ್ನು ಬರೆದಿದ್ದಾರೆ [೩] . ಈ ರೋಗವುಳ್ಳವರು ವಿವೇಕರಹಿತವಾಗಿ ಸಂಪೂರ್ಣ ಅಸಮರ್ಪಕವಾದ ಅಥವಾ ಭಾಗಶಃ ಸತ್ಯವಿರುವ ಸುಳ್ಳನ್ನು ಹೇಳುತ್ತಿರುತ್ತಾರೆ. ಈ ರೋಗನಿರ್ಣಯಕ್ಕೆ ನಿರ್ದಿಷ್ಟವಾದ ಮಾನದಂಡಗಳಲಿಲ್ಲ. ಅನೇಕ ವರ್ಷಗಳ ಕಾಲ ಅಥವಾ ಜೀವಿತಾವಧಿಯ ಕೊನೆಯವರೆಗೂ ಈ ರೋಗ ಕಾಣಿಸಿಕೊಳ್ಳಬಹುದು. [೯] ಒತ್ತಡ, ಸ್ವಾಭಿಮಾನಕ್ಕೆ ಧಕ್ಕೆ, ಮುಂತಾದುವುಗಳು ರೋಗದ ಆಂತರಿಕ ಕಾರಣಗಳಾಗಿವೆ. [೯] [೭] [೮]

ಗುಣಲಕ್ಷಣಗಳು

ಸುಳ್ಳು ಹೇಳುವ ರೋಗದ ಲಕ್ಷಣಗಳು ಈ ಕೆಳಗಿನಂತಿವೆ:

  • ಸುಳ್ಳು ಹೇಳುವ ನಡವಳಿಕೆಗೆ ಕಾರಣವಾದ ನಿರ್ದಿಷ್ಟ ಆಂತರಿಕ ಉದ್ದೇಶಗಳೇನೆಂದು ಪ್ರಾಯೋಗಿಕವಾಗಿ ವಿವೇಚಿಸಲು ಸಾಧ್ಯವಾಗಿಲ್ಲ. ದೀರ್ಘಕಾಲದ ವಂಚನೆ, ಪತಿ ಪತ್ನಿಯರ ನಡುವಿನ ಮನಸ್ತಾಪಗಳು ಸಹ ಸುಳ್ಳು ಹೇಳುವ ರೋಗಕ್ಕೆ ಕಾರಣವಾಗಬಹುದು. [೩]
  • ರೋಗಗ್ರಸ್ತ ವ್ಯಕ್ತಿಯು ತನಗೆ ಅನುಕೂಲವಾಗುವಂತೆ ಸುಳ್ಳು ಕತೆಯನ್ನು ಹೆಣೆಯುತ್ತಾನೆ. ತನ್ನನ್ನು ತಾನು ನಾಯಕ ಅಥವಾ ಬಲಿಪಶು ಎಂದು ಸಂದರ್ಭಕ್ಕನುಸಾರವಾಗಿ ಬಿಂಬಿಸಿಕೊಳ್ಳುತ್ತಾನೆ. ಆತ ತಾನು ಅತ್ಯಂತ ಧೈರ್ಯವಂತ, ಪ್ರಸಿದ್ಧ ವ್ಯಕ್ತಿಗಳ ಪರಿಚಿತ, ಅಧಿಕಾರವನ್ನು ಹೊಂದಿರುವವನು, ಹಣಕ್ಕೆ ಕೊರತೆಯಿಲ್ಲದವನು ಎಂಬುವುದಾಗಿ ಇತರರ ಮುಂದೆ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ.

ಕೆಲವು ಮನೋವೈದ್ಯರುಗಳ ಪ್ರಕಾರ ಕಂಪಲ್ಸಿವ್ ಸುಳ್ಳು ಹೇಳುವಿಕೆ ಹಾಗೂ ಸುಳ್ಳು ಹೇಳುವ ರೋಗಗಳೆರಡೂ ಬೇರೆ ಬೇರೆಯಾಗಿವೆ. ಇನ್ನು ಕೆಲವರು ಇವೆರಡನ್ನೂ ಒಂದೇ ರೋಗವೆಂದು ಪರಿಗಣಿಸುತ್ತಾರೆ. ಇನ್ನು ಕೆಲವರು ಕಂಪಲ್ಸಿವ್ ರೋಗದ ಅಸ್ತಿತ್ವವನ್ನೇ ಅಲ್ಲಗಳೆಯುತ್ತಾರೆ. ಈ ರೋಗವು ವಿರೋಧಾತ್ಮಕ ವಿಷಯವಾಗಿದೆ.[೧೦]

ರೋಗನಿರ್ಣಯ

ಡಯಗ್ನೋಸ್ಟಿಕ್ ಆಂಡ್ ಸ್ಟ್ಯಾಟಿಸ್ಟಿಕಲ್ ಮಾನ್ಯುವಲ್ ಆಫ್ ಮೆಂಟಲ್ ಡಿಸಾರ್ಡರ್ಸ್ ನಲ್ಲಿ ಸುಳ್ಳುಹೇಳುವ ರೋಗವನ್ನು ಪ್ರತ್ಯೇಕ ರೋಗವೆಂದು ಉಲ್ಲೇಖಿಸಲಿಲ್ಲ; ಬದಲಿಗೆ ಇದನ್ನು ಇತರ ಮಾನಸಿಕ ಅಸ್ವಸ್ಥತೆಗಳಾದ ಸಮಾಜವಿರೋಧೀವ್ಯಕ್ತಿತ್ವ, ಮನ್ನಣೆಯ ದಾಹ ಹಾಗೂ ಹಿಸ್ಟ್ರಿಯೋನಿಕ್ ವ್ಯಕ್ತಿತ್ವ ಅಸ್ವಸ್ಥತೆ ಮುಂತಾದ ಕೆಲವು ರೋಗಗಳ ಲಕ್ಷಣವಾಗಿ ನೀಡಿದ್ದಾರೆ. [೧೧] ಇನ್ನೊಬ್ಬರ ಮೇಲೆ ಹರಿಹಾಯುವಿಕೆ, ಎಲ್ಲದ್ದಕ್ಕೂ ಮತ್ತೊಬ್ಬರನ್ನು ದೂಷಿಸುವುದು ಮುಂತಾದ ಪ್ರವೃತ್ತಿಗಳು ಸುಳ್ಳು ಹೇಳುವ ರೋಗದ ಲಕ್ಷಣಗಳೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸಾರ್ಡರ್ಸ್ - ೧೦ ರ ಪ್ರಕಾರ ಹಾಲ್ಟೋಸ್ ವ್ಯಕ್ತಿತ್ವ ಅಸ್ವಸ್ಥತೆಯೊಂದಿಗೆ ಸುಳ್ಳುಹೇಳುವ ರೋಗವು ಸಹವರ್ತಿ ರೋಗವಾಗಿ ಕಂಡುಬರುತ್ತದೆ. [೧೨]

ಸುಳ್ಳು ಹೇಳುವ ರೋಗವುಳ್ಳ ರೋಗಿಗಳು ಇತರರ ಮೇಲೆ ಒತ್ತಡವನ್ನು ಹೇರುವ ಮೂಲಕ, ಅವರಲ್ಲಿ ಪಾಪಪ್ರಜ್ಞೆ ಉಂಟಾಗುವಂತೆ ಮಾಡುವ ಮೂಲಕ ಅವರೂ ಸುಳ್ಳಾಡುವಂತೆ ಪ್ರಚೋದಿಸುತ್ತಾರೆ ಮತ್ತು ತಮ್ಮ ಸುಳ್ಳನ್ನು ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುವುದು ಸುಳ್ಳುಪತ್ತೆ ಪರೀಕ್ಷೆಯಲ್ಲಿ ಕಂಡುಬಂದಿದೆ. [ಸಾಕ್ಷ್ಯಾಧಾರ ಬೇಕಾಗಿದೆ] ಸುಳ್ಳು ಹೇಳುವ ರೋಗವುಳ್ಳವರು ಇತರ ಮನೋರೋಗಿಗಳಂತಲ್ಲ. ಸಮಾಜವಿರೋಧೀ ವ್ಯಕ್ತಿತ್ವ ಅಸ್ವಸ್ಥತೆಯುಳ್ಳವರು ಬಾಹ್ಯ ಹಾಗು ತಮ್ಮ ಸ್ವಂತ ಲಾಭಕ್ಕೋಸ್ಕರವಾಗಿ, ಉದಾಹರಣೆಗೆ- ಹಣ, ಅಧಿಕಾರ ಮುಂತಾದವುಗಳಿಗಾಗಿ ಸುಳ್ಳನ್ನು ಹೇಳುತ್ತಾರೆ; ಆದರೆ ಸುಳ್ಳುಹೇಳುವ ರೋಗ ಹೊಂದಿರುವವರು ತಮ್ಮ ಆಂತರಿಕ ಲಾಭಕ್ಕೋಸ್ಕರ ಸುಳ್ಳನ್ನು ಹೇಳುತ್ತಾರೆ. ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆ (ಬಿಪಿಡಿ)ಯುಳ್ಳವರು ತಮ್ಮಮೇಲಿನ ತ್ಯಜಿಸುವಿಕೆ, ದುರ್ವರ್ತನೆ ಅಥವಾ ನಿರಾಕರಣೆಯ ಭಾವನೆಗಳಿಂದ ಹೊರಬರಲು ಸುಳ್ಳು ಬೆದರಿಕೆ, ಆರೋಪ ಹಾಗೂ ಆತ್ಮಹತ್ಯಾ ಪ್ರಯತ್ನಗಳನ್ನು ಮಾಡುತ್ತಾರೆ; ಆದರೆ ಸುಳ್ಳು ಹೇಳುವ ರೋಗವುಳ್ಳವರು ನಿರಾಕರಣಾ ಭಾವನೆಗಳನ್ನು ಹೊಂದಿರುವುದಿಲ್ಲ, ಬದಲಿಗೆ ಅವರಲ್ಲಿನ ಉನ್ನತಮಟ್ಟದ ಸ್ವಯಂಭರವಸೆ ನಿರಾತಂಕವಾಗಿ ಸುಳ್ಳು ಹೇಳಲು ಸಹಾಯಮಾಡುತ್ತದೆ. ಸುಳ್ಳುಹೇಳುವ ರೋಗವುಳ್ಳವರು ಹಿಸ್ಟ್ರಿಯೋನಿಕ್ ವ್ಯಕ್ತಿತ್ವ ಅಸ್ವಸ್ಥತೆ ಹೊಂದಿರುವವರಿಗಿಂತ ಮೇಲ್ಮಟ್ಟದಲ್ಲಿ ಮಾತು ಹಾಗು ಲೈಂಗಿಕತೆಯಲ್ಲಿ ನಾಟಕೀಯ ಪ್ರವೃತ್ತಿಯನ್ನು ತೋರುತ್ತಾರೆ. ಮನ್ನಣೆಯದಾಹ, ಸಮಾಜವಿರೋಧೀ ವ್ಯಕ್ತಿತ್ವದಂತಹ ಅಸ್ವಸ್ಥತೆ ಉಳ್ಳವರು ತಾವು ಪರಿಪೂರ್ಣತೆಯನ್ನು ಹೊಂದಿದ್ದೇವೆ ಎಂದು ಅಂದುಕೊಂಡಿರುತ್ತಾರೆ, ಅಲ್ಲದೇ ಇತರರ ಮೇಲೆ ಸಹಾನುಭೂತಿಯನ್ನು ತೋರುವುದಿಲ್ಲ. ಆದರೆ ಸುಳ್ಳುಹೇಳುವ ರೋಗವುಳ್ಳವರು ಸಮಾಜವಿರೋಧೀ ವರ್ತನೆಗಳನ್ನು ತೋರುವುದಿಲ್ಲ; ಬದಲಿಗೆ ತಮ್ಮ ಜೀವನ ಆಸಕ್ತಿಕರವಾಗಿಲ್ಲ ಎಂದು ಅನ್ನಿಸಿದ ಕೂಡಲೇ ಸುಳ್ಳು ಹಣೆಯಲು ಆರಂಭಿಸುತ್ತಾರೆ. [೧೧]

ಪ್ರಸ್ತುತವಾಗಿ ಉದ್ದೇಶರಹಿತ, ಆಂತರಿಕವಾಗಿ ಪ್ರೇರಿತ ವಂಚನೆಗಳಲ್ಲಿ ಪಟ್ಟಿಮಾಡಲಾದ ಒಂದು ರೋಗನಿರ್ಣಯವೆಂದರೆ ವಾಸ್ತವಿಕ ಅಸ್ವಸ್ಥತೆ. ಈ ರೋಗವಿರುವ ವ್ಯಕ್ತಿಯು ತಮ್ಮಲ್ಲಿ ಇರದ ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಗಳು ಇವೆ ಎಂದು, ಆ ರೋಗಗಳ ಲಕ್ಷಣಗಳನ್ನು ಉತ್ಪ್ರೇಕ್ಷಿಸಿ ಸುಳ್ಳನ್ನು ಹೇಳುತ್ತಾರೆ. ಆದರೆ ವ್ಯಕ್ತಿಯು ವಾಸ್ತವವಾಗಿ ಇತರ ಅಸ್ವಸ್ಥತೆಯನ್ನು ಹೊಂದಿಲ್ಲ ಎಂದು ಖಚಿತಪಡಿಸಲು ಸಂಶೋಧನೆಗಳಾಗಬೇಕಿದೆ. ಸುಳ್ಳುಹೇಳುವ ರೋಗದಿಂದ ಅಪನಂಬಿಕೆ ಉಂಟಾಗಿ ವ್ಯಕ್ತಿಯು ನಿರಾಕರಣೆಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಸುಳ್ಳು ಹೇಳುವಿಕೆಯು ವ್ಯಕ್ತಿಯ ಮೇಲೆ ಸಾಮಾಜಿಕವಾದ ಹಾಗೂ ಕಾನೂನಾತ್ಮಕವಾದ ಹಾನಿಯನ್ನು ಉಂಟುಮಾಡಬಹುದು. [೧೩]

ಸಾಂಕ್ರಾಮಿಕತೆ

ಬುದ್ಧಿವಂತಿಕೆಯ ಮಟ್ಟವು ಸರಾಸರಿ ಅಥವಾ ಸರಾಸರಿಗಿಂತ ಹೆಚ್ಚಿದ್ದವರಲ್ಲಿ, ಸುಳ್ಳು ಹೇಳುವ ರೋಗವು ಅಂದಾಜು ೨೧ ವರ್ಷ ವಯಸ್ಸಿಗೆ ಆರಂಭವಾಗುತ್ತದೆ. [೧೪] ಕೆಲವು ಸಂಶೋಧನೆಗಳಲ್ಲಿ ಕಂಡುಬಂದಂತೆ, ೩೦ ಪ್ರತಿಶತ ರೋಗಿಗಳ ಮನೆಯ ವಾತಾವರಣವು ಅಸಮರ್ಪಕವಾಗಿತ್ತು; ಅಂದರೆ ಪೋಷಕರು ಅಥವಾ ಸಂಬಂಧಿಕರಲ್ಲಿ ಮಾನಸಿಕ ಅಸ್ವಸ್ತತೆಗಳಿದ್ದವು.ಪುರುಷ ಹಾಗೂ ಮಹಿಳೆಯರಲ್ಲಿ ಈ ರೋಗದ ಅನುಪಾತ ಸಮಾನವಾಗಿದೆ. [೧೧] ನಲವತ್ತು ಪ್ರತಿಶತ ಪ್ರಕರಣಗಳು ಅಪಸ್ಮಾರವೇ ಮುಂತಾದ ನರಸಂಬಂಧೀ ದೋಷಗಳಿಂದ ಬಂದುದಾಗಿವೆ [೧೧]

ಉಲ್ಲೇಖಗಳು

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ