ಸುಮಾ ಸುಧೀಂದ್ರ

ಸುಮಾ ಸುಧೀಂದ್ರ[೧] ಕಳೆದ ೪ ದಶಕಗಳಿಂದ 'ವೀಣಾ ವಿದುಷಿ', ಅಧ್ಯಾಪಕಿ, ಸಂಘಟಕಿ, ಆಡಳಿತಾಧಿಕಾರಿಯಾಗಿ, ನಾನಾ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. 'ಸಮೂಹ ವೀಣಾವಾದಕಿ'ಯಾಗಿ ಪ್ರಸಿದ್ಧರಾಗಿದ್ದಾರೆ. ವಿಶ್ವದ ಅನೇಕ ದೇಶಗಳಲ್ಲಿ ಪ್ರತಿಷ್ಠಿತ ಕೇಂದ್ರಗಳಲ್ಲಿ ತಮ್ಮ ವೀಣಾವಾದನ ಪ್ರಸ್ತುತಿ ಮಾಡಿದ್ದಾರೆ. ಬೆಂಗಳೂರಿನ ಅಕಾಡೆಮಿ ಆಫ್ ಮ್ಯೂಸಿಕ್, ಚೌಡಯ್ಯ ಮೆಮೊರಿಯಲ್ ಹಾಲ್, ಸಂಸ್ಥೆಯಲ್ಲಿ ೩೦ ವರ್ಷ ಅಧ್ಯಕ್ಷೆ. ಈಗ ಸದಸ್ಯೆ.ಬಿಡುವಿಲ್ಲದ ಕಾರ್ಯಕ್ರಮ ನೀಡುತ್ತಾ, ಫ್ಯೂಷನ್[೨] ಇತ್ಯಾದಿಸಂಗೀತ ಸಹಯೋಗದಲ್ಲಿ ಭಾಗವಹಿಸುತ್ತಾ, ಎಳೆಯ ಕಲಾವಿದರಿಗೆ ಪ್ರೋತ್ಸಾಹ ಕೊಡುವುದರ ಜೊತೆಗೆ ತಾವೂ ಎತ್ತರಕ್ಕೆ ಬೆಳೆಯುತ್ತಿದ್ದಾರೆ.[೩]

ಬಾಲ್ಯದಲ್ಲಿಯೇ ಸಂಗೀತದ ಗೀಳು

ಕರ್ನಾಟಕ ಸಂಗೀತದಲಿ ಸೃಷ್ಟಿ ಶೀಲತೆ ಅಂತರ್ಗತವಾಗಿಯೇ ಇದೆ. ಇದರ ವೈಜ್ಞಾನಿಕತೆ, ಬಿಗಿಯಾದ ವ್ಯಾಕರಣ, ಕ್ರಿಯೇಟಿವಿಟಿ ಸಂಗೀತದ ಯಾವ ಹಿನ್ನೆಲೆಯೂ ಇಲ್ಲದೆ೫ ನೇ ವರ್ಷಕ್ಕೇ ಹಾಡಲು ಪ್ರಾರಂಭಿಸಿದರು. ವೀಣೆಯ ಮೇಲೆ ವ್ಯಾಮೋಹ ೮ ನೆಯ ವಯಸ್ಸಿನಲ್ಲಿಯೇ ಮೊಳಕೆಒಡೆಯಿತು. ಸ್ಮರಣ ಶಕ್ತಿ ಅಗಾಧವಾಗಿದೆ. ವೀಣೆ ರಾಜಾರಾಯರು ಗುರುಗಳು. ಡಾ.ಚಿಟ್ಟಿಬಾಬುರವರ ಬಳಿ, ಉನ್ನತ ಹಂತದ ತರಬೇತಿ ನಡೆಯಿತು.'ಕರ್ನಾಟಕ ಗಾನ ಕಲಾ ಪರಿಷದ್ ೪೫ ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷೆಯಾದ ಸಮಯದಲ್ಲಿ, ಬಿಜಾಪುರದಲ್ಲಿ ೪ ದಿನಗಳ ಸಮ್ಮೇಳನವನ್ನು ೨೦೧೪ ರ, ಅಕ್ಟೋಬರ್ ೧೫-೧೯ ರ ತನಕ ಆಯೋಜಿಸಲಾಗಿತ್ತು.ದಲ್ಲಿ ಸಂಗೀತ ವಿದ್ವಾಂಸರ ಜೊತೆ ಚರ್ಚೆ, ಕಮ್ಮಟಗಳಲ್ಲಿ ಪ್ರಾತ್ಯಕ್ಷಿಕೆಗಳ ಜೊತೆಗೆ, ವಿಚಾರ ವಿನಿಮಯ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಭಾರತೀಯ ಸಂಗೀತಾನುಭೂತಿ

'ಭಾರಾತೀಯ ಸಂಗೀತಾನುಭೂತಿ', ( Indian music experience) ಎಂಬ ಹೆಸರಿನವೀಕ್ಷಕರೊಂದಿಗೆ ಸ್ಪಂದನಾತ್ಮಕವಾಗಿ ವ್ಯವಹರಿಸುವ ಒಂದು ಕಲಾಸಂಗ್ರಹನಿರ್ಮಾಣದ ನಿರ್ದೇಶಕಿಯಾಗಿ ಕೆಲಸಮಾಡುತ್ತಿದ್ದಾರೆ.[೪]'ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ ಪೀರಿಯೆನ್ಸ್ ಯೋಜನೆ', ಪೂರ್ವ ಪ್ರಾಥಮಿಕದಿಂದ ೫ ನೆಯ ತರಗತಿಯ ವರೆಗೆ ಮಕ್ಕಳ್ಕಿಗೆ ಶಾಲೆಯಲ್ಲಿ ಸಂಗೀತ ತರಬೇತಿ ನೀಡುವುದು ಕಾರ್ಯಕ್ರಮದಡಿ (Rhapsody and Rhyme) ಇದೆ. 'ಪೈಲೆಟ್ ಪ್ರಾಜೆಕ್ಟ್' ಅಂತರ್ಗತ ಬೆಂಗಳೂರಿನ ಮಲ್ಲೇಶ್ವರದ 'ಎಮ್.ಇ.ಎಸ್, ಕಿಶೋರ ಕೇಂದ್ರ'ದಲ್ಲಿ ಅಳವಡಿಸಿ, ಸುಮಾರು ೨,೩೦೦ ಮಕ್ಕಳಿಗೆ 'ಪ್ರಾಥಮಿಕ ಸಂಗೀತ ಜ್ಞಾನ' ಪರಿಚಯಿಸಿದ್ದಾರೆ. ಇದನ್ನು ೨,೦೩೦ ಶಾಲೆಗಳಿಗೆ ವಿಸ್ತರಿಸಲು ಬೆಂಗಳೂರಿನಿಂದ ಚಿಕ್ಕಮಗಳೂರು ಇನ್ನಿತರ ಸಣ್ಣ ಕೇಂದ್ರಗಳಲ್ಲೂ ಪ್ರಯೋಗಿಸಲು, ಪೂರ್ವ ಸಿದ್ಧತೆ ಜರುಗುತ್ತಿದೆ.

ಭಾರತೀಯ ಸಂಗೀತ ಪದ್ಧತಿಗಳ ಒಂದು ಹೊಸ ನೋಟದ ಅಗತ್ಯತೆ

ಭಾರತೀಯ ಸಂಗೀತ ಪದ್ಧತಿಗಳಲ್ಲಿ (ಉತ್ತರಾದಿ, ದಕ್ಷಿಣಾದಿ ಸಂಗೀತ ಪ್ರಕಾರಗಳು) ಬಿಗಿ ವ್ಯಾಕರಣ, ಕ್ರಿಯೆಟಿವಿಟಿಗೆ ಅನುಸಾರವಾಗಿವೆ.ಚಿಂತನಮಂಥನ ಅನಿವಾರ್ಯ, ಹೊಸನೋಟದಿಂದ ಒಂದು ಕೃತಿಯನ್ನು ನೋಡುವ ಕಣ್ಣುಗಳು ಅತಿಮುಖ್ಯ.ದಕ್ಷಿಣಾದಿ ಸಂಗೀತ ತನ್ನ ವಿಕಸಿತ ಸಂಕೀರ್ಣ ಲಯ ವಿನ್ಯಾಸಗಳಿಗೆ ಸುಪ್ರಸಿದ್ಧ. ಒಬ್ಬ ಕಲಾವಿದ ತನ್ನ ಕಚೆರಿಯ ಸಂದರ್ಭದಲ್ಲಿ ಸಭಿಕರು, ಸಭಾಂಗಣ ಸಹಕಲಾವಿದರು ಈ ಮಧ್ಯೆ ಹೊರಡಿಸುವ ಸಣ್ಣ-ಪುಟ್ಟ ಸ್ಟ್ರೋಕ್ಸ್ ಗುಣಗಳಿಂದ ಒಂದು ಅದ್ಭುತ ಪರಿಣಾಮವನ್ನು ಸೃಷ್ಟಿಸಲು ಸಾಧ್ಯ. ಇಂತಹ ಚಿಕ್ಕಪುಟ್ಟ ಚಲನೆಗಳು ಒಟ್ಟಾರೆ ದಾಖಲಾಗಿ ಒಂದು ಕೃತಿ ಕಾಲಾಂತರದಲ್ಲಿ ಹೊಸಸ್ವರೂಪ ಪಡೆದುಕೊಳ್ಳುತ್ತದೆ.

ಡಿಜಿಟಲ್ ಇಂಟರ್ಫೇಸ್ ವ್ಯವಸ್ಥೆ

ಈ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾರತೀಯ ಸಂಗೀತವನ್ನು ಪಂಚೇಂದ್ರಿಯಗಳಿಂದ (ಅಂತಃಕರಣದಿಂದ)ಪರಿಭಾವಿಸಬಹುದಾದ ಒಂದು ಅನನ್ಯ ಅನುಭಾವವಾಗಿಸಲು ಸಕಲ ಸಿದ್ಧತೆಗಳು ಹಂತ ಹಂತದಲ್ಲಿ ಮುನ್ನಡೆಯುತ್ತಿವೆ. ಹಳೆಯ ಕಾಲದ ವಸ್ತುಸಂಗ್ರಹಾಲಯದ ಹಳೆಯ ವ್ಯಾಖ್ಯಾನ ರೂಪಾಂತರಿತಗೊಳ್ಳುತ್ತಿದೆ. 'ಡಿಜಿಟಲ್ ಇಂಟರ್ ಫೇಸ್ ವ್ಯವಸ್ತೆ'ಯ ಒಂದು ಹೊಸ ಆಯಾಮ ನೀಡಿದೆ. ವಿವಿಧತೆಯಲ್ಲಿ ಏಕತೆಯ ಸಾನ್ನಿಧ್ಯವನ್ನು ಕಾಣುವ ದಿಶೆಯಲ್ಲಿ ಸಂಗೀತಜ್ಞರು ದುಡಿಯುತ್ತಿದ್ದಾರೆ. ಉತ್ತರಾದಿ, ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಪದ್ಧತಿಗಳು, ಜನಪದ, ಬಾಲಿವುಡ್, ಪ್ರಾಂತೀಯ ಸಿನೆಮಾ ಸಂಗೀತ, ರಾಕ್, ಜಾಝ್,ಮುಂತಾದ ಹಲವು ಬಗೆಯ ಸಂಗೀತ ವಿಭಾಗಗಳು ಕಾಲಾಂತರದಲ್ಲಿ ಅವುಗಳಲ್ಲಿ ಆಗುವ ಬದಲಾವಣೆ ವೈವಿಧ್ಯ ತಂತ್ರಜ್ಞಾನಗಳ ಸಹಾಯದಿಂದ ಅಳವಡಿಸಿಕೊಳ್ಳುವ ಸಾಧ್ಯವಾಗುವ ಪ್ರಗತಿಯನ್ನು ದಾಖಲಿಸುತ್ತಾ ಮುಂದುವರೆಯುವ ಒಂದು ಕೇಂದ್ರ ಈ ರೀತಿಯಲ್ಲಿ ಸಾಂಪ್ರದಾಯಿಕತೆಯನ್ನೂ ಜೀವಂತವಾಗಿಸಲು ಸಹಕಾರಿಯಾಗಿದೆ. ಗ್ಯಾಲರಿಯಲ್ಲಿ ೨೦೦ ಕ್ಕೂ ಹೆಚ್ಚು ವಾದ್ಯಗಳನ್ನು ಪ್ರದರ್ಶಿಸುವುದು ವೀಕ್ಷಕರ ನಾದಸ್ವಾದಕ್ಕಾಗಿ ವರ್ಷದ ೩೬೫ ದಿನವೂ ಉಪಲಭ್ದವಿರುವ ಒಂದು 'ಸೌಂಡ್ ಗಾರ್ಡನ್ ನಿರ್ಮಾಣ.' ಕೇಂದ್ರದ ಒಂದು ಸುಸಜ್ಜಿತ ಸಭಾಂಗಣ, ತರಗತಿಗಳಲ್ಲಿ ಸಂಗೀತ ಕಚೇರಿ, ಬೋಧನೆ, ಚರ್ಚೆ,ಇತ್ಯಾದಿ ಚಟುವಟಿಕೆಗಳು ಜರುಗುವ ಆಶೆಯಿದೆ. ದೇಶದ ಉತ್ತಮ ಸಂಗೀತ ಮನಸ್ಸುಗಳನ್ನು ಒಂದೆಡೆ ಬೆಸೆಯುವ, ಜಜಸಾಮಾನ್ಯರಿಗೆ ಸಂಗೀತವನ್ನು ಹಿತವಾದ ಒಂದು ಸಾಮೂಹಿತಕವದ ಅನುಭವವಾಗಿಸುವ 'ಹಬ್' ನಿರ್ಮಾಣದ ಬೃತ ಯೋಜನೆಯ ಕನಸಿದೆ.

'ನಾದ್ ಭೇದ್ ಸ್ಪರ್ಧೆ'ಯ ನಿರ್ಣಾಯಕಿಯಾಗಿ

'ಡಾ. ಸುಮಾ ಸುಧೀಂದ್ರ,'ದೂರದರ್ಶನ ಮತ್ತು ಸ್ಪಿಕ್ ಮೆಕೆ,'ನಡೆಸಿದ ಶಾಸ್ತ್ರೀಯ ಸಂಗೀತ ಸ್ಪರ್ಧೆ, 'ನಾದ್ ಭೇದ್,' ನಲ್ಲಿ ತೀರ್ಪುಗಾರಳಾಗಿ ಪಾಲ್ಗೊಂಡಿದ್ದರು. 'ಸಂಗೀತದಿಂದ ಸಾಮರಸ್ಯ'ವೆನ್ನುವ ನುಡಿಗಟ್ಟಿನಂತೆ ಎಳೆಯರ ಸೃಷ್ಟಿಶೀಲತೆಯ ಪ್ರಯೋಗಗಳಿಗೆ ತೆರೆದ ಮಸ್ಸಿನಿಂದ ಸ್ಪಂದಿಸಿ,ಕಲಿಯಬೇಕಾದದ್ದನ್ನು ಕಲಿಯುವ ಕಳಕಳಿ ಅತಿ ಮುಖ್ಯವೆನ್ನುವ ಮಾತು ಸತ್ಯವೆಂದು ನಂಬುತ್ತಾರೆ.

ಗುರುಮುಖೇನ ಕಲಿಕೆ, ಅತಿಶ್ರೇಷ್ಠ

ಗುರುಮುಖೇನದ ಕಲಿಕೆಯೇ ಷ್ರೇಷ್ಟವಾದದ್ದು. ಆದರೂ ಅನೇಕ ಕಾರಣಗಳಿಂದಾಗಿ, ಎಳೆಯರು 'ಕ್ರೀಡೆ ಸಂಗೀತ ಕಲಿಕೆಗೆ ಶರಣುಹೋಗಿದ್ದಾರೆ.' ಡಾ.ಸುಧೀಂದ್ರ. ಅಂತರ್ಜಾಲದ 'ಸ್ಕೈಪ್ ತಾಣ'ದಲ್ಲಿ ಆಸಕ್ತರಿಗೆ ವೀಣಾವಾದನವನ್ನು ಕಲಿಸಿ,'ಅರಂಗೆಟ್ರಾ' ಸಹಿತ ನಡೆಸಿಕೊಟ್ಟಿದ್ದಾರೆ.[೫]

ತರಂಗಿಣಿ ವೀಣೆಯ ಆವಿಶ್ಕಾರ

'ಡಾ.ಸುಮಾ ಸುಧೀಂದ್ರ', 'ಫ್ಯೂಶನ್' ಉತ್ಸಾಹಿ'ಗಳಿಗೆ ಒಲಿದರು. ಶುದ್ಧ ಸಂಗೀತದ ಜೊತೆಜೊತೆಗೇ ಇದನ್ನೂ ತಮ್ಮ ಅಳವಡಿಸಿಕೊಂಡರು. ತಾಂತ್ರಿಕ ಆವಿಷ್ಕಾರಗಳನ್ನು ತಮ್ಮ ಸಂಗೀತದಲ್ಲಿ ಅಳವಡಿಸುತ್ತಾ ತಮ್ಮನ್ನು ತಾವು ನವೀಕರಿಸುತ್ತಾ ಸಾಗಿದ್ದಾರೆ. 'ತರಂಗಿಣಿ ವೀಣೆಯ ವಿನ್ಯಾಸ,' ಈ ದಿಶೆಯಲ್ಲಿ ಒಂದು ಹೊಸ-ಮೈಲಿಗಲ್ಲಾಗಿ ಪ್ರಸಿದ್ಧವಾಗಿದೆ. ಈ ವೀಣೆ, ಆಕಾರದಲ್ಲಿ ಪುಟ್ಟದಾಗಿದ್ದು ಸಾಗಿಸಲು ಅನುಕೂಲವಾಗಿದೆ. ಇದು 'ಸರಸ್ವತಿ ವೀಣೆ'ಯ ಒಂದು ಚಿಕ್ಕ ಸ್ವರೂಪ. ಡಾ. ಸುಮಾರವರು, ಈ ತರಹವೇ ಪಾಶ್ಚಿಮಾತ್ಯ ಸಂಗೀತದ ರೀತಿನೀತಿಗಳನ್ನು ಅಭ್ಯಾಸಮಾಡಿ, 'ಅಂತರಿಕ ಕಲಿಕಾ ಪದ್ಧತಿ'ಯಿಂದ ಕಲಿತರು. ಹಾಗಾಗಿ 'ಸುಮಾ ಸುಧೀಂದ್ರ'ರವರ ಸಂಗೀತ ದಿಗಂತ, ವಿಸ್ತಾರವಾಯಿತು.

ಸಾಂಸ್ಕೃತಿಕ ಹೋರಾಟಗಾರ್ತಿಯಾಗಿ

ಡಾ.ಸುಮಾ ಸುಧೀಂದ್ರ,ಸಾಂಸ್ಕೃತಿಕ ಹೋರಾಟಗಾರ್ತಿಯಾಗಿ (Cultural Activist) ಗುರುತಿಸಲ್ಪಟ್ಟಿದ್ದಾರೆ.[೬] ಸಣ್ಣ ಸಣ್ಣ ಸಂಸ್ಥೆಗಳಲ್ಲಿ ಕೆಲಸಮಾಡಿ, ಬೆಂಗಳೂರಿನ ಅಕೆಡೆಮಿ ಆಫ್ ಮ್ಯೂಸಿಕ್, ಚೌಡಯ್ಯ ಮೆಮೋರಿಯಲ್ ಹಾಲ್ ಸಂಸ್ಥೆಯಲ್ಲಿ ೩೦ ವರ್ಷ ಅಧ್ಯಕ್ಷೆಯಾಗಿ ಕೆಲಸಮಾಡಿದರು. ಈಗ ಸದಸ್ಯೆಯಾಗಿ ಮುಂದುವರೆದಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯಲ್ಲೂ ಹಾಲಿ ಸದಸ್ಯೆಯಾಗಿದ್ದಾರೆ. ಇಂತಹ ಜವಾಬ್ದಾರಿಯುತ ಸ್ಥಾನಗಳು ದೊರೆತಾಗ, ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಮತ್ತು ಸಂಸ್ಥೆಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಮಾನ, ಗೌರವ, ಪ್ರಶಸ್ತಿಗಳು ದೊರೆಯುವಂತೆ ಮುತುವರ್ಜಿವಹಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಳೆದ ೬ ದಶಕಗಳ ಇತಿಹಾಸದಲ್ಲಿ ಮೊದಲಬಾರಿಗೆ ನಮ್ಮ ನಾಡಿಗೆ ಅತಿ ಹೆಚ್ಛು ಪ್ರಶಸ್ತಿ ದೊರೆತಿದೆ. ಸಾಂಸ್ಕ್ರತಿಕ ಉತ್ಸವಗಳಿಗೆ ಅಧಿಕ ಗ್ರಾಂಟ್ಸ್, ಬಿಡುಗಡೆ ಡಾ. ಸುಮಾ ಸುಧೀಂದ್ರ ಸದಸ್ಯೆಯಾಗಿರುವ ಸಮಯದಲ್ಲಿ ದೊರೆತಿದೆ. ಒಳ್ಳೆಯ ಸಂಸ್ಥೆಗಳು, ಕಾರ್ಯಕರ್ತರುಗಳನ್ನು ಸಮರ್ಪಕವಾಗಿ 'ಪ್ರೊಜೆಕ್ಟ್' ಮಾಡುವ ಕೆಲಸ ಮಾಡಿದ್ದಾರೆ.

ಪ್ರಶಸ್ತಿಗಳು

  1. 'ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ'
  2. 'ತಮಿಳುನಾಡಿನ ಕಲಾಮಣೈ ಪ್ರಶಸ್ತಿ'

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  1. ಪ್ರಜಾವಾಣಿ,04/24/2013, 75ರ ಸಂಭ್ರಮಕ್ಕೆ ವೀಣೆಯ ಸುನಾದ-ಹೇಮಾವತಿ. ಎಮ್.ಆರ್
  2. 'ಮಯೂರ', ಸುಮಾ ಸುಧೀಂದ್ರ, ವಿ.ಎನ್.ವೆಂಕಟಲಕ್ಷ್ಮಿ, ಪು.೧೬-೨೦, ನವೆಂಬರ್, ೧, ೨೦೧೪ Archived 2013-11-22 ವೇಬ್ಯಾಕ್ ಮೆಷಿನ್ ನಲ್ಲಿ.
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ