ಸಿದ್ಧಲಿಂಗ ಪಟ್ಟಣಶೆಟ್ಟಿ

ಸಿದ್ಧಲಿಂಗ ಪಟ್ಟಣಶೆಟ್ಟಿಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಸಿರ್ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ಕಾಲೇಜಿನಲ್ಲಿ ಹಿಂದೀ ಅಧ್ಯಾಪಕರಾಗಿ, ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ ಕೃತಿಗಳು

ಕಾವ್ಯ

  • ನೀನಾ
  • ಔರಂಗಜೇಬ ಮತ್ತುಇತರ ಕವನಗಳು
  • ಪರದೇಸಿ ಹಾಡುಗಳು
  • ನೂರಾರು ಪದ್ಯಗಳು
  • ಪ್ರತೀಕ್ಷೆ
  • ಮತ್ತೆ ಬಂದಿದ್ದಾಳೆ
  • ಪಟ್ಟಣಶೆಟ್ಟರ ಆಯ್ದ ಕವಿತೆಗಳು
  • ಆಯಸ್ಕಾಂತ
  • ಇಂದು ರಾತ್ರಿಯ ಹಾಗೆ
  • ಅಂತರಂಗದ ಕವನಗಳು : ಆಯ್ದ ಕವಿತೆಗಳು : ೧೯೯೪
  • ಪಟ್ಟಣಶೆಟ್ಟಿಯವರ ಸಮಗ್ರ ಕಾವ್ಯ : ೨೦೦೦
  • ಇಷ್ಟು ಹೇಳಿದ ಮೇಲೆ

ಕತೆ

  • ಮಾವ ಮತ್ತು ಇತರ ಕತೆಗಳು

ವಿಮರ್ಶೆ

  • ಆಧುನಿಕ ಕನ್ನಡ ಹಿಂದಿ ಕಾವ್ಯ
  • ಅನುಶೀಲನ
  • ರಂಗಾಯಣ
  • ಪರಿಭಾವನ

ವ್ಯಕ್ತಿಚಿತ್ರ ಸಂದರ್ಶನ

  • ಋಣಾನುಬಂಧ

ಜೀವನ ಚರಿತ್ರೆ

  • ಹಳ್ಳಿಕೇರಿ ಗುದ್ಲೆಪ್ಪನವರು
  • ಧರ್ಮಸ್ಥಳ

ಅಂಕಣ

  • ಚಹಾದ ಜೋಡಿ (೧,೨,೩)

ಸಂಪಾದಿತ

  • ನಾನಿಕಾಕಾ : ಎನ್ಕೆ ಬದುಕು : ಸ್ಮರಣ-ಅಭಿನಂದನೆ
  • ನಾನಿಕಾಕಾ : ಎನ್ಕೆ ಬರಹ : ವಿಮರ್ಶಾ ಲೇಖನಗಳು
  • ಕೈಲಾಸಂ
  • ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ
  • ಕಲ್ಯಾಣದ ಹಾದಿ
  • ಸಂಕ್ರಮಣ ಕಾವ್ಯ (ಇತರರೊಡನೆ)
  • ಸಾಲಿ ರಾಮಚಂದ್ರರಾಯ : ಸಂಸ್ಮರಣೆಗಳು (ಇತರರೊಡನೆ)
  • ರಂಗಸಂಪನ್ನರು (ಕರ್ನಾಟಕ ನಾಟಕ ಅಕಾಡೆಮಿಗಾಗಿ ಇತರರೊಡನೆ ೩೦ ಪುಸ್ತಕಗಳು)

ಅನುವಾದ

ನಾಟಕ

  • ಆಷಾಡದ ಒಂದು ದಿನ (ಹಿಂದಿ ಮೂಲ : ಮೊಹನ ರಾಕೇಶ)
  • ಅಲೆಗಳಲ್ಲಿ ರಾಜಹಂಸಗಳು (ಹಿಂದಿ ಮೂಲ : ಮೊಹನ ರಾಕೇಶ)
  • ಅಧೇ ಅಧೂರೆ (ಹಿಂದಿ ಮೂಲ : ಮೊಹನ ರಾಕೇಶ)
  • ಅಂಧಯುಗ : ( ಹಿಂದಿ ಮೂಲ : ಧರ್ಮವೀರ ಭಾರತೀ )
  • ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ( ಹಿಂದಿ ಮೂಲ : ಸುರೇಂದ್ರ ವರ್ಮಾ)
  • ಹಾಸಿಗೆ ( ಮರಾಠಿ ಮೂಲ : ರತ್ನಾಕರ ಮತಕರೀ)
  • ಬೇರಿಲ್ಲದವರು ( ಉರ್ದು ಮೂಲ : ಅನಿಲ ಠಕ್ಕರ)
  • ಅಂಜಿ (ಮರಾಠಿ ಮೂಲ : ವಿಜಯ ತೆಂಡೂಲಕರ)
  • ಮುದ್ರಾರಾಕ್ಷಸ ( ಸಂಸ್ಕೃತ ಮೂಲ : ವಿಶಾಖದತ್ತ)
  • ಮೂರು ನಾಟಕಗಳು ( ಹಿಂದಿ ಮೂಲ : ಮೋಹನ ರಾಕೇಶ )
  • ಕೋರ್ಟ ಮಾರ್ಶಲ್ (ಹಿಂದಿ ಮೂಲ: ಸ್ವದೇಶ ದೀಪಕ )

ಕಾವ್ಯ

  • ಕನುಪ್ರಿಯಾ ( ಹಿಂದಿ ಮೂಲ : ಧರ್ಮವೀರ ಭಾರತೀ )
  • ಮೀರಾವಾಣಿ ( ಹಿಂದಿ)

ಕಾದಂಬರಿ

  • ಶೇಷಪ್ರಶ್ನೆ
  • ಭಾರತಿ (ಮೂಲ :ಶರಚ್ಚಂದ್ರ )
  • ಶಿಕ್ಷೆ ( ಓಡಿಸಿ ಮೂಲ : ಕಾನ್ಹುಚರಣ ಮೊಹಾಂತಿ)

ಜೀವನ ಚರಿತ್ರೆ

  • ಮೀರಾಬಾಯಿ ( ಇಂಗ್ಲಿಶ ಮೂಲ : ಉಷಾ ಎಸ್.ನಿಲ್ಸನ್ )
  • ಜಯಶಂಕರ ಪ್ರಸಾದ ( ಇಂಗ್ಲಿಶ ಮೂಲ : ರಮೇಶಚಂದ್ರ ಶಾಹ )
  • ಸವಾಈ ಜಯಸಿಂಹ ( ಹಿಂದಿ ಮೂಲ : ರಾಜೇಂದ್ರ ಶಂಕರ ಭಟ್ಟ )

ಪ್ರಬಂಧ

  • ಹೆಣ್ಣಿನ ಸ್ಥಾನಮಾನ (ಮೂಲ : ಶರಚ್ಚಂದ್ರ)

ಹಿಂದಿ ಸಾಹಿತ್ಯರಚನೆ

  • ಶೈಲ ಔರ ಸಾಗರ ( ಕಾವ್ಯ )
  • ಹಿಂದಿ ಗದ್ಯ ಮಾಧುರೀ ( ನಿಬಂಧ ಸಂಕಲನ)
  • ಆಧುನಿಕ ಹಿಂದಿ ಔರ ಕನ್ನಡ ಕಾವ್ಯ ( ವಿಮರ್ಶೆ )
  • ರಾಷ್ಟ್ರಕವಿ ಗೋವಿಂದ ಪೈ (ಜೀವನ ಚರಿತ್ರೆ )
  • ಹಿಂದಿ ಮಂಜರೀ ( ಗದ್ಯ ಪದ್ಯ ಸಂಗ್ರಹ )
  • ಮೋಹನ ರಾಕೇಶ ಔರ ಉನಕೆ ನಾಟಕ
  • ಸಾಹಿತ್ಯ ಮಾನಸ ( ಇತರರೊಡನೆ ಸಂಪಾದಿತ )
  • ಕರ್ನಾಟಕ ನಾಟಕ ಅಕಾಡೆಮಿಗಾಗಿ ಸಂಪಾದಿಸಿಕೊಟ್ಟ ೫ ನಾಟಕಗಳು
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ