ಸಾಯಿ ಪಲ್ಲವಿ

ಭಾರತೀಯ ಚಿತ್ರರಂಗದ ನಟಿ ಮತ್ತು ನೃತ್ಯಗಾರ್ತಿ

ಸಾಯಿ ಪಲ್ಲವಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಯಿ ಪಲ್ಲವಿ ಸೆಂತಮರಾಯಿಯವರು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಿರುವ ಭಾರತೀಯ ನಟಿ. ಪ್ರೇಮಂ ಮತ್ತು ಫಿದಾ ಚಲನಚಿತ್ರದಲ್ಲಿ ಇವರ ಅಭಿನಯಕ್ಕಾಗಿ ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.[೧]ಸಾಯಿ ಪಲ್ಲವಿ ಅವರು ೨೦೧೫ ರ ಮಲಯಾಳಂ ಚಿತ್ರ ಪ್ರೇಮಂನಲ್ಲಿ ಮಲಾರ್ ಪಾತ್ರಕ್ಕಾಗಿ ಸಾರ್ವಜನಿಕರ ಗಮನ ಸೆಳೆದರು. ನಂತರ ಅವರು ಕಾಳಿ (೨೦೧೬) ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದರು. ವರುಣ್ ತೇಜ್ ಅವರೊಂದಿಗೆ ನಟಿಸಿರುವ ೨೦೧೭ ರ ರೊಮ್ಯಾಂಟಿಕ್ ಚಿತ್ರ ಫಿದಾ[೨]ದಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುತ್ತಾ ತೆಲುಗಿಗೆ ಪಾದಾರ್ಪಣೆ ಮಾಡಿದರು. ಫಿದಾವನ್ನು ದೂರದರ್ಶನದಲ್ಲಿ ತೋರಿಸಿದಾಗ , ಐದನೇ ಬಾರಿಗೆ ಸಹ ಇದು ಗರಿಷ್ಠ ಟಿಆರ್ಪಿ ರೇಟಿಂಗ್ ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶನದ ದಿಯಾ ಹೆಸರಿನ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ಸಾಯಿ ಪಲ್ಲವಿ
Sai Pallavi at Mca Pre Release Event
ಜನನ
ಸಾಯಿ ಪಲ್ಲವಿ ಸೆಂತಮರಾಯಿ

೯ ಮೇ ೧೯೯೨
ಕೊಯಂಬತ್ತೂರು, ತಮಿಳುನಾಡು, ಭಾರತ
ರಾಷ್ಟ್ರೀಯತೆಭಾರತೀಯ
ಶಿಕ್ಷಣ ಸಂಸ್ಥೆಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ
ವೃತ್ತಿ(ಗಳು)ನಟಿ, ನರ್ತಕಿ, ವೈದ್ಯೆ

ಸಾಯಿ ಪಲ್ಲವಿ ಇವರು ವೈದ್ಯರಾಗಿದ್ದು , ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ ೨೦೧೬ ರಲ್ಲಿ ಎಂಬಿಬಿಎಸ್ (ವೈದ್ಯಕೀಯ ಪದವಿ) ಮುಗಿಸಿದರು.[೩]

ಜನನ

ಸಾಯಿ ಪಲ್ಲವಿ ೯ ಮೇ ೧೯೯೨ ರಲ್ಲಿ ಕೋಟಗಿರಿಯ, ತಮಿಳುನಾಡಿನಲ್ಲಿ ಜನಿಸಿದರು.[೪]

ಆರಂಭಿಕ ಜೀವನ

ಸಾಯಿ ಪಲ್ಲವಿ ಅವರು ಕೋಟಗಿರಿಯ, ದಿ ನೀಲಗಿರಿಸ್,ತಮಿಳುನಾಡಿನಲ್ಲಿ ಜನಿಸಿದರು.ತಮಿಳುನಾಡಿನ ಸೆಂತಮಾರೈ ಕಣ್ಣನ್ ಮತ್ತು ರಾಧಾ ಇವರ ಪುತ್ರಿಯಾಗಿ ಜನಿಸಿದರು. ಅವಳ ಕಿರಿಯ ಸಹೋದರಿ ಪೂಜಾ ಕೂಡ ನಟಿಯಾಗಿ ಕೆಲಸ ಮಾಡಿದ್ದಾರೆ. ಸಾಯಿ ಪಲ್ಲವಿ ಬೆಳೆದು ಕೊಯಂಬತ್ತೂರುನಲ್ಲಿ ಶಿಕ್ಷಣ ಪಡೆದರು. ಅವರು ೨೦೧೬ರಲ್ಲಿ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಿದರು.[೫]

ಜೀವನ

ಸಾಯಿ ಪಲ್ಲವಿ ೨೦೧೫ ರಲ್ಲಿ ಮೊದಲ ಬಾರಿಗೆ ಮಲರ್ ಎಂಬ ಪಾತ್ರದಲ್ಲಿ ಮಲಯಾಳಂ ಚಿತ್ರವಾದ ಪ್ರೇಮಂ ಸಿನೆಮಾದಲ್ಲಿ ನಟಿಸಿದರು. ಆಕೆ ೨೦೧೬ರಲ್ಲಿ ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದಳು. ಅವಳು ೨೦೧೭ ರಲ್ಲಿ ತೆಲುಗು ಚಿತ್ರರಂಗದಲ್ಲಿ ಭಾನುಮತಿಯ ಪಾತ್ರದಲ್ಲಿ ವರುಣ್ ತೇಜ್ ಜೊತೆ ಫಿದಾ ಚಿತ್ರದಲ್ಲಿ ಅಭಿನಯಿಸಿದರು. ಫಿದಾವನ್ನು ಟೆಲಿವಿಷನ್ನಲ್ಲಿ ತೋರಿಸಿದಾಗ, ಇದು ಐದನೇ ಬಾರಿಗೆ ಗರಿಷ್ಠ ಟಿ.ಆರ್ಪಿ ರೇಟಿಂಗ್ ಅನ್ನು ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶಿಸಿದ ದಿಯಾ ಶೀರ್ಷಿಕೆಯೊಂದಿಗೆ ಅವಳು ತಮಿಳು ಚಿತ್ರರಂಗದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದಾರೆ. ಅವರು ಜಾರ್ಜಿಯಾದ ಟಿಬಿಲಿಸ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಿಂದ ೨೦೧೬ ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು.[೬]

ನೃತ್ಯ ಜೀವನ

ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು, ತರಬೇತಿ ಪಡೆದ ನರ್ತಕಿಯಾಗಿಲ್ಲದಿದ್ದರು, ಆಕೆಯು ಯಾವಾಗಲೂ ತನ್ನ ತಾಯಿಯಂತೆ ನೃತ್ಯ ಮಾಡಬೇಕೆಂದು ಬಯಸುತ್ತಿದ್ದಳು. ಅವರು ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮತ್ತು ನರ್ತಕಿಯಾಗಿ ಜನಪ್ರಿಯತೆ ಗಳಿಸಿದರು. ಆಕೆಯ ತಾಯಿಯು ಬೆಂಬಲಿಸಿದ ಕಾರಣದಿಂದಾಗಿ, ಅವರು ೨೦೦೬ರಲ್ಲಿ ವಿಜಯ್ ಟಿವಿಯಲ್ಲಿ ಬರುತ್ತಿದ್ದ ನೃತ್ಯ ರಿಯಲಿಟಿ ಶೋ ಆದ ಯಾರ್ ಅದುತ ಪ್ರಭುದೇವ ದಲ್ಲಿ ಭಾಗವಹಿಸಿದರು ಮತ್ತು ೨೦೦೯ರಲ್ಲಿ ಇಟಿವಿ ತೆಲುಗು ಭಾಷೆಯಲ್ಲಿ ದೀ ಅಲ್ಟಿಮೇಟ್ ಡಾನ್ಸ್ ಷೋ (ಡಿ ೪) ನಲ್ಲಿ ಕಾಣಿಸಿಕೊಂಡರು.

ಚಲನಚಿತ್ರ ವೃತ್ತಿಜೀವನ

೨೦೧೪ರಲ್ಲಿ ಅವರು ಜಾರ್ಜಿಯಾ, ಟಿಬಿಲಿಸಿ ಅಧ್ಯಯನ ಮಾಡುವಾಗ ನಿರ್ದೇಶಕ ಅಲ್ಫೋನ್ಸ್ ಪುಥಾರೆನ್ ತನ್ನ ಚಿತ್ರ ಪ್ರೇಮಂರಲ್ಲಿ ಮಲರ್ ಪಾತ್ರವನ್ನು ನಿರ್ವಹಿಸಿದರು. ಅವರು ಚಲನಚಿತ್ರವನ್ನು ರಜಾ ದಿನಗಳಲ್ಲಿ ಚಿತ್ರೀಕರಿಸುತ್ತಿದ್ದರು ಮತ್ತು ಶೂಟಿಂಗ್ ಮುಗಿದ ನಂತರ, ತನ್ನ ಅಧ್ಯಯನಕ್ಕೆ ಮರಳುತ್ತಿದ್ದರು. ಆ ವರ್ಷ ಅವರು ಹಲವಾರು ಅತ್ಯುತ್ತಮ "ಬೆಸ್ಟ್ ಫೀಮೇಲ್ ಡೆಬಟ್" ಪ್ರಶಸ್ತಿಗಳನ್ನು ಗೆದ್ದರು. ಇದರಲ್ಲಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ನಟಿ ಪ್ರಶಸ್ತಿ ಕೂಡ ಪಡೆದರು. ೨೦೧೫ ರ ಅಂತ್ಯದಲ್ಲಿ, ತನ್ನ ಎರಡನೇ ಚಲನಚಿತ್ರವಾದ ಕಾಳಿಯಲ್ಲಿ ನಟಿಸಲು ಅವಳು ಒಂದು ತಿಂಗಳ ವಿರಾಮವನ್ನು ತೆಗೆದುಕೊಂಡಳು. ಇದು ಮಾರ್ಚ್ ೨೦೧೬ ರಲ್ಲಿ ಬಿಡುಗಡೆಯಾಯಿತು. ಪಾತ್ರದಲ್ಲಿ ಆಕೆಯು ಪತಿಯ ತೀವ್ರ ಕೋಪ ವಿಚಾರಗಳನ್ನು ಎದುರಿಸಬೇಕಾಗಿರುವ ಅಂಜಲಿ ಎಂಬ ಯುವ ಪತ್ನಿ ಪಾತ್ರವನ್ನು ಅವಳು ಅಭಿನಯಿಸಿದಳು. ಮಲೆಯಾಳಂ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು.೨೦೧೭ರಲ್ಲಿ ತೆಲಂಗಾಣದಿಂದ ಸ್ವತಂತ್ರ ಗ್ರಾಮದ ಹುಡುಗಿಯಾದ ಭಾನುಮತಿ ಪಾತ್ರದಲ್ಲಿ ಶೇಖರ್ ಕಮುಲಾ ಅವರ ಫಿಡಾ ಜೊತೆ ತೆಲುಗು ಭಾಷೆಯಲ್ಲಿ ಚೊಚ್ಚಲ ಪ್ರವೇಶ ಪಡೆದರು.ನಿರ್ದೇಶಕ ಎ.ಎಲ್.ವಿಜಯ್ ಅವರ ಮುಂದಿನ ಯೋಜನೆ ದಿಯಾ,ತೆಲುಗು-ದ್ವಿಭಾಷಾ ಚಿತ್ರದಲ್ಲಿ ನಟಿಸಿದರು. ಆನಂತರ, ಬಾಲಾಜಿ ಮೋಹನ್ ನಿರ್ದೇಶಿಸಿದ ಧನುಷ್ ನ ಜೊತೆ ಮಾರಿ ಚಿತ್ರದ ಎರಡನೆಯ ಚಿತ್ರವಾದ ಮಾರಿ ೨ ಚಿತ್ರದಲ್ಲಿ ಅಭಿನಯಿಸಿದರು. ಪಲ್ಲವಿಯವರು ಪಡಿ ಪಡಿ ಲೆಚೆ ಮನಸೂವಿತ್ ಶರ್ವಾನ್ಡ್ ಚಿತ್ರಕ್ಕಾಗಿ ಫೆಬ್ರವರಿ ೨೦೧೮ರಲ್ಲಿ ಚಿತ್ರೀಕರಣ ಪ್ರಾರಂಭಿಸಿದರು. ಇದು ಡಿಸೆಂಬರಲ್ಲಿ ಬಾಕ್ಸ್ ಆಫಿಸ್ ನಲ್ಲಿ ಪ್ರದರ್ಶನಗೊಂಡಿತು.[೭]

ಚಲನಚಿತ್ರಗಳು

ವರ್ಷವಿಷಯಪಾತ್ರನಿರ್ದೇಶಕರುಭಾಷೆNotes
೨೦೦೫ಕಸ್ತೂರಿ ಮಾನ್ಶಾಲೆಯ ಬಾಲಕಿಎ.ಕೆ ಲೊಹಿತದಾಸ್ಅನ್ಕ್ರೆಡಿಕ್ಟೆಡ್ ಪಾತ್ರ
೨೦೦೮ಧಾಮ್ ಧೂಮ್ಶೇನ್ಬಾಸ್ ಸಂಬಂಧಿಜೀವ (director)ತಮಿಳು
೨೦೧೫ಪ್ರೇಮಂಮಲರ್ಅಲ್ಫೋನ್ಸ್ ಪುತರ್ಮಲೆಯಾಳಂಮಲಯಾಲಂ ಡೆಬ್ಯೂಟ್
ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ - ಸೌತ್
೨೦೧೬ಕಾಳಿ ( ೨೦೧೬ಫಿಲ್ಮ್)ಅಂಜಲಿಸಮೀರ್ ತಹಿರ್ಮಲೆಯಾಳಂನಾಮನಿರ್ದೇಶನ - ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ - ಮಲಯಾಲಂ
೨೦೧೭ಫಿದಾಭಾನುಮತಿಶೇಖರ್ ಕಮ್ಮುಲತೆಲುಗುತೆಲುಗು ಡೆಬ್ಯೂಟ್
ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್- ತೆಲುಗು
ಮಿಡಲ್ ಕ್ಲಾಸ್ ಅಬ್ಬಾಯಿಪಲ್ಲವಿ "ಚಿನ್ನಿ"ವೆನು ಸ್ರೀ ರಾಮ್ತೆಲುಗು
೨೦೧೮ದಿಯಾ (ಫಿಲ್ಮ್)ತುಳಸಿಎ.ಲ್ ವಿಜಯ್ತಮಿಳು [೮]ತಮಿಳ್ ಡೆಬ್ಯೂಟ್
ದಿಯಾ(ಫಿಲ್ಮ್)ತೆಲುಗು
ಪಡಿ ಪಡಿ ಲೆಚೆ ಮನಸುವೈಶಲಿಹನು ರಘವಪುಡಿತೆಲುಗು
ಮಾರಿ ೨[೯]ಅರಾತು ಆನಂದಿಬಾಲಾಜಿ ಮೋಹನ್ತಮಿಳು
೨೦೧೯ಎನ್ ಜಿ ಕೆ (ಫಿಲ್ಮ್)|ಎನ್ ಜಿ ಕೆ[೧೦]ಮೈತಿಲಿಸೆಲ್ವರಘವನ್ತಮಿಳುಫಿಲ್ಮಿಂಗ್
ಫಹಧ್ ಫಾಸಿ ಫಿಲ್ಮ್ಟಿಬಿಎವಿವೆಕ್ಮಲೆಯಾಳಂ

[೧೧]

[೧೨]

ಪ್ರಶಸ್ತಿಗಳು

ವರ್ಷಪ್ರಶಸ್ತಿವಿಭಾಗಭಾ‍ಷೆಸಿನೆಮಾಫಲಿತಾಂಶ
೨೦೧೫ಏ‌ಷಿಯನೆಟ್ ಫಿಲ್ಮ್ ಅವಾರ್ಡ್ಸ್ಪೆಶಲ್ ಜೂರಿ ಅವರ್ಡ್ಮಲಯಾಲಂಪ್ರೇಮಂಗೆಲುವು
ಏ‌ಷಿಯ ವಿಶನ್ ಅವಾರ್ಡ್ನ್ಯೂ ಸೆನ್ಸೇಷನ್ ಇನ್ ಆಕ್ಟಿಂಗ್ಗೆಲುವು
ಫಿಲ್ಮಫೇರ್ ಅವಾರ್ಡ್ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್ – ಸೌತ್ಗೆಲುವು
ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ಗೆಲುವು
ವನಿತಾ ಫಿಲ್ಮ್ ಅವಾರ್ಡ್ಸ್ಬೆಸ್ಟ್ ಡೆಬ್ಯೂಟ್ (ಫೀಮೇಲ್)ಗೆಲುವು
IBNLiveಬೆಸ್ಟ್ ಡೆಬ್ಯೂಟ್ಗೆಲುವು
೨೦೧೬ಏಸಿಯನೆಟ್ ಫಿಲ್ಮ ಅವಾರ್ಡ್ಸ್ಮೋಸ್ಟ್ ಪಾಪ್ಯುಲರ್ ಆಕ್ಟ್ರೆಸ್ಕಾಳಿ (೨೦೧೬ ಫಿಲ್ಮ್)ಗೆಲುವು
ಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ- ಮಲಯಾಲಂಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ - ಮಲಯಾಲಂನಾಮನಿರ್ದೇಶನ
ಸೌತ್ ಇಂಡಿಯನ್ ಇನ್ಟರ್ನ್ಯಾಶನಲ್ ಮೂವಿ ಅವಾರ್ಡ್ಸ್ಬೆಸ್ಟ್ ಆಕ್ಟ್ರೆಸ್ನಾಮನಿರ್ದೇಶನ
ಅವಾರ್ಡ್ ಬಿಹೈನ್ಡವುಡ್ಸ್ ಗೋಲ್ಡ್ ಮೆಡಲ್ಬೆಸ್ಟ್ ಆಕ್ಟ್ರೆಸ್ಗೆಲುವು
೨೦೧೮ಫಿಲ್ಮಫೇರ್ ಅವಾರ್ಡ್ಸ್ಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ - ತೆಲುಗುತೆಲುಗುಫಿದಾಗೆಲುವು

ಸೌತ್ ಇಂಡಿಯನ್ ಇನ್ಟರ್ನ್ಯಾಶನಲ್ ಅವಾರ್ಡ್ಸ್

ನಾಮನಿರ್ದೇಶನ

[೧೩]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ