ಶೂ

ಶೂ ಧರಿಸುವವನು ವಿವಿಧ ಚಟುವಟಿಕೆಗಳಲ್ಲಿ ತೊಡಗಿದಾಗ ಮಾನವ ಪಾದವನ್ನು ರಕ್ಷಿಸುವ ಮತ್ತು ಆರಾಮವಾಗಿಸುವ ಉದ್ದೇಶ ಹೊಂದಿದ ಪಾದರಕ್ಷೆಯ ಒಂದು ಬಗೆ. ಶೂಗಳನ್ನು ಅಲಂಕಾರ ಮತ್ತು ಫ಼್ಯಾಷನ್‍ನ ವಸ್ತುವಾಗಿಯೂ ಬಳಸಲಾಗುತ್ತದೆ. ಶೂಗಳ ವಿನ್ಯಾಸ ಕಾಲಾಂತರದಲ್ಲಿ ಮತ್ತು ಸಂಸ್ಕೃತಿಯಿಂದ ಸಂಸ್ಕೃತಿಗೆ ಅಗಾಧವಾಗಿ ಬದಲಾಗಿದೆ, ಮತ್ತು ಮೂಲತಃ ಶೂನ ನೋಟ ಕಾರ್ಯಕ್ರಮಕ್ಕೆ ಸಂಬಂಧ ಹೊಂದಿತ್ತು. ಜೊತೆಗೆ, ಫ಼್ಯಾಷನ್ ಹಲವುವೇಳೆ ಅನೇಕ ವಿನ್ಯಾಸ ಅಂಶಗಳನ್ನು ಆಜ್ಞಾಪಿಸಿದೆ, ಉದಾಹರಣೆಗೆ ಶೂಗಳು ಬಹಳ ಎತ್ತರದ ಹಿಮ್ಮಡಗಳನ್ನು ಹೊಂದಿರಬೇಕೊ ಅಥವಾ ಚಪ್ಪಟೆಯಾದ ಹಿಮ್ಮಡಗಳನ್ನು ಹೊಂದಿರಬೇಕೊ ಎಂದು. ೨೦೧೦ರ ದಶಕದಲ್ಲಿ ಸಮಕಾಲೀನ ಪಾದರಕ್ಷೆಯು ಶೈಲಿ, ಸಂಕೀರ್ಣತೆ ಮತ್ತು ವೆಚ್ಚದಲ್ಲಿ ವ್ಯಾಪಕವಾಗಿ ಬದಲಾಗುತ್ತದೆ. ಸರಳ ಚಪ್ಪಲಿಗಳು ಕೇವಲ ಒಂದು ತೆಳು ಹಿಮ್ಮಡ ಮತ್ತು ಸರಳ ಕಟ್ಟುಪಟ್ಟಿಯನ್ನು ಹೊಂದಿರಬಹುದು ಮತ್ತು ಕಡಿಮೆ ವೆಚ್ಚದಲ್ಲಿ ಮಾರಾಟವಾಗಬಹುದು. ಪ್ರಸಿದ್ಧ ವಿನ್ಯಾಸಕಾರರಿಂದ ತಯಾರಿಸಲ್ಪಟ್ಟ ಉನ್ನತ ಫ಼್ಯಾಷನ್ ಶೂಗಳು ದುಬಾರಿ ಸಾಮಗ್ರಿಗಳಿಂದ ಮಾಡಲ್ಪಟ್ಟಿರಬಹುದು, ಸಂಕೀರ್ಣ ನಿರ್ಮಾಣವನ್ನು ಬಳಸುತ್ತವೆ ಮತ್ತು ಒಂದು ಜೊತೆಗೆ ನೂರಾರು ಅಥವಾ ಸಾವಿರಾರು ಡಾಲರ್ ಬೆಲೆಗೆ ಮಾರಾಟವಾಗುತ್ತವೆ. ಕೆಲವು ಶೂಗಳು ನಿರ್ದಿಷ್ಟ ಉದ್ದೇಶಗಳಿಗಾಗಿ ವಿನ್ಯಾಸಗೊಂಡಿರುತ್ತವೆ, ಉದಾಹರಣೆಗೆ ಪರ್ವತಾರೋಹಣ ಅಥವಾಸ್ಕೀಯಿಂಗ್‍ಗೆ ನಿರ್ದಿಷ್ಟವಾಗಿ ವಿನ್ಯಾಸಗೊಂಡ ಬೂಟುಗಳು.

ಔಪಚಾರಿಕೆ ಶೂಗಳ ಒಂದು ಜೊತೆ

ಸಾಂಪ್ರದಾಯಿಕವಾಗಿ, ಶೂಗಳು ಚಕ್ಕಳ, ಕಟ್ಟಿಗೆ ಅಥವಾ ನಾರುಬಟ್ಟೆಯಿಂದ ತಯಾರಿಸಲ್ಪಟ್ಟಿವೆ, ಆದರೆ ೨೦೧೦ರ ದಶಕದಲ್ಲಿ, ಅವು ಹೆಚ್ಚಾಗಿ ರಬರ್, ಪ್ಲಾಸ್ಟಿಕ್‍ಗಳು ಮತ್ತು ಇತರ ಪೆಟ್ರೋಕೆಮಿಕಲ್‍ನಿಂದ ಪಡೆದ ಸಾಮಗ್ರಿಗಳಿಂದ ಮಾಡಲ್ಪಡುತ್ತವೆ. ಮಾನವ ಪಾದವು ವಿವಿಧ ಭೂಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದಾದರೂ, ಅದು ಚೂಪಾದ ಬಂಡೆಗಳು ಮತ್ತು ಬಿಸಿ ನೆಲದಂತಹ ಪರಿಸರದ ಅಪಾಯಗಳಿಗೆ ಈಡಾಗುತ್ತದೆ, ಮತ್ತು ಇವುಗಳಿಂದ ಶೂಗಳು ರಕ್ಷಣೆ ನೀಡುತ್ತವೆ. ನಿರ್ಮಾಣ ಸ್ಥಳಗಳಲ್ಲಿ ಬೇಕಾದ ಉಕ್ಕು ಹಿಮ್ಮಡಿಯ ಬೂಟುಗಳಂತಹ ಕೆಲವು ಶೂಗಳನ್ನು ಸುರಕ್ಷತಾ ಉಪಕರಣವಾಗಿ ಧರಿಸಲಾಗುತ್ತದೆ.

ಎಲ್ಲ ಶೂಗಳು ಹಿಮ್ಮಡವನ್ನು ಹೊಂದಿರುತ್ತವೆ, ಮತ್ತು ನೆಲದ ಸಂಪರ್ಕದಲ್ಲಿರುತ್ತದೆ.

"https:https://www.search.com.vn/wiki/index.php?lang=kn&q=ಶೂ&oldid=753038" ಇಂದ ಪಡೆಯಲ್ಪಟ್ಟಿದೆ
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ