ವಿ ಶಾಂತರಾಮ್‌

ಚಿತ್ರ ನಿರ್ದೆಶಕ , ನಟ

ಶಾಂತರಾಮ್‌ ರಾಜರಾಮ್ ವಣಕುಡ್ರೆ (ವಿ. ಶಾಂತರಾಮ್‌ ಅಥವಾ ಶಾಂತರಾಮ್‌ ಬಾಪು )(ನವೆಂಬರ್ ೧೮, ೧೯೦೧ - ಅಕ್ಟೋಬರ್ ೩೦, ೧೯೯೦) ಭಾರತೀಯ ಚಲನಚಿತ್ರ ನಿರ್ದೇಶಕ,ನಿರ್ಮಾಪಕ ಮತ್ತು ನಟರಾಗಿದ್ದರಾಗಿದ್ದರು.ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .[೪] [೫]

ವಿ. ಶಾಂತರಾಮ್‌
ಜನನ
ಶಾಂತರಾಮ್‌ ರಾಜರಾಮ್ ವನಕುದರೆ

(೧೯೦೧-೧೧-೧೮)೧೮ ನವೆಂಬರ್ ೧೯೦೧
ಕೊಲ್ಹಾಪುರ, ಮಹಾರಾಷ್ಟ್ರ, (ಕರ್ನಾಟಕ ವಿಜಯಪುರ ಜಿಲ್ಲೆ ಇಂಡಿ ಜನನ)ಬ್ರಿಟಿಷ್ ಭಾರತ
ಮರಣ30 October 1990(1990-10-30) (aged 88)
ಮುಂಬಯಿ , ಭಾರತ
ವೃತ್ತಿ(ಗಳು)ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರಕಥೆಗಾರ
Years active1921–1987 [೨][೩]
Awardsಅತ್ಯುತ್ತಮ ನಿರ್ದೇಶಕ
1957 ಜಾನಕ್ ಜಾನಕ್ ಪಾಯಲ್ ಬಾಜೆ
ಅತ್ಯುತ್ತಮ ಚಲನಚಿತ್ರ
1958 ದೊ ಆಂಕೆನ್ ಬರಾಹಾಥ್
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
1985
ಪದ್ಮ ವಿಭೂಷಣ
1992

ಜೀವನ

ವಿ. ಶಾಂತಾರಾಂ ಅವರು ಜನಿಸಿದ ದಿನ ನವೆಂಬರ್ ೧೮, ೧೯೦೧. ಅವರ ಪೂರ್ಣ ಹೆಸರು ವಣಕುದ್ರೆ ಶಾಂತಾರಾಂ. ಅವರು ಜನಿಸಿದ್ದು ಕೊಲ್ಹಾಪುರದಲ್ಲಿ. ವಣಕುದ್ರೆ ಎಂಬ ಸೂಚಕ ಅವರ ಮನೆತನೆದವರು ಕನ್ನಡಿಗರಾಗಿದ್ದರು, ಅವರಿಗೆ ಕನ್ನಡ ಮಾತನಾಡಲು ಬರುತ್ತಿತ್ತು ಎಂಬ ಅಭಿಪ್ರಾಯಗಳೂ ಇವೆ. [೬][೪][೭]

ಚಿತ್ರ ಜೀವನ

ವಿ ಶಾಂತಾರಾಂ ಅವರ ಚಿತ್ರಗಳಾದ ನವರಂಗ್, ಡಾ. ಕೊಟ್ನಿಸ್ ಕೀ ಅಮರ್ ಕಹಾನಿ, ಝಣಕ್ ಝಣಕ್ ಪ್ಹಾಯಲ್ ಭಾಜೆ, ಸ್ತ್ರೀ, ಗೀತ್ ಗಾಯೋ ಪತ್ತರೋನೆ, ದೋ ಆಂಖೆ ಭಾರಹ್ ಹಾತ್, ಪಿಂಜ್ರ, ಅಮರ್ ಭೂಪಾಲಿ ಮುಂತಾದ ಅಮೋಘ ಚಿತ್ರಗಳನ್ನು ಕಂಡವರು ಆ ಚಿತ್ರದಲ್ಲಿನ ಅಮೋಘ ತಂತ್ರಜ್ಞತೆ, ಸಂಗೀತ, ಸಾಹಿತ್ಯ ನಾಟ್ಯಗಳ ಸಂಮಿಶ್ರಗಳ ಆಮೋದದ ಭಾರತೀಯ ಗುಣ, ಅವರ ವರ್ಣ ಚಿತ್ರಗಳಲ್ಲಿನ ಶ್ರೇಷ್ಠ ಮಟ್ಟದ ಟೆಕ್ನಿಕಲರ್ ವರ್ಣ ಮಿಶ್ರಣ, ದೃಶ್ಯ ಸಂಯೋಜನೆ, ಅವು ತಲುಪಿಸುತ್ತಿದ್ದ ಸಂದೇಶ, ಹೊರಾಂಗಣ ಚಿತ್ರೀಕರಣ, ಸಂಗೀತದಲ್ಲಿನ ಸುಶ್ರಾವ್ಯತೆ ಇವುಗಳನ್ನು ಮರೆಯುವುದು ಸಾಧ್ಯವಿಲ್ಲದ್ದು. ಇವರ ನಿರ್ದೇಶನದಲ್ಲಿ ಶಾಂತಾ ಹುಬ್ಳೀಕರ್ ನಟಿಸಿದ ಮನೂಸ್ ಮರಾಠಿ ಚಲನಚಿತ್ರವನ್ನು ವೀಕ್ಷಿಸಿದ ಚಾರ್ಲಿ ಚಾಪ್ಲಿನ್ ಅವರು ಅದರ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿ ಶಾಂತಾರಾಂ ಅವರು ಸ್ವಯಂ ಚಿತ್ರಕಥೆ ರಚಿಸುತ್ತಿದ್ದರು. ಅವರಿಗೆ ತೃಪ್ತಿಯಾಗುವವರೆಗೆ ರಿಹರ್ಸಲ್ ನಡೆದ ನಂತರವೇ ಹಾಡುಗಳ ಧ್ವನಿ ಮುದ್ರಣವಾಗುತ್ತಿತ್ತು. ಚಿತ್ರನಿರ್ಮಾಣದ ಪ್ರತೀ ಹಂತದಲ್ಲೂ ಅವರು ಸಂಪೂರ್ಣ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅವರ ‘ದೋ ಆಂಖೆ ಭಾರಾಹ್ ಹಾತ್’ ಚಿತ್ರ ನಮ್ಮ ಕನ್ನಡದಲ್ಲಿ ಯಾರಾದರೂ ಮೂಡಿಸುತ್ತಾರೇನೋ ಎಂಬ ನನ್ನ ಆಶಯ ಅದೇಕೋ ಫಲಿಸಲಿಲ್ಲ. ವಿ. ಶಾಂತಾರಾಂ ಅವರು ನಿರ್ಮಿಸಿದ ರಾಜ್ ಕಮಲ್ ಸ್ಟುಡಿಯೋ ಭಾರತದ ಅತ್ಯುತ್ತಮ ಚಲನಚಿತ್ರ ನಿರ್ಮಾಣ ಕ್ಷೇತ್ರವೆಂದು ಪ್ರಸಿದ್ಧಗೊಂಡಿತ್ತು.[೮] [೯] [೧೦] [೧೧]

ಪ್ರಶಸ್ತಿ ಗೌರವಗಳು

ಶಾಂತಾರಾಂ ಅವರ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿದೆ. ವಿ. ಶಾಂತಾರಾಂ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರ ಜೀವನ ಚರಿತ್ರೆಯು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರಕಟಗೊಂಡಿದೆ.

ವಿದಾಯ

ಸುಮಾರು ೬ ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಿ ಸುಮಾರು 50 ಉತ್ತಮ ಗುಣಮಟ್ಟದ ಚಿತ್ರಗಳಲ್ಲಿ ತೊಡಗಿದ್ದ ವಿ. ಶಾಂತಾರಾಂ ಅವರು ಅಕ್ಟೋಬರ್ ೩೦, ೧೯೯೦ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ