ವಿಶ್ವೇಶ್ವರ ಭಟ್


ವಿಶ್ವೇಶ್ವರ ಭಟ್ ಕನ್ನಡದ ಪತ್ರಕರ್ತರು, ಬರಹಗಾರರು, ಅಂಕಣಕಾರರು. ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಕನ್ನಡ ಪತ್ರಿಕೆಗಳ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ೧೫ ಜನವರಿ ೨೦೧೬ರಂದು, ಪುನರಾರಂಭಿಸಿದ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವವಾಣಿ ಪತ್ರಿಕೆಯ ಮಾತೃ ಸಂಸ್ಥೆಯಾದ 'ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್'ನ ವ್ಯವಸ್ಥಾಪಕ ನಿರ್ದೇಶಕರೂ ಸಹ ಆಗಿದ್ದಾರೆ.

ವಿಶ್ವೇಶ್ವರ ಭಟ್
ಜನನ (1966-07-22) ೨೨ ಜುಲೈ ೧೯೬೬ (ವಯಸ್ಸು ೫೭)

ಜನನ, ವಿದ್ಯಾಭ್ಯಾಸ

ವಿಶ್ವೇಶ್ವರ ಭಟ್ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಮೂರೂರಿನವರು. ಬಿ.ಎಸ್ಸಿ ಮಾಡಿ, ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ, ಪತ್ರಿಕೋದ್ಯಮದಲ್ಲಿ (೪ ಚಿನ್ನದ ಪದಕ ದೊಂದಿಗೆ) ಎಂ.ಎ ಮಾಡಿದರು. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ವೃತ್ತಿ-ಜೀವನ

ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ 'ಅಸಿಸ್ಟೆಂಟ್ ಪ್ರೊಫೆಸರ್' ಆಗಿ ಕೆಲವು ಸಮಯ ಕೆಲಸ ಮಾಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ (ಅನಂತ್ ಕುಮಾರ್) ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ[೧]. ಪತ್ರಕರ್ತರಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಕನ್ನಡಪ್ರಭ ಪತ್ರಿಕೆಯಲ್ಲಿ ಉಪ-ಸಂಪಾದಕನಾಗಿ ಕಾರ್ಯನಿರ್ವಹಿಸಿ, ತದನಂತರ ೨೦೧೧ರಲ್ಲಿ ಪ್ರಧಾನ ಸಂಪಾದಕರಾಗಿ ಹುದ್ದೆ ವಹಿಸಿಕೊಂಡಿದ್ದರು. ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. (೮ ಡಿಸೆಂಬರ್ ೨೦೧೦ರವರೆಗೆ). ೭ ಫೆಬ್ರುವರಿ ೨೦೧೧ರಿಂದ ಕನ್ನಡಪ್ರಭದಲ್ಲಿ ಪ್ರಧಾನ ಸಂಪಾದಕರಾಗಿದ್ದರು. ೨೦೧೦ರ ಕೊನೆಯಲ್ಲಿ, ವಿಜಯ ಕರ್ನಾಟಕದಿಂದ ಹೊರಬಂದ ಮೇಲೆ, ತಮ್ಮದೇ ಒಂದು ಬ್ಲಾಗ್ ಸಹ ಶುರು ಮಾಡಿದ್ದರು.[೨][೩] ೧೫ ಜುಲೈ ೨೦೧೧ರಿಂದ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು. [೪] ೨೦೧೬ ಜನವರಿಯಲ್ಲಿ ವಿಶ್ವವಾಣಿ ಕನ್ನಡ ದಿನಪತ್ರಿಕೆಯನ್ನು ಇವರ ಸಂಪಾದಕತ್ವದಲ್ಲಿ ಮರುಪ್ರಾರಂಭಿಸಲಾಯಿತು. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆ ಹದಿನಾಲ್ಕು ದಿನ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ನಲ್ಲಿ ಪ್ರವಾಸ ಮಾಡಿದ ಅನುಭವ ಸಹ ಇವರದು. ಇದುವರೆಗೂ, ಅವರು ಕನ್ನಡದಲ್ಲಿ 64 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ಅಂಕಣಗಳು

  • 'ಸುದ್ದಿಮನೆ ಕತೆ' - ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಸುದ್ದೀಶ' ಹೆಸರಿನಲ್ಲಿ ಬರೆದ ಈ ಅಂಕಣದಿಂದ 'ವಿಜಯ ಕರ್ನಾಟಕ' ಓದುಗರಿಗೆ ಪತ್ರಿಕೊದ್ಯಮದ ಒಳಹೊರಗುಗಳನ್ನು ಪರಿಚಯಿಸಿದ್ದಾರೆ.
  • ನೂರೆಂಟು ಮಾತು
  • ಬತ್ತದ ತೆನೆ ('ಸ್ವಾಮಿ ಅನಾಮಧೇಯ ಪೂರ್ಣ'ರೆಂಬ ಹೆಸರಿನಲ್ಲಿ ಬರೆಯುತ್ತಿದ್ದರು [೫])
  • ಬಾಲ್ಕನಿಯಿಂದ ('ಸಹಜಾ' ಹೆಸರಿನಲ್ಲಿ)
  • ವಕ್ರತುಂಡೋಕ್ತಿ (ಕಿರುಸೂಕ್ತಿಗಳು)
  • +ve ಥಿಂಕಿಗ್ ('ಸಹನೆ' ಎಂಬ ಹೆಸರಲ್ಲಿ ಬರೆಯುತ್ತಿದ್ದರು)

ಕೃತಿಗಳು

ವಿಶ್ವೇಶ್ವರ ಭಟ್ ಕನ್ನಡದಲ್ಲಿ ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು/ಅನುವಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳೂ ಇವೆ.

  1. ಅಂಜಿಕೆಯಿಲ್ಲದ ಕರಂಜಿಯಾ
  2. ಅಕ್ಷರಗಳೊಂದಿಗೆ ಅಕ್ಕರೆಯ ಯಾನ
  3. ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ
  4. ಆಗಾಗ ಬಿದ್ದ ಮಳೆ - ಅಂಕಣ ಲೇಖನಗಳು
  5. ಕಲಾಂ ಕಮಾಲ್
  6. ಜನಗಳ ಮನ - ೧
  7. ಜನಗಳ ಮನ - ೨
  8. ಜನಗಳ ಮನ - ೩
  9. ತಲೆಬರಹ ಪತ್ರಿಕೆ ಹಣೆಬರಹ
  10. ತಾಜಮಹಲ - ಕಥಾ ಸಂಕಲನ
  11. ಧನದೇವೋಭವ
  12. ನನ್ನ ದೇಶ ನನ್ನ ಜೀವನ (ಅನುವಾದಿತ. ಮೂಲ: ಎಲ್. ಕೆ. ಅಡ್ವಾಣಿ)
  13. ನನ್ನ ಪ್ರೀತಿಯ ಭಾರತ (ಅನುವಾದಿತ. ಮೂಲ: ಓಶೊ)
  14. ನನ್ನ ಪ್ರೀತಿಯ ವೈಯೆನ್ಕೆ
  15. ನಾನೇಕೆ ಮಂತ್ರಿಯತ್ತ ಬೂಟನ್ನೆಸೆದೆ - ಆತ್ಮಕಥನ
  16. ನಾಯಕನಾಗುವುದು ಹೇಗೆ? (ಅನುವಾದಿತ. ಮೂಲ:ಶಿವಖೇರಾ)
  17. ನಿಮಗೆ ಗೊತ್ತಿಲ್ಲದ ರಾಮನಾಥ ಗೋಯೆಂಕಾ
  18. ನೀವು ಗೆಲ್ಲಬಲ್ಲಿರಿ (ಅನುವಾದಿತ)
  19. ನೂರೆಂಟು ಮಾತು-೧
  20. ನೂರೆಂಟು ಮಾತು-೨
  21. ನೂರೆಂಟು ಮಾತು-೩
  22. ನೂರೆಂಟು ಮಾತು-೪ (ಹೂಬಿಸಿಲಿನ ನೆರಳು)
  23. ನೂರೆಂಟು ಮಾತು-೫
  24. ನೂರೆಂಟು ಮಾತು-೬
  25. ನೂರೆಂಟು ಮಾತು-೭
  26. ನೂರೆಂಟು ಮಾತು-೮
  27. ನೂರೆಂಟು ಮಾತು-೯
  28. ನೂರೆಂಟು ಮಾತು-೧೦
  29. ನೆನಪಿನ ಬಾಟಲಿಯಲ್ಲಿನ ಕುವೋರ್ಸಿಯರ್
  30. ಪತ್ರಿಕೋದ್ಯಮ ಕುರಿತು ಓಶೋ (ಅನುವಾದಿತ)
  31. ಪತ್ರಿಕೋದ್ಯಮ ಪಲ್ಲವಿ
  32. ಬತ್ತದ ತೆನೆ
  33. ಬಾನಯಾನ (ಅನುವಾದಿತ. ಮೂಲ: ಕ್ಯಾಪ್ಟನ್ ಗೋಪಿನಾಥ್ Simply Fly)
  34. ಬಿ. ಆರ್. ಪಂತುಲು - ಪರಿಚಯ
  35. ಮತ್ತಷ್ಟು ವಕ್ರತುಂಡೋಕ್ತಿ
  36. ರಾಷ್ಟ್ರಪತಿ ಜೊತೆ ಹದಿನಾಲ್ಕು ದಿನ
  37. ರುಪರ್ಟ್ ಮುರ್ಡೋಕ್ - ಮಾಧ್ಯಮ ಮಹಾಶಯ
  38. ವಂಡರ್ ವೈಯೆನ್ಕೆ
  39. ವಕ್ರತುಂಡೋಕ್ತಿ
  40. ವೈಯೆನ್ಕೆ ಅವರ ಕೊನೆ ಸಿಡಿ
  41. ವೈಯೆನ್ಕೆ ಅವರ ಬೆಸ್ಟ್ ಆಫ್ ವಂಡರ್ಸ್
  42. ಶಾರದಾ ಪ್ರಸಾದ ಅವರ ಕಾಲದೇಶ
  43. ಸಂಪಾದಕ ಅಂದ್ರೆ ಗಂಡ ಇದ್ದಂತೆ (ಪತ್ರಿಕೋದ್ಯಮದ ಲೇಖನಗಳು)
  44. ಸರಿಗಮಪದ - ಪತ್ರಿಕಾಭಾಷೆಗೊಂದು ಹದ
  45. ಸಾಲದ ಜೋಕುಗಳು
  46. ಸುದ್ದಿಮನೆ ಕತೆ-೧
  47. ಸುದ್ದಿಮನೆ ಕತೆ-೨
  48. ಸುದ್ದಿಮನೆ ಕತೆ-೩
  49. ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?
  50. ಅಷ್ಟಕ್ಕೂ ನಾ ಹೇಳೋದು ಇಷ್ಟು (ಅನುವಾದಿತ. ಮೂಲ: ಸ್ವಪನ್ ಸೇಠ್)
  51. ಪ್ರ'ದಕ್ಷಿಣ' ಆಫ್ರಿಕಾ
  52. ಜೀವಸೆಲೆ
  53. ಮತ್ತೊಬ್ಬ ಉಕ್ಕಿನ ಮನುಷ್ಯ ಪತ್ರಕರ್ತ ಬಾಬುರಾವ್ ಪಟೇಲ್
  54. ಚದುರಿದ ಮೋಡ ಮಳೆಗರೆದಾಗ
  55. ಸ್ಪೂರ್ತಿಸೆಲೆ
  56. ಬಾಲ್ಕನಿಯಿಂದ-೧
  57. ಬಾಲ್ಕನಿಯಿಂದ-೨
  58. ಕಲ್ಪನೆಗೆ ಕನ್ನಡಿ
  59. ಗೊರಿಲ್ಲಾ ನಾಮಕರಣ ಪ್ರಸಂಗ (ರವಾಂಡ ಪ್ರವಾಸ ಟಿಪ್ಪಣಿಗಳು)
  60. ಸಂಜಯ ಉವಾಚ (ಪತ್ರಕರ್ತ ಕೆ.ಶಾಮರಾವ್ ಅಪೂರ್ಣ ಆತ್ಮಕತೆ) (ಸಂಗ್ರಹ, ಸಂಪಾದನೆ)
  61. ರಿಚರ್ಡ್ ಬ್ರಾನ್ ಸನ್ ನ 'ವರ್ಜಿನಲ್' ವಿಚಾರಗಳು
  62. ಸೆಲ್ಫಿ ವಿತ್ ಲೈಫ್
  63. ಚಿಕನ್ ಸಿಕ್ಸ್ಟಿಫೈವ್ (2018)
  64. ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?
  65. ಗಟ್ಟಿಗಿತ್ತಿ (ಅನುವಾದಿತ. ಮೂಲ: ಮಹಿಳಾ ಬಾಕ್ಸರ್ ಮೇರಿ ಕೋಮ್ ಆತ್ಮಕತೆ)

ಪ್ರಶಸ್ತಿಗಳು

ವಿವಾದಗಳು

  • ಆಗಸ್ಟ್ ೨೦೧೨ರಲ್ಲಿ, ಮುಸ್ಲಿಮ್ ವಿರೋಧಿ ಭಾವನೆಗಳನ್ನು ಬೆಂಬಲಿಸುವ ಕಾರಣದಿಂದ, ಭಯೋತ್ಪಾದಕ ಶಂಕಿತರಿಂದ ಗುರಿಯಾಗಿಸಲ್ಪಟ್ಟ ಪತ್ರಕರ್ತರಲ್ಲಿ ಒಬ್ಬರೆಂದು ಹೆಸರಿಸಲಾಗಿತ್ತು.[೮]
  • ಮಾರ್ಚ್ ೨೦೧೭ರಲ್ಲಿ, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.[೯] ಪತ್ರಿಕೆಯಲ್ಲಿ, ಸಂತ್ರಸ್ತೆಯ ನಿಜವಾದ ಹೆಸರು ಮತ್ತು ಭಾವಚಿತ್ರ ಪ್ರಕಟಿಸಿರುವುದರಿಂದ, ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಕಲಂ 228 ಅನ್ನು ಉಲ್ಲಂಘಿಸಿದ್ದಾರೆಂದು ಹೇಳಲಾಗಿತ್ತು. ನಂತರ, ಈ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತು.[೧೦]
  • ೨೫ ಮೇ ೨೦೧೯ರಲ್ಲಿ, ೨೦೧೯ರ ಲೋಕಸಭಾ ಚುನಾವಣೆಯ ನಂತರ, ‘ಗೌಡರ ಮೊಮ್ಮಕ್ಕಳ ಗದ್ದಲ ಗೊಂದಲ– ನಿಖಿಲ್ ರಾತ್ರಿ ರಂಪಾಟ’ ಎಂಬ ಶೀರ್ಷಿಕೆಯಡಿ ‘ವಿಶ್ವವಾಣಿ’ಯಲ್ಲಿ ಸುದ್ದಿ ಪ್ರಕಟವಾತ್ತು. ಈ ಕುರಿತು, ನಿಖಿಲ್ ತೇಜೋವಧೆಗೆ ಯತ್ನಿಸಿದ ಆರೋಪದಡಿ, ವಿಶ್ವವಾಣಿ ಸಂಪಾದಕರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.[೧೧]

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ