ವಿಜಯಾ ದಬ್ಬೆ

ವಿಜಯಾ ದಬ್ಬೆ :- ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಪ್ರವರ್ತಕ ಲೇಖಕಿ ಎಂಬ ಅಗ್ಗಳಿಕೆ ಇವರದು.ವಿಜಯಾ ದಬ್ಬೆಯವರು ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ ೧೯೫೧ ಜೂನ್ ೧ ರಂದುಜನಿಸಿದರು[೧].[೨] ದಿನಾಂಕ 23.02.2018 ಸಂಜೆ ನಿಧನರಾದರು[೩][೪].[೫][೬]

ಇವರು ೧೨ಕ್ಕೂ ಹೆಚ್ಚು ಕೃತಿಗಳನ್ನು ಹಾಗು ೬೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಇರುತ್ತವೆ ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ. ಇವರ ಇತಿಗೀತಿಕೆ ಕವನಸಂಕಲನಕ್ಕೆ ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘ೧೯೯೬ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿದೆ.[೭]

ವಿಜಯಾ ದಬ್ಬೆಯವರು ಮೈಸೂರು ವಿಶ್ವವಿದ್ಯಾಲಯಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದು, ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದರು.

ಪ್ರಶಸ್ತಿಗಳು

  • ಕರ್ನಾಟಕ ಸರ್ಕಾರದ "ಅತ್ತಿಮಬ್ಬೆ ಪ್ರಶಸ್ತಿ"
  • ಕರ್ನಾಟಕ ಲೇಖಕಿಯರ ಸಂಘದ "ಅನುಪಮಾ ಪ್ರಶಸ್ತಿ"
  • ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ
  • ವರ್ಧಮಾನ ಪ್ರಶಸ್ತಿ
  • ರತ್ನಮ್ಮ ಹೆಗಡೆ ಪ್ರಶಸ್ತಿ
  • ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು[೮]

ಕವನ ಸಂಕಲನಗಳು

  • ಇರುತ್ತವೆ.(೧೯೭೫)
  • ನೀರು ಲೋಹದ ಚಿಂತೆ.(೧೯೮೫)
  • ತಿರುಗಿ ನಿಂತ ಪ್ರಶ್ನೆ.(೧೯೯೫)

ಪ್ರವಾಸ ಕಥನ

  • ಉರಿಯ ಚಿಗುರು ಉತ್ಕಲೆ.

ಸಂಶೋಧನೆ

  • ನಯಸೇನ
  • ನಾಗಚಂದ್ರ ಒಂದು ಅಧ್ಯಯನ -(ಪಿಎಚ್ ಡಿ ಪ್ರಬಂಧ)
  • ಹಿತೈಷಿಯ ಹೆಜ್ಜೆಗಳು
  • ಸಾರಸರಸ್ವತಿ
  • ಹಿತೋಫಿಯಾ ಹೆಜ್ಜೆಗಳು.

ವಿಮರ್ಶನ ಸಾಹಿತ್ಯ

  • ಮಹಿಳಾ ಸಾಹಿತ್ಯ ಸಮಾಜ
  • ನಾರಿ ದಾರಿ ದಿಗಂತ(೧೯೭೭)
  • ಮಹಿಳೆ ಮತ್ತು ಮಾನವತೆ
  • ಸಂಪ್ರತಿ

ಸಂಪಾದನೆಗಳು

  • ಶ್ಯಾಮಲಾ ಸಂಚಯ
  • ಹಿತೈಷಿಣಿಯ ಹೆಜ್ಜೆಗಳು
  • ಸಾರಸರಸ್ವತಿ
  • ವಿಜಯಾದಬ್ಬೆಯವರ ಸಮಗ್ರ ಸಾಹಿತ್ಯವನ್ನು ಅವರ ಶಿಷ್ಯೆ ಪ್ರೊ.ಎಸ್.ಡಿ.ಶಶಿಕಲಾ ಅವರು ಸಂಪಾದಿದ್ದಾರೆ.

ಅನುವಾದಗಳು

  • ಮೇರಿ ಮೆಕ್ಲಿಯಾದ್ ಬೆಥೂನೆ
  • ವಿಮೋಚನೆಯೆಡೆಗೆ
  • ಗುರುಜಾಡ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ