ವಾಲ್ಟರ್ ರೂಡೋಲ್ಫ್ ಹೆಸ್

ವಾಲ್ಟರ್ ರೂಡೋಲ್ಫ್ ಹೆಸ್ (1881-1973) ಸ್ವಿಟ್ಸರ್ಲೆಂಡಿನ ಒಬ್ಬ ದೇಹವಿಜ್ಞಾನಿ ಮತ್ತು 1949 ರ ನೊಬೆಲ್ ಪ್ರಶಸ್ತಿ ಪುರಸ್ಕೃತ.

ಜನನ, ವಿದ್ಯಾಭ್ಯಾಸ

ಫ್ರಾನ್‌ಫೆಲ್ಡ್‌ನಲ್ಲಿ ಜನನ. ಲ್ವಾಸೇನ್, ಬರ್ನ್, ಝೂರಿಚ್, ಬರ್ಲಿನ್ ಮತ್ತು ಕೀಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಪದವೀಧರನಾದ (1906).

ವೃತ್ತಿಜೀವನ, ಸಾಧನೆಗಳು

ಝೂರಿಚ್ ವಿಶ್ವವಿದ್ಯಾಲಯದಲ್ಲಿ ದೇಹವಿಜ್ಞಾನ ಪ್ರಾಧ್ಯಾಪಕನೂ ಫಿಸಿಯಾಲಜಿ ಇನ್‌ಸ್ಟಿಟ್ಯೂಟಿನ ನಿರ್ದೇಶಕನೂ (1917-51) ಆಗಿ ಸಂಶೋಧನೆ ಮಾಡಿದ.[೧] ರಕ್ತದೊತ್ತಡದ ಕ್ರಮನಿಯಂತ್ರಣ ಹಾಗೂ ಗುಂಡಿಗೆ ಮಿಡಿತದರ ಮತ್ತು ಉಸಿರಾಟದೊಂದಿಗೆ ಇವುಗಳ ಸಂಬಂಧ-ಇವನ್ನು ಅಧ್ಯಯನಗೈದ. ಮಿದುಳು ತಳದಲ್ಲಿಯ ರಚನೆಗಳ ಕ್ರಿಯಾತಂತ್ರದ ಬಗ್ಗೆ 1925ರಿಂದ ಮುಂದಕ್ಕೆ ಸಂಶೋಧನೆ ಎಸಗಿದ. ಮಿದುಳಿನ ವಿಶಿಷ್ಟ ಪ್ರದೇಶಗಳನ್ನು ಅತಿಸೂಕ್ಷ್ಮ ಸೂಜಿ ಎಲೆಕ್ಟ್ರೋಡುಗಳನ್ನು ನವುರಾಗಿ ಕುತ್ತಿ ಉದ್ದೀಪನಗೊಳಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಿದ. ಈ ತಂತ್ರಗಳಿಂದಾಗಿ ಮಿದುಳವ್ಯಾಪಾರ ಅರಿಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು ಕೈಗೂಡಿತು. ಹೈಪೊತೆಲಮಸ್‌ನ ವಿವಿಧ ಭಾಗಗಳನ್ನು ಉದ್ದೀಪನಗೊಳಿಸಿ ದೇಹೋಷ್ಣತೆ, ರಕ್ತದೊತ್ತಡ, ಉಸಿರಾಟಗಳಲ್ಲಿಯೂ ಜೊತೆಗೆ ಕೋಪ, ಲೈಂಗಿಕಾಸಕ್ತಿ, ನಿದ್ರೆಗಳಲ್ಲಿಯೂ ವ್ಯತ್ಯಯಗಳನ್ನು ತರಬಹುದೆಂದು ಹೆಸ್ ತೋರಿಸಿದ.

ಉಲ್ಲೇಖಗಳು

ಹೊರಗಿನ ಕೊಂಡಿಗಳು


🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ