ಲೀಡ್ಸ್

53°47′59″N 1°32′57″W / 53.79972°N 1.54917°W / 53.79972; -1.54917

ಲೀಡ್ಸ್
ನಗರ
ಲೀಡ್ಸ್ ನಗರ
An impressive free-standing stone-built civic building on a sloping site with steps up to a colonnade. Above the parapet is a square clock-tower, also colonnaded, with an elongated lead-covered dome with concave sides and a cupola on top.
Leeds Town Hall
A shield, with three white stars on a black background at the top and, below, a suspended fleece on a light-blue background. Above the shield is a helmet with leaves above and behind and a small owl on top. To the left and right are two large owls wearing golden ducal coronets. They are perched on a scroll below the shield which reads "PRO LEGE ET REGE".
Motto(s): 
"Pro rege et lege" "For king and the law"
A map of England coloured pink showing the administrative subdivisions of the country. The Leeds metropolitan borough area is coloured red.
Leeds shown within England
Sovereign stateUnited Kingdom
Constituent countryಇಂಗ್ಲೆಂಡ್
RegionYorkshire and the Humber
Ceremonial countyWest Yorkshire
Admin HQLeeds city centre
Borough Charter1207
Town Charter1626
City status1893
City of Leeds Met. District created1974
Government
 • TypeMetropolitan borough, City
 • Governing bodyLeeds City Council
 • Lord MayorCllr James McKenna (L)
 • Leader of the CouncilCllr Keith Wakefield (L)
 • Chief ExecutivePaul Rogerson
 • MPs:Stuart Andrew (C)

Ed Balls (L)
Hilary Benn (L)
Fabian Hamilton (L)
George Mudie (L)
Greg Mulholland (LD)
Rachel Reeves (L)

Alec Shelbrooke (C)
Area
 • Total೨೧೩ sq mi (೫೫೧.೭೨ km2)
Highest elevation೧೧೨೦ ft (೩೪೦ m)
Lowest elevation೩೦ ft (೧೦ m)
Population
 (ಟೆಂಪ್ಲೇಟು:English statistics year)
 • Totalಟೆಂಪ್ಲೇಟು:EnglishDistrictPopulation ([[List of English districts by population|Ranked ಟೆಂಪ್ಲೇಟು:EnglishDistrictRank]])
 • Density೩,೫೭೪/sq mi (೧,೩೮೦/km2)
 • Ethnicity
(2001 census)[೩]
೮೯.೧% White
೫.೪% Asian or Asian British
೨.೦% Black or Black British
೧.೭% Mixed Race
೧.೮% Chinese and other
DemonymLoiner/Leodensian
Time zoneUTC+0 (Greenwich Mean Time)
 • Summer (DST)UTC+1 (British Summer Time)
Postcode
LS,part of WF and also part of BD.
Area code(s)0113 (urban core)
01924 (Wakefield nos)
01937 (Wetherby/ Boston Spa)
01943 (Guiseley/ Otley)
01977 (Pontefract nos)
ISO 3166-2GB-LDS
ONS code00DA
NUTS 3UKE42
OS grid referenceSE296338
Euro. Parlt. Const.Yorkshire & the Humber
Websitewww.leeds.gov.uk

ಲೀಡ್ಸ್ (pronounced /ˈliːdz/ ( listen)) ಎಂಬುದು ಇಂಗ್ಲೆಂಡ್‌ನ ಪಶ್ಚಿಮ ಯಾರ್ಕ್‌ಷೈರ್ನ ಒಂದು ನಗರ ಹಾಗೂ ಜಿಲ್ಲೆ.[೪] 2001ರಲ್ಲಿ ಲೀಡ್ಸ್‌ನ ಮುಖ್ಯ ನಗರ ವಿಭಾಗದ ಜನಸಂಖ್ಯೆಯು 443,247,[೫] ಹಾಗೂ ಒಟ್ಟಾರೆ ನಗರದ ಜನಸಂಖ್ಯೆಯು ಟೆಂಪ್ಲೇಟು:EnglishDistrictPopulation (ಟೆಂಪ್ಲೇಟು:English statistics year).[೬] ಲೀಡ್ಸ್ ನಗರವು ಪಶ್ಚಿಮ ಯಾರ್ಕ್‌ಷೈರ್ ನಗರ ಪ್ರದೇಶದ ಸಾಂಸ್ಕೃತಿಕ, ಆರ್ಥಿಕ ಹಾಗೂ ವಾಣಿಜ್ಯ ಕೇಂದ್ರವಾಗಿದೆ,[೭][೮][೯] ಇದು 2001ರ ಜನಗಣತಿಯ ಪ್ರಕಾರ 1.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು,[೧೦] ಹಾಗೂ ಲೀಡ್ಸ್ ನಗರ ಪ್ರದೇಶ, ಲೀಡ್ಸ್‌ ನಗರವನ್ನು ಕೇಂದ್ರವಾಗಿ ಹೊಂದಿರುವ ಆರ್ಥಿಕ ಭಾಗದ ಜನಸಂಖ್ಯೆಯು 2.9 ಮಿಲಿಯನ್‌ನಷ್ಟಿದೆ.[೧೧] ಲಂಡನ್‌ ಹೊರತು ಪಡಿಸಿ ಯುಕೆಯ ವ್ಯಾಪಾರ, ಕಾನೂನು ಹಾಗೂ ಹಣಕಾಸು ಸೇವೆಗಳ ಕೇಂದ್ರ ಲೀಡ್ಸ್ ನಗರವಾಗಿದೆ.[೧೨][೧೩][೧೪][೧೫][೧೬]

ಐತಿಹಾಸಿಕವಾಗಿ ಇದು ವೆಸ್ಟ್ ರೈಡಿಂಗ್ ಆಫ್ ಯಾರ್ಕ್‌ಶೈರ್‌ ಪ್ರದೇಶದ ಒಂದು ಭಾಗವಾಗಿದೆ, ಐದನೆಯ ಶತಮಾನದಲ್ಲಿ ಎಲ್ಮೆಟ್ ರಾಜ್ಯವು "ಲಾಯ್ಡಿಸ್" ಎಂಬ ಕಾಡಿನಿಂದ ಸುತ್ತುವರಿದಿತ್ತು, ಎಂಬುದು ಇತಿಹಾಸದ ಪುರಾವೆಗಳಿಂದ ಕಂಡು ಬರುತ್ತದೆ. ಈ ಕಾಡಿನ ಹೆಸರಿನಿಂದಲೇ ಲೀಡ್ಸ್ ಎಂಬ ಹೆಸರು ಈ ನಗರಕ್ಕೆ ಬಂದಿದೆ. ಶತಮಾನಗಳಿಂದ ಈ ಹೆಅಸರು ಆಡಳಿತದಲ್ಲಿ ಬಳಕೆಯಲ್ಲಿದೆ. 13ನೇ ಶತಮಾನದಲ್ಲಿ ಒಂದು ಸಣ್ಣ ಜಹಗೀರುದಾರನಿಗೆ ಸೇರಿದ ಪ್ರದೇಶದಿಂದ ಹಲವಾರು ಬದಲಾವಣೆಗಳ ನಂತರ ಈಗಿನ ಮೆಟ್ರೋಪಾಲಿಟನ್ ಪ್ರದೇಶಕ್ಕೆ ಸೇರಿತು.

17ನೆಯ ಹಾಗೂ 18ನೆಯ ಶತಮಾನಗಳಲ್ಲಿ ಲೀಡ್ಸ್ ನಗರವು ಉಣ್ಣೆ ಉತ್ಪಾದನೆ ಹಾಗೂ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ನಂತರ, ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ, ಲೀಡ್ಸ್ ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಯಿತು; ಆಗ ಉಣ್ಣೆಯು ಪ್ರಮುಖ ಕೈಗಾರಿಕೆ ಯಾಗಿದ್ದರೂ, ಅಗಸೆ, ತಂತ್ರಜ್ಞಾನ, ಕಬ್ಬಿಣ ಎರಕಗಾರಿಕೆ, ಮುದ್ರಣ ಹಾಗೂ ಇತರೆ ಕೈಗಾರಿಕೆಗಳೂ ಇಲ್ಲಿ ಮುಖ್ಯವಾಗಿ ಇದ್ದವು.[೧೭]

ಐರ್ ನದಿಯ ಕಣಿವೆಯಲ್ಲಿ ಒಂದು ಚಿಕ್ಕ ಮಾರುಕಟ್ಟೆ ಪ್ರದೇಶವಾಗಿದ್ದ ಈ ನಗರವು 16ನೆಯ ಶತಮಾನದಲ್ಲಿ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಿಕೊಂಡು 20ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಹೆಚ್ಚು ಜನಸಂಖ್ಯೆಯುಳ್ಳ ಒಂದು ದೊಡ್ಡ ನಗರವಾಗಿ ಮಾರ್ಪಟ್ಟಿತ್ತು. ಸಾರ್ವಜನಿಕ ಸಾರಿಗೆ, ರೈಲ್ವೇ ಹಾಗೂ ರಸ್ತೆ ಸಾರಿಗೆ ಜಾಲಗಳು ಈ ಲೀಡ್ಸ್ ನಗರ ಪ್ರದೇಶವನ್ನು ಕೇಂದ್ರೀಕರಿಸಿವೆ ಹಾಗೂ ನಗರಗಳು ಹಾಗೂ ಪಟ್ಟಣಗಳಿಂದ ಇತರೆ ದೇಶಗಳಿಗೆ ಹೋಗುವುದಕ್ಕೆ ಒಂದಕ್ಕಿಂತ ಹೆಚ್ಚು ಮಾರ್ಗಗಳು ಇರುವಂತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಲೀಡ್ಸ್ ನಗರ ಪ್ರದೇಶಕ್ಕೆ ಇದರಲ್ಲಿ ಮಹತ್ವ ನೀಡಿರುವುದು, ಪ್ರಾದೇಶಿಕ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟಿರುವ ಈ ನಗರದ ಪ್ರಾಮುಖ್ಯತೆಯನ್ನು ತೋರುತ್ತದೆ.

ಇತಿಹಾಸ

ಸ್ಥಳನಾಮ ಅಧ್ಯಯನ

ಲೀಡ್ಸ್ ಅನ್ನುವ ಹೆಸರನ್ನು, 5ನೆಯ ಶತಮಾನದ ಸಮಯದಿಂದ 7ನೆಯ ಶತಮಾನದ ಆರಂಭದವರೆಗೂ ಇದ್ದ, ಎಲ್ಮೆಟ್ ರಾಜ್ಯದ ಬಹುತೇಕ ಭಾಗವು ಅರಣ್ಯದಿಂದ ಕೂಡಿದ್ದಕ್ಕಾಗಿ, ಅದಕ್ಕೆ ನೀಡಲಾಗಿದ್ದ "ಲೋಯಿಡೀಸ್" ಅನ್ನುವ ಹೆಸರಿನಿಂದ ಪಡೆಯಲಾಗಿದೆ.[೧೮] ಬಿಡೆ ತಮ್ಮ ಹಿಸ್ಟೋರಿಕಾ ಎಕ್ಲೀಸಿಯಾಸ್ಟಿಕ ದ ಹದಿನಾಲ್ಕನೆಯ ಅಧ್ಯಾಯದಲ್ಲಿ, ನಾರ್ಥಂಬ್ರಿಯಾದ ಎಡ್ವಿನ್‌ನಿಂದ ನಿರ್ಮಿಸಲಾದ ಚರ್ಚ್‌ನಿಂದ ಆಲ್ಟರ್ ಬದುಕುಳಿದ ಬಗೆಗಿನ ಚರ್ಚೆಯಲ್ಲಿ ಹೇಳಿದ್ದೇನೆಂದರೆ, ಇದು "...regione quae vocatur Loidis" ನಲ್ಲಿದೆ, ಈ ಪ್ರಾಂತವನ್ನು ಲೋಯಿಡೀಸ್ ಎಂದು ಗುರುತಿಸಲಾಗುತ್ತದೆ.

ಲೀಡ್ಸ್‌ನ ನಿವಾಸಿಗರನ್ನು ಲೋಯಿನೆರ್ ಎಂದು ಗುರುತಿಸಲಾಗುತ್ತದೆ, ಇದು ಒಂದು ಅನಿಶ್ಚಿತ ಪ್ರಾಂತದ ಶಬ್ದವಾಗಿದೆ.[೧೯]

ಆರ್ಥಿಕ ಬೆಳವಣಿಗೆ

1864ರಲ್ಲಿ ಸ್ಥಾಪಿತವಾದ ಲೀಡ್ಸ್ ಧಾನ್ಯ ವಿನಿಮಯ.

ಲೀಡ್ಸ್ ನಗರವನ್ನು ಮಧ್ಯ ಯುಗದಲ್ಲಿ, ಸ್ಥಳೀಯ ಕೃಷಿಯ ಆರ್ಥಿಕತೆಯ ಭಾಗವಾಗಿ ವಾಣಿಜ್ಯ ನಗರವನ್ನಾಗಿ ಅಭಿವೃದ್ದಿಪಡಿಸಲಾಗಿತ್ತು. ಕೈಗಾರಿಕಾ ಕ್ರಾಂತಿಗಿಂತಲೂ ಮೊದಲು, ಇದು ಉಣ್ಣೆ-ಬಟ್ಟೆ ತಯಾರಿಕೆಗೆ ಸುಸಂಘಟಿತ ಕೇಂದ್ರವಾಗಿತ್ತು; ಲೀಡ್ಸ್ ವೈಟ್ ಕ್ಲಾತ್ ಹಾಲ್‌ನಲ್ಲಿ ಬಿಳಿ ಬ್ರಾಡ್‌ಕ್ಲಾತ್ ವ್ಯಾಪಾರವನ್ನು ಹೊಂದಿತ್ತು.[೨೦]

ಲೀಡ್ಸ್ 1770ರಲ್ಲಿನ ಇಂಗ್ಲೆಂಡ್‌ನ ರಫ್ತು ವ್ಯವಹಾರದ ಆರನೇ ಒಂದು ಭಾಗದ ವ್ಯವಹಾರವನ್ನು ನೋಡಿಕೊಳ್ಳುತ್ತಿತ್ತು.[೨೧] ಆರಂಭದಲ್ಲಿ, ಜವಳಿ ಕ್ಷೇತ್ರದಲ್ಲಿ ಮಾತ್ರ ಇದ್ದ ಪ್ರಗತಿಯನ್ನು, 1699ರಲ್ಲಿ ಏರ್ ಆಂಡ್ ಕಾಲ್ಡರ್ ನೇವಿಗೇಷನ್ ಕಟ್ಟಡ ಮತ್ತು 1816ರಲ್ಲಿ ಲೀಡ್ಸ್ ಆಂಡ್ ಲಿವೆರ್‌ಫೂಲ್ ಕೆನಾಲ್‌ ತೀವ್ರಗೊಳಿಸಿದ್ದವು.[೨೨] 1834ರಲ್ಲಿ ಲೀಡ್ಸ್ ಮತ್ತು ಸೆಲ್ಬೆ ರೈಲುಮಾರ್ಗದೊಂದಿಗೆ ಆರಂಭಿಸಿ ಲೀಡ್ಸ್‌ನ ಸುತ್ತಲೂ ರೈಲು ಸಂಪರ್ಕ ಜಾಲವನ್ನು ನಿರ್ಮಿಸಲಾಯಿತು, ಇದು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸುಧಾರಿತ ಸಂಪರ್ಕಹೊಂದಲು ಮತ್ತು ಇದರ ಅಭಿವೃದ್ಧಿಗೆ ಪ್ರಧಾನವಾಗಿ ಸಹಾಯವಾಯಿತು.

ಮಾಂಚೆಸ್ಟರ್‌ದೊಂದಿಗಿನ ಪೂರ್ವ-ಪಶ್ಚಿಮ ಸಂಪರ್ಕ ಮತ್ತು ಲಿವೆರ್‌ಪೂಲ್ ಮತ್ತು ಹಲ್ ಬಂದರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸುಧಾರಿತ ಸಂಪರ್ಕವನ್ನು ಒದಗಿಸಿಕೊಟ್ಟಿವೆ.[೨೩] ತಾಂತ್ರಿಕ ಅಭಿವೃದ್ಧಿ ಮತ್ತು ಕೈಗಾರಿಕಾ ವಿಸ್ತರಣೆಯ ಜೊತೆಗೆ, ಲೀಡ್ಸ್ 1864ರಲ್ಲಿ ಧಾನ್ಯ ವಿನಿಮಯವನ್ನು ಆರಂಭಿಸುವುದರ ಮೂಲಕ ಕೃಷಿ ಉತ್ಪನ್ನಗಳ ವ್ಯವಹಾರದಲ್ಲೂ ಆಸಕ್ತಿಯನ್ನು ಹೊಂದಿದೆ.

ಸುಮಾರು 1790ರಿಂದ ಲೀಡ್ಸ್‌ನಲ್ಲಿ ನಿರ್ಮಿಸಲಾಗಿದ್ದ ಅನೇಕ ಕಾರ್ಖಾನೆಗಳಲ್ಲಿ ಮಾರ್ಷಲ್‌ನ ಮಿಲ್ ಮೊದಲನೆಯದಾಗಿತ್ತು.[೨೪] ಆರಂಭದ ವರ್ಷಗಳಲ್ಲಿ ಇದ್ದ ಅತ್ಯಂತ ಪ್ರಮುಖ ಕಾರ್ಖಾನೆ ಗಳೆಂದರೆ, ಉಣ್ಣೆ ಸಂಸ್ಕರಣ ಮತ್ತು ಪ್ಲಾಕ್ಸ್ ಮಿಲ್‌ಗಳು; 1914ರ ವೇಳೆಗೆ ಮುದ್ರೀಕರಣ, ಯಂತ್ರವಿಜ್ಞಾನ, ರಾಸಾಯನಿಕಗಳು ಮತ್ತು ಜವಳಿ ತಯಾರಿಕಾ ಕ್ಷೇತ್ರಗಳಲ್ಲಿ ಕೈಗಾರಿಕಾಭಿವೃದ್ಧಿಗೊಳಿಸಲಾಯಿತು.[೨೫]

ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕ ಸಮವಸ್ತ್ರ ಮತ್ತು ಯುದ್ಧ ಸಾಮಗ್ರಿ ಉತ್ಪಾದನೆಯಲ್ಲಿ ತೊಡಗುವುದರ ಮೂಲಕ ಉತ್ಪಾದನೆಯಲ್ಲಿನ ಇಳಿಕೆಯನ್ನು 1930ರ ದಶಕದಲ್ಲಿ ತಾತ್ಕಾಲಿಕವಾಗಿ ಹೆಚ್ಚಿಸಲಾಗಿತ್ತು. ಅದಾಗ್ಯೂ, 1970ರ ದಶಕದಲ್ಲಿ ಜವಳಿ ಕೈಗಾರಿಕೆಯು, ಅಗ್ಗದ ವಿದೇಶಿ ಪೈಪೋಟಿಯನ್ನು ಎದುರಿಸುವುದರ ಮೂಲಕ ಸುಧಾರಿಸಲಾಗದ ಅವನತಿಯಲ್ಲಿತ್ತು.[೨೬]

ನಗರವನ್ನು ’24 ಗಂಟೆಯ ಯುರೋಪ್‌ ನಗರ’ ಮತ್ತು ’ಉತ್ತರದ ರಾಜದಾನಿ’ ನಗರವನ್ನಾಗಿ ಕಾಣುವ ದೃಷ್ಟಿಯಿಂದ ಲೀಡ್ಸ್ ನಗರಾಡಳಿತದಿಂದ ನಗರದ ಆರ್ಥಿಕತೆಯ ರಚನೆಯನ್ನು ಮಾಡಲಾಯಿತು.[೨೭] ಕೈಗಾರಿಕೋದ್ಯಮದ ನಂತರದ ಕಾಲದ ಅವನತಿಯಿಂದ, ಆಧುನಿಕ ವಿಶ್ವ ಆರ್ಥಿಕತೆಯ ಎಲೆಕ್ಟ್ರಾನಿಕ್ ಮೂಲಭೂತಸೌಕರ್ಯಗಳಿಗೆ ಸಂಬಂಧಿಸಿದ, ದೂರವಾಣಿ ವಹಿವಾಟು ಕೇಂದ್ರವಾಗಲು ಇದನ್ನು ಅಭಿವೃದ್ಧಿಪಡಿಸಲಾಯಿತು.[೨೭] ಸಂಘ ಸಂಸ್ಥೆ ಮತ್ತು ಕಾನೂನು ವಲಯಗಳಲ್ಲಿ ಗಣನೀಯ ಪ್ರಗತಿಯನ್ನು ಹೊಂದಿತ್ತು [೨೮] ಮತ್ತು ಹೆಚ್ಚಿದ ಸ್ಥಳೀಯ ಸಂಪತ್ತು ಐಶಾರಾಮಿ ವಸ್ತುಗಳ ಮಾರುಕಟ್ಟೆಯನ್ನು ಒಳಗೊಂಡು, ಚಿಲ್ಲರೆ ಮಾರಾಟ ವಲಯದಲ್ಲಿನ ವಿಸ್ತರಣೆಗೆ ಕಾರಣವಾಯಿತು.[೨೯]

ಸ್ಥಳೀಯ ಸರ್ಕಾರ

ಲೀಡ್ಸ್ (ಪಾರಿಷ್‌) ಜನಸಂಖ್ಯೆ
1881160,109
1891177,523
1901177,920
1911259,394
1921269,665
1931482,809
1941ಯುದ್ಧ
1951505,219
1961510,676
# ಯುದ್ಧ ಕಾರಣ ಜನಗಣತೆಯನ್ನು ನಡೆಸಲಾಗಿಲ್ಲ
ಮೂಲ: UK ಜನಗಣತಿ[೩೦]

ಲೀಡ್ಸ್ ವಿಶಾಲವಾದ ಪ್ರಾಚೀನ ಪಾರಿಷ್‌ನಲ್ಲಿರುವ ಜಹಗೀರು ಪ್ರದೇಶ ಮತ್ತು ಪಟ್ಟಣವಾಗಿದ್ದು, ಇದು ಯಾರ್ಕ್‌ಷೈರ್‌ನಲ್ಲಿನ ವೆಸ್ಟ್ ರೈಡಿಂಗ್‌ನ ಸ್ಕೈರಾಕ್ ವಪೆನ್‌ಟೇಕ್‌ನಲ್ಲಿನ ಲೀಡ್ಸ್ ಸೆಂಟ್ ಪೀಟರ್‌‌ ಗೆ ಸೇರಿದ್ದಾಗಿದೆ.[೩೧] ಲೀಡ್ಸ್‌ನ ಪೌರಸಭಾ ನಗರವನ್ನು 1207ರಲ್ಲಿ ರಚಿಸಲಾಗಿದ್ದು, ಆಗ ಜಹಗೀರುನ ಅಧಿಪತಿಯಾದ ಮೌರೀಸ್ ಪೇನೆಲ್, ಜಹಗೀರು ಒಳಗಿನ ನದಿಗೆ ಹತ್ತಿರದಲ್ಲಿರುವ, ಒಂದು ಚಿಕ್ಕ ಪ್ರದೇಶವನ್ನು ಸನ್ನದಿಗೆ ನೀಡಿದ್ದರು. ಅದೇ ಈಗ ನಗರದ ಕೇಂದ್ರವಾಗಿದೆ.

ನಾಲ್ಕು ಶತಮಾನಗಳ ನಂತರ, ಲೀಡ್ಸ್ ನಿವಾಸಿಗರು ಸನ್ನದಿನ ಏಕೀಕರಣಕ್ಕಾಗಿ ಚಾರ್ಲೆಸ್ Iಗೆ ಮನವಿ ಮಾಡಿಕೊಂಡಿದ್ದರು, 1626ರಲ್ಲಿ ಇದಕ್ಕೆ ಅನುಮತಿಯನ್ನು ನೀಡಲಾಗಿತ್ತು. ಹೊಸಾ ಸನ್ನದು, ಎಲ್ಲಾ ಹನ್ನೊಂದು ನಗರಗಳನ್ನು ಒಳಗೊಂಡು, ಸಂಪೂರ್ಣ ಪಾರಿಷ್‌‌ನ್ನು ಲೀಡ್ಸ್‌ನ ಪೌರ ಪಟ್ಟಣವನ್ನಾಗಿ ಏಕೀಕರಣಗೊಳಿಸಿತು, ಮತ್ತು ಮೊದಲಿನ ಸನ್ನದನ್ನು ಹಿಂದಕ್ಕೆ ಪಡೆಯಲಾಯಿತು. ಬ್ರಿಗ್ಗೇಟ್ (ಸೇತುವೆ ಮಾರ್ಗ)ನ್ನು ಒಳಗೊಂಡು, ಕಲ್ಲುಹಾಸಿ ಹಾದಿ ಮಾಡಲು, ಬೆಳಕಿನ ವ್ಯವಸ್ಥೆ ಸುಧಾರಿಸಲು ಮತ್ತು ಮುಖ್ಯ ಬೀದಿಗಳನ್ನು ಸ್ವಚ್ಛಗೊಳಿಸಲು ಸುಧಾರಿತ ಆಯುಕ್ತರನ್ನು 1755ರಲ್ಲಿ ನಿಯಮಿಸಲಾಯಿತು; ನೀರಿನ ಸೌಲಭ್ಯವನ್ನು ಸುಧಾರಿಸಲು ಹೆಚ್ಚಿನ ಅಧಿಕಾರವನ್ನು 1790ರಲ್ಲಿ ಹೆಚ್ಚಿಸಲಾಯಿತು.[೩೨]

ನಗರ ಪುರಸಭೆಯನ್ನು, ಪೌರಸಭಾ ಆಡಳಿತ ಕಾಯಿದೆ 1835ರ ಪ್ರಕಾರ ಮರು ರಚಿಸಲಾಯಿತು. ಲೀಡ್ಸ್ ನಗರದ ಕಾವಲುದಳ (ಪೋಲೀಸುದಳ)ವನ್ನು 1836ರಲ್ಲಿ ರಚಿಸಲಾಯಿತು ಮತ್ತು 1858ರಲ್ಲಿ ನಗರ ಸಭೆಯು ಲೀಡ್ಸ್ ಟೌನ್ ಹಾಲ್‌ನ್ನು ಪೂರ್ಣಗೊಳಿಸಿತು. 1866ರಲ್ಲಿ ಲೀಡ್ಸ್, ಮತ್ತು ನಗರದಲ್ಲಿನ ಇತರ ಪಟ್ಟಣಗಳು, ಪಾರಿಷ್ ಸಮಾಜಕ್ಕೆ ಸೇರ್ಪಡೆಯಾದವು. 1889ರಲ್ಲಿ ನಗರವು ಕಂಪಣ(ಪ್ರಾಂತ್ಯ) ನಗರವಾಗಿ, ಹೊಸದಾಗಿ ರಚಿಸಲಾದ ವೆಸ್ಟ್ ರೈಡಿಂಗ್ ಪ್ರಾಂತೀಯ ಆಡಳಿತ ಮಂಡಳಿಯಿಂದ ಸ್ವತಂತ್ರವನ್ನು ಪಡೆಯಿತು ಮತ್ತು ಇದು 1893ರಲ್ಲಿ ನಗರದ ಮಾನ್ಯತೆಯನ್ನು ಪಡೆಯಿತು. 1904ರಲ್ಲಿ ಲೀಡ್ಸ್‌ನ ಪಾರಿಷ್, ನಗರದ ಒಳಗಿನ ಬೀಸ್ಟನ್, ಚಾಪೆಲ್ ಅಲೆರ್ಟನ್, ಫಾರ್ನ್‌ಲೆ, ಹೆಡಿಂಗ್ಲೆ ಕಮ್ ಬರ್ಲೆ ಮತ್ತು ಪೊಟೆರ್ನೆವ್‌ಟನ್‌ಗಳನ್ನು ವಿಲೀನ ಮಾಡಿಕೊಂಡಿತು.

ಇಪ್ಪತ್ತನೆಯ ಶತಮಾನದಲ್ಲಿ ಪ್ರಾಂತೀಯ ನಗರವು, 1911ರಲ್ಲಿನ 21,593 acres (87.38 km2) ರಿಂದ 1961ರಲ್ಲಿನ 40,612 acres (164.35 km2) ವರೆಗೂ ಬೆಳೆಯುವುದರ ಮೂಲಕ, ಮಹತ್ತರವಾದ ಪ್ರಾಂತೀಯ ವಿಸ್ತಾರವನ್ನು ಅರಂಭಿಸಿತು.[೩೩] 1912ರಲ್ಲಿ ಲೀಡ್ಸ್‌ನ ಪಾರಿಷ್ ಮತ್ತು ಪ್ರಾಂತೀಯ ನಗರವು ಲೀಡ್ಸ್ ಗ್ರಾಮೀಣ ಜಿಲ್ಲೆಯನ್ನು ವಿಲೀನ ಮಾಡಿಕೊಂಡವು, ಇದು ರೌಂದಯ್ ಮತ್ತು ಸೀಕ್ರಾಫ್ಟ್ ಪಾರಿಷ್‌ಗಳನ್ನು ಒಳಗೊಂಡಿತ್ತು; ಹಾಗು ವೆದರ್‌ಬೈ ಗ್ರಾಮೀಣ ಜಿಲ್ಲೆಯ ಭಾಗವಾದ ಷಡ್‌ವೆಲ್ ಸಹ ಸೇರಿತ್ತು. 1 ಏಪ್ರಿಲ್ 1925ರಂದು ಲೀಡ್ಸ್‌ನ ಪಾರಿಷ್‌ನ್ನು ಸಂಪೂರ್ಣ ನಗರದ ವಿಲೀನತೆಯನ್ನು ಹೊಂದುವಂತೆ ವಿಸ್ತರಿಸಲಾಗಿದೆ.[೩೧]

ಪ್ರಾಂತೀಯ ನಗರ ಪ್ರಾಧಿಕಾರವನ್ನು 1 ಏಪ್ರಿಲ್ 1974ರಂದು ರದ್ದುಪಡಿಸಲಾಯಿತು ಮತ್ತು ಇದರ ಹಿಂದಿನ ಪ್ರದೇಶವನ್ನು ಮಾರ್ಲೆ ಮತ್ತು ಪಡ್ಸೆನ ಪೌರಸಭಾ ಪ್ರಾಧಿಕಾರದೊಂದಿಗೆ; ಏರ್‌ಬೊರೊ, ಹಾರ್ಸ್‌ಫೋರ್ತ್, ಓಟ್ಲೆ, ಗರ್‌ಫೋರ್ತ್ ಮತ್ತು ರೋತ್‌ವೆಲ್‌ನ ಪಟ್ಟಣ ಜಿಲ್ಲೆಗಳೊಂದಿಗೆ; ಮತ್ತು ಟಡ್‌ಕಾಸ್ಟರ್, ವೆಥೆರ್ಬಿ ಮತ್ತು ವಾರ್ಫೆಡಲೆಗಳ ಗ್ರಾಮೀಣ ಜಿಲ್ಲೆಗಳ ಭಾಗಗಳಿಗೆ ಸೇರಿಸಲಾಗಿದೆ.[೩೪] ಈ ಪ್ರದೇಶವನ್ನು ವೆಸ್ಟ್ ಯಾರ್ಕ್‌ಷೈರ್ ಪ್ರಾಂತದಲ್ಲಿ ಹೊಸಾ ರಾಜಧಾನಿ ನಗರವನ್ನು ರಚಿಸಲು ಉಪಯೋಗಿಸ ಲಾಯಿತು; ಇದು ಪೌರಸಭೆ ಮತ್ತು ನಗರದ ಸ್ಥಾನಮಾನ ಎರಡನ್ನೂ ಪಡೆಯಿತು ಮತ್ತು ಇದನ್ನು ಲೀಡ್ಸ್ ನಗರ ಎಂದು ಗುರುತಿಸಲಾಯಿತು.

ಆರಂಭದಲ್ಲಿ, ಸ್ಥಳೀಯ ಸರಕಾರದ ಸೇವೆಗಳನ್ನು ಲೀಡ್ಸ್ ನಗರ ಪ್ರಾಧಿಕಾರ ಮತ್ತು ವೆಸ್ಟ್ ಯಾರ್ಕ್‌ಷೈರ್ ಪ್ರಾಂತ ಪ್ರಾಧಿಕಾರದಿಂದ ಒದಗಿಸಲಾಯಿತು. ಅದಾಗ್ಯೂ, 1986ರಲ್ಲಿ ಪ್ರಾಂತ ಪ್ರಾಧಿಕಾರವನ್ನು ರದ್ದುಪಡಿಸಲಾಯಿತು ಮತ್ತು ಕೆಲವು ಅಧಿಕಾರಗಳನ್ನು ವೆಸ್ಟ್ ಯಾರ್ಕ್‌ಷೈರ್ ಪ್ಯಾಸೆಂಜರ್ ಟ್ರಾನ್ಸ್‌ಫೋರ್ಟ್ ಅಥಾರಿಟಿಯಂತಹ ಸಂಸ್ಥೆಗಳಿಗೆ ನೀಡುವುದರ ಮೂಲಕ, ಇದರ ಕರ್ತವ್ಯಗಳನ್ನು ಸಹ ನಗರ ಪ್ರಾಧಿಕಾರವೇ ಪಡೆಯಿತು. 1988ರಿಂದ ನಗರದ ಕೇಂದ್ರಭಾಗಕ್ಕೆ ಹತ್ತಿರದಲ್ಲಿರುವ ಎರಡು ದುರ್ಬಲ ಮತ್ತು ಪರಿತ್ಯಜಿಸಿದ ಪ್ರದೇಶಗಳನ್ನು ಪುನರುತ್ಪಾದನೆಗೆ ನಿಯೋಜಿಸಲಾಯಿತು ಮತ್ತು ಲೀಡ್ಸ್ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿಯುತ ಪ್ರದೇಶವನ್ನು ರಚಿಸಲಾಯಿತು. ಇದನ್ನು ನಗರ ಪ್ರಾಧಿಕಾರದ ಯೋಜನಾ ಸಂದಾಯದ ಹೊರಗೆ ಮಾಡಲಾಯಿತು.[೩೫] 1995ರಲ್ಲಿ ಅಭಿವೃದ್ಧಿ ಪ್ರಾಧಿಕಾರವು ಉದ್ರೇಕಕ್ಕೆ ಒಳಗಾದಾಗ, ಯೋಜನಾ ಅಧಿಕಾರಗಳನ್ನು ಸ್ಥಳೀಯ ಪ್ರಾಧಿಕಾರಕ್ಕೆ ಹಿಂತಿರುಗಿಸಲಾಯಿತು.

ಲೀಡ್ಸ್ ನಗರದ ಉಪನಗರಾಭಿವೃದ್ಧಿ

1866ರ ಲೀಡ್ಸ್ ನಕ್ಷೆ
A black-and-white photograph of part of a monumental seven-storey curved-fronted block of flats made of poured and pre-cast concrete with a prominent two-storey semicircular entrance arch. In the foreground is a pedestrian crossing with a Belisha Beacon.
ಕ್ವಾರಿ ಹಿಲ್ ಫ್ಲ್ಯಾಟ್ಸ್

1801ರಲ್ಲಿ, ಲೀಡ್ಸ್ ನಗರದ ಶೇಕಡಾ, 42% ರಷ್ಟು ಜನಸಂಖ್ಯೆ ನಗರದಿಂದ ಹೊರವಲಯದಲ್ಲಿರುವ ಬೋರೋದಲ್ಲಿ ವಾಸಿಸುತ್ತಿದ್ದರು. 1832 ಮತ್ತು 1849 ರಲ್ಲಿ ಕಾಲೆರಾ ರೋಗ ಉಂಟಾದುದರಿಂದ ಬೋರೋ ಸರ್ಕಾರವು ಒಳಚರಂಡಿ, ನೈರ್ಮಲ್ಯ ವ್ಯವಸ್ಥೆ ಮತ್ತು ನೀರು ಪೂರೈಕೆ ಸಮಸ್ಯೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಅವಕಾಶ ಮಾಡಿತು. ನೀರನ್ನು ಮೂಲತಃ ವಾರ್ಫೇ ನದಿಯಿಂದ ಪಂಪಿನ ಮೂಲಕ ತೆಗೆದು ಬಳಸಲಾಗುತ್ತಿತ್ತು, ಆದರೆ ಅದು 1860 ರ ಅವಧಿಯಲ್ಲಿ ಬಳಸಲಸಾಧ್ಯವಾಗುವ ರೀತಿಯಲ್ಲಿ ಮಾಲಿನ್ಯಗೊಂಡಿತ್ತು.

ಲೀಡ್ಸ್ ನಗರದ 1867 ರ ನೀರಿನ ಕಾಮಗಾರಿ ಕಾಯ್ದೆಯ ಪ್ರಕಾರ, ಮೂರು ಜಲಾಶಯಗಳನ್ನು ಕ್ರಮವಾಗಿ ಲೀಡ್ಸ್ ನಗರದ ಉತ್ತರಕ್ಕಿರುವ ಲಿಂಡ್ಲೆವುಡ್, ಸ್ವಿನ್ಸ್ಟಿ ಮತ್ತು ಫ್ಯೂಸ್ಟನ್‌ನಲ್ಲಿ ನಿರ್ಮಿಸಲಾಯಿತು.ಉಲ್ಲೇಖ ದೋಷ: Closing </ref> missing for <ref> tag 1858 ರಲ್ಲಿ ಹನ್ಸ್ ಲೆಟ್‌ನ ಸಮೀಪದಲ್ಲಿ ಇರುವ ಹಾಲ್ಬೆಕ್ ಮತ್ತು ಲೀಡ್ಸ್ ನಗರಗಳಲ್ಲಿ ನಿರಂತರವಾಗಿ ಕಟ್ಟಡಗಳನ್ನು ರಚಿಸಲಾಯಿತು.[೩೬]

ಹತ್ತೊಂಭತ್ತನೇ ಶತಮಾನದ ನಂತರದಲ್ಲಿ, ಹನ್ಸ್ಲೆಟ್, ಆರ್ಮ್ಲೇ ಮತ್ತು ವರ್ಟ್ಲೇಯಲ್ಲಿ ಜನಸಂಖ್ಯಾ ವೃದ್ಧಿಯು ಲೀಡ್ಸ್ ನಗರವನ್ನು ಮೀರಿ ಬೆಳೆಯಿತು. ಯಾವಾಗ ಅಲ್ಲಿ ಮಾಲಿನ್ಯ ಒಂದು ಸಮಸ್ಯೆಯಾಗಿ ಉದ್ಭವಿಸಿತೋ, ಶ್ರೀಮಂತ ವರ್ಗದವರು ಈ ಸಣ್ಣ ಕೈಗಾರಿಕಾ ನಗರಗಳ ಸಮೂಹ ವನ್ನು ಬಿಟ್ಟು ಉತ್ತರದ ನಗರಗಳಾದ ಹೆಡಿಂಗ್ಲೇ, ಪಾಟರ್ನ್ಯೂಟನ್ ಮತ್ತು ಚಾಪೆಲ್ ಅಲ್ಲರ್ಟನ್ಗೆ ಹೋದರು. ಇದು 1851 ರಿಂದ 1861ವರೆಗೆ ಹೆಡಿಂಗ್ಲೇ ಮತ್ತು ಬರ್ಲೇಯ ಜನಸಂಖ್ಯೆಯು ಶೇಕಡಾ 50% ರಷ್ಟಕ್ಕೆ ಏರಿಕೆಯಾಗಲು ಕಾರಣವಾಯಿತು. ಈ ಕೈಗಾರಿಕಾ ಪ್ರದೇಶದಿಂದ ಈ ಮಧ್ಯಮ ವರ್ಗದ ಪಲಾಯನದಿಂದ ರೌಂಧೇಯ್ ಮತ್ತು ಆ‍ಯ್‌ಡೆಲ್‌ನ ಬೋರೋದ ಹೊರವಲಯದ ಅಭಿವೃದ್ಧಿಗೆ ಕಾರಣವಾಯಿತು.[೩೬] ವಿದ್ಯುಚ್ಛಾಲಿತ ಟ್ರಾಮ್ವೇಯ ಅಳವಡಿಕೆಯ ನಂತರ ಇದು ಹೆಡಿಂಗ್ಲೇ ಮತ್ತು ಪಾಟರ್ನ್ಯೂಟನ್ ನಗರದ ಅಭಿವೃಧ್ಧಿಯನ್ನು ಇನ್ನಷ್ಟು ವೃದ್ಧಿಗೊಳಿಸಿತಲ್ಲದೇ ಬೋರೋದ ಹೊರವಲಯದಿಂದ ರೌಂಧೇವರೆಗೆ ಅಭಿವೃದ್ಧಿಕಾರ್ಯ ವಿಸ್ತರಿಸಿತು.ಉಲ್ಲೇಖ ದೋಷ: Closing </ref> missing for <ref> tag ಆಕರ್ಷಿಸಲು, ಲೀಡ್ಸ್, ಸ್ಥಳೀಯವಾಗಿ ಹೆಚ್ಚು ಹಣವನ್ನು ಖರ್ಚುಮಾಡುತ್ತಿದೆ. ಅನೇಕ ಕಟ್ಟಡಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು,[೩೭] ಕೇವಲ ಸಿಟಿ ಸೆಂಟರ್ನಿಂದ ಕಲ್ಲು ಎಸೆದರೆ ಎಟಕುವಷ್ಟು ದೂರದಲ್ಲಿ ಐಷಾರಾಮಿ ಪೆಂಟ್ಹೌಸ್ ಅಪಾರ್ಟ್ಮೆಂಟ್ಗಳನ್ನು ಕೂಡ ನಿರ್ಮಿಸಿದೆ.

ಭೌಗೋಳಿಕತೆ

ಪಶ್ಚಿಮ ಯಾರ್ಕ್‌ಷೈರ್‌ನಲ್ಲಿ ಲೀಡ್ಸ್ ನಕ್ಷೆ
ಲೀಡ್ಸ್‌ನಲ್ಲಿನ ಐರ್ ನದಿ

ಲೀಡ್ಸ್ ನಗರದ ಕೇಂದ್ರಭಾಗವಾದ ಸೆಂಟ್ರಲ್ ಲಂಡನ್ನ, 190 miles (310 km)ಉತ್ತರಭಾಗದಲ್ಲಿ ಮತ್ತು 53°47′59″N 1°32′57″W / 53.79972°N 1.54917°W / 53.79972; -1.54917Invalid arguments have been passed to the {{#coordinates:}} function(53.799°, −1.549°) ಅದರ ವಾಯವ್ಯ ಭಾಗವು ಐರ್ ನದಿ ದಂಡೆಯಲ್ಲಿ ಆವರಿಸಲ್ಪಟ್ಟಿದೆಯಲ್ಲದೇ ಇದು ಕಡಿದಾದ ಐರ್ ಕಣಿವೆಭಾಗದಲ್ಲಿದ್ದು ಅದು ಪೆನ್ನಿನೆಸ್ನ ಪೂರ್ವದ ತಪ್ಪಲು ಪ್ರದೇಶದಲ್ಲಿದೆ. ಸಿಟಿ ಸೆಂಟರ್ ಇದು 206 feet (63 m) ಸಮುದ್ರ ಮಟ್ಟಕ್ಕಿಂತಲೂ ಮೇಲಕ್ಕಿದ್ದು, ರಾಜಧಾನಿಯು ಇಲ್ಕ್ಲೈ ಮೂರ್ ಇಳಿಜಾರು ಪ್ರದೇಶದ ಪಶ್ಚಿಮದಿಂದ ತುಂಬಾ ದೂರದ ಅಂತರದಲ್ಲಿದೆಯಲ್ಲದೇ, ಐರ್ ನದಿ ಮತ್ತು ವಾರ್ಫೇ ಕ್ರಾಸ್ ಇವುಗಳ ಸಿಟಿ ಸೆಂಟರ್ನ ಪೂರ್ವ ಭಾಗದ ಗಡಿಪ್ರದೇಶಗಳಾಗಿವೆ.

ಲೀಡ್ಸ್ ನಗರದ ಮಧ್ಯಭಾಗದಲ್ಲಿ ನಿರಂತರವಾಗಿ ಕಟ್ಟಡಗಳ ರಚನೆಯಾಗಿದ್ದು ಅದು ಪುಡ್ಸೇ, ಬ್ರಾಮ್ಲೇ, ಹಾರ್ಸ್ಫೋರ್ತ್, ಅಲ್ವುಡ್ಲೇ, ಸೀಕ್ರಾಫ್ಟ್, ಮಿಡ್ಲ್ಟನ್ ಮತ್ತು ಮೋರ್ಲೇವರೆಗೆ ವಿಸ್ತರಿಸಿದೆ.[೩೮] ಲೀಡ್ಸ್ ಇದು ಯುನೈಟೆಡ್ ಕಿಂಗ್ಡಮ್ ಸ್ಥಳೀಯವಾಗಿ ಅತೀ ಹೆಚ್ದು ಜನಸಂಖ್ಯೆ ಹೊಂದಿರುವ ದೇಶದ ಎರಡನೇ ನಗರವಾಗಿದೆ (ಡಾನ್ಕಾಸ್ಟರ್ ನಂತರ) ಇಂಗ್ಲೀಷ್ ಮೆಟ್ರೋ ಪಾಲಿಟನ್ ರಾಜ್ಯವಾದ ಬರ್ಮಿಂಗ್‌ಹ್ಯಾಮ್‌ನ ನಂತರದಲ್ಲಿ)ಇದು ಪೂರ್ವದಿಂದ ಪಶ್ಚಿಮಕ್ಕೆ 15 ಮೈಲುಗಳಷ್ಟು(24 ಕಿಲೋಮೀಟರ್)ದೂರದವರೆಗೆ ವಿಸ್ತಾರವಾಗಿ ಚಾಚಿಕೊಂಡಿದೆ ಮತ್ತು ಉತ್ತರದಿಂದ ದಕ್ಷಿಣಕ್ಕೆ 13ಮೈಲುಗಳಷ್ಟು (21 ಕಿಲೋಮೀಟರ್) ದೂರದವರೆಗೆ ವಿಸ್ತಾರಕ್ಕೆ ಚಾಚಿಕೊಂಡಿದೆ.

ಉತ್ತರದಲ್ಲಿ ಗಡಿಭಾಗವು ವಾರ್ಫೇ ನದಿಯುದ್ದಕ್ಕೂ ಅನೇಕ ಮೈಲುಗಳವರೆಗೆ ವಿಸ್ತರಿಸಿದೆ ಆದರೆ ಅದು ನದಿಯ ಉತ್ತರ ಭಾಗದಲ್ಲಿರುವ ಓಟ್ಲೇ ಭಾಗವನ್ನು ಒಳಗೊಂಡಂತೆ ಹಾದುಹೋಗುತ್ತದೆ. ಲೀಡ್ಸ್ ನಗರದ 65% ರಷ್ಟು ಭಾಗವು ಹಸಿರು ವಲಯವಾಗಿದ್ದು, ಯಾರ್ಕ್‌ಷೈರ್ ಡೇಲ್ಸ್ ರಾಷ್ಟ್ರೀಯ ಉದ್ಯಾನವನದಿಂದ [೩೯] ಸಿಟಿ ಸೆಂಟರ್‌ಗೆ ಇಪ್ಪತ್ತು ಮೈಲಿಗಿಂತಲೂ ಕಡಿಮೆ ದೂರದ ಅಂತರವಿದೆ.

ಇದು ಯುನೈಟೆಡ್ ಕಿಂಗ್ಡಮ್‌ನ ಅತೀ ಆಕರ್ಷಕ ಹಸಿರು ದೃಶ್ಯಾವಳಿಯನ್ನು ನೋಡುಗರಿಗೆ ನೀಡುತ್ತದೆ.[೪೦] ಮರಳುಗಲ್ಲನ್ನು ಹೊಂದಿರುವ ಪದರದ ಮೇಲೆ ಲೀಡ್ಸ್ ನಗರದ ಒಳಭಾಗ ಮತ್ತು ದಕ್ಷಿಣದ ಪ್ರದೇಶಗಳು ಆವರಿಸಿವೆ. ಉತ್ತರಕ್ಕೆ ಚಾಚಿದ ಭಾಗಗಳು ಮರಳು ಮತ್ತು ಮರಳುಗಲ್ಲುಗಳಿರುವ ಪ್ರದೇಶದಲ್ಲಿ ಆವರಿಸಿದ್ದರೆ, ಪೂರ್ವದಲ್ಲಿ ಅದು ಮ್ಯಾಗ್ನಿಷಿಯಂ ಸುಣ್ಣದ ಕಲ್ಲುಗಳನ್ನು ಹೊಂದಿರುವ ಪದರಪ್ರದೇಶದಲ್ಲಿ ಆವರಿಸಲ್ಪಟ್ಟಿದೆ.[೨೪][೪೧] ಲೀಡ್ಸ್ ನಗರದ ಕೇಂದ್ರಭಾಗದಲ್ಲಿನ ಭೂಪ್ರದೇಶವು ಅತೀ ಜನಸಾಂದ್ರ ನಗರಪ್ರದೇಶವಾಗಿದೆ.[೩೮]

ಲೀಡ್ಸ್ ನಗರದ ಒಂದು ನಿರ್ದಿಷ್ಠ ಭೌಗೋಳಿಕ ಚಿತ್ರಣವನ್ನು ವಿವರಿಸುವ ಪ್ರಯತ್ನಕ್ಕೆ ಕೈಹಾಕಿದರೆ, ಅದು ವಿವಿಧ ಪರಿಕಲ್ಪನೆಗಳ ವ್ಯಾಪ್ತಿಗೆ ಎಡೆಮಾಡಿಕೊಡುತ್ತದೆ. ವಿಭಿನ್ನ ವ್ಯಾಪ್ತಿಗನುಗುಣವಾಗಿ, ಅದು ಸಿಟಿ ಸೆಂಟರ್ನಂತಹ ಪ್ರದೇಶವನ್ನು ಒಳಗೊಂಡಿದೆ, ವಿಸ್ತಾರವಾದ ನಗರಪ್ರದೇಶ, ಆಡಳಿತಾತ್ಮಕ ಗಡಿರೇಖೆಗಳು ಮತ್ತು ಕ್ರಿಯಾತ್ಮಕ ಪ್ರಾಂತಗಳನ್ನು ಕೂಡ ಒಳಗೊಂಡಿದೆ.[೪೨]

Leeds is much more a generalised concept place name in inverted commas, it is the city, but it is also the commuter villages and the region as well.

—A History of Modern Leeds, Brian Thompson[೪೨]

ಲೀಡ್ಸ್ ಸಿಟಿ ಸೆಂಟರ್ ಇದು ಲೀಡ್ಸ್ ಒಳ ವರ್ತುಲ ರಸ್ತೆಯನ್ನು(ಇನ್ನರ್ ರಿಂಗ್ ರೋಡ್) ಕೂಡ ಒಳಗೊಂಡಿದ್ದು, ಇದು A58 ರಸ್ತೆ, A61 ರಸ್ತೆ, A64 ರಸ್ತೆ, A643 ರಸ್ತೆ ಮತ್ತು M621 ಎಂಬ ಈ ಭಾಗಗಳ ವಾಹನ ಮಾರ್ಗಗಳನ್ನು ಒಳಗೊಂಡಿದೆ. ಬ್ರಿಗ್ಗೇಟ್ ಪ್ರಮುಖ ಉತ್ತರ ದಕ್ಷಿಣ ವ್ಯಾಪಾರಿ ಕೇಂದ್ರವು ಪಾದಾಚಾರಿ ರಸ್ತೆಯಾಯಿತಲ್ಲದೇ, ವಿಕ್ಟೋರಿಯಾ ಕ್ವಾರ್ಟರ್ನ ಕ್ವೀನ್ ವಿಕ್ಟೋರಿಯಾ ರಸ್ತೆಯು ಗ್ಲಾಸ್ ರೂಫ್ನಿಂದ ಆವರಿಸಲ್ಪಟ್ಟಿತು. ಮಿಲೇನಿಯಮ್ ಸ್ಕ್ವೇರ್ ಇದೊಂದು ನಗರದ ಪ್ರಮುಖ ಆಕರ್ಷಕ ಬಿಂದುವಾಗಿದೆ.

ಲೀಡ್ಸ್ ಪೋಸ್ಟ್ ಕೋಡ್ ಪ್ರದೇಶವು ಲೀಡ್ಸ್ ನಗರದ[೪೩] ಹೆಚ್ಚಿನ ಭಾಗವನ್ನು ವ್ಯಾಪಿಸುತ್ತದೆಯಲ್ಲದೇ, ಅದು ಹೆಚ್ಚು ಕಡಿಮೆ ಸಂಪೂರ್ಣವಾಗಿ ಲೀಡ್ಸ್ ಪೋಸ್ಟ್ ಟೌನ್ನಿಂದ ನಿರ್ಮಿಸಲ್ಪಟ್ಟಿತು.[೪೪] ಓಟ್ಲೇ, ವೆದರ್ಬೈ, ಟ್ಯಾಡ್ಕಾಸ್ಟರ್, ಪುಡ್ಸೇ ಮತ್ತು ಇಲ್ಕ್ಲೈ ಇವುಗಳು ಪೋಸ್ಟ್ ಕೋಡ್ ಪ್ರದೇಶದಲ್ಲಿಯೇ ಒಳಗೊಂಡಿರುವ ಪ್ರತ್ಯೇಕ ಪೋಸ್ಟ್ ಟೌನ್ಗಳಾಗಿವೆ.[೪೪] ಲೀಡ್ಸ್ ನಗರದ ನಿರ್ಮಾಣ ಸ್ಥಳದ ಪಕ್ಕದಲ್ಲಿಯೇ, ಅನೇಕ ಉಪನಗರಗಳು ಮತ್ತು ಹೊರನಗರಗಳು ಕೂಡ ಅದೇ ನಗರದಲ್ಲಿ ಲಭ್ಯವಿದೆ.

ಹವಾಮಾನ

ಲೀಡ್ಸ್‌ನ ಹೊರವಲಯದಲ್ಲಿನ ವ್ಹಿಟ್ಕಿರ್ಕ್/ಕೋಲ್ಟನ್‌ ಮೇಲೆ ಹಿಮದಿಂದ ಕೂಡಿದ ಸೂರ್ಯೋದಯ

ಸಣ್ಣ ಪ್ರಮಾಣದ ಬದಲಾವಣೆಯ ಹೊರತಾಗಿ ವರ್ಷಪೂರ್ತಿ ಏಕರೀತಿಯಲ್ಲಿರುವುದು ಬ್ರಿಟೀಷ್ ಐಲ್ ನಲ್ಲಿಯ ಲೀಡ್ಸ್ ನಗರದ ಸಾಗರ ಸಂಬಂಧಿ ವಾತಾವರಣದ ವಿಶಿಷ್ಠತೆಯಾಗಿದೆ.ಈ ನಗರದ ವಾತಾವರಣವು ಪ್ರಮುಖವಾಗಿ ಅಟ್ಲಾಂಟಿಕ್ ಸಾಗರದಿಂದ ಪರಿಣಾಮಕ್ಕೊಳಪಡುತ್ತದೆಯಲ್ಲದೇ, ಕೆಲವೊಮ್ಮೆ ಪೆನ್ನಿನೆಸ್‌ನಿಂದಲೂ ಪ್ರಭಾವಕ್ಕೊಳಪಡುತ್ತದೆ. ಬೇಸಿಗೆಕಾಲದಲ್ಲಿ ಲೀಡ್ಸ್ ನಗರವು ಸಾಮಾನ್ಯವಾಗಿ ತಂಪಾಗಿ ಶಾಂತವಾಗಿರುತ್ತದೆ, ಕೆಲವೊಮ್ಮೆ ಬಿಸಿಯಾಗಿರುತ್ತದೆ. ಚಳಿಗಾಲದಲ್ಲಿ ಚಳಿಯಿರುತ್ತದೆ ಕೆಲವೊಮ್ಮೆ ಸಾಂದರ್ಭಿಕವಾಗಿ ಹಿಮ ಬೀಳುವುದರಿಂದಾಗಿ ಅತಿಯಾದ ಚಳಿಯಿರುತ್ತದೆ. ಲೀಡ್ಸ್ ನಗರದ ಜನರು ಪ್ರತಿವರ್ಷ ಕೆಲವು ದಿನಗಳವರೆಗಾದರೂ ಹಿಮಬೀಳುವುದನ್ನು ನಿರೀಕ್ಷಿಸಬಹುದು. ಅತಿಯಾದ ಹಿಮ ಇಲ್ಲಿ ಸಾಮಾನ್ಯ. ಉತ್ತರ ಅಕ್ಷಾಂಶದ ಕಾರಣವಾಗಿ, ಲೀಡ್ಸ್ ನಗರದಲ್ಲಿ ವರ್ಷವಿಡೀ ಹಗಲುಹೊತ್ತಿನ ಗಂಟೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತದೆ. ಕಡಿಮೆ ಹಗಲಿರುವ ದಿನ ಸೂರ್ಯನು ಪೂರ್ವಾಹ್ನ 8:22 ಗಂಟೆಗೆ ಉದಯಿಸಿದರೆ, ಅಪರಾಹ್ನ 3:46 ಗಂಟೆಗೆ ಅಸ್ತಮಿಸುತ್ತಾನೆ. ಇಂತಹ ಸಂದರ್ಭದಲ್ಲಿ ಕೇವಲ ಹಗಲು ಹೊತ್ತು 7 ಗಂಟೆಗಳ ಅವಧಿಯವರೆಗಷ್ಟೇ ಇರುತ್ತದೆ. ಮೋಡ, ಆರ್ದ್ರ ದಿನಗಳು ಹಗಲಿನ ಹೊತ್ತನ್ನು ಇನ್ನೂ ಸೀಮಿತಗೊಳಿಸಬಹುದು. ದೀರ್ಘವಾದ ದಿನದಂದು ಸೂರ್ಯನು ಪೂರ್ವಾಹ್ನ 4:35 ಗಂಟೆಗೆ ಉದಯಿಸುತ್ತಾನೆ ಮತ್ತು ಅಪರಾಹ್ನ 9:41 ಗೆ ಅಸ್ತಮಿಸುತ್ತಾನೆ. ಈ ಸಂದರ್ಭದಲ್ಲಿ ಹಗಲು ಹೊತ್ತು 17 ಗಂಟೆಗಳವರೆಗೆ ಇರುವುದಲ್ಲದೇ ರಾತ್ರಿಯಿಡೀ ನಸುಬೆಳಕಿನಿಂದ ಕೂಡಿರುತ್ತದೆ. ವಾತಾವರಣದ ಮೇಲೆ ಹೆಚ್ಚಿನ ಒತ್ತಡ ಪ್ರಭಾವ ಬೀರಿದಾಗ, ವಿಶೇಷವಾಗಿ ಬಿಸಿಯಿಂದ ಕೂಡಿರುವುದಲ್ಲದೇ ದೀರ್ಘವಾಗಿಯೂ ಇರುತ್ತದೆ.

ಅತೀ ಬೆಚ್ಚಗಿರುವ ತಿಂಗಳುಗಳೆಂದರೆ, ಜುಲೈ ಮತ್ತು ಆಗಸ್ಟ್ ತಿಂಗಳುಗಳು, ಈ ಎರಡೂ ತಿಂಗಳುಗಳಲ್ಲಿ ಸರಿಸುಮಾರು 19.9 °C (67.8 °F), ನಷ್ಟು ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಅತೀ ತಂಪಾಗಿರುವ ತಿಂಗಳಾದ ಫೆಬ್ರವರಿಯಲ್ಲಿ ಸರಿಸುಮಾರು 0.2 °C (32.3 °F) ರಷ್ಟು ಪ್ರಮಾಣದ ಉಷ್ಣಾಂಶವಿರುತ್ತದೆ. ಬೇಸಿಗೆ ಕಾಲದಲ್ಲಿ ತಾಪಮಾನ 30 °C (86 °F) ಗಿಂತ ಹೆಚ್ಚಿಗಿದ್ದರೆ, ಚಳಿಗಾಲದಲ್ಲಿ ಇದು -5 °C ಗಿಂತಲೂ ಕಡಿಮೆಯಿರುತ್ತದೆ. ಆದರೆ ಇದು ಸಾಮಾನ್ಯವಾಗಿರುವುದಿಲ್ಲ. 2003 ಆಗಸ್ಟ್ ಮತ್ತು 2006 ಜುಲೈ ತಿಂಗಳಿನಲ್ಲಿ ತಾಪಮಾನವು ಕೆಲವು ದಿನಗಳವರೆಗೆ 30 °C (86 °F) ಈ ಮಟ್ಟವನ್ನು ಮೀರಿತ್ತು. ಹಾಗೆಯೇ 3 ಡಿಸೆಂಬರ್ 2010 ರಂದು ತಾಪಮಾನವು -15 °C (5 °F) ನಷ್ಟು ಇಳಿಮುಖವಾಯಿತು ನಂತರ ಅದು -5 °C (23 °F) ಗಿಂತ ಹೆಚ್ಚು ಏರಲಿಲ್ಲ.

ಲೀಡ್ಸ್ ನಗರದಲ್ಲಿ ಪ್ರತಿ ವರ್ಷ ಬೀಳುವ ಮಳೆಯ ಪ್ರಮಾಣ ಸರಾಸರಿ 660 mm (25.9 ಇಂಚುಗಳು) ಇದ್ದು ಇದು ಯುನೈಟೆಡ್ ಕಿಂಗ್ಡಮ್ ನಲ್ಲಿ ಅತೀ ಒಣ ಪ್ರದೇಶವಾಗಿದೆ.ಪೆನ್ನೆನೆಸ್ ಪರ್ವತ ಪ್ರದೇಶ, ಅಟ್ಲಾಂಟಿಕ್ ಸಮುದ್ರದಿಂದ ಬೀಸುವ ಗಾಳಿಯಿಂದ ಲೀಡ್ಸ್ನ್ನು ರಕ್ಷಿಸುತ್ತದೆಯಲ್ಲದೇ, ಇದು ಪ್ರತಿ ವರ್ಷ ಸರಾಸರಿಯಾಗಿ 147 ದಿನ ಹೆಚ್ಚಾಗಿ ತುಂತುರು ಮಳೆಯನ್ನು ಪಡೆಯುತ್ತದೆ. ಆದರೆ ಚಳಿಗಾಲದ ಅಂತ್ಯದಲ್ಲಿ/ಬೇಸಿಗೆಯ ಪ್ರಾರಂಭದಲ್ಲಿ ಈ ನಗರದಲ್ಲಿ ಸುರಿಮಳೆಯಾಗುತ್ತದೆ. ಹೀಗಿದ್ದರೂ ತುಂಬಾ ಅಪರೂಪವಾಗಿ ಹವಾಮಾನ ವೈಪರೀತ್ಯವುಂಟಾಗುತ್ತದೆ. 2007 ರಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಉಂಟಾದ ಪ್ರವಾಹದಲ್ಲಿ ಐರ್ ನದಿಯು ಉಕ್ಕಿ ಹರಿದ ಪರಿಣಾಮ ಸಿಟಿ ಸೆಂಟರ್ ಪ್ರವಾಹ ಸಮಸ್ಯೆಯನ್ನು ಎದುರಿಸಿತ್ತು. 2006 ರ ಸೆಪ್ಟೆಂಬರ್ 14 ರಂದು ಈ ಸಿಟಿಯ ಹೇರ್ಹಿಲ್ಸ್ ಎಂಬ ಪ್ರದೇಶಕ್ಕೆ ಬಿರುಗಾಳಿ ಅಪ್ಪಳಿಸಿ ಮರಗಿಡಗಳನ್ನು ಬೇರು ಸಮೇತ ಕಿತ್ತು ಹಾಕಿತ್ತಲ್ಲದೇ, ಲೀಡ್ಸ್ ಸ್ಟೇಷನ್‌ನಲ್ಲಿ ಸಿಗ್ನಲ್ ವೈಫಲ್ಯಗೊಳ್ಳಲು ಕೂಡ ಕಾರಣವಾಯಿತು.

Leedsದ ಹವಾಮಾನ ದತ್ತಾಂಶ
ತಿಂಗಳುಫೆಮಾಮೇಜೂಜುಸೆಆಕ್ಟೋಡಿವರ್ಷ
ಅಧಿಕ ಸರಾಸರಿ °C (°F)5.8
(42.4)
5.9
(42.6)
8.7
(47.7)
11.3
(52.3)
15.0
(59)
18.2
(64.8)
19.9
(67.8)
19.9
(67.8)
17.3
(63.1)
13.4
(56.1)
8.8
(47.8)
6.7
(44.1)
12.58
(54.63)
ಕಡಮೆ ಸರಾಸರಿ °C (°F)0.3
(32.5)
0.2
(32.4)
1.6
(34.9)
3.1
(37.6)
5.5
(41.9)
8.5
(47.3)
10.4
(50.7)
10.5
(50.9)
8.7
(47.7)
6.3
(43.3)
2.9
(37.2)
1.2
(34.2)
4.93
(40.88)
ಸರಾಸರಿ ಮಳೆ mm (inches)61
(2.4)
45
(1.77)
52
(2.05)
48
(1.89)
54
(2.13)
54
(2.13)
51
(2.01)
65
(2.56)
57
(2.24)
55
(2.17)
57
(2.24)
61
(2.4)
660
(25.99)
Average rainy days17.514.214.813.513.712.211.713.212.915.116.517.0172.3
Source: [೪೫]

ಜನಸಂಖ್ಯಾ ವಿವರ

ನಗರದ ಉಪವಿಭಾಗ

ಲೀಡ್ಸ್ ಹೋಲಿಕೆ
ಪಶ್ಚಿಮ ಯಾರ್ಕ್‌ಷೈರ್ ನಗರ ಪ್ರದೇಶದಲ್ಲಿ ಲೀಡ್ಸ್ ನಗರದ ಉಪವಿಭಾಗವನ್ನು ತೋರಿಸಲಾಗಿದೆ
ಲೀಡ್ಸ್ ನಗರ ಉಪವಿಭಾಗವು
ಪಶ್ಚಿಮ ಯಾರ್ಕ್‌ಷೈರ್ ನಗರ ಪ್ರದೇಶದ ಒಳಗೆ ಇದೆ
ಲೀಡ್ಸ್
ಯುಎಸ್‌ಡಿ
ಲೀಡ್ಸ್
ಜಿಲ್ಲೆ
ಪಶ್ಚಿಮ
ಯಾರ್ಕ್ಸ್ ಯುಕೆ
ಇಂಗ್ಲೆಂಡ್
ಜನಸಂಖ್ಯೆ443,247715,4021,117,91149,138,831
ಬಿಳಿ2 / 491.9%[6] ^ [5]90.9%
ಏಷ್ಯಾದವರು[6] ^ [5][6] ^ [5]1.[2]4:1
ಕಪ್ಪು2.2%1,0821.3%2,715
ಮೂಲ: ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್[೪೬][೪೭]

ಯುನೈಟೆಡ್ ಕಿಂಗ್ಡಂನ 2001ರ ಜನಗಣತಿಯ ಸಮಯದಲ್ಲಿ, ಲೀಡ್ಸ್ ನಗರ ಪ್ರದೇಶದ ಉಪವಿಭಾಗದ ವಿಸ್ತೀರ್ಣ 109 square kilometres (42 sq mi) ಹಾಗೂ ಜನಸಂಖ್ಯೆ 443,247; ಇದು ಇಂಗ್ಲೆಂಡ್‌ನ ಒಳಭಾಗದಲ್ಲಿ ನಾಲ್ಕನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರದೇಶವಾಗಿತ್ತು ಹಾಗೂ ಯುನೈಟೆಡ್ ಕಿಂಗ್ಡಂನಲ್ಲಿ ಐದನೆಯ ಅತಿದೊಡ್ಡ ಪ್ರದೇಶವಾಗಿತ್ತು. ಜನಸಂಖ್ಯಾ ಸಾಂದ್ರತೆಯು 4,066 inhabitants per square kilometre (10,530/sq mi), ಪಶ್ಚಿಮ ಯಾರ್ಕ್‌ಷೈರ್ ನಗರ ಪ್ರದೇಶಕ್ಕಿಂತ ಸ್ವಲ್ಪ ಹೆಚ್ಚು. ವಿಸ್ತೀರ್ಣದಲ್ಲಿ 20% ಹಾಗೂ ಲೀಡ್ಸ್ ನಗರದ ಜನಸಂಖ್ಯೆಯ 62% . ನಗರದ ಉಪವಿಭಾಗದ ಜನಸಂಖ್ಯೆಯು 100 ರಿಂದ 93.1 ಮಹಿಳೆ–ಪುರುಷರ ಪ್ರಮಾಣವಿದೆ.[೪೮] 16ವರ್ಷಕ್ಕಿಂತ ಹೆಚ್ಚಾಗಿರುವವರು, 39.4% ಜನರು ಒಬ್ಬರೇ (ಮದುವೆಯಾಗಿಲ್ಲ) ಇದ್ದಾರೆ ಹಾಗೂ 35.4%ರಷ್ಟು ಜನರು ಒಂದು ಬಾರಿ ಮದುವೆಯಾದವರಿದ್ದಾರೆ.[೪೯] ನಗರ ಉಪವಿಭಾಗದ 188,890 ಮನೆಗಳಲ್ಲಿ 35% ಏಕ-ವ್ಯಕ್ತಿ, 27.9% ಮದುವೆಯಾದ ಜೋಡಿಗಳು ಒಟ್ಟಿಗೆ ವಾಸಿಸುತ್ತಿದ್ದಾರೆ, 8.8% ಸಹಜೀವನ ನಡೆಸುವ ಜೋಡಿಗಳು, ಹಾಗೂ 5.7% ಏಕವ್ಯಕ್ತಿ ಪೋಷಕರು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಲೀಡ್ಸ್ ನಗರವು ಪಶ್ಚಿಮ ಯಾರ್ಕ್‌ಷೈರ್ ನಗರ ಪ್ರದೇಶದ ಅತಿದೊಡ್ಡ ಭಾಗವಾಗಿದೆ[೩೮] ಹಾಗೂ ಲೀಡ್ಸ್-ಬ್ರ್ಯಾಡ್ಫೋರ್ಡ್ ಅತಿ ದೊಡ್ಡ ನಗರ ವಲಯವೆಂದು ಯೂರೋಸ್ಟ್ಯಾಟ್ನಿಂದ ಪರಿಗಣಿಸಲಾಗಿದೆ. 2001ರಲ್ಲಿ ಲೀಡ್ಸ್ ಟ್ರ್ಯಾವೆಲ್ ಟು ವರ್ಕ್ ಏರಿಯಾವು ಲೀಡ್ಸ್ ನಗರವನ್ನು ಒಳಗೊಂಡಿತ್ತು, ಬ್ರ್ಯಾಡ್ಫೋರ್ಡ್‌ ನಗರದ ಉತ್ತರ ಭಾಗ, ಕಿರ್ಕ್ಲೀಸ್‌ನ ಪೂರ್ವ ಭಾಗ, ಹಾಗೂ ದಕ್ಷಿಣದ ಉತ್ತರ ಯಾರ್ಕ್‌ಷೈರ್‌ನ ಒಂದು ಭಾಗ; ಇದು ಆವರಿಸಿಕೊಂಡದ್ದು 751 square kilometres (290 sq mi).

ಮೆಟ್ರೋಪಾಲಿಟನ್ ಜಿಲ್ಲೆ

2001ರ ಯುಕೆ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ 715,402.[೫೦] ಲೀಡ್ಸ್‌ನ 301,614 ಮನೆಗಳಲ್ಲಿ, 33.3% ಮದುವೆಯಾದ ಜೋಡಿಗಳು ಒಟ್ಟಿಗೆ ವಾಸಿಸುತ್ತಿದ್ದಾರೆ, 31.6% ಏಕವ್ಯಕ್ತಿ ಮನೆಗಳು, 9.0% ಸಹಜೀವನ ನಡೆಸುತ್ತಿರುವ ಜೋಡಿಗಳು 9.8% ಏಕವ್ಯಕ್ತಿ ಪೋಷಕರು, ಇಂಗ್ಲೆಂಡ್‌ನಲ್ಲಿರುವಂತೆಯೇ ಇಲ್ಲಿಯೂ ಜನಜೀವನ ಇದೆ.[೫೧] ಜನಸಂಖ್ಯಾ ಸಾಂದ್ರತೆ ಟೆಂಪ್ಲೇಟು:PD km2 to sq mi[೫೧] ಹಾಗೂ ಪ್ರತಿ 100 ಮಹಿಳೆಯರಿಗೆ 93.5 ಪುರುಷರಿದ್ದಾರೆ.

ಲೀಡ್ಸ್‌ನಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮನ್ನು ತಾವು ಕ್ರೈಸ್ತ ಧರ್ಮ‌ದವರೆಂದು ಗುರುತಿಸಿಕೊಳ್ಳುತ್ತಾರೆ.[೫೨] ದೇಶದಲ್ಲಿರುವ ಸರಾಸರಿ ಮುಸಲ್ಮಾನರು (ಜನಸಂಖ್ಯೆಯ 3.0%ನಷ್ಟು ) ಇದ್ದಾರೆ.[೫೨] ಲಂಡನ್ ಹಾಗೂ ಮ್ಯಾಂಚೆಸ್ಟರ್ ನಂತರದಲ್ಲಿ ಲೀಡ್ಸ್ ನಗರವು ಮೂರನೆಯ ಅತಿ ಹೆಚ್ಚು ಯಹೂದಿ ಸಮುದಾಯದ ಜನರನ್ನು ಹೊಂದಿರುವ ಪ್ರದೇಶವಾಗಿದೆ. ಅಲ್ವುಡ್ಲೇ ಹಾಗೂ ಮೂರ್ಟೌನ್ ಪ್ರದೇಶಗಳು ಹೆಚ್ಚು ಯಹೂದಿ ಜನಸಂಖ್ಯೆಯನ್ನು ಹೊಂದಿವೆ.[೫೩] 2001ರ ಜನಗಣತಿಯಲ್ಲಿ 16.8%ನಷ್ಟು ಜನರು ತಮ್ಮನ್ನು ತಾವು "ಯಾವ ಧರ್ಮಕ್ಕೂ ಸೇರಿಲ್ಲ"ವೆಂದು ಘೋಷಿಸಿಕೊಂಡಿದ್ದಾರೆ, ಒಟ್ಟಾರೆ ಯುಕೆಯಲ್ಲಿ ಈ ಸಂಖ್ಯೆಯು ಇದೆ ( 8.1%ನಷ್ಟು "ಧರ್ಮವನ್ನು ಹೇಳಿಕೊಳ್ಳದೆ ಇರುವವರು"). ಲೀಡ್ಸ್ ನಗರದಲ್ಲಿನ ಅಪರಾದಗಳ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಇತರೆ ಇಂಗ್ಲೀಷ್ ಪ್ರಮುಖ ನಗರಗಳಂತೆಯೇ ಹೆಚ್ಚಾಗಿಯೇ ಇದೆ.[೫೪][೫೫] ಜುಲೈ 2006ರಲ್ಲಿ, ಥಿಂಕ್ ಟ್ಯಾಂಕ್ ರೀಫಾರ್ಮ್ ವಿವಿಧ ಅಪರಾಧಗಳ ಪ್ರಮಾಣವನ್ನು ಪ್ರಮುಖ ನಗರ ಪ್ರದೇಶಗಳ ಜನಸಂಖ್ಯೆಯೊಂದಿಗೆ ಸಂಬಂಧಿಸಿದಂತೆ ಲೆಕ್ಕಾಚಾರ ಹಾಕಿತು (100,000ಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶಗಳು). ಇದರಲ್ಲಿ ಲೀಡ್ಸ್ 11ನೆಯ ಸ್ಥಾನದಲ್ಲಿದೆ (ಲಂಡನ್ ನಗರ ಪ್ರದೇಶಗಳನ್ನು ಹೊರತುಪಡಿಸಿ, ಲಂಡನ್ ನಗರ ಪ್ರದೇಶಗಳನ್ನು ಸೇರಿಸಿದರೆ 23ನೆಯದು).[೫೬] ಕೆಳಗಿರುವ ಟೇಬಲ್‌ನಲ್ಲಿ 1801ರಿಂದ ಇಲ್ಲಿಯವರೆಗಿನ ಜಿಲ್ಲೆಯ ಜನಸಂಖ್ಯೆ ಹಾಗೂ ಜನಗಣತಿಯ ದತ್ತಾಂಶಗಳಿಂದ ಸಿಕ್ಕ ಮಾಹಿತಿಯಂತೆ ಆದ ಸರಾಸರಿ ಬದಲಾವಣೆಗಳು ಇವೆ.

1801ರಿಂದ ಲೀಡ್ಸ್ ನಗರದ ಜನಸಂಖ್ಯಾ ಬೆಳವಣಿಗೆ
ವರ್ಷ180118111821183118411851186118711881189119011911192119311941195119611971198119912001
ಜನಸಂಖ್ಯೆ94,421108,459137,476183,015222,189249,992311,197372,402433,607503,493552,479606,250625,854646,119668,667692,003715,260739,401696,732716,760715,404
% ಬದಲಾವಣೆ[14] ^ [13]+26.75[14] ^ [13][21] ^ [19]+12.51+24.48+19.6716,9781/129,3939,3933,9733,9733,9733,9733,9733,9735,5812,715[21] ^ [19]
ಮೂಲ: ವಿಷನ್ ಆಫ್ ಬ್ರಿಟನ್ [೫೭]

ಸರ್ಕಾರ

ಲೀಡ್ಸ್ ನಗರವು ಒಂದು ಸ್ಥಳೀಯ ಆಡಳಿತ ಜಿಲ್ಲೆಯಾಗಿದ್ದು, ಇದು ಲೀಡ್ಸ್ ನಗರವನ್ನು ಸಂಪೂರ್ಣವಾಗಿ ವ್ಯಾಪಿಸುವುದರೊಂದಿಗೆ ಸ್ಥಳೀಯ ಆಡಳಿತವನ್ನು ಲೀಡ್ಸ್ ಸಿಟಿ ಕೌನ್ಸಿಲ್ ನೋಡಿಕೊಳ್ಳುತ್ತದೆ. ಈ ಕೌನ್ಸಿಲ್ನಲ್ಲಿ 99 ಕೌನ್ಸಿಲರ್ಗಳಿದ್ದು,ಪ್ರತಿಯೊಂದು ನಗರದ ವಾರ್ಡ್ಗಳಿಗೂ ಮೂವರು ಕೌನ್ಸಿಲರ್ಗಳಿರುತ್ತಾರೆ. ನಾಲ್ಕು ವರ್ಷಗಳಲ್ಲಿ ಮೂರು ವರ್ಷಕ್ಕೊಮ್ಮೆ ಚುನಾವಣೆಗಳು ನಡೆಯುತ್ತವೆಯಲ್ಲದೇ ಅವು ಮೇ ತಿಂಗಳ ಮೊದಲ ಗುರುವಾರದಂದು ನಡೆಯುತ್ತದೆ. ಪ್ರತಿಯೊಂದು ಚುನಾವಣೆಯಲ್ಲಿಯೂ ಕೂಡ ಮೂರನೇ ಒಂದು ಭಾಗದಷ್ಟು ಕೌನ್ಸಿಲರ್ಗಳು ನಾಲ್ಕು ವರ್ಷದ ಅವಧಿಗಾಗಿ ಆಯ್ಕೆಗೊಳ್ಳುತ್ತಾರೆ. 2004 ರಲ್ಲಿ ಗಡಿಭಾಗಗಳ ಬದಲಾವಣೆಯಿಂದಾಗಿ ಎಲ್ಲಾ ಸೀಟುಗಳಿಗಾಗಿ ಚುನಾವಣೆ ನಡೆದಿತ್ತು. ಪ್ರಸ್ತುತವಾಗಿ ಕೌನ್ಸಿಲ್ ಯಾವುದೇ ನಿಯಂತ್ರಣದಲ್ಲಿಲ್ಲ ಮತ್ತು ಅದು ಲೇಬರ್ ಮತ್ತು ಗ್ರೀನ್ ಕೌನ್ಸಿಲರ್ಗಳ ಸಮ್ಮಿಶ್ರ ಆಡಳಿತದಲ್ಲಿ ನಡೆಯುತ್ತಿದೆ. ಪಶ್ಚಿಮ ಯಾರ್ಕ್‌ಷೈರ್ ಯಾವುದೇ ರಾಷ್ಟ್ರೀಯ ಕೌನ್ಸಿಲ್ ಹೊಂದಿಲ್ಲ, ಹಾಗಾಗಿ ಆ ನಗರಕ್ಕೆ ಪ್ರಮುಖವಾಗಿ ಸ್ಥಳೀಯ ಆಡಳಿತ ಸೇವೆ ನೀಡುತ್ತಿರುವ ಪ್ರಮುಖ ಸಂಸ್ಥೆ ಎಂದರೆ ಲೀಡ್ಸ್ ಸಿಟಿ ಕೌನ್ಸಿಲ್ ಆಗಿದೆ. ಈ ಪಟ್ಟಣವು ಇಂಗ್ಲೆಂಡ್ನ ಯಾರ್ಕ್‌ಷೈರ್ ಮತ್ತು ಹಂಬರ್ ಪ್ರಾಂತದಲ್ಲಿದ್ದು, ಇದು ಪಾದ್ರಿಯಾಡಳಿತ ರಹಿತವಾದ ಪ್ರದೇಶ ಮತ್ತು 31 (ಸಿವಿಲ್ ಪ್ಯಾರಿಶ್) ಪೌರ ಪಾದ್ರಿಯಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಇವುಗಳು ಅತ್ಯಂತ ಕೆಳ ಶ್ರೇಣಿಯ ಸ್ಥಳೀಯ ಆಡಳಿತ ಘಟಕವಾಗಿದ್ದು[೫೮], ತಮ್ಮ ಪ್ರದೇಶಗಳಲ್ಲಿ ಕೆಲವೊಂದು ಸೀಮಿತ ಕಾರ್ಯಗಳನ್ನು ಮಾಡಲು ಲೀಡ್ಸ್ ಸಿಟಿ ಕೌನ್ಸಿಲ್ನಿಂದ ಅನುಮತಿಯನ್ನು ಪಡೆಯುತ್ತವೆ. ಹಾರ್ಸ್ಫೋರ್ತ್, ಮೋರ್ಲೇ, ಓಟ್ಲೇ ಮತ್ತು ವೆದರ್ಬೈ ಯ ಕೌನ್ಸಿಲ್ಗಳು ನಗರ ಕೌನ್ಸಿಲ್ಗಳಾಗಿವೆ. ಜಿಲ್ಲೆಯಲ್ಲಿ ಇನ್ನೂ 27 ಪೌರ ಪಾದ್ರಿಯಾಡಳಿತ ಪ್ರದೇಶಗಳಿವೆ.

ಈ ಜಿಲ್ಲೆಯು ಎಂಟು ಎಮ್‌ಪಿಗಳಿಂದ ಪ್ರತಿನಿಧಿಸಲ್ಪಟ್ಟಿದೆ, ಕ್ಷೇತ್ರಗಳು ಎಲ್ಮೆಟ್ ಹಾಗೂ ರೋಥ್ವೆಲ್ (ಅಲೆಕ್ ಶೆಲ್‌ಬ್ರೂಕ್,ಕನ್ಸರ್ವೇಟೀವ್); ಲೀಡ್ಸ್ ಕೇಂದ್ರ (ಹಿಲರಿ ಬೆನ್, ಲೇಬರ್); ಲೀಡ್ಸ್ ಪೂರ್ವ (ಜಾರ್ಜ್ ಮುಡೀ, ಲೇಬರ್); ಲೀಡ್ಸ್ ಈಶಾನ್ಯ (ಫೇಬಿಯನ್ ಹೆಮಿಲ್ಟನ್, ಲೇಬರ್); ಲೀಡ್ಸ್ ವಾಯುವ್ಯ (ಗ್ರೆಗ್ ಮುಲ್‌ಹೊಲ್ಲಂಡ್, ಲಿಬ್ ಡೆಮ್); ಲೀಡ್ಸ್ ಪಶ್ಚಿಮ (ರಾಚೆಲ್ ರೀವ್ಸ್, ಲೇಬರ್; ಮೂರ್ಲೇ ಹಾಗೂ ಔಟ್ವುಡ್ (ವೇಕ್‌ಫೀಲ್ಡ್ ನಗರ ಕ್ಷೇತ್ರದೊಂದಿಗೆ ಹಂಚಿಕೊಂಡಿರುವ ಕ್ಷೇತ್ರ) (ಎಡ್ ಬಾಲ್ಸ್, ಲೇಬರ್); ಹಾಗೂ ಪಡ್ಸೇ (ಸ್ಟುವರ್ಟ್ ಆಂಡ್ರ್ಯೂ, ಕನ್ಸರ್ವೇಟೀವ್). ಲೀಡ್ಸ್ ನಗರವು ಯಾರ್ಕ್‌ಷೈರ್ ಹಾಗೂ ದಿ ಹಂಬರ್ ಯೂರೋಪಿಯನ್ ಕ್ಷೇತ್ರದಲ್ಲಿದೆ, ಇದು ಎರಡು ರಾಜ್ಯನೀತಿ, ಒಂದು ಲೇಬರ್, ಒಂದು ಯುಕೆಐಪಿ, ಒಂದು ಲಿಬರಲ್ ಡೆಮೋಕ್ರಾಟ್ ಹಾಗೂ ಒಂದು ಬಿಎನ್‌ಪಿ ಎಮ್‌ಇಪಿಗಳಿಂದ ಪ್ರತಿನಿಧಿಸುತ್ತದೆ. ಜೂನ್ 2009ರ ಯೂರೋಪಿಯನ್ ಪಾರ್ಲಿಮೆಂಟ್ ಚುನಾವಣೆಯ ಅಂಕಿ ಅಂಶಗಳಂತೆ: ಕನ್ಸರ್ವೇಟೀವ್ 22.6%, ಲೇಬರ್ 21.4%, ಯುಕೆಐಪಿ 15.9%, ಲಿಬ್ ಡೆಮ್ 13.8%, ಬಿಎನ್‌ಪಿ 10.0%, ಗ್ರೀನ್ 9.4%.[೫೯]

ಆರ್ಥಿಕ ಸ್ಥಿತಿ

ಹಣಕಾಸು ತ್ರೈಮಾಸಿದಲ್ಲಿ ಪಾರ್ಕ್ ರೋ

ಈಗ ಸಾಂಪ್ರದಾಯಿಕ ಉತ್ಪಾದಕ ಕೈಗಾರಿಕೆಗಳಲ್ಲಿನ ಹೆಚ್ಚುವರಿಯ ಕಾರಣ ಸೇವಾ ವಲಯದಲ್ಲಿನ ಉದ್ಯೋಗಗಳಿಂದಾಗಿ ಲೀಡ್ಸ್ ವಿವಿಧ ಆರ್ಥಿಕ ಮೂಲವನ್ನು ಹೊಂದಿದೆ., 2002ರಲ್ಲಿ 401,000 ನೌಕರರು ಲೀಡ್ಸ್ ಜಿಲ್ಲೆಯೊಂದರಲ್ಲಿ ನೌಕರಿಗಾಗಿ ಹೆಸರು ನೊಂದಾಯಿಸಿಕೊಂಡಿದ್ದರು. ಇದರಲ್ಲಿ 24.7% ಶೇಕಡಾದಷ್ಟು ಸಾರ್ವಜನಿಕ ಆಡಳಿತ, ಶಿಕ್ಷಣ ಮತ್ತು ಆರೋಗ್ಯ ವಿಭಾಗದಲ್ಲಿದ್ದರೆ, 23.9% ಶೇಕಡಾದಷ್ಟು ಜನರು ಬ್ಯಾಂಕಿಂಗ್, ಹಣಕಾಸು ವಿಭಾಗ ಮತ್ತು ವಿಮಾ ವಿಭಾಗದಲ್ಲಿ ಹಂಚಿಕೆಯಾಗಿದ್ದಾರೆ ಉಳಿದಂತೆ, ಹೊಟೇಲ್ ವಲಯ ಮತ್ತು ಉಪಾಹಾರ ಗೃಹ ವಲಯಗಳಲ್ಲಿ ಹಂಚಿಕೆಯಾಗಿದ್ದಾರೆ.

ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ವಲಯಗಳಲ್ಲಿ ದೇಶ ಮತ್ತು ಉಳಿದ ಪ್ರಾಂತ್ಯಗಳ ಹಣಕಾಸು ರಚನೆಗಿಂತ ಲೀಡ್ಸ್ ನಗರವು ಭಿನ್ನವಾಗಿದೆ.[೬೦] ಈ ಸಿಟಿಯು ಇಂಗ್ಲೆಂಡ್ ಮತ್ತು ಲಂಡನ್ನ ಹೊರಗಡೆಯಲ್ಲಿರುವ ಒಂದು ಅತ್ಯಂತ ದೊಡ್ಡ ಆರ್ಥಿಕ ಕೇಂದ್ರವಾಗಿ ಸ್ಥಾಪಿತಗೊಂಡಿದೆ.[೧೨][೧೬][೬೧][೬೨][೬೩][೬೪] ಮೂರನೇ ಪ್ರಕಾರದ ಕೈಗಾರಿಕೆಗಳಾದ ರೀಟೇಲ್, ಕಾಲ್ ಸೆಂಟರ್ಗಳು ಮತ್ತು ಕಚೇರಿಗಳು ಹಾಗೂ ಮಾಧ್ಯಮ ವಿಭಾಗವು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದ ಕೊಡುಗೆಯನ್ನು ನೀಡುತ್ತವೆ. ಯುನೈಟೆಡ್ ಕಿಂಗ್ಡಮ್ನಲ್ಲಿನ ಬ್ಯಾಂಕ್ ಆಫ್ ಇಂಗ್ಲೆಂಡ್ ಇದೊಂದು ಏಕಮಾತ್ರ ಅಧೀನ ಕಚೇರಿಯಾಗಿದ್ದು ನಗರದ ಆಶ್ರಯದಲ್ಲಿದೆ. 2006 ರಲ್ಲಿ ನಗರದ ಜಿ ವಿ ಎ £16.3 ಪೌಂಡ್ ಬಿಲಿಯನ್[೬೫] ಎಂದು ದಾಖಲು ಮಾಡುವುದರೊಂದಿಗೆ, ಸಂಪೂರ್ಣ ಲೀಡ್ಸ್ ಸಿಟಿ ಪ್ರದೇಶದ ಆರ್ಥಿಕ ವೃದ್ಧಿಯು £46 ಬಿಲಿಯನ್ ಪೌಂಡ್‌ಗಳಷ್ಟು ಉತ್ಪಾದಿಸಿತ್ತು.[೬೬]

ಈ ಲೀಡ್ಸ್ ರೀಟೇಲ್ನ ವಿಸ್ತಾರ ಪ್ರದೇಶವು ಸಂಪೂರ್ಣ ಯಾರ್ಕ್‌ಷೈರ್ ಮತ್ತು ಹಂಬರ್ ಪ್ರಾಂತ್ಯಕ್ಕಾಗಿ ಒಂದು ಪ್ರಮುಖ ಪ್ರಾದೇಶಿಕ ಖರೀದಿ ಕೇಂದ್ರವೆಂದು ಗುರುತಿಸಲಾಗಿದೆಯಲ್ಲದೇ ಸುಮಾರು 3.2 ಮಿಲಿಯನ್ನಷ್ಟು ಜನರು ಇದರ ಆಯಕಟ್ಟಿನ ಸ್ಥಳದಲ್ಲಿ/ಕ್ಯಾಚ್ಮೆಂಟ್ ಏರಿಯಾದಲ್ಲಿ[೬೭] ವಾಸಿಸುತ್ತಾರೆ.ಈ ನಗರದ ಮಧ್ಯಭಾಗದಲ್ಲಿ ಅನೇಕ ಒಳಾಂಗಣ ಖರೀದಿ ಕೇಂದ್ರಗಳು(ಶಾಪಿಂಗ್ ಸೆಂಟರ್) ಇವೆಯಲ್ಲದೇ, ಪ್ರಮುಖವಾದವುಗಳೆಂದರೆ, ಮೆರಿಯನ್ ಸೆಂಟರ್, ಲೀಡ್ಸ್ ಶಾಪಿಂಗ್ ಪ್ಲಾಝಾ, ಸೈಂಟ್ ಜಾನ್ಸ್ ಸೆಂಟರ್, ಹೆಡ್ರೋ ಸೆಂಟರ್, ವಿಕ್ಟೋರಿಯಾ ಕ್ವಾರ್ಟರ್, ದಿ ಲೈಟ್ ಮತ್ತು ಕಾರ್ನ್ ಎಕ್ಸ್ಚೇಂಜ್ ಇತ್ಯಾದಿಗಳಾಗಿವೆ. ಒಟ್ಟಿನಲ್ಲಿ, ಸಂಘಗಳ ಸಂಯೋಜನೆಯಲ್ಲಿ ನೆಲಮಹಡಿ ವಿಭಾಗದಲ್ಲಿ ಸುಮಾರು 1,000 ರೀಟೇಲ್ ಅಂಗಡಿಗಳಿವೆ2,264,100 square feet (210,340 m2).[೬೭] 40,000 ಜನರು ಲೀಡ್ಸ್ ರೀಟೇಲಿಂಗ್ ವಿಭಾಗದಲ್ಲಿ ಕೆಲಸ ಮಾಡುವುದಲ್ಲದೇ, ಶೇಕಡಾ 75% ರಷ್ಟು ಜನರು ಸಿಟಿ ಸೆಂಟರ್ಗಿಂತ ಹೊರತಾಗಿ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಾರೆ. ಇದಲ್ಲದೇ ಇದಕ್ಕೆ ಪೂರಕವಾಗಿ ಅನೇಕ ಖರೀದಿ ಕೇಂದ್ರಗಳು ಇತರ ಅನೇಕ ಗ್ರಾಮೀಣ ಪ್ರದೇಶಗಳಲ್ಲೂ ಸ್ಥಾಪಿತಗೊಂಡಿದ್ದು, ಇದು ಬಾರೋ ನಗರದಲ್ಲಿದ್ದು ಈ ನಗರವು 1974 ರಲ್ಲಿ ಲೀಡ್ಸ್ ನಗರದಲ್ಲಿ ಏಕೀಕರಣಗೊಂಡಿವೆ.[೬೮]

ಕಛೇರಿ ಕಟ್ಟಡಗಳು ಕೂಡ ರೂಢಿಗತವಾಗಿ ಒಳಾಡಳಿತ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟಿದೆಯಲ್ಲದೇ,ಅವುಗಳನ್ನು ಐರ್ ನದಿಯ ದಕ್ಷಿಣ ಭಾಗದಲ್ಲಿರುವ ಒಟ್ಟು11,000,000 square feet (1,000,000 m2) ಸ್ಥಳಾವಕಾಶಗಳಿಗೆ ವಿಸ್ತರಿಸಲಾಗಿದೆ.[೬೭] 1999 ರಿಂದ 2008 ರ ಅವಧಿಯಲ್ಲಿ ಲೀಡ್ಸ್ ನಗರದ ಕೇಂದ್ರಭಾಗದಲ್ಲಿ £2.5 ಪೌಂಡ್ ಬಿಲಿಯನ್‌ಗಳಷ್ಟು ಮೌಲ್ಯದ ಆಸ್ತಿ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳಲ್ಲಿ £711 ಮಿಲಿಯನ್ ಪೌಂಡ್‌ಗಳಷ್ಟು ಕಚೇರಿ ಮೂಲಗಳಿಂದ, £265 ಮಿಲಿಯನ್ ಪೌಂಡ್‌ಗಳಷ್ಟು ರೀಟೇಲ್ ಮೂಲಗಳಿಂದ, £389 ಮಿಲಿಯನ್ ಪೌಂಡ್‌ಗಳಷ್ಟು ವಿಶ್ರಾಂತಿಮೂಲಗಳಲ್ಲಿ(ಮನರಂಜನೆ) ವ್ಯಯಿಸಿದ ಮೂಲಗಳಿಂದ ಮತ್ತು £794 ಮಿಲಿಯನ್ ಪೌಂಡ್‌ಗಳಷ್ಟು ವಸತಿಮೂಲಗಳಿಂದ ಆದಾಯವನ್ನು ಸಂಗ್ರಹಿಸಲಾಗಿದೆ. ಈ ಅವಧಿಯಲ್ಲಿ ಉತ್ಪಾದನೆ ಮತ್ತು ವಿತರಣೆಯಿಂದ £26 ಮಿಲಿಯನ್ನಷ್ಟು ಹೊಸ ಆಸ್ತಿ ಅಭಿವೃದ್ಧಿ ಕೆಲಸದಿಂದ ಆದಾಯ ಗಳಿಸಲಾಗಿದೆ. ಸಿಟಿ ಸೆಂಟರ್ನಲ್ಲಿ 130,100 ಉದ್ಯೋಗಗಳಿದ್ದು, 31% ಶೇಕಡದಷ್ಟು ಎಲ್ಲಾ ರೀತಿಯ ನೌಕರಿಗಳು ಈ ವಿಸ್ತೃತ ಜಿಲ್ಲೆಯಲ್ಲಿ ಲಭ್ಯವಿದೆ. 2007, ರಲ್ಲಿ 47,500 ಉದ್ಯೋಗಗಳು ಹಣಕಾಸು ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಇದ್ದರೆ, 42,300 ಉದ್ಯೋಗಗಳು ಸಾರ್ವಜನಿಕ ಸೇವಾ ವಲಯದಲ್ಲಿ, ಮತ್ತು 19,500 ಉದ್ಯೋಗಗಳು ರೀಟೇಲ್ ಮತ್ತು ವಿತರಣಾ ವಲಯದಲ್ಲಿ ಲಭ್ಯವಾಗಿದ್ದವು. ಲೀಡ್ಸ್ ಸಿಟಿ ಸೆಂಟರ್ನಲ್ಲಿ 43% ಶೇಕಡಾದಷ್ಟು ಹಣಕಾಸು ವಲಯದಲ್ಲಿ ಉದ್ಯೋಗಗಳು ಲಭ್ಯವಾಗಿದ್ದರೆ, ಜನರು ಸಿಟಿ ಸೆಂಟರ್ನಲ್ಲಿ ಕೆಲಸದಲ್ಲಿರುವ 44% ಶೇಕಡದಷ್ಟು ಜನರು ಸಿಟಿ ಸೆಂಟರ್ಗಿಂತ ಸುಮಾರು ಒಂಭತ್ತು ಕಿಲೋಮೀಟರ್ಗಳಿಗಿಂತಲೂ ದೂರದಲ್ಲಿ ವಾಸಿಸುತ್ತಾರೆ.[೬೭] ಲೀಡ್ಸ್ ನಗರದ ಪ್ರವಾಸೋದ್ಯಮವು ಅಲ್ಲಿನ ಪ್ರಮುಖ ಆರ್ಥಿಕ ಮೂಲವಾಗಿದ್ದು, ಲೀಡ್ಸ್ 2009ರಲ್ಲಿ ಯುನೈಟೆಡ್ ಕಿಂಗ್ಡಂನಿಂದ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಇಂಗ್ಲೆಂಡ್‌ನ 8ನೇ ನಗರವಾಗಿದೆಯಲ್ಲದೇ,[೬೯] ಸಾಗರೋತ್ತರ ಪ್ರದೇಶಗಳಿಂದ ಪ್ರವಾಸಿಗರು[೭೦] ಭೇಟಿ ನೀಡಿದ 13ನೇ ನಗರವಾಗಿದೆ.

2011ರ ಜನವರಿಯಲ್ಲಿ ನಗರಗಳಿಗಾಗಿನ ಸೆಂಟರ್ ಫಾರ್ ಸಿಟೀಸ್ ಕೇಂದ್ರವು ಪ್ರಕಟಿಸಿದ ವರದಿಯಲ್ಲಿ “ನೋಡಲೇ ಬೇಕಾದ ನಗರಗಳು“ ಎಂಬ ಪೈಕಿ ಐದು ನಗರಗಳಲ್ಲಿ ಈ ನಗರವೂ ಒಂದು ಎಂದು ಹೆಸರಿಸಲಾಯಿತು.[೭೧] ವರದಿಯ ಪ್ರಕಾರ ಲೀಡ್ಸ್ನಲ್ಲಿ ವಾಸಿಸುವ ಪ್ರತಿಯೊಬ್ಬರು ಕೂಡ ಪ್ರತಿ ವಾರಕ್ಕೆ ಸರಾಸರಿ £471 ಆದಾಯವನ್ನು ಪಡೆಯುವ ಮೂಲಕ ಇದು ರಾಷ್ಟ್ರದಲ್ಲಿ ಹದಿನೇಳನೇ ಸ್ಥಾನದಲ್ಲಿದೆ.[೭೨] 30.9% ಶೇಕಡ ಲೀಡ್ಸ್ ನಗರದಲ್ಲಿ ವಾಸಿಸುವವ ನಾಗರಿಕರು NVQ4+ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಪಡೆದಿರುವುದಕ್ಕೆ [೭೩] ರಾಷ್ಟ್ರದಲ್ಲಿ ಹದಿನೈದನೇ ಸ್ಥಾನ, 2010 ರಲ್ಲಿ 70.4% ಶೇಕಡ ನಿರುದ್ಯೋಗ ಸಮಸ್ಯೆಯ ಮೂಲಕ ರಾಷ್ಟ್ರದಲ್ಲಿ ಇಪ್ಪತ್ತೈದನೇ ಸ್ಥಾನದಲ್ಲಿದೆ, ಆದರೆ ಈ ಲೀಡ್ಸ್ ನಗರವು ರಾಷ್ಟ್ರೀಯ ಉದ್ಯೋಗ ಪ್ರಮಾಣದಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಮೇಲಿನ ಪ್ರಮಾಣವನ್ನು ಹೊಂದುವಲ್ಲಿ ಬ್ರಿಸ್ಟಲ್ನೊಂದಿಗೆ ನಿಲ್ಲುವ ಏಕೈಕ ನಗರವಾಗಿದೆ.[೭೪] ಲಿವರ್ಪೂಲ್ನ -£192 ಮತ್ತು ಗ್ಲಾಸ್ಗೋದ[೭೫] -£175 ರ ಪ್ರಮಾಣದ ತಲಾ ಆದಾಯಕ್ಕೆ ತುಲನೆ ಮಾಡಿದಾಗ, ನಿರೀಕ್ಷಿತ ತಲಾ ಆದಾಯ -£125 ಗಳ ಅಭಿವೃದ್ಧಿ ದರ ಕ್ಷೀಣತೆಯೊಂದಿಗೆ 2014/2015 ರ ಅವಧಿಯ ಹೊತ್ತಿಗೆ ಲೀಡ್ಸ್ ನಗರವು ಅಭಿವೃದ್ಧಿ ದರ ಕ್ಷೀಣತೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರುವ ಪ್ರಮುಖ ನಗರವಾಗಲಿದೆ ಎಂಬುದನ್ನು ತೋರಿಸಿಕೊಟ್ಟಿದೆ.[೭೫]

ಹೆಗ್ಗುರುತುಗಳು

ಮಿಲೆನಿಯಮ್ ಸ್ಕ್ವೇರ್‌ನಲ್ಲಿ ಲೀಡ್ಸ್ ಸಿವಿಕ್ ಹಾಲ್

ಲೀಡ್ಸ್ ನಗರವು ವಿವಿಧ ಸ್ವರೂಪದ ನೈಸರ್ಗಿಕ ಮತ್ತು ಕಟ್ಟಡ ಹೆಗ್ಗುರುತುಗಳನ್ನು ಪ್ರದರ್ಶಿಸುತ್ತದೆ. ನೈಸರ್ಗಿಕ ಹೆಗ್ಗುರುತುಗಳಲ್ಲಿ ಸೇರ್ಪಡೆಗೊಂಡಿರುವ ಅಂತಹ ಸ್ಥಳಗಳೆಂದರೆ ಓಟ್ಲೇ ಚೆವಿನ್ನ ಗ್ರಿಟ್ಸ್ಟೋನ್ ಔಟ್ ಕ್ರಾಪ್ ಮತ್ತು ಫೈರ್ಬರ್ನ್ ಇಂಗ್ಸ್ ಆರ್ ಎಸ್ ಪಿ ಬಿ ರಿಸರ್ವ್ /ರಕ್ಷಿತೋದ್ಯಾನವೂ ಸೇರಿದೆ. ನಗರದ ರೌಂಧೇಯ್ ಮತ್ತು ಟೆಂಪಲ್ ನ್ಯೂಸಾಮ್ನಲ್ಲಿ ರುವ ಉದ್ಯಾನಗಳನ್ನು ಕೌನ್ಸಿಲ್ ಸ್ಥಳೀಯ ತೆರಿಗೆಗಳಿಗಾಗಿ ದೀರ್ಘಾವಧಿಯಿಂದ ತಾನೇ ಉಸ್ತುವಾರಿ ನೋಡಿಕೊಳ್ಳುತ್ತಿತ್ತಲ್ಲದೇ ಸೂಕ್ತವಾಗಿ ನಿರ್ವಹಣೆ ಮಾಡುತ್ತಿತ್ತು. ಲೀಡ್ಸ್ ಸೆಂಟರ್ನ ಮುಕ್ತ ಸ್ಥಳಾವಕಾಶಗಳಾದ ಮಿಲೇನಿಯಮ್ ಸ್ಕ್ವೇರ್, ಲೀಡ್ಸ್ ಸಿಟಿ ಸ್ಕ್ವೇರ್, ಪಾರ್ಕ್ ಸ್ಕ್ವೇರ್ ಮತ್ತು ವಿಕ್ಟೋರಿಯಾ ಗಾರ್ಡನ್ಸ್ಗಳ ಬಳಕೆಗೂ ಹಣ ಸಂಗ್ರಹಿಸುತ್ತಿತ್ತು. ಸೆಂಟ್ರಲ್ ಸಿಟಿಯ ಕೊನೆಯ ವೀಕ್ಷಣಾ ತಾಣವೆಂದರೆ, ವಾರ್ ಮೆಮೋರಿಯಲ್: ಈ ನಗರದ ಉಪನಗರಗಳಲ್ಲಿ 42 ಇತರ ವಾರ್ ಮೆಮೋರಿಯಲ್ಗಳಿವೆಯಲ್ಲದೇ ನಗರಗಳು ಮತ್ತು ಗ್ರಾಮಗಳೂ ಕೂಡ ಇವೆ.[೭೬]

ಮೂಲಭೂತ ನಿರ್ಮಾಣ ಸಂಕೀರ್ಣಗಳ ವಿಷಯಕ್ಕೆ ಬಂದಾಗ ಹೆಮ್ಮೆಯ ಮೂಲ ಗಗನಚುಂಬಿ ಸೌಧಗಳೆಂದರೆ, ಮೋರ್ಲೇ ಟೌನ್ ಹಾಲ್, ಲೀಡ್ಸ್ನಲ್ಲಿರುವ ಮೂರು ಕಟ್ಟಡಗಳೆಂದರೆ, ಲೀಡ್ಸ್ ಟೌನ್ ಹಾಲ್, ಕಾರ್ನ್ ಎಕ್ಸ್ಚೇಂಜ್ ಮತ್ತು ಶಿಲ್ಪಿ ಕಥ್ಬೆರ್ಟ್ ಬ್ರಾಡ್ರಿಕ್ ನಿರ್ಮಿಸಿರುವ ಲೀಡ್ಸ್ ಸಿಟಿ ಮ್ಯೂಸಿಯಂ ಪ್ರಮುಖವಾಗಿವೆ. ಲೀಡ್ಸ್ ಸ್ಕೈಲೈನ್ನಲ್ಲಿ ಆರಂಭಿಕ ಶ್ವೇತ ಭವನಗಳೆಂದರೆ, ಪಾರ್ಕಿನ್ಸನ್ ಲೀಡ್ಸ್ ವಿಶ್ವವಿದ್ಯಾಲಯದ ಕಟ್ಟಡ ಮತ್ತು ತನ್ನ ಅವಳಿ ಶೃಂಗತುದಿಗಳಲ್ಲಿ[೭೭] ಸುವರ್ಣ ಗೂಬೆಗಳಿಂದ ಅಲಂಕೃತಗೊಂಡ ಸಿವಿಕ್ ಹಾಲ್ ಇದು ಪ್ರಮುಖವಾಗಿದೆ. ಆರ್ಮ್ಲೇ ಮಿಲ್ಸ್, ಟವರ್ ವರ್ಕ್ಸ್ಗಳು ಮುಕ್ತ ವಿನ್ಯಾಸ ಮತ್ತು ಈಜಿಪ್ಟಿಯನ್ ವಿನ್ಯಾಸದ ಟವರ್ಗಳಾದರೆ, ದೇವಾಲಯಗಳ ಶಿಲ್ಪಕೆಲಸಗಳು ಸಿಟಿಯ ಹಿಂದಿನ ಕೈಗಾರಿಕಾ ಸಂಸ್ಕೃತಿಯನ್ನು ನೆನಪಿಸುತ್ತವೆ. ಕಿರ್ಕಿಸ್ಟಾಲ್ ಅಬ್ಬಿಯ ಪಾಳು ಸ್ಥಳ ಮತ್ತು ಪಾಳು ಅವಶೇಷಗಳು ಸಿಸ್ಟರ್ಸಿಯನ್ ವಾಸ್ತುಶಿಲ್ಪದ ಸೌಂದರ್ಯ ಮತ್ತು ವೈಭವವನ್ನು ಪ್ರದರ್ಶಿಸುತ್ತವೆ. ಸಿಟಿ ಸೆಂಟರ್ನಲ್ಲಿರುವ ಪ್ರಸಿದ್ಧ ಚರ್ಚ್ಗಳೆಂದರೆ, ಲೀಡ್ಸ್ ಪ್ಯಾರಿಶ್ ಚರ್ಚ್, ಸೈಂಟ್ ಜಾರ್ಜ್ಸ್ ಚರ್ಚ್, ಮತ್ತು ಲೀಡ್ಸ್ ಕೆಥೆಡ್ರಲ್ ಮತ್ತು ಆåಡೆಲ್ ನ ಚರ್ಚ್ ಆಫ್ ಸೈಂಟ್ ಜಾನ್ ಬ್ಯಾಪಿಸ್ಟ್, ಮತ್ತು ಕ್ವಾಯ್ಟೆರ್ ಪ್ರದೇಶದಲ್ಲಿರುವ ಬಾರ್ಡ್ಸೇ ಪ್ಯಾರಿಶ್ ಚರ್ಚ್ ಇವುಗಳು ಪ್ರಮುಖವಾಗಿವೆ. ಟವರ್ ಆಫ್ ಬ್ರಿಡ್ಜ್ವಾಟರ್ ಪ್ಲೇಸ್ನ್ನು ಡೇಲೆಕ್ ಎಂದು ಕೂಡ ಕರೆಯಲಾಗುವುದಲ್ಲದೇ, ಇದು ಪ್ರಮುಖ ಕಚೇರಿ ಮತ್ತು ವಸತಿ ಅಭಿವೃದ್ಧಿಯ ಭಾಗವಾಗಿದೆಯಲ್ಲದೇ, ಆ ಪ್ರಾಂತ್ಯದ ಅತೀ ಎತ್ತರದ ಕಟ್ಟಡವೂ ಕೂಡ ಆಗಿದ್ದು ಅದನ್ನು ಮೈಲುಗಟ್ಟಲೇ ದೂರದಿಂದ[೭೮] ಕೂಡ ಕಾಣಬಹುದು. ಇತರ ಕಟ್ಟಡ ಸಮುಚ್ಛಯ ಗೋಪುರದಲ್ಲಿ ಪ್ರಮುಖವಾದುದೆಂದರೆ, ಸಿಟಿ ಸೆಂಟರ್ನಿಂದ ಉತ್ತರಭಾಗಕ್ಕಿರುವ 37 ಮಹಡಿಗಳಿರುವ ಸ್ಕೈ ಪ್ಲಾಝಾವು ಅತ್ಯಂತ ಎತ್ತರದ ಗೋಪುರವಾಗಿದ್ದು, ಇದು ಬ್ರಿಡ್ಜ್ವಾಟರ್ ಪ್ಲೇಸ್ಗಿಂತಲೂ 105 metres (344 ft) ಎತ್ತರವಾಗಿದೆ.

ಎಲ್ಲಾಂಡ್ ರೋಡ್ (ಫುಟ್ಬಾಲ್) ಮತ್ತು ಹೆಡಿಂಗ್ಲೇ ಸ್ಟೇಡಿಯಂ (ಕ್ರಿಕೆಟ್ ಮತ್ತು ರಗ್ಬಿ) ಇವೆರಡು ಕ್ರೀಡಾಪ್ರೇಮಿಗಳಿಗೆ ಚಿರಪರಿಚಿತವಾಗಿದ್ದು, ವೈಟ್ ರೋಸ್ ಸೆಂಟರ್ ಇದು ಕೂಡ ಒಂದು ರೀಟೇಲ್ ಔಟ್ಲೆಟ್/ಸಗಟು ವ್ಯಾಪಾರ ಕೇಂದ್ರವಾಗಿದೆ.

ದಕ್ಷಿಣ ಭಾಗದಿಂದ ಕಾಣಿಸುವ ಲೀಡ್ಸ್‌ನ ಆಕಾಶದ ಅಂಚು

ಸಾರಿಗೆ

ಲೀಡ್ಸ್ ನಗರವು A62, A63, A64, A65 ಹಾಗೂ A660 ಹೆದ್ದಾರಿಗಳಿಗೆ ಪ್ರಾರಂಭದ ಸ್ಥಳವಾಗಿದೆ, ಹಾಗೂ A58 ಮತ್ತು A61 ರಸ್ತೆಗಳು ಕೂಡಾ ಇಲ್ಲಿಂದಲೇ ಹಾದು ಹೋಗುತ್ತವೆ. M1 ಹಾಗೂ M62 ರಸ್ತೆಗಳು ಇದರ ದಕ್ಷಿಣ ಭಾಗದಲ್ಲಿ ಸೇರುತ್ತವೆ ಹಾಗೂ A1(M) ಪೂರ್ವದಿಂದ ಹಾಯ್ದು ಹೋಗುತ್ತದೆ. ಉತ್ತರದ ಹೆದ್ದಾರಿಗಳ ಸಂಪರ್ಕ ವ್ಯವಸ್ಥೆಯಲ್ಲಿ ಲೀಡ್ಸ್ ಪ್ರಮುಖ ಕೇಂದ್ರವಾಗಿದೆ. ಇದರ ಜೊತೆಗೆ, ಒಂದು ನಗರ ಪ್ರದೇಶದ ಸಂಪರ್ಕ ವ್ಯವಸ್ಥೆಯೂ ಇದೆ; ರೇಡಿಯಲ್ M621 ರಸ್ತೆಯು ಸಂಚಾರವನ್ನು M62 ಮತ್ತು M1ನಿಂದ ಲೀಡ್ಸ್ ಕೇಂದ್ರಭಾಗದವರೆಗೆ ತೆಗೆದುಕೊಂಡು ಹೋಗುತ್ತದೆ. ಒಂದು ಒಳ ವರ್ತುಲ ರಸ್ತೆ ಹಾಗೂ ಒಂದು ಹೊರ ವರ್ತುಲ ರಸ್ತೆಗಳು ಕೂಡಾ ಇವೆ. ನಗರದ ಕೇಂದ್ರದ ಒಂದು ಭಾಗದಲ್ಲಿ[೭೯] ಕಾಲುದಾರಿಗಳನ್ನು ಮಾಡಲಾಗಿದೆ, ಇದು ಬಲಭಾಗದಿಂದ ಸುತ್ತುಹಾಕುವಂತಹ ರಸ್ತೆಗಳಿಂದಾಗಿದೆ .

2002ರಲ್ಲಿ ಪುನರ್ನಿರ್ಮಾಣವಾದ ಲೀಡ್ಸ್ ರೈಲ್ವೇ ಸ್ಟೇಷನ್
ಲೀಡ್ಸ್ ಬ್ರಾಡ್‌ಫೋರ್ಡ್ ಇಂಟರ್ನ್ಯಾಷನಲ್ ಏರ್‌ಪೋರ್ಟ್.

ಪಶ್ಚಿಮ ಯಾರ್ಕ್‌ಷೈರ್ ಮೆಟ್ರೋವು ಲೀಡ್ಸ್ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವ್ರುದ್ಡಿಯನ್ನು ನೋಡಿಕೊಳ್ಳುತ್ತದೆ,[೮೦] ಲೀಡ್ಸ್ ಸಿಟಿ ಕೌನ್ಸಿಲ್ ಹಾಗೂ ಪಶ್ಚಿಮ ಯಾರ್ಕ್ಷೈರ್ ಮೆಟ್ರೋ [೮೧] ಸೇವೆಗಳ ಮಾಹಿತಿಯನ್ನು ನೀಡುತ್ತದೆ. ಲೀಡ್ಸ್‌ ನಗರದ ಪ್ರಾಥಮಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೆಂದರೆ ಬಸ್ ಸೇವೆಗಳು. ಈ ವ್ಯವಸ್ಥೆಯ ಪೂರೈಕೆ ಮಾಡುವವರು ಫರ್ಸ್ಟ್ ಲೀಡ್ಸ್ ಮತ್ತು ಅರೈವಾ ಯಾರ್ಕ್‌ಷೈರ್. ಲೀಡ್ಸ್ ನಗರದಲ್ಲಿ ಉಚಿತ ಬಸ್ ಸೇವೆ ಕೂಡಾ ಇದೆ, ಇದು ಫ್ರೀಸಿಟಿ ಬಸ್ ಸರ್ವಿಸ್. ಲೀಡ್ಸ್ ನಗರದ ಬಸ್ ನಿಲ್ದಾಣವು ಡಯರ್ ರಸ್ತೆಯಲ್ಲಿದೆ ಹಾಗೂ ಯಾರ್ಕ್‌ಷೈರ್‌ ನಗರಗಳಿಗೆ ಹಾಗೂ ಪಟ್ಟಣಗಳಿಗೆ ಬಸ್ ಸೇವೆಗಳನ್ನು ಪೂರೈಸುತ್ತದೆ, ಸ್ಥಳೀಯ ಸೇವೆಗಳನ್ನೂ ಸಹ ಒದಗಿಸುತ್ತದೆ. ಇದರ ಜೊತೆಗೆ ಸೇವೆ ನೀಡುವುದು ನ್ಯಾಷನಲ್ ಎಕ್ಸ್‌ಪ್ರೆಸ್ ಕೋಚ್ ಸರ್ವಿಸಸ್. ನಗರದ ಹೊರಭಾಗಗಳಿಗೆ ಪ್ರಯಾಣಿಸಲು ಸೇವೆ ಪೂರೈಸುವ ಬಸ್‌ಗಳು ಫರ್ಸ್ಟ್‌ಬಸ್ ಮತ್ತು ಅರೈವಾ ಯಾರ್ಕ್‌ಷೈರ್. ಹಾರೊಗೇಟ್ ಮತ್ತು ರಿಪನ್ಗೆ ಹಾರೊಗೇಟ್ & ಡಿಸ್ಟ್ರಿಕ್ಟ್ ಸೇವೆ ಒದಗಿಸುತ್ತದೆ. ಶಿಪ್ಲೇ, ಬಿಂಗ್ಲೇ ಹಾಗೂ ಕೀಲೇಗೆ ಸೇವೆ ಒದಗಿಸುವುದು ಕೀಲೇ & ಡಿಸ್ಟ್ರಿಕ್ಟ್. ಯಾರ್ಕ್‌ಷೈರ್ ಕೋಸ್ಟ್‌ಲೈನರ್ ಸೇವೆಯು ಯಾರ್ಕ್ ಮತ್ತು ಮಾಲ್ಟನ್ ಮೂಲಕ ಬ್ರೈಡ್ಲಿಂಗ್ಟನ್, ಫೈಲೇ, ಸ್ಕಾರ್ಬಾರೋ ಮತ್ತು ವಿಟ್ಬೈಗಳಿಗೆ ವ್ಯವಸ್ಥೆ ರೂಪಿಸಿದೆ. ಸ್ಟೇಜ್‌ಕೋಚ್ ತನ್ನ ಸೇವೆಯನ್ನು ಗೂಲೆ ಮುಖಾಂತರ ಹಲ್ಗೆ ಒದಗಿಸುತ್ತದೆ.

ನ್ಯೂ ಸ್ಟೇಷನ್ ರಸ್ತೆಯಲ್ಲಿರುವ ಲೀಡ್ಸ್ ರೈಲ್ವೇ ಸ್ಟೇಷನ್ನಲ್ಲಿ, ನಾರ್ಥರನ್ ರೈಲ್ನಿಂದ ನಡೆಸಲ್ಪಡುವ ಮೆಟ್ರೋಟ್ರೈನ್‌ಗಲು ಲೀಡ್ಸ್ ನಗರದ ಎಲ್ಲ ಪ್ರದೇಶಗಳಲ್ಲಿಯೂ ಕಾರ್ಯ ನಿರ್ವಹಿಸುತ್ತವೆ.ಲಂಡನ್ ಹೊರತು ಪಡಿಸಿ ಎಲ್ಲಾ ಸ್ಟೇಷನ್‌ಗಳಿಗಿಂತಲೂ ಜನಸಂದಣಿ ಇರುವಂತಹ ಸ್ಟೇಷನ್ ಇದಾಗಿದೆ, ಪ್ರತಿದಿನವೂ ಸುಮಾರು 900 ರೈಲುಗಳಲ್ಲಿ 50,000 ಜನರು ಪ್ರಯಾಣಿಸುತ್ತಾರೆ.[೮೨] ಸ್ಥಳೀಯ ಹಾಗೂ ಪ್ರಾದೇಶಿಕ ಪ್ರದೇಶಗಳಿಗಲ್ಲದೆ ರಾಷ್ಟ್ರೀಯ ಹಗೂ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಇದು ಒದಗಿಸುತ್ತದೆ. ಈ ಸ್ಟೇಷನ್‌ನಲ್ಲಿ 17 ಪ್ಲ್ಯಾಟ್‌ಫಾರ್ಮ್‌ಗಳು ಇವೆ, ಲಂಡನ್ ಹೊರತು ಪಡಿಸಿದರೆ ಇದು ಅತಿ ದೊಡ್ಡ ರೈಲ್ವೇ ನಿಲ್ದಾಣವಾಗಿದೆ.[೮೩]

ಲೀಡ್ಸ್ ಬ್ರಾಡ್‌ಫೋರ್ಡ್ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಈಡನ್ನಿನಲ್ಲಿದೆ , 10 miles (16 km)ನಿಂದ ಸಿಟಿ ಸೆಂಟರ್‌ನ ವಾಯುವ್ಯ ಭಾಗಕ್ಕಿದೆ, ಹಾಗೂ ಯೂರೋಪ್‌ನಿಂದ ಈಜಿಪ್ಟ್, ಪಾಕಿಸ್ತಾನ ಹಾಗೂ ಟರ್ಕಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ವಿಶ್ವದ ಇತರೆ ಭಾಗಗಳಿಗೆ ಲಂಡನ್ ಗ್ಯಾಟ್ವಿಕ್ ಏರ್‌ಪೋರ್ಟ್, ಪ್ಯಾರಿಸ್ ಚಾರ್ಲ್ಸ್ ಡಿ ಗಾಲ್ ಏರ್‌ಪೋರ್ಟ್ ಮತ್ತು ಆಮ್‌ಸ್ಟರ್ಡ್ಯಾಮ್ ಸ್ಕಿಫೋಲ್ ಏರ್‌ಪೋರ್ಟ್ ಮೂಲಕ ಸಂಪರ್ಕ ವ್ಯವಸ್ಥೆಗಳು ಇವೆ.ಲೀಡ್ಸ್‌ನಿಂದ ಮ್ಯಾಂಚೆಸ್ಟರ್ ಏರ್‌ಪೋರ್ಟ್ಗೆ ನೇರ ರೈಲ್ವೇ ಸೇವೆ ಕೂಡಾ ಇದೆ. ಲೀಡ್ಸ್ ಆಗ್ನೇಯ ಭಾಗದಲ್ಲಿ 40 miles (64 km) ರಾಬಿನ್ ಹುಡ್ ಏ‌ರ್‌ಪೋರ್ಟ್ ಡಾನ್ಕ್ಯಾಸ್ಟರ್ ಶೆಫೀಲ್ಡ್ ಇದೆ. ಲೀಡ್ಸ್ ನಗರವು ರಸ್ತೆ, ರೈಲ್ವೇ ಹಾಗೂ ಕೋಚ್‌ಗಳಿಂದ ಹಲ್ಗೆ ಸಂಪರ್ಕವನ್ನು ಹೊಂದಿದೆ, ಒಂದು ಘಂಟೆಯ ದಾರಿ, ಪಿ&ಒ ಫೆರ್ರೀಸ್ನಿಂದ ನಡೆಸಲಾಗುವ ಫೆರ್ರಿ ಸರ್ವಿಸಸ್‌ನಿಂದ ರೋಟರ್ಡ್ಯಾಮ್ ಮತ್ತು ಝೀಬ್ರಗ್ಗಳಿಗೆ ಪ್ರಯಾಣ ಮಾಡಬಹುದು.

ನಡಿಗೆ ಮಾರ್ಗಗಳು

ಲೀಡ್ಸ್ ದೇಶದ ಮಾರ್ಗ ವೇಮಾರ್ಕ್

ಲೀಡ್ಸ್ ಕಂಟ್ರೀ ವೇ ಇದು ಸಿಟಿಯಿಂದ ಗ್ರಾಮೀಣ ಗಡಿರೇಖೆಯ ಮೂಲಕ ವರ್ತುಲವಾಗಿ ನಡೆದುಹೋಗುವ62 miles (100 km) ದಾರಿಯಾಗಿದ್ದು, ಇದು ಸಿಟಿ ಸ್ಕ್ವೇರ್ನಿಂದ ಹೆಚ್ಚು7 miles (11 km) ದೂರವಿಲ್ಲ. ಮೀನ್ವುಡ್ ವ್ಯಾಲಿ ಟ್ರೈಲ್ ವುಡ್ಹೌಸ್ ಮೂರ್ನೊಂದಿಗೆ ಮೀನ್ವುಡ್ ಬೆಕ್‌ನಿಂದ ಗೋಲ್ಡನ್ ಏಕರ್ ಪಾರ್ಕ್ನವರೆಗೆ ದಾರಿ ತೋರಿಸುತ್ತದೆ. ಲೀಡ್ಸ್ನ ಡೇಲ್ಸ್ ವೇ ಬಡಾವಣೆಯು ಮೀನ್ವುಡ್ ವ್ಯಾಲಿ ಟ್ರೈಲ್ಗೆ ಹೊಂದಿಕೊಂಡಿದ್ದು, ಅದು ವಿಭಾಗವಾಗುವ ಮೊದಲು ಇಲ್ಕ್ಲೇ ಮತ್ತು ವಿಂಡರ್ಮೇರ್ನತ್ತ ಸಾಗುತ್ತದೆ. ನಡಿಗೆಗಾರರಿಗೆ ಮತ್ತು ಸೈಕಲ್ ಸವಾರರಿಗಾಗಿ(ಸೈಕ್ಲಿಸ್ಟ್ಗಳಿಗಾಗಿ) ಲೀಡ್ಸ್ನ ಉತ್ತರ ವಲಯದಲ್ಲಿರುವ ಟ್ರಾನ್ಸ್ ಪೆನ್ನಿನ್ ಟ್ರೈಯಲ್ ಸೂಕ್ತವಾಗಿದೆ ಹಾಗೆಯೇ ಲೀಡ್ಸ್ ಮತ್ತು ಲಿವರ್ಪೂಲ್ ಕೆನಾಲ್(ಕಾಲುವೆ) ಇನ್ನೊಂದು ನಡಿಗೆಯ ಸ್ಥಳ ಕೂಡ ನಗರದ ಜನರ ವಿಹಾರ ಸ್ಥಳವಾಗಿದೆ. ಇದಕ್ಕೆ ಪೂರಕವಾಗಿ, ಲೀಡ್ಸ್ನಗರದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅನೇಕ ಉದ್ಯಾನವನಗಳು ಮತ್ತು ಸಾರ್ವಜನಿಕ ವಿಹಾರ ಸ್ಥಳಗಳು ಇವೆಯಲ್ಲದೇ, ರಾå౦ಬ್ಲರ್ಸ್ ಅಸೋಸಿಯೇಷನ್, YHA, ಮತ್ತು ಇತರ ವಿಹಾರ ಸಂಘಗಳು ಅನೇಕ ಸಾರ್ವಜನಿಕ ನಡಿಗೆಗಳನ್ನು ಆಯೋಜಿಸುತ್ತವೆ. ರ್ಯಾಂಬ್ಲರ್ ಅಸೋಸಿಯೇಷನ್ ಲೀಡ್ಸ್ ನಗರದೊಳಗಡೆ ಮತ್ತು ಅದರಸುತ್ತಮುತ್ತ ತಿರುಗಾಡಲು ಅನುಕೂಲವಾಗುವ ನಿಟ್ಟಿನಲ್ಲಿ, ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ.[೮೪]

ಶಿಕ್ಷಣ

ಶಾಲೆಗಳು

ಲೀಡ್ಸ್ ಮೆಟ್ರೋಪಾಲಿಟನ್ ಯೂನಿವರ್ಸಿಟಿ

2001ರ ಜನಗಣತಿಯ ಸಂದರ್ಭದಲ್ಲಿ ಲೀಡ್ಸ್ ನಗರವು 183,000 ಜನಸಂಖ್ಯೆಯನ್ನು ಹೊಂದಿದ್ದು ಇವರೆಲ್ಲರೂ 0–19 ವರ್ಷ ವಯೋಮಾನದವರಾಗಿದ್ದು, ಅವರಲ್ಲಿ 110,000 ಮಕ್ಕಳು ಸ್ಥಳೀಯ ಆಡಳಿತದ ಅಧೀನದಲ್ಲಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.[೮೫] ಲೀಡ್ಸ್ ಸಿಟಿ ಕೌನ್ಸಿಲ್ ಮಾಲೀಕತ್ವದ ಎಜುಕೇಷನ್ ಲೀಡ್ಸ್ ಕಂಪನಿಯು 2008 ರಲ್ಲಿ 220 ಪ್ರಾಥಮಿಕ ಶಾಲೆಗಳು , 39 ಮಾಧ್ಯಮಿಕ ಶಾಲೆಗಳು, ಮತ್ತು ಕಲಿಕೆಯನ್ನೊಳಗೊಂಡ 6 ವಿಶೇಷ ಕಲಿಕಾಕೇಂದ್ರಗಳನ್ನು ಒದಗಿಸಿತ್ತು.[೮೬] ಭವಿಷ್ಯದ ಮುಂದಿನ ಉಪಕ್ರಮಕ್ಕಾಗಿ ಸರ್ಕಾರಿ ಕಟ್ಟಡದ ಶಾಲೆಗಳಿಗಾಗಿ ಅಂದರೆ, 13 ಮಾಧ್ಯಮಿಕ ಶಾಲೆಗಳನ್ನು ಅತೀ ಸುಧಾರಿತ, ಇ- ಸ್ನೇಹಿ ಶಾಲೆಗಳನ್ನಾಗಿ ಪರಿವರ್ತಿಸಲು ಲೀಡ್ಸ್, £260 ಮಿಲಿಯನ್ ಪೌಂಡ್ಗಳಷ್ಟು ಹಣವನ್ನು ಕಾದಿರಿಸಿದೆ. ಇಂತಹ ಮೊದಲ ಮೂರು ಶಾಲೆಗಳೆಂದರೆ, ಆಲ್ಲರ್ಟನ್ ಹೈಸ್ಕೂಲ್, ಪುಡ್ಸೇ ಗ್ರೇಂಜ್ಫೀಲ್ಡ್ ಶಾಲೆ ಮತ್ತು ರೊಡಿಲ್ಲಿಯನ್ ಶಾಲೆ ಆಗಿದ್ದು ಇದು 2008 ರ ಸೆಪ್ಟೆಂಬರ್ನಲ್ಲಿ ತೆರೆಯಲ್ಪಟ್ಟಿತು.[೮೭] ಲೀಡ್ಸ್ ನಗರವು ಜನನ ಪ್ರಮಾಣ ಕುಸಿತವನ್ನು ಕಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಅನೇಕ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಕೆಲವು ಶಾಲೆಗಳನ್ನು ಮುಚ್ಚುವ ನಿಟ್ಟಿನಲ್ಲಿ, ಕೌನ್ಸಿಲ್ ಒತ್ತಡಕ್ಕೆ ಸಿಲುಕಿದೆ. ಲೀಡ್ಸ್ನಲ್ಲಿರುವ ವ್ಯಾಕರಣ(ಗ್ರಾಮರ್) ಶಾಲೆಯು ನಗರದ ಅತೀ ಪುರಾತನ ಮತ್ತು ದೊಡ್ಡ ಖಾಸಗಿ ಶಾಲೆಯಾಗಿದ್ದು, ಇದರೊಂದಿಗೆ 1552 ರಲ್ಲಿ ನಿರ್ಮಿಸಲಾದ ಲೀಡ್ಸ್ ವ್ಯಾಕರಣ ಶಾಲೆ ಮತ್ತು 1857 ರಲ್ಲಿ ನಿರ್ಮಿತವಾದ ಲೀಡ್ಸ್ ಬಾಲಕಿಯರ ಹೈಸ್ಕೂಲ್ ವಿಲೀನಗೊಳಿಸುವ ಮೂಲಕ 2005 ರಲ್ಲಿ ಅಧಿಕೃತವಾಗಿ ಪುನರ್ನಿರ್ಮಿಸಲಾಯಿತು.ಲೀಡ್ಸ್ನಲ್ಲಿರುವ ಇತರ ಸ್ವತಂತ್ರ ಶಾಲೆಗಳಲ್ಲಿ , ಯೆಹೂದಿ[೮೮] ಮತ್ತು ಮುಸ್ಲಿಂ[೮೯] ಸಮುದಾಯಕ್ಕೆ ಸೇವೆಯನ್ನು ನೀಡುತ್ತಿರುವ ಧರ್ಮೀಯ/ಪಂಥೀಯ ಶಾಲೆಗಳೂ ಸೇರಿವೆ.

ನಂತರದ ಹಾಗೂ ಉನ್ನತ ಶಿಕ್ಷಣ

ಪಾರ್ಕಿನ್ಸನ್ ಕಟ್ಟಡ, ಯೂನಿವರ್ಸಿಟಿ ಆಫ್ ಲೀಡ್ಸ್

ನಂತರದ ಶಿಕ್ಷಣವನ್ನು ಒದಗಿಸುವ ಕಾಲೇಜುಗಳು ಲೀಡ್ಸ್ ಸಿಟಿ ಕಾಲೇಜ್ (2009ರಲ್ಲಿ ವಿಲೀನತೆಯಿಂದಾದ ಈ ಕಾಲೇಜು ಸುಮಾರು 60,000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ), ಲೀಡ್ಸ್ ಕಾಲೇಜ್ ಆಫ್ ಬಿಲ್ಡಿಂಗ್, ಮೋರ್ಲೆಯಲ್ಲಿರುವ ಜೋಸೆಫ್ ಪ್ರೀಸ್ಟ್ಲೆ ಕಾಲೇಜ್ ಹಾಗೂ ನೊಟ್ರೆ ಡೇಮ್ ಕ್ಯಾಥೊಲಿಕ್ ಸಿಕ್ಸ್ತ್ ಫಾರ್ಮ್ ಕಾಲೇಜ್. ನಗರವು ಎರಡು ವಿಶ್ವವಿದ್ಯಾನಿಲಯಗಳನ್ನು ಹೊಂದಿದೆ: ಮೊದಲನೆಯದು ಯೂನಿವರ್ಸಿಟಿ ಆಫ್ ಲೀಡ್ಸ್ 1904ರಲ್ಲಿ ಸ್ಥಾಪನೆಯಾಗಿದ್ದು 1874ರಲ್ಲಿ ಯಾರ್ಕ್‌ಷೈರ್ ಕಾಲೇಜ್ ಹಾಗೂ 1831ರ ಲೀಡ್ಸ್ ಸ್ಕೂಲ್ ಆಫ್ ಮೆಡಿಸಿನ್‌ಗಳಿಂದ ಅಭಿವೃದ್ಧಿ ಹೊಂದಿತು, ಹಾಗೂ ಇನ್ನೊಂದು ಲೀಡ್ಸ್ ಮೆಟ್ರೋಪಾಲಿಟನ್ ಯೂನಿವರ್ಸಿಟಿಯು 1992ರಲ್ಲಿ ವಿಶ್ವವಿದ್ಯಾನಿಲಯವಾಯಿತು ಆದರೆ 1824ರ ಮೆಕಾನಿಕ್ಸ್ ಇನ್‌ಸ್ಟಿಟ್ಯೂಟ್ ಇದರ ಮೂಲವಾಗಿದೆ. ಯೂನಿವರ್ಸಿಟಿ ಆಫ್ ಲೀಡ್ಸ್ ಸುಮಾರು 31,000 ವಿದ್ಯಾರ್ಥಿಗಳನ್ನು ಹೊಂದಿದೆ, ಅದರಲ್ಲಿ 21,500 ಜನರು ಪೂರ್ಣ ಅವಧಿಯ ಅಥವಾ ಮಿಶ್ರ ಶಿಕ್ಷಣ ಪದವಿ ಪೂರ್ವ ವಿದ್ಯಾರ್ಥಿಗಳಾಗಿದ್ದಾರೆ,[೯೦] ಲೀಡ್ಸ್ ಮೆಟ್ರೋಪಾಲಿಟನ್ ಯೂನಿವರ್ಸಿಟಿಯು ಒಟ್ಟು 52,000 ವಿದ್ಯಾರ್ಥಿಗಳನ್ನು ಹೊಂದಿದೆ ಅದರಲ್ಲಿ 12,000 ಪೂರ್ಣ ಅವಧಿಯ ಅಥವಾ ಮಿಶ್ರ ಶಿಕ್ಷಣ ಪದವಿ ಪೂರ್ವ ವಿದ್ಯಾರ್ಥಿಗಳಾಗಿದ್ದಾರೆ ಹಾಗೂ 2,100 ಪೂರ್ಣ ಅವಧಿಯ ಅಥವಾ ಮಿಶ್ರ ಶಿಕ್ಷಣ ಎಚ್‌ಎನ್‌ಡಿ ವಿದ್ಯಾರ್ಥಿಗಳಿದ್ದಾರೆ.[೯೧] ಇತರೆ ಉನ್ನತ ಶಿಕ್ಷಣಕ್ಕಾಗಿ ಸ್ಥಾಪಿತವಾದ ಕಾಲೇಜುಗಳು: 3,000 ವಿದ್ಯಾರ್ಥಿಗಳನ್ನು ಹೊಂದಿರುವ ಲೀಡ್ಸ್ ಟ್ರಿನಿಟಿ ಯೂನಿವರ್ಸಿಟಿ ಕಾಲೇಜು,[೯೨] ಲೀಡ್ಸ್ ಕಾಲೇಜ್ ಆಫ್ ಆರ್ಟ್, ಲೀಡ್ಸ್ ಕಾಲೇಜ್ ಆಫ್ ಮ್ಯೂಸಿಕ್ ಹಾಗೂ ನಾರ್ಥರನ್ ಸ್ಕೂಲ್ ಆಫ್ ಕಂಟೆಂಪೊರರಿ ಡ್ಯಾನ್ಸ್. ದಿ ಇಂಡಿಪೆಂಡೆಂಟ್ ವಾರ್ತಾಪತ್ರಿಕೆಯ ಸಮೀಕ್ಷೆಯ ವರದಿ ಪ್ರಕಾರ ನಗರವು ಯುಕೆ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಉತ್ತಮ ಸ್ಥಳವಾಗಿತ್ತು.[೯೩] ಲೀಡ್ಸ್ 250,000 ವಿದ್ಯಾರ್ಥಿಗಳನ್ನು ಹೊಂದಿದ್ದು ಇದು ದೇಶದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಯಾಗಿದೆ .[೯೪]

ಸಂಸ್ಕೃತಿ

ಮಾಧ್ಯಮ

ಬಿಬಿಸಿ ಯಾರ್ಕ್‌ಷೈರ್ ಸ್ಟೂಡಿಯೋಗಳು

ಜಾನ್‌ಸ್ಟನ್ ಪ್ರೆಸ್ ಪಿಎಲ್‍ಸಿ ಒಡೆತನದ ಯಾರ್ಕ್‌ಷೈರ್ ಪೋಸ್ಟ್ ನ್ಯೂಸ್‌ಪೇಪರ್ಸ್ ಲಿಮಿಟೆಡ್ ನಗರದಲ್ಲಿದ್ದು ಯಾರ್ಕ್‌ಷೈರ್ ಪೋಸ್ಟ್ ಎಂಬ ಮುಂಜಾನೆಯ ಪತ್ರಿಕೆಯನ್ನು ಪ್ರಕಟಗೊಳಿಸುತ್ತಿದೆ, ಯಾರ್ಕ್‌ಷೈರ್ ಈವಿನಿಂಗ್ ಪೋಸ್ಟ್ (ವೈಇಪಿ) ಎಂಬುದು ಇಲ್ಲಿನ ಸಂಜೆಯ ಪತ್ರಿಕೆಯಾಗಿದೆ. ವೈಇಪಿಯು ವೆಬ್‌ಸೈಟ್ ಹೊಂದಿದ್ದು ಇದು ಸಮುದಾಯ ಪುಟಗಳ ಶ್ರೇಣಿಯನ್ನು ಹೊಂದಿದ್ದು ನಗರದ ವಿವಿಧ ಭಾಗಗಳತ್ತ ಕೇಂದ್ರೀಕರಿಸುತ್ತದೆ.[೯೫] ಜಿಲ್ಲೆಯ ಈಶಾನ್ಯ ವಿಭಾಗದ ಪ್ರದೇಶಗಳನ್ನು ಮುಖ್ಯವಾಗಿ ಒಳಗೊಳ್ಳುವಂತಹ ವೆದರ್‌ಬೈ ನ್ಯೂಸ್ , ಹಾಗೂ ಇಲ್ಕ್ಲೇಯಲ್ಲಿ ಪ್ರಕಟವಾಗುವಂತಹ ವಾರ್‌ಫೆಡಲ್ & ಏರೆಡೇಲ್ ಅಬ್ಸರ್ವರ್ ಪತ್ರಿಕೆಯು ಈಶಾನ್ಯ ಭಾಗದ ಸುದ್ದಿಯನ್ನು ಪ್ರಕಟಿಸುತ್ತದೆ, ಎರಡೂ ಸಹ ವಾರಪತ್ರಿಕೆಗಳಾಗಿವೆ. ಎರಡೂ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿ ಪತ್ರಿಕೆಗಳನ್ನು ಹೊಂದಿವೆ, ಯೂನಿವರ್ಸಿಟಿ ಆಫ್ ಲೀಡ್ಸ್‌ನಿಂದ ವಾರ ಪತ್ರಿಕೆ ಲೀಡ್ಸ್ ಸ್ಟೂಡೆಂಟ್ ಹಾಗೂ ಲೀಡ್ಸ್ ಮೆಟ್ರೋಪಾಲಿಟನ್ ಯೂನಿವರ್ಸಿಟಿಯಿಂದ ಮಾಸಿಕ ಪತ್ರಿಕೆ ದಿ ಮೆಟ್ . 1997ರಲ್ಲಿ ಆರಂಭವಾದ ದಿ ಲೀಡ್ಸ್ ಗೈಡ್ ಪಾಕ್ಷಿಕ ಪತ್ರಿಕೆಯಾಗಿದೆ. ಯಾರ್ಕ್‌ಷೈರ್‌ ಪೋಸ್ಟ್ ನ್ಯೂಸ್‌ಪೇಪರ್ಸ್‌ನಿಂದ ಲೀಡ್ಸ್ ವೀಕ್ಲಿ ನ್ಯೂಸ್ ಎಂಬುದಾಗಿ ನಾಲ್ಕು ಬೌಗೋಳಿಕ ಆವೃತ್ತಿಗಳಲ್ಲಿ ಪ್ರಕಟವಾಗುವ ಇದು ಪುಕ್ಕಟೆ ಪತ್ರಿಕೆಗಳಾಗಿವೆ ಇವನ್ನು ನಗರದ ಮುಖ್ಯ ಭಾಗಗಳ ಮನೆಗಳಿಗೆ ವಿತರಿಸಲಾಗುತ್ತದೆ,[೯೬] ಹಾಗೂ ಪ್ರಾದೇಶಿಕ ಆವೃತ್ತಿ ಮೆಟ್ರೋ ವನ್ನು ಬಸ್ಸುಗಳು ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ವಿತರಿಸಲಾಗುತ್ತದೆ.

ನಗರದಲ್ಲಿ ಪ್ರಾದೇಶಿಕ ದೂರದರ್ಶನ ಹಾಗೂ ರೇಡಿಯೋ ಕೇಂದ್ರಗಳು ಇವೆ; ಬಿಬಿಸಿ ಟೆಲಿವಿಷನ್ ಹಾಗೂ ಐಟಿವಿ ಎರಡೂ ಸಹ ಪ್ರಾದೇಶಿಕ ಸ್ಟೂಡಿಯೋಗಳನ್ನು ಹೊಂದಿವೆ ಹಾಗೂ ಲೀಡ್ಸ್‌ನಲ್ಲಿ ಪ್ರಸಾರವಾಗುತ್ತವೆ. ಮೊದಲಿಗೆ ಯಾರ್ಕ್‌ಷೈರ್ ಟೆಲಿವಿಷನ್ ಆಗಿದ್ದ ಐಟಿವಿ ಯಾರ್ಕ್‌ಷೈರ್ ಕಿರ್ಕ್‌ಸ್ಟಾಲ್ ರಸ್ತೆಯಲ್ಲಿರುವ ದಿ ಲೀಡ್ಸ್ ಸ್ಟೂಡಿಯೋಸ್ನಿಂದ ಪ್ರಸಾರ ಮಾಡುತ್ತದೆ. ಹಲವಾರು ಸ್ವತಂತ್ರ ಚಲನಚಿತ್ರ ನಿರ್ಮಾಣ ಕಂಪನಿಗಳು ಇವೆ, ಇದರಲ್ಲಿ 1978ರಲ್ಲಿ ಪ್ರಾರಂಭವಾದ ಲಾಭಕ್ಕೋಸ್ಕರ ಕೆಲಸ ಮಾಡದ ಕೋಆಪರೇಟಿವ್ ಲೀಡ್ಸ್ ಅನಿಮೇಶನ್ ವರ್ಕ್‌ಶಾಪ್; ಕಮ್ಯುನಿಟಿ ವೀಡಿಯೊ ನಿರ್ಮಾಣ ಮಾಡುವಂತಹ ವೇರಾ ಮೀಡಿಯಾ ಹಾಗೂ ಹಲವಾರು ಸಣ್ಣ ವಾಣಿಜ್ಯ ನಿರ್ಮಾಣ ಕಂಪನಿಗಳು. ಬಿಬಿಸಿ ರೇಡಿಯೋ ಲೀಡ್ಸ್, ರೇಡಿಯೋ ಏರ್, ಮ್ಯಾಜಿಕ್ 828, ಗ್ಯಾಲಕ್ಸಿ ಯಾರ್ಕ್‌‌ಷೈರ್, ರಿಯಲ್ ರೇಡಿಯೋ ಹಾಗೂ ಯಾರ್ಕ್‌ಷೈರ್ ರೇಡಿಯೋ ಕೇಂದ್ರಗಳು ನಗರದಿಂದ ಪ್ರಸಾರ ಮಾಡುತ್ತವೆ. LSRfm.com ಇದು ಲೀಡ್ಸ್ ಯೂನಿವರ್ಸಿಟಿ ಯೂನಿಯನ್‌ನಲ್ಲಿದೆ, ಹಾಗೂ ನಿಯಮಿತವಾಗಿ ನಗರದ ಸುತ್ತಮುತ್ತಲೂ ಇದು ಪ್ರಸಾರಗೊಳ್ಳುತ್ತದೆ. ಲೀಡ್ಸ್ ನಗರದಲ್ಲಿ ಹಲವಾರು ಸಮುದಾಯಗಳು ತಮ್ಮದೇ ಆದ ಸ್ಥಳೀಯ ರೇಡಿಯೋ ಸ್ಟೇಷನ್‌ಗಳನ್ನು ಹೊಂದಿವೆ, ಅವೆಂದರೆ ಈಸ್ಟ್ ಲೀಡ್ಸ್ ಎಫ್‌ಎಮ್ ಹಾಗೂ ವೆದರ್ಬೈ ಹಾಗೂ ಸುತ್ತಲಿನ ಪ್ರದೇಶಗಳಿಗಾಗಿ ಟೆಂಪೋ ಎಫ್‌ಎಮ್. ಲೀಡ್ಸ್ ನಗರವು ಖಾಸಗಿ ಒಡೆತನದ ದೂರದರ್ಶನ ಕೇಂದ್ರವನ್ನು ಹೊಂದಿದೆ: ಸ್ವಯಂ ಸೇವಕರಿಂಡ ನಡೆಸಲ್ಪಡುವ ಕೇಂದ್ರ ಲೀಡ್ಸ್ ಟೆಲಿವಿಷನ್ Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಮಾಧ್ಯಮಗಳ ವೃತ್ತಿಪರರು ಸಹಾಯ ಹಸ್ತ ನೀಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ವಸ್ತು ಸಂಗ್ರಹಾಲಯಗಳು

ಲೀಡ್ಸ್ ಸಿಟಿ ಮ್ಯೂಸಿಯಂ
ಥ್ಯಾಕ್ರೇ ಮ್ಯೂಸಿಯಂ

ಮಿಲ್ಲೆನಿಯಮ್ ಸ್ಕ್ವೇರ್ನಲ್ಲಿ ಒಂದು ಹೊಸ ಲೀಡ್ಸ್ ಸಿಟಿ ಮ್ಯೂಸಿಯಂ 2008ರಲ್ಲಿ [೯೭] ಪ್ರಾರಂಭವಾಯಿತು. ಮೊದಲ ಗೇಟ್‌ಹೌಸ್ ಕಿರ್ಕ್‌ಸ್ಟಾಲ್ ಅಬ್ಬೇನಲ್ಲಿರುವುದು ಅಬ್ಬೇ ಹೌಸ್ ಮ್ಯೂಸಿಯಂ, ಇದರಲ್ಲಿ ಅಬ್ಬೇಯ ಇತಿಹಾಸ ಬಾಲ್ಯ ಹಾಗೂ ವಿಕ್ಟೋರಿಯನ್ ಲೀಡ್ಸ್‌ಗಳನ್ನು ವಿವರಿಸುವಂತಹ ಗ್ಯಾಲರಿಗಳಿವೆ ಹಾಗೂ ವಿಕ್ಟೋರಿಯನ್ ರಸ್ತೆಗಳಲ್ಲಿ ನಡೆದಾಡಿದಂತಹ ಅನುಭವ ಇಲ್ಲಿ ಆಗುತ್ತದೆ. ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ಉಣ್ಣೆ ಅಂಗಡಿಯಾಗಿದ್ದ ಸ್ಥಳದಲ್ಲಿ ಆರ್ಮ್ಲೇ ಮಿಲ್ಸ್ ಇಂಡಸ್ಟ್ರಿಯನ್ ಮ್ಯೂಸಿಯಂ ಇದೆ,[೯೮] ಹಾಗೂ ಇದರಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ರೈಲ್ವೇಗೆ ಸಂಬಂಧಿಸಿದ ವಸ್ತುಗಳೂ ಇವೆ. 1988ರಲ್ಲಿ ಲೂಯಿಸ್ ಲೆ ಪ್ರಿನ್ಸ್ ತೆಗೆದಂತಹ ರೌಂದೇ ಗಾರ್ಡನ್ ದೃಶ್ಯ ಹಾಗೂ ಲೀಡ್ಸ್ ಬ್ರಿಡ್ಜ್‌ ನ ಚಲಿಸುವಂತಹ ಫೋಟೊಗಳು ವಿಶ್ವದಲ್ಲಿಯೇ ಮೊದಲಬಾರಿಗೆ ಇಲ್ಲಿ ಪ್ರದರ್ಶಿತವಾಗಿವೆ. ಸಿಟಿ ಸೆಂಟರ್‌ನ ಪೂರ್ವದಲ್ಲಿರುವ ಐರ್ ನದಿಯ ಮೇಲಿರುವ 1820ರ ದಶಕದ ಜಲ-ಚಾಲಿತ ಮಿಲ್‌ನ ಪುನರ್ ಸ್ಥಾಪಿಸಲಾದ ಥ್ವೇಟ್ ಮಿಲ್ಸ್ ವಾಟರ್‌ಮಿಲ್ ಮ್ಯೂಸಿಯಂ. ಔಷದಗಳ ಇತಿಹಾಸವನ್ನು ಬಿಂಬಿಸುವ ವಸ್ತುಸಂಗ್ರಹಾಲಯವೆಂದರೆ ಥ್ಯಾಕ್ರೇ ಮ್ಯೂಸಿಯಂ, ಇಲ್ಲಿ ವಿಕ್ಟೋರಿಯನ್ ಸಾರ್ವಜನಿಕರ ಆರೋಗ್ಯ, ಮತ್ತುಬರಿಸುವ ಮೊದಲೆ ಶಸ್ತ್ರಕ್ರಿಯೆ, ಹಾಗೂ ಮಗುವಿನ ಜನನದ ಸುರಕ್ಷತೆಗಳ ವಿಷಯಗಳನ್ನು ವರ್ಣಿಸುವಂತೆ ಇಲ್ಲಿ ಚಿತ್ರಿಸಲಾಗಿದೆ. ಇದು ಸೇಂಟ್ ಜೇಮ್ಸ್ ಹಾಸ್ಪಿಟಲ್‌ನ ಬಳಿ ಮೊದಲಿಗೆ ಅನಾಥಾಲಯವಿದ್ದ ಕಟ್ಟಡದಲ್ಲಿ ಇದೆ. 1996ರಲ್ಲಿ ಒಂದು ಆಧುನಿಕ ಕಟ್ಟಡದಲ್ಲಿ ಪ್ರಾರಂಭವಾದ ರಾಯಲ್ ಆರ್ಮೌರೀಸ್ ಮ್ಯೂಸಿಯಂ ನಲ್ಲಿ ರಾಷ್ಟ್ರೀಯ ಸಂಗ್ರಹಗಳನ್ನು ಟವರ್ ಆಫ್ ಲಂಡನ್‌ನಿಂದ ವರ್ಗಾಯಿಸಿಕೊಳ್ಳಲಾಗಿದೆ. ಲೀಡ್ಸ್ ಆರ್ಟ್ ಗ್ಯಾಲರಿಯು ಜೂನ್ 2007ರಲ್ಲಿ ಪುನಃ ಆರಂಭವಾಯಿತು ಹಾಗೂ ಇದರಲ್ಲಿ ಬ್ರಿಟಿಷ್ ಸಮಕಾಲೀನ ಹಾಗೂ ಸಾಂಪ್ರದಾಯಿಕ ಕಲೆಯ ಪ್ರಮುಖ ಸಂಗ್ರಹಗಳು ಇಲ್ಲಿವೆ. ಲೀಡ್ಸ್ ನಗರದಲ್ಲಿರುವ ಚಿಕ್ಕ ವಸ್ತುಸಂಗ್ರಹಾಲಯಗಳೆಂದರೆ ಓಟ್ಲೇ ಮ್ಯೂಸಿಯಂ, ಹಾರ್ಸ್‌ಫೋರ್ತ್ ವಿಲೇಜ್ ಮ್ಯೂಸಿಯಂ,[೯೯] ಯೂನಿವರ್ಸಿಟಿ ಆಫ್ ಲೀಡ್ಸ್ ಟೆಕ್ಸ್‌ಟೈಲ್ಸ್ ಆರ್ಕೈವ್ (ಯುಎಲ್‌ಐಟಿಎ),[೧೦೦] ಹಾಗೂ ಫುಲ್ನೆಕ್ ಮೊರವಿಯನ್ ಸೆಟಲ್ಮೆಂಟ್ನಲ್ಲಿರುವ ಸಂಗ್ರಹಾಲಯ.

ಸಂಗೀತ, ರಂಗಭೂಮಿ ಹಾಗೂ ನೃತ್ಯ

ಲೀಡ್ಸ್ ನಗರವು ಒಪೆರಾ ನಾರ್ತ್ ಇರುವಲ್ಲಿಯೇ ಗ್ರ್ಯಾಂಡ್ ಥಿಯೇಟರ್ ಅನ್ನು ಹೊಂದಿದೆ, ಚಾರ್ಲೀ ಚಾಪ್ಲಿನ್ ಹಾಗೂ ಹ್ಯಾರೀ ಹೌದಿನಿಯಂತಹವರುಗಳ ಪ್ರದರ್ಶನಗಳನ್ನು ನೀಡಿದ ಸಿಟಿ ವೆರೈಟೀಸ್ ಸಂಗೀತ ಮಂದಿರ, ಇಲ್ಲಿ ಬಿಬಿಸಿ ಟೆಲಿವಿಷನ್‌ನ ಕಾರ್ಯಕ್ರಮ ದಿ ಗುಡ್ ಓಲ್ಡ್ ಡೇಸ್ ಕೂಡಾ ನಡೆದಿದೆ, ಹಾಗೂ ಇನ್ನೊಂದು ವೆಸ್ಟ್ ಯಾರ್ಕ್‌ಷೈರ್ ಪ್ಲೇಹೌಸ್.[೧೦೧][೧೦೨][೧೦೩]

ಲೀಡ್ಸ್‌ನಲ್ಲಿ 1981ರಲ್ಲಿ ಹೇರ್‍ಹಿಲ್ಸ್ ಪ್ರದೇಶದಲ್ಲಿ ಸ್ಥಾಪಿತವಾದ ಫೋನಿಕ್ಸ್ ಡ್ಯಾನ್ಸ್ ಥಿಯೇಟರ್ ಕೂಡಾ ಇದೆ, ಹಾಗೂ ನಾರ್ಥರನ್ ಬ್ಯಾಲೆ ಥಿಯೇಟರ್.[೧೦೪] 2010ರ ಶರತ್ಕಾಲದಲ್ಲಿ ಎರಡು ಕಂಪನಿಗಳು ಒಂದು ನೃತ್ಯ ಕೇಂದ್ರವನ್ನು ರೂಪಿಸುವ ಯೋಜನೆ ಹೊಂದಿದ್ದವು, ಅದು ಲಂಡನ್ ಹೊರತು ಪಡಿಸಿ ಅತಿ ದೊಡ್ಡ ನೃತ್ಯ ಕೇಂದ್ರವಾಗಲಿದೆ. ಇಲ್ಲಿ ರಾಷ್ಟ್ರದ ಶಾಸ್ತ್ರೀಯ ನೃತ್ಯ ಹಾಗೂ ರಾಷ್ಟ್ರದ ಸಮಕಾಲೀನ ನೃತ್ಯಗಳನ್ನು ಒಂದೆಡೆ ಕಲಿಸಲಾಗುತ್ತದೆ.[೧೦೫]

ಲೀಡ್ಸ್ ನಗರದ ಜನಪ್ರಿಯ ಸಂಗೀತ ಪ್ರದರ್ಶನಗಳೆಂದರೆ ದಿ ವೆಡ್ಡಿಂಗ್ ಪ್ರೆಸೆಂಟ್, ಸಾಫ್ಟ್ ಸೆಲ್, ದಿ ಸನ್‌ಶೈನ್ ಅಂಡರ್‌ಗ್ರೌಂಡ್, ದಿ ಸಿಸ್ಟರ್ಸ್ ಆಫ್ ಮರ್ಸಿ, ಹಡೌಕೆನ್!, ಕೇಸರ್ ಚೀಫ್ಸ್, ಗ್ಯಾಂಗ್ ಆಫ್ ಫೋರ್, ದಿ ರಿಥಮ್ ಸಿಸ್ಟರ್ಸ್, ಹಾಗೂ ಮೆಲನೀ ಬಿ, ಸ್ಪೈಸ್ ಗರ್ಲ್ಸ್.[೧೦೬][೧೦೭][೧೦೮][೧೦೯][೧೧೦][೧೧೧]

ಉತ್ಸವಗಳು ಮತ್ತು ಹಬ್ಬಗಳು

ಲೀಡ್ಸ್ ಕಾರ್ನಿವಾಲ್ ಮೆರವಣಿಗೆ

ಲೀಡ್ಸ್ ಉತ್ಸವ ಪಾಶ್ಚಿಮಾತ್ಯ ಯುರೋಪಿನ ಅತ್ಯಂತ ಪುರಾತನ ಪಶ್ಚಿಮ ಭಾರತೀಯ ಉತ್ಸವ, ಮತ್ತು ಯುಕೆನ ನಥಿಂಗ್ ಹಿಲ್ ಉತ್ಸವ ನಂತರದ ಎರಡನೆಯ ದೊಡ್ಡ ಉತ್ಸವವಾಗಿದೆ.[೧೧೨][೧೧೩] ಇದು ಚಾಪೆಲ್‌ಪಟ್ಟಣ ಮತ್ತು ಹರೆಹಿಲ್ಸ್‌ನ ಬೀದಿಗಳಲ್ಲಿ ಸುಮಾರು 3 ದಿನಗಳ ವರೆಗೂ ಸುಮಾರು 100,000 ಜನರನ್ನು ಆಕರ್ಷಿಸುತ್ತದೆ. ಅತೀ ದೊಡ್ಡ ಮೆರವಣಿಗೆಯು ಮುಂದೆ ಸಾಗುತ್ತಾ ಹೋಗಿ, ಮಳಿಗೆಗಳು, ಮನರಂಜನೆ ಮತ್ತು ಉಪಹಾರ ಗೃಹಗಳನ್ನು ಹೊಂದಿದ್ದ, ಪೋಟೆರ್‌ನ್ಯೂವ್‌ಟನ್ ಪಾರ್ಕ್ ಹತ್ತಿರ ಮುಗಿಯುತ್ತದೆ. ಲೀಡ್ಸ್ ಹಬ್ಬ, ಪ್ರತೀ ವರ್ಷ ಬ್ರಂಹಮ್ ಪಾರ್ಕ್‌ನಲ್ಲಿ ನಡೆಯುವ ರಾಕ್ ಮತ್ತು ಇನ್‌ಡೈ ಸಂಗೀತಗಳಲ್ಲಿ, ಕೆಲವು ಅತೀದೊಡ್ಡ ಹೆಸರುಗಳ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಮುಂಚೆ ಲೀಡ್ಸ್ ಮೇಳ ಆಗಿದ್ದ, ಲೀಡ್ಸ್ ಏಷಿಯಾ ಹಬ್ಬವನ್ನು ರವುಂದಯ್ ಪಾರ್ಕ್‌ನಲ್ಲಿ ಆಚರಿಸಲಾಗುತ್ತದೆ.[೧೧೪] ಓಟ್ಲೆ ಜಾನಪದ ಹಬ್ಬ (ಪ್ರೋತ್ಸಾಹ: ನಿಕ್ ಜೋನ್ಸ್),[೧೧೫] ವಾಕಿಂಗ್ ಹಬ್ಬ,[೧೧೬] ಉತ್ಸವ[೧೧೭] ಮತ್ತು ವಿಕ್ಟೋರಿಯನ್ ಕ್ರಿಸ್ಟ್‌ಮಸ್ ಪೈರೆ[೧೧೮] ಗಳು ವಾರ್ಷಿಕ ಉತ್ಸವಗಳು. ಲೈಟ್ ನೈಟ್(ಬೆಳಕಿನ ರಾತ್ರಿ) ಲೀಡ್ಸ್ ಪ್ರತಿ ಅಕ್ಟೋಬರ್‌ನಲ್ಲಿ ನಡೆಯುತ್ತದೆ,[೧೧೯] ಮತ್ತು ಸೆಪ್ಟೆಂಬರ್‌ನಲ್ಲಿ ಹೆರಿಟೇಜ್ ಓಪೆನ್ ಡೇಸ್‌ಗಾಗಿ ನಗರದಲ್ಲಿ ಅನೇಕ ವೇದಿಕೆಗಳನ್ನು ಸಾರ್ವಜನಿಕರಿಗಾಗಿ ತೆರೆಯಲಾಗುತ್ತದೆ.[೧೨೦] ಲೀಡ್ಸ್ ಅಂತಾರಾಷ್ಟ್ರೀಯ ಪಿಯಾನೊಫೋರ್ಟ್ ಸ್ಪರ್ಧೆಯನ್ನು, 1963ರಲ್ಲಿ ಫನ್ನಿ ವಾಟರ್‌ಮ್ಯಾನ್ ಮತ್ತು ಮಾರಿಯನ್ ಸ್ಟೈನ್‌ವರರಿಂದ ಪ್ರತಿಪಾಲಿಸಲಾಗಿದ್ದು, 1963ರಿಂದ ನಗರದಲ್ಲಿ ಇದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದ್ದು, ಇದು ಅನೇಕ ಪ್ರಮುಖ ಗಾನಗೋಷ್ಠಿ ಪಿಯಾನೋ ವಾದಕರ ವೃತ್ತಿಜೀವನದ ಆರಂಭಕ್ಕೆ ಕಾರಣವಾಗಿದೆ. ಲೀಡ್ಸ್ ಟೌವ್ನ್ ಹಾಲ್‌ನಲ್ಲಿ ವಾದ್ಯವೃಂದದ ಮತ್ತು ಚೋರಲ್ (ಮೇಳದಲ್ಲಿ ಹಾಡುವ) ಗಾನಗೋಷ್ಠಿಗಳನ್ನು ಮತ್ತು ಇತರ ಕಾರ್ಯಕ್ರಮಗಳನ್ನು ಒಳಗೊಂಡ, ಲೀಡ್ಸ್ ಅಂತಾರಾಷ್ಟ್ರೀಯ ಗಾನಗೋಷ್ಠಿ ಸೀಸನ್, ಯುಕೆನಲ್ಲಿ ನಡೆಯುವ ಅತೀ ದೊಡ್ಡ ಸ್ಥಳೀಯ ಪ್ರಾಧಿಕಾರ ಸಂಗೀತ ಕಾರ್ಯಕ್ರಮವಾಗಿದೆ.[೧೨೧]

ಲೀಡ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಲಂಡನ್ನಿನ ಹೊರಗೆ ಇಂಗ್ಲೆಂಡ್‌ನಲ್ಲಿ ನಡೆಯುವ ಅತೀ ದೊಡ್ಡ ಚಲನಚಿತ್ರ ಉತ್ಸವವಾಗಿದೆ[೧೨೨] ಮತ್ತು ಇದು ಪ್ರಪಂಚದ ಎಲ್ಲೆಡೆಯಿಂದ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದು ಮಕ್ಕಳಿಗಾಗಿ ಮತ್ತು ಯುವಜನರಿಗಾಗಿ ಮಾಡಿದ ಹಾಗು ಅವರಿಂದಲೇ ಮಾಡಲ್ಪಟ್ಟು, ಪ್ರಸ್ತುತ ಚಾಲನೆಯಲ್ಲಿರುವ ಮತ್ತು ನವೀನತೆಯನ್ನು ಹೊಂದಿದ ಎರಡು ರೀತಿಯ ಚಿತ್ರಗಳ ವೈಶಿಷ್ಟ್ಯತೆಯನ್ನು ಹೊಂದಿದ್ದು, ಅತ್ಯುತ್ತಮ ಸಾಧನೆಯನ್ನು ಕಂಡ ಲೀಡ್ಸ್ ಯುವಜನರ ಚಲನಚಿತ್ರೋತ್ಸವವನ್ನು ಸಹ ಸುಸಂಘಟಿಸುತ್ತದೆ.[೧೨೩] 2005ರಿಂದ ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತಿದ್ದ, ಹದಿನೈದು ದಿನಗಳ ದೀರ್ಘ ಕಾಲದ ಹಬ್ಬ ಗರ್‌ಫೋರ್ತ್ ಆರ್ಟ್ಸ್ ಫೆಸ್ಟಿವಲ್‌ನ ಅಥಿದೇಯ (ನಿರ್ವಾಹಕ)ರು ಗರ್‌ಫೋರ್ತ್. ಲೀಡ್ಸ್ ಫೆಸ್ಟಿವಲ್ ಪ್ರಿಂಜೆ ಅನ್ನುವುದು 2010ರಲ್ಲಿ ರಚಿಸಲಾಗಿದ್ದ, ಒಂದು ವಾರ ದೀರ್ಘದ ಸಂಗೀತ ಹಬ್ಬವಾಗಿದೆ, ಲೀಡ್ಸ್ ಹಬ್ಬಕ್ಕೆ ಒಂದು ವಾರ ಮೊದಲೇ ಸ್ಥಳೀಯ ಪ್ರತಿಭೆಗಳನ್ನು ಪ್ರದರ್ಶಿಸಲು ಇದನ್ನು ಆರಂಭಿಸಲಾಗಿದೆ.

ರಾತ್ರಿ ಜೀವನ

ಕ್ಲಾರೆನ್ಸ್ ಡಾಕ್ ಹಲವು ಹೊಸ ಉಪಾಹಾರ ಗೃಹ ಹಾಗೂ ಬಾರ್‌ಗಳನ್ನು ಹೊಂದಿದೆ.

ಲೀಡ್ಸ್ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಧಿಗಳನ್ನು ಹೊಂದಿದ್ದು, ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಬ್‌ಗಳನ್ನು, ಬಾರ್‌ಗಳನ್ನು, ರಾತ್ರಿಕ್ಲಬ್‌ಗಳನ್ನು ಮತ್ತು ಉಪಹಾರಗೃಹಗಳನ್ನು, ಹಾಗು ಬಹುಸಂಖ್ಯೆಯ ನೇರ ಸಂಗೀತ ವೇದಿಕೆಗಳನ್ನು ಹೊಂದಲು ಕಾರಣವಾಗಿದೆ. ಪೂರ್ಣ ಶ್ರೇಣಿಯ ಸಂಗೀತ ಅಭಿರುಚಿಯನ್ನು ಲೀಡ್ಸ್‌ನಲ್ಲಿ ಒದಗಿಸಲಾಗಿದೆ. ಇದು ಕ್ಲಬ್ ನೈಟ್ಸ್‌ ಬ್ಯಾಕ್ 2 ಬೇಸಿಕ್ಸ್‌ನ ಮೂಲ ತಾಣ ಮತ್ತು ಸ್ಪೀಡ್‌ಕ್ವೀನ್‌ಗಳನ್ನು ಒಳಗೊಂಡಿದೆ.[೧೨೪] ಮೋರ್ಲೆ ಟೆಕ್ನೊ ಕ್ಲಬ್ ಆರ್ಬಿಟ್ ತಾಣವಾಗಿದೆ.[೧೨೫] ಲೀಡ್ಸ್ ಬಹುಸಂಖ್ಯೆಯ ದೊಡ್ಡದಾದ ’ಸೂಪರ್-ಕ್ಲಬ್‌ಗಳನ್ನು’ ಹೊಂದಿದೆ ಮತ್ತು ಅಲ್ಲಿ ಅನಿರ್ಬಂಧಿತ ಕ್ಲಬ್‌ಗಳ ಆಯ್ಕೆಯನ್ನು ಸಹ ಮಾಡಬಹುದಾಗಿದೆ.

ಲೀಡ್ಸ್ ಅತ್ಯುತ್ತಮವಾಗಿ ಸ್ಥಾಪಿಸಲ್ಪಟ್ಟ ಉಲ್ಲಾಸಭರಿತ ರಾತ್ರಿಜೀವನ ದೃಶ್ಯವನ್ನು ಹೊಂದಿದೆ. ಕಾಲ್ ಲೇನ್‌ನಲ್ಲಿರುವ, ಬ್ರಿಡ್ಜ್ ಇನ್ ಮತ್ತು ನ್ಯೂ ಪೆನ್ನಿ ಎರಡೂ ತುಂಬಿತುಳುಕುವ ಉಲ್ಲಾಸಭರಿತ ರಾತ್ರಿ ತಾಣಗಳನ್ನು ಹೊಂದಿವೆ.[೧೨೬]

ಮಿಲ್ಲೇನಿಯಮ್ ಸ್ಕ್ವಯರ್ ಮತ್ತು ಸಿವಿಕ್ ಅಥವಾ ನಾರ್ಥೆರ್ನ್ ಕ್ವಾರ್ಟೆರ್ ಕಡೆಗೆ, ಮನರಂಜನಾ ಕಂಪಣ ಬೆಳೆಯುತ್ತಿದ್ದು, ಇದು ವಿದ್ಯಾರ್ಧಿಗಳು ಮತ್ತು ವಾರಾಂತ್ಯದ ಸಂದರ್ಶಿಗಳು ಇಬ್ಬರಿಗೂ ಮನರಂಜನೆಯನ್ನು ಒದಗಿಸುವಂತಹದ್ದಾಗಿದೆ. ಸ್ಕ್ವಯರ್ ಅನೇಕ ಬಾರ್‌‌ಗಳನ್ನು ಮತ್ತು ಉಪಹಾರಗೃಹಗಳನ್ನು ಮತ್ತು ಸಿವಿಕ್ ಥಿಯೇಟರ್ ಬದಿಗೆ ಇರುವ ದೊಡ್ಡದಾದ ಹೊರಾಂಗಣ ತೆರೆಯನ್ನು ಹೊಂದಿದೆ. ಮಿಲ್ಲೇನಿಯಮ್ ಸ್ಕ್ವಯರ್, ಕ್ರಿಸ್ಟ್‌ಮಸ್ ಮಾರ್ಕೆಟ್, ಗಿಗ್ಸ್ ಮತ್ತು ಗಾನಗೋಷ್ಠಿಗಳು, ಸಿಟಿವೈಡ್ ಔತಣಗಳು ಮತ್ತು ರಿಥಮ್ಸ್ ಆಫ್ ದಿ ಸಿಟಿಯಂತಹ ದೊಡ್ದದಾದ ಆಯಾಕಾಲದ ಪ್ರಸಂಗಗಳ ವೇದಿಕೆಯಾಗಿದೆ. ಇದು 2001ರಲ್ಲಿ ನೆಲ್ಸನ್ ಮಂಡೆಲರವರಿಂದ ಉದ್ಘಾತನೆ ಮಾಡಲಾದ ಮಂಡೆಲ ಗಾರ್ಡನ್‌‌ನ ಪಕ್ಕದಲ್ಲಿದೆ. ಅನೇಕ ಸಂಖ್ಯೆಯ ಸಾರ್ವಜನಿಕ ಕಲಾ ವೈಶಿಷ್ಟ್ಯತೆಗಳು, ಕಾರಂಜಿಗಳು, ಕಾಲುವೆ ಮತ್ತು ಹಚ್ಚಹಸಿರನ್ನು ಇಲ್ಲಿ ನಗರದ ಮಧ್ಯಭಾಗದ ಪ್ರಚೋದನೆಗಳ ನಡುವಿನ ಒಯಾಸಿಸ್‌ಗಳಂತೆ ಕಾಣಬಹುದಾಗಿದೆ.

ಕ್ರೀಡೆಗಳು

ಎಲ್ಲಂಡ್ ರೋಡ್ ಸ್ಟೇಡಿಯಂ

ನಗರವು ಪ್ರಮುಖ ರಾಷ್ಟ್ರೀಯ ಆಟಗಳ ತಂಡಗಳನ್ನು ಹೊಂದಿದೆ. ಲೀಡ್ಸ್ ಯುನೈಟೆಡ್ ಎ.ಎಫ್.ಸಿ.ಯು ನಗರದ ಪ್ರಮುಖ ಫುಟ್ಬಾಲ್ ಕ್ಲಬ್ ಆಗಿದೆ. ಲೀಡ್ಸ್ ರೈನೋಸ್ (ರಗ್ಬಿ ಲೀಗ್), ಲೀಡ್ಸ್ ಕಾರ್ನೆಜೀ (ರಗ್ಬಿ ಯೂನಿಯನ್) ಹಾಗೂ ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ಗಳು ಕೂಡಾ ನಗರದಲ್ಲಿವೆ. 1919ರಲ್ಲಿ ಸ್ಥಾಪಿತವಾದ ಲೀಡ್ಸ್ ಯುನೈಟೆಡ್ ಬೀಸ್ಟನ್‌ನ 40,000 ಜನರು ಕುಳಿತುಕೊಳ್ಳುವಂತಹ ಎಲ್ಲಂಡ್ ರೋಡ್‌ನಲ್ಲಿ ಆಡುತ್ತದೆ in . ತಂಡವು ದಿ ಚಾಂಪಿಯನ್ಷಿಪ್ನಲ್ಲಿ ಆಡುತ್ತದೆ - ಇಂಗ್ಲಿಷ್ ಫುಟ್ಬಾಲ್‌ನ ಎರಡನೆಯ ವರಸೆ.

ಹೆಡಿಂಗ್ಲೇ ಸ್ಟೇಡಿಯಂ‌ನ ಹತ್ತಿರ ನ್ಯೂ ಕಾರ್ನೆಜೀ ಸ್ಟ್ಯಾಂಡ್ (ರಗ್ಬಿ)

ಲೀಡ್ಸ್ ರೈನೋಸ್ ತಂಡವು ಲೀಡ್ಸ್ ನಗರದ ಅತ್ಯಂತ ಯಶಸ್ವೀ ರಗ್ಬೀ ಲೀಗ್ ತಂಡವಾಗಿದೆ. 2009ರಲ್ಲಿ ಇದು ಸೂಪರ್ ಲೀಗ್ನ ಮೊದಲ ಕ್ಲಬ್ ಆಯಿತು.[೧೨೭] ಇವರು ಆಟವನ್ನು ಹೆಡಿಂಗ್ಲೇ ಕಾರ್ನೆಜೂ ಸ್ಟೇಡಿಯಂನಲ್ಲಿ ಆಡುತ್ತವೆ. ಜಾನ್ ಚಾರ್ಲ್ಸ್ ಸೆಂಟರ್ ಫಾರ್ ಸ್ಪೋರ್ಟ್ ಮೂಲದ ಹಂಸ್ಲೆಟ್ ಹಾಕ್ಸ್ ಕೋ-ಆಪರೇಟೀವ್ ಚಾಂಪಿಯನ್ಷಿಪ್ ಒನ್‌ಗಾಗಿ ಆಡುತ್ತದೆ. ಬ್ರಾಮ್ಲೇ ಬಫ್ಯಾಲೋಸ್ ಹಾಗೂ ಲೀಡ್ಸ್ ಅಕ್ಕೀಸ್ ತಂಡಗಳು ರಗ್ಬೀ ಲೀಗ್ ಕಾನ್ಫರೆನ್ಸ್‌ನ ಸದಸ್ಯತ್ವ ಹೊಂದಿವೆ. ಲೀಡ್ಸ್ ಟೈಕ್ಸ್ ಎಂದು ಕರೆಯಲ್ಪಡುವ ಲೀಡ್ಸ್ ಕಾರ್ನೆಜೀ ಲೀಡ್ಸ್ ನಗರದ ಪ್ರಮುಖ ರಗ್ಬೀ ಯೂನಿಯನ್ ತಂಡವಾಗಿದೆ ಹಾಗೂ ಅವರು ಹೆಡಿಂಗ್ಲೇ ಕಾರ್ನೆಗೀ ಸ್ಟೇಡಿಯಂನಲ್ಲಿ ಆಡುತ್ತದೆ. ಇದು ಇಂಗ್ಲೆಂಡ್‌ನ ಡೊಮೆಸ್ಟಿಕ್ ರಗ್ಬೀ ಯೂನಿಯನ್‌ನ ಉನ್ನತ ಮಟ್ಟದ ಗಿನ್ನೀಸ್ ಪ್ರೀಮಿಯರ್ಷಿಪ್ನಲ್ಲಿ ಆಡುತ್ತದೆ. ನಗರದ ಉತ್ತರಭಾಗದ ರಗ್ಬೀ ಯೂನಿಯನ್ ಕ್ಲಬ್ ಓಟ್ಲೆ ಆರ್.ಯು.ಎಫ್.ಸಿ. ಹಾಗೂ ಇದು ನ್ಯಾಷನಲ್ ಡಿವಿಷನ್ ಒನ್‌ನಲ್ಲಿ ಭಾಗವಹಿಸುತ್ತದೆ, ಈ ಅವಧಿಯಲ್ಲಿ ಮೋರ್ಲೇಯಲ್ಲಿರುವ ಮೋರ್ಲೇ ಆರ್.ಎಫ್.ಸಿಯು ನ್ಯಾಷನಲ್ ಡಿವಿಷನ್ ಥ್ರೀ ನಾರ್ತ್ನಲ್ಲಿ ಭಾಗವಹಿಸಿತ್ತು. ಲೀಡ್ಸ್ ಕಾರ್ನೆಜೀ ಎಲ್.ಎಫ್.ಸಿ.ಯು ಲೀಡ್ಸ್‍ನ ಉತ್ತಮವಾದ ಮಹಿಳಾ ಫುಟ್ಬಾಲ್ ತಂಡವಾಗಿದೆ, ತಂಡವು ಎಫ್‌ಎ ವುಮೆನ್ಸ್ ಪ್ರೀಮಿಯರ್ ಲೀಗ್ ನ್ಯಾಶನಲ್ ಡಿವಿಷನ್ನಂತಹ ಇಂಗ್ಲೆಂಡ್‌ನ ಉನ್ನತ ಮಟ್ಟದ ಪಂದ್ಯಗಳಲ್ಲಿ ಸ್ಪರ್ಧಿಸುತ್ತದೆ.

ಲೀಡ್ಸ್ ಸಿಟಿ ಅಥ್ಲೆಟಿಕ್ಸ್ ಕ್ಲಬ್ ತಂಡವು ಬ್ರಿಟಿಷ್ ಅಥ್ಲೆಟಿಕ್ಸ್ ಲೀಗ್ ಹಾಗೂ ಯುಕೆ ವುಮೆನ್ಸ್ ಲೀಗ್ ಹಾಗೂ ನಾರ್ಥರನ್ ಅಥ್ಲೆಟಿಕ್ಸ್ ಲೀಗ್‌ಗಳಲ್ಲಿ ಸ್ಪರ್ಧಿಸುತ್ತದೆ. ನಗರವು ಕ್ರೀಡಾ ಸೌಲಭ್ಯಗಳು ಬಹಳಷ್ಟಿವೆ, 1996 ಯೂರೋಪಿಯನ್ ಫುಟ್ಬಾಲ್ ಚಾಂಪಿಯನ್ಷಿಪ್ ನಡೆಸಿದ್ದ ಎಲ್ಲಾಂಡ್ ರೋಡ್ ಫುಟ್ಬಾಲ್ ಸ್ಟೇಡಿಯಂ; ಹೆಡಿಂಗ್ಲೇ ಕಾರ್ನೆಜೀ ಸ್ಟೇಡಿಯಮ್ಸ್ ಇದು ಕ್ರಿಕೆಟ್ ಮತ್ತು ರಗ್ಬೀ ಲೀಗ್ ಆಟಗಳಿಗೆ ಪ್ರಸಿದ್ಧಿ ಪಡೆದಿದೆ, ಅಕ್ವಾಟಿಕ್ ಸೆಂಟರ್‌ನಲ್ಲಿ ಒಲಿಂಪಿಕ್ ಗಾತ್ರದ ಕೊಳ ಹೊಂದಿರುವ ಜಾನ್ ಚಾರ್ಲ್ಸ್ ಸೆಂಟರ್ ಫಾರ್ ಸ್ಪೋರ್ಟ್[೧೨೮] ಹಾಗೂ ಇದು ಬಹು ಉಪಯೋಗದ ಸ್ಟೇಡಿಯಂ ಆಗಿದೆ. ಇಲ್ಲಿರುವ ಇತತೆ ಸೌಲಭ್ಯಗಳೆಂದರೆ ಲೀಡ್ಸ್ ವಾಲ್ (ಹತ್ತುವುದು) ಹಾಗೂ ಯೀಡನ್ ತಾರ್ನ್ ಸೆಯ್ಲಿಂಗ್ ಸೆಂಟರ್. 1928 ರಿಂದ 1939ರ ಅವಧಿಯಲ್ಲಿ ಸ್ಪೀಡ್‌ವೇ ರೇಸಿಂಗ್ ಸ್ಪರ್ಧೆಯು ಎಲ್ಲಂಡ್ ರಸ್ತೆಯ ಲೀಡ್ಸ್‌ನ ಗ್ರೆಹೌಂಡ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಈ ಟ್ರ್ಯಾಕ್ 1931ರ ನಾರ್ಥರನ್ ಲೀಗ್‌ನಲ್ಲಿ ಪ್ರವೇಶ ಪಡೆದಿತ್ತು

ಧಾರ್ಮಿಕತೆ

ಸೇಟ್ ಆನ್ಸ್ ಕ್ಯಾಥೆಡ್ರಲ್ (ರೋಮನ್ ಕ್ಯಾಥೊಲಿಕ್), ಲೀಡ್ಸ್

ಲೀಡ್ಸ್‌ನ ಹೆಚ್ಚಿನ ಜನರು ತಮ್ಮನ್ನು ತಾವು ಕ್ರಿಶ್ಚಿಯನ್ನರೆಂದು ಗುರುತಿಸಿಕೊಳ್ಳುತ್ತಾರೆ.[೫೨] ಲೀಡ್ಸ್ ನಗರವು ಚರ್ಚ್ ಆಫ್ ಇಂಗ್ಲೆಂಡ್ ಕ್ಯಾಥೆಡ್ರಲ್ ಚರ್ಚ್ ಅನ್ನು ಹೊಂದಿಲ್ಲ ಏಕೆಂದರೆ ಲೀಡ್ಸ್ ನಗರವು ಆಂಗ್ಲಿಕನ್ ಡಯೊಸೆಸ್ ಆಫ್ ರಿಪನ್ ಅಂಡ್ ಲೀಡ್ಸ್ನ ಭಾಗವಾಗಿದೆ ಹಾಗೂ ಈ ಪವಿತ್ರವಾದ ಕ್ಯಾಥೆಡ್ರಲ್ ರಿಪನ್‌ನಲ್ಲಿದೆ; ಬಿಷಪ್ರ ಮನೆಯು 2008ರಿಂದ ಲೀಡ್ಸ್ ನಗರದಲ್ಲಿದೆ. ಪ್ರಮುಖವಾದ ಆಂಗ್ಲಿಕನ್ ಚರ್ಚ್ ಎಂದರೆ ಲೀಡ್ಸ್ ಪರಿಷ್ ಚರ್ಚ್. ರೋಮ ಕ್ಯಾಥೊಲಿಕ್ ಡಯೋಸೆಸ್ ಆಫ್ ಲೀಡ್ಸ್ ಪೋಪರ ಸ್ಥಾನವಾದ ರೋಮನ್ ಕ್ಯಾಥೊಲಿಕ್ ಕ್ಯಾಥೆಡ್ರಲ್ ಲೀಡ್ಸ್ ನಗರದಲ್ಲಿದೆ. ಇತರೆ ಕ್ರಿಶ್ಚಿಯನ್ ಪಂಗಡಗಳು ಹಾಗೂ ಹೊಸ ಧಾರ್ಮಿಕ ಚಳುವಳಿಗಳು ಲೀಡ್ಸ್‌ನಲ್ಲಿ ಸ್ಥಾಪಿತವಾಗಿದೆ, ಅವೆಂದರೆ ಅಸೆಂಬ್ಲಿ ಆಫ್ ಗಾಡ್, ಬ್ಯಾಪ್ಟಿಸ್ಟ್, ಕ್ರಿಶ್ಚಿಯನ್ ಸೈಂಟಿಸ್ಟ್, ಚರ್ಚ್ ಆಫ್ ಜೀಸಸ್ ಕ್ರಿಸ್ಟ್ ಆಫ್ ಲ್ಯಾಟರ್-ಡೇ ಸೇಂಟ್ಸ್ ("ಎಲ್‌ಡಿಎಸ್ ಚರ್ಚ್", ಇದನ್ನೂ ನೋಡಿ ಮಾರ್ಮನ್) , ಕಮ್ಯುನಿಟಿ ಆಫ್ ಕ್ರೈಸ್ಟ್, ಗ್ರೀಕ್ ಆರ್ತೊಡಾಕ್ಸ್, ಜೆಹೊವಾಸ್ ವಿಟ್ನೆಸಸ್, ಜೀಸಸ್ ಆರ್ಮಿ, ಲುಥೆರಾನ್, ಮೆಥೊಡಿಸ್ಟ್, ನಝರೆನ್, ನ್ಯೂಫ್ರಾಂಟೀಯರ್ಸ್ ನೆಟ್ವರ್ಕ್, ಪೆಂಟೆಕೋಸ್ಟಲ್, ಸಾಲ್ವೇಶನ್ ಆರ್ಮಿ, ಸೆವೆಂತ್-ಡೇ ಅಡ್ವೆಂಟಿಸ್ಟ್, ಸೊಸೈಟಿ ಆಫ್ ಫ್ರೆಂಡ್ಸ್ ("ಕ್ವೇಕರ್ಸ್"), ಯೂನಿಟೇರಿಯನ್, ಯುನೈಟೆಡ್ ರೀಫಾರ್ಮ್ಡ್, ವಿನೆಯಾರ್ಡ್, ವೆಸ್ಲೆಯನ್ ಚರ್ಚ್, ಎಕ್ಯುಮೆನಿಕ್ ಚೈನೀಸ್ ಚರ್ಚ್, ಹಾಗೂ ಹಲವಾರು ಸ್ವತಂತ್ರ ಚರ್ಚುಗಳು.[೧೨೯][೧೩೦]

ಸಿಖ್ ದೇವಾಲಯ, ಚಾಪೆಲ್‌ಟೌನ್ ರಸ್ತೆ
ಲೀಡ್ಸ್ ಜಮಿಯಾ ಮಾಸ್ಕ್

ದೇಶದಲ್ಲಿರುವ ಸರಾಸರಿ ಮುಸ್ಲಿಮರ ಸಂಖ್ಯೆಯಷ್ಟೇ ಲೀಡ್ಸ್ ನಗರದಲ್ಲಿಯೂ ಇದೆ.[೫೨] ಚಾಪೆಲ್‌ಟೌನ್, ಹೇರ್‌ಹಿಲ್ಸ್, ಹೈದ್ ಪಾರ್ಕ್ ಹಾಗೂ ಬೀಸ್ಟನ್ನ ಕೆಲವು ಭಾಗಗಳಲ್ಲಿ ವಾಸಿಸುವ ಮುಸ್ಲಿಂ ಸಮುದಾಯಗಳಿಗಾಗಿ ಹಲವಾರು ಮಸೀದಿಗಳು ನಗರದುದ್ದಕ್ಕೂ ಕಂಡುಬರುತ್ತವೆ. ಹೈದ್ ಪಾರ್ಕ್‌ನಲ್ಲಿರುವ ಲೀಡ್ಸ್ ಗ್ರ್ಯಾಂಡ್ ಮಾಸ್ಕ್ ಅತಿ ದೊಡ್ಡ ಮಸೀದಿಯಾಗಿದೆ. ಸಿಖ್ ಸಮುದಾಯಕ್ಕಾಗಿ ಗುರುದ್ವಾರಗಳು ನಗರದಾದ್ಯಂತ ಇವೆ, ಅದರಲ್ಲಿ ಅತಿ ದೊಡ್ಡದು ಚಾಪೆಲ್‌ಟೌನ್‌ನಲ್ಲಿದೆ. ವರ್ಣರಂಜಿತ ವಾರ್ಷಿಕ ಮೆರವಣಿಗೆ ಕೂಡಾ ನಗರ ಕೀರ್ತನ ಹೆಸರಿನಲ್ಲಿ ನಡೆಯುತ್ತದೆ, ಏಪ್ರಿಲ್ 13–14ರ ಸಮಯದಲ್ಲಿ ಸಿಟಿಸೆಂಟರ್‌ನ ಮಿಲೆನಿಯಂ ಸ್ಕ್ವೇರ್‌ನಿಂದ ಇದು ಪ್ರಾರಂಭವಾಗುತ್ತದೆ, ಸಿಖ್ಖರ ಹೊಸವರ್ಷ ಹಾಗೂ ಅವರ ಧರ್ಮವು ಪ್ರಾರಂಭವಾದ ಅಂಗವಾಗಿ ಬೈಸಾಕಿಯನ್ನು ಇಲ್ಲಿ ಈ ರೀತಿಯಾಗಿ ಆಚರಿಸುತ್ತಾರೆ. ಈ ವಾರ್ಷಿಕ ಹಬ್ಬದಲ್ಲಿ ಲೀಡ್ಸ್‌ನಗರದ ಸುಮಾರು 3,000 ಜನ ಸಿಖ್ಖರು ಪಾಲ್ಗೊಳ್ಳುತ್ತಾರೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಂಡನ್ ಹಾಗೂ ಮ್ಯಾಂಚೆಸ್ಟರ್ ನಂತರ ಮೂರನೆಯ ಅತಿ ಹೆಚ್ಚು ಯಹೂದಿ ಸಮುದಾಯದ ಜನರನ್ನು ಹೊಂದಿರುವ ನಗರವಾಗಿದೆ. ಅಲ್ವೂಡ್ಲೇ ಹಾಗೂ ಮೂರ್ಟೌನ್ ಪ್ರದೇಶಗಳು ಹೆಚ್ಚಾಗಿ ಯಹೂದಿ ಸಮುದಾಯದ ಜನರನ್ನು ಹೊಂದಿವೆ.[೫೩] ಲೀಡ್ಸ್‌ನಲ್ಲಿ ಎಂಟು ಯೆಹೂದ್ಯರ ಪೂಜಾಮಂದಿರಗಳಿವೆ.[೧೩೧] ಹೈದ್ ಪಾರ್ಕ್‌ನಲ್ಲಿ ಹಿಂದೂ ಸಮುದಾಯದ ಜನರಿಗಾಗಿ ಲೀಡ್ಸ್ ಒಂದು ದೇವಾಲಯ (ಮಂದಿರ)ವನ್ನು ಹೊಂದಿದೆ.[೧೩೨] ಈ ದೇವಾಲಯದಲ್ಲಿ ಹಿಂದೂಗಳ ಎಲ್ಲಾ ಪ್ರಮುಖ ದೇವರ ಮೂರ್ತಿಗಳು ಹಾಗೂ ಜೈನರ ಭಗವಾನ್ ಮಹಾವೀರನ ಮೂರ್ತಿ ಕೂಡಾ ಇವೆ.[೧೩೩] ಲೀಡ್ಸ್‌ನಲ್ಲಿ ಹಲವಾರು ಬೌದ್ಧರ ಸಂಪ್ರದಾಯಗಳು ಇವೆ,[೧೩೪] ಇದರಲ್ಲಿ ಸೇರಿರುವಂತಹವು: ಸೋಕ ಗಕ್ಕಾಯಿ, ತೆರವಾದ, ಟಿಬೆಟನ್, ತ್ರಿರತ್ನ ಬೌದ್ಧ ಸಮುದಾಯ ಹಾಗೂ ಝೆನ್. ಬೌದ್ಧರ ಸಮುದಾಯ (ಸಂಘ) ಮೇ ತಿಂಗಳಲ್ಲಿ ಆಚರಿಸಲಾಗುವ ವೆಸಕ್ ಹಬ್ಬವನ್ನು ಆಚರಿಸಲು ಸೇರುತ್ತಾರೆ. ಲೀಡ್ಸ್‌ನಲ್ಲಿ ಇನ್ನೊಂದು ಸಮುದಾಯವಾದ ಬಹಾಯಿ ಫೆಯ್ತ್ ಕೂಡಾ ಇದೆ.[೧೩೫]

ಸಾರ್ವಜನಿಕ ಸೇವೆಗಳು

ಲೀಡ್ಸ್ ನಗರದಲ್ಲಿ ನೀರು ಸರಬರಾಜು ಹಾಗೂ ಚರಂಡಿ ವ್ಯವಸ್ಥೆಯನ್ನು ಪೂರೈಸುವುದು ಕೆಲ್ದಾ ಗ್ರೂಪ್‌ನ ಯಾರ್ಕ್‌ಷೈರ್ ವಾಟರ್, . 1973ರ ಮೊದಲು ಇದನ್ನು ಲೀಡ್ಸ್ ಕಾರ್ಪೊರೇಷನ್ ಪೂರೈಸುತ್ತಿತ್ತು. ಲೀಡ್ಸ್ ನಗರ ಸಮಿತಿಯು 2010ರ ವೇಳೆಗೆ ತೀರದ ಗಾಳಿಯಿಂದ ನವೀಕರಿಸಬಲ್ಲಂತಹ ಶಕ್ತಿಯನ್ನು 11MWಗಳಷ್ಟು ಉತ್ಪಾದಿಸುವ ಯೋಜನೆ ಹೊಂದಿದೆ ಹಾಗೂ ಇನ್ನೂ ಹೆಚ್ಚಿನ ಆಕಾಂಕ್ಷೆಯೆಂದರೆ 2020ರ ವೇಳೆಗೆ ಸುಮಾರು 75MW ಗಳಷ್ಟು ಶಕ್ತಿ ತಯಾರಿಸುವುದು. ಪ್ರಸ್ತುತ ಲೀಡ್ಸ್‌ನಲ್ಲಿ ಯಾವುದೇ ಗಾಳಿಯಿಂದ ಶಕ್ತಿ ತಯಾರಿಸುವ ಕಾರ್ಯವು ನಡೆಯುತ್ತಿಲ್ಲ.[೧೩೬]

West Yorkshire Archive Service, Leeds site

ಈ ಪ್ರದೇಶದ ರಕ್ಷಣೆ ಒದಗಿಸುವವರು ಪಶ್ಚಿಮ ಯಾರ್ಕ್‌ಷೈರ್‌ ಪೋಲೀಸ್. ಈ ದಳವು ಎಂಟು ವಿಭಾಗಗಳನ್ನು ಹೊಂದಿದೆ, ಅದರಲ್ಲಿ ಮೂರು ಲೀಡ್ಸ್ ನಗರವನ್ನು ನೋಡಿಕೊಳ್ಳುತ್ತವೆ: ಎ‌ಎ "ನಾರ್ತ್ ವೆಸ್ಟ್ ಲೀಡ್ಸ್ ಡಿವಿಷನ್" ವಿಭಾಗವು ವೀಟ್‌ವುಡ್ನಲ್ಲಿ ಸ್ಟೇಷನ್ ಹೊಂದಿದ್ದು ಲೀಡ್ಸ್ ನಗರದ ಉತ್ತರ ಹಾಗೂ ಪಶ್ಚಿಮ ಭಾಗವನ್ನು ನೋಡಿಕೊಳ್ಳುತ್ತದೆ; ಬಿಎ "ನಾರ್ತ್ ಈಸ್ಟ್ ಲೀಡ್ಸ್ ಡಿವಿಷನ್", ಚಾಪೆಲ್ ಅಲರ್ಟನ್ ಹಾಗೂ ಕಿಲಿಂಗ್‌ಬೆಕ್ ಬಳಿಯ ಸ್ಟೇನ್‌ಬೆಕ್‌ನಲ್ಲಿ ಸ್ಟೇಷನ್ ಹೊಂದಿದ್ದು ಲೀಡ್ಸ್‌ನ ಉತ್ತರ ಹಾಗೂ ಪೂರ್ವ ಭಾಗವನ್ನು ನೋಡಿಕೊಳ್ಳುತ್ತದೆ; ಸಿಎ "ಸಿಟಿ ಅಂಡ್ ಹೊಲ್ಬೆಕ್ ಡಿವಿಷನ್" ಮಿಲ್ಗರ್ತ್ (ನಗರದ ಕೇಂದ್ರ) ಹಾಗೂ ಹೊಲ್ಬೆಕ್ಗಳಲ್ಲಿ ಸ್ಟೇಷನ್‌ಗಳನ್ನು ಹೊಂದಿದ್ದು ಕೇಂದ್ರ ಭಾಗ ಹಾಗೂ ದಕ್ಷಿಣ ಭಾಗವನ್ನು ನೋಡಿಕೊಳ್ಳುತ್ತದೆ. ವೆಸ್ಟ್ ಯಾರ್ಕ್‌ಷೈರ್ ಫೈರ್ ಅಂಡ್ ರೆಸ್ಕ್ಯೂ ಸರ್ವಿಸ್ ನಗರಕ್ಕೆ ಅಗ್ನಿ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಪೂರೈಸುತ್ತದೆ. ಲೀಡ್ಸ್‌ನಲ್ಲಿರುವ ಅಗ್ನಿಶಾಮಕ ಕೇಂದ್ರಗಳು: ಕೂಕ್ರಿಡ್ಜ್, ಗಿಪ್ಟನ್, ಹನ್ಸ್ಲೆಟ್, ವಿನ್ಮೂರ್ "ಲೀಡ್ಸ್" (ಕಿರ್ಕ್‌ಸ್ಟಲ್ ರಸ್ತೆಯಲ್ಲಿ ಸಿಟಿ ಸೆಂಟರ್ ಹತ್ತಿರ) ಹಾಗೂ ಮೂರ್ಟೌನ್.

ಲೀಡ್ಸ್ ಟೀಚಿಂಗ್ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಟ್ರಸ್ಟ್ ಹಾಗೂ ಲೀಡ್ಸ್ ಪ್ರೈಮರಿ ಕೇರ್ ಟ್ರಸ್ಟ್ ನಗರದ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ನಿಭಾಯಿಸುತ್ತವೆ,[೧೩೭] ಅಲ್ಲದೆ ಲೀಡ್ಸ್ ಪಾರ್ಟ್ನರ್ಷಿಪ್ಸ್ ಎನ್‌ಎಚ್‍ಎಸ್ ಫೌಂಡೇಶನ್ ಟ್ರಸ್ಟ್[೧೩೮] ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಲೀಡ್ಸ್ ಜನರಲ್ ಇನ್ಫರ್ಮರಿ ("ಎಲ್‌ಜಿಐ") ಸಿಟಿ ಸೆಂಟರ್‌ನಲ್ಲಿ ಹೊಸದಾಗಿ ಸೇರ್ಪಡೆಯಾದ ಕಟ್ಟಡಗಳ ಪಟ್ಟಿಗೆ ಸೇರಿದೆ. ಸೇಂಟ್ ಜೇಮ್ಸ್ ಯೂನಿವರ್ಸಿಟಿ ಹಾಸ್ಪಿಟಲ್, ಲೀಡ್ಸ್ ಇದನ್ನು ಸ್ಥಳೀಯವಾಗಿ "ಜಿಮ್ಮೀಸ್" ಎಂದು ಕರೆಯುತ್ತಾರೆ[೧೩೯][೧೪೦] ಇದು ಸಿಟಿ ಸೆಂಟರ್‌ನ ಈಶಾನ್ಯ ಭಾಗದಲ್ಲಿದೆ ಹಾಗೂ ಇದು ಯೂರೋಪ್‌ನ ಅತ್ಯಂತ ದೊಡ್ಡ ಶಿಕ್ಷಣ ನೀಡುವ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇತರೆ ಎನ್‌ಎಚ್‌ಎಸ್ ಆಸ್ಪತ್ರೆಗಳೆಂದರೆ, ಓಟ್ಲೇಯಲ್ಲಿರುವ ಚಾಪೆಲ್ ಅಲರ್ಟನ್ ಹಾಸ್ಪಿಟಲ್, ಸೀಕ್ರಾಫ್ಟ್ ಹಾಸ್ಪಿಟಲ್, ವರ್‌ಫೆಡಲ್ ಹಾಸ್ಪಿಟಲ್, ಹಾಗೂ ಲೀಡ್ಸ್ ಡೆಂಟಲ್ ಇನ್‌ಸ್ಟಿಟ್ಯೂಟ್. ಹೊಸ ಎನ್‌ಎಚ್‌ಎಸ್ ವೆಬ್‌ಸೈಟ್ ಲೀಡ್ಸ್ ನಗರದ ಎನ್‌ಎಚ್‌ಎಸ್ ಸೇವೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.[೧೪೧]

ಲೀಡ್ಸ್ ಹಾಗೂ ಪಶ್ಚಿಮ ಯಾರ್ಕ್‌ಷೈರ್‌ನ ನಾಲ್ಕು ಜಿಲ್ಲೆಗಳಲ್ಲಿ ವೆಸ್ಟ್ ಯಾರ್ಕ್‌ಷೈರ್ ಜಾಯಿಂಟ್ ಸರ್ವಿಸಸ್ ಸಂಸ್ಥೆಯು ವಿಶ್ಲೇಷಣಾತ್ಮಕ, ಪ್ರಾಕ್ತನ ಶಾಸ್ತ್ರ, ದಾಖಲೆಗಳು, ಪರಿಸರ ವಿಜ್ಞಾನ, ವಸ್ತುಗಳ ಪರೀಕ್ಷೆ ಹಾಗೂ ವ್ಯಾಪಾರದ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತದೆ. ಇದು 1986ರಲ್ಲಿ ಕೌಂಟಿ ಕೌನ್ಸಿಲ್ ನಿರ್ಮೂಲನೆ ಮಾಡಿದ ನಂತರ ಪ್ರಾರಂಭವಾಯಿತು ಹಾಗೂ 1997ರಲ್ಲಿ ಇದನ್ನು ವಿಸ್ತರಿಸಲಾಯಿತು, ಹಾಗೂ ಐದು ಜಿಲ್ಲೆಗಳ ಸಮಿತಿಗಳಿಂದ ಇದಕ್ಕೆ ಹಣ ವಿನಿಯೋಗಿಸಲಾಗುತ್ತದೆ. ಲೀಡ್ಸ್ ವಿಭಾಗದ ದಾಖಲೆಗಳ ಸೇವೆಯು ಈಗ ಲೀಡ್ಸ್‌ನಲ್ಲಿರುವ ಶೀಪ್‌ಸ್ಕಾರ್ನ ಗ್ರಂಥಾಲಯದಲ್ಲಿದೆ.[೧೪೨]

ಲೀಡ್ಸ್ ಸಿಟಿ ಕೌನ್ಸಿಲ್ ನಗರದಾದ್ಯಂತ 5 ಸಂಚಾರಿ ಗ್ರಾಂಥಾಲಯಗಳನ್ನೊಳಗೊಂಡಂತೆ ಸುಮಾರು 50 ಸಾರ್ವಜನಿಕ ಗ್ರಂಥಾಲಯಗಳನ್ನು ಹೊಂದಿದೆ. ಮುಖ್ಯ ಕೇಂದ್ರೀಯ ಗ್ರಂಥಾಲಯವಿ ಸಿಟಿ ಸೆಂಟರ್‌ನ ಹೆಡ್ರೋದಲ್ಲಿದೆ.

ಅವಳಿ ಪಟ್ಟಣಗಳು

ನಗರವು ಹಲವಾರು ಅವಳಿ ಅಥವಾ ಸಹಯೋಗದ ವ್ಯವಸ್ಥೆಗಳನ್ನು ಹೊಂದಿದೆ:

  • ಹ್ಯಾಂಗ್ಜೌ, ಚೈನಾ[೧೪೭]
  • ಲಿಲ್ಲೆ, ಫ್ರಾನ್ಸ್[೧೪೮]
  • ಲೂಸಿವಿಲ್ಲೆ, ಯುನೈಟೆಡ್ ಸ್ಟೇಟ್ಸ್[೧೪೯]
  • ಸೀಜೆನ್ , ಜರ್ಮನಿ[೧೫೦]

"ಪ್ರಗತಿಯಲ್ಲಿರುವ ಯೋಜನೆಗಳ ಉದ್ದೇಶಕ್ಕಾಗಿ" ಕೆಳಕಂಡ ನಗರಗಳ ಜೊತೆ "ಬಲವಾದ ಸಂಬಂಧ" ಹೊಂದಿದೆ:[೧೪೫]

  • ಬ್ರಸವ್, ರೊಮೇನಿಯಾ
  • ಸೇಂಟ್ ಮೇರಿ, ಜಮೈಕಾ
  • ಸ್ಟಾಕ್‌ಹೋಂ, ಸ್ವೀಡನ್

ಆಕರಗಳು ಮತ್ತು ಟಿಪ್ಪಣಿಗಳು

ಬಿಬ್ಲಿಯೊಗ್ರಫಿ
  • Burt and Grady (1994). The Illustrated History of Leeds. Breedon Books. ISBN 1 873626 35 5. {{cite book}}: Invalid |ref=harv (help); Unknown parameter |isbn-status= ignored (help)
  • Fraser, Derek (1982). A History of Modern Leeds. Manchester University Press. ISBN 9780719007811. {{cite book}}: Invalid |ref=harv (help)
  • Unsworth and Stillwell (2004). Twenty-First Century Leeds: Geographies of a Regional City. Leeds: Leeds University Press. ISBN 0853162425. {{cite book}}: Invalid |ref=harv (help)

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ