ರೊನಾಲ್ಡಿನೊ

ರೊನಾಲ್ಡೊ ಡೆ ಅಸ್ಸಿಸ್ ಮೊರೈರಾ (ಪೋರ್ಟೊ ಅಲೆಗ್ರೆನಲ್ಲಿ 21 ಮಾರ್ಚ್ 1980ರಲ್ಲಿ ಜನನ. ಸಾಮಾನ್ಯವಾಗಿ ರೊನಾಲ್ಡಿನೊ ಅಥವಾ ರೊನಾಲ್ಡಿನೊ ಗೌಚೊ ಎಂದು ಹೆಸರುವಾಸಿಯಾಗಿದ್ದ,[೨] ಬ್ರೆಜಿಲ್ ದೇಶದ ಈ ಫುಟ್ಬಾಲ್ ಆಟಗಾರ.ರೊನಾಲ್ಡಿನೊ ಇಟಾಲಿಯನ್ ಸರಣಿಗಳ ಸೀರಿ A ಪರ ಮಿಲನ್‌ ಮತ್ತು ಬ್ರೆಜಿಲ್ ರಾಷ್ಟ್ರೀಯ ತಂಡಗಳಿಗಾಗಿ ಆಡುತ್ತಾರೆ. ಅವರ ತಲೆಮಾರಿನವರಲ್ಲಿ ಹುಟ್ಟು ಪ್ರತಿಭಾಶಾಲಿ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Ronaldinho
Personal information
Full nameRonaldo de Assis Moreira
Date of birth (1980-03-21) ೨೧ ಮಾರ್ಚ್ ೧೯೮೦ (ವಯಸ್ಸು ೪೪)
Place of birthPorto Alegre, ಬ್ರೆಜಿಲ್
Height1.82 m (6 ft 0 in)[೧]
Playing positionWinger / Attacking midfielder
Club information
Current clubMilan
Number80
Youth career
1997–1998Grêmio
Senior career*
YearsTeamApps(Gls)
1998–2001Grêmio44(21)
2001–2003Paris Saint-Germain55(17)
2003–2008Barcelona145(70)
2008–Milan40(11)
National team
1999–Brazil87(32)
Honours
  • ಟೆಂಪ್ಲೇಟು:Infobox football biography 2/medal|-! colspan="3" style="text-align:center;vertical-align:middle;background-color:#eeeeee;" class="adr" | Representing  Brazil |-! colspan="3" style="text-align:center;vertical-align:middle;background-color:#eeeeee;" | Men's Football |-| style="text-align:center;vertical-align:middle;" | Bronze medal – third place|| style="text-align:center;vertical-align:middle;" | 2008 Beijing|| style="text-align:center;vertical-align:middle;" | Team Competition|}
  • Senior club appearances and goals counted for the domestic league only and correct as of 4 November 2009.

† Appearances (Goals).

‡ National team caps and goals correct as of 5 April 2009

ಪೋರ್ಚು‌ಗೀಸ್‌ನಲ್ಲಿ "ಲಿಟಲ್ ರೊನಾಲ್ಡೊ" ಎಂದು ಕರೆಸಿಕೊಳ್ಳುವ ರೊನಾಲ್ಡಿನೊ ಅವರು ಬ್ರೆಜಿಲ್‌ನಲ್ಲಿ ಈಗಾಗಲೇ ರೊನಾಲ್ಡಿನೊ ಎಂದು ಹೆಸರಾಗಿದ್ದು,ರೊನಾಲ್ಡೊ ಅವರಿಂದ ಪ್ರತ್ಯೇಕವಾಗಿ ಗುರುತಿಸಲು "ಗೌಚೊ" ಎಂಬ ಉಪನಾಮ ಅಥವಾ ಅಡ್ಡಹೆಸರನ್ನು ಬ್ರೆಜಿಲ್‌ನಲ್ಲಿ ಬಳಸಲಾಗುತ್ತಿದೆ. ರೊನಾಲ್ಡೊ ಯುರೋಪ್‌ಗೆ ತೆರಳಿದ ಬಳಿಕ ತಮ್ಮ ಪ್ರಥಮ ಹೆಸರಿನಲ್ಲೇ ಮುಂದುವರೆದು, ರೊನಾಲ್ಡಿನೊ "ಗೌಚೊ" ಅಡ್ಡಹೆಸರನ್ನು ಕೈಬಿಟ್ಟು ರೊನಾಲ್ಡಿನ್ಹೊ ಎಂಬ ಮೂಲ ಹೆಸರು ಉಳಿಸಿಕೊಂಡರು.

ಮಿಲನ್‌್‌(ಉತ್ತರ ಇಟಲಿಯ ಲ್ಯಾಂಬಾರ್ಡಿ ರಾಜಧಾನಿ) ಗೆ ತೆರಳುವ ಮುನ್ನ,ಪ್ಯಾರಿಸ್ ಸೇಂಟ್-ಜರ್ಮನ್ ಮತ್ತು FC ಬಾರ್ಸಿಲೋನಾ ಪರ ಆಡಿ, ಅವರ ಜತೆ 2006ರಲ್ಲಿ ಪ್ರಥಮ ಚಾಂಪಿಯನ್ಸ್ ಲೀಗ್‌ನಲ್ಲಿ ಜಯಗಳಿಸಿದರು. ಜನವರಿ 2007ರಲ್ಲಿ ಅವರು ಸ್ಪೇನ್ ನ ಪೌರತ್ವದೊಂದಿಗೆ ಅಲ್ಲಿನ ನಾಗರಿಕರೆನಿಸಿದರು.[೩]

ಜೀವನ ಚರಿತ್ರೆ ಮತ್ತು ವೈಯಕ್ತಿಕ ಬದುಕು

ಬ್ರೆಜಿಲ್ ನ ರಿಯೊ ಗ್ರಾಂಡೆ ಡೊ ಸಲ್ ರಾಜ್ಯದ ರಾಜಧಾನಿ ಪೊರ್ಟೊ ಅಲೆಗ್ರೆ ನಗರದಲ್ಲಿ ರೊನಾಲ್ಡಿನೊ ಜನಿಸಿದರು. ಅವರ ತಾಯಿ ಡೋನಾ ಮಿಗುಲಿನಾ,ಮಾರಾಟ ಪ್ರತಿನಿಧಿಯಾಗಿ, ನಂತರ ಓದಿ ದಾದಿ ಕೆಲಸಕ್ಕೆ ಸೇರಿಕೊಂಡರು. ಅವರ ತಂದೆ ಜೋವೊ ಹಡಗುಕಟ್ಟುವ ಕಾರ್ಮಿಕ ಮತ್ತು ಸ್ಥಳೀಯ ಎಸ್ಪೋರ್ಟೆ ಕ್ಲಬ್ ಕ್ರುಜೆರೊ(ಕ್ರುಜೇರೊ EC ಕ್ಲಬ್ ಎಂಬ ಗೊಂದಲ ಬೇಡ)ಪರ ಫುಟ್ಬಾಲ್ ಆಟಗಾರರಾಗಿದ್ದರು.[೪] ರೊನಾಲ್ಡಿನೊ ಚಿಕ್ಕವನಿದ್ದಾಗ, ಆತನ ತಂದೆ ಮನೆ ಆವರಣದಲ್ಲಿನ ಈಜುಕೊಳದಲ್ಲಿ ಮಾರಣಾಂತಿಕ ಹೃದಯಾಘಾತಕ್ಕೆ ಈಡಾದರು. ರೊನಾಲ್ಡಿನೊರ ಹಿರಿಯ ಸೋದರ ರೊಬರ್ಟೊ ಗ್ರೆಮಿಯೊ ಪರ ಸಹಿ ಹಾಕಿದ ಬಳಿಕ, ಪೋರ್ಟೊ ಅಲೆಗ್ರೆಯ ಗುವಾರುಜಾದ ಪ್ರದೇಶದಲ್ಲಿ ಸ್ಥಿತಿವಂತರು ವಾಸಿಸುವ ವಿಭಾಗದ ಮನೆಯೊಂದಕ್ಕೆ ವಾಸಕ್ಕಾಗಿ ಅವರ ಕುಟುಂಬ ತೆರಳಿತು. ಕ್ಲಬ್‌ನಲ್ಲೇ ಉಳಿದುಕೊಳ್ಳಲು ರೊಬರ್ಟೊಗೆ ಗ್ರೇಮಿಯೊ ನೀಡಿದ ಕೊಡುಗೆ ಇದಾಗಿತ್ತು. ಆದರೆ ರೊಬರ್ಟೊ ಅವರು ಗಂಭೀರ ಗಾಯಾಳು ಆಗಿದ್ದರಿಂದ ಅವರ ವೃತ್ತಿಪರಜೀವನ ಮೊಟಕುಗೊಂಡಿತು.

ಚಿಕ್ಕ ವಯಸ್ಸಿನಲ್ಲೇ ರೊನಾಲ್ಡಿನೊನ ಫುಟ್ಬಾಲ್ ನ ಬಹುಮುಖ ಪ್ರತಿಭೆ ಅರಳಿ ನಂತರ ವಿಕಾಸ ಪಡೆಯಿತು.ಯುವ ಕ್ಲಬ್ ಪಂದ್ಯಗಳಲ್ಲಿ ಎಳೆಯ ಮತ್ತು ಅತಿ ಕಿರಿಯ ಆಟಗಾರರಾಗಿದ್ದರಿಂದ ಅವರಿಗೆ ಮೊದಲು ರೊನಾಲ್ಡಿನೊ ಎಂಬ ಉಪನಾಮವೂ ಸೂಚಕವಾಯಿತು.[೫] ಅವರು ಫಟ್ಸಾಲ್ ಮತ್ತು ಬೀಚ್ ಫುಟ್ಬಾಲ್‌(ಸಮುದ್ರ ಕಿನಾರೆ) ಕ್ರೀಡೆಗಳಲ್ಲಿ ಆಸಕ್ತಿ ಬೆಳಸಿಕೊಂಡರು. ನಂತರ ಅದು ಸಂಘಟನಾತ್ಮಕ ಫುಟ್ಬಾಲ್ ಆಟಕ್ಕೆ ವಿಸ್ತಾರಗೊಂಡಿತು. 13ರ ಎಳೆವಯದಲ್ಲೇ ಸ್ಥಳೀಯ ತಂಡವೊಂದರ ವಿರುದ್ಧ 23-0 ಗೆಲುವಲ್ಲಿ ಎಲ್ಲಾ 23 ಗೋಲು ಬಾರಿಸಿ ಮಾಧ್ಯಮದೊಂದಿಗೆ ಪ್ರಥಮ ಬಾರಿಗೆ ಮುಖಾಮುಖಿಯಾಗಿ ಮಿಂಚಿದರು.[೬] ಈಜಿಪ್ಟ್‌ನಲ್ಲಿ ನಡೆದ 1997ರ U-17 ವಿಶ್ವಚಾಂಪಿಯನ್‌ ಶಿಪ್‌ನಲ್ಲಿ ರೊನಾಲ್ಡಿನೊ ಪೆನಾಲ್ಟಿ ಹೊಡೆತಗಳಿಂದ ಎರಡು ಗೋಲು ಬಾರಿಸಿ ಫುಟ್ಬಾಲ್ ಲೋಕದ ಉದಯೋನ್ಮುಖ ತಾರೆಯೆನಿಸಿದರು.[೭][೮]

ಇಂದು, ಸಹೋದರ ರೊಬರ್ಟೊ, ರೊನಾಲ್ಡಿನೊರ ವ್ಯವಸ್ಥಾಪಕ ಮತ್ತು ಸಹೋದರಿ ಡೈಸಿ ಅವರ ಪತ್ರಿಕಾ ಕಾರ್ಯ ನಿರ್ದೇಶಕಿಯಾಗಿದ್ದಾರೆ.[೫][೯] ರೊನಾಲ್ಡಿನೊ ಪತ್ನಿ ಬ್ರೆಜಿಲಿಯಾದ ನೃತ್ಯಗಾತಿ ಜೆನೈನಾ ಮೆಂಡೆಸ್ 2005 ಫೆಬ್ರವರಿ 25ರಂದು ಗಂಡು ಮಗುವಿಗೆ ಜನ್ಮ ನೀಡಿದರು. ರೊನಾಲ್ಡಿನೊ ಪ್ರಥಮಬಾರಿಗೆ ತಂದೆಯೆನಿಸಿದರು. ರೊನಾಲ್ಡಿನೊ ಅವರು ತಂದೆ ಹೆಸರನ್ನೇ(ಜೊವೊ) ತಮ್ಮ ಪುತ್ರನಿಗೆ ಇಟ್ಟರು.[೧೦]

ಕ್ಲಬ್ ನ ವೃತ್ತಿಪರ ಬದುಕು

ಆರಂಭಿಕ ವೃತ್ತಿ ಬದುಕು

ರೊನಾಲ್ಡಿನೊ ವೃತ್ತಿಜೀವನವು ಮುಖ್ಯ ಕೋಚ್ ಲಿಯಾಮ್ ಹಿಗ್ಗಿನ್ಸ್ ರ ಮಾರ್ಗದರ್ಶನದಲ್ಲಿ ಗ್ರೇಮಿಯೊ ಯುವ ತಂಡದೊಂದಿಗೆ ಆರಂಭವಾಯಿತು. 1998ರ ಕೋಪಾ ಲಿಬರ್ಟ‌ಡೋರ್ಸ್‌ ಪಂದ್ಯದಲ್ಲಿ ಅವರು ಹಿರಿಯರ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದರು.[೧೧] 2001ರಲ್ಲಿ ಆರ್ಸೆನೆಲ್ ಕ್ಲಬ್ ರೊನಾಲ್ಡೊ ಅವರನ್ನು ಕ್ರೀಡೆಗಾಗಿ ಸಹಿ ಪಡೆಯಲು ಆಸಕ್ತಿ ವ್ಯಕ್ತಪಡಿಸಿತು. ಆದರೆ ರೊನಾಲ್ಡಿನೊ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಮತ್ತು EU-ಐರೋಪ್ಯ ತಂಡದ ಸದಸ್ಯನಲ್ಲವಾದ್ದರಿಂದ ಪರವಾನಗಿ ಅಸಾಧ್ಯವಾಗಿ ಆರ್ಸೆನಲ್ ಸೇರ್ಪಡೆ ಪ್ರಯತ್ನ ಕುಸಿದುಬಿತ್ತು.[೧೨] ಸ್ಕಾಟಿಷ್ ಪ್ರೀಮಿಯರ್ ಲೀಗ್ ಸೈಡ್ ಸೇಂಟ್ ಮಿರೆನ್ ಜತೆ ಎರವಲು ಆಟಗಾರನಾಗಲು ನಿರ್ಧರಿಸಿದರೂ, ಬ್ರೆಜಿಲ್‌ನಲ್ಲಿ ನಕಲಿ ಪಾಸ್‌ಪೋರ್ಟ್ ಹಗರಣದಲ್ಲಿ ಸಿಲುಕಿ ಅದೂ ಕೂಡ ಸಾಧ್ಯವಾಗಲಿಲ್ಲ.[೧೩] 2001ರಲ್ಲಿ ರೊನಾಲ್ಡಿನೊ ಪ್ರೆಂಚ್ ಪರಪ್ಯಾರಿಸ್ ಸೇಂಟ್-ಜರ್ಮೇನ್ ಜತೆ €5.1 ದಶಲಕ್ಷ ಹಸ್ತಾಂತರದ ಆಧಾರದ ಮೇಲೆ ಐದು ವರ್ಷಗಳ ಗುತ್ತಿಗೆಯ ಒಪ್ಪಂದಕ್ಕೆ ಸಹಿ ಹಾಕಿದರು.[೧೪]

ರೊನಾಲ್ಡಿನೊ ಫುಟ್ಬಾಲ್ ಗಿಂತ ಹೆಚ್ಚಾಗಿ ಪ್ಯಾರಿಸ್ ನ ರಾತ್ರಿ ಮೋಜು-ಮಜಾ-ಮಸ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆಂದು 2001-02ರ ಋತುವಿನಲ್ಲಿ, ನಡೆದ ಪ್ಯಾರಿಸ್ ಸೇಂಟ್-ಜರ್ಮೇನ್ ಪಂದ್ಯಾವಳಿಯ ವ್ಯವಸ್ಥಾಪಕ ಲೂಯಿಸ್ ಫರ್ನಾಂಡೆಜ್ ಆರೋಪಿಸಿದರು. ಬ್ರೆಜಿಲ್‌ನಲ್ಲಿ ಅವರ ರಜಾದಿನಗಳು ನಿಗದಿತ ಕಾಲಾವಧಿಯಲ್ಲಿ ಮುಗಿಯದೇ ಕ್ರೀಡೆಗಳ ವಿಳಂಬಕ್ಕೆ ಕಾರಣವಾಯಿತೆಂದೂ ಟೀಕಿಸಿದರು.[೧೧] ಇಸವಿ 2003ರಲ್ಲಿ PSG ಪರ ಗುತ್ತಿಗೆ ಒಪ್ಪಂದದ ಎರಡು ವರ್ಷಕ್ಕಿಂತ ಕಡಿಮೆ ಕಾಲಾವಧಿಯ PSG ಯು ಯಾವುದೇ ಐರೋಪ್ಯ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲವಾಗಿದ್ದರಿಂದ, ಕ್ಲಬ್ ತ್ಯಜಿಸುವ ನಿರ್ಧಾರ ಮಾಡಿದರು.

ಬಾರ್ಸಿಲೋನಾ

ಆರಂಭದಲ್ಲಿ FC ಬಾರ್ಸಿಲೋನಾ ಅಧ್ಯಕ್ಷ ಜೋನ್ ಲ್ಯಾಪೋರ್ಟಾ, ಡೇವಿಡ್ ಬೆಕಾಮ್ ಅವರನ್ನು ತಮ್ಮ ಕ್ಲಬ್‌ಗೆ ತರುವ ಭರವಸೆ ನೀಡಿದ್ದರು. ಆದರೆ ರಿಯಲ್ ಮ್ಯಾಡ್ರಿಡ್‌ಗೆ ಬೆಕಾಮ್ ವರ್ಗಾವಣೆಯಾದ್ದರಿಂದ, ಬಾರ್ಸಿಲೋನಾ ರೊನಾಲ್ಡಿನೊಗಾಗಿ ಹರಾಜು ಪ್ರಕ್ರಿಯೆ ಪ್ರವೇಶಿಸಿ €32,250,000 ಮೊತ್ತದ ಒಪ್ಪಂದಕ್ಕೆ ಸಹಿ ಪಡೆಯಲು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕಿಂತ ಹೆಚ್ಚಿನ ಬಿಡ್ ಮಾಡಿತು.[೧೪] ವಾಷಿಂಗ್ಟನ್, D.Cಯ RFK ಸ್ಟೇಡಿಯಂನಲ್ಲಿ (0} ಮಿಲನ್‌್ ವಿರುದ್ಧದ ಸೌಹಾರ್ದ ಪಂದ್ಯಕ್ಕೆ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿ 2-0 ಗೆಲುವಿನ ಪಂದ್ಯದಲ್ಲಿ ಒಂದು ಗೋಲು ಗಳಿಸಿದರು. ಪಂದ್ಯಾವಳಿಯ ಹಣಾಹಣಿಯ ಮೊದಲಾರ್ಧದಲ್ಲೇ ಗಾಯಗೊಂಡ ಅವರು,ಪುನಃ ಆಟಕ್ಕೆ ಮರಳಿ ಬಾರ್ಸಿಲೋನಾ ಲೀಗ್‌ ತಂಡ ಪಂದ್ಯಾವಳಿಯ ಕೊನೆಯಲ್ಲಿ ಎರಡನೇ ಸ್ಥಾನ ಗಳಿಸಲು ನೆರವಾದರು.

ರೊನಾಲ್ಡಿನೊ ತಮ್ಮ ಪ್ರಥಮ ಲೀಗ್ ಪ್ರಶಸ್ತಿಯನ್ನು 2004-05ರಲ್ಲಿ ಗೆದ್ದರು. ಡಿಸೆಂಬರ್ 20, 2004ರಂದು ವರ್ಷದ FIFA ವಿಶ್ವ ಆಟಗಾರ ಎಂದೂ ಹೆಸರಾದರು. ಚೆಲ್ಸಿಯದ ಫ್ರಾಂಕ್ ಲಾಂಪಾರ್ಡ್ ಮತ್ತು ಸಹವರ್ತಿ ಬಾರ್ಕಾ ಆಟಗಾರ ಸ್ಯಾಮ್ಯುಯಲ್ ಎಟೊ ಅವರನ್ನು ಪರಾಭವಗೊಳಿಸಿ 2005ರಲ್ಲಿ ವರ್ಷದ FIFA ವಿಶ್ವ ಆಟಗಾರ ಗೌರವವನ್ನು ರೊನಾಲ್ಡಿನೊ ಎರಡನೇ ಬಾರಿ ಪಡೆದರು. 2005 ಮಾರ್ಚ್ 8ರಂದು ಬಾರ್ಸಿಲೋನಾ ಪ್ರಥಮ ನಾಕ್‌ಔಟ್ ಸುತ್ತಿನ ಚೆಲ್ಸಿಯ ವಿರುದ್ಧದ UEFA ಚಾಂಪಿಯನ್ಸ್ ಲೀಗ್‌ನಿಂದ ಹೊರಬಿದ್ದಿತು. ರೊನಾಲ್ಡಿನೊ 4-2 ರ ಪರಾಜಿತ ಪಂದ್ಯದಲ್ಲಿನ ಎರಡೂ ಗೋಲುಗಳನ್ನು ಅವರೇ ಗಳಿಸಿದರು.[೧೫]

2008ರ ಗುತ್ತಿಗೆ ಅವಧಿ ಮುಗಿದ ರೊನಾಲ್ಡಿನೊಗೆ 2014ರವರೆಗೆ ಅವಧಿ ವಿಸ್ತರಣೆಗೆ ಪ್ರಸ್ತಾಪಿಸಲಾಯಿತು. ಆ ಒಪ್ಪಂದದಿಂದ ಅವರಿಗೆ 9 ವರ್ಷಗಳಲ್ಲಿ £85 ದಶಲಕ್ಷ ಆದಾಯ ಗಳಿಸಬಹುದಾಗಿದ್ದನ್ನು (0/} ತಿರಸ್ಕರಿಸಿದರು. ಸೆಪ್ಟೆಂಬರ್ 2005ರಲ್ಲಿ ಕನಿಷ್ಠ-ಶುಲ್ಕ ಬಿಡುಗಡೆ ನಿಯಮದ ಮೇರೆಗೆ ಎರಡು ವರ್ಷಗಳಿಗೆ ಸಹಿ ಹಾಕಿದರು.ಕ್ಲಬ್ಬೊಂದು ರೊನಾಲ್ಡಿನೊಗೆ ಕನಿಷ್ಠ £85 ದಶಲಕ್ಷ ನೀಡುವ ಪ್ರಸ್ತಾಪವನ್ನು ಬಾರ್ಸಿಲೋನಾಗೆ ಮಂಡಿಸಿದರೆ ಅವರಿಗೆ ನಿರ್ಗಮಿಸಲು ನಿಯಮದಲ್ಲಿ ಅವಕಾಶವಿತ್ತು.[೧೬]

NASA ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾಂಕ್ ರಿಜ್‌ಕಾರ್ಡ್ ಜತೆ ರೊನಾಲ್ಡಿನೊ.

2004-05ರ ಕ್ರೀಡಾ ಋತುವಿನ ಅಂತ್ಯದಲ್ಲಿ ರೊನಾಲ್ಡಿನೊಗೆ ಹಲವಾರು ವೈಯಕ್ತಿಕ ಪ್ರಶಸ್ತಿಗಳ ಸುರಿಮಳೆಯ ಕಾಲ ಆರಂಭವಾಯಿತು. ಸೆಪ್ಟೆಂಬರ್ 2005ರಲ್ಲಿ FIFPro ಫಿಫ್ಪ್ರೋ ದ ಉದ್ಘಾಟನಾ ವರ್ಷದ ವಿಶ್ವ ಆಟಗಾರ ಹೆಗ್ಗಳಿಕೆಗೆ ಅವರು ಪಾತ್ರರಾದರು. 2005 ರ FIFPro ಫಿಫ್ಪ್ರೊ ವಿಶ್ವ XIಗೆ ಆಯ್ಕೆಯಾದರು. ಅದೇ 2005ರಲ್ಲಿ ಐರೋಪ್ಯ ಫುಟ್ಬಾಲ್ ಆಟಗಾರ ಎಂಬ ಹೆಸರೂ ಪಡೆದರು. ಅದೇ ವರ್ಷ,ತಮ್ಮ ಪ್ರಶಸ್ತಿಗಳ ಸಂಗ್ರಹಕ್ಕೆ ಎರಡನೇ ಬಾರಿ ವಿಶ್ವದ ಫಿಫಾ FIFA ವರ್ಷದ ಆಟಗಾರ ಬಿರುದನ್ನು 956 ಪಾಯಿಂಟ್‌ಗಳೊಂದಿಗೆ ಸೇರಿಸಿದರು.ರನ್ನರ್ ಅಪ್ ಫ್ರಾಂಕ್ ಲ್ಯಾಂಪಾರ್ಡ್(306) ಅವರಿಗಿಂತ ಮ‌ೂರು ಪಟ್ಟು ಹೆಚ್ಚು ಪಾಯಿಂಟ್ ಗಳಿಸಿದರು. ನವೆಂಬರ್ 19ರ El ಕ್ಲಾಸಿಕೊ ದ ಮೊದಲ ಹಂತದಲ್ಲಿ ಬಾರ್ಸಿಲೋನಾ ರಿಯಲ್ ಮ್ಯಾಡ್ರಿಡ್ ತಂಡ ಸೋಲಿಸಿದ ಪಂದ್ಯದಲ್ಲಿ ರೊನಾಲ್ಡಿನೊ ಎರಡು ಗೋಲು ಗಳಿಸಿದರು. ರೊನಾಲ್ಡಿನೊ ಎರಡನೇ ಗೋಲಿನಿಂದ ಪಂದ್ಯ ಬಾಚಿಕೊಂಡ ಬಳಿಕ, ಮ್ಯಾಡ್ರಿಡ್ ಅಭಿಮಾನಿಗಳು ಎದ್ದು ನಿಂತು ವಿಜಯೋತ್ಸವದ ಹರ್ಷೋದ್ಗಾರ ಮಾಡಿದರು.

ರೊನಾಲ್ಡಿನೊ ಅವರ ಸೆಲ್ಟಾ ಡಿ ವೀಗೊ ವಿರುದ್ಧದ ಕಾರ್ನರ್ ಕಿಕ್.

ರೊನಾಲ್ಡಿನೊ 2006ರ ಜನವರಿಯಲ್ಲಿ ಸತತ ಮ‌ೂರನೇ ಬಾರಿಗೆ UEFA ವರ್ಷದ ತಂಡ ಗೌರವಕ್ಕೆ ಪಾತ್ರರಾದರು. ಅಲ್ಲದೇ ಸ್ವದೇಶಿ ನೆಲದಲ್ಲಿನ '05-06 ಚಾಂಪಿಯನ್ಸ್ ಲೀಗ್ ಕ್ವಾರ್ಟರ್ಫೈನಲ್ಸ್‌ನಲ್ಲಿ 2-0 ವಿಜಯದೊಂದಿಗೆ SL ಬೆನ್‌ಫಿಕ ತಂಡವನ್ನು ಬಾರ್ಸಿಲೋನಾ ಹೊರದೂಡುವಲ್ಲಿ ಒಂದು ಗೋಲಿನ ಕೊಡುಗೆ ನೀಡಿದರು. ಲುಡೋವಿಕ್ ಗಿಲಿ ಸರಣಿಯ ಏಕೈಕ ಗೋಲ್ ಗೆ ರೊನಾಲ್ಡಿನೊ ನೆರವಾಗಿ, ಮಿಲನ್‌್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 1-0 ವಿಜಯದ ಬಳಿಕ,ಬಾರ್ಸಿಲೋನಾ ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿತು. 2006 ಮೇ 17ರ ಫೈನಲ್‌ನಲ್ಲಿ ಆರ್ಸೆನಲ್ ತಂಡವನ್ನು 2-1 ರಿಂದ ಸೋಲಿಸಿ ವಿಜಯಶಾಲಿಯಾಯಿತು. ಎರಡು ವಾರಗಳ ಮುಂಚೆಯೇ, ಬಾರ್ಸಿಲೋನಾ ಸೆಲ್ಟಾ ವಿಗೊ ವಿರುದ್ಧ 1-0 ವಿಜಯದೊಂದಿಗೆ ತನ್ನ ಎರಡನೇ ನೇರ ಲಾ ಲಿಗಾ ಪ್ರಶಸ್ತಿ ಕಬಳಿಸಿ ರೊನಾಲ್ಡಿನೊಗೆ ವೃತ್ತಿ ಜೀವನದ ಪ್ರಥಮ ಡಬಲ್ ಗೆಲುವು ತಂದುಕೊಟ್ಟಿತು. ಎಲ್ಲ ಸ್ಪರ್ಧೆಗಳಲ್ಲಿ ವೃತ್ತಿ ಜೀವನದ ಅತ್ಯುತ್ತಮ ಎನ್ನಲಾದ 26 ಗೋಲು ಗಳಿಸಿ ಆ ಕ್ರೀಡಾವಧಿಯನ್ನು ಮುಗಿಸಿದರು. ಅಲ್ಲದೇ 2005-06ರ ಚಾಂಪಿಯನ್ಸ್ ಲೀಗ್ ವರ್ಷದ ಆಟಗಾರರಾಗಿ ಹೆಸರಿಸಲ್ಪಟ್ಟರು.

2006ರ ನವೆಂಬರ್ 25ರಂದು ರೊನಾಲ್ಡಿನೊ ವಿಲ್ಲಾರ್ರಿಯಲ್ ವಿರುದ್ಧದ ತಮ್ಮ 50ನೇ ಕೆರೀರ್ ಲೀಗ್ ಗೋಲು ಗಳಿಸಿದರು. ಬಳಿಕ ಎರಡನೇ ಬಾರಿಗೆ ತಲೆಯ ಮೇಲಿಂದ [[ಬೈಸಿಕಲ್ ಕಿಕ್|ಬೈಸಿಕಲ್ ಕಿಕ್]] ಮ‌ೂಲಕ ಎರಡನೇ ಗೋಲು ಬಾರಿಸಿದರು. ತಾವು ಬಾಲ್ಯದಿಂದಲೂ ಈ ಗೋಲು ಗಳಿಸುವ ಕನಸು ಕಂಡಿದ್ದಾಗಿ ತಮ್ಮ ಕೊನೆಯ ಗೋಲು ಕುರಿತು ಅವರು ವರದಿಗಾರರಿಗೆ ನೀಡಿದ ಮಾಹಿತಿಯಲ್ಲಿ ವಿವರಿಸಿದ್ದರು.[೧೭] ಮೆಕ್ಸಿಕೊ ಕ್ಲಬ್ ಅಮೆರಿಕ ವಿರುದ್ಧ ಬಾರ್ಸಿಲೋನ ಡಿಸೆಂಬರ್ 14ರ 4-0 ಕ್ಲಬ್ ವಿಶ್ವಕಪ್ ವಿಜಯದಲ್ಲಿ ಒಂದು ಗೋಲು ಗಳಿಸಿದರು. ಇನ್ನೆರಡು ಗೋಲು ಗಳಿಕೆಗೂ ನೆರವಾದರು. ಆದರೆ ಬಾರ್ಸಿಲೋನಾ ಫೈನಲ್‌ನಲ್ಲಿ ಬ್ರೆಜಿಲಿಯನ್ ಕ್ಲಬ್ ಇಂಟರ್ನ್ಯಾಷನಲ್ ವಿರುದ್ಧ 1-0 ಸೋಲನ್ನು ಅನುಭವಿಸಿತು.[೧೮] ಮತ್ತಾರೂ ಅಲ್ಲದೆ,ರೊನಾಲ್ಡಿನೊ ಸ್ಪರ್ಧೆಯಲ್ಲಿ ಕಂಚಿನ ಚೆಂಡು ತಮ್ಮದಾಗಿಸಿ ಪ್ರಶಸ್ತಿಗೆ ಪಾತ್ರರಾದರು.

ಮರುದಿನ, ರೊನಾಲ್ಡಿನೊ 2006 FIFA ವರ್ಷದ ವಿಶ್ವ ಆಟಗಾರ ಸ್ಫರ್ಧೆಯಲ್ಲಿ ವಿಶ್ವ ಕಪ್ ವಿಜೇತ ನಾಯಕ ಫಾಬಿಯೊ ಕೆನ್ನವಾರೊ ಮತ್ತು ಜಿನೆಡೈನ್ ಜಿಡಾನೆ ನಂತರದ ಸ್ಥಾನದ ಆಟಗಾರರಾಗಿ ಆಯ್ಕೆಯಾದರು.[೧೯] ಜನವರಿ 2007ನೆ ವರ್ಷದ UEFA ತಂಡದಲ್ಲಿ ರೊನಾಲ್ಡಿನೊ ಮ‌ೂರನೇ ಬಾರಿಗೆ ನೇರ ಆಯ್ಕೆ ಪಡೆದರು. ಸುಮಾರು 290,000ಕ್ಕೂ ಹೆಚ್ಚು ನಾಮನಿರ್ದೇಶನಗಳೊಂದಿಗೆ ಅತ್ಯಧಿಕ ಮತ ಗಳಿಸಿದರು.[೨೦] ಕೆಲ ದಿನಗಳ ಮುಂಚೆ ರಿಯಲ್ ಮ್ಯಾಡ್ರಿಡ್ ಜತೆ ಬಾರ್ಸಿಲೋನಾದ 3-3 ಎಲ್ ಕ್ಲಾಸಿಕೊ ಡ್ರಾ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ಮಾರ್ಚ್ 13ರ ದತ್ತಿ(ಚಾರಿಟಿ) ಪಂದ್ಯವೊಂದು ಅನಿವಾರ್ಯವಾಗಿ ಕೈತಪ್ಪಿತು.[೨೧][೨೨]

ಮಿಲನ್‌ ಪರ ಆಡುತ್ತಿರುವ ರೊನಾಲ್ಡಿನೊ

2008ರ ಫೆಬ್ರವರಿ 3ರಂದು CA ಒಸಾಸುನಾ ವಿರುದ್ಧದ ಲೀಗ್ ನಲ್ಲಿ ತಮ್ಮ ವೃತ್ತಿಜೀವನದ 200ನೇ ಪಂದ್ಯ ಆಡಿದರು. ಆದಾಗ್ಯೂ, 2007-08ರ ಅಭಿಯಾನದಾದ್ಯಂತ, ಗಾಯಗಳು ಅಲ್ಲದೇ, ಏಪ್ರಿಲ್ 3ರ ಬಲಕಾಲಿನ ಸ್ನಾಯು ಸೆಳೆತದ ನೋವಿನಿಂದ ಕ್ರೀಡಾ ಋತು ಅಕಾಲಿಕವಾಗಿ ಅಂತ್ಯಗೊಂಡಿತು.[೨೩] ರೊನಾಲ್ಡಿನೊ ಅವರಿಗೆ ಹೊಸ ಸವಾಲು ಮತ್ತು ಅವರ ವೃತ್ತಿಜೀವನ ಪುನಶ್ಚೇತನಕ್ಕೆ ಹೊಸ ಫುಟ್ಬಾಲ್ ಕ್ಲಬ್‌ವೊಂದರ ಪ್ರವೇಶದ ಅಗತ್ಯವಿದೆಯೆಂದು ಮೇ 19ರಲ್ಲಿ ಲಾಪೋರ್ಟಾ ಹೇಳಿದ್ದರು [೨೪] ಮ್ಯಾಂಚೆಸ್ಟರ್ ಸಿಟಿ ಮಾಲೀಕ ಥಾಕ್ಸಿನ್ ಶಿನಾವಾತ್ರಾ ರೊನಾಲ್ಡಿನೊರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ಜೂನ್ 6ರಂದು ದೃಢಪಡಿಸಿದ್ದರು.[೨೫]

ರೊನಾಲ್ಡಿನೊ ಮತ್ತು ಬಾರ್ಸಿಲೋನಾ ತಂಡದ ಸಹ ಆಟಗಾರ ಲಯೋನೆಲ್ ಮೆಸ್ಸಿ ಜೂನ್ 28ರಂದು ವೆನೆಜುವೆಲಾದಲ್ಲಿ ನಡೆದ ಜನಾಂಗೀಯ ವಿರೋಧಿ ಪ್ರದರ್ಶನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆಗಳ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯವು 7-7 ಡ್ರಾನಲ್ಲಿ ಮುಕ್ತಾಯಗೊಂಡಿತು. ರೊನಾಲ್ಡಿನೊ ಸ್ವತಹ ಜೋಡಿ ಗೋಲು ಮತ್ತು ಎರಡು ಗೋಲು ಗಳಿಕೆಗೆ ನೆರವಾಗುವ ಮ‌ೂಲಕ ಬಾರ್ಸಿಲೋನಾ ಆಟಗಾರನಾಗಿ ಕೊನೆಯ ಪಂದ್ಯ ಆಡಿದರು.[೨೬]

ಮಿಲನ್‌

ರೊನಾಲ್ಡಿನೊ ಇಟಾಲಿಯನ್ ಸರಣಿ Aನ ದೈತ್ಯ ಮಿಲನ್‌‌ಗೆ ಸೇರುವ ಜುಲೈ2008ರ ಮ್ಯಾಂಚೆಸ್ಟರ್ ನಗರದ £25.5 ದಶಲಕ್ಷ ಪ್ರಸ್ತಾವನೆಯನ್ನು ತಳ್ಳಿಹಾಕಿದರು.ಮ‌ೂರು ವರ್ಷಗಳ ಗುತ್ತಿಗೆ ಒಪ್ಪಂದದ ಮೊತ್ತ ವರ್ಷಕ್ಕೆ ಸುಮಾರು £5.1 ದಶಲಕ್ಷ(€6.5 ದಶಲಕ್ಷ)ವಾಗಿತ್ತು.ಸುಮಾರು [೨೭]£14.5 ದಶಲಕ್ಷ (€18.5 ದಶಲಕ್ಷ) ಶುಲ್ಕ ಒಳಗೊಂಡಿತ್ತು.[೨೮][೨೯] 10ನೇ ಕ್ರಮಾಂಕದ ಜರ್ಸಿಯನ್ನು ಅವರ ತಂಡದ ಆಟಗಾರ ಕ್ಲೇರೆನ್ಸ್ ಸೀಡಾರ್ಫ್ ಈಗಾಗಲೇ ಹೊಂದಿದ್ದರು. 1980 ಅವರ ಹುಟ್ಟಿದ ವರ್ಷವಾದ ಕಾರಣದಿಂದ 80ನೇ ಕ್ರಮಾಂಕದ ಜರ್ಸಿಯನ್ನು ಆಯ್ಕೆ ಮಾಡಿದರು.

ರೊನಾಲ್ಡಿನೊ 2008 ಸೆಪ್ಟೆಂಬರ್ 28ರಂದು ಇಂಟರ್ನ್ಯಾಷನೇಲ್ ವಿರುದ್ಧ 1-0 ಡರ್ಬಿ ಗೆಲುವಿನಲ್ಲಿ ತಮ್ಮ ಪ್ರಥಮ ಗೋಲನ್ನು ದಾಖಲಿಸಿದರು.ಸಾಂಪ್ಟೋಡಿಯ ವಿರುದ್ಧ 2008ರ ಅಕ್ಟೋಬರ್ 19ರಂದು 3-0 ಜಯದಲ್ಲಿ ಅವರ ಪ್ರಥಮ ಬ್ರೇಸ್ (ಎರಡು ಗೋಲು ಗಳಿಕೆ) ಸಾಧ್ಯವಾಯಿತು. ನವೆಂಬರ್ 6ರಂದು ನಡೆದ UEFA ಕಪ್ ಗ್ರೂಪ್ ಹಂತದ 93ನೇ ನಿಮಿಷದ ಪಂದ್ಯದಲ್ಲಿ S.C.ಬ್ರಾಗಾ ವಿರುದ್ಧ ಪಂದ್ಯದ ವಿಜಯಿ ಗೋಲನ್ನು ಬಾರಿಸಿದರು.

ಎಲ್ಲ ಸ್ಪರ್ಧೆಗಳ 32 ಪಂದ್ಯಗಳಲ್ಲಿ 10 ಗೋಲುಗಳನ್ನು ಬಾರಿಸಿ ಮಿಲನ್‌ ನ ಮೊದಲನೇ ಕ್ರೀಡಾವಧಿಯನ್ನು ಮುಕ್ತಾಯಗೊಳಿಸಿದರು. ಕ್ರೀಡಾ ಋತುವಿನಲ್ಲಿ ಒಳ್ಳೆಯ ಆರಂಭದ ಬಳಿಕ ರೊನಾಲ್ಡಿನೊ ದೈಹಿಕ ಸಮಸ್ಯೆಗೆ ಸಿಲುಕಿ ಆಗಾಗ ವಿಶ್ರಾಂತ ಆಟಗಾರರಾಗಿ ಉಳಿದರು. ಹೀಗಾಗಿ ಮಿಲನ್‌್ ಮೊದಲನೇ ಕ್ರೀಡಾವಧಿ ನಿರಾಶಾದಾಯಕ ಅಂತ್ಯಕಂಡಿತು.

ಕಾಕಾ ರಿಯಲ್‌ ಮ್ಯಾಡ್ರಿಡ್‌ಗೆ ನಿರ್ಗಮಿಸಿದ್ದರಿಂದ, ಮಿಲನ್‌ ಅಭಿಯಾನದಲ್ಲಿ ಹೆಚ್ಚಿನ ಪಾತ್ರವಹಿಸುವುದಾಗಿ ರೊನಾಲ್ಡಿನೊ ಭರವಸೆ ನೀಡಿದ್ದರು. ಕ್ರೀಡಾವಧಿಯ ನಿಧಾನಗತಿಯ ಆರಂಭದ ಬಳಿಕ, ರೊನಾಲ್ಡಿನೊ ಕ್ರಮೇಣ ಆಟದಲ್ಲಿ ಮತ್ತೆ ಲಯ ಕಂಡುಕೊಂಡು,FC ಬಾರ್ಸಿಲೋನಾ ಪರ ಅಂತಾರಾಷ್ಟ್ರೀಯ ಸೂಪರ್ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಂತಾರಾಷ್ಟ್ರೀಯ ವೃತ್ತಿ ಬದುಕು

2006ನೇ ವಿಶ್ವಕಪ್‌ ಸಂದರ್ಭದಲ್ಲಿ ರೊನಾಲ್ಡಿನೊ ಅವರು ಕಾರ್ನರ್ ಕಿಕ್ ಸ್ವೀಕರಿಸುತ್ತಿರುವುದು.

ಪ್ರತಿಯೊಂದು ವಯೋಮಾನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದ ಕೆಲವೇ ಬ್ರೆಜಿಲ್ ಆಟಗಾರರಲ್ಲಿ ರೊನಾಲ್ಡಿನೊ ಒಬ್ಬರಾಗಿದ್ದರು. 1997ರಲ್ಲಿ ನಡೆದ FIFA U-17 ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಗಳಿಸಿದ ಪ್ರಥಮ ಬ್ರೆಜಿಲ್ ತಂಡದಲ್ಲಿ ಅವರಿದ್ದರು. ಅದರಲ್ಲಿ ಆಸ್ಟ್ರಿಯ ವಿರುದ್ಧ ಪ್ರಥಮ ಗ್ರೂಪ್ ಪಂದ್ಯದಲ್ಲಿ ಪ್ರಥಮ ಗೋಲು ಪೆನಾಲ್ಟಿ ಮ‌ೂಲಕ ಲಭಿಸಿತು. ಬ್ರೆಜಿಲ್ 7-0 ಗೋಲಿನಿಂದ ವಿಜಯಿಯಾಯಿತು. ರೊನಾಲ್ಡಿನೊ ಎರಡು ಗೋಲು ಬಾರಿಸಿ ಕಂಚಿನ ಚೆಂಡು ಪ್ರಶಸ್ತಿಗೆ ಪಾತ್ರರಾದರು. ಬ್ರೆಜಿಲ್ ಒಟ್ಟು 21 ಗೋಲು ಹೊಡೆದು ಎದುರಾಳಿಗಳಿಗೆ ಕೇವಲ ಎರಡು ಗೋಲುಗಳಿಗೆ ಅವಕಾಶ ನೀಡಿತು..

ಬ್ರೆಜಿಲ್ ಅಧ್ಯಕ್ಷ ಲುಲಾ ಜತೆ ರೊನಾಲ್ಡಿನೊ

ಅಂತಾರಾಷ್ಟ್ರೀಯ ಕ್ರೀಡಾಕೂಟಗೆ ಸಂಬಂಧಿಸಿದಂತೆ 1999 ರೊನಾಲ್ಡಿನರ ಪಾಲಿಗೆ ಅತ್ಯಂತ ಚುರುಕಿನ ವರ್ಷವಾಗಿತ್ತು. 1999ರ FIFA ಯುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು,ಬ್ರೆಜಿಲ್ ಕೊನೆಯ ಗ್ರೂಪ್ ಪಂದ್ಯದಲ್ಲಿ ತಮ್ಮ ಪ್ರಥಮ ಗೋಲು ದಾಖಲಿಸಿದರು. 16ನೇ ಸುತ್ತಿನಲ್ಲಿ, ಕ್ರೋಯೇಷಿಯ ವಿರುದ್ಧ 4-0 ಪಂದ್ಯದ ಪ್ರಥಮಾರ್ಧದಲ್ಲಿ ಎರಡು ಗೋಲು ಗಳಿಸಿ, ಮ‌ೂರು ಗೋಲುಗಳಿಂದ ಆಟ ಮುಗಿಸಿದರು. ಕ್ವಾರ್ಟರ್ಫೈನಲ್‌ನಲ್ಲಿ ಬ್ರೆಜಿಲ್ ಉರುಗ್ವೆ ತಂಡದ ವಿರುದ್ಧ ಸೋಲಪ್ಪಿತು. ಕೋಪಾ ಅಮೆರಿಕಾ ಪಂದ್ಯಾವಳಿಯು 1999ರ ಆರಂಭಕ್ಕೆ ಎರಡು ದಿನಗಳು ಮುಂಚೆ ಜೂನ್ 26ರಂದು ಲ್ಯಾಟ್ವಿಯ ವಿರುದ್ಧ 3-0 ಜಯಗಳಿಸಿತು.ರೊನಾಲ್ಡಿನೊ ಬ್ರೆಜಿಲ್ ಪರ ತಮ್ಮ ಪ್ರಥಮ ಕ್ಯಾಪ್ ಗಳಿಸಿದರು. ಬ್ರೆಜಿಲ್‌ ಜಯಭೇರಿ ಬಾರಿಸಿದ ಕೋಪಾ ಅಮೆರಿಕ ಅಭಿಯಾನದಲ್ಲಿ ಒಂದು ಗೋಲು ಗಳಿಸಿದರು. ಕೋಪಾ ಅಮೆರಿಕ ಪಂದ್ಯದ ಒಂದು ವಾರದ ಬಳಿಕ ಅವರಿಗೆ 1999 ಕಾನ್ಫೆಡರೇಷನ್ಸ್ ಕಪ್‌ಗೆ ಆಡಲು ಆಹ್ವಾನಿಸಲಾಯಿತು. ಅದರಲ್ಲಿ ಫೈನಲ್ ಪಂದ್ಯ ಹೊರತುಪಡಿಸಿ ಪ್ರತಿಯೊಂದು ಪಂದ್ಯದಲ್ಲಿ ಗೋಲು ಗಳಿಸಿದರು. ಸೌದಿ ಅರೇಬಿಯವನ್ನು ಸೆಮಿಫೈನಲ್‌ನಲ್ಲಿ 8-0ಯಿಂದ ಸದೆಬಡಿದ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಗಳಿಸಿದ್ದು ವಿಶೇಷವಾಗಿತ್ತು. (0} ಮೆಕ್ಸಿಕೊ ವಿರುದ್ಧ 4-3ರಲ್ಲಿ ಸೋಲು ಅನುಭವಿಸಿದ ಪೈನಲ್ ಪಂದ್ಯದಲ್ಲಿ ರೊನಾಲ್ಡಿನೊಗೆ ಗೋಲು ಗಳಿಕೆ ಸಾಧ್ಯವಾಗಲಿಲ್ಲ. ಪಂದ್ಯ ಶ್ರೇಷ್ಠ ಎನಿಸಿಕೊಂಡು ಚಿನ್ನದ ಚೆಂಡು ಪ್ರಶಸ್ತಿ ಗೆದ್ದರು ಮತ್ತು ಪಂದ್ಯಾವಳಿಯಲ್ಲಿ ಅತ್ಯಧಿಕ ಗೋಲು ಗಳಿಸಿದ್ದಕ್ಕಾಗಿ(ಟಾಪ್ ಸ್ಕೋರರ್) ಚಿನ್ನದ (ಶೂ) ಬೂಟಿನ ಪ್ರಶಸ್ತಿಗೂ ಪಾತ್ರರಾದರು.

2000ರಲ್ಲಿ ರೊನಾಲ್ಡಿನೊ ಬ್ರೆಜಿಲ್ U-23 ತಂಡದೊಂದಿಗೆ ಆಸ್ಟ್ರೇಲಿಯಸಿಡ್ನಿಯಲ್ಲಿ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರು. ಅದೇ ವರ್ಷದ ಆರಂಭದಲ್ಲಿ,7 ಪಂದ್ಯಗಳಲ್ಲಿ 9 ಗೋಲು ಗಳಿಸಿ ಪೂರ್ವ-ಒಲಿಂಪಿಕ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ತಂಡವನ್ನು ವಿಜಯದತ್ತ ಕೊಂಡೊಯ್ದರು. ಆದಾಗ್ಯೂ, ಒಲಿಂಪಿಕ್ಸ್‌ನಲ್ಲಿ ಬ್ರೆಜಿಲ್ ಕ್ಯಾಮೆರೂನ್ ವಿರುದ್ಧ ಕ್ವಾರ್ಟ‌ರ್ಫೈನಲ್‌ನಲ್ಲಿ ಸೋಲಪ್ಪಿತು. ಬಳಿಕ ಕ್ಯಾಮರೂನ್ ಚಿನ್ನದ ಪದಕ ಗೆದ್ದುಕೊಂಡಿತು. ಕ್ಯಾಮರೂನ್ ವಿರುದ್ಧದ ಕ್ವಾರ್ಟರಫೈನಲ್ ಸೋಲಿನಲ್ಲಿ ರೊನಾಲ್ಡಿನೊ ನಾಲ್ಕು ಬಾರಿ ಗೋಲಿಗಾಗಿ ಪ್ರಯತ್ನಿಸಿ ಒಂದೇ ಗೋಲು ಗಳಿಸಿದರು.

2002ರಲ್ಲಿ ರೊನಾಲ್ಡೊ ಮತ್ತು ರಿವಾಲ್ಡೊ ಜತೆ ಪ್ರಬಲ ಆಕ್ರಮಣಕಾರಿ ತಂಡದ ಭಾಗವಾಗಿ ರೊನಾಲ್ಡಿನೊ 2002ರ ತಮ್ಮ ಪ್ರಥಮ ವಿಶ್ವಕಪ್‌ನಲ್ಲಿ ಭಾಗವಹಿಸಿದರು. 1999ರ ಕೋಪಾ ಅಮೆರಿಕ ವಿಜೇತ ತಂಡದಲ್ಲಿ ಕೂಡ ಅವರಿದ್ದರು. ಐದು ಪಂದ್ಯಗಳಲ್ಲಿ ಅವರು ಎರಡು ಗೋಲು ಗಳಿಸಿದರು. ಪ್ರಥಮ ಗೋಲು ಚೀನಾ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ಬಂದಿತು. ಆ ಪಂದ್ಯವನ್ನು ಬ್ರೆಜಿಲ್ 4-0ಯಿಂದ ಗೆದ್ದುಕೊಂಡಿತು. ಜೂನ್ 21ರಂದು ಇಂಗ್ಲೆಂಡ್ ವಿರುದ್ಧ ಕ್ವಾರ್ಟರ ಫೈನಲ್ ಪಂದ್ಯದಲ್ಲಿ ಅವರ ಎರಡನೇ ಗೋಲು ವಿಜಯದ ಗೋಲಾಗಿತ್ತು. 50ನೇ ನಿಮಿಷದಲ್ಲಿ,ರೊನಾಲ್ಡಿನೊ 35 ಮೀಟರ್ ದೂರದಿಂದ ಫ್ರೀ-ಕಿಕ್ ಪಡೆದು ಇಂಗ್ಲೆಂಡ್ ಗೋಲ್‌ಕೀಪರ್ ಡೇವಿಡ್ ಸೀಮನ್ ಕಣ್ತಪ್ಪಿಸಿ ಗೋಲು ಬಾರಿಸಿ ಬ್ರೆಜಿಲ್‌ಗೆ 2-1 ಜಯ ತಂದರು. ಆದರೆ ಇಂಗ್ಲೆಂಡ್ ರಕ್ಷಕ ಆಟಗಾರ ಡ್ಯಾನಿ ಮಿಲ್ಸ್ ವಿರುದ್ಧದ ಅಸಹ್ಯ ವರ್ತನೆಯ ಕಾರಣದಿಂದಾಗಿ 7 ನಿಮಿಷಗಳ ಬಳಿಕ ಅವರನ್ನು ಹೊರಕ್ಕೆ ಕಳಿಸಲಾಯಿತು. ಸೆಮಿಫೈನ‌ಲ್ ಪಂದ್ಯದಲ್ಲಿ ಅವರನ್ನು ಅಮಾನತುಗೊಳಿಸಲಾಯಿತು. ಫೈನಲ್‌ನಲ್ಲಿ ಬ್ರೆಜಿಲ್ ಆರಂಭದ ಲೈನ್‌ಅಪ್‌ಗೆ ಹಿಂತಿರುಗಿ ಜರ್ಮನಿ ವಿರುದ್ಧ 2-0 ವಿಜಯ ಗಳಿಸಿ, ಬ್ರೆಜಿಲ್ ಐದನೇ ಬಾರಿಗೆ ವಿಶ್ವಕಪ್ ಗೆದ್ದ ಹಿರಿಮೆಗೆ ಪಾತ್ರವಾಯಿತು.

ಕ್ಸೇವಿಯರ್ ಮಾರ್ಗೈರಜ್ ಮತ್ತು ರೊನಾಲ್ಡಿನೊ,ಸೇಂಟ್ ಜಾಕೋಬ್ ಸ್ಟೇಡಿಯನ್, ಬೇಸಲ್(ಸ್ವಿಜರ್ಲೆಂಡ್), ಸ್ವಿಜರ್‌ಲೆಂಡ್-ಬ್ರೆಸಿಲ್ 1:2

2003 ಕಾನ್ಫಡರೇಷನ್ಸ್ ಕಪ್ ರೊನಾಲ್ಡಿನೊ ಅವರ ಮುಂದಿನ ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿತ್ತು. ಆದಾಗ್ಯೂ, ರೊನಾಲ್ಡಿನೊ ಪಂದ್ಯಾವಳಿಯಲ್ಲಿ ಯಾವುದೇ ಗೋಲು ಗಳಿಸದೇ, ಬ್ರೆಜಿಲ್ ಕಳಪೆ ಪ್ರದರ್ಶನ ನೀಡಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿತು. ಬ್ರೆಜಿಲ್‌ನ 2004 ಕೋಪಾ ಅಮೆರಿಕ ತಂಡದ ಕೋಚ್ ಕಾರ್ಲೋಸ್ ಆಲ್ಬರ್ಟೊ ಪರೀರಾ ತಮ್ಮ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿ, ಬಹುತೇಕ ಮೀಸಲು ತಂಡ ಬಳಸಿದ್ದರಿಂದ ರೊನಾಲ್ಡಿನೊ ತಂಡದಿಂದ ಹೊರಗುಳಿದರು.[೩೦]

2005ರಲ್ಲಿ ಎರಡನೇ ಕಾನ್ಫಡರೇಷನ್ಸ್ ಕಪ್ ಟೈಟಲ್‌ನಲ್ಲಿ ಬ್ರೆಜಿಲ್ ತಂಡದ ನಾಯಕತ್ವ ವಹಿಸಿದರು. ಜೂನ್ 29ರಂದು ನಡೆದ ಪಂದ್ಯದಲ್ಲಿ ಕಡುವೈರಿ ಅರ್ಜೆಂಟಿನಾ ವಿರುದ್ಧ 4-1 ಜಯಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು. ರೊನಾಲ್ಡಿನೊ ಪಂದ್ಯದಲ್ಲಿ ಮ‌ೂರು ಗೋಲು ಗಳಿಸಿದರು. ಪಂದ್ಯಾವಳಿಯಲ್ಲಿ 9 ಗೋಲು ಬಾರಿಸಿ ಸಾರ್ವಕಾಲಿಕ ಗೋಲುಗಳಿಕೆದಾರರಾಗಿ ಕ್ಯುಯಾಟೆಮೋಕ್ ಬ್ಲಾಂಕೊ ಜತೆ ಸ್ಥಾನ ಹಂಚಿಕೊಂಡರು.

2008 ಬೇಸಿಗೆ ಒಲಂಪಿಕ್ಸ್‌ನಲ್ಲಿ ರೊನಾಲ್ಡಿನೊ.

ಆಡ್ರಿಯಾನೊ, ರೊನಾಲ್ಡೊ ಮತ್ತು ಕಾಕಾ ರೊಂದಿಗೆ ಪ್ರಖ್ಯಾತಿ ಪಡೆದ ಆಕ್ರಮಣಕಾರಿ ಕ್ರೀಡಾಳುಗಳ "ಮಾಂತ್ರಿಕ ಚತುಷ್ಠಯ "ಯದ ಭಾಗವಾಗಿ ರೊನಾಲ್ಡಿನೊ 2006 ವಿಶ್ವಕಪ್ ಫೈನಲ್ಸ್ ಪಂದ್ಯಗಳಲ್ಲಿ ಬ್ರೆಜಿಲ್‌‌ನ ಎಲ್ಲ ಐದು ಪಂದ್ಯಗಳಲ್ಲಿ ಪಾಲ್ಗೊಂಡರು. ಆದಾಗ್ಯೂ ನಾಲ್ವರೂ ಸೇರಿ ಕೇವಲ ಐದು ಗೋಲು ಮಾತ್ರ ಗಳಿಸಲು ಶಕ್ತರಾದರು.ಪಂದ್ಯಾವಳಿಯಲ್ಲಿ ಒಟ್ಟಾರೆ ಬ್ರೆಜಿಲ್ ನಿರಾಶಾದಾಯಕ ಪ್ರದರ್ಶನ ನೀಡಿತು. ಜಪಾನ್ ವಿರುದ್ಧ 4-1 ಗ್ರೂಪ್ ಹಂತದ ಜಯದಲ್ಲಿ ಕೇವಲ ಗಿಲ್ಬರ್ಟೊ ಬಾರಿಸಿದ ಗೋಲಿಗೆ ನೆರವು ನೀಡಿದ್ದನ್ನು ಬಿಟ್ಟರೆ ಸ್ವತಃ ಒಂದು ಗೋಲೂ ಗಳಿಸದೇ,ಅಂತಾರಾಷ್ಟ್ರೀಯ ವೃತ್ತಿಜೀವನದ ಒಟ್ಟಾರೆ ಪ್ರದರ್ಶನದಲ್ಲಿ ಅವರ ಸಾಧನೆ ಕಳಪೆಯೆನಿಸಿತು. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಫ್ರಾನ್ಸ್ 1-0 ಗೋಲಿನಿಂದ ಸೋಲಿಸಿದಾಗ ರೊನಾಲ್ಡಿನೊ ಪ್ರಾಮುಖ್ಯತೆ ಕಳೆದುಕೊಂಡರು. ಇಡೀ ಪಂದ್ಯದಲ್ಲಿ ಬ್ರೆಜಿಲ್ ಗೋಲಿನತ್ತ ಕೇವಲ ಒಂದೇ ಒಂದು ಹೊಡೆತ ಬಾರಿಸಿತ್ತು.[೩೧]ಸ್ವದೇಶಕ್ಕೆ ಹಿಂತಿರುಗಿದ ಕೂಡಲೇ ತಂಡವು ಬ್ರೆಜಿಲ್ ಫುಟ್ಬಾಲ್ ಅಭಿಮಾನಿಗಳು ಮತ್ತು ಮಾಧ್ಯಮದಿಂದ ಕಟು ಟೀಕೆಗೆ ಗುರಿಯಾಯಿತು. ವಿಶ್ವಕಪ್ ಪಂದ್ಯಾವಳಿಯಿಂದ ಬ್ರೆಜಿಲ್ ನಿರ್ಗಮಿಸಿದ ಎರಡು ದಿನಗಳ ನಂತರ ಜುಲೈ 3ರಂದು ಅಭಿಮಾನಿಗಳು ದಾಂಧಲೆ ಮಾಡಿದರು.ಆ ಸಂದರ್ಭದಲ್ಲಿ ಗಲಭೆಕೋರರು, 7.5 ಮೀಟರ್(2.5 ಅಡಿ)ಉದ್ದದ ಫೈಬರ್ಗ್ಲಾಸ್ ಮತ್ತು ರೆಸಿನ್‌ನಿಂದ ನಿರ್ಮಿಸಿದ ಚಾಪೆಕೊನಲ್ಲಿರುವ ರೊನಾಲ್ಡಿನೊ ಪ್ರತಿಮೆಗೆ ಬೆಂಕಿ ಹಚ್ಚಿ ಧ್ವಂಸಮಾಡಿದರು.[೩೨] ರೊನಾಲ್ಡಿನೊ ಪ್ರಥಮ FIFA ವಿಶ್ವಮಟ್ಟದ ಕ್ರೀಡಾಳು ವಾರ್ಷಿಕ ಪ್ರಶಸ್ತಿ ಗಳಿಸಿದ ನೆನಪಿಗಾಗಿ 2004ರಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು.ಅದೇ ದಿನ ರೊನಾಲ್ಡಿನೊ ಆಡ್ರಿಯಾನೊ ಜತೆ ಬಾರ್ಸಿಲೋನಾಗೆ ಹಿಂತಿರುಗಿ ತಮ್ಮ ನಿವಾಸದಲ್ಲಿ ಸಂತೋಷಕೂಟ ಹಮ್ಮಿಕೊಂಡು, ರಾತ್ರಿ ಕ್ಲಬ್‌ನಲ್ಲಿ ನಡೆದಂತೆ ಮರುದಿನ ಬೆಳಗಿನ ಜಾವದವರೆಗೆ ಸಂತೋಷಕೂಟದಲ್ಲಿ ಮುಳುಗಿದರು. ಅನೇಕ ಮಂದಿ ಬ್ರೆಜಿಲ್ ಅಭಿಮಾನಿಗಳ ಭಾವನೆಗೆ ನೋವುಂಟಾಯಿತು. ತಂಡದ ಒಟ್ಟಾರೆ ಪ್ರಯತ್ನದ ಕೊರತೆ ಮತ್ತು ಪಂದ್ಯಾವಳಿಯಲ್ಲಿ ಸೋತಿದ್ದರಿಂದ ತಮಗೆ ಮೋಸವಾಯಿತೆಂದು ಅಭಿಮಾನಿಗಳು ಭಾವಿಸಿದ್ದರು.[೩೩]

ಮಾರ್ಚ್ 27, 2007ರ ಚಿಲಿ ವಿರುದ್ಧ 4-0 ವಿಜಯದಲ್ಲಿ ಎರಡು ಗೋಲು ಗಳಿಸಿದರು. ಫೆಡರೇಷನ್ಸ್ ಕಪ್ 2005ನೇ ಫೈನಲ್ ಬಳಿಕ ಇದು ಪ್ರಥಮ ಗೋಲೆಂದು ಗುರುತಿಸಲ್ಪಟ್ಟಿತು.ಹೀಗೆ ಸುಮಾರು 2 ವರ್ಷಗಳವರೆಗೆ ಮುಂದುವರಿದ ಅವರ ಗೋಲುರಹಿತದ ಕಪ್ಪು ಗೆರೆ ಮಾಯವಾಗಿ ಅಂತ್ಯಗೊಂಡಿತು.[೩೪] ಕೆಲವು ಪಂದ್ಯಾವಳಿ ನಂತರ ವಿಶ್ರಾಂತಿ ನೀಡುವಂತೆ ಕೇಳಿದ ಬಳಿಕ 2007ರ ಕೋಪಾ ಅಮೆರಿಕ ಪಂದ್ಯಾವಳಿಗೆ ಅವರಿಗೆ ಅಹ್ವಾನದ ಕರೆಕಳುಹಿಸಲಿಲ್ಲ.[೩೫] ಯುಕಾಡೆರ್ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಬ್ರೆಜಿಲ್ 5-0ಗಳಿಂದ ಸೌಹಾರ್ದ ಜಯಗಳಿಸಿತು. ಸ್ಪೇನ್‌ಗೆ ತೀರಾ ತಡವಾಗಿ ಹಿಂತಿರುಗಿದ ರೊನಾಲ್ಡಿನೊಗೆ ಅಕ್ಟೋಬರ್ 18ರಂದು ಬಾರ್ಸಿಲೋನಾ ಸುಧೀರ್ಘ ವಿಶ್ರಾಂತಿ ನೀಡುವ ಮೂಲಕ ವಿವಾದ ಸೃಷ್ಟಿಸಿತು. ರೊನಾಲ್ಡಿನೊ ಮತ್ತು ಅನೇಕ ಬ್ರೆಜಿಲ್ ಆಟಗಾರರು ಐಷಾರಾಮಿ ರಿಯೊ ಡಿ ಜೆನೈರೊ ರಾತ್ರಿಕ್ಲಬ್‌ನಲ್ಲಿ ರಾತ್ರಿಇಡೀ ಸಂತೋಷಕೂಟದಲ್ಲಿ ಮುಳುಗಿ ವಿಜಯದ ಸಂಭ್ರಮ ಆಚರಿಸಿದ್ದರು. ಮರುದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ರೊನಾಲ್ಡಿನೊ ಮಾಧ್ಯಮದ ಕಣ್ಣುತಪ್ಪಿಸಿ ಕಾರಿನ ಢಿಕ್ಕಿಯಲ್ಲಿ ಕುಳಿತು ಅಲ್ಲಿಂದ ಪರಾರಿಯಾದರೆಂದು ಆರೋಪಿಸಲಾಗಿತ್ತು.[೩೬]

2008 ಜುಲೈ 7ರಂದು, ಬ್ರೆಜಿಲ್‌ನ 2008 ಬೇಸಿಗೆ ಒಲಂಪಿಕ್ಸ್ ತಂಡಕ್ಕೆ ಹಿರಿಯ ಆಟಗಾರರಾಗಿ ರೊನಾಲ್ಡಿನೊರನ್ನು ಹೆಸರಿಸಲಾಯಿತು. ಕ್ಲಬ್ ಜತೆ, ಮುಂಬರುವ ಚಾಂಪಿಯನ್ಸ್ ಲೀಗ್ ಒಪ್ಪಂದದ ಬದ್ಧತೆಯ ಕಾರಣ ಬಾರ್ಸಿಲೋನಾ ಆರಂಭದಲ್ಲಿ ಈ ಕ್ರಮಕ್ಕೆ ಅಡ್ಡಿಮಾಡಿತು. ಆದರೆ ರೊನಾಲ್ಡಿನೊ ಮಿಲನ್‌‌ಗೆ ಹಸ್ತಾಂತರವಾದ ಬಳಿಕ,ನಿರ್ಧಾರ ಕೈಬಿಟ್ಟಿತು. ಮಿಲಾನ್ ಇದಕ್ಕೆ ಪ್ರತಿಯಾಗಿ ಬೀಜಿಂಗ್‌ಗೆ ಪ್ರಯಾಣಿಸಲು ಅನುಮತಿ ನೀಡಿತು.[೩೭] ಬ್ರೆಜಿಲ್ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಸೋಲುವ ಮುನ್ನ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ 5-0 ಜಯದಲ್ಲಿ ರೊನಾಲ್ಡೊ ಕೇವಲ ಎರಡು ಗೋಲು ಗಳಿಸಲು ಸಮರ್ಥರಾದರು. ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಬೆಲ್ಜಿಯಂ ತಂಡವನ್ನು 3-0 ಯಿಂದ ಸೋಲಿಸಿ ಬ್ರೆಜಿಲ್ ಕಂಚಿನ ಪದಕ ಬಾಚಿಕೊಂಡಿತು.

AC ಮಿಲನ್‌ ಕ್ಲಬ್‌ ಪರ ಫಾರಂ ಕಳೆದುಕೊಂಡಾಗಿನಿಂದ, ರೊನಾಲ್ಡಿನೊ ಬ್ರೆಜಿಲ್ ತಂಡದಲ್ಲಿ ತಮ್ಮ ಸ್ಥಾನಕ್ಕೆ ಚ್ಯುತಿ ತಂದುಕೊಂಡರು. 2010ರ FIFA ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲು ದಕ್ಷಿಣ ಆಫ್ರಿಕಾಗೆ ವಿಮಾನ ಹತ್ತುವರೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನ ಮ‌ೂಡಿದ್ದು ಸಹಜವೇ.

ವೃತ್ತಿಪರ ಬದುಕಿನ ಅಂಕಿಅಂಶಗಳು

ಕ್ಲಬ್ ವೃತ್ತಿ

As of 4 November 2009[೩೮]

ಟೆಂಪ್ಲೇಟು:Football player statistics 1ಟೆಂಪ್ಲೇಟು:Football player statistics 2

ಟೆಂಪ್ಲೇಟು:Football player statistics 2
1998Grêmioಸೀರಿ A612081
199917630206
20002114332417

ಟೆಂಪ್ಲೇಟು:Football player statistics 2

2001–02Paris Saint-GermainDivision 128962624013
2002–03Ligue 127863413712

ಟೆಂಪ್ಲೇಟು:Football player statistics 2

2003–04BarcelonaLa Liga321563744522
2004–0535900744213
2005–062917421274526
2006–073221611134925
2007–081781081269
2008–09MilanSerie A29810523510
2009–10102003192

ಟೆಂಪ್ಲೇಟು:Football player statistics 344||21||8||3||colspan="2"|–||52||24ಟೆಂಪ್ಲೇಟು:Football player statistics 455||17||12||5||10||3||77||25ಟೆಂಪ್ಲೇಟು:Football player statistics 4145||70||17||6||45||19||207||95ಟೆಂಪ್ಲೇಟು:Football player statistics 439||10||1||0||8||3||48||13ಟೆಂಪ್ಲೇಟು:Football player statistics 5283||118||38||14||63||25||428||169

ಅಂತಾರಾಷ್ಟ್ರೀಯ ವೃತ್ತಿ ಜೀವನ

As of 1 April 2009[೩೯][೪೦][೪೧][೪೨][೪೩][೪೪][೪೫][೪೬][೪೭]

ಪ್ರಶಸ್ತಿಗಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ