ರೀಬಾಕ್

ರೀಬಾಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ , ಜರ್ಮನಿಯ ಕ್ರೀಡಾವಸ್ತ್ರ ಕಂಪನಿಯಾದ ಅಡಿಡಾಸ್‌ನ ಅಂಗಸಂಸ್ಥೆಯಾಗಿದೆ. ಇದು, ಅಥ್ಲೆಟಿಕ್ ಪಾದರಕ್ಷೆಗಳು, ಉಡುಪುಗಳು ಮತ್ತು ಸಾಮಗ್ರಿಗಳ ತಯಾರಿಕಾ ಕಂಪನಿಯಾಗಿದೆ. ಈ ಹೆಸರು ಆಫ್ರಿಕನ್ನರ ಒಂದು ಜಾತಿಯ ಆಫ್ರಿಕನ್ ಹುಲ್ಲೆ ಅಥವಾ ಗ್ಯಾಜೆಲ್ (ಒಂದು ಜಾತಿಯ ಜಿಂಕೆ)ನ ಉಚ್ಚಾರಣೆ ರೆಬಕ್‌‌ನಿಂದ ಬಂದಿದೆ. 1890ರಲ್ಲಿ ಇಂಗ್ಲೆಂಡ್‌ನ ಬೋಲ್ಟನ್ನ ಈಶಾನ್ಯಕ್ಕೆ 6 ಮೈಲಿ ದೂರದಲ್ಲಿರುವ ಹೊಲ್ಕೊಂಬ್ ಬ್ರೂಕ್ ಎಂಬ ಒಂದು ಹಳ್ಳಿಯಲ್ಲಿ, ಜೋಸೆಫ್ ಫಾಸ್ಟರ್ ಸಾಮಾನ್ಯವಾದ ಓಡಲು ಬಳಸುವ ಶೂಗಳನ್ನು ತಯಾರಿಸಿ, ಮಾರುತ್ತ ಜೀವನನಡೆಸಿದ್ದರು. ಒಮ್ಮೆ ಅವರಿಗೆ ಓಡಲು ಬಳಸುವ ಸ್ಪೈಕ್‌ ಇರುವ ಅಂದರೆ ಕೆಳಗೆ ಚಿಕ್ಕ ಮೊಳೆಗಳಿರುವ ಹೊಸಬಗೆಯ ಶೂ ಮಾಡುವ ಯೋಚನೆ ಬಂದಿತು. ಅವರ ಈ ಯೋಚನೆ ಕಾರ್ಯಗತವಾಗುತ್ತಿದ್ದಂತೆ, ತಮ್ಮ ಮಗನನ್ನೂ ಸೇರಿಸಿಕೊಂಡು 1895ರಲ್ಲಿ ಜೆ.ಡಬ್ಲ್ಯು. ಫೋಸ್ಟರ್ ಆಂಡ್ ಸನ್ಸ್ ಎಂಬ ಶೂ ಕಂಪನಿಯನ್ನು ಸ್ಥಾಪಿಸಿದರು.[೨]

Reebok Limited
ಸಂಸ್ಥೆಯ ಪ್ರಕಾರSubsidiary of Adidas AG[೧]
ಸ್ಥಾಪನೆBolton, ಇಂಗ್ಲೆಂಡ್ (1895)
ಮುಖ್ಯ ಕಾರ್ಯಾಲಯCanton, Massachusetts, U.S.
ಉದ್ಯಮSportswear and Sports Goods
ಉತ್ಪನ್ನFootwear
Accessories
Sportswear
ಜಾಲತಾಣhttp://www.reebok.com
ಚಿತ್ರ:Reebokworldheadquarters.jpg
ಕ್ಯಾಂಟನ್‌‌ನಲ್ಲಿರುವ ರೀಬಾಕ್ ವಿಶ್ವ ಕೇಂದ್ರ ಕಚೇರಿ (ಜೂಮ್‌ ಲೆನ್ಸ್‌ನಿಂದ ಸಾರ್ವಜನಿಕ ರಸ್ತೆಯಿಂದ ಕಾಣಿಸಿದ ದೃಶ್ಯ)

1960ರಲ್ಲಿ, ಈ ಸ್ಥಾಪಕರ ಇಬ್ಬರು ಮೊಮ್ಮಕ್ಕಳು ಜೋ ಮತ್ತು ಜೆಫ್‌ ಫೋಸ್ಟರ್‌ ಕಂಪನಿಯನ್ನು ಇಂಗ್ಲೆಂಡ್‌ನಲ್ಲಿ ರೀಬಾಕ್ ಎಂದು ಮರುನಾಮಕರಣ ಮಾಡಿದರು. ಜೋ ಫೋಸ್ಟರ್ ಹುಡುಗನಾಗಿದ್ದಾಗ ರೇಸ್‌ ಒಂದರಲ್ಲಿ ಗೆದ್ದಾಗ ದೊರೆತ ಶಬ್ದಕೋಶದಲ್ಲಿ ಈ ಪದವನ್ನು ಕಂಡಿದ್ದನು, ಆ ಶಬ್ದಕೋಶವು ದಕ್ಷಿಣ ಆಫ್ರಿಕಾದ ಆವೃತ್ತಿಯಾಗಿತ್ತು, ಆದ್ದರಿಂದಲೇ ಅದರಲ್ಲಿ ಈ ಪದವಿತ್ತು.[೩] ಕಂಪನಿಯು ಜೆ.ಡಬ್ಲ್ಯು.ಫೋಸ್ಟರ್‌ನ ಪರಂಪರೆಗೆ ತಕ್ಕಂತೆಯೇ ಬೆಳೆಯಿತು. ಬ್ರಿಟನ್‌ನಲ್ಲಿ ಮೊದಲ ದರ್ಜೆಯ ಪಾದರಕ್ಷೆಗಳನ್ನು ಗ್ರಾಹಕರಿಗೆ ತಯಾರಿಸುತ್ತಿತ್ತು. 1979ರಲ್ಲಿ, ಪೌಲ್ ಫೈರ್‌ಮನ್‌ ಎಂಬ ಅಮೆರಿಕದ ಕ್ರೀಡಾ ಸಾಮಗ್ರಿಗಳ ವಿತರಕ ಒಂದು ಜೊತೆ ರೀಬಾಕ್‌ಗಳನ್ನು ಒಂದು ಅಂತಾರಾಷ್ಟ್ರೀಯ ವ್ಯಾಪಾರಿ ಪ್ರದರ್ಶನದಲ್ಲಿ ಕಂಡನು. ಆತ ಅವುಗಳನ್ನು ಉತ್ತರ ಅಮೆರಿಕದಲ್ಲಿ ಮಾರಾಟ ಮಾಡಲು ಮಾತುಕತೆ ನಡೆಸಿದನು.[೨]

ಫ್ರೀಸ್ಟೈಲ್‌ ಮತ್ತು ಎಕ್ಸ್‌-ಒ-ಫಿಟ್ ಯಶಸ್ಸು

ರೀಬಾಕ್ 1982ರಲ್ಲಿ ಫ್ರೀಸ್ಟೈಲ್‌‌ ಅಥ್ಲೆಟಿಕ್ ಶೂಗಳ ಉತ್ಪನ್ನವನ್ನು ಪರಿಚಯಿಸಿದ ನಂತರ ಅಪಾರ ಜನಪ್ರಿಯತೆ ಗಳಿಸಿತು. ಅವು ಮಹಿಳೆಯರಿಗಾಗಿ ವಿನ್ಯಾಸ ಮಾಡಲಾಗಿತ್ತು ಮತ್ತು ಏರೋಬಿಕ್ಸ್ ಗೀಳು ಶುರುವಾದ ನಂತರ ಬಿಡುಗಡೆಯಾಗಿತ್ತು. ರೀಬಾಕ್ ಫ್ರೀಸ್ಟೈಲ್‌‌ ತುಂಬ ಜನಪ್ರಿಯ ಅಥ್ಲೆಟಿಕ್ ಪಾದರಕ್ಷೆಯಾಗಿ ಮಾತ್ರವಲ್ಲದೇ ಸಾಮಾನ್ಯ ಪಾದರಕ್ಷೆಯಾಗಿಯೂ ಜನಪ್ರಿಯವಾಯಿತು. ಇದರ ಪರಿಣಾಮವಾಗಿ ಫ್ರೀಸ್ಟೈಲ್‌‌ 1980ರ ಕಾಲದ ಫ್ಯಾಷನ್ ನೋಟದ ಐಕಾನ್ ಆಯಿತು. ಜೊತೆಗೆ ಇದರ ಕೆಲವು ಹೈ ಟಾಪ್ ಆವೃತ್ತಿಗಳು(ಮೇಲ್ಭಾಗದಲ್ಲಿ ಎರಡು ವೆಲ್ಕ್ರೋ ಸ್ಟ್ರಾಪ್‌ ಇರುವ ಮಾದರಿಯೂ ಸೇರಿ) ಮತ್ತು ಬಿಳಿ, ಕಪ್ಪು, ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಮಿಂಚತೊಡಗಿದವು ರೀಬಾಕ್ ಚೀರ್‌ಲೀಡಿಂಗ್, ಏರೋಬಿಕ್ ನೃತ್ಯ, ಜಿಮ್ ಮತ್ತು ಸಾಮಾನ್ಯ ಬಳಕೆದಾರರಲ್ಲಿ ಜನಪ್ರಿಯವಾಗಿದ್ದರಿಂದ ತನ್ನ ಫ್ರೀಸ್ಟೈಲ್‌‌ ಮಾದರಿಯ ತಯಾರಿಕೆಯನ್ನು ಮುಂದುವರೆಸಿದೆ.

ಫ್ರೀಸ್ಟೈಲ್‌‌ ಮಾದರಿಯ ಯಶಸ್ಸಿನ ನಂತರ, ರೀಬಾಕ್ ಪುರುಷರಿಗಾಗಿ ಎಕ್ಸ್‌-ಒ-ಫಿಟ್ ಎಂಬ ಅಥ್ಲೆಟಿಕ್ ಶೂ ಅನ್ನು ಕೂಡ ಪರಿಚಯಿಸಿತು. ಫ್ರೀಸ್ಟೈಲ್‌‌ ಹಾಗೆಯೇ, ಇದೂ ಕೂಡ ಲೋ-ಟಾಪ್ ಮತ್ತು ಹೈ-ಟಾಪ್ ಮಾದರಿಗಳಲ್ಲಿ ಬಂದಿತು; ಆದರೆ ಫ್ರೀಸ್ಟೈಲ್‌‌ ಹೈ-ಟಾಪ್‌ನಲ್ಲಿ ಎರಡು ವೆಲ್ಕ್ರೋ ಕ್ಲೋಸರ್ ಸ್ಟ್ರಾಪ್‌ ಇದ್ದರೆ ಎಕ್ಸ್‌-ಒ-ಫಿಟ್‌‌ನಲ್ಲಿ ಒಂದೇ ಸ್ಟ್ರಾಪ್ ಇತ್ತು. ಈ ಆರಂಭಿಕ ಪಾದರಕ್ಷೆಯ ವಿನ್ಯಾಸಕಾರರಲ್ಲಿ ಒಬ್ಬರು ಸ್ಥಾಪಕರ ಮಗ ಡೇವಿಡ್ ಫಾಸ್ಟರ್ ಆಗಿದ್ದರು.[೩]

ಮಾನವ ಹಕ್ಕುಗಳು ಮತ್ತು ಉತ್ಪಾದನಾ ವಿವರಗಳು

ರೀಬಾಕ್ ಕೇಂದ್ರ ಕಚೇರಿಯಲ್ಲಿರುವ ಸ್ವಾಗತ ಚಿಹ್ನೆ

ಹಿಂದೆಲ್ಲ, ರೀಬಾಕ್ ಸ್ವೀಟ್‌ಶಾಪ್ಸ್‌ ಮೂಲಕ ಹೊರಗುತ್ತಿಗೆ ಸಂಬಂಧ ಇಟ್ಟುಕೊಂಡಿತ್ತು. ಆದರೆ ಇಂದು ಅದು ತಾನು ಮಾನವ ಹಕ್ಕುಗಳು ಕುರಿತು ಬದ್ಧವಾಗಿರುವೆ ಎಂದು ಘೋಷಿಸಿದೆ. 2004ರ ಏಪ್ರಿಲ್‌ನಲ್ಲಿ, ರೀಬಾಕ್‌ನ ಪಾದರಕ್ಷೆ ವಿಭಾಗವು ಫೇರ್‌ ಲೇಬರ್ ಅಸೋಸಿಯೇಶನ್‌ನಿಂದ ಮಾನ್ಯತೆ ಪಡೆದ ಪ್ರಪ್ರಥಮ ಕಂಪನಿಯಾಯಿತು. 2004ರಲ್ಲಿ, ರೀಬಾಕ್ ಫೇರ್‌ ಫ್ಯಾಕ್ಟರೀಸ್ ಕ್ಲಿಯರಿಂಗ್‌ಹೌಸ್‌ನ ಸ್ಥಾಪಕ ಸದಸ್ಯರಲ್ಲಿ ಒಂದಾಯಿತು. ಇದೊಂದು ಲಾಭರಹಿತ ಸಂಸ್ಥೆಯಾಗಿದ್ದು, ಉಡುಗೆತೊಡುಗೆಗಳ ಉದ್ಯಮದಲ್ಲಿ ಕೆಲಸಗಾರರ ಸ್ಥಿತಿಗತಿಯನ್ನು ಉತ್ತಮಪಡಿಸಲು ಬದ್ಧವಾಗಿದೆ.

ರೀಬಾಕ್ ವೆಬ್‌ಸೈಟ್‌ನ ಪ್ರಕಾರ ಮೇ 2007ರಲ್ಲಿ ಪೂರೈಕೆದಾರರ ಮಾಹಿತಿ ಹೀಗಿತ್ತು:

ಪಾದರಕ್ಷೆ ರೀಬಾಕ್ 14 ದೇಶಗಳಲ್ಲಿ ಪಾದರಕ್ಷೆ ಫ್ಯಾಕ್ಟರಿಗಳನ್ನು ಬಳಸುತ್ತದೆ. ರೀಬಾಕ್ ಪಾದರಕ್ಷೆಗಳನ್ನು ತಯಾರಿಸುವ ಅನೇಕ ಫ್ಯಾಕ್ಟರಿಗಳು ಏಷ್ಯಾದಲ್ಲಿವೆ - ಮುಖ್ಯವಾಗಿ ಚೀನಾದಲ್ಲಿವೆ (ಒಟ್ಟು ಪಾದರಕ್ಷೆ ಉತ್ಪಾದನೆಯ ಶೇ.51ರಷ್ಟು), ನಂತರ ಇಂಡೋನೇಷ್ಯಾ(21%), ವಿಯೆಟ್ನಾಂ(17%) ಮತ್ತು ಥಾಯ್ಲೆಂಡ್‌‌(7%)ನಲ್ಲಿವೆ. 11 ಫ್ಯಾಕ್ಟರಿಗಳಲ್ಲಿ ಒಟ್ಟು ಶೇ. 88ರಷ್ಟು ರೀಬಾಕ್ ಪಾದರಕ್ಷೆಗಳನ್ನು ಉತ್ಪಾದಿಸಲಾಗುತ್ತಿತ್ತು, ಇಲ್ಲಿ ಸುಮಾರು 75,000ಕ್ಕೂ ಹೆಚ್ಚು ಕೆಲಸಗಾರರಿಗೆ ಉದ್ಯೋಗವಿದೆ.

ಉಡುಗೆತೊಡುಗೆ ರೀಬಾಕ್ 45 ದೇಶಗಳಲ್ಲಿ ಫ್ಯಾಕ್ಟರಿಗಳನ್ನು ಹೊಂದಿದೆ. ಪೂರೈಕೆದಾರರಿಂದ ಉತ್ಪನ್ನಗಳನ್ನು ಕೊಳ್ಳುವುದನ್ನು ಆಯಾ ಪ್ರದೇಶದಲ್ಲಿಯೇ ಆಯೋಜಿಸಲಾಗುತ್ತದೆ. ಅಮೆರಿಕದಲ್ಲಿ ಮಾರಾಟವಾಗುವ ರೀಬಾಕ್‌ನ ಹೆಚ್ಚಿನ ಉಡುಗೆಗಳು (52%) ಎಷ್ಯಾದಲ್ಲಿ ತಯಾರಾಗುತ್ತವೆ, ಇನ್ನುಳಿದ ಭಾಗವು ಕೆರಿಬಿಯನ್ ದೇಶಗಳು, ದಕ್ಷಿಣ ಅಮೆರಿಕ ಮತ್ತು ಮಧ್ಯ ಪ್ರಾಚ್ಯ ದೇಶಗಳಿಂದ ಪೂರೈಸಲಾಗುತ್ತದೆ. ಯೂರೋಪ್‌ನಲ್ಲಿ ಮಾರಾಟವಾಗುವ ಉಡುಗೆಗಳನ್ನು ಏಷ್ಯಾ ಮತ್ತು ಯೂರೋಪ್‌ನಿಂದ ಪೂರೈಸಲಾಗುತ್ತದೆ. ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಮಾರಾಟವಾಗುವ ಉಡುಗೆಗಳು ಏಷ್ಯಾ-ಮೂಲದ ತಯಾರಿಕರಿಂದ ಸಿದ್ಧಪಡಿಸಲಾಗಿರುತ್ತದೆ.

ರೀಬಾಕ್ ಜಾಹೀರಾತು ಪ್ರಚಾರಾಂದೋಲನಗಳ ಪಟ್ಟಿ

ರೀಬಾಕ್ ಜಾಹೀರಾತು ಪ್ರಚಾರಗಳು

  • "ಪ್ಲಾನೆಟ್‌ ರೀಬಾಕ್"
  • "ಐಯಾಮ್‌, ವಾಟ್‌ ಐಯಾಮ್"
  • "ರನ್‌ ಈಸಿ"
  • "ಬಿಕಾಸ್ ಲೈಫ್ ಈಸ್ ನಾಟ್‌ ಜಸ್ಟ್ ಎ ಸ್ಪೆಕ್ಟೇಟರ್ ಸ್ಪೋರ್ಟ್‌"
  • "ವೊಡುನಿಟ್?"
  • "ಪಂಪ್‌ ಅಪ್, ಏರ್ ಔಟ್" '''
  • "ಯುವರ್ ಮೂವ್‌"
  • "ಟೆರ್ರಿ ಟೇಟ್: ಆಫೀಸ್ ಲೈನ್‌ಬ್ಯಾಕರ್"

ಜಾಹಿರಾತು ಒಪ್ಪಂದಗಳು

ಉತ್ತರ ಅಮೆರಿಕಾ

ಕಂಪನಿಯು 2002ರಿಂದ ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌‌(ಎನ್‌ಎಫ್‌ಎಲ್‌) ತಂಡಗಳಿಗೆ ಅಧಿಕೃತ ಮತ್ತು ಯಥಾಪ್ರತಿ (ರಿಪ್ಲಿಕಾ)ಸಮವಸ್ತ್ರ ಜೆರ್ಸಿಗಳ ತಯಾರಿಕೆ ಮತ್ತು ಮಾರುಕಟ್ಟೆಯ ಏಕಮಾತ್ರ ಕಂಪನಿ ಹಕ್ಕುಗಳನ್ನು ಹೊಂದಿದೆ(ಇವುಗಳನ್ನು ಎನ್‌ಎಫ್‌‌ಎಲ್‌ ಈಕ್ವಿಪ್‌ಮೆಂಟ್‌ ಎಂದು ಮಾರಾಟ ಮಾಡುತ್ತಿದೆ). ಜೊತೆಗೆ ಕೆನೆಡಿಯನ್ ಫುಟ್‌ಬಾಲ್‌ ಲೀಗ್‌(ಸಿಎಫ್‌ಎಲ್‌)ಗೆ 2004ರಿಂದ ಪೂರೈಸುತ್ತಿದೆ ಮತ್ತು ಎನ್‌ಎಫ್‌ಎಲ್‌ ಮತ್ತು ಮೇಜರ್‌ ಲೀಗ್‌ ಬೇಸ್‌ಬಾಲ್(ಎಂಎಲ್‌ಬಿ)ಗೆ ಅಧಿಕೃತ ಶೂ ಪೂರೈಕೆದಾರ ಕಂಪನಿಯಾಗಿದೆ.

ಕಂಪನಿಯು ಮೆಕ್ಸಿಕನ್ ಕ್ಲಬ್‌ ಶಿವಾಸ್ ಗ್ವಾಡಲಜರ ಜೊತೆ; ಬ್ರೆಜಿಲಿಯನ್ ಕ್ಲಬ್‌ಗಳಾದ ಕ್ರುಜೈರೊ, ಇಂಟರ್‌ನ್ಯಾಸಿನಲ್ , ಮತ್ತು ಸಾಒ ಪೌಲೊ ಎಫ್‌ಸಿ; ಮತ್ತು ಜರ್ಮನ್ ಕ್ಲಬ್‌ಗಳಾದ ಎಫ್‌ಸಿ ಕೋಲ್ನ್‌ ಗಳಿಗೆ 2008–09 ಋತುವಿಗೆ ಪ್ರಾಯೋಜಕತ್ವವನ್ನು ಹೊಂದಿತ್ತು.

ಸಿಸಿಎಂ (CCM)

ಚಿತ್ರ:Reebok SC87 logo.svg
ರೀಬಾಕ್ ಬಿಡುಗಡೆ ಮಾಡಿದ ಸಿಡ್ನಿ ಕ್ರಾಸ್‌ಬಿ ಆರ್‌ಬಿಕೆ ಎಸ್‌ಸಿ87 ಮಾದರಿಗಳ ಲೋಗೋ

ಇದರೊಂದಿಗೆ, ರೀಬಾಕ್ ಅಧಿಕೃತ ನ್ಯಾಶನಲ್ ಹಾಕಿ ಲೀಗ್‌ (ಎನ್‌ಎಚ್‌ಎಲ್‌) ಪ್ರಾಯೋಜಕತ್ವದ ಸಿಸಿಎಂ ಅನ್ನು 2004ರಲ್ಲಿ ಪಡೆದುಕೊಂಡಿತ್ತು. ಜೊತೆಗೆ ಈಗ ಐಸ್‌ ಹಾಕಿಯ ಸಾಮಗ್ರಿಗಳನ್ನು ಸಿಸಿಎಂ ಮತ್ತು ರೀಬಾಕ್ ಬ್ರಾಂಡ್‌ ಅಡಿಯಲ್ಲಿ ತಯಾರಿಸುತ್ತಿದೆ. ಅಲ್ಲದೆ ಜನಪ್ರಿಯ ಯುವ ತಾರೆಯರಾದ ಸಿಡ್ನಿ ಕ್ರಾಸ್‌ಬಿ ಮತ್ತು ಅಲೆಕ್ಸಾಂಡರ್ ಓವ್‌ಚ್ಕಿನ್ ಜೊತೆಗೆ ವ್ಯವಹಾರಗಳಿಗೆ ಸಹಿ ಹಾಕಿದೆ (ರೀಬಾಕ್‌ಗೆ ಕ್ರಾಸ್‌ಬಿ ಮತ್ತು ಸಿಸಿಎಂಗೆ ಓವ್‌ಚ್ಕಿನ್). ಇತ್ತೀಚಿನ ವರ್ಷಗಳಲ್ಲಿ ರೀಬಾಕ್ ಎನ್‌ಎಚ್‌ಎಲ್‌ ಅಧಿಕೃತ ಮತ್ತು ರಿಪ್ಲಿಕಾ ಜೆರ್ಸಿಗಳ ಮೇಲೆ ಸಿಸಿಎಂ ಹೆಸರನ್ನು ಅಳಿಸಿಹಾಕಿದೆ ಮತ್ತು 2005ರಿಂದ ರೀಬಾಕ್ ಲೋಗೋವನ್ನು ಬಳಸುತ್ತಿದೆ. ರೀಬಾಕ್ ಲೆವಿಸ್ ಹ್ಯಾಮಿಲ್ಟನ್ , ಅಲೆನ್‌ ಐವರ್‌ಸನ್ , ಯೋ ಮಿಂಗ್ , ಕರೊಲಿನ ಕ್ಲುಫ್ಟ್‌ , ಅಮೆಲೀ ಮೌರೆಸ್ಮೊ , ನಿಕೋಲ್ ವೈಡಿಸೋವಾ, ಶಹರ್‌ ಪೀರ್, ಇವಿ, ಥೀರ್ರಿ ಹೆನ್ರಿ, ವಿನ್ಸ್‌ ಯಂಗ್, ಇಕರ್ ಕೆಸಿಲ್ಲಸ್, ರ್ಯಾನ್ ಗಿಗ್ಸ್, ಆಂಡ್ರಿ ಶೆವ್‌‌ಚೆಂಕೊ, ಮತ್ತು ಅಮೀರ್‌ ಖಾನ್ ಅವರಿಂದಲೂ ಅನುಮೋದಿಸಲ್ಪಟ್ಟಿದೆ.

ಯುರೋಪ್‌

ಬೋಲ್ಟನ್ನಿನ ಹೋರ್‌ವಿಚ್‌‌ನಲ್ಲಿರುವ ರೀಬಾಕ್ ಕ್ರೀಡಾಂಗಣ

ಕಂಪನಿಯು ಪ್ರೀಮಿಯರ್ ಲೀಗ್ ಫುಟ್‌ಬಾಲ್ ಕ್ಲಬ್ ಆಗಿರುವ ಬೋಲ್ಟನ್ ವಾಂಡರರ್ಸ್ ಜೊತೆ ದೀರ್ಘಕಾಲೀನ ಪ್ರಾಯೋಜಕತ್ವದ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಬ್ರಿಟನ್ನಿನಲ್ಲಿರುವ ಮೂಲದೊಡನೆ ತನ್ನ ಸಂಬಂಧವನ್ನು ಉಳಿಸಿಕೊಂಡಿದೆ. 1990ರ ಕೊನೆಯ ಭಾಗದಲ್ಲಿ ತಂಡವು ಅತ್ಯುತ್ತಮವಾದ ಹೊಸ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಾಗ, ಅದನ್ನು ರೀಬಾಕ್ ಸ್ಟೇಡಿಯಂ ಎಂದೇ ಹೆಸರಿಟ್ಟರು. ಇನ್ನಿತರ ಇಂಗ್ಲಿಶ್ ಕ್ಲಬ್‌‌ಗಳು ಕೂಡ ರೀಬಾಕ್ ಪ್ರಾಯೋಜಕತ್ವವನ್ನು ಅಡಿಡಾಸ್‌ ಕಂಡುಕೊಳ್ಳುವವರೆಗೂ ಹೊಂದಿದ್ದವು. ಆದರೆ ನಂತರ ಬಹುತೇಕ ತಂಡಗಳು ಒಂದೋ ಮೂಲ ಬ್ರಾಂಡ್‌ಗೆ (ಫುಟ್‌ಬಾಲ್‌‌ನಲ್ಲಿ ದೀರ್ಘಕಾಲದ ಇತಿಹಾಸವನ್ನು ಹೊಂದಿದ್ದ) ಅಥವಾ ಸಂಪೂರ್ಣವಾಗಿ ಬೇರೆಯದೇ ಕಂಪನಿಗೆ ವರ್ಗಾಯಿತಗೊಂಡವು.

ರಗ್ಬಿ ಯೂನಿಯನ್‌‌ನಲ್ಲಿ, ರೀಬಾಕ್ ಕಂಪನಿಯು ವೇಲ್ಸ್‌ ನ್ಯಾಶನಲ್ ತಂಡಕ್ಕೆ 2008ರ ಕೊನೆಯವರೆಗೆ ಪ್ರಾಯೋಜಕತ್ವ ನೀಡಿತು. ಆ ತಂಡವು ಆ ವರ್ಷ ಆರು ದೇಶಗಳ ಚಾಂಪಿಯನ್‌ಶಿಪ್‌ ಗ್ರಾಂಡ್‌ ಸ್ಲಾಮ್ ಗೆದ್ದುಕೊಂಡಿತು ಮತ್ತು ನ್ಯೂಜಿಲೆಂಡ್‌‌ನ ದೇಶೀಯ ಸ್ಪರ್ಧೆ, ಏರ್‌‌ ನ್ಯೂಜಿಲೆಂಡ್‌ ಕಪ್‌‌ನಲ್ಲಿ ಟಾಸಮನ್‌ ಮಾಕೋಸ್‌ ತಂಡಕ್ಕೂ ಪ್ರಾಯೋಜಕತ್ವ ನೀಡಿತ್ತು.

2006ರಲ್ಲಿ, ಎಫ್‌ಸಿ ಬಾರ್ಸಿಲೋನ ಮತ್ತು ಫ್ರಾನ್ಸ್‌ನ ಸ್ಟ್ರೈಕರ್ ಥೈರ್ರಿ ಹೆನ್ರಿ (ಆಗ ಅರ್ಸೆನೆಲ್‌ ತಂಡಕ್ಕೆ ಆಡುತ್ತಿದ್ದರು) 2006ರ ಆಗಸ್ಟ್‌ "ಐಯಾಮ್ ವಾಟ್‌ ಐಯಾಮ್" ಪ್ರಚಾರಕ್ಕೆ ಸಹಿ ಹಾಕಿದರು. ರ್ಯಾನ್ ಗಿಗ್ಸ್ ಕೂಡ "ಐಯಾಮ್ ವಾಟ್‌ ಐಯಾಮ್" ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 1ರಂದು, ಆಂಡ್ರಿ ಶೆವ್‌ಚೆಂಕೊ ಕಂಪನಿಯೊಂದಿಗೆ ತಮ್ಮ ಒಪ್ಪಂದವನ್ನು ಆರಂಭಿಸಿದರು.[೪]

ಆಸ್ಟ್ರೇಲಿಯಾ

2005ರಲ್ಲಿ, ರೀಬಾಕ್ ಕಂಪನಿಯು ನ್ಯೂ ಆಸ್ಟ್ರೇಲಿಯನ್ ಎ-ಲೀಗ್‌ ಸ್ಪರ್ಧೆಗಳ ಎಲ್ಲ ಎಂಟು ತಂಡಗಳ ತಾಯ್ನಾಡು ಮತ್ತು ಹೊರದೇಶಗಳಲ್ಲಿ ತೊಡುವ ಉಡುಗೆಗಳನ್ನು ವಿನ್ಯಾಸ ಮಾಡಲು ಮತ್ತು ಪೂರೈಕೆ ಮಾಡಲು ವಿಶಿಷ್ಟ ಒಪ್ಪಂದ ಮಾಡಿಕೊಂಡಿತು. ಇದೊಂದು ತುಂಬಾ ದುಬಾರಿಯ ಒಪ್ಪಂದವಲ್ಲದಿದ್ದರೂ, ಆ ಭಾಗದಲ್ಲಿ ಫುಟ್‌ಬಾಲ್‌ ಮತ್ತು ಲೀಗ್‌ನ ಜನಪ್ರಿಯತೆಯಿಂದಾಗಿ, ಈ ಪಾಲುದಾರಿಕೆಯು ರೀಬಾಕ್‌ಗೆ ಲಾಭಾಂಶ(ಡಿವಿಡೆಂಡ್‌) ನೀಡುತ್ತಿದೆ. ಅಂದಾಜು 125,000 ಜೆರ್ಸಿಗಳನ್ನು ಆಸ್ಟ್ರೇಲಿಯಾದಲ್ಲಿ ಮಾರಲಾಗಿದೆ, ಇದು ಕ್ರೀಡಾ ತಯಾರಿಕರಿಗೆ ಏಕೈಕ ಲೀಗ್‌ನಲ್ಲಿ ಆದ ದಾಖಲೆ ಮಾರಾಟವಾಗಿದೆ.[೫]

ರೀಬಾಕ್ ಆಸ್ಟ್ರೇಲಿಯನ್ ಫುಟ್‌ಬಾಲ್‌ ಲೀಗ್‌ನಲ್ಲಿ ನಾಲ್ಕು ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿದೆ. ಅವೆಂದರೆ; ಗೋಲ್ಡ್‌ ಕೋಸ್ಟ್ ಸನ್ಸ್, ಮೆಲ್‌ಬೋರ್ನ್‌‌ ಫುಟ್‌‌ಬಾಲ್‌‌‌ ಕ್ಲಬ್‌‌, ಪೋರ್ಟ್‌ ಅಡಿಲೇಡ್ ಫುಟ್‌‌ಬಾಲ್‌‌‌ ಕ್ಲಬ್‌‌ ಮತ್ತು ರಿಚ್ಮಂಡ್ ಫುಟ್‌‌ಬಾಲ್‌‌‌ ಕ್ಲಬ್‌‌.ರೀಬಾಕ್ ಎನ್‌ಆರ್‌ಎಲ್‌‌ನಲ್ಲಿ ಸೇಂಟ್‌ ಜಾರ್ಜ್‌ ಇಲವಾರಾ ಡ್ರಾಗನ್ಸ್‌‌ ತಂಡಕ್ಕೆ ಪ್ರಾಯೋಜನೆ ನೀಡುತ್ತಿದೆ.

ಬಾಸೆಲ್‌ನಲ್ಲಿರುವ ರೀಬಾಕ್ ಜಾಹೀರಾತು

ಭಾರತ

ರೀಬಾಕ್ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ತಂಡಗಳಾದ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್, ಕೋಲ್ಕೊತಾ ನೈಟ್‌ ರೈಡರ್ರ್ಸ್, ರಾಜಾಸ್ತಾನ್ ರಾಯಲ್ಸ್ ಮತ್ತು ಚೆನೈ ಸೂಪರ್‌ ಕಿಂಗ್ಸ್ಗಳನ್ನು 2008ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಪ್ರಾಯೋಜಿಸಿತ್ತು. 2009ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ (ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್, ಕೋಲ್ಕೊತಾ ನೈಟ್‌ ರೈಡರ್ರ್ಸ್, ಚೆನೈ ಸೂಪರ್‌ ಕಿಂಗ್ಸ್, ಕಿಂಗ್ಸ್ XI ಪಂಜಾಬ್ ) ತಂಡಗಳಿಗೆ ಕಿಟ್‌ಗಳನ್ನು ಒದಗಿಸಿತ್ತು.

ತುರ್ಕಿ

ರೀಬಾಕ್ ಮೊದಲು ತುರ್ಕಿ ಮಾರುಕಟ್ಟೆಯಲ್ಲಿ 1980ರ ಕೊನೆಯ ಭಾಗದಲ್ಲಿ ಪರಿಚಯಿಸಿದಾಗ, ರೆಸ್‌ಬೊಕ್(RecebOk) ಎಂಬ ನಕಲಿ ಹೆಸರಿನಲ್ಲಿ ತಯಾರಿಸಿ, ಕಾನೂನುಬಾಹಿರವಾಗಿ ಬೀದಿಬದಿಯ ಬಜಾರ್‌ಗಳಲ್ಲಿ ಮಾರಲಾಯಿತು. ವಾರದ ಮತ್ತು ಕಾಡಿಕೋಯ್‌ ಜಿಲ್ಲೆಯಲ್ಲಿ ನಡೆಯುವ "ಮಂಗಳವಾರದ ಬಜಾರ್‌"(ಸಾಲಿ ಬಜಾರ್‌)ನಲ್ಲಿ ರೆಸ್‌ಬೊಕ್‌ನ ಅತಿದೊಡ್ಡ ಶತ್ರು ಎಂದರೆ ರೀಬಾಕ್‌ನ ಸಹೋದರಿ ಬ್ರಾಂಡ್ ಆಗಿರುವ ಅಡಡಾಸ್(Adadas) ಆಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್

ರೀಬಾಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಪ್ರಾಯೋಜಕ ಕಂಪನಿಯಾಗಿದೆ. ಅದು ಐಸಿಸಿ ಇಂಟರ್‌ನ್ಯಾಶನಲ್ ಪ್ಯಾನೆಲ್‌ನ ಅಂಪೈರ್‌ಗಳ ಮತ್ತು ರೆಫ್ರೀಗಳ ಸಮವಸ್ತ್ರದ ತಯಾರಕರು. ಐಸಿಸಿ ಈವೆಂಟ್ಸ್‌ ಗಳಲ್ಲಿ ಬಳಸುವ ಎಲ್ಲ ಕಿಟ್‌ಗಳು ಅಂದರೆ ವಿಕೆಟ್‌ಗಳು ಇನ್ನಿತರ ಎಲ್ಲವೂ ರೀಬಾಕ್‌ ಪ್ರಾಯೋಜಕತ್ವದ್ದೇ ಆಗಿವೆ. ಐಸಿಸಿಗೆ 2007ರಲ್ಲಿ ಅದು ಅಧಿಕೃತ ಪ್ರಾಯೋಜಕ ಆಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌‌ ಆಟಗಾರರಾದ ಶ್ರೀಲಂಕಾದ ಕ್ಯಾಪ್ಟನ್ ಮಹೇಲ ಜಯವರ್ಧನೆ, ಶ್ರೀಲಂಕಾದ ಕ್ರಿಕೆಟಿಗರಾದ ಸನತ್ ಜಯಸೂರ್ಯ, ಅಂಜಂತಾ ಮೆಂಡಿಸ್ , ಭಾರತೀಯ ಕ್ಯಾಪ್ಟನ್‌ಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತು ರಾಹುಲ್ ದ್ರಾವಿಡ್, ಬಾಂಗ್ಲಾದೇಶೀಯ ಕ್ಯಾಪ್ಟನ್‌ರಾದ ಮೊಹಮ್ಮದ್ ಆಶ್ರಫಲ್, ಬಾಂಗ್ಲಾದೇಶೀ ಕ್ರಿಕೆಟಿಗರಾದ ಮೊಹಮ್ಮದ್ ರಫೀಕ್ ಮತ್ತು ಹಬೀಬುಲ್ ಬಶರ್, ರೀಬಾಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರಿಗೆ ರೀಬಾಕ್ ಕ್ರಿಕೆಟ್ ಶೂಗಳನ್ನು ಒದಗಿಸಲಾಗುತ್ತದೆ ಮತ್ತು ಧೋನಿಗೆ ರೀಬಾಕ್ ಬ್ರಾಂಡ್‌ ಇರುವ ಕ್ರಿಕೆಟ್ ಬ್ಯಾಟ್‌ಗಳನ್ನು ಒದಗಿಸಲಾಗುತ್ತದೆ.ರೀಬಾಕ್ ಜೊತೆ ಒಪ್ಪಂದವಾದ ಇತ್ತೀಚಿನ ಕ್ರಿಕೆಟಿಗರೆಂದರೆ ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್.

ಕ್ರೀಡೆಗಳನ್ನು ಹೊರತುಪಡಿಸಿ

ರಾಪ್ ಸಂಗೀತಗಾರ ಜೇ-ಝಡ್ ರೀಬಾಕ್‌ನಿಂದ ಸಿಗ್ನೇಚರ್ ಶೂ ಪಡೆದ ಮೊದಲ ಅಥ್ಲೀಟ್ ಅಲ್ಲದ ವ್ಯಕ್ತಿ. "ಎಸ್‌. ಕಾರ್ಟರ್ ಕಲೆಕ್ಷನ್ ಬೈ ರೀಬಾಕ್" ಅನ್ನು 2003ರ ನವೆಂಬರ್ 21ರಂದು ಉದ್ಘಾಟಿಸಲಾಯಿತು ಮತ್ತು ಎಸ್‌. ಕಾರ್ಟರ್ ಸ್ನೀಕರ್ ಕಂಪನಿಯ ಇತಿಹಾಸದಲ್ಲಿಯೇ ಅತಿಶೀಘ್ರದಲ್ಲಿ ಮಾರಾಟವಾದ ಶೂ ಆಯಿತು.[೬] ನಂತರದಲ್ಲಿ, ರೀಬಾಕ್ 50 ಸೆಂಟ್ (ಕರ್ಟಿಸ್ ಜೇಮ್ಸ್‌ ಜಾಕ್‌ಸನ್‌ III) ರಾಪರ್ ಜೊತೆ ಒಂದು ಮಾದರಿಯ ಜಿ-ಯುನಿಟ್ ಸ್ನೀಕರ್‌ಗಳನ್ನು ಬಿಡುಗಡೆ ಮಾಡಲು ಒಪ್ಪಂದವನ್ನು ಮಾಡಿಕೊಂಡಿತು. ಜೊತೆಗೆ ಕಲಾವಿದರಾದ ನೆಲ್ಲಿ ಮತ್ತು ಮಿರಿ ಬೆನ್‌-ಅರಿ ಕಂಪನಿಯ ವಕ್ತಾರರಾದರು. ರೀಬಾಕ್ ಸ್ಕಾರ್ಲೆಟ್ ಜೊಹಾನ್ಸನ್‌ ಜೊತೆಗೂ ಒಪ್ಪಂದವನ್ನು ಮಾಡಿಕೊಂಡಿತು ಮತ್ತು ಅವಳ ಹೊಸ ಮಾದರಿಯ ತೊಡುಗೆಗಳನ್ನು ಪರಿಚಯಿಸಿತು. ಆ ಮಾದರಿಯ ಪಾದರಕ್ಷೆಗಳನ್ನು ಸ್ಕಾರ್ಲೆಟ್ ಹಾರ್ಟ್ಸ್ ಎಂದೇ ಕರೆಯಿತು, ಅವು ಆರ್‌ಬಿಕೆ ಲೈಫ್‌ಸ್ಟೈಲ್ ಕಲೆಕ್ಷನ್‌‌ ಗಳಾಗಿದ್ದವು.

ಪ್ರಾಯೋಜಕತ್ವಗಳು

ಅಮೆರಿಕನ್‌ ಫುಟ್‌‌ಬಾಲ್‌

ತಂಡಗಳು
  • ಎನ್‌ಎಫ್‌ಎಲ್‌ – ತಂಡದ ಎಲ್ಲ ಸಮವಸ್ತ್ರಗಳು
  • ಸಿಎಫ್‌ಎಲ್‌ – ತಂಡದ ಎಲ್ಲ ಸಮವಸ್ತ್ರಗಳು
ಆಟಗಾರರು

  • ಚಾಡ್ ಓಚೊಸಿಂಕೊ
  • ಪೇಟನ್ ಮ್ಯಾನಿಂಗ್

  • ಮ್ಯಾಟ್ ಹ್ಯಾಸೆಲ್‌ಬೆಕ್
  • ಎಲಿ ಮ್ಯಾನಿಂಗ್

  • ಸ್ಟೀವ್‌ ಸ್ಮಿತ್
  • ಜೋ ಪೋರ್ಟರ್

ಆಸ್ಟ್ರೇಲಿಯನ್ ಫುಟ್‌ಬಾಲ್

ತಂಡಗಳು
  • ಅಡಿಲೇಡ್
  • ಗೋಲ್ಡ್ ಕೋಸ್ಟ್

ಬೇಸ್‌ಬಾಲ್‌

ತಂಡಗಳು
  • ಸ್ಯಾಮ್‌‌ಸಂಗ್ ಲಯನ್ಸ್

ಬ್ಯಾಸ್ಕೆಟ್‌ಬಾಲ್‌

ಆಟಗಾರರು
  • ಯೋ ಮಿಂಗ್
  • ಅಲೆನ್ ಐವರ್‌ಸನ್ (ಆಜೀವಮಾನ ಒಪ್ಪಂದ)
  • ಜೋನ್‌ ವಾಲ್‌

ಕ್ರಿಕೆಟ್

ರಾಷ್ಟ್ರೀಯ ತಂಡ

  • ಕೆನಡಾ

ಕ್ಲಬ್‌‌ ತಂಡಗಳು

  • ಕಿಂಗ್ಸ್ XI
  • ನೈಟ್‌ ರೈಡರ್ರ್ಸ್

ಆಟಗಾರರು

  • ಯುವರಾಜ್ ಸಿಂಗ್
  • ಎಂಎಸ್‌ ಧೋನಿ
  • ಹರಭಜನ್ ಸಿಂಗ್

  • ಗೌತಮ್ ಗಂಭೀರ್
  • ಯೂಸುಫ್ ಪಠಾಣ್

  • ಮಹೇಲ ಜಯವರ್ಧನೆ
  • ಅಜಂತ ಮೆಂಡಿಸ್

ಫುಟ್‌‌ಬಾಲ್‌‌‌ ಕ್ಲಬ್‌‌ ತಂಡಗಳು

ಆಫ್ರಿಕಾ
  • ಸೆಲ್ಟಿಕ್‌
  • ಅಮಜುಲು
ಅಮೆರಿಕ ಖಂಡಗಳು

  • ಕ್ರುಜೈರೊ
  • ಇಂಟರ್‌ನ್ಯಾಸಿನಲ್

  • ಸಾಒ ಪೌಲೊ
  • ಸಪ್ರಿಸ್ಸ

  • ಗ್ವಾಡಲಜರ

ಏಶಿಯ

  • ಕಿಂಗ್‌ಫಿಶರ್ ಈಸ್ಟ್ ಬೆಂಗಾಲ್
  • ಮೋಹನ್ ಬಾಗನ್

  • ಮೊಹಮ್ಮಡನ್
  • ಪರ್ಸಿಬಾ ಬಲಿಕ್‌ಪಾಪನ್

  • ಪರ್ಸೆಲಾ ಲ್ಯಾಮಂಗನ್
  • ಮೆಡನ್ ಚೀಫ್

ಯುರೋಪ್‌

  • ಬೋಲ್ಟನ್ ವಾಂಡರರ್ಸ್
  • ಲೆನ್ಸ್

  • ಕೋಲ್ನ್‌
  • ಎರಿಸ್

  • ಡ್ರೆನಿಕ
  • ಸಿಎಸ್‌ಕೆಎ ಮಾಸ್ಕೋ

ಓಸಿಯಾನಿಯ

  • ಅಡಿಲೇಡ್‌ ಯುನೈಟೆಡ್
  • ಸೆಂಟ್ರಲ್ ಕೋಸ್ಟ್ ಮರೀನರ್ಸ್
  • ಗೋಲ್ಡ್ ಕೋಸ್ಟ್ ಯುನೈಟೆಡ್
  • ಮೆಲ್‌ಬೋರ್ನ್‌ ಹಾರ್ಟ್‌

  • ಮೆಲ್‌ಬೋರ್ನ್‌ ವಿಕ್ಟರಿ
  • ನ್ಯೂಕಾಸೆಲ್ ಜೆಟ್ಸ್
  • ನಾರ್ತ್‌ ಕ್ವೀನ್ಸ್‌ಲ್ಯಾಂಡ್ ಫರಿ
  • ಪರ್ತ್‌ ಗ್ಲೋರಿ

  • ಬ್ರಿಸ್ಬೇನ್‌ ರೋರ್‌
  • ಸಿಡ್ನಿ ಎಫ್‌ಸಿ
  • ವೆಲ್ಲಿಂಗ್ಟನ್ ಫೀನಿಕ್ಸ್‌

ಫುಟ್‌‌ಬಾಲ್‌‌‌ ಆಟಗಾರರು

  • ರೋಜರಿಯೊ ಕೆನಿ
  • ಥೈರಿ ಹೆನ್ರಿ

ಫಾರ್ಮುಲಾ ಒನ್‌

  • ಫೋರ್ಸ್‌ ಇಂಡಿಯಾ

ಐಸ್‌ ಹಾಕಿ

  • ಎನ್‌ಎಚ್‌ಎಲ್‌ –ತಂಡದ ಎಲ್ಲ ಸಮವಸ್ತ್ರಗಳು
  • ಸಿಡ್ನಿ ಕ್ರಾಸ್‌‌ಬಿ
  • ಪವೆಲ್ ಡಾಟ್‌ಸಿಯುಕ್
  • ರಾಬರ್ಟೊ ಲ್ಯುಂಗೊ

  • ವಿಕ್ಟರ್ ಹೆಡ್‌ಮನ್
  • ಜೀನ್‌ ಸೆಬಾಸ್ಟಿಯನ್ ಗಿಗುರೆ
  • ಮಾರ್ಟಿ ಟರ್ಕೊ
  • ರೋಮನ್ ಹ್ಯಾಮ್‌ರ್ಲಿಕ್‌

  • ಮಾರ್ಕ್‌ ಆಂಡ್ರೆ ಫ್ಲೆರಿ
  • ಮ್ಯಾಟ್ ಡ್ಯುಛೆನ್
  • ಡರೆನ್ ಹೆಲ್ಮ್
  • ಜೋನಾಥನ್ ಬರ್ನೈರ್

ರಗ್ಬಿ ಲೀಗ್:

  • ಡ್ರಾಗನ್ಸ್

ರಗ್ಬಿ ಒಕ್ಕೂಟ

  • ಟಾಸ್ಮನ್ ಮ್ಯಾಕೋಸ್

ಪ್ರಾಯೋಜಕತೆ ಪಡೆದ ಬೇರೆ ಆಟಗಾರರು

  • ಗ್ರೆಗ್ ನಾರ್ಮನ್ (ಗಾಲ್ಫ್‌)
  • ಬ್ರೋಡೀ ಮೆರ್ರಿಲ್ (ಲಾಕ್ರೋಸ್)

  • ನಿಕೋಲ್ ವೈಡಿಸೋವ (ಟೆನಿಸ್)
  • ನಿಕ್ ವಿಲ್ಲಿಸ್ (ಅಥ್ಲೆಟಿಕ್ಸ್)

  • ಕರೊಲೊನಾ ಕ್ಲುಫ್ಟ್ (ಅಥ್ಲೆಟಿಕ್ಸ್)
  • ಜೋಶ್ ಬೆಕೆಟ್ (ಬೇಸ್‌ಬಾಲ್)

ಹಿಂದಿನ ಪ್ರಾಯೋಜಕತ್ವಗಳು

ಬ್ಯಾಸ್ಕೆಟ್‌ಬಾಲ್‌
  • ಎನ್‌ಬಿಎ – ಇದರ ಎಲ್ಲ ತಂಡಗಳಿಗೂ ಎಕ್ಸ್‌ಕ್ಲುಸಿವ್ ಕಿಟ್ ಸರಬರಾಜುದಾರ(2001–06)
  • ಡಬ್ಲ್ಯುಎನ್‌ಬಿಎ – ಇದರ ಎಲ್ಲ ತಂಡಗಳಿಗೂ ಎಕ್ಸ್‌ಕ್ಲುಸಿವ್ ಕಿಟ್ ಸರಬರಾಜುದಾರ(2001–06)
ಕಾಲೇಜ್‌‌ಗಳು

  • ಬೇಯರ್‌ ಬಿಯರ್ಸ್
  • ಯುಸಿಎಲ್‌ಎ ಬ್ರುಯಿನ್ಸ್
  • ವಿಸ್ಕಾನ್ಸಿನ್ ಬ್ಯಾಜರ್ಸ್
  • ವರ್ಜೀನಿಯಾ ಕೆವಲೈರ್ಸ್

  • ವ್ಯೋಮಿಂಗ್ ಕೌಬಾಯ್ಸ್
  • ಬೋಸ್ಟನ್ ಕಾಲೇಜ್ ಈಗಲ್ಸ್
  • ಫ್ಲೋರಿಡಾ ಗೇಟರ್ಸ್
  • ಟೆಕ್ಸಾಸ್ ಲಾಂಗ್‌ಹಾರ್ನ್ಸ್

  • ಅರ್ಕಾನ್ಸಸ್ ರಜೊರ್‌ಬ್ಯಾಕ್ಸ್
  • ಮಿಚಿಗನ್ ಸ್ಟೇಟ್ ಸ್ಪಾರ್ಟನ್ಸ್
  • ಉಟಾಹ್ ಊಟ್ಸ್
  • ಹವಾಯ್‌ ವಾರಿಯರ್ರ್ಸ್

ಫುಟ್‌‌ಬಾಲ್‌‌‌ ರಾಷ್ಟ್ರೀಯ ತಂಡಗಳು
  • ಅಜೆಂಟೈನಾ (1999–2001)
  • ಚಿಲಿ
  • ಕೊಲಂಬಿಯಾ
  • ಈಕ್ವೆಡಾರ್
  • ಪೆರುಗ್ವೆ
  • ರಷ್ಯಾ
ಫುಟ್‌‌ಬಾಲ್‌‌‌ ಕ್ಲಬ್‌‌ ತಂಡಗಳು

  • ಲಿವರ್‌ಪೂಲ್ ಎಫ್‌.ಸಿ.
  • ವೆಸ್ಟ್ ಹ್ಯಾಮ್
  • ಮ್ಯಾಂಚೆಸ್ಟರ್ ಸಿಟಿ
  • ಅಟ್ಲೆಟಿಕೊ ಮ್ಯಾಡ್ರಿಡ್
  • ಕ್ಯಾಗ್ಲಿರಿ ಕ್ಯಾಲ್ಸಿಯೊ
  • ಎಸಿಎಫ್‌ ಫಿಒರೆಂಟಿನ
  • ಚಿತ್ರ:Flag of GER.svg ಬೊರುಸ್ಸಿಯ ಮೋಂಚೆಂಗ್ಲಡ್‌ಬಾಶ್

  • ಚಿತ್ರ:Flag of FRA.svg ಎಸ್‌ಸಿ ಬಾಸ್ಟಿಯ
  • ಎಫ್‌ಸಿ ಉಟ್ರೆಶ್‌
  • ಸ್ಪೋರ್ಟಿಂಗ್ ಲಿಸ್‌ಬೋ
  • ರಾಪಿಡ್ಸ್
  • ರೆವಲ್ಯೂಶನ್
  • ಚಿತ್ರ:Flag of ECU.svg ಎಮೆಲೆಕ್
  • ಚಿತ್ರ:Flag of CHI.svg ಯುನಿವರ್ಸಿಡಾಡ್ ಕಟೋಲಿಕ

  • ಚಿತ್ರ:Flag of URU.svg ಪೆನಾರೊಲ್
  • ಚಿತ್ರ:Flag of BRA.svg ಪಾಲ್ಮೈರಸ್
  • ಚಿತ್ರ:Flag of BRA.svg ಫ್ಲುಮಿನೆನ್ಸ್
  • ಚಿತ್ರ:Flag of ARG.svg ಬ್ಯಾನ್‌ಫೀಲ್ಡ್
  • ಚಿತ್ರ:Flag of ARG.svg ಗೊಡೊಯ್ ಕ್ಯುಜ್

ರಗ್ಬಿ ಒಕ್ಕೂಟ ತಂಡಗಳು
  • ವೇಲ್ಸ್‌ (−2006)

ಇತ್ತೀಚಿನ ಸುದ್ದಿಗಳು

  • 2009ರಲ್ಲಿ, ರೀಬಾಕ್ ಜುಕಾರಿ ಫಿಟ್‌ ಟು ಫ್ಲೈ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿತು, ಇದು ವಿನೂತನ ಮಾದರಿಯ ಎಲ್ಲ ಮಹಿಳೆಯರಿಗಾಗಿ ವಿನ್ಯಾಸ ಮಾಡಿದ ಜಿಮ್‌ ವರ್ಕ್ಔಟ್‌ ಆಗಿತ್ತು. ಇದರ ಏಕೈಕ ಧ್ಯೇಯವೆಂದರೆ-ಮಹಿಳೆಯರಿಗೆ ಫಿಟ್‌ನೆಸ್‌ಅನ್ನು ಮೋಜಿನದಾಗಿ ಮಾಡುವುದು. ಜುಕಾರಿಯು ರೀಬಾಕ್ ಮತ್ತು ಜಾಗತಿಕವಾಗಿ ಹೆಸರಾಂತ ಮನೋರಂಜನಾ ಕಂಪನಿಯಾದ ಸರ್ಕ್ಯು ಡು ಸೊಲೈಲ್ ಜೊತೆ ದೀರ್ಘಕಾಲೀನ ಸಂಬಂಧದ ಫಲವಾಗಿದೆ. ಇದು ಒಂದು ಗಂಟೆ ಅವಧಿಯ ವರ್ಕ್ಔಟ್‌ ಆಗಿದ್ದು, ಫ್ಲೈಸೆಟ್ ಎಂದು ವಿಶೇಷವಾಗಿ ವಿನ್ಯಾಸ ಮಾಡಲಾದ ಉಪಕರಣವನ್ನು ಇದರಲ್ಲಿ ಬಳಸಲಾಗುತ್ತದೆ.ಇದು ಹಾರುವ ಭಾವನೆ ಮೂಡಿಸುತ್ತಲೇ ಹೃದಯ, ಶಕ್ತಿ, ಸಮತೋಲನ ಮತ್ತು ಮುಖ್ಯವಾದ ತರಬೇತಿ ಮೂಲಕ ದೇಹವನ್ನು ಬಲಗೊಳಿಸುತ್ತ, ಉದ್ದವಾಗಿಸುತ್ತದೆ. ಹಾಂಗ್‌ಕಾಂಗ್, ಮೆಕ್ಸಿಕೋ ನಗರ, ಮ್ಯಾಡ್ರಿಡ್, ಲಂಡನ್, ಕ್ರಕೋವ್, ಮ್ಯುನಿಚ್, ಸಿಯೋಲ್, ಕೌಲಾಲಾಂಪುರ್, ಬ್ಯೂನಸ್‌ ಐರಿಸ್, ಸ್ಯಾಮಟಿಯಾಗೋ, ಮಾಂಟ್ರಿಯಲ್, ಲಾಸ್‌ ಏಂಜೆಲಿಸ್, ಬೋಸ್ಟನ್ ಮತ್ತು ನ್ಯೂಯಾಕ್‌ ಒಳಗೊಂಡು ಒಟ್ಟು ವಿಶ್ವದ 14 ನಗರಗಳಲ್ಲಿ ಜುಕಾರಿಯನ್ನು ಬಿಡುಗಡೆ ಮಾಡಲಾಯಿತು. ಜುಕಾರಿ ಫಿಟ್‌ ಟು ಫ್ಲೈಗೆ ಪೂರಕವಾಗಿ, ರೀಬಾಕ್ ಮಹಿಳೆಯರ ಇನ್ನೂ ಎರಡು ಫಿಟ್‌ನೆಸ್‌ ತೊಡುಗೆಗಳನ್ನು ಮತ್ತು ಪಾದರಕ್ಷೆಗಳನ್ನು ಬಿಡುಗಡೆ ಮಾಡಿತು, ಅವೆದರೆ ಆನ್‌ ಮೂವ್ ಮತ್ತು ರೀಬಾಕ್-ಸರ್ಕ್ಯು ಡು ಸೊಲೈಲ್ ಕಲೆಕ್ಷನ್. ಈ ಎರಡೂ ಮಾದರಿಗಳು ಓಡುವುದರಿಂದ ಹಿಡಿದು ಯೋಗದವರೆಗೆ, ಜುಕಾರಿ ಫಿಟ್‌ ಟು ಫ್ಲೈನಿಂದ ಹಿಡಿದು ಟೆನಿಸ್‌‌ವರೆಗೆ ವಿವಿಧ ರೀತಿಯ ಫಿಟ್‌ನೆಸ್‌ ವ್ಯಾಯಾಮಗಳಿಗೆ ಧರಿಸುವಂತಹುದು. ಎಲ್ಲ ಉತ್ಪನ್ನಗಳನ್ನು ಮಹಿಳೆಯರ ದೇಹದ ಚಲನೆಗಳ ಆಳವಾದ ಅರ್ಥೈಸಿಕೊಳ್ಳುವಿಕೆ ಮತ್ತು ಅರಿವಿನಿಂದ ಅಭಿವೃದ್ಧಿಪಡಿಸಿ, ವಿನ್ಯಾಸ ಮಾಡಲಾಗಿದೆ.
  • 2009ರಲ್ಲಿ, ರೀಬಾಕ್ ಈಸಿಟೋನ್‌ ಪಾದರಕ್ಷೆಗಳ ಸಂಗ್ರಹವನ್ನು ಬಿಡುಗಡೆ ಮಾಡಿತು, ಅದು ಗ್ರಾಹಕರಿಗೆ "ಜಿಮ್‌ಅನ್ನು ಜೊತೆಗೇ ಕೊಂಡೊಯ್ಯುವ" ಅವಕಾಶವನ್ನು ನೀಡುತ್ತದೆ. ಈಸಿಟೋನ್ ತಂತ್ರಜ್ಞಾನವು ಶೂನ ಹಿಮ್ಮಡಿ ಮತ್ತು ಮುಂಗಾಲಿನ ಮಧ್ಯದಲ್ಲಿ ಎರಡು ಬ್ಯಾಲೆನ್ಸ್‌ ಪಾಡ್‌ಗಳನ್ನಿಟ್ಟು, ಪ್ರತಿ ಬಾರಿ ಹೆಜ್ಜೆಯೂರಿದಾಗಲೂ ಸ್ವಾಭಾವಿಕವಾದ ಅಸ್ಥಿರತೆಯನ್ನು ಉಂಟು ಮಾಡುತ್ತದೆ. ರೀಬಾಕ್ ಹೇಳುವಂತೆ ಇದು ಸ್ನಾಯುಗಳಿಗೆ ದಾರ್ಢ್ಯತೆ ಬೆಳೆಸಿಕೊಳ್ಳುವಂತೆ ಬಲಹೇರುತ್ತದೆ.
  • 2008ರ ಏಪ್ರಿಲ್‌ನಲ್ಲಿ, ರೀಬಾಕ್ ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ತನ್ನ ಆನ್‌ಲೈನ್‌ ಮಳಿಗೆಗಳನ್ನು ಆರಂಭಿಸಿತು.[೧]. 2009ರ ಜನವರಿಯಲ್ಲಿ, ರೀಬಾಕ್ ತನ್ನ ಆನ್‌ಲೈನ್ ಮಳಿಗೆಯನ್ನು ಜರ್ಮನಿ, ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ ಮತ್ತು ಐರ್ಲೆಂಡ್‌ ದೇಶಗಳಿಗೆ ವಿಸ್ತರಿಸಿತು. ಜೊತೆಗೆ ನಿಮ್ಮ ಸ್ವಂತ ರೀಬಾಕ್‌ಗಳನ್ನು ವಿನ್ಯಾಸ ಮಾಡಿ ಎಂಬ ಅಪ್ಲಿಕೇಶನ್‌ ಕೂಡ ಆರಂಭಿಸಿತು. [೨].
  • 2008–09ರ ಋತುವಿನಲ್ಲಿ, ರೀಬಾಕ್ ಎಡ್ಜ್‌ 1 ಸಮವಸ್ತ್ರ ವ್ಯವಸ್ಥೆಯನ್ನು ರೀಬಾಕ್ ನ್ಯಾಶನಲ್ ಹಾಕಿ ಲೀಗ್‌ ಆಟಗಾರರಿಗಾಗಿ ಆರಂಭಿಸಿತು. ಲೀಗ್‌ ಜೆರ್ಸಿಗಳನ್ನು ಸ್ವೀಕರಿಸಿತು ಮತ್ತು ತಂಡದ ಎಲ್ಲ ಸ್ಪರ್ಧೆಗಳಿಗೆ ದೇಶದಲ್ಲಿ ಮತ್ತು ವಿದೇಶದಲ್ಲಿ ಜೆರ್ಸಿಗಳ ಹೊಸ ಶೈಲಿಯನ್ನು ಅಳವಡಿಸಿಕೊಂಡಿತು.
  • 2007ರ ಜುಲೈನಲ್ಲಿ, ರೀಬಾಕ್ ತನ್ನ ಲೈಫ್‌ಸ್ಟೈಲ್‌ ಪಾದರಕ್ಷೆ ಸಂಗ್ರಹವನ್ನು ಡ್ಯಾಡಿ ಯಾಂಕೀಯ ಹೊಸ ಆಲ್ಬಂನ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿತು. 2007ರ ಡಿಸೆಂಬರ್‌ನಲ್ಲಿ, ರೀಬಾಕ್ ಭಾರತೀಯ ಫುಟ್‌‌ಬಾಲ್‌‌‌ ಸಿನಿಮಾ ಧನ್‌ ಧನಾ ಧನ್‌ ಗೋಲ್‌ನ ಬಿಡುಗಡೆಗಾಗಿ ಫುಟ್‌‌ಬಾಲ್‌‌‌ ಉಡುಗೆಗಳ ಗೋಲ್‌ ಸಂಗ್ರಹವನ್ನು ಬಿಡುಗಡೆ ಮಾಡಿತು.
  • 2007ರ ಜೂನ್‌ನಲ್ಲಿ, ರೀಬಾಕ್ ಸ್ಕಾರ್ಲೆಟ್‌ ಜೊಹಾನ್ಸನ್‌‌ಳನ್ನು ತನ್ನ ಬ್ರಾಂಡ್‌ ಅಂಬಾಸಡರ್‌ ಆಗಿ ಪ್ರಕಟಿಸಿತು. ಜೊಹಾನ್ಸ್‌ನ್‌ ಸ್ಕಾರ್ಲೆಟ್‌ 'ಹಾರ್ಟ್ಸ್' ಆರ್‌ಬಿಕೆ" ಸಂಗ್ರಹವನ್ನು ಪ್ರಚಾರ ಮಾಡುತ್ತಾರೆ. ಇದು 'ಫ್ಯಾಶನ್‌-ಫಾರ್‌ವರ್ಡ್‌, ಅಥ್ಲೆಟಿಕ್‌-ಇನ್‌ಸ್ಪೈರ್ಡ್' ಪಾದರಕ್ಷೆಯಾಗಿದ್ದು, ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ.
  • 2007/08 ಋತುವಿಗಾಗಿ, ರಾಷ್ಟ್ರೀಯ ಹಾಕಿ ಲೀಗ್‌ ಲೀಗ್‌ನಲ್ಲಿ ಹೊಸ ಸಮವಸ್ತ್ರ ವ್ಯವಸ್ಥೆಯನ್ನು ಪರಿಚಯಿಸಿತು. ಇದನ್ನು ರೀಬಾಕ್‌ ವಿನ್ಯಾಸಗೊಳಿಸಿ, ತಯಾರಿಸಿದೆ ಮತ್ತು ರೀಬಾಕ್ ಎಡ್ಜ್‌ ಎಂದು ಕರೆಯಲಾಯಿತು. ಈ ಹೊಸ ಸಮವಸ್ತ್ರಗಳು ನೀರನ್ನು ಮತ್ತು ಬೆವರನ್ನು ಪರಿಣಾಮಕಾರಿಯಾಗಿ ನಿರೋಧಿಸುವ ಹೊಸ ಬಗೆಯ ದಾರದ ಎಳೆಗಳನ್ನು ಹೊಂದಿವೆ ಎನ್ನಲಾಗಿದೆ. ಅನೇಕ ಆಟಗಾರರು ಅಭಿಪ್ರಾಯ ನೀಡುವುದನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಕೆಲವರು ಎಡ್ಜ್‌ ವ್ಯವಸ್ಥೆಯ ಸುಧಾರಿತ ನೀರು ನಿರೋಧಕ ಸಾಮರ್ಥ್ಯವು ಗ್ಲೋವ್ಸ್‌ ಮತ್ತು ಸ್ಕೇಟ್‌ಗಳನ್ನು ಆರ್ದ್ರೀಕರಿಸಿ, ಆಟವಾಡುವಾಗ ಅಹಿತಕರವಾಗಿರುತ್ತದೆ ಎಂದಿದ್ದಾರೆ.
  • 2006ರ ಕೊನೆಯಲ್ಲಿ, ರೀಬಾಕ್‌ನ ಕಿಟ್‌ ಧರಿಸಿದ, 2005ರ ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌‌ನ ವಿಜೇತರಾದ ಲಿವರ್‌ಪೂಲ್‌ ಎಫ್‌ಸಿ ಮತ್ತು ರೀಬಾಕ್ ನಡುವೆ ಒಂದು ಕೋರ್ಟ್‌ ಮೊಕದ್ದಮೆ ಆರಂಭವಾಯಿತು. ಕಾರ್ಲ್ಸ್‌ಬರ್ಗ್‌ ಪ್ರಾಯೋಜಕತ್ವದ ಒಪ್ಪಂದದ ನವೀಕರಣವನ್ನು ದೃಢಪಡಿಸುವಲ್ಲಿ ವಿಳಂಬ ಮಾಡಿದ್ದರಿಂದ ಲಿವರ್‌ಪೂಲ್ ತಮಗೆ 7 ಮಿಲಿಯನ್ ಡಾಲರ್‌ ಖರ್ಚು ಮಾಡಿದೆ ಎಂದು ರೀಬಾಕ್ ಹೇಳಿತು. ಆದ್ದರಿಂದ 2005/06ರ ಅವೇ ಶರ್ಟ್‌ಗಳನ್ನು(ರೀಬಾಕ್ ಅವರಿಗಾಗಿ ಬಿಡುಗಡೆ ಮಾಡಲಿದ್ದ ಕೊನೆಯ ಉತ್ಪನ್ನ) ಬಿಡುಗಡೆ ಮಾಡುವಲ್ಲಿ ವಿಳಂಬವಾಯಿತು ಎಂದು ರೀಬಾಕ್ ದೂರಿತು. ಹೀಗಾಗಿ 2003/04ರ ಸಾಲಿಗೆ ಬಿಡುಗಡೆ ಮಾಡಿದ್ದ ಅವೇ ಕಿಟ್‌ನ ಮಾದರಿಯಲ್ಲಿಯೇ ಇದೂ ಇದ್ದಿತು. ಹೀಗಾಗಿ ಲಿವರ್‌ಪೂಲ್‌ ರೀಬಾಕ್‌ನ ಅಡಿಡಾಸ್‌ ಸ್ವಾಮ್ಯದ ನಂತರ ಅಡಿಡಾಸ್‌ ಅನ್ನು ತಮ್ಮ ಅಧಿಕೃತ ಕಿಟ್ ಮಾಡಿಕೊಂಡರು.
  • 2006ರ ನವೆಂಬರ್‌ನಲ್ಲಿ, ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ ಮತ್ತು ಮಹಿಳೆಯರ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ ರೀಬಾಕ್‌ ಬಿಟ್ಟು ಅಡಿಡಾಸ್‌ನ ಅಧಿಕೃತ ಮತ್ತು ರಿಪ್ಲಿಕಾ ಜೆರ್ಸಿಗಳನ್ನು ಆಯ್ಕೆ ಮಾಡಿಕೊಂಡವು. ಏಕೆಂದರೆ ಆ ಬ್ರಾಂಡ್‌ ಉತ್ತರ ಅಮೆರಿಕ ಮತ್ತು ಬ್ರಿಟನ್‌ ಹೊರಗೆ ಹೆಚ್ಚು ಪರಿಚಿತವಾಗಿದ್ದವು.
  • 2006ರ ಅಕ್ಟೋಬರ್‌‌ನಲ್ಲಿ ರೀಬಾಕ್ ತನ್ನ ಮೊದಲ ಬ್ಲಾಗ್‌ ಐಯಾಮ್‌ ವಾಟ್‌ ಐಯಾಮ್‌ Archived 2008-07-27 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ಸ್ಪ್ಯಾನಿಶ್‌ನಲ್ಲಿ ಆರಂಭಿಸಿತು.
  • 2006ರ ಮಾರ್ಚ್‌ 23ರಂದು, ಅತಿಹೆಚ್ಚು ಪ್ರಮಾಣದಲ್ಲಿ ಸೀಸ(ಲೆಡ್‌) ಹೊಂದಿದ್ದ 300,000 ಸುಂದರ ಬ್ರೇಸ್‌ಲೆಟ್‌ಗಳನ್ನು ರೀಬಾಕ್ ಮರಳಿಪಡೆಯಿತು. ಬ್ರೇಸ್‌ಲೆಟ್‌ಗಳು ಹೃದಯದಾಕಾರದ ಪದಕವನ್ನು ಹೊಂದಿದ್ದು, ಅದರ ತುದಿಯಲ್ಲಿ "ರೀಬಾಕ್" ಎಂಬ ಹೆಸರು ಮುದ್ರಿತವಾಗಿತ್ತು. ಅದನ್ನು ನುಂಗಿದ 4 ವರ್ಷದ ಮಗುವು ಸೀಸದ ವಿಷದ ಪರಿಣಾಮವಾಗಿ ಸತ್ತಿತು ಎಂದು ಆಪಾದಿಸಲಾಯಿತು.
  • 2005ರ ಆಗಸ್ಟ್‌ನಲ್ಲಿ, ಕಂಪನಿಯ ಅತಿ ದೊಡ್ಡ ಪ್ರತಿಸ್ಪರ್ಧಿಯಾದ ಅಡಿಡಾಸ್‌ ತಾನು ರೀಬಾಕ್ ಕಂಪನಿಯನ್ನು 3.8 ಬಿಲಿಯನ್ ಡಾಲರ್‌ಗೆ ಸ್ವಾಧೀನ ಪಡಿಸಿಕೊಳ್ಳಲಿದ್ದೇನೆ ಎಂದಿತು. ಒಪ್ಪಂದವು 2006ರ ಜನವರಿಯಲ್ಲಿ ಪೂರ್ಣಗೊಂಡಿತು.[೭]

ಉಲ್ಲೇಖಗಳು

ಬಾಹ್ಯ ಕೊಂಡಿಗಳು


🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ