ರಾಜೇಶ್ ಕುಮಾರ್ (ಏರ್ ಮಾರ್ಷಲ್)

ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಅವರು ಕೊನೆಯದಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಏರ್ ಮಾರ್ಷಲ್ ನವಕರಣಜಿತ್ ಸಿಂಗ್ ಧಿಲ್ಲಾನ್ ಅವರ ನಿವೃತ್ತಿಯ ನಂತರ ೨೦೨೧ ರ ಜನವರಿ ೩೧ ರಂದು ಅವರು ಅಧಿಕಾರ ವಹಿಸಿಕೊಂಡರು.[೨] ಈ ಹಿಂದೆ ಅವರು ಸೆಂಟ್ರಲ್ ಏರ್ ಕಮಾಂಡ್ ಎಒಸಿ-ಇನ್-ಸಿ ಮತ್ತು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಎಸ್ಎಎಸ್ಒ ಆಗಿ ಸೇವೆ ಸಲ್ಲಿಸಿದ್ದರು. ಅವರು ೩೧ ಆಗಸ್ಟ್ ೨೦೨೧ ರಂದು ನಿವೃತ್ತರಾದರು. [೩][೪][೫]

ಏರ್ ಮಾರ್ಷಲ್

ರಾಜೇಶ್ ಕುಮಾರ್

ಪರಮ ವಿಶಿಷ್ಥ ಸೇವಾ ಪದಕ, ಅತಿ ವಿಶಿಷ್ಥ ಸೇವಾ ಪದಕ, ವಾಯು ಸೇನಾ ಪದಕ, ಏಯಡೆ - ಡೆ - ಕ್ಯಾಂಪ್
ಸೇವಾವಧಿ೪ ಜೂನ್ ೧೯೮೨ – ೩೧ Aಆಗಸ್ಥ್ ೨೦೨೧
ಶ್ರೇಣಿ(ದರ್ಜೆ) ಏರ್ ಮಾರ್ಷಲ್
ಸೇವಾ ಸಂಖ್ಯೆ16770[೧]
ಅಧೀನ ಕಮಾಂಡ್ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್
ಸೆಂಟ್ರಲ್ ಏರ್ ಕಮಾಂಡ್
ಪ್ರಶಸ್ತಿ(ಗಳು)ಪರಮ ವಿಶಿಷ್ಥ ಸೇವಾ ಪದಕ
ಅತಿ ವಿಶಿಷ್ಥ ಸೇವಾ ಪದಕ
ವಾಯು ಸೇನಾ ಪದಕ
ಏಯಡೆ - ಡೆ - ಕ್ಯಾಂಪ್
ಸಂಗಾತಿಜಯ ಕುಮಾರ್

ಆರಂಭಿಕ ಜೀವನ ಮತ್ತು ಶಿಕ್ಷಣ

ಕುಮಾರ್ ಅವರು ಅಜಮೇರ್‌ನ ಮಾಯೊ ಕಾಲೇಜು ಮತ್ತು ರಾ‌ಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕವಸ್ಲ- ಇದರ ಹಳೆವಿದ್ಯಾರ್ಥಿ. ವಾಯು ಕಮಾಂಡ್ ಮತ್ತು ಸ್ಥಾಫ್ ಕಾಲೇಜು, ಮೋಂಟ್ಗೋಮೇರಿ, ಅಲಬಾಮ -ಇಲ್ಲಿನ ಪದವೀಧರರು. ಸಿಕಂದರಾಬಾದ್‌ನಲ್ಲಿರುವ ರಕ್ಷಣಾ ನಿರ್ವಹಣಾ ಕಾಲೇಜಿನಿಂದ ಉನ್ನತ ರಕ್ಷಣಾ ನಿರ್ವಹಣಾ ತರಬೇತಿಯನ್ನೂ ಪಡೆದಿರುವರು.[೬][೭]

ವೃತ್ತಿಜೀವನ

ಕುಮಾರ್ ಅವರನ್ನು ೧೯೮೨ ರ ಜೂನ್ ೪ ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಫೈಟರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಮತ್ತು ಫ್ರಂಟ್-ಲೈನ್ ವಾಯುನೆಲೆಯನ್ನು ಮುನ್ನಡೆಸಿದ್ದಾರೆ. ಅವರು ಎ ವರ್ಗದ ಫ್ಲೈಯಿಂಗ್ ಬೋಧಕ, ಇನ್ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಏರ್ ಕ್ರೂ ಮೇಲ್ವಿಚಾರಕರಾಗಿದ್ದಾರೆ.[೬][೭] ಅವರು ಇಸ್ರೇಲ್‌ನ ಎಡಬ್ಲ್ಯೂಎಸಿಎಸ್ ಯೋಜನೆಯ ಮೇಲ್ವಿಚಾರಣಾ ತಂಡದ ನಾಯಕರಾಗಿ, ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಭಾರತೀಯ ವಾಯುಪಡೆಯ ಯೋಜನಾ ನಿರ್ವಹಣಾ ತಂಡದ ನಿರ್ದೇಶಕರಾಗಿ ಮತ್ತು ಶಿಲ್ಲಾಂಗ್‌ನ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ನೇಮಕರಾಗಿದ್ದಾರೆ.[೮][೯]

ತಮ್ಮ ೩೬ ವರ್ಷಗಳ ವೃತ್ತಿಜೀವನದಲ್ಲಿ, ಕುಮಾರ್ ಅವರಿಗೆ ೨೦೨೧ ರಲ್ಲಿ ಪರಮ್ ವಿಶಿಷ್ಟ ಸೇವಾ ಪದಕ, ೨೦೧೯ ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಆಪರೇಷನ್ ಪರಾಕ್ರಮ ಶೌರ್ಯಕ್ಕಾಗಿ ವಾಯು ಸೇನಾ ಪದಕ ನೀಡಲಾಗಿದೆ.[೧೦][೧೧][೧೨]

ಪರಮ ವಿಶಿಷ್ಟ ಸೇವಾ ಪದಕಅತಿ ವಿಶಿಷ್ಟ ಸೇವಾ ಪದಕವಾಯು ಸೇನಾ ಪದಕ

ರಾಜೇಶ್ ಕುಮಾರ್ ಅವರು ಜಯಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ .[೧೦]

ಉಲ್ಲೇಖಗಳು

Military offices
ಪೂರ್ವಾಧಿಕಾರಿ
ನವಕರಂಜಿತ್ ಸಿಂಗ್ ಧಿಲ್ಲೋನ್
ಕಮಾಂಡರ್ ಇನ್ ಚೀಫ್, ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್
೧ ಫೆಬ್ರವರಿ ೨೦೨೧ – ೩೧ ಅಗಸ್ಟ್ ೨೦೨೧
ಉತ್ತರಾಧಿಕಾರಿ
ಆರ್. ಬಿ. ಪಂಡಿತ್
ಪೂರ್ವಾಧಿಕಾರಿ
ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ
ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಸೆಂಟ್ರಲ್ ಏರ್ ಕಮಾಂಡ್
೧ ಜನವರಿ ೨೦೧೯ – ೩೧ ಜನವರಿ ೨೦೨೧
ಉತ್ತರಾಧಿಕಾರಿ
ಅಮಿತ್ ತಿವಾರಿ
ಪೂರ್ವಾಧಿಕಾರಿ
ರಘುನಾಥ್ ನಂಬಿಯಾರ್
ಹಿರಿಯ ಏರ್ ಸ್ಟಾಫ್ ಅಧಿಕಾರಿ- ಈಸ್ಟ‌ರ್ನ್ ಏರ್ ಕಮಾಂಡ್
೧ ಮಾರ್ಚ್ ೨೦೧೭ – ೩೧ ಡಿಸೆಂಬರ್ ೨೦೧೮
ಉತ್ತರಾಧಿಕಾರಿ
ಸಂದೀಪ್ ಸಿಂಗ್
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ