ರವಿಚಂದ್ರನ್

ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಗೀತರಚನೆಕಾರ

ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ.[೧]

ವಿ ರವಿಚಂದ್ರನ್
V Ravichandaran
ಜನನ
ವೀರಾಸ್ವಾಮಿ ರವಿಚಂದ್ರನ್

(1961-05-30) ೩೦ ಮೇ ೧೯೬೧ (ವಯಸ್ಸು ೬೩)
ಬೆಂಗಳೂರು, ಕರ್ನಾಟಕ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಕ್ರೇಜಿಸ್ಟಾರ್, ಕನಸುಗಾರ, ಚಿತ್ರಬ್ರಹ್ಮ, ತಾಂತ್ರಿಕತೆಯ ಮಾಂತ್ರಿಕ, ರವಿಮಾಮ, ಕನ್ನಡದ ಶೋಮ್ಯಾನ್
ವೃತ್ತಿ(ಗಳು)ನಾಯಕನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ, ಸಂಗೀತ ನಿರ್ದೇಶಕ, ಸಂಕಲನಕಾರ, ಸಂಭಾಷಣೆಕಾರ, ನೃತ್ಯಸಂಯೋಜಕ, ರೇಡಿಯೋ ಜಾಕಿ, ಪೋಷಕ ನಟ
Years active1981–ಪ್ರಸ್ತುತ
ಸಂಗಾತಿಸುಮಥಿ (ವಿವಾಹ 1986)
ಮಕ್ಕಳುಮನೋರಂಜನ್ ರವಿಚಂದ್ರನ್ (ಜೇಷ್ಠ ಪುತ್ರ)
ಗೀತಾಂಜಲಿ (ಮಗಳು)
ವಿಕ್ರಮ್ ರವಿಚಂದ್ರನ್ (ದ್ವಿತೀಯ ಪುತ್ರ)
ಪೋಷಕ(ರು)ವೀರಾಸ್ವಾಮಿ (ತಂದೆ)
ಪಟ್ಟಮ್ಮಲ್ (ತಾಯಿ)
ಜಾಲತಾಣwww.vravichandran.in

ಪರಿವಾರ

'ರವಿಚಂದ್ರನ್', ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಮಗ. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.

ನಿರ್ದೇಶನ

ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು. ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ಹಳ್ಳಿಸೊಗಡಿನ 'ರಾಮಾಚಾರಿ' ಸಿನಿಮಾದ ಮೂಲಕ ಹೆಸರಾದರು.

ಯಶಸ್ವಿ ಚಿತ್ರಗಳು

ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ. 'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ.

ರೀಮೇಕ್ ಅಲ್ಲ ರವಿಮೇಕ್

ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ರವಿಚಂದ್ರನ್ ಸಿನಿಮಾಗಳು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತವೆ. ಹಿಂದಿಯ 'ಹೀರೋ' ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಕುಂಚದಲ್ಲಿ 'ರಣಧೀರ'ನಾದಾಗ, ಮೂಲನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು. ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೆ ತಮ್ಮದೇ ಶೈಲಿಯಲ್ಲಿ ಕನ್ನಡೀಕರಣಗೊಳಿಸುವಲ್ಲಿ ಇವರು ನಿಸ್ಸೀಮರು. ಹಾಗಾಗಿ, ರೀಮೇಕ್ ಗಳ ನಡುವೆ ರವಿಮೇಕ್ ಗಳು ವಿಶಿಷ್ಟವಾಗಿ ಎದ್ದುನಿಲ್ಲುತ್ತವೆ.

ಕೊಡುಗೆಗಳು

ಕನ್ನಡ ಚಿತ್ರರಂಗದ ದೇಸಿದೊರೆ, ನಾದಬ್ರಹ್ಮ ಹಂಸಲೇಖರವರನ್ನು ತಮ್ಮ 'ಪ್ರೇಮಲೋಕ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಗೀತಪರಂಪರೆಯಲ್ಲೊಂದು ಹೊಸ ಸಂಚಲನ ಮೂಡಿಸಿದರು. ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.'ಪ್ರೇಮಲೋಕ', 'ರಣಧೀರ' ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿವೆ. ಇಂದಿಗೂ ಎಫ಼್.ಎಮ್ ಹಾಗೂ ಟಿ.ವಿ. ವಾಹಿನಿಗಳಲ್ಲಿ ಇವರ ಹಾಡುಗಳದ್ದೆ ಸಿಂಹಪಾಲು. ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಪ್ರೇಮಕಥೆಗಳ ಬಹುತೇಕ ಕೋನಗಳನ್ನು ಮುಟ್ಟಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದು. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್. ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜಿ ಎಸ್ ವಿ ಸೀತಾರಾಂ ಅವರು ಇವರ ಬಹುಕಾಲದ ಛಾಯಾಗ್ರಾಹಕರಾಗಿದ್ದಾರೆ.

ಚಿತ್ರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ

'ನಾನು ನನ್ನ ಹೆಂಡ್ತೀರು' ಚಿತ್ರದ ಮೂಲಕ ರವಿಚಂದ್ರನ್ ಸಂಗೀತ ನಿರ್ದೇಶಕರಾದರು. ನಂತರ ತೆರೆಕಂಡ ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ ಹದಿನೈದಕ್ಕು ಹೆಚ್ಚು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನವಿದೆ. ಚೋರ ಚಿತ್ತಚೋರ ಚಿತ್ರದ 'ದಿಲ್ಲು ದಿಲ್ಲು ಸೇರಿದಾಗ' ಹಾಡು ಇವರು ಬರೆದ ಮೊದಲ ಸಾಹಿತ್ಯ.

ರವಿಚಂದ್ರನ್ ಚಿತ್ರಗಳು

#ವರ್ಷಚಿತ್ರ
೧೯೮೨ಖದೀಮ ಕಳ್ಳರು
೧೯೮೩ಚಕ್ರವ್ಯೂಹ
೧೯೮೪]]ಪ್ರಳಯಾಂತಕ
೧೯೮೪ಪ್ರೇಮಿಗಳ ಸವಾಲ್
೧೯೮೫ಸಾವಿರ ಸುಳ್ಳು
೧೯೮೪ಪಿತಾಮಹ
ವರ್ಷ- ಕನ್ನಡಚಿತ್ರಗಳುನಾನೇ ರಾಜ
೧೯೮೬ಅಸಂಭವ
ವರ್ಷ-ಕನ್ನಡಚಿತ್ರಗಳುಸ್ವಾಭಿಮಾನ
೧೦೧೯೮೫ನಾನು ನನ್ನ ಹೆಂಡ್ತಿ
೧೧೧೯೮೬ಬಾ ನನ್ನ ಪ್ರೀತಿಸು
೧೨೧೯೮೬ರಾಮಣ್ಣ ಶಾಮಣ್ಣ
೧೩೧೯೮೮ಪ್ರೇಮಲೋಕ
೧೪೧೯೮೮ರಣಧೀರ
೧೫೧೯೮೮ಸಂಗ್ರಾಮ
೧೬೧೯೮೮ಅಂಜದ ಗಂಡು
೧೭೧೯೮೯ಯುಗ ಪುರುಷ
೧೭೮೧೯೮೯ಕಿಂದರ ಜೋಗಿ
೧೯೧೯೮೯ಬ್ರಹ್ಮ ವಿಷ್ಣು ಮಹೇಶ್ವರ
೨೦೧೯೮೯ಯುದ್ಢಕಾಂಡ
೨೧೧೯೮೯ಪೋಲಿ ಹುಡುಗ
೨೨೧೯೮೯ಬಣ್ಣದ ಗೆಜ್ಜೆ
೨೩೧೯೯೦ಅಭಿಮನ್ಯು
೨೪೧೯೯೧ಶಾಂತಿ ಕ್ರಾಂತಿ
೨೫೧೯೯೧ರಾಮಾಚಾರಿ
೨೬೧೯೯೨ಹಳ್ಳಿ ಮೇಷ್ಟ್ರು
೨೭೧೯೯೨ಗೋಪಿಕೃಷ್ಣ
೨೮೧೯೯೨ ಗುರುಬ್ರಹ್ಮ
೨೯೧೯೯೨ಮನೆದೇವ್ರು
೩೦೧೯೯೨ಚಿಕ್ಕೆಜಮಾನ್ರು
೩೧೧೯೯೨ಶ್ರೀರಾಮಚಂದ್ರ
೩೨೧೯೯೩ಗಡಿಬಿಡಿ ಗಂಡ
೩೩೧೯೯೩ಅಣ್ಣಯ್ಯ
೩೪೧೯೯೪ಚಿನ್ನ
೩೫೧೯೯೪ರಸಿಕ
೩೬೧೯೯೪ಜಾಣ
೩೭೧೯೯೪ಮಾಂಗಲ್ಯಂ ತಂತುನಾನೇನ
೩೮ವರ್ಷ-ಕನ್ನಡಚಿತ್ರಗಳುಪುಟ್ನಂಜ
೩೯೧೯೯೭ಕಲಾವಿದ
೪೦೧೯೯೭ಮೊಮ್ಮಗ
೪೧೧೯೯೭ಸಿಪಾಯಿ
೪೨೧೯೯೭ಚೆಲುವ
೪೩೧೯೯೮ಪ್ರೀತ್ಸೋದ್ ತಪ್ಪಾ?
೪೪೧೯೯೮ಯಾರೇ ನೀನು ಚೆಲುವೆ
೪೫೧೯೯೯ನಾನು ನನ್ನ ಹೆಂಡ್ತೀರು
೪೬೧೯೯೯ರವಿಮಾಮ
೪೭೧೯೯೯ಸ್ನೇಹ
೪೮೧೯೯೯ಓ ಪ್ರೇಮವೇ
೪೯೧೯೯೯ಚೋರ ಚಿತ್ತ ಚೋರ
೫೦೨೦೦೦ಮಹಾತ್ಮ
೫೧೨೦೦೦ಪ್ರೀತ್ಸು ತಪ್ಪೇನಿಲ್ಲ
೫೨೨೦೦೦ಓ ನನ್ನ ನಲ್ಲೆ
೫೩೨೦೦೦ಪ್ರೇಮಕ್ಕೆ ಸೈ
೫೪೨೦೦೧ಕನಸುಗಾರ
೫೫೨೦೦೦ಉಸಿರೇ
೫೬೨೦೦೨ಪ್ರೀತಿ ಮಾಡೋ ಹುಡುಗರಿಗೆಲ್ಲ
೫೭೨೦೦೨ಏಕಾಂಗಿ
೫೮೨೦೦೨ಕೋದಂಡರಾಮ
೫೯೨೦೦೩ಒಂದಾಗೋಣ ಬಾ
೬೦೨೦೦೪ಮಲ್ಲ
೬೧೨೦೦೪ರಾಮಕೃಷ್ಣ
೬೨೨೦೦೪ಸಾಹುಕಾರ
೬೩೨೦೦೫ಅಹಂ ಪ್ರೇಮಾಸ್ಮಿ
೬೪೨೦೦೫ಪಾಂಡು ರಂಗ ವಿಠಲ
೬೫೨೦೦೬ರವಿ ಶಾಸ್ತ್ರೀ
೬೬೨೦೦೬ಹಠವಾದಿ
೬೭೨೦೦೫ಒಡಹುಟ್ಟಿದವಳು
೬೮೨೦೦೫ನೀಲಕಂಠ
೬೯ವರ್ಷ-ಕನ್ನಡಚಿತ್ರಗಳುಯುಗಾದಿ
೭೦೨೦೦೮ನೀ ಟಾಟಾ ನಾ ಬಿರ್ಲಾ
೭೧೨೦೦೮ರಾಜಕುಮಾರಿ
'೭೨೨೦೧೨ಹೂ
೭೫೨೦೧೩ದಶಮುಖ
೭೬೨೦೧೪ಪರಮಶಿವ
೭೭೨೦೧೪ಕ್ರೇಜಿ ಸ್ಟಾರ್
೭೮೨೦೧೩ಕ್ರೇಜಿ ಲೋಕ
೭೯೨೦೧೪ಮಾಣಿಕ್ಯ
೮೦೨೦೧೪ದೃಶ್ಯ
೮೧೨೦೧೪ಪರಮ ಶಿವ
೮೨೨೦೧೫ಆಪೂರ್ವ
೮೩೨೦೧೫ಲವ್ ಯು ಆಲಿಯ
೮೪೨೦೧೫ಮುಂಗಾರು ಮಳೆ ೨
೮೫೨೦೧೫ಲಕ್ಷ್ಮಣ

ಹೆಬ್ಬುಲಿ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ