ಯೂರಿ ಗಗಾರಿನ್

ಯೂರಿ ಅಲೆಕ್ಸೇಯವಿಚ್‌ ಗಗಾರಿನ್ (ಮಾರ್ಚ್ ೯, ೧೯೩೪ಮಾರ್ಚ್ ೨೭, ೧೯೬೮) ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿ ಪಡೆದ ಸೋವಿಯತ್ ಅಂತರಿಕ್ಷಯಾನಿ.

ಯೂರಿ ಗಗಾರಿನ್
Yuri Gagarin
1964 ರಲ್ಲಿ ಗಗಾರಿನ್ ಸ್ವೀಡನ್ ಭೇಟಿ

ಸೋವಿಯತ್ ಗಗನಯಾತ್ರಿ
Nationalityಸೋವಿಯತ್
Born(೧೯೩೪-೦೩-೦೯)೯ ಮಾರ್ಚ್ ೧೯೩೪
ಕ್ಲುಶಿನೋ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್
Died27 March 1968(1968-03-27) (aged 34)
ನೋವೋಸ್ಯೊಲೊವೊ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್
Other occupationಪೈಲಟ್
Rankಸೋವಿಯೆಟ್ ವಾಯುಪಡೆಗಳ ಕರ್ನಲ್ (Polkovnik)
Time in space1 ಗಂಟೆ, 48 ನಿಮಿಷ
Selectionಸೋವಿಯೆಟ್ ವಾಯುಪಡೆಯ ಗ್ರೂಪ್ 1
Missionsವೊಸ್ಟೋಕ್ -1

ಜೀವನ

ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು. ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆದರು. ೧೯೬೦ರಲ್ಲಿ ಅಂತರಿಕ್ಷಯಾನಕ್ಕಾಗಿ ಸೋವಿಯತ್ ಅಂತರಿಕ್ಷ ಸಂಸ್ಥೆ ಆಯ್ಕೆ ಪ್ರಕ್ರಿಯೆ ಶುರುಮಾಡಿತು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಗಗಾರಿನ್ ಸೇರಿದಂತೆ ೨೦ ಅಂತರಿಕ್ಷಯಾನಿಗಳು ಕೊನೆಹಂತಕ್ಕೆ ತಲುಪಿದರು. ಅಂತಿಮವಾಗಿ ೫ ಅಡಿ ೨ ಅಂಗುಲದ ಗಗಾರಿನ್ ಸರ್ವಾನುಮತದಿಂದ ಆಯ್ಕೆಯಾದರು. ಏಪ್ರಿಲ್ ೧೨, ೧೯೬೧ ರೊಂದು ಗಗಾರಿನ್ ವೋಸ್ಟಾಕ್ ೩ಕೆಎ (ವೋಸ್ಟಾಕ್ ೧)ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಿ ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೧] ಅಂತರಿಕ್ಷಯಾನದ ಮಧ್ಯದಲ್ಲಿಯೆ ಸೋವಿಯತ್ ಸರ್ಕಾರದಿಂದ ಸೀನಿಯರ್ ಲೆಫ್ಟನೆಂಟ್ ಪದವಿಯಿಂದ ಮೇಜರ್ ಪದವಿಗೆ ಗಗಾರಿನ್ ಬಡ್ತಿ ಪಡೆದರು. ಗಗಾರಿನ್ ಸುರಕ್ಷಿತವಾಗಿ ಮರಳುವುದು ಬಹುತೇಕ ಅಸಂಭವವೆಂದು ಸೋವಿಯತ್ ಅಧಿಕಾರಿ ವರ್ಗ ನಂಬಿತ್ತು ಆದರೆ ಯಶಸ್ವಿಯಾಗಿ ಯಾನದಿಂದ ಮರಳಿದ ಗಗಾರಿನ್ ತದನಂತರ ವಿಶ್ವವಿಖ್ಯಾತರಾಗಿ ಪ್ರಪಂಚದ ಹಲವೆಡೆ ಸನ್ಮಾನಿತರಾದರು. ಮಾರ್ಚ್ ೨೭, ೧೯೬೮ರೊಂದು ನಿಯತ್ಕಾಲಿಕ ಮಿಗ್ ೧೫ ವಿಮಾನ ಚಾಲನೆ ಅಭ್ಯಾಸ ನಡೆಸುವಾಗಾದ ಒಂದು ದುರಂತ ಅಪಘಾತದಲ್ಲಿ ಗಗಾರಿನ್ ಮೃತಪಟ್ಟರು.

ಅಂಚೆಚೀಟಿಗಳು ಮತ್ತು ನಾಣ್ಯಶಾಸ್ತ್ರ

ಬಾಹ್ಯ ಸಂಪರ್ಕ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ