ಮೌನಿ ರಾಯ್

ಭಾರತೀಯ ನಟಿ

ಮೌನಿ ರಾಯ್ ಭಾರತೀಯ ಕಿರುತರೆ ನಟಿ, ಮತ್ತು ರೂಪದರ್ಶಿ. ಇವರು ೨೮ ಸೆಪ್ಟೆಂಬರ್ ೧೯೮೫ ರಂದು ಜನಿಸಿದರು. [೩] ೨೦೦೬ ರಲ್ಲಿ ಇವರು ಕ್ಯುಂ ಕಿ ಸಾಸ್ ಭಿ ಕಭಿ ಬಹು ಥೀ ಎಂಬ ಧಾರವಾಹಿಯಲ್ಲಿ ಕೃಷ್ಣತುಳಸಿ ಎಂಬ ಪಾತ್ರವನ್ನು ನಿರ್ವಹಿಸಿದರು, ಪೌರಾಣಿಕ ಸರಣಿ ' ದೇವೋಂ ಕೆ ದೇವ್ ಮಹಾದೇವ್ ' ಎಂಬ ಧಾರವಾಹಿಯಲ್ಲಿ ಸತಿ ಎಂಬ ಪಾತ್ರವನ್ನು ಹಾಗೂ ಏಕ್ತ ಕಪೂರ್‌ರವರ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯ ಮತ್ತು ಅದರ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ಕೂಡಾ ನಿರ್ವಹಿಸಿದರು . ಅವರು ಜುನೂನ್ ಎಂಬ ಧಾರವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ವಹಿಸಿದ್ದರು ಹಾಗೂ 'ಯೈಸಿ ನಫ್ರತ್ ತೊ ಕೈಸಾ ಇಷ್ಕ್' ನಲ್ಲಿ ಕೂಡಾ ಅಭಿನಯಿಸಿದರು. ೨೦೧೪ ರಲ್ಲಿ ಅವರು 'ಝಲಕ್ ದಿಖ್ಲಾ ಜಾ' ಎಂಬ ನೃತ್ಯ ಪ್ರದರ್ಶನದಲ್ಲಿ ಸ್ಪರ್ಧಿಯಾಗಿದ್ದರು ಹಾಗೂ ಅದರ ಫೈನಲಿಸ್ಟ್ ಆಗಿ ಕೂಡಾ ಆಯ್ಕೆಯಾಗಿದ್ದರು. ಅವರು ತರಬೇತಿ ಪಡೆದ ಕಥಕ್ ನರ್ತಕಿ ಕೂಡಾ ಆಗಿದ್ದಾರೆ.[೪] ಅವರು ತಮ್ಮ ಬಾಲಿವುಡ್ ವೃತ್ತಿ ಜೀವನವನ್ನು ಮೊಟ್ಟ ಮೊದಲು ಗೋಲ್ಡ್ ಸಿನೆಮಾದಿಂದ ಅಕ್ಷಯ್ ಕುಮಾರ್ ರವರ ಜೊತೆ ಶುರು ಮಾಡಿದರು. [೫]ನಾಗಿನ್ ಸೀಸನ್ ೩ ರ ಅಂತಿಮ ಸರಣಿಯಲ್ಲಿ ಅವರು ಮಹಾ ನಾಗ್ರಾಣಿ ಶಿವಾಂಗಿ ಮತ್ತು ಶಿವನ್ಯಾ ಎಂಬ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ೨೦೧೯ ರಲ್ಲಿ ರಾಜ್‌ಕುಮಾರ್ ರಾವ್ ಅವರೊಂದಿಗೆ ಮೇಡ್ ಇನ್ ಚೀನಾ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು.[೬][೭]

ಮೌನಿ ರಾಯ್
ಜನನ೨೮ ಸೆಪ್ಟೆಂಬರ್ ೧೯೮೫[೧]
ಕೋಚ್‌ಬಿಹಾರ,ಪಶ್ಚಿಮ ಬಂಗಾಳ,ಭಾರತ[೨]
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಕೇಂದ್ರೀಯ ವಿದ್ಯಾಲಯ,ಕೋಚ್‌ಬಿಹಾರ
ಮಿರಾಂದ ಹೌಸ್,ದೆಹಲಿ ವಿಶ್ವವಿದ್ಯಾಲಯ
ವೃತ್ತಿ(ಗಳು)ನಟಿ, ಮಾಡೆಲ್
Years active೨೦೦೭ – ವರ್ತಮಾನ ಕಾಲ
Known forನಾಗಿನ್(೨೦೧೫ ರ ಸರಣಿ)
ಸಂಗಾತಿಸೂರಜ್ (ವಿವಾಹ 2022)

ಜನನ

ಮೌನಿ ಅವರು ೧೯೮೫ನೇ ಸೆಪ್ಟೆಂಬರ್ ೨೮ ರಂದು ರಾಜ್ಬನ್ಸಿ ಎಂಬ ಕುಟುಂಬದಲ್ಲಿ ಪಶ್ಚಿಮ ಬಂಗಾಳದ ಕೋಚ್‌ಬಿಹಾರನ ಗಾಂಧಿ ವಸಾಹತು ಪ್ರದೇಶದಲ್ಲಿ ಜನಿಸಿದರು.[೮] , [೯]

ಆರಂಭಿಕ ಜೀವನ

ಅವರ ಅಜ್ಜ ,ಶೇಖರ್ ಚಂದ್ರ ರಾಯ್ ರವರು ಪ್ರಸಿದ್ಧ ಜಾತ್ರಾ ರಂಗಕಲಾವಿದರಾಗಿದ್ದರು. ಅವರ ತಾಯಿ ಮುಕ್ತಿಯವರು ರಂಗಭೂಮಿ ಕಲಾವಿದರಾಗಿದ್ದು , ಆಕೆಯ ತಂದೆ ಅನಿಲ್ ರಾಯ್ ರವರು ಕೋಚ್‌ಬಿಹಾರ ನಲ್ಲಿ ಜಿಲ್ಲಾ ಪರಿಷತ್ ಕಚೇರಿಯ ಮೇಲ್ವೀಚಾರಕರಾಗಿದ್ದರು . [೧೦] ಅವರು ಕೋಚ್‌ಬಿಹಾರ ನಲ್ಲಿ ಕೇಂದ್ರೀಯ ವಿದ್ಯಾಲಯದಿಂದ ೧೨ ನೇ ತರಗತಿ ತನಕ ತಮ್ಮ ವಿದ್ಯಾಭ್ಯಾಸ ಮಾಡಿದರು .[೧೧]

ದೂರದರ್ಶನಕ್ಕೆ ಪಾದಾರ್ಪಣೆ (೨೦೦೭-೨೦೧೦)

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಆಕೆಯ ಪೋಷಕರ ಒತ್ತಾಯದ ಸಂದರ್ಭದಲ್ಲಿ ಅವರು ಮಾಸ್ ಕಮ್ಯೂನಿಕೇಶನ್ ಅಧ್ಯಯನ ನಡೆಸಿದರು . ಅವರು ತಮ್ಮ ಕೋರ್ಸ್ ಅನ್ನು ಅರ್ಧದಲ್ಲಿಯೇ ಬಿಟ್ಟು ಮುಂಬೈಗೆ ಹೋದರು ಮತ್ತು ಸಿನೆಮಾಗಳಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು . ಅವರು ೨೦೦೪ ರ ರನ್ ಎಂಬ ಚಿತ್ರದಲ್ಲಿ ಹಿನ್ನೆಲೆ ನರ್ತಕಿಯಾಗಿ ನಹಿ ಹೋನಾ ಎಂಬ ಹಾಡಿನಲ್ಲಿ ಕಾಣಿಸಿಕೊಂಡರು . ಮೌನಿಯವರು ೨೦೦೭ ರಲ್ಲಿ ಏಕ್ತಾ ಕಪೂರ್‌ರವರ ಕ್ಯುಂಕಿ ಸಾಸ್ ಭೀ ಕಭಿ ಬಹು ಥೀ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಝರ ನಚ್ ಕೆ ದಿಖಾ ಎಂಬ ನೃತ್ಯ ಪ್ರದರ್ಶನದಲ್ಲಿ ಜೆನಿಫರ್ ವಿಂಗೆಟ್ ಮತ್ತು ಕರೀಶ್ಮಾ ತನ್ನಾರವರೊಂದಿಗೆ ಭಾಗವಹಿಸಿದರು . ನಂತರ ಮೌ‌ನಿ ರಾಯ್‌ಯವರು ಕಸ್ತೂರಿ ಎಂಬ ಧಾರಾವಾಹಿಯಲ್ಲಿ ' ಶಿವಾನಿ ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು . ೨೦೦೯ ರಲ್ಲಿ ಅವರು ಪತಿ ಪತ್ನಿ ಔರ್ ವೊ ಎಂಬ ಧಾರಾವಾಹಿಯಲ್ಲಿ ಗೌರವ್ ಚೋಪ್ರಾರವರ ಜೊತೆ ಹಾಗೂ ೨೦೧೦ ರಲ್ಲಿ 'ದೊ ಸಹೇಲಿಯಾ' ಎಂಬ ಧಾರಾವಾಹಿಯಲ್ಲಿ ’ರೂಪ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.[೧೨][೧೩]

ದೂರದರ್ಶನದಲ್ಲಿ ಪ್ರಗತಿ ಮತ್ತು ಯಶಸ್ಸು

೨೦೧೧ ರಲ್ಲಿ, ಮೌನಿ ಯವರು 'ಹೀರೋ ಹಿಟ್ಲರ್ ಇನ್ ಲವ್' ಎಂಬ ಪಂಜಾಬಿ ಚಲನಚಿತ್ರದಲ್ಲಿ ಅಭಿನಯಿಸಿದರು. ಅವರು ' ದೇವೋಂಕೆ ದೇವ್ ಮಹಾದೇವ್ ' ಎಂಬ ಪೌರಾಣಿಕ ಧಾರವಾಹಿಯಲ್ಲಿ ಸತಿ ಎಂಬ ಪಾತ್ರದಲ್ಲಿ ೨೦೧೧-೨೦೧೪ ರ ಅವಧಿಯ ತನಕ ಕಾಣಿಸಿಕೊಂಡರು .[೧೪] ಇದರ ನಂತರ ಅವರು ಹೆಚ್ಚು ಖ್ಯಾತಿ ಪಡೆದರು. ಹಾಗೂ ೨೦೧೩ ರಲ್ಲಿ ' ಜುನೂನ್-ಐಸಿ ನಫ್ರತ್ ತೊ ಕೈಸಾ ಇಷ್ಕ್ ' ಎಂಬ ಧಾರವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ನಿರ್ವಹಿಸಿದರು .[೧೫] ೨೦೧೫ರಲ್ಲಿ ಮೌನಿ ಯವರು ಏಕ್ತಾ ಕಪೂರ್ ರವರ ಅಲೌಕಿಕ ಸರಣಿಯಾದ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯಾ ಎಂಬ ಪಾತ್ರದಲ್ಲಿ ಅರ್ಜುನ್ ಬಿಜ್ಲಾನಿ ಮತ್ತು ಆಧಾ ಖಾನ್‌ರವರ ಜೊತೆ ಕಾಣಿಸಿಕೊಂಡರು.[೧೬] ನಾಗಿನ್ ಧಾರಾವಾಹಿಯ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ನಿರ್ವಹಿಸಿದರು. ಅವರು ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಅರ್ಜುನ್ ತಂಡದ‌ ಮುಂಬೈ ಟೈಗರ್ಸ್ ಆಟಗಾರರಲ್ಲಿ ಒಬ್ಬರಾಗಿದ್ದರು . ಹಾಗೂ ಆಂಡ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನೃತ್ಯ ಪ್ರದರ್ಶನದಲ್ಲಿ ಅವರು ನಿರೂಪಕಿಯಾಗಿದ್ದರು. ೨೦೧೬ ರಲ್ಲಿ ಮಹಾಯೋಧ ರಾಮ ಎಂಬ ಆನಿಮೇಟೆಡ್‌ ಚಿತ್ರದಲ್ಲಿ ಸೀತಾ ಪಾತ್ರಕ್ಕಾಗಿ ಧ್ವನಿ ನೀಡಿದರು . ಅದೇ ವರ್ಷದಲ್ಲಿ ಅವರು ತುಮ್ ಬಿನ್ 2 ಎಂಬ ಚಿತ್ರದಲ್ಲಿ ಒಂದು ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು. ಬಾಲಿವುಡ್ ಚಿತ್ರಗಳಲ್ಲಿ ಬಿಡುವಿರದ ಕಾರಣ ನಾಗಿನ್ 3 ಯಲ್ಲಿ ಮುಖ್ಯ ಪಾತ್ರವನ್ನು ವಹಿಸಲಾಗದಿದ್ದರಿಂದ ಅವರ ಬದಲಾಗಿ ಸುರ್ಭಿ ಜ್ಯೋತಿ ಮತ್ತು ಅನಿತಾ ಹಸ್ನಂದಾನಿಯವರು ಆ ಪಾತ್ರಕ್ಕೆ ಆಯ್ಕೆಯಾದರು.[೧೭]

ಬಾಲಿವುಡ್‌- ವೃತ್ತಿಜೀವನ

೨೦೧೮ ರಲ್ಲಿ ಮೌನಿಯವರು ರೀಮಾ ಕಾಗ್ತೀ ಯವರು ನಿರ್ದೇಶಿಸಿದ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ [೧೮]ರವರೊಂದಿಗೆ ಬಾಲಿವುಡ್ ಚೊಚ್ಚಲ ಪ್ರವೇಶ ಮಾಡಿದರು. ಎಯಲ್ಟಿ ಬಾಲಾಜಿ ಯವರ ವೆಬ್-ಸರಣಿ ಮೆಹ್ರುನಿಸ್ಸಾ ಮೂಲಕ ಅವರು ಡಿಜಿಟಲ್ ಜಗತ್ತಿನಲ್ಲಿ ಪ್ರವೇಶ ಪಡೆಯಲಿದ್ದಾರೆ.ಹಾಗೂ ಅವರು ಕೆ.ಜಿ.ಎಫ್ ಚಾಪ್ಟರ್ 1 ಚಲನಚಿತ್ರದಲ್ಲಿ ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು.[೧೯]೨೦೨೦ ರಲ್ಲಿ , ಇವರು ಮುಂಬರುವ ಎರಡು ಪ್ರಮುಖ ಯೋಜನೆಗಳನ್ನು ಹೊಂದಿದ್ದಾರೆ; ಅಮೀರ್ ಖಾನ್ ಎದುರು ಮೊಘಲ್ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಭಾರತೀಯ ಸೂಪರ್ ಹೀರೋ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಲಿದ್ದಾರೆ .[೨೦]

ಟಿವಿ ಪ್ರದರ್ಶನಗಳು

ವರ್ಷತಲೆಬರಹಪಾತ್ರನೆಟ್ವರ್ಕ್
೨೦೦೬-೨೦೦೮ಕ್ಯುಕಿ ಸಾಸ್ ಭಿ ಕಭಿ ಬಹು ಥೀ[೨೧]ಕೃಷ್ಣತುಳಸಿಸ್ಟಾರ್ ಪ್ಲಸ್
೨೦೦೮ಜರ ನಚ್ಕೆ ದಿಖಾ[೨೨]ಸ್ಪರ್ಧಿಸ್ಟಾರ್ ಪ್ಲಸ್
ಕಸ್ತೂರಿ (ಟಿವಿ ಸರಣಿ)[೨೩]ಶಿವಾನಿ ಸಬ್ಬರ್ವಾಲ್ಸ್ಟಾರ್ ಪ್ಲಸ್
೨೦೦೯ಪತಿ ಪತ್ನಿ ಔರ್ ವೊ (ಟಿವಿ ಸರಣಿ)[೨೪]ಸ್ಪರ್ಧಿಇಮೇಜಿನ್ ಟಿವಿ
೨೦೧೦ದೊ ಸಹೇಲಿಯಾ[೨೫]ರೂಪ್ಜೀ ಟಿವಿ
ಶ್...ಫಿರ್ ಕೋಯಿ ಹೆಕೋಯ್ನಸ್ಟಾರ್ ವನ್
೨೦೧೧-೨೦೧೪ದೇವೋಂ ಕೆ ದೇವ್...ಮಹಾದೇವ್[೨೬]ಸತಿಲೈಫ್ ಓಕೆ
೨೦೧೨-೨೦೧೩ಜುನೂನ್ – ಐಸಿ ನಫ್ರತ್ ತೊ ಕೈಸಾ ಇಷ್ಕ್[೨೭]ಮೀರಾಲೈಫ್ ಓಕೆ
೨೦೧೪ಝಲಕ್ ದಿಖ್ಲಾಜ(ಸೀಸನ್ ೭)[೨೮]ಸ್ಪರ್ಧಿಕಲರ್ಸ್ ಟಿವಿ
೨೦೧೫-೨೦೧೭ನಾಗಿನ್ (೨೦೧೫ ಟಿವಿ ಸರಣಿ) ಮತ್ತು ನಾಗಿನ್ ೨[೨೯]ಶಿವನ್ಯಾ ಮತ್ತು ಶಿವಾಂಗಿಕಲರ್ಸ್ ಟಿವಿ
೨೦೧೬ಟಶನ್ ಎ- ಇಷ್ಕ್[೩೦]ಸ್ವತಃಜೀ ಟಿವಿ
ಏಕ್ ಥಾ ರಾಜ ಏಕ್ ಥಿ ರಾಣಿ[೩೧]ಸ್ವತಃಜೀ ಟಿವಿ
ಕಾಮಿಡಿ ನೈಟ್ಸ್ ಲೈವ್[೩೨]ಸ್ವತಃಕಲರ್ಸ್ ಟಿವಿ
ಕಾಮಿಡಿ ನೈಟ್ಸ್ ಬಚಾವೊಸ್ವತಃಕಲರ್ಸ್ ಟಿವಿ
ಸೊ ಯು ಥಿಂಕ್ ಯು ಕ್ಯಾನ್ ಡಾನ್ಸ್(ಭಾರತ)[೩೩]ನಿರೂಪಕಿಅಂಡ್ ಟಿವಿ
ಝಲಕ್ ದಿಖ್ಲಾಜ 9[೩೪]ಸ್ಪರ್ಧಿಕಲರ್ಸ್ ಟಿವಿ
೨೦೧೭ಬಿಗ್ ಬಾಸ್[೩೫]ಸ್ವತಃ (ಅತಿಥಿ)ಕಲರ್ಸ್ ಟಿವಿ
ಇಂಡಿಯಾಸ್ ನೆಕ್ಸ್ಟ್ ಡೆಲ್ ೩[೩೬]ಅತಿಥಿಎಮ್‌ಟಿವಿ ಇಂಡಿಯಾ
ಎಂಟರ್ಟೈನ್ಮೆಂಟ್ ಕಿ ರಾತ್[೩೭]ಅತಿಥಿಕಲರ್ಸ್ ಟಿವಿ

ಮ್ಯೂಸಿಕ್ ವೀಡಿಯೋಸ್

ವರ್ಷಶೀರ್ಷಿಕೆಟಿಪ್ಪಣಿಉಲ್ಲೇಖ
೨೦೨೦ಹೋಲಿ ಮೆ ರಂಗೀಲೆವರುಣ್ ಶರ್ಮ ಮತ್ತು ಸನ್ನಿ ಸಿಂಗ್ ರವರ ಜೊತೆಗೆ[೩೮]
ಭೀಗಿ ಭೀಗಿ ರಾತೊಮೆನಕಾಶ್ ಅಸೀಸ್ ರವರ ಜೊತೆಗೆ, ಅಜ್ನಬೀ(೧೯೭೪) ನ ಸಿನಿಮಾದ ರಿಮೇಕ್ ಹಾಡು[೩೯]
೨೦೨೧ಪತ್ಲಿ ಕಮರಿಯಾತನಿಷ್ಕ್ ಬಚ್ಗಿ , ಸುಖ್ ಇ ಮತ್ತು ಪರಂಪರ ತಂಡನ್ ಈ ಹಾಡನ್ನು ಹಾಡಿದ್ದಾರೆ[೪೦]

ನಾಮನಿರ್ದೇಶನ

ವರ್ಷಚಲನಚಿತ್ರಪ್ರಶಸ್ತಿವರ್ಗಫಲಿತಾಂಶ
೨೦೧೮ಗೋಲ್ಡ್ (೨೦೧೮ ರ ಸಿನಿಮಾ)[೪೧]ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ಸ್ಲಕ್ಸ್ ಗೋಲ್ಡನ್ ರೋಸ್ ಉದಯೋನ್ಮಖವಾಗಲಿರು‌ವ ಹೊಸ ವರ್ಷದ ಸೌಂದರ್ಯನಾಮನಿರ್ದೇಶನ
೨೦೧೯ಲಯನ್ಸ್ ಗೋಲ್ಡನ್ ಅವಾರ್ಡ್ಸ್ಮೋಸ್ಟ್ ಸ್ಟೈಲಿಷ್ ಪರ್ಸನಾಲಿಟಿಗೆಲುವು[೪೨]

ಅಭಿನಯಿಸಿದ ಚಲನಚಿತ್ರಗಳು

ವರ್ಷತಲೆಬರಹಪಾತ್ರಟಿಪ್ಪಣಿ
೨೦೦೪ರನ್ (೨೦೦೪ ರ ಸಿನಿಮಾ)[೪೩]ಸ್ವತಃನಹಿ ಹೋನಾ ನಹಿ ಹೋನಾ ಹಾಡಿನಲ್ಲಿ ವಿಶೇಷ ಪಾತ್ರ
೨೦೧೧ಹೀರೋ ಹಿಟ್ಲರ್ ಇನ್ ಲವ್ಸಾಹಿಬಾನ್ಪಂಜಾಬಿ ಸಿನಿಮಾ
೨೦೧೬ಮಹಾಯೋಧ ರಾಮ[೪೪]ಸೀತೆ (ಧ್ವನಿ ಪಾತ್ರ)ಆನಿಮೇಟೆಡ್‌ ಫಿಲ್ಮ್
ತುಮ್ ಬಿನ್ 2[೪೫]ಸ್ವತಃನಾಚ್ನ ಆವೊಂದ ನಹಿ ಹಾಡಿನಲ್ಲಿ ವಿಶೇಷ ಪಾತ್ರ
೨೦೧೮ಗೋಲ್ಡ್ (೨೦೧೮ ರ ಸಿನಿಮಾ)[೪೬]ಮೊನೊಬಿನಾ ದಾಸ್
೨೦೧೮ಕೆ. ಜಿ. ಎಫ್. ಅಧ್ಯಾಯ ೧[೪೭]ಲೂಸಿಗಲಿ ಗಲಿ ಹಾಡಿನಲ್ಲಿ ವಿಶೇಷ ಪಾತ್ರ
೨೦೧೯ರೋಮಿಯೊ ಅಕ್ಬರ್ ವಾಲ್ಟರ್ಶ್ರದ್ದಾ ಶರ್ಮಾ/ ಪಾರುಲ್ಪತ್ತೆದಾರಿಯಾ ಪಾತ್ರ; ರವೀಂದ್ರ ಕೌಶಿಕ್ ರವರ ಕಥೆಯನ್ನು ಆಧರಿಸಿ
ಮೇಡ್ ಇನ್ ಚೈನಾರುಕ್ಮಿಣಿ ಮೆಹ್ತಾ
೨೦೨೦ಲಂಡನ್ ಕಾನ್ಫಿಡೆನ್ಶಿಯಲ್ ಉಮಾ ಕುಲ್ಕರ್ಣಿZEE5 ರಿಲೀಸ್
೨೦೨೧ಬ್ರಹ್ಮಾಸ್ತ್ರFilm yet to releaseದಯಮಂತಿಚಿತ್ರೀಕರಣ

ಗ್ಯಾಲರಿ

ಅಭಿನಯಿಸಲಿರುವ ಚಲನಚಿತ್ರಗಳು

  • ರೋಮಿಯೋ ಅಕ್ಬರ್ ವಾಲ್ಟರ್.[೪೮]
  • ಬ್ರಹ್ಮಾಸ್ತ್ರ.[೪೯]
  • ಮೇಡ್ ಇನ್ ಚೀನಾ.[೫೦]
  • ಮೊಗುಲ್.[೫೧]

ಉಲ್ಲೇಖಗಳು

🔥 Top keywords: ಕುವೆಂಪುದ.ರಾ.ಬೇಂದ್ರೆಶಿವರಾಮ ಕಾರಂತಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯು.ಆರ್.ಅನಂತಮೂರ್ತಿಚಂದ್ರಶೇಖರ ಕಂಬಾರವಿನಾಯಕ ಕೃಷ್ಣ ಗೋಕಾಕಗಾದೆಜಿ.ಎಸ್.ಶಿವರುದ್ರಪ್ಪಗೌತಮ ಬುದ್ಧಕನ್ನಡಬಸವೇಶ್ವರಗಿರೀಶ್ ಕಾರ್ನಾಡ್ಎ.ಪಿ.ಜೆ.ಅಬ್ದುಲ್ ಕಲಾಂಜಗನ್ನಾಥ ದೇವಾಲಯಬಿ. ಆರ್. ಅಂಬೇಡ್ಕರ್ಅಕ್ಕಮಹಾದೇವಿಭಾರತದ ಸಂವಿಧಾನಮಹಾತ್ಮ ಗಾಂಧಿಒಲಂಪಿಕ್ ಕ್ರೀಡಾಕೂಟಕರ್ನಾಟಕ ಸಂಗೀತಕನ್ನಡ ಅಕ್ಷರಮಾಲೆಗೋವಿಂದ ಪೈಹಂಪೆಕನ್ನಡ ಸಾಹಿತ್ಯಮೈಸೂರು ಅರಮನೆಭಾರತದ ರಾಷ್ಟ್ರಪತಿಗಳ ಪಟ್ಟಿನಾಲ್ವಡಿ ಕೃಷ್ಣರಾಜ ಒಡೆಯರುಪೂರ್ಣಚಂದ್ರ ತೇಜಸ್ವಿಡಿ.ವಿ.ಗುಂಡಪ್ಪಕರ್ನಾಟಕಅಪರ್ಣಾ ವಸ್ತಾರೆ (ನಿರೂಪಕಿ)ಪಂಪಕಿತ್ತೂರು ಚೆನ್ನಮ್ಮಸ್ವಾಮಿ ವಿವೇಕಾನಂದ