ಮೋತಿಬಿಂದು

ಮೋತಿಬಿಂದು (ಕಣ್ಣಿನ ಪೊರೆ, ಕ್ಯಾಟರಾಕ್ಟ್‌) ಎಂದರೆ ಕಣ್ಣಿನ ಮಸೂರದಲ್ಲಿ ಕಾಣಬರುವ ಕಲೆ ಇಲ್ಲವೇ ದಟ್ಟ ಚುಕ್ಕೆ ಎನ್ನುವುದೇ ಸರಿಯಾದರೂ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಬರುಬರುತ್ತ ನೋಟಕ್ಕೆ ಅಡ್ಡಿಯಾಗುವಂತೆ ಪೊರೆ ಬೆಳೆದಂತೆ ಕಾಣುವುದಕ್ಕೇ ಹೇಳುವುದುಂಟು. ಹಲವು ಕಾರಣಗಳಿಂದ ಮಸೂರಕ್ಕೆ ಪುಷ್ಟಿವಸ್ತುಗಳ ಸರಬರಾಜಿನ ಕೊರತೆಯಾಗಿ ಅದರಲ್ಲಿ ಅಸಹಜ ಊತಕವೇಳುವುದೇ ಮೋತಿಬಿಂದು ಆಗುವ ಕಾರಣ. ಆಹಾರ ವಸ್ತುಗಳಲ್ಲಿ ಬಗೆಬಗೆಯ ಜೀವಾಳದ ಅಂಶಗಳ ಕೊರೆಯಿಂದ ಪ್ರಯೋಗಾಲಯದ ಪ್ರಾಣಿಗಳಲ್ಲಿ ಮೋತಿಬಿಂದು ಆಗಿಸುವುದು ಸಾಧ್ಯವಾಗಿದೆ. ಉಪಗುರಾಣಿಕ (ಪ್ಯಾರತೈರಾಯ್ಡ್‌), ಮಾಂಸಲಿ (ಪ್ಯಾಂಕ್ರಿಯಾಸ್) ಗ್ರಂಥಿಗಳ ಬೇನೆಗಳಲ್ಲಿ ಮಾನವನ ಮೋತಿಬಿಂದು ಆಗುವುದು. ಆದರೆ ಮುಪ್ಪಿನಲ್ಲಿ ಆಗುವುದೇ ಸಾಮಾನ್ಯ.

ಮೋತಿಬಿಂದುವಿನ ವರ್ಧಿಸಿದ ನೋಟ

ಎಳೆಮಕ್ಕಳಲ್ಲಿ ತಲೆಮಾರುಗಳಲ್ಲೂ ಮೋತಿಬಿಂದು ಆಗಬಹುದು. ಬಸುರಿನ ಮೊದಲ 3 ತಿಂಗಳಲ್ಲಿ ಸೀಮೆ ದಡಾರ (ಜರ್ಮನ್ ಮೀಸಲ್ಸ್‌) ಎದ್ದಿದ್ದರೂ ಹುಟ್ಟುವ ಕೂಸಿಗೆ ಹೀಗಾಗಬಹುದು. ಮೋತಿಬಿಂದು ಬೆಳೆಯುತ್ತಿರುವಾಗ, ಪಾಪೆಯಲ್ಲಿ ಬೂದು ಚುಕ್ಕೆಗಳಾಗೋ ಇಡೀ ಪಾಪೆ ಮಸಕಾಗೋ ತೋರಬಹುದು. ಕಣ್ಣಿನ ಉಳಿದೆಲ್ಲ ಭಾಗಗಳೂ ಆರೋಗ್ಯವಾಗಿದ್ದಲ್ಲಿ ಇಡೀ ಮಸೂರ ಮಸಕಾದರೂ ಪುರ್ತಿ ಕುರುಡಾಗದು. ಬೆಳಕು, ಬಣ್ಣಗಳನ್ನಾದರೂ ಗುರುತಿಸಬಹುದು. ಬೆಳಕು ಬರುವ ದಿಕ್ಕನ್ನೂ ಕಂಡುಕೊಳ್ಳಬಹುದು. ಬರಬರುತ್ತ ನೋಟ ಕುಂದಿ ಎದುರಿಗೆ ಹಿಡಿದ ಬೆರಳುಗಳನ್ನು ಕೂಡ ಎಣಿಸದಂತಾಗಿ, ಎಂದಿನ ಕೆಲಸಗಳಿಗೆ ತೊಡಕೆನಿಸಿದಾಗ, ಬೆಳೆಯುತ್ತಿರುವ ಮೋತಿ ಬಿಂದುಗಳಿಗೆ ಇಡೀ ಮಸೂರವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದೊಂದೇ ಪರಿಣಾಮಕಾರ ಉಪಾಯ.

ಮೋತಿಬಿಂದುಗಳು ಬೆಳೆಯುವುದಕ್ಕೆ ಬಿಟ್ಟರೆ ಕಣ್ಣು ಕುರುಡಾಗಬಹುದು. ಶಸ್ತ್ರಚಿಕಿತ್ಸೆಯಲ್ಲಿ ಮಸುಕಾದ ಮಸೂರವನ್ನು ತೆಗೆದು ಕೃತಕ ಮಸೂರವನ್ನು ಹಾಕಲಾಗುತ್ತದೆ. ಇದೇ ಏಕೈಕ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ