ಮಹೇಂದ್ರ ಸಿಂಗ್ ಧೋನಿ

ಭಾರತೀಯ ಕ್ರಿಕೆಟಿಗ

ಮಹೇಂದ್ರ ಸಿಂಗ್ ಧೋನಿಯವರನ್ನು ಎಮ್ ಎಸ್ ಧೋನಿ ಎಂದೂ ಸಂಕ್ಷ್ತಿಪ್ತ ರೂಪದಲ್ಲಿ ಕರೆಯಲಾಗುತ್ತದೆ. pronunciation  ಜನನ ಬಿಹಾರರಾಂಚಿಯಲ್ಲಿ ೭ ಜುಲೈ ೧೯೮೧ರಂದು (ಈಗಿನ ಜಾರ್ಖಂಡ್) ಇವರು ಭಾರತ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರು[೨]. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮ್ಯಾನ್‌ ಎಂದು ಗುರುತಿಸಿಕೊಂಡರೂ, ನಂತರ ಧೋನಿಯವರು ಭಾರತದ ಏಕದಿನ (ODI) ತಂಡದ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರಂತೆ ಗುರ್ತಿಸಲ್ಪಡುತ್ತಾರೆ. ಅವರ ನಾಯಕತ್ವದಲ್ಲಿ ಭಾರತವು 2007 ICC ವಿಶ್ವ ಟ್ವೆಂಟಿ20, ೨೦೦೭-೦೮ರ CB ಸರಣಿ ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಗೆದ್ದಿತ್ತು. ಅವರು ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌‍ನಲ್ಲಿ ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ೨೦೦೮ ಮತ್ತು ೨೦೦೯ರಲ್ಲಿ ವರ್ಷದ ICC ODI ಉತ್ತಮ ಆಟಗಾರ ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಪದ್ಮ ಶ್ರೀ, 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಧೋನಿಯವರು, ನವೆಂಬರ್ ೨೦೦೯ರ ICC ಶ್ರೇಯಾಂಕ ಪಟ್ಟಿಯ ಪ್ರಕಾರ ಅತ್ಯುತ್ತಮ ಏಕದಿನ ಪಂದ್ಯದ (ODI) ಬ್ಯಾಟ್ಸ್‌ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ೨೦೦೯ರಲ್ಲಿ ವಿಸ್ಡನ್‌ರ ಮೊದಲ ಡ್ರೀಮ್‌ ಟೆಸ್ಟ್ XI ತಂಡದ ನಾಯಕರಾಗಿ ಧೋನಿ ಆಯ್ಕೆಯಾದರು. ಫೋರ್ಬ್ಸ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವದ ೧೦ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಒಬ್ಬರಾಗಿದ್ದಾರೆ.[೩]

ಮಹೇಂದ್ರ ಸಿಂಘ್ ಧೋನಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಮಹೇಂದ್ರ ಸಿಂಘ್ ಧೋನಿ
ಅಡ್ಡಹೆಸರುಮಾಹಿ, ಕ್ಯಾಪ್ಟನ್ ಕೂಲ್, ಥಾಲ
ಎತ್ತರ5 ft 7 in (1.70 m)
ಬ್ಯಾಟಿಂಗ್ಬಲಗೈ batsman
ಬೌಲಿಂಗ್ಬಲಗೈ
ಪಾತ್ರವಿಕೆಟ್-ಕೀಪರ್, ಭಾರತದ ಮಾಜಿ ನಾಯಕ
ಸಂಬಂಧಗಳುಪಾನ್ ಸಿಂಗ್ ಧೋನಿ (ತಂದೆ)
ದೇವಕಿ ದೇವಿ (ತಾಯಿ)
ಸಾಕ್ಷಿ ಸಿಂಗ್ ಧೋನಿ (ಪತ್ನಿ)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 251)2 ಡಿಸಂಬರ್ 2005 v ಶ್ರೀಲಂಕ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 157)23 ಡಿಸಂಬರ್ 2004 v ಬಾಂಗ್ಲಾದೇಶ
ಕೊನೆಯ ಅಂ. ಏಕದಿನ​26 ಫೆಬ್ರವರಿ 2011 v ಇಂಗ್ಲಂಡ್
ಅಂ. ಏಕದಿನ​ ಅಂಗಿ ನಂ.2
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1999/00 - 2004/05ಬಿಹಾರ
2004/05-ಜಾರ್ಖಂಡ್
2008-ಚೆನ್ನೈ ಸೂಪರ್ ಕಿಂಗ್ಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆಟೆಸ್ಟ್ ಕ್ರಿಕೆಟ್ಏಕ ದಿನ ಪಂದ್ಯFCList A
ಪಂದ್ಯಗಳು೩೭೧೪೭೭೭೨೦೩
ಗಳಿಸಿದ ರನ್ಗಳು೧,೯೬೨೪,೮೨೭೪,೧೩೦೬,೮೨೯
ಬ್ಯಾಟಿಂಗ್ ಸರಾಸರಿ೩೭.೭೩೫೦.೨೮೩೬.೨೨೪೯.೪೮
೧೦೦/೫೦೧/೧೬೫/೩೨೪/೩೦೧೧/೪೩
ಉನ್ನತ ಸ್ಕೋರ್೧೪೮೧೮೩*೧೪೮೧೮೩*
ಎಸೆತಗಳು೧೨೧೨೪೨೩೯
ವಿಕೆಟ್‌ಗಳು
ಬೌಲಿಂಗ್ ಸರಾಸರಿ೧೪.೦೦೧೮.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆn/an/a
ಉನ್ನತ ಬೌಲಿಂಗ್೦/೧೧/೧೪೦/೧೧/೧೪
ಹಿಡಿತಗಳು/ಸ್ಟಂಪಿಂಗ್‌೯೨/೧೮೧೪೭/೪೭೧೯೮/೩೬೨೧೪/೬೨
ಮೂಲ: CricketArchive, 31 October 2009

ವೈಯಕ್ತಿಕ ಜೀವನ

ಧೋನಿ ತನ್ನ ಕುಟುಂಬದೊಂದಿಗೆ

ಮಹೇಂದ್ರ ಸಿಂಗ್ ಧೋನಿ ಬಿಹಾರರಾಂಚಿಯಲ್ಲಿ (ಈಗಿನ ಜಾರ್ಖಂಡ್) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜನಿಸಿದನು.[೪] ಪೂರ್ವಿಕರು ಉತ್ತರಾಖಂಡದ ಅಲ್ಮೊರಾ ಜಿಲ್ಲೆಯ ಲಾಮ್‌ಗಢ್‌ ಪ್ರದೇಶದ ಲ್ವಾಲಿ ಗ್ರಾಮದವರು. ಧೋನಿಯ ತಂದೆ ಪಾನಸಿಂಗ್ ತಮ್ಮ ಕುಟುಂಬದೊಂದಿಗೆ ಉತ್ತರಾಖಂಡದಿಂದ ರಾಂಚಿಗೆ ಬಂದು, ಅಲ್ಲಿನ ಮೆಕಾನ್ ಕಂಪೆನಿಯ ಆಡಳಿತದಲ್ಲಿ ಕಿರಿಯ ಸಹಾಯಕರಾಗಿದ್ದರು. ಧೋನಿಯ ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರ ಅವರ ಪುಟ್ಟ ಕುಟುಂಬದ ಸದಸ್ಯರು. ಧೋನಿ ತನ್ನ ನೆಚ್ಚಿನ ನಟ ಜಾನ್ ಅಬ್ರಾಹಂರವರ ಕೇಶ ವಿನ್ಯಾಸವನ್ನು ಅನುಕರಿಸುವುದಕ್ಕಾಗಿ ಇತ್ತೀಚೆಗೆ ತನ್ನ ನೀಳ ಕೇಶಕ್ಕೆ ಕತ್ತರಿ ಹಾಕಿದರು.[೫] ಧೋನಿ, ಸುಪರ್‌ಸ್ಟಾರ್‌ ರಜನೀಕಾಂತ್‌, ಆಡಮ್ ಗಿಲ್‌ಕ್ರಿಸ್ಟ್‌ರ ಅಭಿಮಾನಿ., ಸಹ ಆಟಗಾರ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ ಮತ್ತು ಗಾಯಕಿ ಲತಾ ಮಂಗೇಶ್ಕರ್ ಅವರ ಸಾಧನೆಗಳು ಕೂಡಾ ಧೋನಿ ಮೇಲೆ ಬಾಲ್ಯದಲ್ಲೇ ಪ್ರಭಾವ ಬೀರಿದವು.[೬][೭]

ಜಾರ್ಖಂಡನ ರಾಂಚಿಯ ಶ್ಯಾಮ್ಲಿಯಲ್ಲಿರುವ DAV ಜವಾಹರ ವಿದ್ಯಾಮಂದಿರದಲ್ಲಿ (ಈಗ ಈ ಶಾಲೆಯು JVM, ಶ್ಯಾಮ್ಲಿ, ರಾಂಚಿ ಎಂದು ಪರಿಚಿತವಾಗಿದೆ) ಧೋನಿ ವಿದ್ಯಾಭ್ಯಾಸ ನಡೆಯಿತು. ಆರಂಭದಲ್ಲಿ ಧೋನಿ ಬ್ಯಾಡ್ಮಿಂಟನ್‌ ಮತ್ತು ಫುಟ್‌ಬಾಲ್‌ನ್ನು ಉತ್ತಮವಾಗಿ ಆಡಿ, ಜಿಲ್ಲಾ ಮತ್ತು ಕ್ಲಬ್‌ ಮಟ್ಟದಲ್ಲಿ ಉತ್ತಮ ಆಟಗಾರರಾಗಿ ಹೆಸರು ಮಾಡಿದ್ದರು. ಧೋನಿಯು ವಿಧ್ಯಾರ್ಥಿ ದೆಸೆಯಲ್ಲಿ ಫುಟ್‌ಬಾಲ್‌ ತಂಡಕ್ಕೆ ಉತ್ತಮ ಗೋಲ್‌ಕೀಪರ್‌ ಆಗಿದ್ದರು. ಆದರೆ ಫುಟ್‌ಬಾಲ್ ತಂಡದ ತರಬೇತುದಾರರು ಧೋನಿ ಸಾಮರ್ಥ್ಯ ಅರಿತು ಸ್ಥಳೀಯ ಕ್ರಿಕೆಟ್‌ ಕ್ಲಬ್‌ ಪರ ಕ್ರಿಕೆಟ್ ಆಡುವುದಕ್ಕಾಗಿ ಕಳುಹಿಸಿದರು. ಧೋನಿಯು ಆವರೆಗೆ ಕ್ರಿಕೆಟ್ ಆಡದಿದ್ದರೂ, ಉತ್ತಮವಾದ ವಿಕೆಟ್‌-ಕೀಪಿಂಗ್‌ ಕೌಶಲ್ಯದೊಂದಿಗೆ ಭರವಸೆ ಮೂಡಿಸಿದನು. ನಂತರ ಕಮಾಂಡೊ ಕ್ರಿಕೆಟ್‌ ಕ್ಲಬ್‌ನ ( ೧೯೯೫ - ೧೯೯೮) ಪೂರ್ಣಾವಧಿಯ ವಿಕೆಟ್‌ ಕೀಪರ್‌ ಜವಾಬ್ದಾರಿ ಧೋನಿ ಹೆಗಲಿಗೆ ಬಂತು. ಕ್ಲಬ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ‌ ೧೬ ವರ್ಷದೊಳಗಿನವರ ಚ್ಯಾಂಪಿಯನ್‌ಷಿಪ್‌ ೧೯೯೭/೯೮ರ ವಿನೂ ಮಂಕಡ್ ಟ್ರೋಫಿಗೆ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು.[೫] ಧೋನಿ ತನ್ನ 10ನೇ ತರಗತಿಯ ನಂತರ ಕ್ರಿಕೆಟ್‌ಗೆ ಹೆಚ್ಚು ಗಮನ ನೀಡಿದನು.[೮]

ಆಟದ ಶೈಲಿ

ಧೋನಿ ಒಬ್ಬ ಬಲಗೈ ಬ್ಯಾಟ್ಸ್‌ಮನ್‌ ಮತ್ತು ವಿಕೆಟ್‌-ಕೀಪರ್‌. ಪಾರ್ಥಿವ್ ಪಟೇಲ್‌, ಅಜೇಯ್ ರಾತ್ರಾ ಮತ್ತು ದಿನೇಶ್ ಕಾರ್ತಿಕ್‌ರಂತೆ ಎಳೆವಯಸ್ಸಿನಲ್ಲೇ ಭಾರತ ಎ ಕ್ರಿಕೆಟ್‌ ತಂಡಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಲವು ವಿಕೆಟ್‌-ಕೀಪರ್‌ಗಳಲ್ಲಿ ಧೋನಿ ಸಹ ಒಬ್ಬರಾಗಿದ್ದಾರೆ. ಧೋನಿಯ ಸ್ನೇಹಿತರು ಅವನನ್ನು 'ಮಾಹಿ' ಎಂದು ಕರೆಯುತ್ತಾರೆ. ೧೯೯೮/೯೯ ಕ್ರಿಕೆಟ್‌ ವಸಂತದ ಸಮಯದಲ್ಲಿ ಬಿಹಾರ ಕ್ರಿಕೆಟ್‌ ತಂಡದ ಪರ ಮೊದಲ ಪಂದ್ಯವನ್ನು ಆಡಿದ. ೨೦೦೪ರಲ್ಲಿ ಕೆನ್ಯಾ ಪ್ರವಾಸಕ್ಕಾಗಿ ಭಾರತ-Aವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದ. ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ-A ತಂಡದ ವಿರುದ್ಧ ಗೌತಮ್ ಗಂಭೀರ್‌ಜೊತೆಯಾಟದಲ್ಲಿ ಧೋನಿ ಹಲವು ಶತಕಗಳನ್ನು ಸಿಡಿಸಿದ್ದನು. ನಂತರದ ವರ್ಷದಲ್ಲಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದನು.[ಸೂಕ್ತ ಉಲ್ಲೇಖನ ಬೇಕು]

ಚಿತ್ರ:Stumping edited.jpg
2008ರಲ್ಲಿ ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರನ್ನು ಸ್ಟಂಪ್ ಮಾಡಿದ್ದು.

ಬ್ಯಾಟ್ ಹಿಡಿಕೆಯನ್ನು ನಿಯಂತ್ರಿಸುವಲ್ಲಿ ಹಾಗು ಬಲವಾದ ಬ್ಯಾಕ್ ಫೂಟ್ ಮೂಲಕ ಧೋನಿ ಶೈಲಿಯ ಬ್ಯ್ಯಾಟಿಂಗ್ ನೋಡುಗರ ಕಣ್ಮನ ಸೆಳೆಯುತ್ತದೆ. ಬಲವಾದ ಕೈಗಳಲ್ಲಿ ಹೆಚ್ಚಿನ ಚತುರತೆ ಮತ್ತು ಚಾಕಚಕ್ಯತೆ ಇರುವುದರಿಂದ ಹೆಚ್ಚಾಗಿ ಅವನು ಹೊಡೆದ ಚೆಂಡು ಮೈದಾನದಲ್ಲಿ ರಭಸದಿಂದ ಓಡುವುದು ವಿಶೇಷ. ಈ ತೆರನಾದ ಆರಂಭ ಇರುವುದರಿಂದ ಕೆಲವೊಮ್ಮೆ ಚೆಂಡಿನ ವೇಗವನ್ನು ಗುರ್ತಿಸಲು ಸಾಧ್ಯವಾಗುವದಿಲ್ಲ. ಪಿಚ್ ಮೇಲಿನ ಅಚಲತೆ ಒಮ್ಮೊಮ್ಮೆ ಚೆಂಡು ಬ್ಯಾಟಿನ ಅಂಚಿಗೆ ನಿಲುಕುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಚೆಂಡನ್ನು ಬೆನ್ನಟ್ಟುವುದು ಪ್ರಯಾಸದಾಯಕವಾಗಬಹುದು.

ಪಾಕಿಸ್ತಾನದ ವಿರುದ್ಧ ೨೦೦೫ರಲ್ಲಿ ಏಕದಿನ ಪಂದ್ಯದಲ್ಲಿ ೧೪೮ ರನ್ ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ನಂತರ ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ೧೮೩* ರನ್‌ ಗಳಿಸಿ ತಮ್ಮದೇ ದಾಖಲೆ ಮುರಿದ ಅವರು ODI ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಪೇರಿಸಿ ವಿಶ್ವ ದಾಖಲೆ ಸ್ಥಾಪಿಸಿದರು. ಮಿತ ಒವರ್‌ಗಳ ಕ್ರಿಕೆಟ್‌ನಲ್ಲಿನ ಧೋನಿಯ ಯಶಸ್ಸು, ಟೆಸ್ಟ್ ತಂಡದ ಸ್ಥಾನವನ್ನು ಭದ್ರಪಡಿಸಿತು. ೨೦೦೫/೦೬ ಕೊನೆಯವರೆಗಿನ ODI ಕ್ರಿಕೆಟ್‌ನಲ್ಲಿನ ಆಕರ್ಷಕ ಸುಸ್ಥಿರ ಪ್ರದರ್ಶನದಿಂದಾಗಿ ಧೋನಿಯು ICC ODI ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಬ್ಯಾಟ್ಸ್‌ಮ್ಯಾನ್‌ ಆಗಿ ಹೊರಹೊಮ್ಮಿದರು.[೫]

ಭಾರತ ತಂಡವು ICC ಚ್ಯಾಂಪಿಯನ್ಸ್‌ ಟ್ರೋಫಿ, DLF ಕಪ್‌ನಲ್ಲಿನ ಮತ್ತು ವೆಸ್ಟ್‌ ಇಂಡೀಸ್‌ ಹಾಗು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದ ಸೋಲಿನೊಂದಿಗೆ 2006ರಲ್ಲಿ ಧೋನಿಯ ಆಟಗಾರಿಕೆಯಲ್ಲಿ ಹಿನ್ನಡೆ ಉಂಟಾಯಿತು. 2007ರ ಪೂರ್ವಾರ್ಧದಲ್ಲಿ ಸ್ವದೇಶದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಧೋನಿ ಮತ್ತೆ ಲಯ ಕಂಡುಕೊಂಡಿದ್ದರೂ, 2007 ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಮೊದಲ ಸುತ್ತಿನಲ್ಲಿಯೆ ತಂಡವು ಸರಣಿಯಿಂದ ಹೊರಬಿದ್ದದ್ದು, ಧೋನಿಯ ಅಸಮರ್ಪಕ ಆಟಗಾರಿಕೆಯ ಸೂಚಕವಾಗಿತ್ತು. ಭಾರತದ ಎರಡೂ ಸೋಲಿನಲ್ಲಿ ಧೋನಿ ಸೊನ್ನೆ ರನ್ನಿಗೆ ಔಟ್ ಆಗಿದ್ದನು. ವಿಶ್ವ ಕಪ್‌ನ ನಂತರ ಧೋನಿ ಬಾಂಗ್ಲಾದೇಶ ವಿರುದ್ಧ ODI ಪಂದ್ಯದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಇಂಗ್ಲೆಂಡ್‌ ಪ್ರವಾಸಕ್ಕಾಗಿ ಧೋನಿಯನ್ನು ODI ತಂಡದ ಉಪ ನಾಯಕನಾಗಿ ಹೆಸರಿಸಲಾಗಿತ್ತು.[೯]

ಒಬ್ಬ ಬ್ಯಾಟ್ಸ್‌ಮನ್ ಆಗಿ ಧೋನಿ ಆಕ್ರಮಣಕಾರಿ ಬ್ಯಾಟಿಂಗ್‌ನ್ನು ಮೈಗೂಡಿಸಿಕೊಂಡು ಪಕ್ವ ಆಟಗಾರನಾಗಿ, ಅಗತ್ಯ ಸಂದರ್ಭಗಳಲ್ಲಿ ಜವಬ್ದಾರಿಯುತ ಇನ್ನಿಂಗ್ಸ್‌‌ನ್ನು ಆಡುತ್ತಿದ್ದರು.[೯] ಸಾಂಪ್ರದಾಯಿಕ ಹೊಡೆತಗಳಲ್ಲದೆ ಧೋನಿ ಎರಡು ಅಸಂಪ್ರದಾಯಿಕ, ಆದರೆ ಪರಿಣಾಮಕಾರಿ ಹೊಡೆತಗಳನ್ನು ಪ್ರದರ್ಶಿಸುತ್ತಿದ್ದರು.ಇದು ಬ್ಯಾಟ್ ಬೀಸುವ ಶೈಲಿಯೆಂದೇ ಹೇಳಬೇಕಾಗುತ್ತದೆ. ಭಾರತದ ಕ್ರಿಕೆಟ್‌ ತಂಡಕ್ಕೆ ಪ್ರವೇಶ ಪಡೆದಾಗಿನಿಂದ ಧೋನಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌, ಆಟದ ಮೈದಾನದಲ್ಲಿನ ಯಶಸ್ಸು, ವ್ಯಕ್ತಿತ್ವ ಮತ್ತು ನೀಳ ಕೇಶದ ಶೈಲಿ ಧೋನಿಯನ್ನು ಭಾರತದ ಜಾಹೀರಾತು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿತು.[೧೦][೧೧]

ದೇಶಿ ಕ್ರಿಕೆಟ್‌ನ ವೃತ್ತಿ ಜೀವನ

ಕಿರಿಯರ ಕ್ರಿಕೆಟ್‌

ಧೋನಿಯು ೧೯೯೮ - ೯೯ ಬಿಹಾರ ಕ್ರಿಕೆಟ್ U-೧೯ ತಂಡದಲ್ಲಿದ್ದನು. ಮತ್ತು ೫ ಪಂದ್ಯಗಳಲ್ಲಿ (7 ಇನ್ನಿಂಗ್ಸ್‌) ೧೭೬ ರನ್‌ ಗಳಿಸಿ ಉತ್ತಮ ಆಟ ಪ್ರದರ್ಶನ ನೀಡಿದ್ದರೂ ಆರು ತಂಡಗಳು ಭಾಗವಹಿಸಿದ ಈ ಸರಣಿಯಲ್ಲಿ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಲಷ್ಟೆ ಸಫಲವಾಯಿತು. ಇದರಿಂದಾಗಿ ತಂಡವು ಕ್ವಾಟರ್ ಫೈನಲ್ ಸುತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ ಬಹುತೇಕ ಧೋನಿಯನ್ನು ಪೂರ್ವ ವಲಯದ U-19 ತಂಡ (CK ನಾಯುಡು ಟ್ರೋಫಿ) ಮತ್ತು ಭಾರತ ತಂಡದ ಉಳಿದವರು (MA ಚಿದಂಬರಂ ಟ್ರೋಫಿ ಮತ್ತು ವಿನೂ ಮಂಕದ್‌ ಟ್ರೋಫಿ) ತಂಡಕ್ಕಗಾಗಿ ಆಯ್ಕೆ ಮಾಡಲಿಲ್ಲ. ಬಿಹಾರ U-೧೯ ಕ್ರಿಕೆಟ್‌ ತಂಡವು ೧೯೯೯-೨೦೦೦ ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಧೋನಿ ಗಳಿಸಿದ ೮೪ ರನ್‌ಗಳ ನೆರವಿನಿಂದ, ಬಿಹಾರ ತಂಡವು ಒಟ್ಟು 357 ರನ್‌ಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯವಾಯಿತು. ಭವಿಷ್ಯದ ರಾಷ್ಟ್ರೀಯ ತಂಡದ ಸಹ ಆಟಗಾರ ಯುವರಾಜ್ ಸಿಂಗ್‌ನ ೩೫೮ ರನ್‌ಗಳ ಸಹಾಯದಿಂದ ಪಂಜಾಬ್‌ U-19 ತಂಡವು 839 ರನ್‌ ಗಳಿಸಿತು. ಇದರಿಂದಾಗಿ ಬಿಹಾರ ತಂಡದ ಪರಿಶ್ರಮ ಕಳೆಗುಂದಿತು.[೧೨] ಈ ಪಂದ್ಯದಲ್ಲಿ ಧೋನಿಯು ೪೮೮ ರನ್‌ಗಳು (9 ಪಂದ್ಯಗಳು, 12 ಇನ್ನಿಂಗ್ಸ್‌), ೫ ಅರ್ಧ ಶತಕಗಳು, ೧೭ ಕ್ಯಾಚ್‌ಗಳು ಮತ್ತು ೭ ಸ್ಟಂಪಿಂಗ್‌ಗಳ ದಾಖಲೆ ಮಾಡಿದ್ದರು.[೧೩] MS ಧೋನಿಯು CK ನಾಯುಡು ಟ್ರೋಫಿಗೆ ಪೂರ್ವ ವಲಯದ U-೧೯ತಂಡದಲ್ಲಿ ಸ್ಥಾನ ಪಡೆದು, ನಾಲ್ಕು ಪಂದ್ಯಗಳಲ್ಲಿ ಕೇವಲ ೯೭ ರನ್‌ ಮಾಡಿದ್ದರು. ಇದರಿಂದಾಗಿ ಪೂರ್ವ ವಲಯವು ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು, ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

ಬಿಹಾರ ತಂಡ

ಧೋನಿಗೆ ಹದಿನೆಂಟನೇ ವಯಸ್ಸಿನಲ್ಲಿದ್ದಾಗ ೧೯೯೯-೨೦೦೦ರಲ್ಲಿ ಮೊದಲ ರಣಜಿ ಟ್ರೋಫಿ ಪಂದ್ಯವನ್ನು ಬಿಹಾರ ಪರವಾಗಿ ಆಡುವ ಅವಕಾಶ ದೊರಕಿತು. ಧೋನಿ ಅಸ್ಸಾಮ್ ಕ್ರಿಕೆಟ್‌ ತಂಡದ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ೬೮* ರನ್‌ ಗಳಿಸುವುದರ ಮೂಲಕ ತನ್ನ ಮೊದಲ ಪಂದ್ಯದಲ್ಲಿ ಅರ್ಧಶತಕಕ್ಕೆ ನಾಂದಿ ಹಾಡಿದ್ದ[೧೪] ಆ ಕ್ರಿಕೆಟ್ ‌ಪಂದ್ಯಾವಳಿಗಳ ೫ ಪಂದ್ಯಗಳಲ್ಲಿ ೨೮೩ ರನ್‌ ಬಾರಿಸಿದ್ದ. ೨೦೦೦/೦೧ ಕ್ರಿಕೆಟ್‌ ಋತುವಿನಲ್ಲಿ ಬಂಗಾಳ ವಿರುದ್ಧ ಮೊದಲ ಪ್ರಥಮ-ದರ್ಜೆಯ ಶತಕವನ್ನು ಹೊಡೆಯುವುದರ ಮೂಲಕ ಸೋಲಿನಂಚಿನಲ್ಲಿದ್ದ ತಂಡವನ್ನು ಪಾರುಮಾಡಿದರು.[೧೫] ಈ ಶತಕವನ್ನು ಹೊರತುಪಡಿಸಿ, 2000/01[೧೬] ರಲ್ಲಿ ಐವತ್ತು ರನ್‌ಗಳಿಗಿಂತ ಹೆಚ್ಚು ಯಾವುದೇ ಇನ್ನಿಂಗ್ಸ್‌ನಲ್ಲಿ ಗಳಿಸಲಿಲ್ಲ. ೨೦೦೧/೦೨ರ ಕ್ರಿಕೆಟ್‌ ಋತುವಿನಲ್ಲಿ ನಡೆದ ನಾಲ್ಕು ರಣಜಿ ಪಂದ್ಯಗಳಲ್ಲಿ ಕೇವಲ ಐದು ಅರ್ಧಶತಕಗಳನ್ನು ಗಳಿಸಿದ್ದರು.[೧೭] 2002/03ರ ರಣಜಿ ಟ್ರೋಫಿಯಲ್ಲಿ ಮೂರು ಅರ್ಧಶತಕಗಳು ಹಾಗೂ ದಿಯೋಧರ ಟ್ರೋಫಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸುವುದರೊಂದಿಗೆ ಕೆಳಕ್ರಮಾಂಕದಲ್ಲಿ ಬಿರುಸಿನ ಹೊಡೆತದ ಬ್ಯಾಟಿಂಗ್‌ ಶೈಲಿಯಿಂದ ಆಟವಾಡಿ ತಂಡದ ವಿಜಯಕ್ಕೆ ಕಾರಣವಾದರು.

೨೦೦೩/೦೪ ಕ್ರಿಕೆಟ್ ಋತುವಿನಲ್ಲಿ ರಣಜಿ ODI ಟ್ರೋಫಿಯ ಮೊದಲ ಪಂದ್ಯದಲ್ಲಿ ಅಸ್ಸಾಮ್ ವಿರುದ್ಧ ಧೋನಿಯ ಶತಕದ (೧೨೮*) ದಾಖಲೆ. ಪೂರ್ವ ವಲಯ ತಂಡದಲ್ಲಿರುವಾಗ, ಆ ವರ್ಷ ದಿಯೋಧರ ಟ್ರೋಫಿಯನ್ನು ತಂಡವು ಗೆದ್ದಿತ್ತು. ಅದೇ ಸರಣಿಯಲ್ಲಿ ತಂಡಕ್ಕಾಗಿ 4 ಪಂದ್ಯಗಳಲ್ಲಿ 244 ರನ್‌ಗಳನ್ನು ಗಳಿಸಿದ್ದರು. ದಿಲೀಪ್ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯವನ್ನು ಪ್ರತಿನಿಧಿನಿಸುವಂತೆ ಧೋನಿಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಆಯ್ಕೆಮಾಡಿದ್ದರು.[೧೮] ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವುದರ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದರು.[೧೯]

ಭಾರತ ಎ ತಂಡ

೨೦೦೩/೦೪ ರಲ್ಲಿ( ODI) ಏಕದಿನಗಳ ಪ್ರದರ್ಶನವನ್ನು ಪರಿಗಣಿಸಿ, ಜಿಂಬಾಬ್ವೆ ಮತ್ತು ಕಿನ್ಯಾದೇಶಗಳ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕಾಗಿ ಆಯ್ಕೆಮಾಡಲಾಯಿತು.[೨೦] ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಜಿಂಬಾಬ್ವೆ XI ವಿರುದ್ಧದ ಪಂದ್ಯದಲ್ಲಿ ಧೋನಿ 7 ಕ್ಯಾಚ್‌ಗಳು ಮತ್ತು 4 ಸ್ಟಂಪಿಂಗ್‌ಗಳನ್ನು ಮಾಡುವುದರೊಂದಿಗೆ ತನ್ನ ಅತ್ಯತ್ತಮವಾದ ವಿಕೆಟ್‌-ಕೀಪಿಂಗ್‌ನ್ನು ಪ್ರದರ್ಶಿಸಿದರು.[೨೧] ಕಿನ್ಯಾ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಧೋನಿ ತನ್ನ ಅರ್ಧ-ಶತಕದೊಂದಿಗೆ ಭಾರತ 'ಎ'ಕ್ಕೆ ಪಾಕಿಸ್ತಾನ 'ಎ' ವಿರುದ್ಧ 223 ರನ್‌ಗಳ ಗುರಿ ತಲುಪಲು ನೆರವಾದರು.[೨೨] ಪಾಕಿಸ್ತಾನ 'ಎ' ಎದುರು 120[೨೩] ಮತ್ತು 119*[೨೪] ರನ್‌ಗಳನ್ನು ಬಾರಿಸುವುದರೊಂದಿಗೆ ಎರಡು ಶತಕಗಳನ್ನು ದಾಖಲಿಸಿದರು. ಧೋನಿ 7 ಪಂದ್ಯಗಳಲ್ಲಿ 362 ರನ್‌ಗಳನ್ನು (6 ಇನ್ನಿಂಗ್ಸ್‌, ಸರಾಸರಿ:72.40) ದಾಖಲಿಸಿ, ಉತ್ತಮ ಪ್ರದರ್ಶನದ ಮೂಲಕ ಆಗಿನ ನಾಯಕ - ಸೌರವ ಗಂಗೂಲಿ[೨೫] ಯ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆದರೆ ಭಾರತ 'ಎ' ತಂಡ ತರಬೇತುದಾರ ಸಂದೀಪ್ ಪಾಟೀಲ್‌ ಭಾರತ ತಂಡಕ್ಕೆ ವಿಕೆಟ್‌-ಕೀಪರ್‌/ಬ್ಯಾಟ್ಸ್‌ಮನ್ ಆಗಿ ಕಾರ್ತಿಕ್‌ನನ್ನು ಶಿಫಾರಸು ಮಾಡಿದರು.[೨೬]

ಇಂಡಿಯನ್‌ ಪ್ರೀಮಿಯರ್‌ ಲೀಗ್‌

ಎಮ್. ಎಸ್. ಧೋನಿ ೧.೫ ದಶಲಕ್ಷ(ಅಮೆರಿಕ ಡಾಲರ) USD ಮೊತ್ತಕ್ಕೆ ಚೆನ್ನೈ ಸುಪರ್ ಕಿಂಗ್ಸ್‌ಯೊಂದಿಗೆ ಕರಾರು ಮಾಡಿಕೊಂಡು ಮೊದಲ IPL ಕ್ರಿಕೆಟ್ ಪಂದ್ಯಾವಳಿಗಳ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾದ. ನಂತರ ಸ್ಥಾನ ಅಂಡ್ರೊ ಸೈಮಂಡ್ಸ್‌ಗೆ ದೊರೆಯುತ್ತದೆ. ಸದ್ಯ ಧೋನಿ Chennai super kings ತಂಡದ ಪ್ರಸ್ತುತ ನಾಯಕ.

ಓಡಿಐ ಏಕದಿನ ಪಂದ್ಯಗಳಲ್ಲಿ ವೃತ್ತಿಜೀವನ

ಧೋನಿಯ ODI ವೃತ್ತಿಜೀವನ. ಕಂದು ಬಣ್ಣದ ಗೆರೆಯು ೧೦ ಪಂದ್ಯಗಳ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.

೨೦೦೦ರಲ್ಲಿ ಭಾರತ ತಂಡವು ರಾಹುಲ್ ದ್ರಾವಿಡ್‌ನಲ್ಲಿ ವಿಕೆಟ್‌-ಕೀಪಿಂಗ್ ಪ್ರತಿಭೆಯನ್ನು ಕಂಡಿತು. ಇದರಿಂದಾಗಿ ವಿಕೆಟ್‌-ಕೀಪರ್‌ ಸ್ಥಾನಕ್ಕಾಗಿ ಯಾವುದೇ ಇತರ ಬ್ಯಾಟಿಂಗ್ ಸ್ಥಾನವನ್ನು ಬಲಿಕೊಡುವ ಪ್ರಮೇಯ ಇಲ್ಲವಾಯಿತು.[೨೫] ಭಾರತೀಯ ಕ್ರಿಕೆಟ್‌ ಮಂಡಳಿಯು ಟೆಸ್ಟ್‌ ತಂಡದಲ್ಲಿ ಭಾರತ U-19 ನಾಯಕರಾದ ಪಾರ್ಥಿವ್ ಪಟೇಲ್‌ ಮತ್ತು ದಿನೇಶ್ ಕಾರ್ತಿಕ್‌ರಂತಹ ಪ್ರತಿಭೆಗಳೊಂದಿಗೆ ಕಿರಿಯ ಶ್ರೇಣಿಯಿಂದ ವಿಕೆಟ್‌-ಕೀಪರ್‌/ಬ್ಯಾಟ್ಸ್‌ಮನ್‌ರ ಪ್ರವೇಶವನ್ನು ತಂಡದಲ್ಲಿ ಕಂಡಿತು.[೨೫] ಭಾರತ-ಎ ತಂಡದಲ್ಲಿ ಧೋನಿ ಗುರುತಿಸಿಕೊಂಡಿದ್ದರಿಂದ, 2004/05ರಲ್ಲಿ ಬಾಂಗ್ಲಾದೇಶ ಪ್ರವಾಸದ ODI ತಂಡಕ್ಕೆ ಆಯ್ಕೆಯಾಯಿತು..[೨೭] ಧೋನಿ ಮೊದಲ ಪಂದ್ಯದಲ್ಲಿ ರನ್ ಔಟ್ ದಿಂದಾಗಿ ಕ್ರಿಕೆಟ್ ಒಪ್ಪಿಸಿ ಸೊನ್ನೆಗೆ ಔಟ್ ಆಗುವುದರೊಂದಿಗೆ ಏಕದಿನ ಪಂದ್ಯದ ( ODI) ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ.[೨೮] ಬಾಂಗ್ಲಾದೇಶ ವಿರುದ್ಧದ ಸರಣಿಯ ಸಾಮಾನ್ಯ ಮಟ್ಟದ ರನ್ ಗತಿಯಿದ್ದರೂ, ಪಾಕಿಸ್ತಾನ ODI ಸರಣಿಗೆ ಧೋನಿ ಆಯ್ಕೆಯಾಯಿತು.[೨೯] ವಿಶಾಖಪಟ್ಟಣಂದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಐದನೇ ಏಕ ದಿನ ಪಂದ್ಯದಲ್ಲಿ 123 ಎಸೆತಗಳಿಗೆ 148 ರನ್‌ಗಳನ್ನು ದಾಖಲಿಸಿದರು. ಧೋನಿಯ ಈ ೧೪೮ ರನ್‌ಗಳ ಮೊತ್ತವು ಹಿಂದೆ ಭಾರತದ ವಿಕೆಟ್‌ ಕೀಪರ್ ದಾಖಲಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮೀರಿಸಿತು.[೩೦]. ನಂತರ ಅದೇ ವರ್ಷದ ಕೊನೆಯಲ್ಲಿ ಈ ದಾಖಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆಯಾಯಿತು.

ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ (ಅಕ್ಟೋಬರ್‌-ನವೆಂಬರ್‌ 2005) ಮೊದಲ ಎರಡು ಪಂದ್ಯದಲ್ಲಿ ಧೋನಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಲಾಯಿತು. ಸಾವೈ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ (ಜೈಪುರ) ನಡೆದ ಮೂರನೇ ODI ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಶ್ರೀಲಂಕಾದ ಕುಮಾರ ಸಂಗಾಕ್ಕಾರ ಶತಕದೊಂದಿಗೆ ಭಾರತಕ್ಕೆ 299 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಆರಂಭದಲ್ಲಿಯೇ ಭಾರತ ತಂಡವು ತೆಂಡುಲ್ಕರ್‌ ವಿಕೆಟ್ ಕಳೆದುಕೊಂಡಿತು [೩೧] ಈ ತನಕ ಯಾರೂ ಇಂತಹ ಪ್ರದರ್ಶನ ನೀಡಿರಲಿಲ್ಲ. ಧೋನಿಯ ಅಜೇಯ ಆಟ ಅಪರೂಪದ ಪ್ರದರ್ಶನವಾಗಿತ್ತು. ತಂಡದ ವಿಜಯ ಧೋನಿಯನ್ನು ಆಪತ್ಪಾಂಧವ ಎನ್ನುವಂತೆ ಕ್ರಮಾಂಕವನ್ನೂ ಹೆಚ್ಚಿಸಿತು. 145 ಎಸೆತಗಳಲ್ಲಿ 183 ರನ್ ಗಳಿಕೆ ಆ ಸಂದರ್ಭದ ವಿಶಿಷ್ಟ ಪ್ರೋತ್ಸಾಹಕ್ಕೂ ಕಾರಣವಾಯಿತು. ಈ ಇನ್ನಿಂಗ್ಸ್‌ದಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಏಕದಿನ (ODI) ಕ್ರಿಕೆಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ಸೇರಿದಂತೆ ಹಲವು ದಾಖಲೆಗಳನ್ನು ಕಾಣಬಹುದಾಗಿದೆ[೩೨]. ಧೋನಿ ಒಟ್ಟು ಸರಣಿಯಲ್ಲಿ ಅತಿ ಹೆಚ್ಚು ಅಂದರೆ (346)[೩೩] ರನ್ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. 2005ರ ಡಿಸೆಂಬರ್‌ನಲ್ಲಿ ಉತ್ತಮ ಕ್ರಿಕೆಟ್‌ ಪ್ರದರ್ಶನದಿಂದಾಗಿ C-ವರ್ಗದಿಂದ B-ವರ್ಗಕ್ಕೆ ಬಡ್ತಿ ನೀಡಿದ BCCI ಧೋನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.[೩೪]

ನೆಟ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ಧೋನಿ. ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ವಿರಳ ಬೌಲಿಂಗ್ .

2006ರಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಧೋನಿಯ 68 ರನ್‌ಗಳೊಂದಿಗೆ 50 ಒವರ್‌ಗಳಲ್ಲಿ 328 ರನ್‌ಗಳನ್ನು ಕಲೆಹಾಕಿತು. ತಂಡ ಪಂದ್ಯದ ಕೊನೆಯ ಎಂಟು ಒವರ್‌ಗಳಲ್ಲಿ ಕೇವಲ 43 ರನ್‌ಗಳನ್ನು ಕಲೆಹಾಕುವುದರೊಂದಿಗೆ ತೀರಾ ಕಳಪೆ ಪ್ರದರ್ಶನ ನೀಡಿತು. ಆ ಪಂದ್ಯವನ್ನು ಡಕ್ವರ್ತ್‌-ಲೆವಿಸ್‌ ನಿಯಮದ ಅನುಸಾರ ಸೋತಿತು.[೩೫] ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲಿನಂಚಿನಲ್ಲಿರುವಾಗ ಧೋನಿ 46 ಎಸೆತಗಳಲ್ಲಿ 13 ಬೌಂಡರಿಗಳು ಸೇರಿದಂತೆ 72 ರನ್‌ಗಳನ್ನು ಗಳಿಸುವುದರ ಮೂಲಕ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಲು ಕಾರಣರಾದರು.[೩೬][೩೭] ಅಂತಿಮ ಪಂದ್ಯದಲ್ಲಿ ಧೋನಿ 56 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸುವ ಮೂಲಕ, ಭಾರತವು ಸರಣಿಯಲ್ಲಿ 4-1 ಅಂತರದ ಮುನ್ನಡೆ ಸಾಧಿಸುವಂತಾಯಿತು.[೩೮] ಸುಸ್ಥಿರ ODI ಪ್ರದರ್ಶನದಿಂದಾಗಿ, 2006ರ ಎಪ್ರಿಲ್ 20ರಲ್ಲಿ ಬ್ಯಾಟ್ಸ್‌ಮೆನ್‌ರ ICC ODI ಶ್ರೇಯಾಂಕ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಿ ಧೋನಿ ಪ್ರಥಮ ಸ್ಥಾನವನ್ನು ಅಲಂಕರಿಸಿದರು.[೩೯] ಬಾಂಗ್ಲಾದೇಶ ವಿರುದ್ಧ ಆಡಮ್ ಗಿಲ್‌ಕ್ರಿಸ್ಟ್‌ ಉತ್ತಮ ಪ್ರದರ್ಶನದಿಂದಾಗಿ ಪ್ರಥಮ ಸ್ಥಾನಕ್ಕೆ ಮನ್ನಡೆ ಸಾಧಿಸಿದ್ದರಿಂದ ವಾರದೊಳಗೆ ಧೋನಿ ದಾಖಲೆ ಅಧಿಪತ್ಯ ಕೊನೆಗೊಂಡಿತು.[೪೦]

ಭದ್ರತಾ ಕಾರಣಗಳಿಂದ ಯುನಿಟೆಕ್ ಕಪ್‌ ಸ್ಪರ್ಧೆಯಿಂದ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿಯಿತು. ಶ್ರೀಲಂಕಾದಲ್ಲಿನ ಎರಡು ಪಂದ್ಯಗಳು ರದ್ಧಾಗಿ,[೪೧] ಶ್ರೀಲಂಕಾ ವಿರುದ್ಧದ 2006-07ರ DLF ಕಪ್‌ನಲ್ಲಿ [೪೨] ಮಳೆಯಿಂದಾಗಿ ಪಂದ್ಯಕ್ಕೆ ಅಡ್ದಿಯಾಯಿತು. ಭಾರತದ ಪ್ರಾರಂಭಕ್ಕೆ ಇನ್ನೊಂದು ವಿಘ್ನ ಎದುರಾಗಿತ್ತು. ಧೋನಿ 43 ರನ್‌ಗಳನ್ನು ಮಾಡಿದ ಈ ಮೂರು ಪಂದ್ಯಗಳಲ್ಲಿ ಭಾರತ ಎರಡನ್ನು ಸೋತು ಅಂತಿಮ ಹಣಾಹಣಿಗೆ ಅನರ್ಹಗೊಂಡಿತು. 2006 ICC ಚಾಂಪಿಯನ್ಸ್‌ ಟ್ರೋಫಿನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ಎದುರು ಅಭ್ಯಾಸದ ಕೊರತೆಯಿಂದ ಸೋತಿದ್ದರೂ ಸಹ ಧೋನಿ ವೆಸ್ಟ್‌ ಇಂಡೀಸ್‌ ತಂಡದ ಎದುರು ಅರ್ಧಶತಕವನ್ನು ಗಳಿಸಿದ್ದರು. ದಕ್ಷಿಣ ಆಫ್ರಿಕಾ ತಂಡದ ವಿರುಧ್ಧದ ODI ಸರಣಿಯಲ್ಲಿ ಧೋನಿ ಮತ್ತು ಒಟ್ಟು ಭಾರತ ತಂಡದ ಪ್ರದರ್ಶನ ನೀರಸವಾಗಿತ್ತು. ಧೋನಿ 4 ಪಂದ್ಯಗಳಲ್ಲಿ ಕೇವಲ 139 ರನ್‌ಗಳನ್ನು ಮಾತ್ರ ಗಳಿಸಿದ್ದು, ಭಾರತ 4-0 ಅಂತರದಲ್ಲಿ ಸರಣಿಯನ್ನು ಸೋತಿತು. WI ODI ಸರಣಿಯ ಆರಂಭ ಹೊತ್ತಿಗೆ ಧೋನಿ 16 ಪಂದ್ಯಗಳನ್ನು ಆಡಿ, ಅವುಗಳಲ್ಲಿ 25.93ರ ಸರಾಸರಿಯೊಂದಿಗೆ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಭಾರತ ತಂಡದ ಹಿರಿಯ ವಿಕೆಟ್ ಕೀಪರ್ ಸಯ್ಯದ್ ಕೀರ್ಮಾನಿಯವರ ಟೀಕೆಗಳಿಗೂ ಧೋನಿ ಗುರಿಯಾಗಬೇಕಾಯಿತು. ಧೋನಿ ವಿಕೆಟ್ ಕೀಪಿಂಗ್[೪೩] ತಂತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ತಂಡಗಳ 3-1 ಅಂತರದ ಗೆಲುವು, ಭಾರತಕ್ಕೆ 2007 ಕ್ರಿಕೆಟ್‌ ವಿಶ್ವ ಕಪ್‌ಗಾಗಿ ಉತ್ತಮ ಪೂರ್ವಸಿಧ್ಧತಾ ಅಭ್ಯಾಸವಾಗಿತ್ತು. ಎರಡು ಸರಣಿಯಲ್ಲಿ ಧೋನಿಯ ರನ್ ಗಳ ಸರಾಸರಿ 100ಕ್ಕಿಂತ ಹೆಚ್ಚಿತ್ತು. ಆದಾಗ್ಯೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಸೋತ ಭಾರತ ತಂಡವು ಅನಿರೀಕ್ಷಿತವಾಗಿ ವಿಶ್ವ ಕಪ್‌ನಿಂದ ಹೊರಬಿದ್ದಿತು. ಧೋನಿ ಈ ಎರಡೂ ಪಂದ್ಯಗಳಲ್ಲಿ ಸೊನ್ನೆಗೆ ಔಟ್ ಆಗಿದ್ದರು. ಇಡೀ ಪಂದ್ಯಾವಳಿಯಲ್ಲಿ ಗಳಿಸಿದ ಒಟ್ಟು ರನ್ ಕೇವಲ 29 ಮಾತ್ರ. 2007 ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಬಾಂಗ್ಲಾದೇಶ ಎದುರು ಸೋತ ಹಿನ್ನಲೆಯಲ್ಲಿ JMM[೪೪] ರಾಜಕೀಯ ಕಾರ್ಯಕರ್ತರು ರಾಂಚಿಯಲ್ಲಿ ಧೋನಿ ನಿರ್ಮಿಸುತ್ತಿದ್ದ ನೂತನ ಮನೆಯ ಮೇಲೆ ದಾಳಿ ನಡೆಸಿ ದಾಂದಲೆ, ದೊಂಬಿ ನಡೆಸಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಭಾರತ ತಂಡವು ವಿಶ್ವ ಕಪ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿಯೆ ಸೋತು ಹೊರಬಂದಿರುವುದರಿಂದ ಧೋನಿ ಕುಟುಂಬಕ್ಕೆ ಸ್ಥಳೀಯ ಪೋಲಿಸರು ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.[೪೫]

ವಿಶ್ವ ಕಪ್‌ನಲ್ಲಿ ಬಾಂಗ್ಲಾದೇಶ ಎದುರು ಧೋನಿ 91* ರನ್‌ ಗಳಿಸಿದ್ದರೂ, ತಂಡವು ಪಂದ್ಯದಲ್ಲಿ ರನಗಳ ಮೊತ್ತದ ಬೆನ್ನಟ್ಟಲು ಪ್ರಯಾಸಪಡಬೇಕಾಯಿತು. ಧೋನಿಯ ನಾಲ್ಕನೇ ODI ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು. ಸರಣಿಯ ಮೂರನೇ ಪಂದ್ಯವು ಕೈಬಿಟ್ಟರೂ ನಂತರ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಧೋನಿ ಆಫ್ರೋ-ಏಷಿಯಾ ಕಪ್‌ನ 3ನೇ ODIದಲ್ಲಿ 97 ಎಸೆತಗಳಲ್ಲಿ 139 ರನ್‌ಗಳನ್ನು ಸಿಡಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವುದಲ್ಲದೆ, 3 ಪಂದ್ಯಗಳಲ್ಲಿ 87.00 ಸರಾಸರಿಯೊಂದಿಗೆ 174 ರನ್‌ಗಳನ್ನು ಗಳಿಸಿ, ಉತ್ತಮ ಪ್ರದರ್ಶನವನ್ನು ನೀಡಿದನು.

ಐರ್ಲೆಂಡ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಭಾರತ-ಇಂಗ್ಲೆಂಡ್‌ 7-ಪಂದ್ಯಗಳ ODI ಸರಣಿಗೆ ಧೋನಿಯನ್ನು ಉಪನಾಯಕನಾಗಿ ಆಯ್ಕೆಮಾಡಲಾಯಿತು.[೯] ಧೋನಿಯು 2005ರ ಡಿಸೆಂಬರ್‌ನಲ್ಲಿ ಒಪ್ಪಂದದ 'ಬಿ' ವರ್ಗದ ಪಟ್ಟಿಯಲ್ಲಿದ್ದರೂ 2007ರ ಜೂನ್‌ನಲ್ಲಿ 'ಎ' ವರ್ಗದ ಶ್ರೇಣಿಗೆ ಬಡ್ತಿ ಪಡೆದುಕೊಂಡರು. 2007ರ ಸಪ್ಟೆಂಬರ್‌ನಲ್ಲಿ ನಡೆದ ವಿಶ್ವ ಟ್ವೆಂಟಿ20 ಪಂದ್ಯಾವಳಿಗೆ ಭಾರತ ಟ್ವೆಂಟಿ-20 ತಂಡದ ನಾಯಕನಾಗಿ ಧೋನಿಯ ಆಯ್ಕೆಯಾಯಿತು. 2007ರ ಸಪ್ಟೆಂಬರ್ 2ರಂದು ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ 5 ಕ್ಯಾಚ್‌ಗಳು ಮತ್ತು ಒಂದು ಸ್ಟಂಪಿಂಗ್‌ ಮಾಡಿ, ತಮ್ಮ ಆದರ್ಶ ವ್ಯಕ್ತಿ ಆಡಮ್ ಗಿಲ್‌ಕ್ರಿಸ್ಟ್‌ರ ಅಂತರರಾಷ್ಟ್ರೀಯ ದಾಖಲೆಯಾದ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ದಾಖಲೆಯನ್ನು ಸರಿಗಟ್ಟಿದರು.[೪೬]ಧೋನಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ICC ವಿಶ್ವ ಟ್ವೆಂಟಿ 20 ಟ್ರೋಫಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2007ರ ಸಪ್ಟೆಂಬರ್ 24ರ ಫೈನಲ್ಸ್ ನಲ್ಲಿ ಪಾಕಿಸ್ತಾನದ ವಿರುದ್ದದ ಪಂದ್ಯವನ್ನು ತಂಡ ಗೆದ್ದಿತು. ಇದರಿಂದಾಗಿ ಧೋನಿ, ಕಪಿಲ್‌ ದೇವ್‌ ನಂತರ ವಿಶ್ವ ಕಪ್‌ನ್ನು ಗೆದ್ದ ಎರಡನೇ ಭಾರತೀಯ ನಾಯಕ. 2009ರ ಸಪ್ಟೆಂಬರ್ 30ರಂದು ಧೋನಿ ತನ್ನ ಮೊದಲ ವಿಕೆಟ್‌ ಮತ್ತು ODI ವಿಕೆಟ್‌ನ್ನು ಪಡೆದರು. ವೆಸ್ಟ್‌ ಇಂಡೀಸ್‌ನ ಬೌಲರ್ ಟ್ರಾವಿಸ್‌ ಡೌಲಿವ್‌ ಎಸೆತಕ್ಕೆ ಔಟ್ ಆದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ನಡೆದ ಎರಡನೇ ODIನಲ್ಲಿ ಧೋನಿ ಕೇವಲ 107 ಎಸೆತಗಳಲ್ಲಿ 124 ರನ್‌ಗಳನ್ನು ಸಿಡಿಸಿದ್ದು, ಮೂರನೇ ODI ಪಂದ್ಯದಲ್ಲಿ ಯುವರಾಜ್‌ ಸಿಂಗ್‌ 95 ಎಸೆತಗಳಲ್ಲಿ 71 ರನ್‌ಗಳನ್ನು ಗಳಿಸಿದ್ದರಿಂದ ಭಾರತ ತಾಯ್ನೆಲದಲ್ಲಿ 6 ವಿಕೆಟ್‌ಗಳ ವಿಜಯ ದಾಖಲಿಸಿತು.

ಟೆಸ್ಟ್‌ ವೃತ್ತಿಜೀವನ

ಧೋನಿಯ ಟೆಸ್ಟ್ ವೃತ್ತಿಜೀವನ. ಕಂದು ಬಣ್ಣದ ಗೆರೆಯು 10 ಇನ್ನಿಂಗ್ಸ್‌ನ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.

2005ರ ಡಿಸೆಂಬರ್‌ನಲ್ಲಿ ದಿನೇಶ್ ಕಾರ್ತಿಕ್‌ ಬದಲು ಶ್ರೀಲಂಕಾ ತಂಡದ ಎದುರಿನ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದಾಗಿ ಧೋನಿಯನ್ನು ಭಾರತ ತಂಡದ ಟೆಸ್ಟ್‌ ವಿಕೆಟ್‌-ಕೀಪರ್‌ ಆಗಿ ಆಯ್ಕೆ ಮಾಡಲಾಯಿತು.[೪೭] ಮಳೆಗೆ ಆಹುತಿಯಾದ ಧೋನಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್‌ಗಳನ್ನು ಗಳಿಸಿದ್ದನು. ಧೋನಿ ಕ್ರೀಸ್‌ಗೆ ಬರುವಾಗ ತಂಡವು 109/5ಗಳೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಇನ್ನೊಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ, ಧೋನಿ ಕೊನೆಯ ಬ್ಯಾಟ್ಸ್‌ಮ್ಯಾನ್‌ ಔಟ್ ಆಗುವವರೆಗೆ ಆಕ್ರಮಣಕಾರಿಯಾಗಿ ಆಡಿದ್ದ.[೪೮] ಧೋನಿ ಎರಡನೇ ಟೆಸ್ಟ್‌ನಲ್ಲಿ ಮೊದಲ ಅರ್ಧಶತಕವನ್ನು ದಾಖಲಿಸಿದನು. ಅವನ ತೀವ್ರಗತಿಯ ರನ್ ಗಳಿಸುವಿಕೆಯಿಂದ (51 ಎಸೆತಗಳಲ್ಲಿ ಅರ್ಧ-ಶತಕ) ಭಾರತಕ್ಕೆ 436 ರನ್‌ಗಳ ಗುರಿಯನ್ನು ದಾಖಲಿಸಲು ಮತ್ತು ಶ್ರೀಲಂಕಾವನ್ನು 247ಕ್ಕೆ ಆಲ್‌ಔಟ್ ಮಾಡಲು ಸಾಧ್ಯವಾಯಿತು.[೪೯]

2006ರ ಜನವರಿ/ಫೆಬ್ರವರಿಯಲ್ಲಿ ಭಾರತ ತಂಡದ ಪಾಕಿಸ್ತಾನ ಪ್ರವಾಸದ ಫೈಸಲಾಬಾದ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಧೋನಿ ತನ್ನ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು. ಭಾರತ ತಂಡಕ್ಕೆ ಫಾಲ್-ಆನ್ ತಪ್ಪಿಸಿಕೊಳ್ಳಲು ಇನ್ನೂ 107 ರನ್‌ಗಳ ಅಗತ್ಯವಿರುವಾಗ ಧೋನಿ ಇರ್ಫಾನ್‌ ಫಠಾಣ್‌ರೊಂದಿಗೆ ಸೇರಿ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಆಟ ನಿಭಾಯಿಸಿದರು. ಧೋನಿ ಆ ಇನ್ನಿಂಗ್ಸ್‌ನಲ್ಲಿ 34 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ನಂತರ ಕೇವಲ 93 ಎಸೆತಗಳಲ್ಲಿ ಶತಕವನ್ನು ಬಾರಿಸಿ, ತನ್ನ ಅಪ್ಪಟ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.[೫೦]

ಕ್ಷೇತ್ರ ರಕ್ಷಣೆ ಅಭ್ಯಾಸದಲ್ಲಿ ತೊಡಗಿರುವ ಧೋನಿ.ಜ್

]]ಮೊದಲ ಟೆಸ್ಟ್‌ ಶತಕದ ನಂತರ ಮೂರು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ತೋರಿದ್ದರು. ಅವುಗಳಲ್ಲಿ ಒಂದು ಪಂದ್ಯದಲ್ಲಿ ಭಾರತ ಪಾಕಿಸ್ತಾನದೆದುರು ಸೋತಿತ್ತು, ಇನ್ನೆರಡು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ 1-0 ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 400 ರನ್‌ಗಳಿಗೆ ಉತ್ತರವಾಗಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 279 ರನ್‌ಗಳನ್ನು ಮಾಡಿದ್ದು, ಅದರಲ್ಲಿ ಧೋನಿ ತಮ್ಮ 64 ರನ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಮಾಡಿದ್ದರು. ಆದಾಗ್ಯೂ ಧೋನಿ ಮತ್ತು ಭಾರತ ತಂಡದ ಕ್ಷೇತ್ರ ರಕ್ಷಕರು ಹಲವು ಕ್ಯಾಚ್‌ಗಳು ಮತ್ತು ಆಂಡ್ರೋ ಫ್ಲಿಂಟಾಫ್‌ನ ಪ್ರಮುಖ ಸ್ಟಂಪಿಂಗ್‌ ಅವಕಾಶ ಸೇರಿದಂತೆ ಔಟ್ ಮಾಡಬಹುದಾದ ಅವಕಾಶಗಳನ್ನು ತಪ್ಪಿಸಿಕೊಂಡು ಪರಿತಪಿಸಿದರು(14).[೫೧] ಹರ್‌ಭಜನ್‌ ಸಿಂಗ್‌ರವರ ಎಸೆತದಲ್ಲಿದಲ್ಲಿ ಫ್ಲಿಂಟಾಫ್‌ನ ಕ್ಯಾಚ್‌ನ್ನು ಹಿಡಿಯಲು ಧೋನಿ ವಿಫಲರಾದರು. ನಂತರ ಫ್ಲಿಂಟಾಫ್ 36 ರನ್‌ಗಳನ್ನು ಮಾಡಿ, ಭಾರತಕ್ಕೆ ಈವರೆಗೆ ಬೆನ್ನಟ್ಟದ 313 ರನ್‌ಗಳ ಗುರಿಯನ್ನು ಒಡ್ಡುವಲ್ಲಿ ಇಂಗ್ಲೆಂಡ್‌ಗೆ ಸಹಾಯವಾಡಿದರು. ತಂಡವು ಬ್ಯಾಟಿಂಗ್ ಕುಸಿತದಿಂದಾಗಿ 100 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರಲ್ಲಿ ಧೋನಿ ಕೇವಲ 5 ರನ್‌ಗಳನ್ನು ಗಳಿಸಿ, ವಿಕೆಟ್‌-ಕೀಪಿಂಗ್‌ ಮತ್ತು ಹೊಡೆತದ ತಪ್ಪು ನಿರ್ಣಯಗಳ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು.

2006ರ ವೆಸ್ಟ್‌ ಇಂಡೀಸ್‌ ಪ್ರವಾಸನ ಅಂಟಿಗುವಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ವೇಗದ ಗತಿ ಮತ್ತು ಆಕ್ರಮಣಶೀಲವಾಗಿ ಆಡಿ 69 ರನ್‌ಗಳನ್ನು ಗಳಿಸಲು ಸಫಲರಾದರು. ಸರಣಿ ಉಳಿದ ಭಾಗದಲ್ಲಿ 6 ಇನ್ನಿಂಗ್ಸ್‌ನಲ್ಲಿ 99 ರನ್‌ಗಳನ್ನು ಗಳಿಸಿದ್ದರೂ ಸಹ ತನ್ನ ವಿಕೆಟ್‌-ಕೀಪಿಂಗ್‌ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಸರಣಿಯ ಅಂತ್ಯದ ಹೊತ್ತಿಗೆ 13 ಕ್ಯಾಚ್‌ಗಳು ಮತ್ತು 4 ಸ್ಟಂಪಿಂಗ್‌ಗಳ ಮೂಲಕ ಧೋನಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಎರಡೂ ಇನ್ನಿಂಗ್ಸ್‌ನಲ್ಲಿ 34 ಮತ್ತು 47 ರನ್‌ಗಳನ್ನು ಗಳಿಸಿದ್ದರೂ ಸಹ, ಭಾರತವನ್ನು 2-1 ಅಂತರದ ಸರಣಿ ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್‌ ಪಂದ್ಯದ ವಿಜಯ, ಸರಣಿ ವಿಜಯವಾಗಿ ಪರಿವರ್ತಿಸಲಾಗಲಿಲ್ಲ (ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು). ಧೋನಿಯು ಕೈ ಗಾಯದಿಂದಾಗಿ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾದ ಪ್ರಸಂಗ ಎದುರಾಯಿತು.[೫೨]

2006ರ ಭಾರತದ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಅಂಟಿಗೊವಾದ St ಜಾನ್ಸ್‌ನಲ್ಲಿರುವ ಅಂಟಿಗೊವಾ ಕ್ರೀಡಾ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ದೇವ್ ಮಹಮದ್ ಎಸೆದ ಚೆಂಡಗೆ ಧೋನಿ ಫ್ಲಿಕ್‌ ಆಫ್ ಮಾಡಿದಾಗ ಮಿಡ್‌ ವಿಕೆಟ್ ವಲಯದಲ್ಲಿದ್ದ ಡೇರನ್ ಗಂಗಾ ಗೆ ಕ್ಯಾಚ್ ನೀಡಬೇಕಾಯಿತು. ಧೋನಿ ಔಟಾಗುತ್ತಿದ್ದಂತೆ ನಾಯಕ ದ್ರಾವಿಡ್‌ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡರು. ಕ್ಷೇತ್ರ ರಕ್ಷಕರು ಹೊರಡಲು ಪ್ರಾರಂಭಿಸಿದರೂ ಸಹ ತೀರ್ಪುಗಾರರಲ್ಲಿ ಗೊಂದಲವಿರುವುದರಿಂದ ಧೋನಿ ತೀರ್ಪುಗಾರರ ನಿರ್ಣಯಕ್ಕಾಗಿ ಕಾಯುತ್ತಿದ್ದರು. ಔಟ್ ಪ್ರಕರಣದ ಮರುಪ್ರಸಾರ ಗೊಂದಲಮಯವಾದಾಗ ಕ್ಷೇತ್ರ ರಕ್ಷಕರ ವಾಪಸಾತಿ ಕಂಡು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಬ್ರೈನ್ ಲಾರಾ ಕ್ಯಾಚ್‌ ಹಿಡಿದ ಕ್ಷೇತ್ರರಕ್ಷಕನ ಸಮರ್ಥನೆಯ ಮೇರೆಗೆ ‌ಧೋನಿಗೆ ಹೊರನಡೆಯುವಂತೆ ಸೂಚಿಸಿದನು. ಪರಿಸ್ಥಿತಿ ಹಾಗೆಯೇ 15 ನಿಮಷಗಳ ಕಾಲ ಮುಂದುವರಿದಾಗ, ಲಾರಾ ತೀರ್ಪುಗಾರರಿಗೆ ತೋರು ಬೆರಳನ್ನು ತೋರಿಸುತ್ತಾ, ಅಂಪೈರ್ಅಸಾದ್‌ ರೌಫ್‌ ಬಳಿಯಿದ್ದ ಚೆಂಡನ್ನು ಕಸಿದುಕೊಳ್ಳುವುದರೊಂದಿಗೆ ತನ್ನ ಸಿಟ್ಟನ್ನು ಪ್ರದರ್ಶಿಸಿದರು. ಕೊನೆಗೆ, ಧೋನಿ ಮೈದಾನದಿಂದ ಹೊರನಡೆದರು. ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದ್ದರೂ, ಆಟ ಪ್ರಾರಂಭವಾದದ್ದು ತಡವಾಯಿತು. ಪಂದ್ಯದಲ್ಲಿ ಲಾರಾ ಪ್ರದರ್ಶಿಸಿದ ನಡವಳಿಕೆಯು ವಿಮರ್ಶಕರು ಮತ್ತು ಹಿರಿಯ ಕ್ರಿಕೆಟಿಗರಿಂದ ತೀವ್ರ ಟೀಕೆಗೆ ಗುರಿಯಾಯಿತು. ಲಾರಾನನ್ನು ಪಂದ್ಯದ ತೀರ್ಪುಗಾರರು ಕರೆದು, ಅವನ ನಡವಳಿಕೆಯ ಬಗ್ಗೆ ವಿವರಣೆಯನ್ನು ಕೇಳಿದರು. ಆದರೆ ಯಾವುದೇ ದಂಡವನ್ನು ವಿಧಿಸಲಿಲ್ಲ.[೫೩]

ಕ್ರಿಕೆಟ್‌ ಪ್ರದರ್ಶನ ವೈಖರಿ

ಏಕದಿನ ಪಂದ್ಯ(ODI)) ಕ್ರಿಕೆಟ್‌

ಎದುರಾಳಿಗಳ ಎದುರು ODI ವೃತ್ತಿಜೀವನದ ದಾಖಲೆಗಳು
#ಎದುರಾಳಿಪಂದ್ಯಗಳುರನ್‌ಗಳುಸರಾಸರಿಉನ್ನತ ಸ್ಕೋರ್‌100ಗಳು50ಗಳುಕ್ಯಾಚ್‌ಗಳುಸ್ಟಂಪಿಂಗ್‌
1ಆಫ್ರಿಕಾ XI[೫೪]317487.00139*1033
2ಆಸ್ಟ್ರೇಲಿಯಾ1640536.8112413237
3ಬಾಂಗ್ಲಾದೇಶ814636.5091*0196
4ಬರ್ಮುಡಾ12929.00290010
5ಇಂಗ್ಲೆಂಡ್‌1850133.409603197
6ಹಾಂಗ್ ಕಾಂಗ್1109-109*1013
7ನ್ಯೂಜಿಲೆಂಡ್‌926967.2584*0272
8ಪಾಕಿಸ್ತಾನ2291757.3114817196
9ಸ್ಕಾಟ್ಲೆಂಡ್‌1-----2-
10ದಕ್ಷಿಣ ಆಫ್ರಿಕಾ1019624.50550171
11ಶ್ರೀಲಂಕಾ34129861.80183*111367
12ವೆಸ್ಟ್ ಇಂಡೀಸ್1749949.909503134
13ಯಾಕ್‌2123123.0067*0201
ಒಟ್ಟು142466650.17183*53314147

ODI ಶತಕಗಳು :

ODI ಶತಕಗಳು
#ರನ್‌ಗಳುಪಂದ್ಯವಿರುದ್ಧಕ್ರೀಡಾಂಗಣನಗರ/ದೇಶವರ್ಷ
11485ಪಾಕಿಸ್ತಾನACA-VDCA ಕ್ರೀಡಾಂಗಣವಿಶಾಖಪಟ್ಟಣಂ, ಆಂಧ್ರ ಪ್ರದೇಶ, ಭಾರತ2005
2183*22ಶ್ರೀಲಂಕಾಸಾವೈ ಮಾನ್‌ಸಿಂಗ್‌ ಕ್ರೀಡಾಂಗಣಜೈಪುರ, ರಾಜಸ್ಥಾನ, ಭಾರತ2005
3139*74ಆಫ್ರಿಕಾ XI[೫೪]MA ಚಿದಂಬರಂ ಕ್ರೀಡಾಂಗಣಚೆನ್ನೈ, ತಮಿಳುನಾಡು, ಭಾರತ2007
4109*109*ಹಾಂಗ್ ಕಾಂಗ್ರಾಷ್ಟ್ರೀಯ ಕ್ರೀಡಾಂಗಣಕರಾಚಿ, ಪಾಕಿಸ್ತಾನ2008
5124143ಆಸ್ಟ್ರೇಲಿಯಾVCA ಕ್ರೀಡಾಂಗಣ, ಜಂತಾನಾಗ್ಪುರ, ಭಾರತ2009

ODI ದಾಖಲೆಗಳು

  • ೨೦೦೫ರ ಆಕ್ಟೋಬರ್ ೩೧ರಂದು ಜೈಪುರನಲ್ಲಿನ ಸಾವೈ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶ್ರೀಲಂಕಾ ಎದುರು ಕೇವಲ ೧೪೫ ಎಸೆತಕ್ಕೆ ಧೋನಿ ೧೮೩* ರನ್‌ಗಳನ್ನು ಸಿಡಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಧೋನಿ ಮಾಡಿದ ದಾಖಲೆಗಳು ಈ ಕೆಳಗಿನಂತಿವೆ.[೩೨]
    • ಎರಡನೇ ಇನ್ನಿಂಗ್ಸ್‌ನಲ್ಲಿ ಮಾಡಿದ ೧೮೩* ರನ್, ODI ಕ್ರಿಕೆಟ್‌ದಲ್ಲಿ ಗಳಿಸಿದ ಅತಿ ಹೆಚ್ಚಿನ ಮೊತ್ತ ಆಗಿದೆ (ಹಿಂದೆ ಲಾರಾ ಮಾಡಿದ ದಾಖಲೆ: 153).
    • ಆ ಇನ್ನಿಂಗ್ಸ್‌ನಲ್ಲಿ ಹೊಡೆದ ೧೦ ಸಿಕ್ಸರ್‌ಗಳು ODI ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟಿಗ ಸಾಧಿಸಿರುವ ಅತಿ ಹೆಚ್ಚು ಮತ್ತು ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ (ಸನತ್ ಜಯಸೂರ್ಯ ಮತ್ತು ಶಾಹಿದ್ ಅಫ್ರಿದಿರಿಂದ 11 ಸಿಕ್ಸರ್‌ಗಳು ದಾಖಲಾಗಿವೆ)
    • ಧೋನಿ ವಿಕೆಟ್‌ ಕೀಪರ್‌ ಆಗಿ ಆಡಮ್ ಗಿಲ್‌ಕ್ರಿಸ್ಟ್‌ ಮಾಡಿದ 172 ರನ್‌ಗಳ ದಾಖಲೆಯನ್ನು ದಾಟಿ ಮುಂದೆ ಸಾಗಿದನು
    • ಸಯೀದ್ ಅನ್ವರ್‌ನ ಒಂದು ಇನ್ನಿಂಗ್ಸ್‌ನಲ್ಲಿ (120 - 15x4; 10x6) ಅತಿ ಹೆಚ್ಚು ರನ್ ಮಾಡಿದ ಇನ್ನಿಂಗ್ಸ ದಾಖಲೆಯೂ ಇದಾಗಿದೆ . ಆಸ್ಟ್ರೇಲಿಯಾ ಎದುರು ಹರ್ಶೆಲ್ ಗಿಬ್ಸ್‌ (ಬೌಂಡರಿಗಳಲ್ಲಿ 126 ರನ್‌ಗಳು - 21x4; 7x6) ಮಾಡಿದ 175 ರನ್‌ಗಳ ದಾಖಲೆಯನ್ನು ಸಹ ದಾಟಿದ್ದು ಸಾಧನೆಯೇ ಆಗಿದೆ.
    • ODI ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಎದುರು 1999 ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಗಂಗೂಲಿ ಮಾಡಿದ ೧೮೩* ರನ್‌ಗಳ ದಾಖಲೆಯನ್ನು ಸರಿಗಟ್ಟಿತು.
  • ಐವತ್ತ ಕ್ಕೂ ಹೆಚ್ಚು ಪಂದ್ಯವನ್ನಾಡಿದ ಭಾರತದ ಬ್ಯಾಟ್ಸ್‌ಮ್ಯಾನ್‌ರಲ್ಲಿ ಧೋನಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ.[೫೫] ಏಕದಿನ ಕ್ರಿಕೆಟ್ ನಲ್ಲಿ ಉಳಿದ ವಿಕೆಟ್‌ ಕೀಪರ್‌ಗಳ ಸಾಧನೆ ಗಮನಿಸಿದರೆ ಧೋನಿಯ ಬ್ಯಾಟಿಂಗ್ ಸರಾಸರಿಯು ಅತ್ಯುತ್ತಮವಾಗಿದೆ.
  • ೨೦೦೭ರ ಜೂನ್‌ನ ಆಫ್ರೋ-ಏಷಿಯನ್‌ ಕಪ್‌ನಲ್ಲಿ ಆಫ್ರಿಕಾ XI ಎದುರು ‌ಧೋನಿ(139*) ಮತ್ತು ಮಹಾಲೆ ಜಯವರ್ದನೆ(107)[೫೪] ಆರನೇ ವಿಕೆಟ್ ಜೊತೆಯಾಟದಲ್ಲಿ 218 ರನ್‌ಗಳ ಪಾಲುಗಾರಿಕೆಯೊಂದಿಗೆ ಹೊಸ ವಿಶ್ವದಾಖಲೆಯನ್ನು ಮಾಡಿದರು.[೫೬]
    • ಧೋನಿ ಅಜೇಯ 139 ರನ್ ಗಳಿಸುವುದರೊಂದಿಗೆ ಶಾನ್‌ ಪೋಲಾಕ್‌ನ ದಾಖಲೆಯನ್ನು ಮುರಿದರು.ಏಕದಿನ ಕ್ರಿಕೆಟ್‌ನಲ್ಲಿ ಏಳನೇ ಕ್ರಮಾಂಕದಲ್ಲಿ ಬಂದು ಅತಿ ಹೆಚ್ಚು ವೈಯಕ್ತಿಕ ರನ್ ಮಾಡಿದ ದಾಖಲೆಗೆ ಸೇರಿಕೊಂಡರು .[೫೭] ಅದೇ ತೆರನಾಗಿ,2007 ಆಫ್ರೋ-ಏಷಿಯನ್‌ ಕಪ್‌ ಮೊದಲ ಪಂದ್ಯದಲ್ಲಿ ಪೋಲಾಕ್‌ ಮಾಡಿದ 130 ರನ್‌ಗಳ ದಾಖಲೆಯು ಮೂರು ದಿನಗಳ ನಂತರ ಸರಣಿಯ ಕೊನೆಯ ಪಂದ್ಯದಲ್ಲಿ ಧೋನಿಯ ಶತಕ ದೊಂದಿಗೆ ಅಂತ್ಯಗೊಂಡಿತು.
    • ಧೋನಿ ಒಬ್ಬ ಭಾರತೀಯ ವಿಕೆಟ್ ಕೀಪರ್ ಆಗಿ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಹುದ್ದರಿಗಳನ್ನು ಕೆಡುವಿದ ದಾಖಲೆ ಹೊಂದಿದ್ದಾರೆ. 2007ರ ಸಪ್ಪೆಂಬರ್‌ 2ರಲ್ಲಿ ಇಂಗ್ಲೆಂಡ್‌ ವಿರುದ್ದ 6 ವಿಕೆಟ್ ಪಡೆದು (5 ಕ್ಯಾಚ್‌ಗಳು ಮತ್ತು ಒಂದು ಸ್ಟಂಪಿಂಗ್‌), ಅಂತರರಾಷ್ಟ್ರೀಯ ದಾಖಲೆಯನ್ನು ಸಹ ಆಡಮ್ ಗಿಲ್‌ಕ್ರಿಸ್ಟ್‌) ಜೊತೆ ಹಂಚಿಕೊಂಡಿದ್ದಾರೆ.
    • ೨೦೦೮ರ ನವೆಂಬರ್‌ 14ರಲ್ಲಿ ರಾಜ್‌ಕೋಟ್‌ನ ಮಾಧವ್‌ರಾವ್‌ ಸಿಂಧಿಯಾ ಕ್ರಿಕೆಟ್‌ ಮೈದಾನದಲ್ಲಿ ಜಹೀರ್ ಖಾನ್‌ಬೌಲಿಂಗ್ ನಲ್ಲಿ ಇಯಾನ್ ಬೆಲ್‌ರ ವಿಕೆಟ್ ಪಡೆದು, , ಭಾರತದ ಪರ ನಯನ್ ಮೊಂಗಿಯಾರ 154 ವಿಕೆಟ್ ಪಡೆದ ದಾಖಲೆಯನ್ನು ಮುರಿದು ಧೋನಿ ODIಗಳಲ್ಲಿ ಭಾರತದ ಪರ ಅತಿ ಹೆಚ್ಚು ಹುದ್ದರಿ ಉರುಳಿಸಿದ ದಾಖಲೆ ಮಾಡಿದ್ದಾರೆ. ಆಫ್ರಿಕಾ XI ವಿರುದ್ಧ 3 ODIಗಳನ್ನು ಆಡಿದ್ದರೂ ಸಹ, ೨೦೦೮ಆಗಸ್ಟ್ 24ರಂದು ಕೊಲಂಬೊದ R. ಪ್ರೇಮ್‌ದಾಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುನಾಫ್ ಪಟೇಲ್‌ಬೌಲಿಂಗನಲ್ಲಿ TM ದಿಲ್ಶಾನ್‌ರ ಕ್ಯಾಚ್‌ ಕೂಡ ಅವರು 155ನೇ ಔಟ್‌{//ತೆಗೆದುಕೊಂಡ ಸಂಖ್ಯೆಯಾಗಿದೆ.
  • ಕೊಲಂಬೊದ R. ಪ್ರೇಮ್‌ದಾಸ್‌ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ23 ರನ್‌ ಗಳಿಸಿ, ಧೋನಿ ODIಗಳಲ್ಲಿ 4,000 ರನ್‌ಗಳನ್ನು ಪೂರ್ಣಗೊಳಿಸಿದರು. ಈಗಾಗಲೇ 165 ಔಟ್ (125 ಕ್ಯಾಚ್‌ಗಳು + 40 ಸ್ಟಂಪಿಂಗ್‌ಗಳು) ಮಾಡಿದ್ದರಿಂದ, ODIಗಳ ಇತಿಹಾಸದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಕೆಟ್‌ ಕೀಪರ್‌ಗಳಲ್ಲಿ ಆಡಮ್ ಗಿಲ್‌ಕ್ರಿಸ್ಟ್‌, ಆಂಡಿ ಫ್ಲೋವರ್‌, ಅಲೆಕ್‌ ಸ್ಟೆವರ್ಟ್‌, ಮಾರ್ಕ್‌ ಬೌಚರ್‌ ಮತ್ತು ಕುಮಾರ ಸಂಗಾಕ್ಕಾರ. ನಂತರದ 4,000 ರನ್‌ಗಳು ಮತ್ತು 100 ವಿಕೆಟ್ ಪಡೆದ ಆರನೇ ವಿಕೆಟ್‌ ಕೀಪರ್‌ ಧೋನಿ. ಇದು ವಿಶ್ವ ದಾಖಲೆಯಾಗಿದೆ. ಧೋನಿ ಈ ಸಾಧನೆಗೈದ ಅತಿ ಕಿರಿಯ ವಿಕೆಟ್‌-ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಆಗಿದ್ದಾರೆ (27 ವರ್ಷ ಮತ್ತು 208 ದಿನಗಳು).

ಸರಣಿ ಶ್ರೇಷ್ಠ ಪ್ರಶಸ್ತಿಗಳು

ಕ್ರ ಸಂಸರಣಿ (ಎದುರಾಳಿಗಳು)ಭಾಗಸರಣಿಗಳಲ್ಲಿ ಪ್ರದರ್ಶನ
ಭಾರತ ODI ಸರಣಿಯಲ್ಲಿ ಶ್ರೀಲಂಕಾ2005/06346 ರನ್‌ಗಳು (7 ಪಂದ್ಯಗಳು & 5 ಇನ್ನಿಂಗ್ಸ್‌, 1x100, 1x50); 6 ಕ್ಯಾಚ್‌ಗಳು & 3 ಸ್ಟಂಪಿಂಗ್‌ಗಳು
2[೫೮]ಬಾಂಗ್ಲಾದೇಶ ODI ಸರಣಿಯಲ್ಲಿ ಭಾರತ2007127 ರನ್‌ಗಳು (2 ಪಂದ್ಯಗಳು & 2 ಇನ್ನಿಂಗ್ಸ್‌, 1x50); 1 ಕ್ಯಾಚ್‌ಗಳು & 2 ಸ್ಟಂಪಿಂಗ್‌ಗಳು
ಶ್ರೀಲಂಕಾ ODI ಸರಣಿಯಲ್ಲಿ ಭಾರತ2008193 ರನ್‌ಗಳು (5 ಪಂದ್ಯಗಳು & 5 ಇನ್ನಿಂಗ್ಸ್‌, 2x50); 3 ಕ್ಯಾಚ್‌ಗಳು & 1 ಸ್ಟಂಪಿಂಗ್‌
4ವೆಸ್ಟ್‌ ಇಂಡೀಸ್‌ ODI ಸರಣಿಯಲ್ಲಿ ಭಾರತಜುಲೈ 16, 2009.182 ರನ್‌ಗಳು (4 ಪಂದ್ಯಗಳು & 91 ಸರಾಸರಿಯೊಂದಿಗೆ 3 ಇನ್ನಿಂಗ್ಸ್‌); 4 ಕ್ಯಾಚ್‌ಗಳು & 1 ಸ್ಟಂಪಿಂಗ್‌

ಪಂದ್ಯ ಶ್ರೇಷ್ಠ ಪ್ರಶಸ್ತಿಗಳು :

ಕ್ರ ಸಂಎದುರಾಳಿಸ್ಥಳಕ್ರಿಕೆಟ್ ಪಂದ್ಯಪಂದ್ಯಪಂದ್ಯ ಪ್ರದರ್ಶನ
1ಪಾಕಿಸ್ತಾನವಿಶಾಖಪಟ್ಟಣಂ2004/05148 (123b, 15x4, 4x6); 2 ಕ್ಯಾಚ್‌ಗಳು
2ಶ್ರೀಲಂಕಾಜೈಪುರ2005/06183* (145b, 15x4, 10x6); 1 ಕ್ಯಾಚ್‌
3ಪಾಕಿಸ್ತಾನಲಾಹೋರ್‌ಇಂಗ್ಲಿಷ್‌ ಫುಟ್‌ಬಾಲ್‌ನ 2005–06ರ ಕಾಲಾವಧಿ72 (46b, 12x4); 3 ಕ್ಯಾಚ್‌ಗಳು
4ಬಾಂಗ್ಲಾದೇಶಮೀರ್ಪುರ200791* (106b, 7x4); 1 ಸ್ಟಂಪಿಂಗ್‌
5ಆಫ್ರಿಕಾ XI[೫೪]ಚೆನ್ನೈ2007139* (97b, 15x4, 5x6); 3 ಸ್ಟಂಪಿಂಗ್‌ಗಳು
6ಆಸ್ಟ್ರೇಲಿಯಾಚಂಡಿಗರ್200750* ( 35 b, 5x4 1x6); 2 ಸ್ಟಂಪಿಂಗ್‌ಗಳು
7ಪಾಕಿಸ್ತಾನಗುವಹಾಟಿ200763, 1 ಸ್ಟಂಪಿಂಗ್‌
8ಶ್ರೀಲಂಕಾಕರಾಚಿ200867, 2 ಕ್ಯಾಚ್‌ಗಳು
9ಶ್ರೀಲಂಕಾಕೊಲಂಬೊ (RPS)200876, 2 ಕ್ಯಾಚ್‌ಗಳು
10ನ್ಯೂ ಜೀಲ್ಯಾಂಡ್ಮ್ಯಾಕ್‌ಲರ್ನ್‌ ಪಾರ್ಕ್‌, ನಪಿಯರ್‌200984*, 1 ಕ್ಯಾಚ್‌ & 1 ಸ್ಟಂಪಿಂಗ್‌
11ವೆಸ್ಟ್‌ ಇಂಡೀಸ್‌ಬೀಯಾವ್ಸೆಜೋರ್‌ ಕ್ರೀಡಾಂಗಣ, St. ಲುಸಿಯಾ200946*, 2 ಕ್ಯಾಚ್‌ಗಳು & 1 ಸ್ಟಂಪಿಂಗ್‌
12ಆಸ್ಟ್ರೇಲಿಯಾವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣ, ನಾಗ್ಪುರ2009124, 1 ಕ್ಯಾಚ್‌ಗಳು, 1 ಸ್ಟಂಪಿಂಗ್‌ & 1 ರನೌಟ್‌

ಟೆಸ್ಟ್‌ ಕ್ರಿಕೆಟ್‌

ಟೆಸ್ಟ್‌ ಪ್ರದರ್ಶನ :

ಎದುರಾಳಿಗಳೆದುರು ಟೆಸ್ಟ್‌ ವೃತ್ತಿಜೀವನದ ದಾಖಲೆಗಳು
#ಎದುರಾಳಿಗಳುಪಂದ್ಯಗಳುರನ್‌ಗಳುಸರಾಸರಿಉನ್ನತ ಸ್ಕೋರ್‌100ಗಳು50ಗಳುಕ್ಯಾಚ್‌ಗಳುಸ್ಟಂಪಿಂಗ್‌ಗಳು
1ಆಸ್ಟ್ರೇಲಿಯಾ844834.469204186
2ಬಾಂಗ್ಲಾದೇಶ2104104.0051*0161
3ಇಂಗ್ಲೆಂಡ್‌839733.089204243
4ನ್ಯೂಜಿಲೆಂಡ್‌215577.5056*02111
5ಪಾಕಿಸ್ತಾನ532364.601481291
6ದಕ್ಷಿಣ ಆಫ್ರಿಕಾ521827.25520161
7ಶ್ರೀಲಂಕಾ314937.2551*0151
8ವೆಸ್ಟ್ ಇಂಡೀಸ್416824.006901134
ಒಟ್ಟು37196237.731481169218

ಟೆಸ್ಟ್ ಶತಕಗಳು :

ಟೆಸ್ಟ್ ಶತಕಗಳು
#ರನ್‌ಗಳುಪಂದ್ಯಎದುರಾಳಿಕ್ರೀಡಾಂಗಣನಗರ/ದೇಶವರ್ಷ
11485ಪಾಕಿಸ್ತಾನಇಕ್ಬಾಲ್‌ ಕ್ರೀಡಾಂಗಣಫೈಸಲಾಬಾದ್‌, ಪಾಕಿಸ್ತಾನನವೆಂಬರ್‌ 4, 2006

ಪಂದ್ಯ ಶ್ರೇಷ್ಠ ಪ್ರಶಸ್ತಿಗಳು :

ಕ್ರ ಸಂಎದುರಾಳಿಸ್ಥಳಭಾಗಪಂದ್ಯ ಪ್ರದರ್ಶನ
1ಆಸ್ಟ್ರೇಲಿಯಾಮೊಹಾಲಿ200892 & 68*

ಟೆಸ್ಟ್‌ ದಾಖಲೆಗಳು

  • ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ಎದುರು ಮಾಡಿದ ಧೋನಿಯ ಮೊದಲ ಶತಕವು (148) ಭಾರತೀಯ ವಿಕೆಟ್‌ ಕೀಪರ್‌ ಮಾಡಿದ ವೇಗದ ಶತಕವಾಗಿದೆ. ಇಬ್ಬರು ಆಟಗಾರರಿಂದ ಮೂರು ಶತಕಗಳು (ಕಮ್ರಾನ್‌ ಅಕ್ಮಲ್ ಮತ್ತು ಆಡಮ್ ಗಿಲ್‌ಕ್ರಿಸ್ಟ್‌ - 2) ಧೋನಿಯ 93 ಎಸೆತದಲ್ಲಿನ ಶತಕಕ್ಕಿಂತ ಹೆಚ್ಚು ವೇಗವಾಗಿದೆ.[೫೯]
  • 2008ರ ಆಗಸ್ಟ್ 21ರಲ್ಲಿ ಧೋನಿಯ ನಾಯಕತ್ವದಡಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು 320 ರನ್‌ಗಳಿಂದ ಸೋಲಿಸಿರುವುದು ರನ್‌ಗಳ ಆದಾರದಲ್ಲಿ ಅತಿ ದೊಡ್ಡ ವಿಜಯವಾಗಿದೆ.[೬೦]
  • ಧೋನಿ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಭಾರತೀಯ ಆಟಗಾರ ದಾಖಲೆಯನ್ನು ಹೊಂದಿದ್ದಾನೆ. 2009ರ ಎಪ್ರಿಲ್‌ನಲ್ಲಿ ವಿಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ಕ್ಯಾಚ್‌ಗಳನ್ನು ಹಿಡಿಯುದರೊಂದಿಗೆ ಧೋನಿ ಈ ಸಾಧನೆಯನ್ನು ಮಾಡಿದ್ದಾನೆ.
  • ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚಿನ ಔಟ್‌ ಮಾಡಿದ ಭಾರತೀಯ ವಿಕೆಟ್‌-ಕೀಪರ್ ಸಯದ್ ಕಿರ್ಮಾನಿಯ ದಾಖಲೆಯನ್ನು ಧೋನಿ ಸರಿಗಟ್ಟಿದನು. ಸಯದ್ ಕಿರ್ಮಾನಿ 1976ರಲ್ಲಿ ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ 6 ಔಟ್ (5 ಕ್ಯಾಚ್‌ಗಳು ಮತ್ತು 1 ಸ್ಟಂಪಿಂಗ್‌) ಮಾಡಿದ್ದನು. 2009ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಧೋನಿ 6 ಔಟ್‌ಗಳನ್ನು (ಎಲ್ಲಾ 6 ಕ್ಯಾಚ್‌ಗಳು) ಮಾಡುವ ಮೂಲಕ ಆ ದಾಖಲೆಯನ್ನು ಸರಿಗಟ್ಟಿದನು.
  • ಭಾರತೀಯ ವಿಕೆಟ್‌-ಕೀಪರ್‌ಗಳಿಂದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 2009ರ ಎಪ್ರಿಲ್‌ರಂದು ಓಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್‌ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ಹುದ್ದರಿ ಪಡೆಯುವ ಮೂಲಕ , ಧೋನಿ ಒಟ್ಟು 109 ಔಟ್‌ ಪಡೆದು ಹಿರಿಮೆಗೆ ಪಾತ್ರರಾದರು. ಟೆಸ್ಟ್‌ ಪಂದ್ಯಗಳ ಅಂಕಿ-ಅಂಶಗಳ ಪ್ರಕಾರ ಅತ್ಯುತ್ತಮ ಐದು ಭಾರತೀಯ ವಿಕೆಟ್‌-ಕೀಪರ್‌ಗಳ ಪಟ್ಟಿ ಈ ಕೆಳಗಿನಂತಿವೆ: ಸಯದ್ ಕಿರ್ಮಾನಿ (198 ಔಟ್‌ಗಳು), ಕಿರಣ್ ಮೋರೆ (130 ಔಟ್‌ಗಳು), ಧೋನಿ (109 ಔಟ್‌ಗಳು), ನಯನ್ ಮೊಂಗಿಯಾ (107 ಔಟ್‌ಗಳು) ಮತ್ತು ಫಾರೋಕ್ ಇಂಜಿನಿಯರ್‌ (82 ಔಟ್‌ಗಳು).
  • ಧೋನಿ ಟೆಸ್ಟ್ ಪಂದ್ಯದ ಪ್ರತಿ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿ, 6 ವಿಕೆಟ್ ಕಬಳಿಸಿದ ಎರಡನೇ ವಿಕೆಟ್‌ ಕೀಪರ್‌ ಆಗಿದ್ದಾರೆ. 1966ರ ಡಿಸೆಂಬರ್‌ನಲ್ಲಿ ಜೋಹಾಸ್ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 69, 182 ರನ್‌ಗಳನ್ನು ಗಳಿಸಿ, 6 ಮತ್ತು, 2 ಕ್ಯಾಚ್‌ಗಳನ್ನು ಹಿಡಿದು ದಕ್ಷಿಣ ಆಫ್ರಿಕಾ ಪರ ಡೇನಿಸ್ ಲಿಂಡ್ಸೇ ಮೊದಲು ಈ ಸಾಧನೆಯನ್ನು ಮಾಡಿದ್ದಾರೆ.

ಒಡಂಬಡಿಕೆಗಳು

೨೦೦೫ರ ಎಪ್ರಿಲ್‌ನಲ್ಲಿ ಧೋನಿ ಕೋಲ್ಕತ್ತಾ ಮೂಲದ ಹೆಸರಾಂತ ಸಂಸ್ಥೆ ಗೇಮ್‌ಪ್ಲ್ಯಾನ್‌ ಸ್ಪೋರ್ಟ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡರು.[೧೧][೬೧] ಪ್ರಸ್ತುತ ಧೋನಿ ೨೦ ಜಾಹಿರಾತು ಸಂಬಂಧಿಸಿದ ಕರಾರುಗಳಿಗೆ ಒಪ್ಪಿಕೊಂಡಿದ್ದಾರೆ ಶಾರುಖ್ ಖಾನ್‌ನ (21) ನಂತರದ ಸ್ಥಾನವನ್ನು ಪಡೆದಿದ್ದಾರೆ.[೬೨] ೨೦೦೭ರಲ್ಲಿ ಧೋನಿ ೧೭ ಒಡಂಬಡಿಕೆಗಳನ್ನು ಹೊಂದಿದ್ದರು.[೬೩] ಧೋನಿ ಸಹಿ ಹಾಕಿದ ಒಡಂಬಡಿಕೆಗಳ ಪಟ್ಟಿ ಈ ಕೆಳಗಿನಂತಿವೆ.

  • ೨೦೦೫: ಪೆಪ್ಸಿಕೊ,[೧೦][೬೪] ರೀಬೊಕ್,[೧೦] ಎಕ್ಸೈಡ್‌,[೬೪] TVS ಮೋಟರ್ಸ್‌.[೬೫]
  • ೨೦೦೬: ಮೈಸೂರ್ ಸ್ಯಾಂಡಲ್ ಸೋಪ್‌,[೬೬] ವೀಡಿಯೊಕಾನ್‌,[೬೭] ರಿಲಾಯನ್ಸ್ ಕಮ್ಯುನಿಕೇಷನ್,[೬೮] ರಿಲಾಯನ್ಸ್ ಎನರ್ಜಿ,[೬೮] ಒರಿಯಂಟ್ PSPO ಫ್ಯಾನ್‌,[೬೯] ಭಾರತ್ ಪೆಟ್ರೋಲಿಯಂ,[೭೦] ಟೈಟಾನ್ ಸೋನಾಟಾ,[೭೧] ಬ್ರೈಲ್‌ಕ್ರೀಮ್‌,[೭೨] NDTV,[೭೩] GE ಮನಿ.[೭೪]
  • ೨೦೦೭: ಸಿಯಾರಾಮ್.[೭೫]
  • ೨೦೦೮: ಬಿಗ್ ಬಜಾರ್ ನಲ್ಲಿರುವ ಫ್ಯಾಶನ್‌, ಮಹಾ ಚೋಕೊ, ಬೂಸ್ಟ್‌ (ಆರೋಗ್ಯ ಪಾನೀಯ), ದೈನಿಕ್ ಭಾಸ್ಕರ್[೭೬]
  • ೨೦೦೯: ಡಾಬರ್ ಹನಿ, ಕೋಲ್ಕತ್ತಾ ಫ್ಯಾಶನ್ ವೀಕ್‌.[೭೭] ಏರ್‌ಸೆಲ್ ಕಮ್ಯುನಿಕೇಷನ್ಸ್,

ನೋವಾ ಸ್ಕೋಟಿಯಾ ಪ್ರೀಮಿಯಂ ಅಂಗಿಗಳು.

ಟಿಪ್ಪಣಿಗಳು

ಹೊರಗಿನ ಕೊಂಡಿಗಳು

*Player profile: ಮಹೇಂದ್ರ ಸಿಂಗ್ ಧೋನಿ from CricketArchive

ಟೆಂಪ್ಲೇಟು:India Squad 2007 Cricket World Twenty20

ಪೂರ್ವಾಧಿಕಾರಿ
Rahul Dravid
Indian National ODI Cricket Captain
2007-2016
ಉತ್ತರಾಧಿಕಾರಿ
virat kohli
ಪೂರ್ವಾಧಿಕಾರಿ
Anil Kumble
Indian National Test Cricket Captain
2008-2014
ಉತ್ತರಾಧಿಕಾರಿ
virat kohli
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ