ಭಾಲಚಂದ್ರ ನೆಮಾಡೆ

ಭಾಲಚಂದ್ರ ವನಾಜಿ ನೆಮಾಡೆ(ಮರಾಠಿ: भालचंद्र वनाजी नेमाडे) ಮರಾಠಿ ಲೇಖಕರು. ಇವರು ಕವಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. 'ಕೋಸಲಾ' ಮತ್ತು 'ಹಿಂದು' ಅವರ ಸುಪ್ರಸಿದ್ಧ ಕಾದಂಬರಿಗಳು. ’ಹಿಂದೂ’ ಎಂಬ ಕಾದಂಬರಿಗಾಗಿ ೨೦೧೪ ರ ೫೦ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.[೧] ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಮರಾಠಿ ಲೇಖಕರಾಗಿದ್ದಾರೆ.[೨]

ಭಾಲಚಂದ್ರ ವನಾಜಿ ನೆಮಾಡೆ
ಭಾಲಚಂದ್ರ ವನಾಜಿ ನೆಮಾಡೆ
ಜನನ೧೯೩೮, ಮೇ ೨೭
ಸಾಂಗವೀ, ಕೊಲ್ಹಾಪುರ, ಮಹಾರಾಷ್ಟ್ರ
ವೃತ್ತಿಲೇಖಕ
ಭಾಷೆಮರಾಠಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವನ, ಕಾದಂಬರಿ, ವಿಮರ್ಶೆ

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

ಭಾಲಚಂದ್ರರು ಮಹಾರಾಷ್ಟ್ರಕೊಲ್ಹಾಪುರ ಸಮೀಪದ 'ಸಾಂಗವೀ' ಗ್ರಾಮ­ದಲ್ಲಿ ಕೃಷಿಕ ಕುಟುಂಬವೊಂದರಲ್ಲಿ ೧೯೩೮ರ ಮೇ ೨೭ರಂದು ಜನಿಸಿದರು. ಪುಣೆಯ ಫರ್ಗ್ಯುಸನ್‌ ಕಾಲೇಜಿನಿಂದ ಪದವಿ ಪಡೆದರು. ನಂತರ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಉತ್ತರ ಮಹಾರಾಷ್ಟ್ರವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಮತ್ತು ಡಿ.ಲಿಟ್‌ ಪದವಿಗಳನ್ನೂ ಪಡೆದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್‌, ಮರಾಠಿ ಮತ್ತು ತೌಲನಿಕ ಅಧ್ಯಯನದ ಬೋಧಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

  • ಲಂಡನ್‌ನ ‘ಓರಿಯಂಟಲ್‌ ಅಂಡ್‌ ಆಫ್ರಿಕನ್‌ ಸ್ಟಡೀಸ್‌ ಸ್ಕೂಲ್’ನಲ್ಲಿ ಬೋಧಕ­ರಾಗಿದ್ದರು.
  • ಮುಂಬಯಿ ವಿ.ವಿ.ಯ ಗುರುದೇವ್‌ ಟ್ಯಾಗೋರ್‌ ತೌಲನಿಕ ಸಾಹಿತ್ಯ ಅಧ್ಯಯನ ಪೀಠದ ಬೋಧಕ­ರಾಗಿ ಕಾರ್ಯನಿರ್ವಹಿಸಿ ನಿವೃತ್ತರಾ­ಗಿದ್ದಾರೆ.
  • ೧೯೬೦ ರ ದಶಕದಲ್ಲಿ ‘ವಾಚಾ’ ಎಂಬ ಮರಾಠಿ ನಿಯತ­ಕಾಲಿಕದ ಸಂಪಾದಕರೂ ಆಗಿದ್ದರು.

ಕೃತಿಗಳು

ಕಾದಂಬರಿಗಳು

  • ಕೋಸಲಾ: (೧೯೬೩) ೨೫ನೇ ವಯಸ್ಸಿನಲ್ಲಿ ರಚಿಸಿದ ಮೊದಲ ಕಾದಂಬರಿ ’ಕೋಸಲಾ’ ಮರಾಠಿ ಸಾಹಿತ್ಯರಂಗದಲ್ಲಿ ಸಂಚಲನ ಉಂಟುಮಾಡಿತ್ತು.
  • ಬಿಢಾರ್‌
  • ಜರಿಲಾ
  • ಹೂಲ್‌
  • ಝೂಲ್‌
  • ಹಿಂದೂ– ಜಗಣ್ಯಾಚಿ ಸಮೃದ್ಧ ಅಡಗಳ್‌[೩]:ಹಿಂದೂ ಕಾದಂಬರಿಯು ಸಿಂಧೂ ಸಂಸ್ಕೃತಿಯ ನಾಗರಿಕತೆಯ ಉಗಮ ಮತ್ತು ಭಾರತದ ಒಟ್ಟಾರೆ ಜನಸಂಸ್ಕೃತಿಯ ಮೇಲೆ ಬೀರಿದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ವಿಸ್ತೃತ ವಿವರಗಳನ್ನು ಒಳಗೊಂಡಿದೆ.

ಕವನ ಸಂಕಲನಗಳು

  1. ‘ಮೆಲೋಡಿ’,
  2. ‘ದೇಖಣೀ’ ಮುಖ್ಯ ಕವನ ಸಂಕಲನಗಳು.

ವಿಮರ್ಶಾ ಗ್ರಂಥಗಳು

  • ಟೀಕಾ ಸ್ವಯಂವರ್‌
  • ಸಾಹಿತ್ಯಾಚಿ ಭಾಷಾ
  • ತುಕಾರಾಂ

ಪ್ರಶಸ್ತಿ ಪುರಸ್ಕಾರಗಳು

  • ‘ಟೀಕಾ ಸ್ವಯಂವರ್‌’ ಕೃತಿಗಾಗಿ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೨೦೧೧ರಲ್ಲಿ ಪದ್ಮಶ್ರೀ ಗೌರವ
  • 'ಹಿಂದು: ಜಗ್ನಾಚಿ ಸಮೃದ್ಧ ಅಡಗಳ' ಕೃತಿಗಾಗಿ ೨೦೧೪ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೪] (೫೦ನೇ ಜ್ಞಾನಪೀಠ ಪ್ರಶಸ್ತಿ)[೫]

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ