ಬ್ಞಾಕೆ ಬಿಹಾರಿ ದೇವಾಲಯ

ಶ್ರೀ ಬ್ಞಾಕೆ ಬಿಹಾರಿ ಮಂದಿರವು ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿನ ಪವಿತ್ರ ನಗರವಾದ ವೃಂದಾವನದಲ್ಲಿ ಶ್ರೀಕೃಷ್ಣನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ . ಇದು ಶ್ರೀ ರಾಧಾ ವಲ್ಲಭ ದೇವಸ್ಥಾನದ ಬಳಿ ಸ್ಥಿತವಾಗಿದೆ. ಬ್ಞಾಕೆ ಬಿಹಾರಿ ಜಿ ಯನ್ನು ಮೂಲತಃ ನಿಧಿವನದಲ್ಲಿ ಪೂಜಿಸಲಾಗುತ್ತಿತ್ತು. ಬ್ಞಾಕೆ ಎಂದರೆ "ಮೂರು ಸ್ಥಳಗಳಲ್ಲಿ ಬಾಗಿರುವ" ಮತ್ತು ಬಿಹಾರಿ ಎಂದರೆ "ಆನಂದಿಸುವವನು"

ಬ್ಞಾಕೆ ಬಿಹಾರಿ ದೇವಾಲಯದ ಮುಖ್ಯ ದ್ವಾರ

ಶ್ರೀಕೃಷ್ಣನ ವಿಗ್ರಹವು ತ್ರಿಭಂಗ ಭಂಗಿಯಲ್ಲಿ ನಿಂತಿದೆ. ಸ್ವಾಮಿ ಹರಿದಾಸರು ಮೂಲತಃ ಈ ಭಕ್ತಿ ಮೂರ್ತಿಯನ್ನು ಕುಂಜ್-ಬಿಹಾರಿ ಎಂಬ ಹೆಸರಿನಡಿ ಪೂಜಿಸುತ್ತಿದ್ದರು ("ವೃಂದಾವನದ ತೋಪುಗಳಲ್ಲಿ (ಕುಂಜ್) ಆನಂದಿಸುವವನು").

ಬ್ಞಾಕೆ ಬಿಹಾರಿ ದೇವಾಲಯವನ್ನು ಸ್ವಾಮಿ ಹರಿದಾಸರು (ದ್ವಾಪರಯುಗದಲ್ಲಿ ಲಲಿತಾ ಸಖಿ) ಸ್ಥಾಪಿಸಿದರು.[೧] ಇವರು ಪ್ರಸಿದ್ಧ ಗಾಯಕ ತಾನ್ಸೇನ್‌ನ ಗುರುಗಳು. ಪದವನ್ನು ಹಾಡಿದಾಗ ಸ್ವರ್ಗದ ದಂಪತಿಗಳಾದ ಶ್ಯಾಮಾ-ಶ್ಯಾಮ್ (ರಾಧಾ ಕೃಷ್ಣ) ಅವರ ಮತ್ತು ಅವರ ಭಕ್ತರ ಮುಂದೆ ಕಾಣಿಸಿಕೊಂಡರು. ಶ್ರೀ ಸ್ವಾಮಿ ಜಿ ಅವರ ಕೋರಿಕೆಯ ಮೇರೆಗೆ ದಂಪತಿಗಳು ಒಂದಾಗಿ ವಿಲೀನಗೊಂಡು ಬ್ಞಾಕೆ ಬಿಹಾರಿ ವಿಗ್ರಹವು ಅಲ್ಲಿ ಕಾಣಿಸಿಕೊಂಡಿತು (ದೇವಾಲಯದಲ್ಲಿ ಕಂಡುಬರುವುದು ಇದೇ ವಿಗ್ರಹ). ವಿಗ್ರಹವನ್ನು ನಿಧಿವನದಲ್ಲಿ ಸ್ಥಾಪಿಸಲಾಯಿತು.

Devotees taking darshan at Banke Bihari Mandir in Vrindavan
ವೃಂದಾವನದ ಬ್ಞಾಕೆ ಬಿಹಾರಿ ಮಂದಿರದಲ್ಲಿ ದರ್ಶನ ಪಡೆಯುತ್ತಿರುವ ಭಕ್ತರು

ಛಾಯಾಂಕಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ