ಬೊಂಬೆಲಾ ದೇವಿ ಲೈಶ್ರಾಮ್

ಭಾರತೀಯ ಬಿಲ್ಲುಗಾರ್ತಿ

ಬೊಂಬೆಲಾ ದೇವಿ ಲೈಶ್ರಾಮ್ (ಜನನ: ೨೨ ಫೆಬ್ರವರಿ ೧೯೮೫ ರಲ್ಲಿ ಇಂಫಾಲ)[೧] ರವರು ೨೦೦೭ರಿಂದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ  ಭಾರತವನ್ನು ಪ್ರತಿನಿಧಿಸಿತ್ತಿರುವ ಭಾರತೀಯ ಬಿಲ್ಲುಗಾರ್ತಿ. ಪೂರ್ವ ಇಂಫಾಲ, ಮಣಿಪುರ್ ದಲ್ಲಿ ಹುಟ್ಟಿದ ಇವರು ೧೯೯೭ ರಲ್ಲಿ ರಾಷ್ತ್ರೀಯ ಸ್ಪರ್ಧೆಗಳಿಗೆ ಪಾದಾರ್ಪಣೆ ಮಾಡಿದರು .[೨]

ಬೊಂಬೆಲಾ ದೇವಿ ಲೈಶ್ರಾಮ್
ಬೊಂಬೆಲಾ ದೇವಿ ಲೈಶ್ರಾಮ್ ನೀಲಿ ಅಂಗಿಯಲ್ಲಿ
ವೈಯುಕ್ತಿಕ ಮಾಹಿತಿ
ಅಡ್ಡ ಹೆಸರು(ಗಳು)ಬಾಮ್
ರಾಷ್ಟ್ರಿಯ ತಂಡ ಭಾರತ
ಜನನ (1985-02-22) ೨೨ ಫೆಬ್ರವರಿ ೧೯೮೫ (ವಯಸ್ಸು ೩೯)
ಇಂಫಾಲ್ ಪೂರ್ವ, ಮಣಿಪುರ
ನಿವಾಸಇಂಫಾಲ, ಮಣಿಪುರ
Sport
ದೇಶಭಾರತ
ಕ್ರೀಡೆಬಿಲ್ಲುವಿದ್ಯೆ

೨೦೦೮ ಒಲಂಪಿಕ್ ಕ್ರೀಡಾಕೂಟದಲ್ಲಿ, ಮಹಿಳೆಯರ ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ತಂಡದ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಇವರು, ಡೋಲಾ ಬ್ಯಾನರ್ಜಿ ಮತ್ತು ಪ್ರಣೀತಾ ವರ್ದಿನೆನಿ ೬ನೇ ಪಟ್ಟ ಪಡೆದುಕೊಂಡಿದ್ದರು. ಇವರಿಗೆ ೧೬ ಸುತ್ತಿನಲ್ಲಿ ಬೈ ಸಿಕ್ಕಿತು, ಆದರೆ ಚೈನ ವಿರುದ್ದ ಕ್ವಾರ್ಟರ್ ಫೈನಲ್ ನಲ್ಲಿ ೨೦೬-೨೧೧ ಪಂದ್ಯ ಕಳೆದುಕೊಂಡರು. ಇವರು ಅರ್ಹತಾ ಸುತ್ತಿನಲ್ಲಿ ೨೨ ಸ್ಥಾನ ಪಡೆದಿದ್ದರು, ಆದರೆ ಪೋಲೆಂಡಿನ ವೋನಾ ಮರ್ಸಿನ್ಕಿವಿಕ್ಸ್ ವಿರುದ್ದ ೧೦೧-೧೦೩ ಅಂಕಗಳಿಂದ ಪಂದ್ಯ ಕಳೆದುಕೊಂಡರು.[೩]

 ಇವರು ೨೦೧೨ ಲಂಡನ್ ಒಲಿಂಪಿಕ್ಸ್ ನಲ್ಲಿ, ೩೦ ಜುಲೈ ೨೦೧೨ರಂದು  ಎರಡನೇ ಸುತ್ತಿನ ಮಹಿಳೆಯರ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ ೨-೬ ಅಂಕಗಳಿಂದ ಮೆಕ್ಸಿಕೋ ನ ಐಡಾ ರೋಮನ್ ಮೇಲೆ ಸೋತು ಸ್ಪರ್ಧೆಯಿಂದ ಹೊರನೆಡೆದರು.[೪] ತಂಡ ಪಂದ್ಯದಲ್ಲಿ, ಭಾರತ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್ ವಿರುದ್ದ ೨೧೧-೨೧೦ ಅಂಕಗಳಿಂದ ಪಂದ್ಯ ಕಳೆದುಕೊಂಡಿತ್ತು[೫]

ಇವರು  2016 ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ತಂಡದಲ್ಲಿದ್ದಾರೆ. [೬]  ಬೊಂಬೆಲಾ ದೇವಿ ಲೈಶ್ರಾಮ್, ದೀಪಿಕಾ ಕುಮಾರಿ ಮತ್ತು ಲಕ್ಷ್ಮಿರಾಣಿ ಮಾಜ್ಹಿ, ಯನ್ನು ಒಳಗೊಂಡ ಭಾರತೀಯ ಮಹಿಳಾ ಪುನರಾವರ್ತಿತ ತಂಡ  ಶ್ರೇಯಾಂಕದಲ್ಲಿ ಸುತ್ತಿನಲ್ಲಿ ೭ ನೇ ಸ್ಥಾನ ಪಡೆದಿದ್ದರು. ತಂಡ ೧೬ ನೇ ಸುತ್ತಿನಲ್ಲಿ ಕೊಲಂಬಿಯಾ ವಿರುದ್ದ ಗೆದ್ದು, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರಷ್ಯಾ ವಿರುದ್ದ ಸೋತಿತ್ತು. [೭]

ಬೊಂಬೆಲಾ ದೇವಿ ಲೈಶ್ರಾಮ್ ರವರು ರಿಯೋ ಒಲಿಂಪಿಕ್ಸ್ ೨೦೧೬ರಲ್ಲಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ೬೪ರ ಸುತ್ತಿನ ಪದ್ಯದಲಿ ಲಾರೆನ್ಸ್ ಬಲ್ದಾಪ್ ರವರನ್ನು ಎದುರಿಸಿದರು. ಅವರು ೬-೨ ರಿಂದ ಪಂದ್ಯ ಗೆದ್ದು ಮುಂದಿನ ಸುತ್ತಿಗೆ ಹೋದರು. ೩೨ರ ಸುತ್ತಿನಲ್ಲಿ ಬೊಂಬೆಲಾ ದೇವಿ ಚೀನೀ ತೈಪೆನಾ ಲಿನ್ ಶಿಹ್ ಜಿಯಾ ರವರನ್ನು ಎದುರಿಸಿದರು. ಅವರು ಈ ಪ್ಂದ್ಯವನ್ನು ಗೆದ್ದು ೧೬ರ ಸುತ್ತಿಗೆ ಪ್ರಗತಿ ಪದೆದರು.[೮] ಆದಾಗ್ಯೂ ಮೆಕ್ಸಿಕೋದ ಅಲೇಜಿಂದ್ರಾ ವೇಲೆನ್ಸಿಯಾ ಅವರನ್ನು ಸೋಲಿಸಲು ಆಗಲಿಲ್ಲ,ಇವರು ೧೬ರ ಸುತ್ತಿನಲ್ಲಿ ೨-೬ ರಿಂದ ಸೋಲನ್ನು ಒಪ್ಪಿಕೊಂಡರು..[೯]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ