ಬೈಜ್‍ನಾಥ್

ಬೈಜ್‍ನಾಥ್ ಭಾರತದ ಉತ್ತರಾಖಂಡ ರಾಜ್ಯದ ಕುಮಾವ್ಞೂ ವಿಭಾಗದ ಬಾಗೇಶ್ವರ್ ಜಿಲ್ಲೆಯ ಗೋಮತಿ ನದಿಯ ದಡದಲ್ಲಿರುವ ಒಂದು ಸಣ್ಣ ಪಟ್ಟಣ. ಈ ಸ್ಥಳವು ತನ್ನ ಪ್ರಾಚೀನ ದೇವಾಲಯಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.[೧] ಇವುಗಳನ್ನು ಭಾರತದ ಪುರಾತತ್ವ ಸರ್ವೇಕ್ಷಣೆಯು ರಾಷ್ಟ್ರೀಯ ಮಹತ್ವದ ಸ್ಮಾರಕಗಳಾಗಿ ಗುರುತಿಸಿದೆ.[೨] ಭಾರತ ಸರ್ಕಾರದ ಸ್ವದೇಶ ದರ್ಶನ ಯೋಜನೆಯಡಿ ಕುಮಾವೂನ್‌ನಲ್ಲಿರುವ 'ಶಿವ ಹೆರಿಟೇಜ್ ಸರ್ಕ್ಯೂಟ್'ನಿಂದ ಜೋಡಿಸಲ್ಪಡುವ ನಾಲ್ಕು ಸ್ಥಳಗಳಲ್ಲಿ[೩] ಬೈಜ್‍ನಾಥ್ ಆಯ್ಕೆಯಾಗಿದೆ.[೪][೫]

ಆಗ ಕಾರ್ತಿಕೇಯಪುರ ಎಂದು ಕರೆಯಲ್ಪಡುತ್ತಿದ್ದ ಬೈಜ್‍ನಾಥ್ ಕತ್ಯೂರಿ ರಾಜರ ಪೀಠವಾಗಿತ್ತು.

ಭಾರತದ ಪುರಾತತ್ವ ಸರ್ವೇಕ್ಷಣೆಯು ದೇವಾಲಯದ ಸ್ಥಳದಲ್ಲಿ ಇಟ್ಟಿರುವ ವಿವರಣಾತ್ಮಕ ಫಲಕ. ಕತ್ಯೂರಿ ರಾಜರು 9 ಮತ್ತು 12 ನೇ ಶತಮಾನದ ನಡುವೆ ಈ ದೇವಾಲಯಗಳನ್ನು ನಿರ್ಮಿಸಿದರು ಎಂದು ಈ ಫಲಕವು ಚಿತ್ರಿಸುತ್ತದೆ.
ಬೈಜ್‍ನಾಥ್ ಸರೋವರ
ಬೈಜ್‍ನಾಥ್‍ನ ದೇವಾಲಯಗಳು

ಸುಮಾರು ಕ್ರಿ.ಶ 1150 ರಲ್ಲಿ ಕುಮಾವ್ಞೂದ ಕತ್ಯೂರಿ ರಾಜನು ನಿರ್ಮಿಸಿದನೆಂದು ಹೇಳಲಾಗುವ ನದಿಯ ದಡದಲ್ಲಿ ಪ್ರಸಿದ್ಧ ಬೈಜ್‍ನಾಥ್ (ಶಿವ) ದೇವಾಲಯವಿದೆ. ಇದು 12 ಮತ್ತು 13 ನೇ ಶತಮಾನದಲ್ಲಿ ಉತ್ತರಾಂಚಲವನ್ನು ಆಳಿದ ಕತ್ಯೂರಿ ರಾಜವಂಶದ ರಾಜಧಾನಿಯಾಗಿತ್ತು. ಹಿಂದೂ ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿಯರು ಗೋಮತಿ ಮತ್ತು ಗರೂರ್ ಗಂಗಾದ ಸಂಗಮದಲ್ಲಿ ವಿವಾಹವಾದರು. ಹಾಗಾಗಿ ಇದು ಮಹತ್ವ ಹೊಂದಿದೆ. ಈ ದೇವಾಲಯ ಸಂಕೀರ್ಣದಲ್ಲಿ ಶಿವ, ಗಣೇಶ, ಪಾರ್ವತಿ, ಚಂಡಿಕಾ, ಕುಬೇರ, ಸೂರ್ಯ ಮತ್ತು ಬ್ರಹ್ಮನ ವಿಗ್ರಹಗಳಿವೆ. ಈ ದೇವಾಲಯಗಳನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಪಾರ್ವತಿಯ ಸುಂದರವಾದ ವಿಗ್ರಹವನ್ನು ಹೊಂದಿರುವ ಮುಖ್ಯ ದೇವಾಲಯವನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ.

ಛಾಯಾಂಕಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ