ಪ್ರಸಿದ್ಧಿ

ಪ್ರಸಿದ್ಧಿ ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅಥವಾ, ಕೆಲವೊಮ್ಮೆ ಪ್ರಾಣಿಗಳಿಗೆ ಸಮೂಹ ಮಾಧ್ಯಮಗಳು ನೀಡುವ ಕೀರ್ತಿ/ಖ್ಯಾತಿ ಮತ್ತು ಸಾರ್ವಜನಿಕ ಮರ್ಯಾದೆಯನ್ನು ಸೂಚಿಸುತ್ತದೆ, ಆದರೆ ಈ ಪದವನ್ನು ಸಾಮಾನ್ಯವಾಗಿ ಕೀರ್ತಿ ಮತ್ತು ಮರ್ಯಾದೆಯಂತಹ ಸ್ಥಾನಮಾನವನ್ನು ಪಡೆಯುವ ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅನ್ವಯಿಸಲಾಗುತ್ತದೆ. ಪ್ರಸಿದ್ಧಿಯ ಸ್ಥಾನಮಾನವನ್ನು ಹಲವುವೇಳೆ ಸಂಪತ್ತಿನೊಂದಿಗೆ ಸಂಬಂಧಿಸಲಾಗುತ್ತದೆ, ಮತ್ತು ಕೀರ್ತಿಯು ಹಲವುವೇಳೆ ಆದಾಯ ಗಳಿಸುವ ಅವಕಾಶಗಳನ್ನು ಒದಗಿಸುತ್ತದೆ.

ಅಮೇರಿಕಾದ ನಟ ಹಾಗೂ ಚಿತ್ರ ನಿರ್ಮಾಪಕರಾದ ಲಿಯೊನಾರ್ಡೊ ಡಿಕ್ಯಾಪ್ರಿಯೊ ಒಬ್ಬ ಪ್ರಸಿದ್ಧ ವ್ಯಕ್ತಿ

ಕ್ರೀಡೆ ಮತ್ತು ಮನರಂಜನೆಯಲ್ಲಿನ ಯಶಸ್ವಿ ವೃತ್ತಿಜೀವನಗಳನ್ನು ಸಾಮಾನ್ಯವಾಗಿ ಪ್ರಸಿದ್ಧಿಯ ಸ್ಥಾನಮಾನದೊಂದಿಗೆ ಸಂಬಂಧಿಸಲಾಗುತ್ತದೆ,[೧] ಹಲವುವೇಳೆ ರಾಜಕೀಯ ನಾಯಕರು ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ. ಅವರ ಜೀವನಶೈಲಿ, ಸಂಪತ್ತು, ಅಥವಾ ವಿವಾದಾತ್ಮಕ ಕ್ರಿಯೆಗಳ ಮೇಲೆ ಮಾಧ್ಯಮಗಳ ಗಮನದಿಂದ, ಅಥವಾ ಒಬ್ಬ ಪ್ರಸಿದ್ಧ ವ್ಯಕ್ತಿಯೊಂದಿಗೆ ಅವರ ಸಂಬಂಧದಿಂದ ಜನರೂ ಪ್ರಸಿದ್ಧ ವ್ಯಕ್ತಿಗಳಾಗಬಹುದು.

ಜನರು ಅನೇಕ ರೀತಿಗಳಲ್ಲಿ ಪ್ರಸಿದ್ಧರಾಗಬಹುದು; ತಮ್ಮ ವೃತ್ತಿಗಳಿಂದ, ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಸಾಮೂಹಿಕ ಹತ್ಯೆಮಾಡಿದ ಮೇಲೆ, ಅಥವಾ ಸಂಪೂರ್ಣ ಆಕಸ್ಮಿಕದಿಂದ. "ಧಿಡೀರ್ ಪ್ರಸಿದ್ಧಿ" ಪದವು ಬಹಳ ಚಿಕ್ಕ ಅವಧಿಯಲ್ಲಿ ಪ್ರಸಿದ್ಧನಾಗುವ ವ್ಯಕ್ತಿಯನ್ನು ವರ್ಣಿಸುತ್ತದೆ. (ಮೋಸದ ಪ್ರಚಾರ ಅಥವಾ ಸಮೂಹ ಮಾಧ್ಯಮದ ಮೂಲಕ) ಸಣ್ಣ ಪ್ರಮಾಣದ ತಾತ್ಕಾಲಿಕ ಖ್ಯಾತಿಯನ್ನು ಸಾಧಿಸುವ ವ್ಯಕ್ತಿ "ಬಿ-ಗ್ರೇಡ್ ಸೆಲೆಬ್ರಿಟಿ" ಎಂಬ ಹಣೆಪಟ್ಟಿ ಪಡೆಯಬಹುದು. ಅನೇಕವೇಳೆ, ಈ ಸಾಮಾನ್ಯೀಕರಣವು ಮುಖ್ಯವಾಹಿನಿ ಅಥವಾ ನಿರಂತರ ಖ್ಯಾತಿ ಪಡೆಯಲಾಗದ ಆದರೆ ಅದನ್ನು ವಿಸ್ತರಿಸಲು ಅಥವಾ ದುರ್ಬಳಕೆ ಮಾಡಲು ಪ್ರಯತ್ನಿಸುವ ವ್ಯಕ್ತಿಗೆ ವಿಸ್ತರಿಸುತ್ತದೆ.

ಸಹಜವಾಗಿ, ಒಬ್ಬ ವ್ಯಕ್ತಿ ಪ್ರಸಿದ್ಧನಾಗುವುದಕ್ಕೆ ಯಶಸ್ಸಿನ ಯಾವುದೇ ಖಾತರಿಗಳಿಲ್ಲ. ಪ್ರಸಿದ್ಧ ವ್ಯಕ್ತಿಗಳು ಅನೇಕ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುತ್ತಾರಾದರೂ, ಬಹುತೇಕ ಪ್ರಸಿದ್ಧ ವ್ಯಕ್ತಿಗಳನ್ನು ವಿಶಿಷ್ಟವಾಗಿ ಕ್ರೀಡಾ ಮತ್ತು ನರಂಜನೆ ಕ್ಷೇತ್ರಗಳೊಂದಿಗೆ ಸಂಬಂಧಿಸಲಾಗುತ್ತದೆ ಅಥವಾ ಒಬ್ಬ ವ್ಯಕ್ತಿಯು ವಾಣಿಜ್ಯಿಕ ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಪಡೆದು ಸಮೂಹ ಮಾಧ್ಯಮದಲ್ಲಿ ಸಾಮಾನ್ಯವಾಗಿ ಗುರುತಿಸಲ್ಪಡುವ ಪ್ರಸಿದ್ಧ ವ್ಯಕ್ತಿಯಾಗಿರಬಹುದು. ಮೋಹಕ ಲಾವಣ್ಯ ಮತ್ತು ಸಂಪತ್ತು ಕೇವಲ ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಖಂಡಿತವಾಗಿ ಪಾತ್ರವಹಿಸಬಹುದಾದರೂ, ಸಂಗೀತ, ಚಲನಚಿತ್ರ, ಟಿವಿ, ರೇಡಿಯೊ, ಮಾಡಲಿಂಗ್, ಹಾಸ್ಯ, ಸಾಹಿತ್ಯ ಇತ್ಯಾದಿಗಳಂತಹ ಕ್ರೀಡಾ ಮತ್ತು ಮನೊರಂಜನಾ ಕ್ಷೇತ್ರಗಳಲ್ಲಿನ ಬಹುತೇಕ ವ್ಯಕ್ತಿಗಳು ಅಪರಿಚಿತವಾಗಿರುವಂತೆ ಬದುಕುತ್ತಾರೆ ಮತ್ತು ಕೇವಲ ಕಡಿಮೆ ಪ್ರತಿಶತ ಜನರು ಖ್ಯಾತಿ ಮತ್ತು ಅದೃಷ್ಟವನ್ನು ಸಾಧಿಸುತ್ತಾರೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ