ಪ್ರಮೀಳಾ ಜೋಷಾಯ್


ಪ್ರಮೀಳಾ ಜೋಷಾಯ್ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ. ನಾಯಕಿಯಾಗಿ, ಹಾಸ್ಯ ಮತ್ತು ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಚಿನ್ನಾ ನಿನ್ನ ಮುದ್ದಾಡುವೆ(೧೯೭೭), ದೇವರೆ ದಿಕ್ಕು(೧೯೭೭), ಸಂಗೀತ(೧೯೮೧), ಆನಂದಸಾಗರ(೧೯೮೩), ತಾಯಿಯ ಆಸೆ(೧೯೮೮), ಮೊಮ್ಮಗ(೧೯೯೭) ಮತ್ತು ತಾಯಿ(೨೦೦೮) ಚಿತ್ರಗಳಲ್ಲಿನ ತಮ್ಮ ಪ್ರಬುದ್ಧ ಅಭಿನಯದಿಂದ ಕನ್ನಡ ಚಿತ್ರರಸಿಕರ ನೆನಪಿನ ಪುಟಗಳಲ್ಲಿ ಸ್ಥಾನ ಪಡೆದಿರುವ ನಟಿ. ಹಾಸ್ಯ, ಗಂಭೀರ, ಭಾವನಾತ್ಮಕ ಹೀಗೆ ಯಾವುದೇ ಪಾತ್ರವಾದರೂ ಜೀವ ತುಂಬ ಬಲ್ಲ ಸಮರ್ಥ ನಟಿ. ವಾಣಿಜ್ಯಿಕ ಚಿತ್ರಗಳೊಂದಿಗೆ ಹೊಸ ಅಲೆಯ ಚಿತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಅಪರೂಪದ ಕಲಾವಿದೆ [೧][೨].

ಪ್ರಮೀಳಾ ಜೋಷಾಯ್
ಜನನ
ಪುಷ್ಪಾ ತೆರೆಸಾ

ಹೆಗ್ಗಡದೇವನಕೋಟೆ, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
ವೃತ್ತಿ(ಗಳು)ನಟಿ, ನಿರ್ಮಾಪಕಿ
Years active೧೯೭೨-ಪ್ರಸ್ತುತ
ಸಂಗಾತಿಸುಂದರ್ ರಾಜ್

ಆರಂಭಿಕ ಜೀವನ

ಪ್ರಮೀಳಾ ಜೋಷಾಯ್ ಅವರ ಮೂಲ ಹೆಸರು ಪುಷ್ಪಾ ತೆರೆಸಾ. ಹೆಗ್ಗಡದೇವನಕೋಟೆಯ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಶ್ಯಾಮ್ ಉಮಲ್ ಜೋಷಾಯ್ ಮತ್ತು ಜಯಮ್ಮ ಜೋಷಾಯ್ ದಂಪತಿಯ ಮೂರನೆ ಮಗುವಾಗಿ ಜನಿಸಿದ ಇವರಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಚಿಕ್ಕಂದಿನಲ್ಲಿ ಕ್ಯಾಲೆಂಡರಿನಲ್ಲಿದ್ದ ಪ್ರಖ್ಯಾತ ಅಭಿನೇತ್ರಿ ಭಾರತಿ ಅವರ ಭಾವಚಿತ್ರವನ್ನು ನೋಡಿ ನಟಿಯಾಗಬೇಕೆಂದು ಕನಸು ಕಂಡಿದ್ದರು. ೧೯೭೨ರಲ್ಲಿ ತೆರೆಕಂಡ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ನೋಡಲೆಂದು ಹೋಗಿದ್ದವರು ನಿರ್ದೇಶಕ ಸಿದ್ಧಲಿಂಗಯ್ಯ ಅವರ ಒತ್ತಾಯಕ್ಕೆ ಮಣಿದು ಚಿತ್ರದ ಸನ್ನಿವೇಶವೊಂದರಲ್ಲಿ ಅಭಿನಯಿಸಿದ್ದರು. ಶಾಲಾದಿನಗಳಲ್ಲಿ ನಟಿಸಿದ ನಾಟಕವೊಂದರ ಅಭಿನಯಕ್ಕೆ ಪತ್ರಿಕೆಗಳಿಂದ ಗಳಿಸಿದ ಪ್ರಶಂಸೆ ನಟಿಯಾಗಬೇಕೆಂದು ಕನಸು ಕಂಡಿದ್ದ ಪ್ರಮೀಳಾಗೆ ಇನ್ನಷ್ಟು ಉತ್ತೇಜನ ನೀಡಿತ್ತು. ಮಗಳು ನಟಿಯಾಗುವುದನ್ನು ಆಕ್ಷೇಪಿಸಿದ ತಂದೆ ತಾಯಿಯನ್ನು ಒಪ್ಪಿಸಿ ಚಿತ್ರರಂಗಕ್ಕೆ ಬಂದ ಇವರು ಸಹಧರ್ಮಿಣಿ(೧೯೭೩) ಸೇರಿದಂತೆ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವೃತ್ತಿ ಜೀವನ

ಬೆಳ್ಳಿತೆರೆ

೧೯೭೭ರಲ್ಲಿ ತೆರೆಕಂಡ ಹರಕೆ ಎಂಬ ಹೊಸ ಅಲೆಯ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಪ್ರಮೀಳಾ ದೇವದಾಸಿ ಪದ್ಧತಿಯನ್ನಾಧರಿಸಿ ಚಿತ್ರಿತವಾಗಿದ್ದ ಈ ಚಿತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಚಿತ್ರ ಚಿನ್ನಾ ನಿನ್ನ ಮುದ್ದಾಡುವೆ(೧೯೭೭). ಮೇರುನಟ ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ಪತ್ನಿಯನ್ನು ಕಳೆದುಕೊಂಡ ನಾಯಕನ ಎರಡನೆ ಪತ್ನಿಯಾಗಿ, ತನ್ನನ್ನು ದ್ವೇಷಿಸುವ ಪತಿಯ ಮೊದಲ ಪತ್ನಿಯ ಮಗುವನ್ನು ಪ್ರೀತಿಯಿಂದ ಗೆಲ್ಲುವ ಮಮತಾಮಯಿ ತಾಯಿಯಾಗಿ ಶ್ಲಾಘನೀಯ ಅಭಿನಯ ನೀಡಿದ ಪ್ರಮೀಳಾಗೆ ನಾಯಕಿಯ ಪಾತ್ರಕ್ಕೆ ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು. ದೇವರೆ ದಿಕ್ಕು(೧೯೭೭), ಅನುಬಂಧ(೧೯೭೭) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಜನಪ್ರಿಯತೆ ಗಳಿಸಿ, ಬಳಿಕ ಪೋಷಕಪಾತ್ರಗಳಲ್ಲಿ ನಟಿಸಿದರು.[೩]. ಕೆಲವರ್ಷಗಳು ನಟನೆಯಿಂದ ದೂರವಿದ್ದ ಅವರು ಪುನಃ ಅಭಿನಯಿಸಲು ಆರಂಭಿಸಿದರು.[೪]. ಅವುಗಳಲ್ಲಿ ದ್ವಾರಕೀಶ್ ಅವರ ಪ್ರೀತಿ ಮಾಡು ತಮಾಷೆ ನೋಡು(೧೯೭೯) ಎಂಬ ಬಹುತಾರಾಗಣದ ಹಾಸ್ಯಮಯ ಚಿತ್ರದಲ್ಲಿ ದ್ವಾರಕೀಶ್ ಅವರಿಗೆ ಜೋಡಿಯಾಗಿ ಅಭಿನಯಿಸಿದರು. ಚಿತ್ರ ಯಶಸ್ವಿಯಾಯಿತು. ಆ ನಂತರದಲ್ಲಿ ವರದಕ್ಷಿಣೆ(೧೯೮೦), ದೊಡ್ಡ ಮನೆ ಎಸ್ಟೇಟ್(೧೯೮೦) ಮತ್ತು ಹದ್ದಿನ ಕಣ್ಣು(೧೯೮೦) ಮುಂತಾದ ವಿಭಿನ್ನ ಚಿತ್ರಗಳಲ್ಲಿ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದರು.[೩]. ಪ್ರಮೀಳಾ ಅಭಿನಯದ ಬಹುತೇಕ ಚಿತ್ರಗಳಲ್ಲಿ ಎರಡು ನಾಯಕಿಯರಿರುತ್ತಿದ್ದರು. ಬಂಗಾರದ ಮನೆ(೧೯೮೧), ಸಂಗೀತ(೧೯೮೧), ಸ್ನೇಹದ ಸಂಕೋಲೆ(೧೯೮೨) ಮತ್ತು ಗುಣ ನೋಡಿ ಹೆಣ್ಣು ಕೊಡು(೧೯೮೨) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು. ಈ ಪೈಕಿ ಚಂದ್ರಶೇಖರ ಕಂಬಾರ ನಿರ್ದೇಶನದ ಸಂಗೀತ ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು.

ಪ್ರಮೀಳಾ ಅವರ ಪ್ರತಿಭೆಯನ್ನು ಕೊಂಚ ಮಟ್ಟಿಗೆ ಸಮರ್ಥವಾಗಿ ಬಳಸಿಕೊಂಡ ಚಿತ್ರಗಳೆಂದರೆ ಕಣ್ಣು ತೆರೆಸಿದ ಹೆಣ್ಣು(೧೯೮೨) ಮತ್ತು ಆನಂದಸಾಗರ(೧೯೮೩). ಕಣ್ಣು ತೆರೆಸಿದ ಹೆಣ್ಣು ಚಿತ್ರದಲ್ಲಿ ಸ್ತ್ರೀಯರ ಬಗ್ಗೆ ನಿಕೃಷ್ಟ ಮನೋಭಾವನೆ ಹೊಂದಿರುವ ತಾನು ಮದುವೆಯಾಗುವ ಹುಡುಗನ ಕಣ್ಣು ತೆರೆಸುವ ಹುಡುಗಿಯಾಗಿ ಶಕ್ತ ಅಭಿನಯ ನೀಡಿದ ಪ್ರಮೀಳಾ ಆನಂದಸಾಗರ ಚಿತ್ರದ ಮೊದಲಾರ್ಧದಲ್ಲಿ ಪಾಶ್ಚಾತ್ಯ ಜೀವನ ಶೈಲಿಗೆ ಆಕರ್ಷಿತಳಾಗಿ ತನ್ನ ಕುಟುಂಬವನ್ನು ನಿರ್ಲಕ್ಷ್ಯಿಸಿದ ಉದ್ಯೋಗಸ್ಥ ಮಹಿಳೆಯಾಗಿ ಕೊನೆಯಾರ್ಧದಲ್ಲಿ ಭಾರತೀಯ ಕೌಟುಂಬಿಕ ಜೀವನದ ಮೌಲ್ಯವನ್ನು ಅರಿತು ಬಾಳುವ ಗೃಹಿಣಿಯ ಪಾತ್ರದಲ್ಲಿ ಪರಿಣಾಮಕಾರಿಯಾದ ಅಭಿನಯ ನೀಡಿದ್ದಾರೆ.

ಜಾರಿ ಬಿದ್ದ ಜಾಣ(೧೯೮೦) ಚಿತ್ರದಲ್ಲಿ ನಾಯಕನ ತಂಗಿಯಾಗಿ, ಭಕ್ತ ಸಿರಿಯಾಳ(೧೯೮೦) ಚಿತ್ರದಲ್ಲಿ ಉಡಾಫೆ ವ್ಯಕ್ತಿತ್ವದ ಹುಡುಗಿಯಾಗಿ, ಪಟ್ಟಣಕ್ಕೆ ಬಂದ ಪತ್ನಿಯರು(೧೯೮೦) ಚಿತ್ರದಲ್ಲಿ ದಿಟ್ಟ ಉಪಚಾರಿಕೆಯಾಗಿ, ಸುಖ ಸಂಸಾರಕ್ಕೆ ೧೨ ಸೂತ್ರಗಳು(೧೯೮೪) ಚಿತ್ರದಲ್ಲಿ ನಾಯಕನ ಸಂಸಾರದಲ್ಲಿ ಸಂಶಯಕ್ಕೆ ಕಾರಣಳಾಗುವ ನಾಯಕನ ಅಸಹಾಯಕ ಗೆಳತಿಯಾಗಿ ಹದವರಿತ ಅಭಿನಯ ನೀಡಿದ ಇವರು ತಾಯಿಯ ನುಡಿ(೧೯೮೩) ಮತ್ತು ಲಕ್ಷ್ಮಿ ಕಟಾಕ್ಷ(೧೯೮೫) ಚಿತ್ರಗಳಲ್ಲಿ ಋಣಾತ್ಮಕ ಛಾಯೆಯ ಪಾತ್ರಗಳಲ್ಲೂ ಮಿಂಚಿದ್ದಾರೆ[೧].

ಶಂಕರ್ ನಾಗ್ ಅವರೊಂದಿಗೆ ತಾಳಿಯ ಭಾಗ್ಯ(೧೯೮೪) ಮತ್ತು ಚರಣ್ ರಾಜ್ ಅವರೊಂದಿಗೆ ಪ್ರಳಯ ರುದ್ರ(೧೯೮೫) ಮತ್ತು ನಮ್ಮ ಊರ ದೇವತೆ(೧೯೮೬) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ಪ್ರಮೀಳಾ ಕ್ರಮೇಣ ಪೋಷಕ ಪಾತ್ರಗಳಿಗೆ ಸೀಮಿತರಾದರು.

ಅವನೇ ನನ್ನ ಗಂಡ(೧೯೮೯), ಹೂವು ಹಣ್ಣು(೧೯೯೩), ಪಟ್ಟಣಕ್ಕೆ ಬಂದ ಪುಟ್ಟ(೧೯೯೬), ನೀ ಮುಡಿದ ಮಲ್ಲಿಗೆ(೧೯೯೭) ಮತ್ತು ಮೊಮ್ಮಗ(೧೯೯೭) ಮುಂತಾದ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ. ಮೊಮ್ಮಗ ಚಿತ್ರದಲ್ಲಿ ಇನ್ನೋರ್ವ ಜನಪ್ರಿಯ ನಟಿ ಆಶಾಲತ ಅವರೊಂದಿಗೆ ನೀಡಿದ ಪೈಪೋಟಿಯ ಅಭಿನಯ ಗಮನಾರ್ಹವಾಗಿದೆ. ಈ ನಡುವೆ ತಾಯಿಯ ಆಸೆ(೧೯೮೮), ಅಬಲೆ(೧೯೮೮), ಪ್ರೀತಿಯೇ ನನ್ನ ದೈವ(೧೯೯೧), ಸೆರಗು(೧೯೯೨) ಮತ್ತು ಪ್ರತಿಫಲ(೧೯೯೩) ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರಭಾವಶಾಲಿ ಅಭಿನಯ ನೀಡಿದ್ದಾರೆ. ತಾಯಿಯ ಆಸೆ ಚಿತ್ರದಲ್ಲಿ ವಾತ್ಸಲ್ಯಮಯಿ ತಾಯಿಯಾಗಿ ಅಮೋಘ ಅಭಿನಯ ನೀಡಿದ ಪ್ರಮೀಳಾ ಪ್ರಖ್ಯಾತ ಹಿಂದಿ ನಟ ಪ್ರದೀಪ್ ಕುಮಾರ್ ಮತ್ತು ಕರ್ನಾಟಕ ಮೂಲದ ಹೆಸರಾಂತ ಮರಾಠಿ ನಟಿ ಜಯಶ್ರೀ ಗಡ್ಕರ್ ಮುಖ್ಯ ಭೂಮಿಕೆಯಲ್ಲಿದ್ದ ಅಬಲೆ ಚಿತ್ರದಲ್ಲಿ ದೇವದಾಸಿಯ ಆಂತರ್ಯವನ್ನು ಶಕ್ತವಾಗಿ ಅಭಿವ್ಯಕ್ತಿಸಿದ್ದಾರೆ.

ವಾಣಿಜ್ಯಿಕ ಚಿತ್ರಗಳ ಜೊತೆ ಜೊತೆಗೆ ಹೊಸ ಅಲೆಯ ಚಿತ್ರಗಳಲ್ಲೂ ಕ್ರಿಯಶೀಲರಾಗಿದ್ದ ಪ್ರಮೀಳಾ ಪ್ರಸಿದ್ಧ ಬರಹಗಾರ ಮತ್ತು ಚಿಂತಕ ಬರಗೂರು ರಾಮಚಂದ್ರಪ್ಪ ಅವರ ವಿಶಿಷ್ಠ ಚಿತ್ರಗಳಾದ ಬೆಂಕಿ(೧೯೮೨), ಸೂರ್ಯ(೧೯೮೭), ಕೋಟೆ(೧೯೮೮), ಹಗಲುವೇಷ(೨೦೦೦), ಕ್ಷಾಮ(೨೦೦೩)ಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿದ್ದಾರೆ.

ಪ್ರಮೀಳಾ ವೃತ್ತಿ ಬದುಕಿನ ಮಹೋನ್ನತ ಚಿತ್ರ ತಾಯಿ(೨೦೦೮). ರಷ್ಯನ್ ಲೇಖಕ ಮ್ಯಾಕ್ಸಿಂ ಗಾರ್ಗಿ ಅವರ ಮದರ್ ಎಂಬ ಶ್ರೇಷ್ಠ ಕಾದಂಬರಿಯನ್ನು ಆಧರಿಸಿದ ಈ ಚಿತ್ರವನ್ನು ಸ್ವತಃ ಪ್ರಮೀಳಾ ಅವರೇ ನಿರ್ಮಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿದ್ದು ಪ್ರಮೀಳಾ ಅವರ ನೆಚ್ಚಿನ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು. ಕಾರ್ಮಿಕರ ಪರ ಹೋರಾಟದಲ್ಲಿ ಅಧಿಕಾರಶಾಹಿತ್ವದ ಷಡ್ಯಂತ್ರಕ್ಕೆ ಬಲಿಯಾಗಿ ಜೈಲು ಸೇರುವ ಮಗನ ಬಿಡುಗಡೆಗಾಗಿ ಹಂಬಲಿಸುವ, ಮಗ ಬಿಡುಗಡೆಯಾಗದಿದ್ದಾಗ ಹೋರಾಟವನ್ನು ಮೌನವಾಗಿ ಮುಂದುವರೆಸಿ ಕಾರ್ಮಿಕ ವರ್ಗದ ಜೀವನ ಸುಧಾರಣೆಗೆ ಕಾರಣವಾಗುವ ತಾಯವ್ವನ ಅಂತರಂಗವನ್ನು ತಮ್ಮ ಹೃದಯಸ್ಪರ್ಶಿ ಭಾವಾಭಿನಯ ಮತ್ತು ಹದವರಿತ ಸಂಭಾಷಣಾ ಶೈಲಿಯಿಂದ ಮನೋಜ್ಞವಾಗಿ ಅಭಿವ್ಯಕ್ತಿಸಿದ್ದಾರೆ[೫].

ತಮ್ಮ ಸುಧೀರ್ಘ ವೃತ್ತಿ ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪ್ರಮೀಳಾ ವಿಷ್ಣುವರ್ಧನ್, ರಾಜೇಶ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ಅಶೋಕ್, ಜೈಜಗದೀಶ್ ಮತ್ತು ಶ್ರೀನಿವಾಸಮೂರ್ತಿಯವರಂತಹ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಎಂ.ಆರ್.ವಿಠಲ್, ಎ.ವಿ.ಶೇಷಗಿರಿ ರಾವ್ ಮತ್ತು ಬರಗೂರು ರಾಮಚಂದ್ರಪ್ಪರಂತಹ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಕಿರುತೆರೆ

ಕನ್ನಡ ಚಲನಚಿತ್ರಗಳಲ್ಲಿ ಉತ್ತಮ ಅವಕಾಶಗಳು ಕಡಿಮೆಯಾದಾಗ ಕಿರುತೆರೆ ಪ್ರವೇಶಿಸಿದ ಪ್ರಮೀಳಾ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತಿರುಗುಬಾಣ, ಭಾಗ್ಯಚಕ್ರ, ಆಸೆಗಳು ಮತ್ತು ಸ್ಪಂದನ ಇವರು ಅಭಿನಯಿಸಿದ ಪ್ರಮುಖ ಧಾರಾವಾಹಿಗಳು.

ವೈಯಕ್ತಿಕ ಜೀವನ

ಕನ್ನಡ ಚಲನಚಿತ್ರ ಮತ್ತು ರಂಗ ನಟ ಸುಂದರ್ ರಾಜ್ ಅವರನ್ನು ಪ್ರೀತಿಸಿ ಮದುವೆಯಾದ ಪ್ರಮೀಳಾ ಅವರ ಒಬ್ಬಳೇ ಮಗಳು, ನಟಿ ಮೇಘನ ರಾಜ್.

ಪ್ರಶಸ್ತಿ/ಪುರಸ್ಕಾರ

  • ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ - ಸಂಗೀತಾ(೧೯೮೨)
  • ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರಪ್ರಶಸ್ತಿ - ತಾಯಿ(೨೦೦೫)

ಚಿತ್ರಗಳ ಪಟ್ಟಿ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೭೬ಕನಸು ನನಸುಅಮೃತಂಶ್ರೀನಾಥ್, ಮಂಜುಳಾ
೧೯೭೭ತಾಯಿಗಿಂತ ದೇವರಿಲ್ಲವೈ.ಆರ್.ಸ್ವಾಮಿಜಯಂತಿ, ಶ್ರೀನಾಥ್, ಮಂಜುಳಾ
೧೯೭೭ಚಿನ್ನಾ ನಿನ್ನ ಮುದ್ದಾಡುವೆಎ.ಎಂ.ಸಮೀಯುಲ್ಲಾವಿಷ್ಣುವರ್ಧನ್, ಜಯಂತಿ
೧೯೭೭ದೇವರೆ ದಿಕ್ಕುಬಸವರಾಜ್ ಕೆಸ್ತೂರ್ಭಾರತಿ, ರಾಮ್ ಗೋಪಾಲ್, ಜಯಸಿಂಹ
೧೯೭೭ಸಹೋದರರ ಸವಾಲ್ಕೆ.ಎಸ್.ಆರ್.ದಾಸ್ವಿಷ್ಣುವರ್ಧನ್, ರಜನೀಕಾಂತ್, ಕವಿತಾ, ಭವಾನಿ
೧೯೭೭ಹರಕೆನಾಗೇಶ್ರೂಪೇಶ್ ಕುಮಾರ್
೧೯೭೮ತಪ್ಪಿದ ತಾಳಕೆ.ಬಾಲಚಂದರ್ರಜನೀಕಾಂತ್, ಸರಿತಾ, ಕಮಲ್ ಹಾಸನ್
೧೯೭೯ಅತ್ತೆಗೆ ತಕ್ಕ ಸೊಸೆವೈ.ಆರ್.ಸ್ವಾಮಿಮಾನು, ರೇಖಾ ರಾವ್, ಗಂಗಾಧರ್, ಶ್ರೀಲಲಿತ
೧೯೭೯ನಾನಿರುವುದೆ ನಿನಗಾಗಿಎ.ವಿ.ಶೇಷಗಿರಿ ರಾವ್ವಿಷ್ಣುವರ್ಧನ್, ಆರತಿ, ದೀಪಾ
೧೯೭೯ಪ್ರೀತಿ ಮಾಡು ತಮಾಷೆ ನೋಡುಸಿ.ವಿ.ರಾಜೇಂದ್ರನ್ಶ್ರೀನಾಥ್, ಶಂಕರ್ ನಾಗ್, ದ್ವಾರಕೀಶ್, ಮಂಜುಳಾ, ಪದ್ಮಪ್ರಿಯ
೧೯೭೯ವಿಜಯ್ ವಿಕ್ರಮ್ವಿ.ಸೋಮಶೇಖರ್ವಿಷ್ಣುವರ್ಧನ್, ಜಯಂತಿ
೧೯೮೦ಕಪ್ಪುಕೊಳನಾಗೇಶ್ಅಶೋಕ್, ಜಯಮಾಲ
೧೯೮೦ಜಾರಿ ಬಿದ್ದ ಜಾಣವೈ.ಆರ್.ಸ್ವಾಮಿಲೋಕೇಶ್, ಜಯಂತಿ, ಶ್ರೀನಿವಾಸಮೂರ್ತಿ, ಅಶೋಕ್, ರೇಖಾ ರಾವ್
೧೯೮೦ದೊಡ್ಡ ಮನೆ ಎಸ್ಟೇಟ್ಸಿ.ಚಂದ್ರಶೇಖರ್ಮಾನು, ಶ್ರೀಲಲಿತ
೧೯೮೦ಪಟ್ಟಣಕ್ಕೆ ಬಂದ ಪತ್ನಿಯರುಎ.ವಿ.ಶೇಷಗಿರಿ ರಾವ್ಶ್ರೀನಾಥ್, ಮಂಜುಳಾ, ಲೋಕೇಶ್, ಪದ್ಮಪ್ರಿಯ
೧೯೮೦ಬಂಗಾರದ ಜಿಂಕೆನಾಗಾಭರಣವಿಷ್ಣುವರ್ಧನ್, ಭಾರತಿ, ಆರತಿ
೧೯೮೦ಮೂಗನ ಸೇಡುಬಿ.ಸುಬ್ಬರಾವ್ಶಂಕರ್ ನಾಗ್, ಮಂಜುಳಾ
೧೯೮೦ವರದಕ್ಷಿಣೆಎಂ.ಆರ್.ವಿಠಲ್ಅಶೋಕ್, ಹೇಮಾ ಚೌಧರಿ
೧೯೮೦ಹದ್ದಿನ ಕಣ್ಣುಎ.ವಿ.ಶೇಷಗಿರಿ ರಾವ್ಶ್ರೀನಾಥ್, ಮಂಜುಳಾ, ಶಂಕರ್ ನಾಗ್, ಲೋಕೇಶ್
೧೯೮೧ಬಂಗಾರದ ಮನೆಬಸವರಾಜ್ ಕೆಸ್ತೂರ್ಶ್ರೀನಾಥ್, ಅಶೋಕ್, ರೋಜಾರಮಣಿ
೧೯೮೧ಸಂಗೀತಚಂದ್ರಶೇಖರ ಕಂಬಾರಲೋಕೇಶ್, ಜಯಮಾಲ, ಮಾನು
೧೯೮೨ಕಣ್ಣು ತೆರೆಸಿದ ಹೆಣ್ಣುಕೆ.ಮಣಿಮುರುಗನ್ಆರತಿ, ಅಶೋಕ್, ಟೈಗರ್ ಪ್ರಭಾಕರ್
೧೯೮೨ಕಳಸಾಪುರದ ಹುಡುಗರುವಿ.ಎಲ್.ಆಚಾರ್ಯಎಂ.ವಿ.ವಾಸುದೇವ ರಾವ್
೧೯೮೨ಗುಣ ನೋಡಿ ಹೆಣ್ಣು ಕೊಡುಎ.ವಿ.ಶೇಷಗಿರಿ ರಾವ್ಶ್ರೀನಾಥ್, ಮಂಜುಳಾ, ಜೈಜಗದೀಶ್
೧೯೮೨ಸ್ನೇಹದ ಸಂಕೋಲೆಎ.ಕಾಶಿಲಿಂಗಂಶ್ರೀನಾಥ್, ಮಂಜುಳಾ, ಅಂಬರೀಶ್
೧೯೮೩ಆನಂದಸಾಗರಆರ್.ತ್ಯಾಗರಾಜನ್ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಆರತಿ, ಜೈಜಗದೀಶ್
೧೯೮೩ತಾಯಿಯ ನುಡಿಬಿ.ಸುಬ್ಬರಾವ್ಕಲ್ಯಾಣ್ ಕುಮಾರ್, ಆರತಿ
೧೯೮೩ದಂಪತಿಯರುಎಚ್.ಪಿ.ಪ್ರಕಾಶ್ಟಿ.ಜನಾರ್ಧನ್
೧೯೮೩ಬ್ಯಾಂಕರ್ ಮಾರ್ಗಯ್ಯಟಿ.ಎಸ್,ನಾಗಾಭರಣಲೋಕೇಶ್, ಜಯಂತಿ, ಸುಂದರ್ ರಾಜ್
೧೯೮೩ಮನೆಗೆ ಬಂದ ಮಹಾಲಕ್ಷ್ಮಿಗೀತಪ್ರಿಯಅಶೋಕ್, ಮಂಜುಳಾ, ಚರಣ್ ರಾಜ್, ಪ್ರಭಾ
೧೯೮೩ಮುತ್ತೈದೆ ಭಾಗ್ಯಎನ್.ಚಂದ್ರಶೇಖರ್ ಶರ್ಮಟೈಗರ್ ಪ್ರಭಾಕರ್, ಆರತಿ
೧೯೮೩ಸಮರ್ಪಣೆಭಾರ್ಗವಆರತಿ, ರಾಜೀವ್, ಜೈಜಗದೀಶ್
೧೯೮೩ಸಿಂಹಾಸನಸಿ.ಆರ್.ಸಿಂಹಅನಂತ್ ನಾಗ್, ಟೈಗರ್ ಪ್ರಭಾಕರ್
೧೯೮೪ತಾಳಿಯ ಭಾಗ್ಯವಿಜಯ್ಶಂಕರ್ ನಾಗ್, ಲಕ್ಷ್ಮಿ
೧೯೮೪ಪ್ರೇಮವೇ ಬಾಳಿನ ಬೆಳಕುಎ.ವಿ.ಶೇಷಗಿರಿ ರಾವ್ಅನಂತ್ ನಾಗ್, ಆರತಿ, ಜಯಮಾಲ
೧೯೮೪ಸುಖ ಸಂಸಾರಕ್ಕೆ ೧೨ ಸೂತ್ರಗಳುರಾಜಚಂದ್ರಅನಂತ್ ನಾಗ್, ಗಾಯತ್ರಿ, ಸಿ.ಆರ್.ಸಿಂಹ, ಶಕುಂತಲಾ
೧೯೮೪ಹುಲಿ ಹೆಜ್ಜೆಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ವಿಜಯಲಕ್ಷ್ಮಿ ಸಿಂಗ್
೧೯೮೫ಪ್ರಳಯ ರುದ್ರಪಿ.ಎಸ್.ಪ್ರಕಾಶ್ಟೈಗರ್ ಪ್ರಭಾಕರ್, ಜಯಮಾಲ, ಚರಣ್ ರಾಜ್
೧೯೮೫ಭಯಂಕರ ಭಸ್ಮಾಸುರಸಿ.ಎಸ್.ರಾವ್ಉದಯಕುಮಾರ್, ಅಶೋಕ್, ಮಂಜುಳಾ
೧೯೮೫ಲಕ್ಷ್ಮಿ ಕಟಾಕ್ಷಬಿ.ಸುಬ್ಬರಾವ್ಕಲ್ಯಾಣ್ ಕುಮಾರ್, ಆರತಿ, ರಾಜೀವ್, ಶ್ರೀನಿವಾಸಮೂರ್ತಿ
೧೯೮೬ಈ ಜೀವ ನಿನಗಾಗಿವಿ.ಸೋಮಶೇಖರ್ವಿಷ್ಣುವರ್ಧನ್, ಊರ್ವಶಿ
೧೯೮೬ತಾಳಿಯ ಆಣೆಡಿ.ರಾಜೇಂದ್ರ ಬಾಬುಭಾರತಿ, ಟೈಗರ್ ಪ್ರಭಾಕರ್
೧೯೮೬ನಮ್ಮ ಊರ ದೇವತೆರೇಣುಕಾ ಶರ್ಮಭಾರತಿ, ಚರಣ್ ರಾಜ್, ವಿನೋದ್ ಕುಮಾರ್, ಭವ್ಯ
೧೯೮೬ಮೃಗಾಲಯವಿ.ಸೋಮಶೇಖರ್ಅಂಬರೀಶ್, ಗೀತಾ
೧೯೮೭ಲಾರಿ ಡ್ರೈವರ್ಪೇರಾಲಶಂಕರ್ ನಾಗ್, ಭವ್ಯ
೧೯೮೭ಶುಭಮಿಲನಭಾರ್ಗವವಿಷ್ಣುವರ್ಧನ್, ಅಂಬಿಕಾ
೧೯೮೭ಸೂರ್ಯಬರಗೂರು ರಾಮಚಂದ್ರಪ್ಪಲೋಕೇಶ್, ರೋಹಿಣಿ ಹಟ್ಟಂಗಡಿ
೧೯೮೮ಕೋಟೆಬರಗೂರು ರಾಮಚಂದ್ರಪ್ಪತಾರಾ, ಸುಂದರ್ ರಾಜ್, ಮಾನು
೧೯೮೮ತಾಯಿಯ ಆಸೆರಾಜ್ ಕಿಶೋರ್ರಾಜೇಶ್, ವಿನೋದ್ ಆಳ್ವ, ಭವ್ಯ
೧೯೮೮ಭೂಮಿ ತಾಯಾಣೆರಾಜ್ ಕಿಶೋರ್ವಿನೋದ್ ಆಳ್ವ, ಭವ್ಯ
೧೯೮೮ಶ್ರೀ ವೆಂಕಟೇಶ್ವರ ಮಹಿಮೆಅನಿಲ್ ಬೈಂದೂರ್ಅನಂತ್ ನಾಗ್, ಸರಿತಾ
೧೯೮೯ಅದೇ ರಾಗ ಅದೇ ಹಾಡುಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಸೀಮಾ, ಶ್ರೀನಾಥ್
೧೯೮೯ಅವನೇ ನನ್ನ ಗಂಡಎಸ್.ಉಮೇಶ್-ಕೆ.ಪ್ರಭಾಕರ್ಕಾಶಿನಾಥ್, ಸುಧಾರಾಣಿ
೧೯೮೯ಮಾಧುರಿಕೆ.ವಿ.ಜಯರಾಮ್ಗೀತಾ, ವಿನೋದ್ ಆಳ್ವ
೧೯೯೦ಪ್ರಥಮ ಉಷಾಕಿರಣಸುರೇಶ್ ಹೆಬ್ಳೀಕರ್ಸುರೇಶ್ ಹೆಬ್ಳೀಕರ್, ಗೀತಾ, ಗಿರೀಶ್ ಕಾರ್ನಾಡ್
೧೯೯೦ಶ್ರೀ ಸತ್ಯನಾರಾಯಣ ಪೂಜಾಫಲಎನ್.ಎಸ್.ಧನ್ಂಜಯಕಲ್ಯಾಣ್ ಕುಮಾರ್, ರಾಜೇಶ್, ಜಯಂತಿ
೧೯೯೧ಪ್ರೀತಿಯೇ ನನ್ನ ದೈವಜೆ.ಅಮ್ಜದ್ಜೆ.ಅಮ್ಜದ್, ಕನ್ಯಾ, ಸುಂದರ್ ರಾಜ್
೧೯೯೨ಚಿತ್ರಲೇಖಾವಿ.ಸೋಮಶೇಖರ್ದೇವರಾಜ್, ಶ್ರುತಿ
೧೯೯೨ಸೆರಗುವಿ.ರಾಜ್ ಗೋಪಾಲ್ಧೀರೆಂದ್ರ ಗೋಪಾಲ್, ಜಯಮ್ಮ, ಉಮಾಶ್ರೀ
೧೯೯೩ಕೆಂಪಯ್ಯ ಐ.ಪಿ.ಎಸ್.ವಿ.ಸೋಮಶೇಖರ್ಶಶಿಕುಮಾರ್, ರಂಭಾ, ಶ್ರೀಶಾಂತಿ
೧೯೯೩ಚಿರಬಾಂಧವ್ಯಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಶುಭಾಶ್ರೀ
೧೯೯೩ಪ್ರತಿಫಲಎನ್.ಎಸ್.ಧನಂಜಯ, ಶಂಕರನ್ ನಾಯರ್ಶ್ರೀನಾಥ್, ಆರ್.ಎನ್.ಸುದರ್ಶನ್, ವಿನ್ಸೆಂಟ್, ವಿಜಯರಂಜಿನಿ
೧೯೯೩ಭಗವಾನ್ ಶ್ರೀ ಸಾಯಿಬಾಬಸಾಯಿಪ್ರಕಾಶ್ಸಾಯಿಪ್ರಕಾಶ್, ಪಂಢರೀಬಾಯಿ, ಮೈನಾವತಿ, ಸುಧಾರಾಣಿ, ತಾರಾ
೧೯೯೩ಹೂವು ಹಣ್ಣುಎಸ್.ವಿ.ರಾಜೇಂದ್ರ ಸಿಂಗ ಬಾಬುಲಕ್ಷ್ಮಿ
೧೯೯೪ಇಂಧ್ರನ ಗೆದ್ದ ನರೇಂದ್ರಸಾಯಿಪ್ರಕಾಶ್ಜಗ್ಗೇಶ್, ಶ್ರೀಶಾಂತಿ
೧೯೯೪ಕರುಳಿನ ಕೂಗುಡಿ.ರಾಜೇಂದ್ರ ಬಾಬುಟೈಗರ್ ಪ್ರಭಾಕರ್, ವಿನಯಾ ಪ್ರಸಾದ್
೧೯೯೪ಭೈರವರಾಜ್ ಕಿಶೋರ್ಜಗ್ಗೇಶ್, ನಂದಿನಿ ಸಿಂಗ್
೧೯೯೪ಹಾಲುಂಡ ತವರುಡಿ.ರಾಜೇಂದ್ರ ಬಾಬುವಿಷ್ಣುವರ್ಧನ್, ಸಿತಾರ
೧೯೯೪ಇಂಧ್ರನ ಗೆದ್ದ ನರೇಂದ್ರಸಾಯಿಪ್ರಕಾಶ್ಜಗ್ಗೇಶ್, ಶ್ರೀಶಾಂತಿ
೧೯೯೫ಕೊಟ್ರೇಶಿ ಕನಸುನಾಗತಿಹಳ್ಳಿ ಚಂದ್ರಶೇಖರ್ವಿಜಯ ರಾಘವೇಂದ್ರ, ಉಮಾಶ್ರೀ, ಕರಿ ಬಸವಯ್ಯ
೧೯೯೫ತುಂಬಿದ ಮನೆಎಸ್.ಉಮೇಶ್ವಿಷ್ಣುವರ್ಧನ್, ವಿನಯಾ ಪ್ರಸಾದ್
೧೯೯೫ಪೋಲಿಸ್ ಪವರ್ಯೋಗೀಶ್ ಹುಣಸೂರ್ದೇವರಾಜ್, ಪ್ರೇಮಾ
೧೯೯೫ಶುಭಲಗ್ನಕೃಷ್ಣಮೂರ್ತಿಶಶಿಕುಮಾರ್, ಶ್ರುತಿ, ನಂದಿನಿ ಸಿಂಗ್
೧೯೯೫ಹೊಸ ಬದುಕುಬಿ.ಪರಮೇಶ್ವರ್ಭವ್ಯ, ರಾಮಕೃಷ್ಣ, ರಾಮ್ ಕುಮಾರ್
೧೯೯೬ಅಣ್ಣಾವ್ರ ಮಕ್ಕಳುಫಣಿ ರಾಮಚಂದ್ರಶಿವರಾಜ್ ಕುಮಾರ್, ಮಹೇಶ್ವರಿ
೧೯೯೬ಪಟ್ಟಣಕ್ಕೆ ಬಂದ ಪುಟ್ಟಬಲರಾಮ್ಜಗ್ಗೇಶ್, ಶುಭಾಶ್ರೀ, ರಾಜೇಶ್, ಶ್ರೀನಾಥ್
೧೯೯೭ಅಕ್ಕರಾಜ್ ಕಿಶೋರ್ಮಾಲಾಶ್ರೀ, ಅರುಣ್ ಪಾಂಡ್ಯನ್, ಪ್ರಮೋದ್ ಚಕೃವರ್ತಿ
೧೯೯೭ಚೆಲುವರವಿಚಂದ್ರನ್ರವಿಚಂದ್ರನ್, ಗೌತಮಿ, ಮೀನಾ
೧೯೯೭ನೀ ಮುಡಿದ ಮಲ್ಲಿಗೆಕೂಡ್ಲು ರಾಮಕೃಷ್ಣರಾಮ್ ಕುಮಾರ್, ಕುಮಾರ್ ಗೋವಿಂದ್, ಭಾವನಾ, ನಿವೇದಿತಾ ಜೈನ್
೧೯೯೭ಮೊಮ್ಮಗರವಿಚಂದ್ರನ್ರವಿಚಂದ್ರನ್, ಮೀನಾ, ಉಮಾಶ್ರೀ, ಅಶಾಲತ
೧೯೯೭ಮಂಗಳ ಸೂತ್ರಸಿ.ಎ‍ಚ್.ಬಾಲಾಜಿ ಸಿಂಗ್ವಿಷ್ಣುವರ್ಧನ್, ವಿನಯಾ ಪ್ರಸಾದ್, ಪ್ರಿಯಾ ರಾಮನ್
೧೯೯೭ಲಕ್ಷ್ಮಿ ಮಹಾಲಕ್ಷ್ಮಿಯೋಗೀಶ್ ಹುಣಸೂರ್ಚಿಪ್ಪಿ, ಶ್ವೇತಾ, ಶಶಿಕುಮಾರ್, ಅಭಿಜಿತ್
೧೯೯೮ಜೈದೇವ್ಎಚ್.ವಾಸುದೇವ್ಜಗ್ಗೇಶ್, ಚಾರುಲತಾ, ಶ್ರೀನಾಥ್
೨೦೦೦ಅಸ್ತ್ರಆನಂದ್ ಪಿ.ರಾಜುದೇವರಾಜ್, ಬಿ.ಸಿ.ಪಾಟಿಲ್, ರಾಗಸುಧಾ
೨೦೦೦ನಾಗ ದೇವತೆಸಾಯಿಪ್ರಕಾಶ್ಸೌಂದರ್ಯ, ಸಾಯಿಕುಮಾರ್, ಪ್ರೇಮಾ
೨೦೦೦ನನ್ನವಳು ನನ್ನವಳುಎಸ್.ನಾರಾಯಣ್ಎಸ್.ನಾರಾಯಣ್, ಪ್ರೇಮಾ
೨೦೦೦ಹಗಲುವೇಷಬರಗೂರು ರಾಮಚಂದ್ರಪ್ಪಶಿವರಾಜ್ ಕುಮಾರ್, ರೇಷ್ಮಾ, ತಾರಾ
೨೦೦೧ಮಂಜುದ್ವಾರಕೀಶ್ಶರತ್ ಬಾಬು, ಪ್ರಕಾಶ್ ರಾಜ್
೨೦೦೧ವಿಶಾಲಾಕ್ಷಮ್ಮನ ಗಂಡರಾಜ್ ಕಿಶೋರ್ಎಸ್.ನಾರಾಯಣ್, ಅನು ಪ್ರಭಾಕರ್
೨೦೦೨ದಿಲ್ಸತ್ಯವಿನೋದ್ ಪ್ರಭಾಕರ್, ಶ್ರೀದೇವಿ ಬಳ್ಳಾರಿ
೨೦೦೨ಹತ್ತೂರ ಒಡೆಯಬಿ.ಸಿ.ಪಾಟಿಲ್ಬಿ.ಸಿ.ಪಾಟಿಲ್, ಸಾಂಘವಿ
೨೦೦೩ಒಂದಾಗೋಣ ಬಾಕೆ.ಆರ್.ಉದಯಶಂಕರ್ರವಿಚಂದ್ರನ್, ಶಿಲ್ಪಾ ಶೆಟ್ಟಿ
೨೦೦೩ಕ್ಷಾಮಬರಗೂರು ರಾಮಚಂದ್ರಪ್ಪಕುಮಾರ್ ಗೋವಿಂದ್, ಭಾವನಾ, ಸುಂದರ್ ರಾಜ್
೨೦೦೩ನೀನಂದ್ರೆ ಇಷ್ಟಬಿ.ಮಲ್ಲೇಶ್ದರ್ಶನ್, ಹರೀಶ್ ರಾಜ್ಮಾಳವಿಕಾ
೨೦೦೩ರೀ ಸ್ವಲ್ಪ ಬರ್ತೀರಮಹಮದ್ ಗೌಸ್ಶಶಿಕುಮಾರ್, ಕೌಸಲ್ಯ
೨೦೦೩ಸ್ವಾತಿ ಮುತ್ತುಡಿ.ರಾಜೇಂದ್ರ ಬಾಬುಸುದೀಪ್, ಮೀನಾ
೨೦೦೪ಆಪ್ತಮಿತ್ರಪಿ.ವಾಸುವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್ ಅರವಿಂದ್, ದ್ವಾರಕೀಶ್
೨೦೦೪ಪ್ರೀತಿ ನೀ ಇಲ್ಲದೆ ನಾ ಹೇಗಿರಲಿಈಶ್ವರ್ ಬಳೆಗುಂಡಿಸಿ.ಪಿ.ಯೋಗೇಶ್ವರ್, ಅನು ಪ್ರಭಾಕರ್
೨೦೦೪ಭಗತ್ಆನಂದ್ ಪಿ.ರಾಜುಸ್ವಪ್ನ, ಥ್ರಿಲ್ಲರ್ ಮಂಜು
೨೦೦೫ಅಣ್ಣ ತಂಗಿಸಾಯಿಪ್ರಕಾಶ್ಶಿವರಾಜ್ ಕುಮಾರ್, ರಾಧಿಕಾ
೨೦೦೫ಕಾಶಿಸಾಯಿಪ್ರಕಾಶ್ಸುದೀಪ್, ರಕ್ಷಿತಾ
೨೦೦೫ಮಹಾಸಾಧ್ವಿ ಮಲ್ಲಮ್ಮಯೋಗೀಶ್ ಹುಣಸೂರ್ಮೀನಾ, ಸಾಯಿಕುಮಾರ್, ಶ್ರೀಧರ್
೨೦೦೫ಲವ್ ಸ್ಟೋರಿಭಾರತಿ ಕಣ್ಣನ್ಮಯೂರ್ ಪಟೇಲ್, ತನು ರಾಯ್
೨೦೦೫ವರ್ಷಎಸ್.ನಾರಾಯಣ್ವಿಷ್ಣುವರ್ಧನ್, ಮಾನ್ಯ, ಅನು ಪ್ರಭಾಕರ್, ರಮೇಶ್ ಅರವಿಂದ್
೨೦೦೬ದೇಸಿನಿಖಿ ಮಂಜುಮಣಿ, ಅನನ್ಯ ಕಾಸರವಳ್ಳಿ
೨೦೦೬ಶಿಷ್ಯವಿ.ವಾಸುದೀಪಕ್, ಚೈತ್ರಾ ಹಳ್ಳಿಕೆರೆ
೨೦೦೬ಹೆತ್ತವರ ಕನಸುಸಾಯಿಪ್ರಕಾಶ್ಮಯೂರ್ ಪಟೇಲ್, ರಾಧಿಕಾ
೨೦೦೭ನಾನು ನೀನು ಜೋಡಿನಂಜುಂಡೇ ಗೌಡವಿಜಯ ರಾಘವೇಂದ್ರ, ಮಧುಮಿತಾ
೨೦೦೭ಶ್ರೀ ದಾನಮ್ಮ ದೇವಿಚಿಂದೋಡಿ ಬಂಗಾರೇಶ್ಅನು ಪ್ರಭಾಕರ್, ಶಿವಧ್ವಜ್
೨೦೦೮ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾಬಿ.ಎ.ಓಂಕಾರ್ಶ್ರೀನಿವಾಸಮೂರ್ತಿ, ಶ್ರೀಧರ್, ತಾರಾ
೨೦೦೮ತಾಯಿಬರಗೂರು ರಾಮಚಂದ್ರಪ್ಪಕುಮಾರ್ ಗೋವಿಂದ್, ಶ್ರೀನಿವಾಸಮೂರ್ತಿ
೨೦೦೮ನಾನು ಗಾಂಧಿನಂಜುಂಡೇ ಗೌಡಮಾಸ್ಟರ್ ಲಿಖಿತ್
೨೦೦೮ಮೂರನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯಸಾಯಿ ಸಾಗರ್ಅರ್ಜುನ್, ಅಶ್ವಿನಿ
೨೦೦೯ಚಮ್ಕಾಯ್ಸಿ ಚಿಂದಿ ಉಡಾಯ್ಸಿಮಹಮದ್ ಗೌಸ್ಕೋಮಲ್ ಕುಮಾರ್, ನಿಧಿ ಸುಬ್ಬಯ್ಯ
೨೦೦೯ಮ್ಯಾಡ್ ಲವ್ತೇಜರಾಮು, ರವೀನಾ
೨೦೧೦ನಾ ರಾಣಿ ನೀ ಮಹಾರಾಣಿಬಿ.ರಾಮಮೂರ್ತಿಪೂಜಾ ಗಾಂಧಿ, ಅಕ್ಷಯ್, ಶಾಶ್ವತ್
೨೦೧೦ಶಬರಿಬರಗೂರು ರಾಮಚಂದ್ರಪ್ಪಕಿಶೋರ್, ಹಂಸ, ಸುಂದರ್ ರಾಜ್

[೬]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ