ಪ್ರಧಾನ್ ಗುರುದತ್ತ

(೩೦-೦೫೧೯೩೮)

ಡಾ.ಪ್ರಧಾನ್ ಗುರುದತ್ತರು, [೧] ಬಹುಮುಖ ಪ್ರತಿಭೆಯ ಒಬ್ಬ ಅಪರೂಪದ ಕನ್ನಡ ಪ್ರಾಧ್ಯಾಪಕರು. ಬಹುಭಾಷಾಪಂಡಿದರು. ಮೈಸೂರು ವಿಶವಿದ್ಯಾಲಯದ ಡಾ ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೮ ರಲ್ಲಿ ವಿವೃತ್ತರಾದರು. ೧೫೦ ಕ್ಕೂ ಮಿಗಿಲಾದ ಪುಸ್ತಕ ಪ್ರಕಟಣೆ. ಸುಮಾರು ೨೫೦ ಸಂಶೋಧನ ಲೇಖನಗಳು ಇಂಗ್ಲೀಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದಾರೆ.

ಜನನ

ಪ್ರಧಾನ್, ಜನಿಸಿದ್ದು (೩೦-೦೫೧೯೩೮) ಚಿಕ್ಕಬಳ್ಳಾಪುರದಲ್ಲಿ. [೨]

ವಿದ್ಯಾಭ್ಯಾಸ

ಮೈಸೂರಿನಲ್ಲಿ ಉಚ್ಚ ಶಿಕ್ಷಣ; ಕನ್ನಡದಲ್ಲಿ ಎಂ.ಎ.ಆನರ್ಸ್; ಎಂ ಎ. ಅನುವಾದದಲ್ಲಿ; ಎಂ.ಫಿಲ್ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದರು. ಇವರು ಆರಿಸಿಕೊಂಡ ವಿಷಯ : 'ಕೃಷ್ಣ ಕಥೆಯ ಉಗಮ, ಮತ್ತು ವಿಕಾಸ'.ಡಿ.ಲಿಟ್.ಪದವಿ, ತುಮಕೂರು ವಿಶ್ವವಿದ್ಯಾಲಯದಿಂದ. ಗುರುದತ್ತರ ಮಾರ್ಗದರ್ಶನದಲ್ಲಿ ೭ ಪಿ.ಎಚ್.ಡಿ ವಿದ್ಯಾರ್ಥಿಗಳು, ೨೦ ವಿದ್ಯಾರ್ಥಿಗಳು, ಎಂ.ಫಿಲ್ ಕನ್ನಡ ಇಂಗ್ಲಿಷ್ ಸಂಸ್ಕೃತ, ಫ್ರೆಂಚ್ ತಮಳು ತೆಲುಗು ಮರಾಠಿ ಭಾಷೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಪರಿವಾರ

ಪ್ರದಾನ್ ಗುರುದತ್ತರ ಪರಿವಾರದಲ್ಲಿ, ಪತ್ನಿ ಸೀತಾಲಕ್ಷ್ಮಿ ಹಾಗೂ ಮಕ್ಕಳು : ಶ್ರೀಕಾಂತ, ಆರತಿ, ಅಶ್ವಿನಿ,

ಕೃತಿಗಳು

  1. ಅನುಶೀಲನಾ ವಿಮರ್ಶಾ ಗ್ರಂಥ. [೩]
  2. ದಾಟು ಕಾದಂಬರಿ ಇಂಗ್ಲಿಷಿಗೆ.
  3. ಸಾಕ್ಷಿ ಸಾರ್ಥ ಆವರಣ, ಕಾವಲು ಯಾನ ಉತ್ತರಾಖಂಡ ಮಂದ್ರ ಕಾದಂಬರಿ ಹಿಂದಿಗೆ ಒಟ್ಟು ೧೫೦ ಗ್ರಂಥಗಳ ರಚನೆ,ಭೈರಪ್ಪನವರ ಆತ್ಮ ವೃತ್ತಾಂತ, ಭಿತ್ತಿ ಗ್ರಂಥಗಳನ್ನು ಹಿಂದಿಗೆ ಭಾಶಹಾಂತರಿಸಿದರು.[೪]
  4. ತಮಿಳ್ ಕ್ಲಾಸಿಕಕಲ್ ತಿರುಕ್ಕೊರಳ್ ಕನ್ನಡಕ್ಕೆ ಅನುವಾದಿಸಿದರು.
  5. ಶ್ರೀಪಾದ ಜೋಶಿಯವರ ಮರಾಠಿಕೃತಿ, 'ಮೀ ಪಾಹಿಲೆಲ್ ಗಾಂಧಿ' ಕೃತಿಯನ್ನು ಕನ್ನಡಕ್ಕೆ 'ಗಾಂಧೀಜಿ ನಾನು ಕಂಡಂತೆ'
  6. 'ನವ ಕರ್ನಾಟಕ ಸಾಹಿತ್ಯ ಸಂಪದ' ಎಂಬ ಪುಸ್ತಕ ಮಾಲಿಕೆಯನ್ನು ಡಾ. ಹಾಮನಾಯಕ ಹಾಗೂ ಡಾ.ಪ್ರಧಾನ್ ಗುರುದತ್ತರು ನಿರ್ವಹಿಸುತ್ತಿದ್ದರು.

ಪ್ರಶಸ್ತಿ ಪುರಸ್ಕಾರಗಳು

  1. ೧೯೯೪ ರಲ್ಲಿ ಕೇಂದ್ರ ಸಾಹಿತ್ಯ ಅಕೇಡಮಿ ಪ್ರಶಸ್ತಿ, [೫]
  2. ೨೦೦೫ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,
  3. ಆರ್ಯಭಟ್ಟ ಹಾಗೂ ದೇಜಗೌ ಪ್ರಶಸ್ತಿಗಳು, ಮತ್ತು ಹಲವಾರು ಪ್ರಶಸ್ತಿಗಳು ಬಂದಿವೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ