ಪರಮ ವೀರ ಚಕ್ರ

ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.

ಪರಮವೀರ ಚಕ್ರದ ಪದಕ
ಪರಮವೀರ ಚಕ್ರದ ರಿಬ್ಬನ್

ಪರಮವೀರ ಚಕ್ರವನ್ನು ಜನವರಿ ೨೬ ೧೯೫೦ (ಗಣರಾಜ್ಯೋತ್ಸವ)ದಂದು ಆಗಸ್ಟ್ ೧೫ ೧೯೪೭ (ಭಾರತದ ಸ್ವಾತಂತ್ರ್ಯ ದಿನಾಚರಣೆ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ.

ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ. ಸ್ಸೆಕಂಡ್ ಲೆಫ್ಟಿನೆಂಟ್ ಅಥವಾ ಅದ್ಕ್ಕಿಂತ ಕಡಿಮೆ ಹುದ್ದೆಯಲ್ಲಿರುವ ಸೈನಿಕರಿಗೆ ಧನಯೋಗವೂ ಇದೆ. ಪುರಸ್ಕೃತರ ನಿಧನದ ನಂತರ ಅವರ ಪತ್ನಿಗೆ ಅವರ ಮರಣ ಅಥವಾ ಮರುವಿವಾಹದ ತನಕ ಮಾಸಾಶನ ಕೊಡುವ ಪದ್ಧತಿಯೂ ಇದೆ. ಆದರೆ ಈ ಮಾಸಾಶನ್ಅವು ಅತಿ ಕಡಿಮೆಯಾಗಿರುವುದು ವಿವಾದಾತ್ಮಕವಾಗಿದೆ. ಮಾರ್ಚ್ ೧೯೯೯ರಲ್ಲಿ ಇದು ತಿಂಗಳಿಗೆ ರೂ.೧,೫೦೦ ಆಗಿತ್ತು. ಆದರೆ ಬಹಳಷ್ಟು ರಾಜ್ಯಗಳು ಈ ಮಾಸಾಶನಕ್ಕಿಂತ ಹೆಚ್ಚು ದುಡ್ಡು ಈ ಮಹಿಳೆಯರಿಗೆ ಸಲ್ಲುವ ಹಾಗೆ ಮಾಡಿವೆ.

ವಿನ್ಯಾಸ

ಈ ಪದಕವನ್ನು ಶ್ರೀಮತಿ ಸಾವಿತ್ರಿ ಖನೋಲನ್ಕರ್ (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ ಮೇಜರ್ ಸೋಮನಾಥ ಶರ್ಮಾ ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು.

ಈ ಪದಕವು ಕಂಚಿನದಾಗಿದ್ದು ದುಂಡಗಿದೆ. ಇದರ ವ್ಯಾಸ ಸುಮಾರು ಮೂರೂವರೆ ಸೆಂ.ಮಿ. ಮಧ್ಯದಲ್ಲಿ ಭಾರತ ದೇಶದ ಲಾಂಛನವಿದೆ. ಇದರ ಸುತ್ತಲೂ ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ.

ಪದಕವನ್ನು ಹೊಂದಿದ ರಿಬ್ಬನ್ ೩೨ ಮಿ.ಮಿ. ಉದ್ದವಿದ್ದು ನೇರಳೆ (purple) ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ.

ಪುರಸ್ಕೃತ ಸೈನಿಕರು

ಹೆಸರುವರ್ಷಯುದ್ಧಕದನರೆಜಿಮೆಂಟ್ಟಿಪ್ಪಣಿಗಳು
ಮೇಜರ್ ಸೋಮನಾಥ್ ಶರ್ಮಾ೧೯೪೭ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ಬಡ್ಗಾಮ್ ಕದನ೪ ಕುಮಾಯೋಮರಣೋಪರಾಂತ
ಲಾನ್ಸ್ ನಾಯಕ್ ಕರಮ್ ಸಿಂಗ್೧೯೪೮ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ರಿಚ್ಮಾರ ಗಲಿ ಕದನ೧ ಸಿಖ್
ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ೧೯೪೮ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ರಾಜೌರಿ ಕದನಬಾಂಬೆ ಇಂಜಿನೀಯರ್ಸ
ನಾಯಕ್ ಜದೂನಾಥ ಸಿಂಗ್೧೯೪೮ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ತೈನ್ಧಾರ್ ಕದನ೧ ರಾಜಪೂತ್ಮರಣೋಪರಾಂತ
ಕಂಪನಿ ಹವಿಲ್ದಾರ್ ಮೇಜರ್ ಪೀರು ಸಿಂಗ್೧೯೪೮ಜಮ್ಮು ಕಾಶ್ಮೀರ ಯುದ್ಧ ೧೯೪೭-೪೮ದಾರಾಪರಿ ಕದನ೬ ರಾಜಪುತನಾ ರೈಫಲ್ಸ್ಮರಣೋಪರಾಂತ
ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ೧೯೬೧ಬೆಲ್ಗಿಯನ್ ಕಾಂಗೋದಲ್ಲಿ ಸಂಯುಕ್ತ ರಾಷ್ಟ್ರದ ಶಾಂತಿಪಾಲನೆ ೧೯೬೦೩/೧ ಗೋರ್ಖಾ ರೈಫಲ್ಸ್ಮರಣೋಪರಾಂತ
ಮೇಜರ್ ಧಾನ್ ಸಿಂಗ್ ಥಾಪಾ೧೯೬೨ಭಾರತ-ಚೀನಾ ಯುದ್ಧ ೧೯೬೨ಸಿರಿಜಪ್ ಕದನ೧/೮ ಗೋರ್ಖಾ ರೈಫಲ್ಸ್
ಸುಬೇದಾರ್ ಜೋಗಿಂದರ್ ಸಿಂಗ್೧೯೬೨ಭಾರತ-ಚೀನಾ ಯುದ್ಧ ೧೯೬೨ಬುಮ್ಲಾ ಕದನ೧ ಸಿಖ್ಮರಣೋಪರಾಂತ
ಮೇಜರ್ ಶೈತಾನ್ ಸಿಂಗ್೧೯೬೨ಭಾರತ-ಚೀನಾ ಯುದ್ಧ ೧೯೬೨ರೆಜಾಂಗ್ ಲಾ ಕದನ೧೩ ಕುಮಾವೊಮರಣೋಪರಾಂತ
ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್೧೯೬೫ಭಾರತ-ಪಾಕಿಸ್ಥಾನ ಯುದ್ಧ ೧೯೬೫ಅಸಲ್ ಉತ್ತರ್ ಕದನ೪ ಗ್ರೆನೇಡಿಯರ್ಸಮರಣೋಪರಾಂತ
ಲೆಫ್ಟಿನೆಂಟ್ ಕರ್ನಲ್ ಆರ್ದೇಶಿರ್ ತಾರಾಪೋರ್೧೯೬೫ಭಾರತ-ಪಾಕಿಸ್ಥಾನ ಯುದ್ಧ ೧೯೬೫ಚವಿಂಡಾ ಕದನಪೂನಾ ಹಾರ್ಸ(೧೭ ಹಾರ್ಸ)ಮರಣೋಪರಾಂತ
ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕ೧೯೭೧ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ)ಗಂಗಾಸಾಗರ್ ಕದನ೧೪ ಗಾರ್ಡ್ಸಮರಣೋಪರಾಂತ
ಮೇಜರ್ ಹೋಶಿಯಾರ್ ಸಿಂಗ್೧೯೭೧ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ)ಪಶ್ಚಿಮದ ಕದನ೩ ಗ್ರೆನೇಡಿಯರ್ಸ
ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್೧೯೭೧ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ)ಪೂನಾ ಹಾರ್ಸಮರಣೋಪರಾಂತ
ಫ್ಲಯಿಂಗ್ ಆಫಿಸರ್ ನಿರ್ಮಲಜಿತ್ ಸಿಂಗ್ ಸೆಖೋನ್೧೯೭೧ಭಾರತ-ಪಾಕಿಸ್ಥಾನ ಯುದ್ಧ ೧೯೭೧ (ಬಾಂಗ್ಲಾ ವಿಮೋಚನೆ)ಮರಣೋಪರಾಂತ
ನೈಬ್ ಸುಬೇದಾರ್ ಬಾಣಾ ಸಿಂಗ್೧೯೮೭ಸಿಯಾಚಿನ್ ಯುದ್ಧಕೈದ್ ಪೋಸ್ಟ್೧೩ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟರಿ
ಮೇಜರ್ ರಾಮಸ್ವಾಮಿ ಪರಮೇಶವರನ್೧೯೮೭ಭಾರತೀಯ ಶಾಂತಿ ಪಾಲನಾ ಪಡೆ - ಶ್ರೀಲಂಕಾ೮ ಮಹಾರ್ಮರಣೋಪರಾಂತ
ಕ್ಯಾಪ್ಟನ್ ವಿಕ್ರಮ್ ಬಾತ್ರಾ೧೯೯೯ಕಾರ್ಗಿಲ್ ಯುದ್ಧಹಂಪ್, Pt ೫೧೪೦, Pt ೪೮೭೫೧೩ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ಮರಣೋಪರಾಂತ
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ೧೯೯೯ಕಾರ್ಗಿಲ್ ಯುದ್ಧಖಾಲುಬಾರ್ ಕದನ೧/೧೧ ಗೋರ್ಖಾ ರೈಫಲ್ಸ್ಮರಣೋಪರಾಂತ
ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್೧೯೯೯ಕಾರ್ಗಿಲ್ ಯುದ್ಧಟೈಗರ್ ಹಿಲ್೧೮ ಗ್ರೆನೇಡಿಯರ್ಸ
ರೈಫಲ್ ಮ್ಯಾನ್ ಸಂಜಯ ಕುಮಾರ್೧೯೯೯ಕಾರ್ಗಿಲ್ ಯುದ್ಧPt ೪೮೭೫೧೩ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್

ಕಾಕತಾಳೀಯವಾಗಿ ಮೊದಲ ಮತ್ತು ಕೊನೆಯ ಪುರಸ್ಕೃತರು ಹಿಮಾಚಲ ಪ್ರದೇಶದ ಪಾಲಂಪುರ ಎಂಬ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ.

ನೆನಪಿಗಾಗಿ

೧೯೯೦ರಲ್ಲಿ ದೂರದರ್ಶನದಲ್ಲಿ ಪರಮ ವೀರ ಚಕ್ರ ಎಂಬ ಧಾರಾವಾಹಿ ಪ್ರಸಾರವಾಯಿತು. ಇದು ೧೫ ಕಂತುಗಳಲ್ಲಿ ಮೂಡಿಬಂತು. ಇದರಲ್ಲಿ ಪ್ರಖ್ಯಾತ ಕಲಾವಿದರು ಅಭಿನಯಿಸಿದರು. ಇವರಲ್ಲಿ ಫರೂಖ್ ಶೇಖ್, ಪುನೀತ್ ಇಸ್ಸರ್, ವಿಜಯೇಂದ್ರ ಘಾಟ್ಗೆ, ನಸೀರುದ್ದೀನ್ ಷಾ, ಶಾರೂಖ್ ಖಾನ್ ಮತ್ತು ಅನ್ನು ಕಪೂರ್ ಸೇರಿದ್ದಾರೆ. ಭಾರತದ ಸೇನಾ ದಳಗಳಿಂದ ಈ ಧಾರಾವಾಹಿಯ ನಿರ್ಮಾಣಕ್ಕೆ ಸಂಪೂರ್ಣ ಸಹಾಯ ದೊರೆತಿತು. ಇದರ ಶೀರ್ಷಿಕೆ ಗೀತೆ 'ಶಾನ್ ತೇರೀ ಕಮ್ ನ ಹೋ (ನಿನ್ನ ಖ್ಯಾತಿ ಎಂದೂ ಕಡಿಮೆಯಾಗದಿರಲಿ) ಬಹು ಜನಪ್ರಿಯವಾಯಿತು.

೨೦೨೦ರವರೆಗೆ…ಪರಮವೀರಚಕ್ರ ಪಡೆದ ಸೇನಾನಿಗಳು ೨೦೨೦ರವರೆಗೆ ನಮ್ಮೊಂದಿಗೆ ಇರುವ ವೀರಸೇನಾನಿಗಳು
ಸುಬೇದಾರ್ ಮೇಜರ್ ಬಾಣಾ ಸಿಂಗ್, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್. ಇವರಲ್ಲಿ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್ ಇನ್ನು ಸೇನೆಯಲ್ಲಿ ಸೇವಾ ನಿರತರಾಗಿದ್ದಾರೆ.

ಯೋಗೇಂದ್ರ ಯಾದವ್, ಬಾಣಾ ಸಿಂಗ್, ಸಂಜಯ್ ಕುಮಾರ್ ಪರಮವೀರಚಕ್ರ ಪಡೆದ ಸೇನಾನಿಗಳು - ೨೦೨೦ ರವರೆಗೆ ನಮ್ಮೊಂದಿಗೆ ಇರುವ ವೀರಸೇನಾನಿಗಳು

ಕೆಲವು ಸಂಗತಿಗಳು

  • ೨೧ ಪುರಸ್ಕೃತರಲ್ಲಿ ೨೦ ಸೈನಿಕರು ಭಾರತೀಯ ಭೂಸೇನೆ ಮತ್ತು ಒಬ್ಬರು ಭಾರತೀಯ ವಾಯುಸೇನೆಯವರಾಗಿದ್ದಾರೆ.
  • ೧೪ ಸೈನಿಕರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
  • ಈ ಪುರಸ್ಕಾರ ದೊರೆತ ಅತಿ ದೊಡ್ಡ ಹುದ್ದೆಯೆಂದರೆ ಲೆಫ್ಟಿನೆಂಟ್ ಕರ್ನಲ್
  • ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಅತಿ ಕಠಿಣವಾದದ್ದು ಎಂದು ಹೇಳಲಾಗುತ್ತದೆ.

ಹೊರಗಿನ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ