ಪತ್ರ

ಪತ್ರವು ಸಾಮಾನ್ಯ ಕಾಳಜಿಯ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಗೆ ಒಬ್ಬ ವ್ಯಕ್ತಿಯು ಬರೆದ ಸಂದೇಶ. ಪತ್ರಗಳಲ್ಲಿ ಹಲವು ವಿಭಿನ್ನ ಪ್ರಕಾರಗಳಿವೆ: ಔಪಚಾರಿಕ ಪತ್ರಗಳು ಮತ್ತು ಅನೌಪಚಾರಿಕ ಪತ್ರಗಳು. ಪತ್ರಗಳು ಸಾಕ್ಷರತೆಯ ರಕ್ಷಣೆ ಮತ್ತು ಕಾಪಿಗೆ ಕೊಡುಗೆ ನೀಡುತ್ತವೆ.[೧] ಪತ್ರಗಳನ್ನು ಪ್ರಾಚೀನ ಕಾಲದಿಂದಲೂ ಕಳುಹಿಸಲಾಗಿದೆ ಮತ್ತು ಇಲಿಯಾಡ್‍ನಲ್ಲಿ ಇವುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹರಾಡಟಸ್ ಮತ್ತು ಥೂಸಿಡಿಡೀಜ಼್ ಇಬ್ಬರೂ ತಮ್ಮ ಇತಿಹಾಸಗಳಲ್ಲಿ ಪತ್ರಗಳನ್ನು ಉಲ್ಲೇಖಿಸುತ್ತಾರೆ.

ರೋಜ಼ವೆಲ್ಟ್‌ರಿಗೆ ಐನ್‍ಸ್ಟೈನ್‍ರು ಬರೆದ ಪ್ರಸಿದ್ಧ ಪತ್ರ

ಐತಿಹಾಸಿಕವಾಗಿ, ಪತ್ರಗಳು ಪ್ರಾಚೀನ ಭಾರತ, ಪ್ರಾಚೀನ ಈಜಿಪ್ಟ್ ಮತ್ತು ಸೂಮರ್, ರೋಮ್, ಗ್ರೀಸ್ ಮತ್ತು ಚೀನಾದ ಕಾಲದಿಂದ ಇಂದಿನ ದಿನದವರೆಗೆ ಅಸ್ತಿತ್ವದಲ್ಲಿವೆ. ಹದಿನೇಳನೇ ಮತ್ತು ಹದಿನೆಂಟನೇ ಶತಮಾನದ ಅವಧಿಯಲ್ಲಿ, ಪತ್ರಗಳನ್ನು ಆತ್ಮ ಶಿಕ್ಷಣಕ್ಕಾಗಿ ಬಳಸಲಾಗುತ್ತಿತ್ತು. ಪತ್ರಗಳು ವಿಮರ್ಶಾತ್ಮಕ ಓದುವಿಕೆ, ಆತ್ಮಾಭಿವ್ಯಕ್ತ ಬರಹ, ಚರ್ಚಾಸ್ಪದ ಬರಹವನ್ನು ಅಭ್ಯಾಸಮಾಡುವ ಮತು ಸಮಾನಮನಸ್ಕ ಇತರರೊಂದಿಗೆ ವಿಚಾರಗಳನ್ನು ಕೂಡ ವಿನಿಮಯ ಮಾಡಿಕೊಳ್ಳುವ ಒಂದು ರೀತಿಯಾಗಿದ್ದವು. ಕೆಲವು ಜನರಿಗೆ, ಪತ್ರಗಳನ್ನು ಬರವಣಿಗೆಯ ಪ್ರದರ್ಶನವಾಗಿ ನೋಡಲಾಗುತ್ತಿತ್ತು. ಇತರರಿಗೆ, ಅದನ್ನು ಕೇವಲ ಪ್ರದರ್ಶನವಾಗಿ ನೋಡದೆ ಸಂವಹನದ ರೀತಿ ಮತ್ತು ಪ್ರತ್ಯಾದಾನ ಪಡೆಯುವ ವಿಧಾನವಾಗಿ ಕೂಡ ನೋಡಲಾಗುತ್ತಿತ್ತು. ಪತ್ರಗಳು ಬೈಬಲ್‍ನ ಹಲವಾರು ಪುಸ್ತಕಗಳನ್ನು ರಚಿಸುತ್ತವೆ. ವೈಯಕ್ತಿಕ, ರಾಜತಾಂತ್ರಿಕ ಅಥವಾ ವ್ಯವಹಾರದ ಕಾರಣಕ್ಕಾಗಿ ಆದ ಪತ್ರವ್ಯವಹಾರದ ದಾಖಲೆಗಳು, ಇತಿಹಾಸಕಾರರಿಗೆ ಪ್ರಧಾನ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಕೆಲವು ಸಮಯಗಳಲ್ಲಿ, ಪತ್ರಗಳ ಬರವಣಿಗೆಯು ಒಂದು ಕಲಾಪ್ರಕಾರ ಮತ್ತು ಸಾಹಿತ್ಯ ಪ್ರಕಾರವಾಗಿ ಆಗಿದೆ, ಉದಾಹರಣೆಗೆ ಬೈಜ಼ಂಟೈನ್ ಪತ್ರಕಲೆಯಲ್ಲಿ.

ಸಂವಹನ ತಂತ್ರಜ್ಞಾನವು ವೈವಿಧ್ಯಗೊಂಡಂತೆ, ಸಂವಹನದ ವಾಡಿಕೆಯ ರೂಪವಾಗಿ ಅಂಚೆ ಪತ್ರಗಳು ಕಡಿಮೆ ಮುಖ್ಯವಾಗಿವೆ. ಉದಾಹರಣೆಗೆ, ಅಂಚೆತಂತಿಯ ಬೆಳವಣಿಗೆಯು ಒಂದು ಸಂದೇಶವನ್ನು ಕಳುಹಿಸಲು ಬೇಕಾದ ಸಮಯವನ್ನು ಬಹಳವಾಗಿ ಕಡಿಮೆಮಾಡಿತು, ಏಕೆಂದರೆ ಅಂಚೆತಂತಿಯು ದೂರದ ಬಿಂದುಗಳ ನಡುವಿನ ಸಂದೇಶವನ್ನು ವಿದ್ಯುತ್ ಸಂಕೇತವಾಗಿ ಕಳುಹಿಸುತ್ತದೆ. ಗಮ್ಯಸ್ಥಾನಕ್ಕೆ ಅತ್ಯಂತ ಹತ್ತಿರವಿರುವ ಅಂಚೆತಂತಿ ಕಚೇರಿಯಲ್ಲಿ, ಸಂಕೇತವನ್ನು ಕಾಗದದ ಮೇಲೆ ಬರವಣಿಗೆಯ ರೂಪದಲ್ಲಿ ಪುನಃ ಪರಿವರ್ತಿಸಲಾಗುತ್ತಿತ್ತು ಮತ್ತು ಸ್ವೀಕರಿಸುವವನಿಗೆ ಒಪ್ಪಿಸಲಾಗುತ್ತಿತ್ತು. ನಂತರ ಫ಼್ಯಾಕ್ಸ್ ಯಂತ್ರ ಬಂದಿತು: ಪತ್ರವನ್ನು ದೂರವಾಣಿ ಜಾಲದ ಮೂಲಕ ವಿದ್ಯುತ್ ರೂಪದಲ್ಲಿ ಒಂದು ಚಿತ್ರವಾಗಿ ಕಳುಹಿಸಬಹುದಾಗಿತ್ತು. ಇಂದು ಅಂತರಜಾಲವು, ಇ-ಅಂಚೆಯ ರೂಪದಲ್ಲಿ, ಲಿಖಿತ ಸಂವಹನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ