ದುರ್ಗಾದಾಸ್ ಕೆ.ಆರ್.

ಡಾ.ಕೆ.ಆರ್.ದುರ್ಗಾದಾಸ್ ಅವರು ಸಂಶೋಧಕ ಮತ್ತು ವಿಮರ್ಶಕ. ಶಿ‍ಷ್ಟ ಮತ್ತು ಜಾನಪದಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಗ್ರಾಮೀಣಾನುಭವಗಳನ್ನು ಮೈಗೂಡಿಸಿಕೊಂಡು ಬೆಳೆದ ಡಾ.ದುರ್ಗಾದಾಸ್ ಅವರು ಜಾನಪದ ಆಳ ಅಗಲಗಳನ್ನು ಚೆನ್ನಾಗಿ ಅರಿತು ಅರ್ಥ ಮಾಡಿಕೊಂಡಿದ್ದಾರೆ. ಇವರು ೦೭ನೇ ಜೂನ್ ೧೯೫೫ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಮಸಾಗರ ದಲ್ಲಿ ಜನಿಸಿದರು.ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಇವರು ಕಲಾ ನಿಕಾಯದ ಡೀನ್‌ರಾಗಿಯೂ ಹಾಗೂ ಕ.ವಿ.ವಿ.ಯ ಮೌಲ್ಯಮಾಪನ' ವಿಭಾಗದ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪುಸ್ತಕಗಳು

  • ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್
  • ಬಯಲಾಟ ಪದಗಳಲ್ಲಿ ಸಂಸ್ಕೃತಿ
  • ಗಿರಿಜಾ ಕಲ್ಯಾಣ (ಸಂಪಾದನೆ)
  • ಬಳ್ಳಾರಿ ಜಿಲ್ಲೆಯ ಬಯಲಾಟಗಳು
  • ಮೂರು ದಲಿತ ಕಮ್ಮಟಗಳು(ಸಂಪಾದನೆ)
  • ಅನುಸಂಧಾನದ ಹೊಸ ಹಾದಿ (ವಿಮರ್ಶೆ)
  • ಬೇವು ಬೆಲ್ಲ (ಸಂಪಾದನೆ)
  • ಸೋರುತಿಹುದು ಮನೆಯ ಮಾಳಿಗೆ (ವಿಮರ್ಶೆ)
  • ಬತ್ತದ ಸೆಲೆ (ಜಾನಪದ ಲೇಖನಗಳು)
  • ಬಯಲಾಟ ಪದ್ಯ ಸಾಹಿತ್ಯ
  • ಉರಿಯುಂಡ ಕರ್ಪುರ(ಸಂಪಾದನೆ)
  • ಅರಿವಿನ ಬೆನ್ನು ಹತ್ತಿ (ವಿಮರ್ಶೆ)
  • ಬಯಲಾಟ ಸಾಹಿತ್ಯ (ಸಂಪುಟಗಳು)
  • ಕಾಳಗದ ಕಥೆಗಳು
  • ಕಲ್ಯಾಣದ ಕಥೆಗಳು
  • ಪುರಾಣದ ಕಥೆಗಳು
  • ಕುಡುತಿನಿ ನರಸಿಂಗರಾಯ ಕೃತ ಬಯಲಾಟಗಳು

ಪುರಸ್ಕಾರಗಳು

  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೧೯೯೬)
  • ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ (೧೯೯೬)
  • ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ (೨೦೧೦)
  • ಕರ್ನಾಟಕ ರಾಜ್ಯ ಪ್ರಶಸ್ತಿ (೨೦೧೦)
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ