ದಾಲ್ಚಿನ್ನಿ

ದಾಲ್ಚಿನ್ನಿ
ದಾಲ್ಚಿನ್ನಿಯ ಎಲೆ ಹಾಗೂ ಹೂ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಲಾರೆಲ್ಸ್
ಕುಟುಂಬ:
ಲಾರೇಸಿಯೆ
ಕುಲ:
ಸಿನ್ನಮೋಮಂ
ಪ್ರಜಾತಿ:
C. verum
Binomial name
ಸಿನ್ನಮೋಮ್ ವೆರಮ್
J.Presl
ಹಸಿ ದಾಲ್ಚಿನ್ನಿ

ದಾಲ್ಚಿನ್ನಿ ಅನೇಕ ಮರಗಳ ಒಳ ತೊಗಟೆಯಿಂದ ಪಡೆಯುವ ಸಿನ್ನಮೋಮಮ್ ಕುಲದ ಒಂದು ಮಸಾಲೆ ಪದಾರ್ಥ. ಇದನ್ನು ಲವಂಗಪಟ್ಟೆ, ಚಕ್ಕೆ ಎಂದು ಕರೆಯುತ್ತಾರೆ. ಸಿಹಿ ಮತ್ತು ಖಾರದ ಆಹಾರ ಈ ಎರಡರಲ್ಲೂ ಬಳಸಲಾಗುತ್ತದೆ. "ದಾಲ್ಚಿನ್ನಿ" ಎಂಬ ಪದ ಮರದ ಮಧ್ಯ ಇರುವ ಕಂದು ಬಣ್ಣವನ್ನು ಕೂಡ ಸೂಚಿಸುತ್ತದೆ. ಸಿನ್ನಮೋಮಮ್ ವೆರಮ್' ಕೆಲವೊಮ್ಮೆ ನಿಜವಾದ ದಾಲ್ಚಿನ್ನಿ ಎಂದು ಪರಿಗಣಿಸಲ್ಪಟ್ಟಿದೆಯಾದರೂ,ಅಧಿಕವಾಗಿ ದಾಲ್ಚಿನ್ನಿಯನ್ನು ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ಇತರ ಸಂಬಂಧಿತ ತಳಿಗಳಿಂದಲೂ ಪಡೆಯಲಾಗುತ್ತದೆ."ನಿಜವಾದ ದಾಲ್ಚಿನ್ನಿ"ಯಿಂದ ಇದನ್ನು ಬೇರ್ಪಡಿಸಲು ಸಿನ್ನಮೋಮಮ್ ಕ್ಯಾಶಿಯಾ ಎಂದಲೂ ಕರೆಯಲಾಗುತ್ತದೆ.[೧][೨]


"ದಾಲ್ಚಿನ್ನಿ" ಬಹುಶಃ ಒಂದು ಡಜನ್ ಜಾತಿ ಮರಗಳಿಂದ ಉತ್ಪಾದಿಸುವ ವಾಣಿಜ್ಯ ಮಸಾಲೆಗಳ ಉತ್ಪನ್ನಗಳಿಗೆ ಹೆಸರಾಗಿದೆ. ಇವುಗಳೆಲ್ಲಾ ಸಿನ್ನಮೋಮಮ್ ಕುಲದ ಲಾರೇಸಿಏ ಕುಟುಂಬದಲ್ಲಿ ಸದಸ್ಯರು. ಅವುಗಳಲ್ಲಿ ಕೆಲವನ್ನು ಮಾತ್ರ ಮಸಾಲೆ ವಾಣಿಜ್ಯಕ್ಕಾಗಿ ಬೆಳೆಯಲಾಗುತ್ತದೆ.

ಇತಿಹಾಸ

ಸಿನ್ನಮೋಮಮ್ ವೆರಮ್, ಕೊಹೆಲರ್ ರ ಮೆಡಿಸಿನಲ್-ಪ್ಲಾಂಟ್ಸ್ ಇಂದ (೧೮೮೭)

ಶಾಸ್ತ್ರೀಯ ಕಾಲದಲ್ಲಿ, ನಾಲ್ಕು ರೀತಿಯ ದಾಲ್ಚಿನ್ನಿಗಳಲ್ಲಿ ವ್ಯತ್ಯಾಸವಿತ್ತು ( ಅನೇಕ ಬಾರಿ ತಪ್ಪಾಗಿ):

  • ಕ್ಯಾಶಿಯಾ, ಅರೇಬಿಯಾ ಮತ್ತು ಇಥಿಯೋಪಿಯದ ಸಿನ್ನಮೋಮಮ್ ಇನರ್ಸ್ನ ತೊಗಟೆ , ಮರದಿಂದ ಸೀಳಿ ತೆಗೆಯುವ "ಸಸ್ಯದ ಸಿಪ್ಪೆ". [೩]
  • ಸಿನ್ನಮೋಮಮ್ ವೆರಮ್ ನಿಜವಾದ ದಾಲ್ಚಿನ್ನಿ, ಶ್ರೀಲಂಕಾದ ಸಿ ವೆರಮ್‍ನ ತೊಗಟೆ.
  • ಮಲಬಥ್ರಮ್ ಅಥವಾ ಮಲೋಬಥ್ರಮ್, (ಸಂಸ್ಕೃತ तमालपत्रम्, ತಮಲಪತ್ರಂ, ಅಕ್ಷರಶಃ "ಕಪ್ಪು ಮರದ ಎಲೆಗಳು") ಉತ್ತರ ಭಾರತದ ಸಿ ತಮಲದ ಹಲವಾರು ಜಾತಿಗಳನ್ನು ಒಳಗೊಂಡಿದೆ.
  • ಸೆರಿಚಾಟಂ, ಚೀನಾದ ಸಿ ಕ್ಯಾಶಿಯಾ

ದಾಲ್ಚಿನ್ನಿ ಪ್ರಾಚೀನ ಕಾಲದಿಂದಲೂ ತಿಳಿದಿರುವ ವಸ್ತು.

ಪ್ರಭೇದ

ದಾಲ್ಚಿನ್ನಿ ಕಡ್ಟಿ, ಪುಡಿ ಮತ್ತು ಒಣಗಿದ ಹೂ
('ಶ್ರೀಲಂಕಾದ ದಾಲ್ಚಿನ್ನಿ ಸಿನ್ನಮೋಮಮ್ ವೆರಮ್) ಎಡಭಾಗದಲ್ಲಿ , ಮತ್ತು ಇಂಡೋನೇಷಿಯಾದ ದಾಲ್ಚಿನ್ನಿ (ಸಿನ್ನಮೋಮಮ್ ಬರ್‍ಮನ್ನಿ) ಕ್ವಿಲ್ಸ್

ಅನೇಕ ಪ್ರಭೇದಗಳು ಸಾಮಾನ್ಯವಾಗಿ ದಾಲ್ಚಿನ್ನಿ ಎಂಬ ಹೆಸರಲ್ಲಿ ಮಾರಾಟಗೊಳ್ಳುತ್ತವೆ:[೪]

  • ಸಿನ್ನಮೋಮಮ್ ಕ್ಯಾಶಿಯಾ (ಕ್ಯಾಶಿಯಾ ಅಥವಾ ಚೀನೀ ದಾಲ್ಚಿನ್ನಿ,ಸಾಮಾನ್ಯವಾಗಿ ಬಳಕೆಯಾಗುವ)
  • ಸಿನ್ನಮೋಮಮ್ ಬರ್‍ಮನ್ನಿ (ಕೊರಿಂಟ್ಜೆ, ಪದಂಗ್ ಕ್ಯಾಶಿಯಾ,ಅಥವಾ ಇಂಡೋನೇಷಿಯಾದ ದಾಲ್ಚಿನ್ನಿ)
  • ಸಿನ್ನಮೋಮಮ್ ಲೋರಿರೋಯ್ (ಸೇಗನ್ ದಾಲ್ಚಿನ್ನಿ ವಿಯೇಟ್ನಾಮೀಸ್, ಕ್ಯಾಶಿಯಾ, ಅಥವಾ ವಿಯೆಟ್ನಾಮೀಸ್ ದಾಲ್ಚಿನ್ನಿ)
  • ಸಿನ್ನಮೋಮಮ್ ವೆರಮ್ (ಶ್ರೀಲಂಕಾ ದಾಲ್ಚಿನ್ನಿ ಅಥವಾ ಸಿಲೋನ್ ದಾಲ್ಚಿನ್ನಿ)

ದಾಲ್ಚಿನ್ನಿ ರೋಲ್ಸ್ ಮತ್ತು ಇತರ ಬೇಕರಿ ಉತ್ಪನ್ನಗಳ ಬಲವಾದ ಮಸಾಲೆಯುಕ್ತ ಪರಿಮಳಕ್ಕೆ ಕ್ಯಾಶಿಯಾ ಕಾರಣ, ಏಕೆಂದರೇ ಇದು ಅಡಿಗೆ ಪರಿಸ್ಥಿತಿಗಳನ್ನು ಚೆನ್ನಾಗಿ ನಿಭಾಯಿಸುತ್ತದೆ.ಚೀನೀ ದಾಲ್ಚಿನ್ನಿ ಸಾಮಾನ್ಯವಾಗಿ ತಿಳಿ ಕಂದು ಬಣ್ಣವಿದ್ದು ಬಲಿಶ್ಟವಾದ ತೊಗಟೆಗಳನ್ನು ಹೊಂದಿದ್ದು ದಪ್ಪವಾಗಿರುತ್ತದೆ.ತೆಳುವಾದ ಒಳ ತೊಗಟೆಗಳನ್ನು ಬಳಸುವ ಸಿಲೋನ್ ದಾಲ್ಚಿನ್ನಿ, ನಸು ಕಂದುಬಣ್ಣ, ಅಪ್ಪಟವಾದ, ಕಡಿಮೆ ದಟ್ಟವಾದ ಮತ್ತು ಹೆಚ್ಚು ಗರಿಗರಿಯಾದ ವಿನ್ಯಾಸ ಹೊಂದಿರುತ್ತದೆ. ಇದು ಕ್ಯಾಶಿಯಾಗಿಂತಲೂ ಹೆಚ್ಚು ರುಚಿ ಮತ್ತು ಹೆಚ್ಚು ಪರಿಮಳ ಹೊಂದಿರುವುದಾಗಿ ಪರಿಗಣಿಸಲಾಗಿದೆ.ಅಡುಗೆ ಸಮಯದಲ್ಲಿ ಅದರ ಅಧಿಕ ಪರಿಮಳ ಕಡಿಮೆಯಾಗುತ್ತದೆ.ರಕ್ತ ತೆಳುವಾಗಿಸುವ ಪದಾರ್ಥವಾದ ಕೂಮರಿನ್ ಸಿಲೋನ್ ದಾಲ್ಚಿನ್ನಿಯಲ್ಲಿ ಕ್ಯಾಶಿಯಾಗಿಂತಲೂ ಕಡಿಮೆ ಮಟ್ಟದಲ್ಲಿ ಇರುತ್ತದೆ.[೫][೬]

ಪೌಷ್ಠಿಕಾಂಶದ ಮಾಹಿತಿ

ಹತ್ತು ಗ್ರಾಂ (ಸುಮಾರು ೨ ಚಮಚಗಳು) ನೆಲದ ದಾಲ್ಚಿನ್ನಿಯಲ್ಲಿ:

  • ಶಕ್ತಿ: ೧೦೩.೪kJ (೨೪.೭kcal)
  • ಫ್ಯಾಟ್: ೦.೧೨ಗ್ರಾಂ
  • ಕಾರ್ಬೋಹೈಡ್ರೇಟ್ಗಳು: ೮.೦೬ ಗ್ರಾಂ (ಇದರಲ್ಲಿ ಫೈಬರ್: ೫.೩೧ ಗ್ರಾಂ, ಸಕ್ಕರೆ: ೦.೨ ಗ್ರಾಂ)
  • ಪ್ರೋಟೀನ್: ೦.೪ ಗ್ರಾಂ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ