ತಾರ

ಕನ್ನಡದ ಒಬ್ಬ ಪ್ರತಿಭಾವಂತ ನಟಿ.

ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.

ತಾರಾ

Member (nominated) of Karnataka Legislative Council
ಹಾಲಿ
ಅಧಿಕಾರ ಸ್ವೀಕಾರ 
10 August 2012

President of the Karnataka Chalanachitra Academy
ಅಧಿಕಾರ ಅವಧಿ
15 March 2012 – June 2013
ವೈಯಕ್ತಿಕ ಮಾಹಿತಿ
ಜನನಅನುರಾಧಾ
(1973-03-04) ೪ ಮಾರ್ಚ್ ೧೯೭೩ (ವಯಸ್ಸು ೫೧)[lower-alpha ೧]
ಬೆಂಗಳೂರು, Mysore State (now ಕರ್ನಾಟಕ), India
ರಾಜಕೀಯ ಪಕ್ಷಭಾರತೀಯ ಜನತಾ ಪಕ್ಷ
ಸಂಗಾತಿ(ಗಳು)H. C. Venugopal (ವಿವಾಹ 2005)
ಮಕ್ಕಳು1
ವೃತ್ತಿನಟಿ.ರಾಜಕಾರಣಿ
ಮತದಾನ ಚಿತ್ರದಲ್ಲಿ ತಾರಾ
ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ

ತಾರಾಗೆ ಬಂದ ಪ್ರಶಸ್ತಿಗಳು

  • ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
  • ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕರಿಮಲೆಯ ಕಗ್ಗತ್ತಲು
  • ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕಾನೂರು ಹೆಗ್ಗಡತಿ
  • ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
  • ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ

ರಾಜಕೀಯ ಜೀವನ

ತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು

ತಾರಾ ಅವರು ಅಭಿನಯಿಸಿದ ಕೆಲವು ಚಲನಚಿತ್ರಗಳು
ಚಿತ್ರದ ಹೆಸರುಭಾಷೆಚಿತ್ರ ತೆರೆಕಂಡ ವರ್ಷ
ಹೆಬ್ಬೆಟ್ ರಾಮಕ್ಕಕನ್ನಡ೨೦೧೮
ಹಸೀನಾಕನ್ನಡ೨೦೦೪
ಕಾನೂರು ಹೆಗ್ಗಡತಿಕನ್ನಡ೧೯೯೯
ಮುಂಜಾನೆಯ ಮಂಜುಕನ್ನಡ೧೯೯೩
ಮುದ್ದಿನ ಮಾವಕನ್ನಡ೧೯೯೩
ಕರಿಮಲೆಯ ಕಗ್ಗತ್ತಲುಕನ್ನಡ೧೯೯೩
ಮಾಲಾಶ್ರೀ ಮಾಮಾಶ್ರೀಕನ್ನಡ೧೯೯೨
ಉಂಡೂ ಹೋದ ಕೊಂಡೂ ಹೋದಕನ್ನಡ೧೯೯೨
ನಿಗೂಢ ರಹಸ್ಯಕನ್ನಡ೧೯೯೦
ಪೋಲೀಸನ ಹೆಂಡತಿಕನ್ನಡ೧೯೯೦
ಸಿ.ಬಿ.ಐ ಶಂಕರ್ಕನ್ನಡ೧೯೮೯
ಸಾಂಗ್ಲಿಯಾನಕನ್ನಡ೧೯೮೮


ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ