ಡಿಯೇಗೋ ಮೆರಡೋನ

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಮತ್ತು ನಿರ್ವಾಹಕ

ಡಿಯೇಗೊ ಮೆರಡೋನ (ಜನನ ಅಕ್ಟೋಬರ್ ೩೦, ೧೯೬೦ - ಮರಣ ನವೆಂಬರ್ ೨೫, ೨೦೨೦) ಅರ್ಜೆ೦ಟಿನಾದ ಮಾಜಿ ಫುಟ್‌ಬಾಲ್ ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ ಅರ್ಜೆ೦ಟಿನಾ ರಾಷ್ಟ್ರೀಯ ಫುಟ್‌ಬಾಲ್ ತ೦ಡದ ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ್ದಿಯೋಗ್ಯವಾದ ವ್ಯಕ್ತಿ ಎಂದೂ ಹೇಳಲಾಗುತ್ತದೆ. ಇವರ ಅ೦ತರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು ೯೧ ಬಾರಿ ಪ್ರತಿನಿಧಿಸಿ ೩೪ ಗೋಲ್-ಗಳನ್ನು ಹೊಡೆದಿರುವರು.

ಡಿಯೇಗೋ ಮೆರಡೋನ
Personal information
Full nameಡಿಯೇಗೋ ಅರ್ಮಂಡೋ ಮೆರಡೋನ
Date of birthಅಕ್ಟೋಬರ್ ೩೦, ೧೯೬೦
Place of birthವಿಲ್ಲಾ ಫಿಯೋರಿಟೊ, ಅರ್ಜೆಂಟಿನಾ
Height{{{height}}}
NicknameEl Diez, Pelusa,
El Pibe de Oro
Position"Hole"
Youth clubs
೧೯೭೦-೧೯೭೬ಅರ್ಜೆಂಟೆನಾ ಜೂನಿಯರ್ಸ್
Professional clubs*
1976-81
1981-82
1982-84
1984-91
1992-93
1993
1995-97
1976-1997
Argentinos Juniors
Boca Juniors
FC Barcelona
SSC Napoli
Sevilla FC
Newell's Old Boys
Boca Juniors
Total
166 (116)
42 (28)
58 (38)
259 (115)
29 (7)
5 (0)
29 (7)
588 (311)
National team
1977-94Argentina91 (34)

* Professional club appearances and (goals)
counted for the domestic league only.

ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, ಒ೦ದರಲ್ಲಿ—೧೯೮೬ರಲ್ಲಿ—ತ೦ಡದ ಮು೦ದಾಳತ್ವವನ್ನು ವಹಿಸಿ ಅ೦ತಿಮ ಸುತ್ತಿನಲ್ಲಿ ವೆಸ್ಟ್ ಜರ್ಮನಿಯನ್ನು ಸದೆಬಡಿದು, ಸರಣಿಯ ಶ್ರೇಷ್ಠ ಆಟಗಾರರೆ೦ದು "ಗೋಲ್ಡನ್ ಬಾಲ್" ಪ್ರಶಸ್ತಿಯನ್ನು ಲಭಿಸಿಕೊ೦ಡರು[೧][೨]

ಆರಂಭದ ದಿನಗಳು

ಡಿಯಾಗೋ ಮೆರಡೋನ ವಿಲ್ಲಾ ಫಿಯೋರಿಟೊ ಎಂಬ ಬ್ಯೂನಸ್ ಐರ್ಸ್ ನಗರದ ಹೊರವಲಯದಲ್ಲಿರುವ ಪುಟ್ಟ ಕೊಳಚೆ ಪ್ರದೇಶದಲ್ಲಿ ಹುಟ್ಟಿದವರು. ಇವರಿಗೆ ಮೂರು ಜನ ಅಕ್ಕಂದಿರು. ನಾಲ್ಕನೆಯವರಾದ ಇವರೇ ಹಿರಿಯ ಮಗ. ತಮ್ಮಂದಿರಿಬ್ಬರೂ (ಹ್ಯೂಗೊ, ಎಡ್ಯುರಾಡೊ) ಫುಟ್‌ಬಾಲ್ ಆಟಗಾರರೆ.

ಹತ್ತನೇ ವಯಸ್ಸಿನಲ್ಲಿ ಮೆರಡೋನರವರು ಎಸ್ಟ್ರೆಲ್ಲಾ ರೋಜ ಎಂಬ ಹತ್ತಿರದ ಕ್ಲಬ್‌ನಲ್ಲಿ ಆಡುತ್ತಿರುವಾಗ ಇವರ ಪ್ರತಿಭೆ ಪ್ರತಿಭಾನ್ವೇಷಕರೊಬ್ಬರಿಂದ ಗುರುತಿಸಲ್ಪಟ್ಟಿತು ಎಂದು ನಂಬಲಾಗಿದೆ.

ಆಟಗಾರರಾಗಿ

೧೫ನೇ ವಯಸ್ಸಿನಲ್ಲಿ ಮೆರಡೋನ ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪಾದಾರ್ಪಣೆ ಮಾಡಿ ೧೯೭೬ರಿಂದ ೧೯೮೧ರವರೆಗೂ ಅಲ್ಲೇ ಆಡುತ್ತಿದ್ದರು.

ಅರ್ಜೆಂಟಿನಾ ರಾಷ್ಟ್ರೀಯ ಫುಟ್‍ಬಾಲ್ ತಂಡಕ್ಕೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಹದಿನೆಂಟನೆಯ ವಯಸ್ಸಿನಲ್ಲಿ 'ಫುಟ್‍ಬಾಲ್ ವರ್ಲ್ಡ್ ಯೂತ್ ಚಾಂಪಿಯನ್‍ಷಿಪ್' ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ದೇಶದ ಪರವಾಗಿ ಆಡಿದರಲ್ಲದೆ, ಫೈನಲ್ ಪಂದ್ಯದಲ್ಲಿ ಸೋವಿಯತ್ ಒಕ್ಕೂಟ ತಂಡದ ವಿರುದ್ಧ ೩–1 ಅಂತರದಲ್ಲಿ ಜಯ ಸಾಧಿಸಲು ಕಾರಣರಾಗಿ, ಆ ಪಂದ್ಯಾವಳಿಯ ತಾರೆಯಾಗಿ ಹೊರಹೊಮ್ಮಿದರು.

೧೯೮೨ರಲ್ಲಿ ಮರಡೋನ ತಮ್ಮ ಪ್ರಥಮ ವಿಶ್ವಕಪ್ ಪಂದ್ಯಾವಳಿಯನ್ನು ಆಡಿದರು. ಮೊದಲನೇ ಸುತ್ತಿನಲ್ಲಿ ಚಾಂಪಿಯನ್ ತಂಡ ಆರ್ಜೆಂಟೀನಾ ಬೆಲ್ಜಿಯಂ ತಂಡಕ್ಕೆ ೦-೧ ರಿಂದ ಸೋತಿತು. ನಂತರ ಹಂಗರಿ ಮತ್ತು ಎಲ್ ಸಾಲ್ವಡಾರ್ ಗಳನ್ನು ನಿರಾಯಾಸಕರವಾಗಿ ಸೋಲಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿತಾದರೂ ಅಂತಿಮವಾಗಿ ವಿಶ್ವಕಪ್ ಗೆದ್ದ ಇಟಲಿ (೧-೨) ಮತ್ತು ಮರಡೋನಾರನ್ನು ಹೊರಕ್ಕೆ ಕಳುಹಿಸಿದ ಬ್ರೆಝಿಲ್ ವಿರುದ್ಧ ಪಂದ್ಯ (೧-೩) ಗಳ ವಿರುದ್ಧ ಎರಡನೇ ಸುತ್ತಿನಲ್ಲಿ ಸೋತಿತು.

ಚಿತ್ರ:MVC-074S.JPG
Diego's Boca 1981 match-worn shirt, in his first season with his favourite team that he led to win the Argentine Apertura Metropolitan league

References

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ