ಟರ್ಮಿನೇಟರ್ ಸಾಲ್ವೇಶನ್

ಆಂಗ್ಲ ಭಾಷೆ ಚಲನಚಿತ್ರ

ಟರ್ಮಿನೇಟರ್ ಸಾಲ್ವೇಶನ್ ಒಂದು (West Frisian) ಅಮೆರಿಕನ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ, ಟರ್ಮಿನೇಟರ್ ಸರಣಿಯ ನಾಲ್ಕನೇ ಭಾಗ, ಇದನ್ನು ನಿರ್ದೇಶಿಸಿರುವವರು ಮೆಕ್‍ಜಿ, ಹಾಗೂ ಇದರ ತಾರಾಗಣವು ಭವಿಷ್ಯದ ರೆಸಿಸ್ಟೆನ್ಸ್‌ನ ನಾಯಕನಾದ ಜಾನ್ ಕಾನರ್ನ ಪಾತ್ರದಲ್ಲಿ ಕ್ರಿಶ್ಚಿಯನ್ ಬೇಲ್ ಮತ್ತು ಸೈಬೋರ್ಗ್ ಮಾರ್ಕಸ್ ರೈಟ್‌ನ ಪಾತ್ರದಲ್ಲಿ ಸ್ಯಾಮ್ ವರ್ದಿಂಗ್‌ಟನ್ರನ್ನೊಳಗೊಂಡಿದೆ. ಈ ಚಲನಚಿತ್ರವು 1984ರ ಮೂಲ ಚಲನಚಿತ್ರದಲ್ಲಿರುವ ಯುವ ಕೈಲ್ ರೀಸ್ನನ್ನು ಆಂಟನ್ ಯೆಲ್‌ಶಿನ್ ನಟನೆಯ ಮೂಲಕ ಪರಿಚಯಿಸುವುದಲ್ಲದೆ, T-800 ಮಾಡೆಲ್ 101 ಟರ್ಮಿನೇಟರ್ನ ಮೂಲವನ್ನೂ ಸ್ಪಷ್ಟಪಡಿಸುತ್ತದೆ.

Terminator Salvation
ನಿರ್ದೇಶನMcG
ನಿರ್ಮಾಪಕDerek Anderson
Victor Kubicek
Jeffrey Silver
Moritz Borman
ಲೇಖಕScreenplay:
John Brancato
Michael Ferris
Characters:
James Cameron
Gale Anne Hurd
ಪಾತ್ರವರ್ಗChristian Bale
Sam Worthington
Anton Yelchin
Moon Bloodgood
Bryce Dallas Howard
Common
Jadagrace Berry
Michael Ironside
Helena Bonham Carter
ಸಂಗೀತDanny Elfman
Themes:
Brad Fiedel
ಛಾಯಾಗ್ರಹಣShane Hurlbut
ಸಂಕಲನConrad Buff
ಸ್ಟುಡಿಯೋThe Halcyon Company
Wonderland Sound and Vision
ವಿತರಕರುWarner Bros. Pictures
ಬಿಡುಗಡೆಯಾಗಿದ್ದುMay 21, 2009
ಅವಧಿTheatrical Cut:
115 minutes
Director's Cut:
118 minutes
ದೇಶUnited States
ಭಾಷೆEnglish
ಬಂಡವಾಳ$200 million
ಬಾಕ್ಸ್ ಆಫೀಸ್$372,046,055[೧]

ಟರ್ಮಿನೇಟರ್ ಸಾಲ್ವೇಶನ್ ನ ಕಥೆಯು 2018ರಲ್ಲಿ ನಡೆಯುತ್ತದೆ ಮತ್ತು ಇದು ಮನುಜಕುಲ ಹಾಗೂ ಸ್ಕೈನೆಟ್ ನಡುವಿನ ಸಮರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ — ಹೀಗಾಗಿ ಇದು 1984 ಮತ್ತು 2004ರ ನಡುವೆ ನಡೆಯುವ ಮತ್ತು ಕಾಲಗತಿ ಪಯಣವನ್ನು ಪ್ರಮುಖ ಕಥಾವಸ್ತುವನ್ನಾಗಿ ಬಳಸಿಕೊಂಡ ಹಿಂದಿನ ಭಾಗಗಳಿಗಿಂತ ಭಿನ್ನವಾಗುತ್ತದೆ.

ಪ್ರಿ-ಪ್ರೊಡಕ್ಷನ್‍ನ ತೊಂದರೆಗಳ ನಂತರ, ದ ಹ್ಯಾಲ್‌ಸ್ಯೋನ್ ಕಂಪನಿಯು ಆಂಡ್ರಿವ್ ಜಿ. ವಾಜ್ನಾ ಮತ್ತು ಮಾರಿಯೋ ಕಸ್ಸರ್ರಿಂದ ಚಲನಚಿತ್ರದ ಹಕ್ಕುಗಳನ್ನು ಪಡೆದುಕೊಂಡು ಹಲವಾರು ಬರಹಗಾರರು ಸ್ಕ್ರೀನ್‌ಪ್ಲೇಗಾಗಿ ಕೆಲಸ ಮಾಡಿದ ಬಳಿಕ ಚಿತ್ರೀಕರಣವು ಮೇ 2008ರಲ್ಲಿ ನ್ಯೂ ಮೆಕ್ಸಿಕೋನಲ್ಲಿ ಆರಂಭಗೊಂಡಿತು ಮತ್ತು 77 ದಿನಗಳ ಕಾಲ ನಡೆಯಿತು. $200 ಮಿಲಿಯನ್ ಬಜೆಟ್‌ನ ಈ ಚಲನಚಿತ್ರವು ಸದ್ಯಕ್ಕೆ ಇತಿಹಾಸದಲ್ಲಿಯೇ ಅತ್ಯಂತ ದುಬಾರಿಯಾದ ಸ್ವತಂತ್ರ ಪ್ರೊಡಕ್ಷನ್ ಆಗಿದೆ. ಟರ್ಮಿನೇಟರ್ ಸಾಲ್ವೇಶನ್ ಮೇ 21, 2009ರಂದು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಗಳಲ್ಲಿ ಮತ್ತು ಅದೇ ವರುಷ ಜೂನ್‍ನಲ್ಲಿ ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಸೌಥ್ ಆಫ್ರಿಕಾಗಳಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರಕ್ಕೆ ಮಿಶ್ರ ಅಥವಾ ಸರಾಸರಿ ವಿಮರ್ಶಾತ್ಮಕ ಸ್ವೀಕಾರ ದೊರಕಿತು[೨] ಮತ್ತು ಮೊದಮೊದಲಿನ ಲಾಭದ ನಿರೀಕ್ಷೆಯನ್ನು ಇದು ಹುಸಿಗೊಳಿಸಿತು. ಆದರೆ ಇದರ ಒಟ್ಟು ಜಾಗತಿಕ ಲಾಭವು $372 ಮಿಲಿಯನ್‌ನಷ್ಟಾಗಿದ್ದು ಲಾಭದ ವಿಷಯದಲ್ಲಿ ಈ ಚಲನಚಿತ್ರವು 2009ರಲ್ಲಿ 16ನೇ ಸ್ಥಾನವನ್ನು ಪಡೆದುಕೊಂಡಿತು.[೩]

ಕಥಾವಸ್ತು

2003ರಲ್ಲಿ, ಸೈಬರ್‌ಡೈನ್ ಸಿಸ್ಟಮ್ಸ್ನ ಡಾಕ್ಟರ್ ಸಿರೀನಾ ಕೋಗನ್ (ಹೆಲೆನಾ ಬಾನ್‌ಹ್ಯಾಮ್ ಕಾರ್ಟರ್) ಮರಣದಂಡನೆಗೆ ಕಾಯುತ್ತಿರುವ ಖೈದಿ ಮಾರ್ಕಸ್ ರೈಟ್ (ಸ್ಯಾಮ್ ವರ್ದಿಂಗ್‌ಟನ್) ತನ್ನ ದೇಹವನ್ನು ವಿಷದ ಇಂಜೆಕ್ಷನ್ ನೀಡಿ ಸಾಯಿಸಲಾದ ನಂತರ ವೈದ್ಯಕೀಯ ಸಂಶೋಧನೆಗೆ ನೀಡುವಂತೆ ಮನವೊಲಿಸುತ್ತಾಳೆ. ಒಂದು ವರ್ಷದ ನಂತರ ಸ್ಕೈನೆಟ್ ವ್ಯವಸ್ಥೆಯು ಚಾಲನೆಗೆ ಬರುತ್ತದೆ ಮಾತ್ರವಲ್ಲದೆ ಮನುಷ್ಯರ ಇರುವಿಕೆಯನ್ನು ತನ್ನ ಅಸ್ತಿತ್ವಕ್ಕೆ ಬೆದರಿಕೆಯನ್ನಾಗಿ ಪರಿಗಣಿಸಿ ಮನುಷ್ಯಕುಲದ ಹೆಚ್ಚಿನ ಭಾಗವನ್ನು ಜಡ್ಝ್‌ಮೆಂಟ್ ಡೇ ಎಂದು ಕರೆಯಲಾಗುವ ವಿದ್ಯಮಾನದ ಮೂಲಕ ಅಳಿಸಿಹಾಕುತ್ತದೆ (ನೋಡಿ Terminator 3: Rise of the Machines ). 2018ರಲ್ಲಿ ಜಾನ್ ಕಾನರ್ (ಕ್ರಿಶ್ಚಿಯನ್ ಬೇಲ್) ಒಂದು ಸ್ಕೈನೆಟ್ ತಾಣದ ಮೇಲೆ ರೆಸಿಸ್ಟೆನ್ಸ್ ಮಾಡುವ ದಾಳಿಯೊಂದರ ಮುಂದಾಳತ್ವ ವಹಿಸುತ್ತಾನೆ. ಇಲ್ಲಿ ಮಾನವ ಸೆರೆಯಾಳುಗಳಿರುವುದನ್ನು ಕಾಣುವ ಜಾನ್ ಮಾನವ ಅಂಗಾಂಶಗಳ ಹೊದಿಕೆಯುಳ್ಳ ಹೊಸ ರೀತಿಯ ಟರ್ಮಿನೇಟರ್ಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕುತ್ತಾನೆ ಆದರೆ ಈ ತಾಣವು ಒಂದು ಪರಮಾಣು ಸ್ಫೋಟದಲ್ಲಿ ನಾಶವಾದ ನಂತರ ಈತನೊಬ್ಬನೇ ಬದುಕುಳಿಯುತ್ತಾನೆ. ಆದರೆ ತಾಣದ ಅವಶೇಷಗಳಿಂದ ಮಾರ್ಕಸ್ ಹೊರಗೆ ಬರುತ್ತಾನೆ ಮತ್ತು ಲಾಸ್ ಏಂಜೆಲ್ಸ್ ಕಡೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾನೆ.

ಒಂದು ಪರಮಾಣು ಸಬ್‌ಮೆರೀನ್ನಲ್ಲಿರುವ ರೆಸಿಸ್ಟೆನ್ಸ್‌ನ ಕೇಂದ್ರಕಚೇರಿಗೆ ಮರಳುವ ಜಾನ್, ಆಗಿನ ನಾಯಕ ಜನರಲ್ ಆಶ್‌ಡೌನ್‌ಗೆ (ಮೈಕೆಲ್ ಐರನ್‌ಸೈಡ್ ತನ್ನ ಸಂಶೋಧನೆಯ ಬಗ್ಗೆ ತಿಳಿಸುತ್ತಾನೆ. ಇದೇ ವೇಳೆಗೆ ಸ್ಕೈನೆಟ್ ಯಂತ್ರಗಳನ್ನು ಸ್ತಬ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆಯೆನ್ನಲಾದ ರೇಡಿಯೋ ಫ್ರೀಕ್ವೆನ್ಸಿಯನ್ನು ರೆಸಿಸ್ಟೆನ್ಸ್ ಕಂಡುಹಿಡಿದಿರುತ್ತದೆ. ರೆಸಿಸ್ಟೆನ್ಸ್‌ಗೆ ದೊರಕಿದ ಸ್ಕೈನೆಟ್‌ನ ’ಕೊಲೆ ಪಟ್ಟಿ’ಯೊಂದರ ಪ್ರಕಾರ ಮುಂದಿನ ಒಂದು ವಾರದೊಳಗೆ ಸ್ಕೈನೆಟ್ ರೆಸಿಸ್ಟೆನ್ಸ್‌ನ ನಿರ್ಣಾಯಕ ಸಿಬ್ಬಂದಿಯನ್ನು ಕೊಲೆಗೈಯುವ ಯೋಜನೆ ಹಾಕಿದೆ ಎಂದು ತಿಳಿದು ಬಂದಾಗ, ರೆಸಿಸ್ಟೆನ್ಸ್ ಇದಕ್ಕೆ ಪ್ರತಿಯಾಗಿ ಮುಂದಿನ ನಾಲ್ಕು ದಿನಗಳಲ್ಲಿ ಸ್ಕೈನೆಟ್‌ನ ಸ್ಯಾನ್ ಫ್ರ್ಯಾನ್ಸಿಸ್ಕೋ ತಾಣದ ಮೇಲೆ ದಾಳಿ ಮಾಡುವ ಯೋಜನೆ ಹಾಕುತ್ತಾರೆ. ಜಾನ್‌ಗೆ ಈ ಪಟ್ಟಿಯಲ್ಲಿ ಕೈಲ್ ರೀಸ್ನ ನಂತರ ತನ್ನ ಹೆಸರು ಎರಡನೇ ಸ್ಥಾನದಲಿರುವುದು ತಿಳಿದು ಬರುತ್ತದೆ. ರೆಸಿಸ್ಟೆನ್ಸ್‌ನ ನಾಯಕರಿಗೆ ಸ್ಕೈನೆಟ್‌ಗೆ ಕೈಲ್ ರೀಸ್‌ನ ಪ್ರಾಮುಖ್ಯತೆಯ ಬಗ್ಗೆ ಅರಿವಿಲ್ಲದಿದ್ದರೂ, ಜಾನ್‌ಗೆ ಕೈಲ್ ಮುಂದೆ ತನ್ನ ತಂದೆಯಾಗುವನೆಂದು ತಿಳಿದಿದೆ (ನೋಡಿ ದ ಟರ್ಮಿನೇಟರ್). ಜಾನ್ ತನ್ನ ಆಫೀಸರ್ ಬಾರ್ನ್ಸ್ (ಕಾಮನ್) ಮತ್ತು ಹೆಂಡತಿ ಕೇಟ್ (ಬ್ರೈಸ್ ಡಲ್ಲಾಸ್ ಹವರ್ಡ್)ರನ್ನು ಭೇಟಿಯಾಗುತ್ತಾನೆ ಮತ್ತು ರೆಸಿಸ್ಟೆನ್ಸ್‌ನ ಸದಸ್ಯರು ಮತ್ತು ಪ್ರಪಂಚದಲ್ಲಿ ಬದುಕುಳಿದಿರುವ ಎಲ್ಲಾ ನಾಗರಿಕರಿಗೆ ರೇಡಿಯೋ ಸಂದೇಶಗಳನ್ನು ಕಳುಹಿಸುತ್ತಾನೆ.

ಲಾಸ್ ಏಂಜೆಲ್ಸ್‌ನ ಅವಶೇಷಗಳನ್ನು ತಲುಪುವ ಮಾರ್ಕಸ್‌ನನ್ನು ಕೈಲ್ ರೀಸ್ (ಆಂಟನ್ ಯೆಲ್‌ಶಿನ್) ಮತ್ತು ಆತನ ಮೂಕ ಜತೆಗಾತಿ ಸ್ಟಾರ್ (ಜೇಡಾಗ್ರೇಸ್ ಬೆರಿ) ಒಂದು T-600 ಟರ್ಮಿನೇಟರ್‌ನಿಂದ ಬಚಾವು ಮಾಡುತ್ತಾರೆ. ಕೈಲ್ ಮಾರ್ಕಸ್‌ನಿಗೆ ಜಡ್ಜ್‌ಮೆಂಟ್ ಡೇಯ ಘಟನೆಗಳು ಮತ್ತು ಅದರ ನಂತರ ಮನುಷ್ಯರು ಮತ್ತು ಯಂತ್ರಗಳ ನಡುವೆ ಆರಂಭವಾದ ಯುದ್ಧದ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾನೆ. ಜಾನ್‌ನ ರೇಡಿಯೋ ಪ್ರಸಾರವನ್ನು ಆಲಿಸಿದ ನಂತರ ಈ ಮೂವರೂ ರೆಸಿಸ್ಟೆನ್ಸ್ ಅನ್ನು ಹುಡುಕುತ್ತ ಲಾಸ್ ಏಂಜೆಲ್ಸ್‌ನಿಂದ ಹೊರಡುತ್ತಾರೆ. ಯಂತ್ರಗಳು ನಡೆಸುವ ಒಂದು ದಾಳಿಯಲ್ಲಿ ಅವರು ಬದುಕುಳಿಯುತ್ತಾರೆ, ಆದರೆ ಕೈಲ್, ಸ್ಟಾರ್ ಮತ್ತು ಹಲವಾರು ಮನುಷ್ಯರನ್ನು ಸೆರೆಹಿಡಿಯಲಾಗುತ್ತದೆ ಮತ್ತು ರೆಸಿಸ್ಟೆನ್ಸ್‌ನ ಒಂದು ಜೋಡಿ A-10ಗಳನ್ನು ಹೊಡೆದುರುಳಿಸಲಾಗುತ್ತದೆ. ದಾಳಿಯಲ್ಲಿ ಸೋತ ಪೈಲಟ್ ಬ್ಲೇರ್ ವಿಲಿಯಮ್ಸ್‌ನನ್ನು (ಮೂನ್ ಬ್ಲಡ್‌ಗುಡ್) ಭೇಟಿಯಾಗುವ ಮಾರ್ಕಸ್ ಆತನೊಡನೆ ಜಾನ್‌ನ ನೆಲೆಗೆ ತೆರಳುತ್ತಿರುವಾಗ ಒಂದು ಆಯಸ್ಕಾಂತೀಯ ಲ್ಯಾಂಡ್ ಮೈನ್ನಿಂದ ತೀವ್ರವಾಗಿ ಘಾಸಿಗೊಳ್ಳುತ್ತಾನೆ. ಆತನನ್ನು ಉಳಿಸಲು ಪ್ರಯತ್ನಪಡುತ್ತಿರುವ ರೆಸಿಸ್ಟೆನ್ಸ್‌ನ ಸೈನಿಕರಿಗೆ ಆತ ನಿಜವಾಗಿ ಮಾನವ ಅಂಗಾಂಗಗಳನ್ನು ಹೊಂದಿರುವ, ಒಂದು ಯಾಂತ್ರಿಕ ಎಂಡೋಸ್ಕೆಲಿಟನ್, ಸರ್ಕ್ಯೂಟ್ರಿ ಮತ್ತು ಒಂದು ಅರೆಕೃತಕ ಸೆರೆಬ್ರಲ್ ಕಾರ್ಟೆಕ್ಸ್ ಅನ್ನು ಹೊಂದಿರುವ ಒಬ್ಬ ಸೈಬೋರ್ಗ್ ಎಂದು ತಿಳಿದು ಬರುತ್ತದೆ. ತನ್ನನ್ನು ತಾನೊಬ್ಬ ಮಾನವನೆಂದೇ ಭಾವಿಸಿರುವ ಮಾರ್ಕಸ್ ಕೈಲ್‌ನನ್ನು ಸ್ಕೈನೆಟ್‌ನಿಂದ ಪಾರುಮಾಡುವ ಸಲುವಾಗಿ ತನ್ನನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಾನೆ, ಆದರೆ ಜಾನ್ ಮಾರ್ಕಸ್ ತನ್ನನ್ನು ಕೊಲ್ಲಲು ಬಂದಿದ್ದಾನೆಂದು ತಿಳಿದು ಆತನನ್ನು ನಾಶಮಾಡಲು ಆದೇಶಿಸುತ್ತಾನೆ. ಆದರೆ, ಬ್ಲೇರ್ ಆತನನ್ನು ಬಿಡುಗಡೆ ಮಾಡಿ, ತಾಣದಿಂದ ಪರಾರಿಯಾಗಲು ಸಹಾಯ ಮಾಡುತ್ತಾನೆ. ಇದರಿಂದ ಆತನ ಬೆನ್ನಟ್ಟಿ ಬರುವ ಜಾನ್‌ನ ಜೀವವನ್ನು ಸ್ಕೈನೆಟ್ ಹೈಡ್ರೋಬೋಟ್‌ಗಳಿಂದ ಮಾರ್ಕಸ್ ಉಳಿಸುತ್ತಾನೆ, ಹಾಗೂ ಇದರ ನಂತರ ಇವರಿಬ್ಬರ ನಡುವೆ ಆಗುವ ಒಪ್ಪಂದದ ಪ್ರಕಾರ ಮಾರ್ಕಸ್ ಸ್ಕೈನೆಟ್‌ನ ಪ್ರಧಾನ ಕಚೇರಿಯೊಳಗೆ ನುಗ್ಗಿ ಅದರ ಭದ್ರತಾವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವುದು ಮತ್ತು ಹೀಗೆ ಮಾಡುವುದರ ಮೂಲಕ ಕೈಲ್‌ನನ್ನು ರಕ್ಷಿಸಲು ಜಾನ್‌ಗೆ ನೆರವಾಗುವುದೆಂದು ನಿರ್ಧಾರವಾಗುತ್ತದೆ.

ಜಾನ್ ಆಶ್‌ಡೌನ್‌ನಿಗೆ ತಾನು ಕೈಲ್‌ ಮತ್ತು ಇತರ ಸೆರೆಯಾಳುಗಳನ್ನು ರಕ್ಷಿಸುವ ತನಕ ದಾಳಿಯನ್ನು ತಡೆಹಿಡಿಯುವಂತೆ ಒತ್ತಾಯಿಸುತ್ತಾನೆ, ಆದರೆ ಇದಕ್ಕೆ ನಕಾರ ಸೂಚಿಸುವ ಆಶ್‌ಡೌನ್ ಜಾನ್‌ನನ್ನು ಆತನ ಸ್ಥಾನದಿಂದ ತೆಗೆದುಹಾಕುತ್ತಾನೆ. ಆದರೂ ಜಾನ್‌ನ ಸೈನಿಕರು ಆತನಿಗೆ ನಿಷ್ಟರಾಗಿ ಉಳಿಯುತ್ತಾರೆ ಮತ್ತು ಸ್ಕೈನೆಟ್ ನೆಲೆಯ ಮೇಲೆ ದಾಳಿ ಮಾಡಬಾರದೆಂಬ ಆತನ ಆದೇಶವನ್ನು ಪಾಲಿಸುತ್ತಾರೆ. ಇದೇ ವೇಳೆಗೆ ನೆಲೆಯೊಳಗೆ ನುಗ್ಗಿದ ಮಾರ್ಕಸ್ ಕಂಪ್ಯೂಟರ್ ಮೂಲಕ ಪರಿಧಿಯ ಭದ್ರತೆಗಳನ್ನು ನಿಷ್ಕ್ರಿಯಗೊಳಿಸುವುದರ ಮೂಲಕ ಜಾನ್‌ಗೆ ಬಂದೀಖಾನೆ ಪ್ರವೇಶಿಸಿ ಮಾನವ ಸೆರೆಯಾಳುಗಳನ್ನು ಸ್ವತಂತ್ರಗೊಳಿಸಲು ಸಹಾಯ ಮಾಡುತ್ತಾನೆ. ರೆಸಿಸ್ಟೆನ್ಸ್‌ನ ನಿಷ್ಕ್ರಿಯಗೊಳಿಸುವ ಸಿಗ್ನಲ್ ಒಂದು ಸಂಚೆಂದು ಬಯಲಾಗುತ್ತದೆ ಮತ್ತು ರೆಸಿಸ್ಟೆನ್ಸ್‌ನ ಎಲ್ಲ ನಾಯಕರೂ ಇರುವ ಕಮ್ಯಾಂಡ್ ಸಬ್‌ಮೆರೀನ್ ಅನ್ನು ವಿಧ್ವಂಸಗೊಳಿಸಲಾಗುತ್ತದೆ.

ಮಾರ್ಕಸ್‌ನಿಗೆ ತಾನು ಸ್ಕೈನೆಟ್‌ನ ಉತ್ಪನ್ನವೆಂದೂ ತನಗರಿವಿಲ್ಲದಂತೆಯೇ ಜಾನ್‌ನನ್ನು ಕೊಲೆಗೈಯುವ ಸಲುವಾಗಿ ಈ ನೆಲೆಗೆ ಕರೆದುಕೊಂಡು ಬರಬೇಕೆಂಬ ತನ್ನಲ್ಲಿ ವ್ಯವಸ್ಥಿತವಾಗಿ ಅಳವಡಿಸಲಾಗಿರುವ ಗುರಿಯನ್ನು ಸಾಧಿಸಿರುವುದಾಗಿಯೂ ತಿಳಿದುಬರುತ್ತದೆ. ತನ್ನನ್ನು ಸ್ಕೈನೆಟ್‌ಗೆ ಜೋಡಿಸುವ ಸಾಧನಗಳೆಲ್ಲವನ್ನೂ ನಾಶಮಾಡುವ ಆತ ಜಾನ್‌ ಒಂದು T-800 ಮಾಡೆಲ್ 101 ಟರ್ಮಿನೇಟರ್ನ ಜತೆ ಯುದ್ಧ ಮಡುತ್ತಿರುವಾಗ ಆತನಿಗೆ ಸಹಾಯ ಮಾಡುತ್ತಾನೆ. ಈ ಸೆಣಸಾಟದ ವೇಳೆಯಲ್ಲಿ ಜಾನ್ ತೀವ್ರವಾಗಿ ಗಾಯಗೊಂಡರೂ ಕೂಡ ತಾನು, ಮಾರ್ಕಸ್, ಕೈಲ್ ಮತ್ತು ಸ್ಟಾರ್ ಆಕಾಶಮಾರ್ಗದ ಮೂಲಕ ರಕ್ಷಿಸಲ್ಪಟ್ಟು ಪಾರಾಗುವ ಮುನ್ನ ಹಲವಾರು ಟರ್ಮಿನೇಟರ್ ಹೈಡ್ರೋಜನ್ ಸೆಲ್‌ಗಳನ್ನು ಒಂದು ಸ್ಫೋಟಕಕ್ಕೆ ಜೋಡಿಸಿ ಅವುಗಳು ಸಿಡಿದು ಸ್ಕೈನೆಟ್ ನೆಲೆಯು ನಿರ್ನಾಮವಾಗುವಂತೆ ಮಾಡುತ್ತಾನೆ. ಕೇಟ್ ಜಾನ್‌ನನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನಿಸುತ್ತಾಳೆ, ಆದರೆ ಆತನ ಹೃದಯ ಬಹಳ ದುರ್ಬಲವಾಗಿದೆ. ಜಾನ್‌ನನ್ನು ಉಳಿಸಿಕೊಳ್ಳುವ ಸಲುವಾಗಿ ಮಾರ್ಕಸ್ ತನ್ನ ಹೃದಯವನ್ನು ಕಸಿಮಾಡಲು ನೀಡಿ ತನ್ನ ಜೀವವನ್ನೇ ತ್ಯಾಗ ಮಾಡುತ್ತಾನೆ. ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಜಾನ್ ಇತರ ರೆಸಿಸ್ಟೆನ್ಸ್ ಯೋಧರಿಗೆ ಈ ಯುದ್ಧವನ್ನು ಗೆದ್ದಾಗಿದೆ, ಆದರೆ ಸಮರವಿನ್ನೂ ಸಮಾಪ್ತಿಯಾಗಿಲ್ಲ ಎಂದು ರೇಡಿಯೋ ಸಂದೇಶದ ಮೂಲಕ ಹೇಳುತ್ತಾನೆ.

ಪಾತ್ರವರ್ಗ

  • ಜಾನ್ ಕಾನರ್ ಪಾತ್ರದಲ್ಲಿ ಕ್ರಿಶ್ಚಿಯನ್ ಬೇಲ್: Resistanceನ ಒಬ್ಬ ಯೋಧ, ಪರಮಾಣು ಮಾರಣ ಹೋಮವೊಂದರಲ್ಲಿ ಮಾನವಕುಲವನ್ನು ವಿನಾಶದಂಚಿಗೆ ತಂದುನಿಲ್ಲಿಸಿದ್ದಕ್ಕಾಗಿ Skynetನ ವಿರುದ್ಧ ಹೋರಾಡುತ್ತಿರುವವ, ಭವಿಷ್ಯದಲ್ಲಿ ಮಾನವಕುಲದ ನೇತಾರನಾಗಲಿರುವವನು. ಚಲನಚಿತ್ರದ ಡೆವೆಲಪ್‌ಮೆಂಟ್‌ನ ವೇಳೆಯಲ್ಲಿ ನಿರ್ದೇಶಕ ಮೆಕ್‌ಜಿ ಬೇಲ್‌ನನ್ನು ಕುರಿತು "ಪ್ರಪಂಚದ ಅತ್ಯಂತ ವಿಶ್ವಸನೀಯ ಸಾಹಸಾಭಿನಯ ತಾರೆ" ಎಂದು ಉದ್ಗರಿಸಿದರು.[೪] ಮೆಕ್‌ಜಿ ಬೇಲ್‌ನಿಗೆ ಮಾರ್ಕಸ್‌ನ ಪಾತ್ರ ನೀಡಬೇಕೆಂದಿದ್ದರು, ಆದರೆ - "ಯಾಕೆ ಎಂದು ಮರೆತುಹೋಗಿದೆ" - ಎನ್ನುವ ಈ ನಟ ಜಾನ್‍‍ನ ಪಾತ್ರವಹಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು, ಮತ್ತು ಇದರಿಂದಾಗಿ ಈ ಪಾತ್ರದ ವಿಕಸನ ಮಾಡಲಾಯಿತು ಹಾಗೂ ಸ್ಕ್ರಿಪ್ಟ್‌ ಅನ್ನು ಮತ್ತೆ ಅದಕ್ಕನುಸಾರವಾಗಿ ಬರೆಯಲಾಯಿತು.[೫][೬] ಬೇಲ್‌‌ ಈ ಪಾತ್ರಕ್ಕೆ ಆಯ್ಕೆಯಾಗಿ 2007ರಲ್ಲಿ ಸೈನ್ ಮಾಡಿದ ಪ್ರಥಮ ನಟ. ಮೆಕ್‌ಜಿ ಬೇಲ್‌ರ ಜತೆಗೆ ಯು.ಕೆಯಲ್ಲಿ ಆತ ದ ಡಾರ್ಕ್ ನೈಟ್ ನ ಚಿತ್ರೀಕರಣ ಮಾಡುತ್ತಿದ್ದ ವೇಳೆಗೆ ಈ ಪಾತ್ರದ ಬಗ್ಗೆ ವಿವರವಾಗಿ ಮಾತುಕತೆ ನಡೆಸಿದರು ಹಾಗೂ ಈರ್ವರೂ ಈ ವಿಷಯದಲ್ಲಿ ಮುಂದುವರಿಯಲು ನಿಶ್ಚಯಿಸಿದರು.[೭] ಟರ್ಮಿನೇಟರ್ ಸರಣಿಯ ಅಭಿಮಾನಿಯಾಗಿದ್ದರೂ ಕೂಡ ಬೇಲ್ ಮೊದಮೊದಲಿಗೆ ಆಸಕ್ತರಾಗಿರಲಿಲ್ಲ, ಆದರೆ ಮೆಕ್‌ಜಿ ಅವರಿಗೆ ಚಿತ್ರಕಥೆಯು ಪಾತ್ರಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವುದೆಂದೂ ಸ್ಪೆಶಲ್ ಎಫೆಕ್ಟ್‌ಗಳನ್ನೇ ಆಧರಿಸಿರುವುದಿಲ್ಲವೆಂದೂ ತಿಳಿಸಿ ಒಪ್ಪಿಸಿದರು.[೪] ಅವರಿಬ್ಬರೂ ವರ್ದಿಂಗ್‌ಟನ್‌ರ ಜತೆಗೆ ಪ್ರತಿದಿನವೂ ಕಥೆಯನ್ನು ಇಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದರು[೮] ಚಿತ್ರೀಕರಣದ ವೇಳೆಗೆ ಒಂದು ಟರ್ಮಿನೇಟರ್ ಪ್ರಾಪ್ ಅನ್ನು ಗುದ್ದುವಾಗ ಬೇಲ್ ತನ್ನ ಕೈ ಮುರಿದುಕೊಂಡರೆಂದು ಮೆಕ್‌ಜಿ ಹೇಳಿದರು.[೯] ಚಿತ್ರೀಕರಣ ಪೂರ್ತಿಯಾದ ಮೇಲೂ ಪೂರ್ಣಗೊಂಡ ಚಲನಚಿತ್ರದ ಬಗ್ಗೆ ಸಲಹೆಸೂಚನೆಗಳನ್ನು ನೀಡುವ ಸಲುವಾಗಿ ಬೇಲ್ ಎಡಿಟಿಂಗ್ ರೂಮ್‌ನಲ್ಲ್ಲಿ ಮೆಕ್‌ಜಿಯವರ ಜತೆಗೆ ಪ್ರತಿದಿನವೂ ಆರರಿಂದ ಎಂಟು ಗಂಟೆಗಳಷ್ಟು ಸಮಯವನ್ನು ವ್ಯಯಿಸಿದರು.[೧೦]
  • ಮಾರ್ಕಸ್ ರೈಟ್ ಆಗಿ ಸ್ಯಾಮ್ ವರ್ದಿಂಗ್‌ಟನ್: ಕೊಲೆಗಾಗಿ ಮರಣದಂಡನೆಯ ಶಿಕ್ಷೆಗೊಳಗಾಗಿದ್ದು ತನ್ನ ದೇಹವನ್ನು ಸೈಬರ್‌ಡೈನ್ ಸಿಸ್ಟಮ್ಸ್‌ಗೆ ಪ್ರಯೋಗಗಳಿಗಾಗಿ ದಾನಮಾಡುವ ಒಬ್ಬ ನಿಗೂಢ ವ್ಯಕ್ತಿ.[೧೧] ಆತನ ಕೊನೆಯ ನೆನಪು ಮರಣದಂಡನೆಯ ವೇಳೆಗೆ ನೀಡಲಾಗುವ ವಿಷದ ಇಂಜೆಕ್ಷನ್‌ನದು, ಹಾಗೂ ಜಾನ್‌ಗೆ ಮೊದಮೊದಲು ಆತ ನಂಬಲರ್ಹನೇ ಎನ್ನುವ ಬಗ್ಗೆ ಸಂಶಯವಿದೆ.[೧೨] ವರ್ದಿಂಗ್‌ಟನ್ ಮಾರ್ಕಸ್‌ನನ್ನು ಡೊರೊಥಿ ಗೇಲ್ ಮತ್ತು ಆಲಿಸ್ರಿಗೆ ಹೋಲಿಸಿದರು, ಏಕೆಂದರೆ ಆತನೂ ಅವರಿಬ್ಬರಂತೆಯೇ "ಇನ್ನೊಂದು ಪ್ರಪಂಚದಲ್ಲಿ ಎಚ್ಚರಗೊಂಡು ತನ್ನನ್ನು ಹುಡುಕಲು ಪ್ರಯತ್ನಿಸುತ್ತಾನೆ".[೧೩] ಟರ್ಮಿನೇಟರ್ ನನ್ನು ಹುಟ್ಟುಹಾಕಿದ ಜೇಮ್ಸ್ ಕ್ಯಾಮೆರಾನ್ ಮೆಕ್‌ಜಿಯವರಿಗೆ ವ್ಯಕ್ತಿಗತವಾಗಿ (ತಾನು Avatar ನಲ್ಲಿ ನಿರ್ದೇಶಿಸಿದ) ವರ್ದಿಂಗ್‌ಟನ್‌ರನ್ನು ಶಿಫಾರಸು ಮಾಡಿದರು.[೫][೧೪] ರಸೆಲ್ ಕ್ರೋವ್ ಕೂಡ ಅವರನ್ನು ಮೆಕ್‌ಜಿಗೆ ಶಿಫಾರಸು ಮಾಡಿದರು. ನಿರ್ದೇಶಕರೂ ಕೂಡ ವರ್ದಿಂಗ್‌ಟನ್ "ಇಂದಿನ ಹಲವಾರು (ಬಡಕಲು) ಯುವ ನಟ"ರಿಗಿಂತ ಹೆಚ್ಚು ದೃಢವಾಗಿ, ಗಟ್ಟಿಮುಟ್ಟಾಗಿ ಕಂಡುಬರುತ್ತಾರೆಂದು ನಿಶ್ಚಯಿಸಿದರು.[೧೧] ಕ್ಯಾಮೆರಾನ್ ತನಗೆ "ಈಗ ಹುಟ್ಟುಹಾಕಬೇಕಾಗಿರುವ ಟರ್ಮಿನೇಟರ್ ಯುದ್ಧದ ಪರವಾಗಿರುವವನು" ಎಂದು ಹೇಳಿದರೆಂದು ವರ್ದಿಂಗ್‌ಟನ್ ನೆನಪಿಸಿಕೊಂಡಿದ್ದಾರೆ.[೧೫] ಚಿತ್ರೀಕರಣದ ಮೊದಮೊದಲ ವಾರಗಳಲ್ಲಿ ತನ್ನ ಇಂಟರ್‌ಕಾಸ್ಟಲ್ ಮಾಂಸಖಂಡಗಳಿಗೆ ಘಾಸಿಯಾದರೂ ಕೂಡ ವರ್ದಿಂಗ್‌ಟನ್ ತನ್ನ ಸಾಹಸಗಳನ್ನು ತಾನೇ ಮಾಡುವುದಾಗಿ ಆಗ್ರಹಿಸಿದರು.[೧೧][೧೬] ಹಿಂದೊಮ್ಮೆ ಈ ಪಾತ್ರದಲ್ಲಿ ಕ್ರಿಶ್ಚಿಯನ್ ಬೇಲ್, ಡೇನಿಯೆಲ್ ಡೇ-ಲೀವಿಸ್ ಅಥವಾ ಜಾಶ್ ಬ್ರೋಲಿನ್ರನ್ನು ನಿಯಮಿಸಬೇಕೆಂದು ಮೆಕ್‌ಜಿ ಬಯಸಿದ್ದರು.[೧೭][೧೮] ಇದಲ್ಲದೇ, ಬ್ರೋಲಿನ್ ಬೇಲ್‌ರ ಜತೆ ಮಾತುಕತೆ ನಡೆಸಿ ಸ್ಕ್ರೀನ್‌ಪ್ಲೇಯ ಒಂದು ಡ್ರ್ಯಾಫ್ಟ್ ಅನ್ನು ಓದಿದ್ದರು ಮತ್ತು ಅದು ಅವರ ಪ್ರಕಾರ, "ಆಕರ್ಷಕ ಹಾಗೂ ರಹಸ್ಯಮಯವಾಗಿತ್ತು, (ಆದರೂ) ಕೊನೆಯಲ್ಲಿ ನನಗೆ ತಕ್ಕುದಾದ್ದೆನಿಸಲಿಲ್ಲ".[೧೯]
  • ಕೈಲ್ ರೀಸ್ನ ಪಾತ್ರದಲ್ಲಿ ಆಂಟನ್ ಯೆಲ್‌ಶಿನ್ : ಈತ ಒಬ್ಬ ಹದಿಹರೆಯದ ನಿರಾಶ್ರಿತ ಮತ್ತು ಜಾನ್ ಕಾನರ್ ಹಾಗೂ Resistanceನ ಅಭಿಮಾನಿ. ದ ಟರ್ಮಿನೇಟರ್ ನಲ್ಲಿ ಇದೇ ಪಾತ್ರದಲ್ಲಿ ನಟಿಸಿರುವ ಮೈಕೆಲ್ ಬೇಯ್ನ್ ಬಿಂಬಿಸಿರುವಂತೆ ಈತನನ್ನು ಸಮಯದಲ್ಲಿ ಹಿಂದಕ್ಕೆ 1984ಕ್ಕೆ ಸಾರಾ ಕಾನರ್ಳನ್ನು ರಕ್ಷಿಸುವ ಮೂಲಕ ಮನುಜ ಸಂಕುಲದ ಉಳಿವನ್ನು ಖಚಿತಪಡಿಸಲು ಕಳುಹಿಸಲಾಗಿತ್ತು ಮತ್ತು ಆಕೆಯೊಂದಿಗೆ ಈತ ಜಾನ್‍ನ ತಂದೆಯಾಗಿದ್ದ ಕೂಡಾ. ಯೆಲ್‌ಶಿನ್ ಕೈಲ್‌ನನ್ನು ಬೇಯ್ನ್ ಪ್ರತಿಬಿಂಬಿಸಿದ ರೀತಿಯಲ್ಲೇ ಬಿಂಬಿಸಲು ಬಯಸಿದರು ಮತ್ತು ಈ ಚಲನಚಿತ್ರದ ಕೈಲ್‍ನ ಪಾತ್ರವು ಎಳೆಯ ವಯಸ್ಸಿನವನೆಂಬ ಕಾರಣಮಾತ್ರಕ್ಕೇ ಆತನನ್ನು ದುರ್ಬಲನಂತೆ ಬಿಂಬಿಸಲು ಇಚ್ಛಿಸಲಿಲ್ಲ. ಎರಡೂ ನಟನೆಗಳಲ್ಲಿ ಕಂಡುಬರುವ ಒಂದೇ ವ್ಯತ್ಯಾಸವೆಂದರೆ ಇಲ್ಲಿ ಕೈಲ್‌ನನ್ನು ಪ್ರತಿಭಟನೆಯನ್ನು ಸಂಪೂರ್ಣವಾಗಿ ಸೇರುವ ತನಕ ಆತನನ್ನು ತೀಕ್ಷ್ಣಮತಿಯ ಆದರೆ ಕಡಿಮೆ ಏಕಾಗ್ರತೆಯುಳ್ಳವನಾಗಿ ಬಿಂಬಿಸಲಾಗಿರುವುದು. ಮೂಲ ಚಲನಚಿತ್ರದಲ್ಲಿ ಓಡುತ್ತಿರುವಾಗ ಬೇಯ್ನ್‌ನಲ್ಲಿ ಕಾಣಿಸಿಕೊಳ್ಳುವ ವೇಗದ ಮೇಲೆ ಕೇಂದ್ರೀಕರಿಸುವುದರ ಮೂಲಕ ಆತನ ತೀವ್ರತೆ, ತೀಕ್ಷ್ಣತೆಗಳನ್ನು ಹೊರತರಲು ಕೈಲ್ ಯತ್ನಿಸಿದ್ದಾರೆ.[೨೦]
  • ಕೇಟ್ ಕಾನರ್ ಪಾತ್ರದಲ್ಲಿ ಬ್ರೈಸ್ ಡಲಾಸ್ ಹವರ್ಡ್: ಜಾನ್‌ನ ಪತ್ನಿ, ಏಳು ತಿಂಗಳ ಗರ್ಭಿಣಿ. ಈ ಪಾತ್ರವನ್ನು ಮೊದಲು ಶಾರ್ಲಟ್ ಗೇನ್ಸ್‌ಬೂರ್ಗ್ ನಿರ್ವಹಿಸಬೇಕಾಗಿತ್ತು, ಆದರೆ ಆಕೆ ನಟಿಸುತ್ತಿದ್ದ ಇನ್ನೊಂದು ಚಲನಚಿತ್ರದ ಶೆಡ್ಯೂಲ್‌ನ ಜೊತೆಗೆ ತೊಡಕಾದಾಗ ಆಕೆ ನಿರ್ಗಮಿಸಿದರು.[೨೧] ಮೂರನೇ ಚಲನಚಿತ್ರದಲ್ಲಿ ಕ್ಲೇರ್ ಡೇನ್ಸ್ ಬಿಂಬಿಸಿರುವಂತೆ ಕೇಟ್ ಒಬ್ಬ ವೆಟೆರಿನೇರಿಯನ್; ಆದರೆ ಈ ಚಲನಚಿತ್ರದಲ್ಲಿ ಇದು ಬದಲಾಗಿ ಆಕೆ ಫಿಸಿಶಿಯನ್ ಎಂದಾಗಿದೆ. ಹವರ್ಡ್‌ರ ಸಲಹೆಯಂತೆ, ಪಾತ್ರದ ಹಿನ್ನೆಲೆಕಥೆಯ ಪ್ರಕಾರ, ಕೇಟ್ ಜಡ್ಜ್‌ಮೆಂಟ್ ಡೇಯ ಘಟನೆಗಳ ನಂತರ ಹಲವಾರು ವೈದ್ಯಕೀಯ ಪುಸ್ತಕಗಳನ್ನು ಅಭ್ಯಸಿಸಿದ್ದಲ್ಲದೆ ಹಲವಾರು ಉಳಿದಿರುವ ವೈದ್ಯರನ್ನೂ ಸಂದರ್ಶಿಸಿರುತ್ತಾಳೆ. ಚಲನಚಿತ್ರದ ವಿಷಯವು ಆಕೆಗೆ ಯುದ್ಧದಿಂದ ಜರ್ಝರಿತಗೊಂಡಿರುವ, ಸ್ವಚ್ಛ ನೀರಿನಂತಹ ಮೂಲ ಸೌಕರ್ಯಗಳ ಕೊರತೆಯನ್ನು ಅಭಿವೃದ್ಧಿಶೀಲ ದೇಶಗಳ ನೆನಪು ತಂದಿತು ಹಾಗೂ ಇದು, "ನಾವು ಈಗ ಜೀವಿಸುತ್ತಿರುವ ಈ ಪ್ರಪಂಚದ ಆಗು ಹೋಗುಗಳನ್ನು ಪ್ರತಿಬಿಂಬಿಸುತ್ತಿದೆ ಮತ್ತು ಇಲ್ಲಿ ಯಾವುದೇ ಮಹಾಪ್ರಳಯವಾಗಿಲ್ಲ ಅಥವಾ ರೋಬೋಟ್‌ಗಳು ನಮ್ಮ ಪ್ರಪಂಚವನ್ನು ಆಳಲು ಆರಂಭಿಸಿಲ್ಲ. ನನಗನ್ನಿಸುತ್ತಿದೆ, ಇದನ್ನು ನಾವು ಖಂಡಿತವಾಗಿ ಮರು ಅಧ್ಯಯನ ಮಾಡಬೇಕಾಗಿದೆ ಹಾಗೂ ನಮ್ಮದೇ ಆದ ಭವಿಷ್ಯದ ಬಗ್ಗೆಗಿನ ಆಯ್ಕೆಗಳನ್ನು ನಾವೇ ಮಾಡುತ್ತೇವೆಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ".[೨೨] ಹವರ್ಡ್ ಇದರ ಜತೆಗೇ ಕೇಟ್ "ಭೀತಿ ಮತ್ತು ನಷ್ಟಕ್ಕೆ ಒಗ್ಗಿಹೋಗಿರುವುದರ" ಮೇಲೆ ಗಮನ ಕೇಂದ್ರೀಕರಿಸಿದರು, ಏಕೆಂದರೆ ಈ ಪಾತ್ರವು ಒಬ್ಬ ಮಿಲಿಟರಿ ದಂಗೆಕೋರಳದಾಗಿತ್ತು.[೨೩]
  • ಬ್ಲೇರ್ ವಿಲಿಯಮ್ಸ್ ಪಾತ್ರದಲ್ಲಿ ಮೂನ್ ಬ್ಲಡ್‌ಗುಡ್:[[ಬದುಕುಳಿದವರ ಅಪರಾಧೀಭಾವ/0}ದಿಂದ ತೊಳಲಾಡುತ್ತಿರುವ ಬ್ಲೇರ್ ಒಬ್ಬ "ಗಂಭೀರ ಮತ್ತು ಯುದ್ಧದಲ್ಲಿ ಪಳಗಿದ" ರೆಸಿಸ್ಟೆನ್ಸ್‌ನ ಪೈಲಟ್ ಮತ್ತು ಮಾರ್ಕಸ್‌ಗೆ ಪ್ರಿಯವಾದವಳೂ ಕೂಡ.|ಬದುಕುಳಿದವರ ಅಪರಾಧೀಭಾವ/0}ದಿಂದ ತೊಳಲಾಡುತ್ತಿರುವ ಬ್ಲೇರ್ ಒಬ್ಬ "ಗಂಭೀರ ಮತ್ತು ಯುದ್ಧದಲ್ಲಿ ಪಳಗಿದ" ರೆಸಿಸ್ಟೆನ್ಸ್‌ನ ಪೈಲಟ್ ಮತ್ತು ಮಾರ್ಕಸ್‌ಗೆ ಪ್ರಿಯವಾದವಳೂ ಕೂಡ.[೨೪][೨೫]]] ಮೆಕ್‌ಜಿ ಆಕೆಯ ಪಾತ್ರವನ್ನು ಫ್ರಾಂಚೈಸ್‌ನ ಉದ್ದಕ್ಕೂ ಪ್ರಮುಖವಾಗಿರುವ ಮಹಿಳಾ ಓಜಸ್ಸಿನ ಮುಂದುವರಿಕೆಯಂತೆ ಬಿಂಬಿಸಿದ್ದಾರೆ.[೨೬]
  • ಬಾರ್ನ್ಸ್ ಪಾತ್ರದಲ್ಲಿ ಕಾಮನ್: ರೆಸಿಸ್ಟೆನ್ಸ್‌ನ ಒಬ್ಬ ಯೋಧ ಮತ್ತು ಜಾನ್‌ನ ಬಲಗೈ ಬಂಟ.[೨೭][೨೮]
  • ಡಾ. ಸಿರೀನಾ ಕೋಗನ್ ಪಾತ್ರದಲ್ಲಿ ಹೆಲೆನಾ ಬಾನ್‌ಹ್ಯಾಮ್ ಕಾರ್ಟರ್ : ಜಡ್ಜ್‌ಮೆಂಟ್ ಡೇಗಿಂತ ಮೊದಲು ಸಿರೀನಾ ಸೈಬರ್‌ಡೈನ್ ಅನ್ನು ಬಿಟ್ಟಿದ್ದ ಕೊನೆಯ ಹಂತದ ಕ್ಯಾನ್ಸರ್ ಹೊಂದಿದ್ದ ವಿಜ್ಞಾನಿಯಾಗಿದ್ದು, ಆಕೆ ಮಾರ್ಕಸ್‌ನಿಗೆ ಪ್ರಾಜೆಕ್ಟ್ ಏಂಜೆಲ್‌ಗೆ ಆಕೆಯ "ಸಂಶೋಧನೆ"ಗಾಗಿ ತನ್ನ ದೇಹವನ್ನು ದಾನ ಮಾಡಲು ಮನವೊಲಿಸುತ್ತಾಳೆ, ಮತ್ತು ಇದು ಮುಂದೆ ಸ್ಕೈನೆಟ್‌ಗೆ ದಕ್ಕುತ್ತದೆ.[೨೯] ಆಕೆಯ ಮುಖಚಿತ್ರವನ್ನು ಮುಂದಿನ ದಿನಗಳಲ್ಲಿ ಸ್ಕೈನೆಟ್ ಮಾರ್ಕಸ್ ಜತೆಗೆ ಮಾತುಕತೆ, ಸಂಪರ್ಕ ಹೊಂದಲು ಬಳಸಿಕೊಳ್ಳುತ್ತದೆ. ಈ ಪಾತ್ರಕ್ಕಾಗಿ ಮೊದಲು ಟಿಲ್ಡಾ ಸ್ವಾಂಟನ್ರನ್ನು ಪರಿಗಣಿಸಲಾಗಿದ್ದರೂ ಕೂಡ ಚಿತ್ರೀಕರಣಕ್ಕೆ ಮೊದಲು ಬಾನ್‌ಹ್ಯಾಮ್ ಕಾರ್ಟರ್‌ರನ್ನು ತೆಗೆದುಕೊಳ್ಳಲಾಯಿತು. ಆಕೆಯ ಜೊತೆಗಾರ ಟಿಮ್ ಬರ್ಟನ್ಒಬ್ಬ ಟರ್ಮಿನೇಟರ್ ಅಭಿಮಾನಿಯಾಗಿದ್ದುದರಿಂದ ಆಕೆ ಈ ಪಾತ್ರವನ್ನು ಒಪ್ಪಿಕೊಂಡರಂತೆ. ಆಕೆಯ ಪಾತ್ರವು "ಸಣ್ಣದಾಗಿದ್ದರೂ ಬಹಳ ಪರಿವರ್ತನೆಗೆ ಕಾರಣವಾಗುವಂತಹದ್ದು" ಮತ್ತು ಇದಕ್ಕಾಗಿ ಕೇವಲ ಹತ್ತು ದಿವಸಗಳ ಚಿತ್ರೀಕರಣದ ಅವಶ್ಯಕತೆಯಿದ್ದಿತು.[೩೦] ಜುಲೈ 20, 2008ರಂದು ಬಾನ್‌ಹ್ಯಾಮ್ ಕಾರ್ಟರ್ ಚಿತ್ರಿಕರಣವು ಅರ್ಧ ದಿನ ಮುಂದೂಡಲು ಕಾರಣರಾದರು ಮತ್ತು ಆಕೆಯ ಕುಟುಂಬದ ನಾಲ್ವರು ಸದಸ್ಯರು ಸೌಥ್ ಆಫ್ರಿಕಾದಲ್ಲಿ ಒಂದು ಮಿನಿಬಸ್ ಅಪಘಾತಕ್ಕೀಡಾಗಿ ಮರಣ ಹೊಂದಿದಾಗ ಆಕೆಗೆ ಅನಿರ್ದಿಷ್ಟ ಕಾಲದವರೆಗೆ ರಜೆ ನೀಡಲಾಯಿತು.[೩೧]
  • T-800 ಮಾಡೆಲ್ 101 ಪಾತ್ರದಲ್ಲಿ ರೋಲಂಡ್ ಕಿಕಿಂಜರ್: ಮಾನವಕುಲದ ವಿನಾಶಕ್ಕಾಗಿ ಸ್ಕೈನೆಟ್ ಹೊಸದಾಗಿ ತಯಾರಿಸಿದ ಅಸ್ತ್ರ, ಮತ್ತು ಇದು ಜೀವಿತ ಮಾನವ ಅಂಗಾಂಶಗಳನ್ನು ಹೊದ್ದುಕೊಂಡ ಪ್ರಥಮ ಟರ್ಮಿನೇಟರ್. ಡಿಜಿಟಲ್ ಮೇಕ್-ಅಪ್ ಅನ್ನು ರೂಪಿಸಲು 1984ರಲ್ಲಿ ತಯಾರಿಸಲಾಗಿದ್ದ ಅರ್ನಾಲ್ಡ್ ಶ್ವಾರ್ಜೆನೆಗರ್ನ ಮುಖದ ಅಚ್ಚೊಂದನ್ನು ಉಪಯೋಗಿಸಿಕೊಂಡು ಅವರ ಮುಖದ ಹೋಲಿಕೆಯನ್ನು CGI ಮುಖಾಂತರ ಬಳಸಿಕೊಳ್ಳಲಾಯಿತು.[೩೨] ಈ ಮೊದಲು 2005ರ ಜೀವನ ಚರಿತ್ರೆಯ ಫಿಲ್ಮ್ ಸೀ ಅರ್ನಾಲ್ಡ್ ರನ್ ನಲ್ಲಿ ಶ್ವಾರ್ಜೆನೆಗರ್ ಪಾತ್ರ ವಹಿಸಿದ್ದ ಅವರ ಜತೆಯ ಆಸ್ಟ್ರಿಯಾದ ಬಾಡಿಬಿಲ್ಡರ್ ಮತ್ತು ನಟ ಕಿಕಿಂಜರ್‌ರವರು ಸೆಟ್‌ನ ಮೇಲೆ ಅವರ ದೇಹದ ಡಬಲ್ ಆಗಿದ್ದರು. ಈ ಪಾತ್ರದ ಬಗ್ಗೆ ಪ್ರಶ್ನಿಸಿದಾಗ, ಕಿಕಿಂಜರ್ ಅದು "ಮೊದಲ ಟರ್ಮಿನೇಟರ್‌ ನಲ್ಲಿ ಅರ್ನಾಲ್ಡ್‌ರ ಪಾತ್ರ. ಇದು ಮೂಲತಃ ನನ್ನ ಪಾತ್ರವಾಗಿದೆ, ಆದರೆ 20 ವರ್ಷಗಳ ಹಿಂದೆ, ಹೀಗಾಗಿ ಅದು ಟರ್ಮಿನೇಟರ್ ಹೇಗೆ ಅಸ್ತಿತ್ವಕ್ಕೆ ಬಂದನೆನ್ನುವುದನ್ನು ಸ್ಪಷ್ಟಪಡಿಸುತ್ತದೆ." ಎಂದು ಹೇಳಿದರು.[೩೩] ಶ್ವಾರ್ಜೆನೆಗರ್‌ರ ಡಬಲ್ ಆಗಿ ನಟಿಸಲು ಪಾಲಿಶ್ ಮೂಲದ ಬಲಶಾಲಿ ಅಥ್ಲೀಟ್ ಮೇರಿಯಸ್ಜ್ ಪುಡ್ಜಿಯಾನೋವ್‌ಸ್ಕಿಯವರನ್ನೂ ಪರಿಗಣಿಸಲಾಗಿತ್ತು.[೩೪] ಶ್ವಾರ್ಜೆನೆಗರ್ ಈ ಚಿತ್ರಕ್ಕೆ ತನ್ನ ರೂಪವನ್ನು ನೀಡಲು ಒಪ್ಪಿಕೊಳ್ಳದೇ ಹೋಗಿದ್ದ ಪಕ್ಷದಲ್ಲಿ, ಪ್ರೇಕ್ಷಕರು T-800ನ ಮುಖವನ್ನು ಸರಿಯಾಗಿ ನೋಡುವ ಮುನ್ನವೇ ಜಾನ್ ಅದರ ಮುಖವನ್ನು ಗುಂಡಿಕ್ಕಿ ನಾಶಮಾಡಬೇಕಾಗಿತ್ತು.[೩೫]
  • ಸ್ಟಾರ್ ಪಾತ್ರದಲ್ಲಿ ಜೇಡಾಗ್ರೇಸ್ ಬೆರಿ: ಕೈಲ್‌ನ ಆರೈಕೆಯಡಿಯಲ್ಲಿರುವ ಒಬ್ಬ ಒಂಬತ್ತು ವರುಷ ವಯಸ್ಸಿನ ಬಾಲಕಿ.[೨೩] ಜಡ್ಜ್‌ಮೆಂಟ್ ಡೇಯಂದು ಹುಟ್ಟಿದ ಈಕೆ ಅಪೋಕ್ಯಾಲಿಪ್ಸ್-ನಂತರದ ಪ್ರಪಂಚದಲ್ಲಿನ ಘಾಸಿಗಳ ಕಾರಣದಿಂದ ಮೂಕಿಯಾಗಿದ್ದಾಳೆ. ಆದರೆ ಇದರಿಂದಾಗಿ ಆಕೆಗೆ ಯಾವುದೇ ಸ್ಕೈನೆಟ್ ಯಂತ್ರವು ಹತ್ತಿರ ಬರುತ್ತಿದ್ದರೂ ತಿಳಿದುಹೋಗುವ ಅಪೂರ್ವ ಸಾಮರ್ಥ್ಯ ಲಭಿಸಿದೆ.[೨೬]
  • ಜನರಲ್ ಆಶ್‌ಡೌನ್ ಪಾತ್ರದಲ್ಲಿ ಮೈಕೆಲ್ ಐರನ್‌ಸೈಡ್:ಯುನೈಟೆಡ್ ಸ್ಟೇಟ್ಸ್ ಆರ್ಮ್ಡ್ ಫೋರ್ಸಸ್ನ ಕಮ್ಯಾಂಡರ್ ಆಗಿದ್ದ ಆಶ್‌ಡೌನ್ ರೆಸಿಸ್ಟೆನ್ಸ್‌ನ ನಾಯಕನಾಗಿದ್ದಾರೆ, ಮತ್ತು ಇವರು ಜಾನ್‌ನನ್ನು ಒಂದು ಉಪದ್ರವವನ್ನಾಗಿ ಪರಿಗಣಿಸುತ್ತಿದ್ದರೂ ಆತನ ಸ್ಕೈನೆಟ್ ಯಂತ್ರಗಳ ಬಗೆಗಿನ ಅಪಾರ ಜ್ಞಾನದಿಂದಾಗಿ ಆತನಿಂದ ಪ್ರಯೋಜನವಿದೆಯೆಂದು ಅರಿತುಕೊಂಡಿದ್ದಾರೆ.
  • ಸಾರಾ ಕಾನರ್ಳ ದನಿಯಾಗಿ ಲಿಂಡಾ ಹ್ಯಾಮಿಲ್ಟನ್ : ಚಲನಚಿತ್ರದಲ್ಲಿನ ಘಟನೆಗಳು ನಡೆಯುವುದಕ್ಕೆ ಮುನ್ನ ಜಾನ್‌ನಿಗೆ ಯುದ್ಧದ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಸಾರಾ ತನ್ನ ಸಾವಿಗೆ ಮುನ್ನ ರೆಕಾರ್ಡ್ ಮಾಡಿದ ಟೇಪ್‍ಗಳಲ್ಲಿ ಹ್ಯಾಮಿಲ್ಟನ್‍ರ ದನಿಯನ್ನು ಆಲಿಸಬಹುದು.[೩೬]

ಉತ್ಪಾದನೆ

ಅಭಿವೃದ್ಧಿ

1999ರಲ್ಲಿ, C2 Pictures ಈ ಯೋಜನೆಯ ಹಕ್ಕುಗಳನ್ನು ಖರೀದಿಸಿದ ಎರಡು ವರ್ಷಗಳ ನಂತರ, ಎರಡು ಟರ್ಮಿನೇಟರ್ ಚಲನಚಿತ್ರಗಳ ನೆಲೆಗಳ ನಕ್ಷೆಗಳನ್ನು ತಯಾರಿಸಲಾಯಿತು ಮತ್ತು ಇವೆರಡೂ ಜತೆಜತೆಯಾಗಿಯೇ ತಯಾರಾಗುವದೆಂದು ಭಾವಿಸಲಾಗಿತ್ತು. ಟೆಡಿ ಸರಾಫಿಯನ್ರನ್ನು ಟರ್ಮಿನೇಟರ್ 3: ರೈಸ್ ಆಫ್ ದ ಮಶೀನ್ಸ್ ಅನ್ನು ಬರೆಯಲು ನಿಯುಕ್ತಿಗೊಳಿಸಲಾಯಿತು ಮತ್ತು ಇದಕ್ಕಾಗಿ ಕೊನೆಗೆ ಅವರಿಗೆ ಜಂಟಿಯಾಗಿ ಕಥೆ ಬರೆದರೆಂಬ ಸ್ಥಾನ ದಕ್ಕಿತು, ಹಾಗೂ ಟರ್ಮಿನೇಟರ್ 4 ಅನ್ನು ಡೇವಿಡ್ ಸಿ. ವಿಲ್ಸನ್ ಬರೆಯಬೇಕಾಗಿದ್ದಿತು. ಯಾವುದೇ ಪರಿಷ್ಕರಣೆಗಳನ್ನು ಮಾಡುವ ಮೊದಲೇ T3 ಮೊದಲಿಗೆ 2001ರಲ್ಲಿ ಹೊರಬಂದಿತು ಮತ್ತು ಇದು ಸ್ಕೈನೆಟ್ ಮತ್ತು ಮಾನವರ ನಡುವಿನ ಮೊದಮೊದಲ ಯುದ್ಧಗಳನ್ನು ಆಧರಿಸಿದ್ದಾಗಿತ್ತು. ಇದಾದ ಕೂಡಲೆ T4 ಬಿಡುಗಡೆಯಾಗುವುದಿತ್ತು ಮತ್ತು ಮೊದಲೆರಡು ಚಲನಚಿತ್ರಗಳಲ್ಲಿ ಕಂಡುಬರುವ ಯುದ್ಧಗಳ ಮೇಲೆ ಕೇಂದ್ರೀಕೃತವಾಗಿರಬೇಕಿದ್ದಿತು.[೩೭] Warner Bros. ಈ ಚಲನಚಿತ್ರಕ್ಕೆ "ಪ್ರಾಜೆಕ್ಟ್ ಏಂಜೆಲ್" ಎಂಬ ಗುಪ್ತನಾಮವನ್ನು ನೀಡಿದ್ದರು.

2003ರಲ್ಲಿ ಟರ್ಮಿನೇಟರ್ 3 ಬಿಡುಗಡೆಯಾದ ಮೇಲೆ ನಿರ್ಮಾಪಕರಾದ ಆಂಡ್ರಿವ್ ಜಿ. ವಾಜ್ನಾ ಮತ್ತು ಮಾರಿಯೋ ಕಸ್ಸಾರ್ ಮುಂದಿನ ಚಲನಚಿತ್ರದಲ್ಲಿ ಜಾನ್ ಕಾನರ್ ಮತ್ತು ಕೇಟ್ ಬ್ರಿವ್‌ಸ್ಟರ್ ಪಾತ್ರಗಳಲ್ಲಿ ನಟಿಸಲು ನಿಕ್ ಸ್ಟಾಹ್ಲ್ ಮತ್ತು ಕ್ಲೇರ್ ಡೇನ್ಸ್ರೊಂದಿಗೆ ಒಪ್ಪಂದ ಮಾಡಿಕೊಂಡರು.[೩೮] ನಿರ್ದೇಶಕ ಜಾನಥನ್ ಮೋಸ್ಟೋವ್ ಜಾನ್ ಬ್ರ್ಯಾನ್‌ಕ್ಯಾಟೋ ಮತ್ತು ಮೈಕೆಲ್ ಫೆರಿಸ್ ಬರೆದಿದ್ದ ಸ್ಕ್ರಿಪ್ಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡಿದರು ಮತ್ತು ಒಂದು ಚಲನಚಿತ್ರವನ್ನು ನಿರ್ದೇಶಿಸಿ ಮುಗಿಸಿದ ಬಳಿಕ 2005ರಲ್ಲಿ ಈ ಚಲನಚಿತ್ರವನ್ನು ನಿರ್ದೇಶಿಸಲು ತಯಾರಾಗಿದ್ದರು. ಆ ವೇಳೆಗಾಗಲೇ ಅರ್ನಾಲ್ಡ್ ಶ್ವಾರ್ಜೆನೆಗರ್ ಗವರ್ನರ್ ಆಫ್ ಕ್ಯಾಲಿಫೋರ್ನಿಯಾ ಹುದ್ದೆಯಲ್ಲಿದ್ದುದರಿಂದಾಗಿ ಅವರ ಪಾತ್ರವು ಈ ಚಲನಚಿತ್ರದಲ್ಲಿ ಬಹಳ ಕಡಿಮೆ ಸಮಯದ್ದಾಗಿರುವುದೆಂದು ಎಲ್ಲರಿಗೂ ತಿಳಿದುಹೋಗಿತ್ತು. ನಿರ್ಮಾಪಕರು ಟರ್ಮಿನೇಟರ್ 3 ಚಲನಚಿತ್ರಕ್ಕೆ ಹಣಕಾಸಿನ ವ್ಯವಸ್ಥೆಯ ಸಲುವಾಗಿ Warner Bros. ಅನ್ನು ಸಂಪರ್ಕಿಸಿದರು.[೩೯] 2005ರಲ್ಲಿ, ಚಿತ್ರಕಥೆಯ ಸಮಯವು ಬಹಳ ಮುಂದಕ್ಕೆ ಹೋಗುವುದರಿಂದ ಜಾನ್ ಮತ್ತು ಕೇಟ್‍ರ ಪಾತ್ರಗಳನ್ನು ಪುನರಾಯ್ಕೆ ಮಾಡಿಕೊಳ್ಳಲಾಗುವುದೆಂದು ಸ್ಟಾಹ್ಲ್ ಹೇಳಿಕೆ ನೀಡಿದರು.[೪೦] 2006ರ ಹೊತ್ತಿಗೆ, ಮೂಲ ಚಲನಚಿತ್ರದ ವಿತರಕರಾಗಿದ್ದ Metro-Goldwyn-Mayer ತನ್ನ ಹೊಸ ಸಿಇಒ ಹ್ಯಾರಿ ಸ್ಲೋಅನ್‌ರ ಸ್ಟುಡಿಯೋವನ್ನು ಹಾಲಿವುಡ್‌ನಲ್ಲಿ ಹೆಚ್ಚು ಪ್ರಬಲವಾಗಿಸಬೇಕೆನ್ನುವ ಯೋಜನೆಯ ಭಾಗವಾಗಿ, ನಾಲ್ಕನೆಯ ಚಲನಚಿತ್ರವನ್ನೂ ಕೂಡ ವಿತರಿಸಲು ಮುಂದೆ ಬಂದರು.[೪೧]

ಮೇ 9, 2007ರಂದು ಟರ್ಮಿನೇಟರ್ ಸರಣಿಯ ಹಕ್ಕುಗಳು ವೈಷಮ್ಯದಿಂದಿದ್ದ ವಾಜ್ನಾ ಮತ್ತು ಕಸ್ಸಾರ್‌ರಿಂದ the Halcyon Companyಯ ಕೈಸೇರಿದೆ ಎಂದು ಘೋಷಿಸಲಾಯಿತು. ಈ ಹಕ್ಕನ್ನಾಧರಿಸಿ ಒಂದು ಹೊಸ ತ್ರಿವಳಿ ಸರಣಿಯನ್ನು ನಿರ್ಮಿಸಬೇಕೆಂದು ಈ ನಿರ್ಮಾಪಕರು ಬಯಸುತ್ತಿದ್ದರು.[೪೨] ಈ ಕೊಳ್ಳುವಿಕೆಗೆ ಆರ್ಥಿಕ ಸಹಾಯ ನೀಡಿದ್ದು 0}ಸ್ಯಾಂಟಾ ಮಾನಿಕಾದ ಒಂದು ಹೆಜ್ ಫಂಡ್ ಗಿದ್ದ ಪೆಸಿಫಿಕೋರ್ ಎಂಬ ಸಂಸ್ಥೆ.{{1/} ಜುಲೈ 19ರ ಹೊತ್ತಿಗೆ ಈ ಯೋಜನೆಯು MGM ಮತ್ತು Halcyon ಉಪಸಂಸ್ಥೆಯಾದ T Asset ನಡುವಿದ್ದ ಒಂದು ಮೊಕದ್ದಮೆಯ ಕಾರಣದಿಂದ ವಿವಾದಕ್ಕೆ ಸಿಲುಕಿಕೊಂಡಿತು. MGM ಟರ್ಮಿನೇಟರ್ ಚಲನಚಿತ್ರಗಳ ವಿತರಣೆಯ ಮಾತುಕತೆ ನಡೆಸುವ ಸಲುವಾಗಿ ಮೂವತ್ತು ದಿನಗಳ ಅವಧಿಯನ್ನು ನೀಡಿತ್ತು. ಟರ್ಮಿನೇಟರ್ 4 ರ ಮಾತುಕತೆಯ ವೇಳೆಗೆ ಹ್ಯಾಲ್‌ಸ್ಯನ್ ಅವರ ಮೊದಲ ಪ್ರಸ್ತಾವನೆಯನ್ನು ನಿರಾಕರಿಸಿತು ಮತ್ತು MGM ಮಾತುಕತೆಗಳನ್ನು ಅಲ್ಲಿಗೇ ನಿಲ್ಲಿಸಿತು. ಮುವತ್ತು ದಿನಗಳ ನಂತರ MGM ಮಾತುಕತೆಯನ್ನು ರದ್ದುಗೊಳಿಸಲಾದ ದಿನಗಳನ್ನು ಪರಿಗಣಿಸಲಾಗುವುದಿಲ್ಲವೆಂದೂ, ತಮ್ಮ ವಿಶೇಷ ಗಡುವು ಇನ್ನೂ ತೆರೆದಿದೆಯೆಂದೂ ಘೋಷಿಸಿದರು. ಹ್ಯಾಲ್‌ಸ್ಯನ್ ತಾವು ಇತರ ವಿತರಕರನ್ನು ಸಂಪರ್ಕಿಸುವ ಸಲುವಾಗಿ ಕೋರ್ಟಿನ ಅನುಮತಿ ಕೋರಿದರು.[೪೩] ಕೊನೆಗೆ, ಈ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲಾಯಿತು ಮತ್ತು MGMಗೆ ಮೊದಲ ಸಾರಿ ಮತ್ತು ಐದನೇ ಟರ್ಮಿನೇಟರ್ ಚಲನಚಿತ್ರದ ವೆಚ್ಚ ಭರಿಸುವುದು ಮತ್ತು ವಿತರಣೆಯ ಅನುಮತಿ ನಿರಾಕರಿಸಲು ಮೊದಲ ಮೂವತ್ತು ದಿನಗಳ ಅವಧಿಯನ್ನು ನೀಡಲಾಯಿತು.[೪೪]

ಕೊನೆಯಲ್ಲಿ Warner Bros. $60 ಮಿಲಿಯನ್ ತೆತ್ತು ಟರ್ಮಿನೇಟರ್ ಸಾಲ್ವೇಶನ್ ನ ಯುನೈಟೆಡ್ ಸ್ಟೇಟ್ಸ್‌ನಲ್ಲಿಯ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿತು; Sony Pictures ಕೂಡಾ ಅಂತರ್ರಾಷ್ಟ್ರೀಯ ಪ್ರದೇಶಗಳಲ್ಲಿ ಈ ಚಲನಚಿತ್ರವನ್ನು ವಿತರಿಸುವ ಹಕ್ಕುಗಳನ್ನು ಪಡೆದುಕೊಳ್ಳಲು ಸುಮಾರು $100 ಮಿಲಿಯನ್‌ನಷ್ತು ಹಣ ತೆತ್ತಿತು.[೪೫]

ಸಾಹಿತ್ಯ

ಮೆಕ್‌ಜಿ ಈ ಚಲನಚಿತ್ರವನ್ನು ನಿರ್ದೇಶಿಸಲು ಸಹಿ ಹಾಕಿದ, ಏಕೆಂದರೆ ಮೊದಲ ಎರಡು ಚಲನಚಿತ್ರಗಳು ಆತನಿಗೆ ಬಹಳ ಮೆಚ್ಚಿನವಾಗಿದ್ದವು ಮತ್ತು ಆತ (T-1000 ಪಾತ್ರದಲ್ಲಿ ನಟಿಸಿದ) ರಾಬರ್ಟ್ ಪ್ಯಾಟ್ರಿಕ್ರನ್ನೂ ಕೂಡ ತನ್ನ ಚಲನಚಿತ್ರಗಳಲ್ಲಿ ನಟಿಸಲು ಆಯ್ಕೆ ಮಾಡಿದ್ದರು.[೪೬] "ಸತ್ತ ಕುದುರೆಯ ಮೇಲೆ ಚಾಟಿ ಬೀಸುವುದರ" ಬಗ್ಗೆ ಆತ ಮೊದಮೊದಲು ಅಧೀರನಾಗಿದ್ದನಾದರೂ,[೪] ಮಹಾಪ್ರಳಯದ ನಂತರದ ವಾತಾವರಣವು ಈ ಚಲನಚಿತ್ರವನ್ನು ಬರೇ ಒಂದು ಕೀಳುದರ್ಜೆಯ ಮುಂದುವರಿದ ಭಾಗವಾಗಿ ಇರಗೊಡುವುದಿಲ್ಲವೆಂದು ಆತನಿಗೆ ವಿಶ್ವಾಸವಿತ್ತು. Terminator 2: Judgment Day ಮತ್ತು ಟರ್ಮಿನೇಟರ್ 3: ರೈಸ್ ಆಫ್ ದ ಮಶೀನ್ಸ್ ನ ವಿದ್ಯಮಾನಗಳು ಭವಿಷ್ಯವನ್ನು ಬದಲಾಯಿಸುವ ಕಲ್ಪನೆಯಿದ್ದುದರಿಂದ ಅವುಗಳು ಭವಿಷ್ಯದ ವಿಶ್ವವನ್ನು ಪ್ರತಿಬಿಂಬಿಸುವಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಬೇಕಾದರೂ ಮಾಡುವುದು ಸಾಧ್ಯವಾಯಿತು.[೪೭] ಮೆಕ್‌ಜಿ ಸರಣಿಯ ಸಹ-ನಿರ್ಮಾತೃವಾದ ಜೇಮ್ಸ್ ಕ್ಯಾಮೆರಾನ್‌ರನ್ನು ಭೇಟಿಮಾಡಿದರು, ಮತ್ತು ಆತ ಈ ಯೋಜನೆಯ ಬಗ್ಗೆ ಒಳ್ಳೆಯದಾಗಲೀ ಕೆಟ್ಟದಾಗಲೀ ಏನೊಂದನ್ನೂ ಹೇಳದಿದ್ದರೂ ತಾನು ರಿಡ್ಲೀ ಸ್ಕಾಟ್ರ ಏಲಿಯೆನ್ ಚಲನಚಿತ್ರದ ನಂತರ ಏಲಿಯೆನ್ಸ್ ಅನ್ನು ನಿರ್ದೇಶಿಸಬೇಕಾಗಿ ಬಂದಾಗ ತನಗೂ ಇದೇ ರೀತಿಯ ಸವಾಲು ಎದುರಾಗಿತ್ತು ಎಂದು ಹೇಳಿದರು.[೪] ಆತ ಹಳೆಯ ಚಲನಚಿತ್ರಗಳ ಎರಡು ಅಂಶಗಳನ್ನು ಅಂತೆಯೇ ಮುಂದುವರಿಸಿದರು; ಮೊದಲನೆಯ ಅಂಶ ಜಾನ್ ಅಧಿಕಾರದಲ್ಲಿರುವವರಿಗೆ ಅಪರಿಚಿತನಾಗಿದ್ದನೆನ್ನುವುದು, ಎರಡನೆಯದು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ವ್ಯಕ್ತಿಯೊಬ್ಬನ ರಕ್ಷಣೆ - ಇಲ್ಲಿ ಆ ವ್ಯಕ್ತಿ ಕೈಲ್ ರೀಸ್.[೪೮]

ಈ ಚಲನಚಿತ್ರದ ಮೊದಲ ಸಂಪೂರ್ಣ ಸ್ಕ್ರೀನ್‌ಪ್ಲೇಯನ್ನು ಟರ್ಮಿನೇಟರ್ 3 ಯ ಬರಹಗಾರರಾದ ಜಾನ್ ಬ್ರ್ಯಾಂಕಾಟೋ ಮತ್ತು ಮೆಕೆಲ್ ಫೆರಿಸ್ ಬರೆದರು ಮತ್ತು ಸಂಪೂರ್ಣ ಸ್ಕ್ರೀನ್‌ಪ್ಲೇಯ ಸ್ತುತ್ಯತೆ ಅವರಿಗೇ ಲಭ್ಯವಾಯಿತು. ಪಾಲ್ ಹ್ಯಾಗಿಸ್ ಬ್ರ್ಯಾಂಕಾಟೋ ಮತ್ತು ಫೆರಿಸ್‌ರ ಸ್ಕ್ರಿಪ್ಟ್ ಅನ್ನು ಮತ್ತೆ ಬರೆದರು[೪೯] ಮತ್ತು ಚಿತ್ರೀಕರಣಕ್ಕೆ ಮೂರು ವಾರಗಳ ಮೊದಲು ಶಾನ್ ರಯಾನ್ ಇದನ್ನು ಮತ್ತೆ ಪರಿಷ್ಕರಣೆ ಮಾಡಿದರು.[೫೦] ಜಾನಥನ್ ನೋಲನ್ ಕೂಡಾ ಸೆಟ್‌ನಲ್ಲಿ ಬರೆಯುತ್ತಿದ್ದರು ಹಾಗೂ ಇದರಿಂದ ಮೆಕ್‌ಜಿ ಸ್ಕ್ರಿಪ್ಟ್‌ನ ಮೇಲಿನ ಅವರ ಕೆಲಸವು ಬಹಳ ಮಹತ್ವದ್ದೆಂಬ ತೀರ್ಮಾನಕ್ಕೆ ಬರುವಂತಾಯಿತು;[೪೭] ಬೇಲ್ ಈ ಚಲನಚಿತ್ರಕ್ಕೆ ಸಹಿ ಮಾಡಿದ ನಂತರವೂ ಅವರು ಚಲನಚಿತ್ರಕ್ಕೆ ಸಹಾಯಹಸ್ತ ನೀಡುತ್ತಲೇ ಇದ್ದರು ಮತ್ತು ಕಾನರ್‌ನ ನಾಯಕತ್ವದ ವರ್ತುಳವನ್ನು ಕೂಡಾ ರೂಪಿಸಿದರು.[೫೧] ಆಂಥೊನಿ ಇ. ಜ್ವಿಕರ್ ಕೂಡಾ ಸ್ಕ್ರಿಪ್ಟ್‌ಗೆ ತಮ್ಮ ಕೊಡುಗೆಯನ್ನು ನೀಡಿದರು.[೫೨] ಈ ಪುನರಾವೃತ್ತಿಗಳು ಎಷ್ಟೊಂದು ವಿಸ್ತಾರವಾಗಿದ್ದುವೆಂದರೆ ಅಲನ್ ಡೀನ್ ಫಾಸ್ಟರ್ ಪ್ರಕಾಶಕರಿಗೆ ಮುದ್ರಿಸಲು ನೀಡಿದ ಸಂಪೂರ್ಣ ಕಾದಂಬರೀಕರಣವನ್ನು ಬದಲಾಯಿಸಲು ನಿಶ್ಚಯಿಸಿದರು, ಏಕೆಂದರೆ ಆತನಿಗೆ ಮೊದಲು ನೀಡಲಾಗಿದ್ದ ಸ್ಕ್ರಿಪ್ಟ್‌ಗೂ ಕೊನೆಗೆ ಸಂಗ್ರಹಿಸಲಾದ ಚಿತ್ರೀಕರಣದ ಸ್ಕ್ರಿಪ್ಟ್‌ಗೂ ಬಹಳ ವ್ಯತ್ಯಾಸಗಳಿದ್ದವು.[೫೩]

 — ಮೆಕ್‌ಜಿ ನಾಯಕನಾಗಲು ಜಾನ್ ನಡೆಸುವ ಹೋರಾಟಗಳ ಬಗ್ಗೆ.[೫೪]

ಮೊದಮೊದಲ ಸ್ಕ್ರಿಪ್ಟ್‌ನ ಕರಡು ಪ್ರತಿಗಳಲ್ಲಿ ಜಾನ್ ಬರೇ ಒಬ್ಬ ಅನುಷಂಗಿಕ ಪಾತ್ರವಾಗಿದ್ದ. ನಿರ್ಮಾಪಕ ಜೇಮ್ಸ್ ಮಿಡ್‌ಲ್‌ಟನ್ ವಿವರಿಸಿದಂತೆ "ಬೆನ್-ಹರ್ ಜೀಸಸ್ ಕ್ರೈಸ್ಟ್ನಿಂದ ಪ್ರಭಾವಿತನಾಗಿದ್ದ, ಆದರೆ ಅದು ಆತನ ಕಥೆಯಾಗಿತ್ತು. ಇದೇ ರೀತಿಯಲ್ಲಿ ಈ (ಹೊಸ, ಪ್ರಮುಖ) ಪಾತ್ರವೂ ಕೂಡ ಜಾನ್ ಕಾನರ್‌ನಿಂದ ಪ್ರಭಾವಿತನಾಗಿರುತ್ತಾನೆ."[೫೫] ಮೂಲ ಅಂತ್ಯದಲ್ಲಿ ಜಾನ್ ಸಾಯುವುದೆಂದೂ, ರೆಸಿಸ್ಟೆನ್ಸ್ ಆತನ ಚರ್ಮವನ್ನು ಮಾರ್ಕಸ್‌ನ ಸೈಬರ್ನೆಟಿಕ್ ದೇಹಕ್ಕೆ ಅಳವಡಿಸುವುದರ ಮೂಲಕ ಆತನ ರೂಪವನ್ನು ಜೀವಂತವಾಗಿಡುವುದೆಂದೂ ನಿರ್ಧಾರವಾಗಿದ್ದಿತು.[೫೬][೫೭] ಆದರೆ ಈ ಅಂತ್ಯವು ಇಂಟರ್‌ನೆಟ್‌ನಲ್ಲಿ ಬಯಲಾದ ಮೇಲೆ, Warner Bros. ಚಲನಚಿತ್ರದ ಮೂರನೇ ಭಾಗವನ್ನು ಸಂಪೂರ್ಣವಾಗಿ ಬದಲಾಯಿಸುವುದೆಂದು ನಿಶ್ಚಯಿಸಿದರು.[೫೮] ಮೆಕ್‌ಜಿ ಮತ್ತು ನೋಲನ್ ಜಾನ್‌ನ ಪಾತ್ರದಲ್ಲಿ ಕ್ರಿಸ್ತನ ಅಂಶಗಳನ್ನು ಹಾಗೆಯೇ ಉಳಿಸಿಕೊಂಡು ಹೋದರು, ಹಾಗಾಗಿ ಚಲನಚಿತ್ರದಲ್ಲಿ ಕಾಣಬರುವ ಜಾನ್‌ನ ಹಿಂಬಾಲಕರಲ್ಲಿ ಕೆಲವರು ಆತನಿಗೆ ಸ್ಕೈನೆಟ್ ಬಗೆಗೆ ತಿಳಿದಿರುವುದನ್ನು ಸಂಪೂರ್ಣವಾಗಿ ನಂಬಿದರೆ, ಇನ್ನು ಕೆಲವರಿಗೆ ಅದರ ಬಗ್ಗೆ ನಂಬಿಕೆಯಿಲ್ಲದಿರುವಂತೆ ತೋರಿಸಲಾಗಿದೆ.[೫೯]

ಮೆಕ್‌ಜಿ "ಮಾನವರು ಮತ್ತು ಯಂತ್ರಗಳ ನಡುವೆ ಎಳೆಯಲಾಗುವ ಲಕ್ಷ್ಮಣರೇಖೆ"ಯೇ ಚಲನಚಿತ್ರದ ವಸ್ತು ಎಂದು ವಿವರಿಸುತ್ತಾರೆ.[೪] ಮಾನವಕುಲವು ಇನ್ನೂ ಮೇಲುಗೈ ಪಡೆದಿದ್ದ ಸಮಯದಲ್ಲಿ ಕೊಲೆಗಾಗಿ ಮರಣದಂಡನೆಯ ಶಿಕ್ಷೆ ಪಡೆಯುವ ಮಾರ್ಕಸ್ ಹಾಗೂ ಕೈಲ್ ರೀಸ್‌ರ ನಡುವಿನ ಸ್ನೇಹ, ಉದಾಹರಣೆಗೆ ಅವರು ಬ್ಲಿಟ್ಜ್ನ ವೇಳೆಯಲ್ಲಿ ಬದುಕುಳಿಯಲು ಅವರು ಒಟ್ಟುಗೂಡಿ ಕೆಲಸ ಮಾಡಿದ ರೀತಿಯಿಂದ ಯುದ್ಧ ಮತ್ತು ತೊಳಲಾಟಗಳು ಹೇಗೆ ಮನುಷ್ಯನ ಒಳ್ಳೆಯತನವನ್ನು ಹೊರತರಬಲ್ಲವು ಎನ್ನುವುದನ್ನು ತೋರಿಸುತ್ತದೆ.[೫೪] ಚಲನಚಿತ್ರದ ಶೀರ್ಷಿಕೆಯು ಮನುಜಕುಲ ಮತ್ತು ಮಾರ್ಕಸ್‌ರಿಗೆ ನೀಡಲಾಗುವ ಎರಡನೇ ಅವಕಾಶಗಳಿಂದ ಮತ್ತು ಮನುಜಕುಲವನ್ನು ಯಂತ್ರಗಳಿಂದ ಉಳಿಸಲೆತ್ನಿಸುವ ಜಾನ್‌ನ ಪ್ರಯತ್ನಗಳಿಂದ ವ್ಯುತ್ಪನ್ನಗೊಳಿಸಲಾಯಿತು.[೬೦] ಚಲನಚಿತ್ರದ ಮೂಲ ಶೀರ್ಷಿಕೆಯು ಟರ್ಮಿನೇಟರ್ ಸಾಲ್ವೇಶನ್: ದ ಫ್ಯೂಚರ್ ಬಿಗಿನ್ಸ್ ಎಂದಿತ್ತಾದರೂ, ಚಿತ್ರೀಕರಣದ ವೇಳೆಯಲ್ಲಿ ಇದನ್ನು ಕೈಬಿಡಲಾಯಿತು.[೫೪]

ಇದನ್ನು ಬರೆಯುವ ಸಮಯದುದ್ದಕ್ಕೂ ಚಲನಚಿತ್ರದ ಪಾತ್ರವರ್ಗ ಮತ್ತು ಇತರರು ಯಾವುದಾದರೂ ಪ್ರಸ್ತಾಪ ಅಥವಾ ಪ್ರಶಂಸೆಯನ್ನು ಕಂಡುಹಿಡಿಯುವ ಸಲುವಾಗಿ ಮೂರೂ ಚಲನಚಿತ್ರಗಳ ಸೀನ್‌ಗಳನ್ನು ನೋಡುತ್ತಲೇ ಇರುತ್ತಿದ್ದರು, ಉದಾಹರಣೆಗೆ, ಈ ಚಲನಚಿತ್ರದಲ್ಲಿ ಜಾನ್ "I'll be back" ಎಂದು ಹೇಳುತ್ತಾನೆ. ಯಾವ ಕಲ್ಪನೆಗಳನ್ನು ಒಳಗೊಳ್ಳಬೇಕು ಅಥವಾ ಕೈಬಿಡಬೇಕು ಎನ್ನುವುದನ್ನು ಮೆಕ್‌ಜಿ ನಿರ್ಧರಿಸಬೇಕಾಗಿ ಬಂದಿತು.[೬೧] ಒಂದು ಓಪನಿಂಗ್ ಸೀನ್‌ನಲ್ಲಿ ಜಾನ್ ದುರ್ಘಟನೆಗೀಡಾದ ಹೆಲಿಕಾಪ್ಟರೊಂದರ ಮೇಲೆ ಟರ್ಮಿನೇಟರ್ ಒಂದರ ಜತೆ ಹೋರಾಡುತ್ತಿರುವಂತೆ ತೋರಿಸಲಾಗಿದೆ ಮತ್ತು ಇದನ್ನು ಮೂಲ ಚಲನಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಲು ಮುರಿದುಕೊಂಡಿರುವ ಜಾನ್‌ನ ತಾಯಿಯನ್ನು ಒಂದು ಜಖಮುಗೊಂಡ ಟರ್ಮಿನೇಟರ್ ಬೆನ್ನಟ್ಟುವುದಕ್ಕೆ ಉಪಾಧಿಯಂತೆ ಬಳಸಲಾಗಿದೆ. ಆಕೆಯಿಂದ ಜಾನ್ ಕಲಿತುಕೊಂಡ ವಿಶೇಷ ಪರಿಣತಿಗಳನ್ನು ತೋರಿಸುವ ಸಲುವಾಗಿ ಮೆಕ್‌ಜಿ ಹೀಗೆ ಮಾಡಿದರು.[೧೧]

ಚಿತ್ರೀಕರಣ

ಟರ್ಮಿನೇಟರ್ ಸಾಲ್ವೇಶನ್ $200 ಬಜೆಟ್ ಅನ್ನು ಹೊಂದಿತ್ತು ಮತ್ತು ಇತಿಹಾಸದಲ್ಲೇ ಅತ್ಯಂತ ದುಬಾರಿಯಾದ ಸ್ವತಂತ್ರ ಪ್ರೊಡಕ್ಷನ್ ಆಗಿದೆ.[೬೨] ಚಲನಚಿತ್ರದ ಚಿತ್ರೀಕರಣವು ಮೇ 5, 2008ರಂದು ನ್ಯೂ ಮೆಕ್ಸಿಕೋನಲ್ಲಿ ಆರಂಭವಾಯಿತು.[೬೩] ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಸಿಬ್ಬಂದಿ ಮಾರ್ಗದರ್ಶನ ಮತ್ತು ವಿಮಾನಗಳನ್ನು ಒದಗಿಸಲು ಒಪ್ಪಿಕೊಂಡ ನಂತರ, ಅದೇ ರಾಜ್ಯದ ಕರ್ಟ್‌ಲ್ಯಾಂಡ್ ಏರ್‌ಫೋರ್ಸ್ ಬೇಸ್ನಲ್ಲಿಯೂ ಚಿತ್ರೀಕರಣ ನಡೆಸಲಾಯಿತು.[೬೪][೬೫] ಫಿಲ್ಮ್‌ಮೇಕರ್‌ಗಳು ಮೂಲತಃ ಚಿತ್ರೀಕರಣವನ್ನು ಬುಡಾಪೆಸ್ಟ್ನಲ್ಲಿ ಏಪ್ರಿಲ್ 15ರಂದು ಆರಂಭಿಸಬೇಕೆಂದಿದ್ದರು,[೬೬] ಆದರೆ ನ್ಯೂ ಮೆಕ್ಸಿಕೋನಲ್ಲಿ ದೊರಕುತ್ತಿದ್ದ ಶೇಕಡಾ ಇಪ್ಪತ್ತೈದರಷ್ಟು ತೆರಿಗೆ ರಿಬೇಟ್ ಮತ್ತು ಬಡ್ಡಿದರದ ಕ್ಯಾಪ್ ಎಂಡ್ ಫ್ಲೋರ್ ಇಲ್ಲದಿರುವುದು ಚಲನಚಿತ್ರದ ದುಬಾರಿ ಬಜೆಟ್‌ನ ಕಾರಣದಿಂದಾಗಿ ಚಲನಚಿತ್ರದ ನಿರ್ಮಾತೃಗಳನ್ನು ಆಕರ್ಷಿಸಿತು.[೬೭] ಜುಲೈಯಲ್ಲಿ 2008 ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮುಷ್ಕರವಾಗುವ ಸಾಧ್ಯತೆಯಿದ್ದುದರಿಂದ ಪ್ರೊಡಕ್ಶನ್ ಮತ್ತೆ ಶುರುಮಾಡಲು ಸುಲಭವಾಗುವಂತೆ ಆ ಅವಧಿಯೊಳಗೇ ಎಲ್ಲಾ ಹೊರಾಂಗಣದ ದೃಶ್ಯಗಳ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಯಿತು.[೬೮][೬೯] ಜುಲೈ 20, 2008ರಂದು ಚಿತ್ರೀಕರಣ ಮುಕ್ತಾಯವಾಯಿತು,[೭೦] ಆದರೂ ಕೆಲವು ಪಿಕ್-ಅಪ್ಗಳನ್ನು ಜನವರಿ 2009ರಲ್ಲಿ ಕೈಗೊಳ್ಳಲಾಯಿತು.[೭೧]

ಬೇಲ್ ಕೈ ಮುರಿದುಕೊಂಡಿದ್ದು, ವರ್ದಿಂಗ್‌ಟನ್ ಬೆನ್ನಿಗೆ ಏಟು ಮಾಡಿಕೊಂಡಿದ್ದು, ಇವುಗಳ ಜತೆಗೇ ಸ್ಪೆಶಲ್ ಎಫೆಕ್ಟ್ಸ್ ತಂತ್ರಜ್ಞ ಮೈಕ್ ಮೆನಾರ್ಡಿಸ್ ಒಂದು ಸ್ಫೋಟದ ಚಿತ್ರೀಕರಣದ ವೇಳೆಯಲ್ಲಿ ತನ್ನ ಕಾಲನ್ನು ಹೆಚ್ಚೂಕಡಿಮೆ ಕಳೆದುಕೊಳ್ಳುವುದರಲ್ಲಿದ್ದರು. ಈ ಸೀಕ್ವೆನ್ಸಿನಲ್ಲಿ ಒಂದು ಮ್ಯಾನ್‌ಹೋಲ್‌ನ ಮುಚ್ಚಳವು ಸ್ಫೋಟಕ್ಕೊಳಗಾಗಿ ಗಾಳಿಯಲ್ಲಿ ಹಾರಬೇಕಾಗಿತ್ತು, ಆದರೆ ಈ ಮುಚ್ಚಳವು ಹಾರಿ ಮೆನಾರ್ಡಿಸ್‌ರ ಕಾಲಿನ ಒಂದು ಭಾಗವನ್ನು ಕತ್ತರಿಸಿಹಾಕಿತು. ಮೆಕ್‌ಜಿ ಈ ಘಟನೆಯು ಚಲನಚಿತ್ರದ ಸ್ಥೈರ್ಯಪೂರ್ಣತೆಗೆ ಸಾಕ್ಷಿಯಾಗಿದೆ ಎಂದು ದಾಖಲಿಸಿದ್ದಾರೆ. "ಗೌರವಪೂರ್ವಕವಾಗಿ ಹೇಳುತ್ತಿದ್ದೇನೆ, ನನಗೆ ಒಂದು ನೀಲಿ ಪರದೆ, ಹಲವು ಟೆನಿಸ್ ಬಾಲ್‌ಗಳು ಮತ್ತು ಅದನ್ನು ಹಿಡಿಯಲು ಧಾವಿಸುವಂತಹ ಯಾವುದೇ ಸ್ಟಾರ್ ವಾರ್ಸ್ ಅನುಭವ ಬೇಕಾಗಿರಲಿಲ್ಲ. ಸ್ಟ್ಯಾನ್ ವಿನ್‌ಸ್ಟನ್ ಎಲ್ಲ ಮಶೀನುಗಳನ್ನು ಕಟ್ಟುವಂತೆ ನಾನು ನೋಡಿಕೊಂಡೆ. ನಾವು ಎಲ್ಲಾ ಸೆಟ್‌ಗಳನ್ನೂ ಕಟ್ಟಿದೆವು, ಸ್ಫೋಟಕಗಳ ಬಲವು ಎಂತಹುದಾಗಿತ್ತೆಂದರೆ ನೀವು ಆ ಗಾಳಿಯ ಬಲ, ಸ್ಫೋಟದ ಘಟ್ಟಿಸುವಿಕೆ ಮತ್ತು ನಿಮ್ಮ ಹುಬ್ಬುಗಳನ್ನು ಹಾರಿಸಿಬಿಡುವಷ್ಟು ಬಿಸಿಯನ್ನು ಅನುಭವಿಸಬಹುದಾಗಿತ್ತು. ಒಇದರಿಂದಾಗಿ ನಮಗೆ ಕೆಲವು ಅಡ್ಡಿತಡೆಗಳು ಮತ್ತು ಗಾಯಗಳಾಗಿರಬಹುದು, ಆದರೆ ಅವು ನಿಮಗೆ ಸಮಗ್ರತೆ ಮತ್ತು ವಾಸ್ತವಿಕತೆಯಿಂದಾಗಿ ದೊರಕುತ್ತದೆ ಮತ್ತು ಅಪೋಕ್ಯಾಲಿಪ್ಸ್ ನವ್ ಅನ್ನು ಪ್ರತಿಬಿಂಬಿಸುತ್ತದೆ. ನೀವು, 'ನಾವು ಅಪೋಕ್ಯಾಲಿಪ್ಸ್ ನವ್ ಅನ್ನು ಸುಮ್ಮನೆ ಬರ‍್ಬ್ಯಾಂಕ್ನಲ್ಲಿ ಚಿತ್ರೀಕರಿಸೋಣ ಎಂದು ಹೇಳಲು ಸಾಧ್ಯವಿಲ್ಲ, ನನಗನ್ನಿಸುತ್ತದೆ, ಇದೂ ಅಷ್ಟೇ ಒಳ್ಳೆಯ ಅನುಭವವನ್ನು ಕೊಡಲಿದೆ.'"[೬೦]

ಈ ಚಲನಚಿತ್ರವು ಟೆಕ್ನಿಕಲರ್ನ Oz ಪ್ರಕ್ರಿಯೆಯನ್ನು ಪೋಸ್ಟ್-ಪ್ರೊಡಕ್ಷನ್‌ನ ಸಮಯದಲ್ಲಿ ಬಳಸಿಕೊಂಡಿತು. ಇದು ಬ್ಲೀಚ್ ಬೈಪಾಸ್ನಂತೆಯೇ ಇರುವ [[ಇಂಟರ್‌[ಪಾಸಿಟಿವ್]]ನ ಮೇಲೆ ಬೆಳ್ಳಿಯನ್ನು ಭಾಗಶಃ ಪ್ರತಿಧಾರಣ ಮಾಡುವುದಾಗಿದ್ದು ಇದರಿಂದ ಮೆಕ್‌ಜಿಗೆ ಅವಶ್ಯಕವಿದ್ದ ಆಧುನಿಕ ಪ್ರಪಂಚದಿಂದ ದೂರವಾಗಿರುವ ಭಾವನೆಯನ್ನು ಉಂಟುಮಾಡುತ್ತಿತ್ತು.[೮] ಇಂಡಸ್ಟ್ರೀಯಲ್ ಲೈಟ್ ಎಂಡ್ ಮ್ಯಾಜಿಕ್ ಅಭಿವೃದ್ಧಿಪಡಿಸಿದ ಶೇಡರ್ ಕಾರ್ಯಕ್ರಮಗಳು CGIನ ಡಿಸ್ಯಾಚುರೇಟೆಡ್ ಬೆಳಗುವಿಕೆಯನ್ನು ವಾಸ್ತವವೆಂಬಂತೆ ಕಾಣಿಸುವುದಲ್ಲದೆ, ಆನ್-ಸೆಟ್ ಫುಟೇಜ್‌ನ ಜತೆಗೆ ಚೆನ್ನಾಗಿ ಮಿಳಿತವಾಗುತ್ತಿದ್ದಿತು.[೭೨] ಚಲನಚಿತ್ರದ ನಿರ್ದೇಶಕರು ಒಂದು ಹಾಳಾಗಿಹೋದ ಪ್ರಪಂಚ ಮತ್ತು ಪರಮಾಣು ಚಳಿಗಾಲದ ಪರಿಣಾಮಗಳ ಬಗ್ಗೆ ಹಲವಾಉ ವಿಜ್ಞಾನಿಗಳನ್ನು ಸಂಪರ್ಕಿಸಿದರು.[೪೬] ಮೆಕ್‌ಜಿಯವರು ಮ್ಯಾಡ್ ಮ್ಯಾಕ್ಸ್ 2 , ಮೂಲ ಸ್ಟಾರ್ ವಾರ್ಸ್ ತ್ರಿಸರಣಿ ಮತ್ತು ಚಿಲ್ಡ್ರನ್ ಆಫ್ ಮೆನ್, ಹಾಗೂ ದ ರೋಡ್ ಕಾದಂಬರಿಗಳು ತನ್ನ ಕಲ್ಪನೆಯ ಮೇಲೆ ಪ್ರಭಾವ ಬೀರಿವೆ ಎಂದು ತಿಳಿಸಿದರು.[೪][೪೬] ಅವರು ತನ್ನ ತಾರಾಗಣಕ್ಕೆ ಈ ಕಾದಂಬರಿ ಮತ್ತು ಡು ಆಂಡ್ರಾಯ್ಡ್ಸ್ ಡ್ರೀಮ್ ಆಫ್ ಎಲೆಕ್ಟಿಕ್ ಶೀಪ್? ಅನ್ನು ಓದಲು ನಿರ್ದೇಶಿಸಿದರು.[೪೭][೭೦] ಚಿಲ್ಡ್ರನ್ ಆಫ್ ಮೆನ್ ನಂತೆಯೇ ಮೆಕ್‌ಜಿ ದೃಶ್ಯಗಳ ಸ್ಟೋರಿಬೋರ್ಡ್ ಅನ್ನು ತಯಾರಿಸಿಕೊಂಡು ಅವುಗಳು ಒಟ್ಟಿಗೇ ಎಡಿಟ್ ಆಗಿ, ಒಂದು ಜೋಡಿಸಿದಂತಿರದ, ಸತತವಾದ ಶಾಟ್ನಂತೆ ಕಾಣುವ ಹಾಗೆ ನೋಡಿಕೊಳ್ಳುತ್ತಿದ್ದರು.[೭೩] ಸ್ಕೈನೆಟ್ ತಾಣದಲ್ಲಿ T-800 ಬಗೆಗಿನ ಯೋಜನೆಗಳನ್ನು ಶೋಧಿಸುವ ಕಾನರ್ ಒಂದು ಬಾಂಬ್ ಸ್ಫೋಟದಲ್ಲಿ ಸಿಕ್ಕಿಹಾಕಿಕೊಳ್ಳುವ ಎರಡು ನಿಮಿಷಗಳ ದೃಶ್ಯದ ಚಿತ್ರೀಕರಣವನ್ನು ಮುಗಿಸಲು ಒಂದಿಡೀ ವಾರ ಬೇಕಾಯಿತು.[೭೪]

ವಿನ್ಯಾಸ ಮತ್ತು ವಿಶೇಷ ಪರಿಣಾಮಗಳು

ಮೆಕ್‌ಜಿ ಈ ಚಲನಚಿತ್ರವನ್ನು ಆದಷ್ಟು ಹೆಚ್ಚು ವಾಸ್ತವಕ್ಕೆ ಹತ್ತಿರವಾಗಿ ನಿರ್ಮಿಸಬೇಕೆಂದು ಸಾಧ್ಯವಾದಷ್ಟು ಹೆಚ್ಚಿನ ’ಆನ್-ಕ್ಯಾಮೆರಾ’ ಅಂಶಗಳನ್ನು ರೂಪಿಸುವುದಕ್ಕೆ ಒತ್ತುಕೊಟ್ಟರು.[೭೫] ಹಾರ್ವೆಸ್ಟರ್ ದಾಳಿಯ ದೃಶ್ಯಕ್ಕಾಗಿ ಒಂದಿಡೀ ಗ್ಯಾಸ್ ಸ್ಟೇಶನ್ನನ್ನಿಳಗೊಂಡಂತೆ ಹಲವಾರು ಸೆಟ್ಟಿಂಗ್‌ಗಳು ಕೈಯಿಂದ ಕಟ್ಟಿದವಾಗಿದ್ದವು. ಟರ್ಮಿನೇಟರ್ ಫ್ಯಾಕ್ಟರಿಯನ್ನು ಒಂದು ಹಾಳಾದ ಫ್ಯಾಕ್ಟರಿಯ ಮೇಲೆ ಕಟ್ಟಲಾಗಿತ್ತು,[೬೫] ಮತ್ತು ವಿನ್ಯಾಸ ತಂಡದವರು ಇದನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುವ ಸಲುವಾಗಿ ಕೆಲವು ರೊಬೋಟ್ ತಯಾರಿಸುವ ಕಂಪೆನಿಗಳನ್ನು ಸಂಪರ್ಕಿಸಿದರು.[೭೫]  Kerner Optical ನಿರ್ಮಿಸಿದ ಒಂದು 20 ಅಡಿ ಎತ್ತರದ ಮಾಡೆಲ್ ಅನ್ನು ಸ್ಕೈನೆಟ್‌ನ 30 ಮಹಡಿಗಳ ಸ್ಯಾನ್‌ಫ್ರಾನ್ಸಿಸ್ಕೋನ ಪ್ರಯೋಗಾಲಯದ ಸ್ಫೋಟ ಮಾಡಲು ಬಳಸಿಕೊಳ್ಳಲಾಯಿತು.[೫೪]

ಹೆಚ್ಚಿನ ಮೆಶೀನುಗಳನ್ನು ಕ್ಯಾಮೆರಾನ್‌ನ ಟೈಟಾನಿಕ್ ಮತ್ತು ಘೋಸ್ಟ್ಸ್ ಆಫ್ ದಿ ಅಬಿಸ್ ತಂಡದ ಸದಸ್ಯನಾಗಿದ್ದ ಮಾರ್ಟಿನ್ ಲೇಂಗ್ ವಿನ್ಯಾಸಗೊಳಿಸಿದರು.[೭೬] ಮೆಕ್‌ಜಿ ಇಲ್ಲಿನ ಹಲವಾರು ಮೆಶೀನುಗಳು ಹೆಚ್. ಆರ್ ಗೈಜರ್ರ ಪ್ರಭಾವ ಹೊಂದಿವೆ ಎಂದು ಹೇಳಿದ್ದಾರೆ.[೪೬] ಮೆಕ್‌ಜಿಯವರ ಉದ್ದೇಶವು 2018ನ್ನು ಸಮಗ್ರವಾಗಿ, ಸ್ಪರ್ಶೇಂದ್ರಿಯಗಳಿಗೆ ತಲುಪುವಂತೆ ತೋರಿಸುವುದಾಗಿತ್ತು, ಮತ್ತು ಲೇಂಗ್‍೬ನ ರೋಬೋಟ್‌ಗಳು ಕರ್ರಗೆ, ಕೀಳುದರ್ಜೆಯವಾಗಿರಬೇಕಾಗಿತ್ತು, ಏಕೆಂದರೆ ಅವು ಹೊಸವಲ್ಲ. ಲೇಂಗ್ ಏರೋಸ್ಟ್ಯಾಟ್ಸ್ ಎಂಬ ಹೊಸ ಯಂತ್ರಗಳನ್ನು ನಿರ್ಮಿಸಿದ ಮತ್ತು ಇವು ಹಳೆಯ ಚಲನಚಿತ್ರಗಳಲ್ಲಿದ್ದ ಏರಿಯಲ್ ಹಂಟರ್ ಕಿಲ್ಲರ್‌‌ಗಳ ಸಣ್ಣ ಅವತರಣಿಕೆಗಳಾಗಿದ್ದವು. ಈ ಏರೋಸ್ಟ್ಯಾಟ್‌ಗಳು 60 ಅಡಿ ಎತ್ತರದ ಹ್ಯೂಮನಾಯ್ಡ್ ಹಾರ್ವೆಸ್ಟರ್‌ಗಳಿಗೆ ಸಂಕೇತ ಕಳುಹಿಸುತ್ತಿದ್ದವು. ಅವು ಬಹಳ ದೊಡ್ಡವೂ, ವೇಗದಲ್ಲಿ ಬಹಳ ಮೆಲ್ಲಗೂ ಇರುವುದರಿಂದಾಗಿ ಅವು ಮಾನವರನ್ನು ಸೆರೆಹಿಡಿಯುವ ಸಲುವಾಗಿ ಮೋಟೋಟರ್ಮಿನೇಟರ್‌ಗಳನ್ನು ಬಳಸಿಕೊಳ್ಳುತ್ತವೆ ಮತ್ತು ಹಾರ್ವೆಸ್ಟರ್‌ಗಳು ಸೆರೆಯಾಳುಗಳನ್ನು ಟ್ರಾನ್ಸ್‌ಪೋರ್ಟರ್‌ಗಳಲ್ಲಿ ಇರಿಸುತ್ತವೆ. ಲೇಂಗ್ ಈ ಟ್ರಾನ್ಸ್‌ಪೋರ್ಟರ್‌ಗಳ ವಿನ್ಯಾಸದ ಬಗ್ಗೆ ಅಸ್ಪಷ್ಟತೆಯಿದ್ದು, ಅಲ್ಬುಕರ್ಕ್‌ನ ಮೂಲಕ ಹಾದುಹೋಗುತ್ತಿದ್ದ ದನಗಳ ಸಾಗಾಣಿಕೆಯೊಂದನ್ನು ನೋಡಿದ ಮೇಲೆ ಆತನ ಕಲ್ಪನೆಗೆ ಇಂಬು ದೊರಕಿತು. ಇದರ ಜತೆಗೇ ಈ ಚಲನಚಿತ್ರವು ಪ್ರಥಮ ಬಾರಿಗೆ ನೀರಿನಲ್ಲಿ ಪ್ರಯಾಣಿಸುವ ಸ್ಕೈನೆಟ್ ರೋಬೋಟ್‌ಗಳಾದ ಹೈಡ್ರೋಬೋಟ್‌ಗಳನ್ನು ತೋರಿಸುತ್ತದೆ. ಇವುಗಳನ್ನು ಲೇಂಗ್ ಈಲ್ಗಳ ವಿನ್ಯಾಸದಲ್ಲಿ ರೂಪಿಸಿದರು[೫೪] ಮತ್ತು ಇವನ್ನು ಅನಿಮಾಟ್ರಾನಿಕ್ಸ್ ತಂಡವು ನೀರೊಳಗಿನ ದೃಶ್ಯಗಳ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಹೊರಕವಚಕ್ಕೆ ಲೋಹದಂತೆ ಕಾಣುವ ರಬ್ಬರ್ ಅನ್ನು ಬಳಸಿತು.[೬೫] ಚಲನಚಿತ್ರವು ರಬ್ಬರ್ ಚರ್ಮವನ್ನು ಹೊಂದಿದ T-600 ಮತ್ತು T-700 ರೋಬೋಟ್‌ಗಳನ್ನು ಹೊಂದಿದೆ. ಮೂಲ ಚಲನಚಿತ್ರದಲ್ಲಿ ಕೈಲ್ ರೀಸ್ T-600 ಬಗ್ಗೆ ಅವು ಸುಲಭವಾಗಿ ಕಾಣಿಸುತ್ತವೆ ಎಂದು ಹೇಳಿದ್ದನ್ನು ಗಮನಕ್ಕೆ ತಂದುಕೊಂಡ ಮೆಕ್‌ಜಿ ಅವು ಎತ್ತರವಾಗಿ, ಭಾರವಾಗಿ ಇರುವಂತೆ ವಿನ್ಯಾಸಗೊಳಿಸಿದರು.[೪] ಟರ್ಮಿನೇಟರ‍್ಗಳ ಜತೆ ಮಾನವರು ಹೋರಾಡುವ ದೃಶ್ಯಗಳಲ್ಲಿ ನಟರು ಮೋಶನ್ ಕ್ಯಾಪ್ಚರ್ ಸೂಟ್‌ಗಳನ್ನು ಧರಿಸಿದ ಸ್ಟಂಟ್ ಕಲಾವಿದರ ಜತೆಗೆ ಕೆಲಸ ಮಾಡಿದರು ಮತ್ತು ಮುಂದೆ ಈ ಸ್ಟಂಟ್ ಕಲಾವಿದರ ಬದಲಾಗಿ ಡಿಜಿಟಲ್ ರೋಬೋಟ್‌ಗಳನ್ನು ಬಳಸಲಾಯಿತು.[೭೫] ಮೋಟೋಟರ್ಮಿನೇಟರ್‌ಗಳಿ‍ಗಾಗಿ ರೋಬೋಟ್‌ಗಳನ್ನು ರೂಪಿಸಲು Ducati ವಿನ್ಯಾಸಕಾರರನ್ನು ನಿಯಮಿಸಲಾಯಿತು, ಮತ್ತು ತೆರೆಯ ಮೇಲೆ ಕಂಡ ರೋಬೋಟ್ ನಿಜವಾದ ಡುಕಾಟಿಗಳನ್ನು ಚಾಲನೆ ಮಾಡುತ್ತಿದ್ದ ಸ್ಟಂಟ್‌ಮೆನ್ ಮತ್ತು ನಕಲಿ ಮೋಟೋಟರ್ಮಿನೇಟರ್‌ಗಳ ಜತೆಗೆ ಒಂದು ಡಿಜಿಟಲ್ ಮೋಟೋಟರ್ಮಿನೇಟರ್ ಅನ್ನು ಕೂಡಿಸಿ ಮಾಡಿದ ವಿನ್ಯಾಸವಾಗಿತ್ತು.[೭೭] ವಿಶುವಲ್ ಎಫೆಕ್ಟ್ಸ್ ಸ್ಟುಡಿಯೋ Imaginary Forces ಟರ್ಮಿನೇಟರ್ ದೃಷ್ಟಿಕೋನದ ದೃಶ್ಯಸರಣಿಗಳನ್ನು ರೂಪಿಸಿದರು, ಮತ್ತು ಒಂದು ಸರಳವಾದ ಇಂಟರ್‌ಫೇಸ್, "ಅಪೂರ್ವದಿಂದ ಸಂಪೂರ್ಣವಾಗಿ ಹೊರತಾದದ್ದು - ಒಂದು ಮೆಶೀನಿಗೆ ನಿಜವಾಗಿ ಯಾವುದು ಅವಶ್ಯಕತೆಯಿಲ್ಲವೋ ಅದು", ಅನ್ನು ರೂಪಿಸಲು ಪ್ರಯತ್ನಿಸಿದರು ಹಾಗೂ ಇವು ಅತಿ ಹೆಚ್ಚಿನ ಸಂಖ್ಯೆಯ ಸಾಫ್ಟ್‌ವೇರ್ ಬಗ್ಗಳನ್ನು ಮತ್ತು ಯಾಂತ್ರಿಕ ತೊಂದರೆಗಳನ್ನು ಹೊಂದಿದ್ದವು, ಏಕೆಂದರೆ ಇವು ಹಿಂದಿನ ಚಲನಚಿತ್ರಗಳ ಟರ್ಮಿನೇಟರ್‌ಗಳಷ್ಟು ಆಧುನಿಕವಾಗಿರಲಿಲ್ಲ.[೭೮]

ಹೆಚ್ಚಿನ ಸ್ಪೆಶಲ್ ಎಫೆಕ್ಟ್‌ಗಳನ್ನು Industrial Light & Magic ರೂಪಿಸಿದರು. ಸಾಲ್ವೇಶನ್ ಮೊದಲ ಮೂರೂ ಚಲನಚಿತ್ರಗಳಲ್ಲಿ ವಿಶುವಲ್ ಎಫೆಕ್ಟ್ಸ್ ಸುಪರ್‌ವೈಸರ್ ಆಗಿ ಕೆಲಸ ಮಾಡಿದ್ದ ಸ್ತ್ಯಾನ್ ವಿನ್‌ಸ್ಟನ್‌ನ ಕೊನೆಯ ಚಲನಚಿತ್ರಗಳಲ್ಲೊಂದಾಯಿತು. ಅವರು ಜೂನ್ 15, 2008ರಂದು ಮಲ್ಟಿಪಲ್ ಮೈಲೋಮಾದಿಂದ ನಿಧನರಾದರು,[೭೯] ಮತ್ತು ಮೆಕ್‌ಜಿ ಅಂತ್ಯದ ಕ್ರೆಡಿಟ್‌ಗಳ ಸಮಯದಲ್ಲಿ ಈ ಚಲನಚಿತ್ರವನ್ನು ಅವರಿಗೆ ಅರ್ಪಣೆ ಮಾಡಿದರು.[೧೦] ವಿನ್‌ಸ್ಟನ್‌ರ ಬದಲಾಗಿ ಜಾನ್ ರಾಸೆನ್‍ಗ್ರಾಂಟ್ ಮತ್ತು ಚಾರ್ಲೀ ಗಿಬ್ಸನ್ ತಂಡವನ್ನು ಸೇರಿಕೊಂಡರು [೭೬] ಮತ್ತು ಇವರ ಬಗ್ಗೆ ಮೆಕ್‌ಜಿ ಅವರು "ಇಲ್ಲಿನವರೆಗೂ ಕಾಣದ್ದನ್ನು ಸಾಧಿಸಲು ಯತ್ನಿಸುತ್ತಿದ್ದಾರೆ" [೮೦] ಎಂದೂ "ಅವರು ಎನ್‌ವಲಪ್ ಅನ್ನು ಮುಂದೂಡುತ್ತಿದ್ದಾರೆ" ಎಂದೂ ಹೇಳಿದರು.[೮೧] Asylum Visual Effects ಡಿಜಿಟಲ್ ತಟ್ಟೆಗಳು, ಮಾರ್ಕಸ್‌ನ ಎಂಡೋಸ್ಕೆಲಿಟನ್ ಮತ್ತು ಒಂದು ಡಿಜಿಟಲ್ T-600 ಅನ್ನು ರೂಪಿಸಿತು; ಹಾಗೂ Rising Sun Pictures ಡೇ ಫಾರ್ ನೈಟ್ ದೃಶ್ಯಗಳು, ಸಬ್‌ಮೆರೀನಿನ ನಾಶ ಮತ್ತು ಮಾರ್ಕಸ್‌ನ ರೋಬೋಟ್ ಕೈ ಕತ್ತರಿಸಿಹೋಗುವ ದೃಶ್ಯಗಳ ಡಿಜಿಟಲ್ ಸರಿಪಡಿಸುವಿಕೆಯನ್ನು ಕೈಗೊಂಡಿತು.[೮೨]

ಸಂಗೀತ

Untitled

ಜನವರಿ 2009ರಲ್ಲಿ ಡ್ಯಾನಿ ಎಲ್ಫ್‌ಮ್ಯಾನ್ ಚಲನಚಿತ್ರದ ಸಂಗೀತವನ್ನು ಕಂಪೋಸ್ ಮಾಡಲು ಆರಂಭಿಸಿದರು. ಇದಕ್ಕೂ ಹಿಂದೆ ಮೆಕ್‌ಜಿ ಮಾನವ ಪಾತ್ರಗಳಿಗಾಗಿ ಸಂಗೀತ ರಚಿಸಲು ಗುಸ್ತಾವೋ ಸಾಂತಾವೋಲಲ್ಲಾರನ್ನು ಮತ್ತು ಸ್ಕೈನೆಟ್‌ನ ಥೀಮುಗಳಿಗಾಗಿ ಥಾಮ್ ಯಾರ್ಕ್ ಅಥವಾ ಜಾನೀ ಗ್ರೀನ್‌ವುಡ್ರನ್ನು ನೇಮಕ ಮಾಡಿಕೊಳ್ಳಬೇಕೆಂದಿದ್ದರು.[೩೬][೫೧] ಚಲನಚಿತ್ರದ ಸ್ಕೋರಿಂಗ್ ಅನ್ನು ಅವರು ಹಾನ್ಸ್ ಜಿಮ್ಮರ್ ಜತೆಗೆ ಚರ್ಚಿಸಬೇಕೆಂದಿದ್ದರಾದರೂ ಈ ಭೇಟಿ ಸಾಧ್ಯವಾಗಲಿಲ್ಲ. ಮೆಕ್‌ಜಿ ದ ಟರ್ಮಿನೇಟರ್ ಮತ್ತು ಟರ್ಮಿನೇಟರ್ 2 ಗಳ ಸಂಗೀತನಿರ್ದೇಶಕ ಬ್ರ್ಯಾಡ್ ಫೀಡೆಲ್ರನ್ನು ಭೇಟಿಯಾದರಾದರೂ ಕಳೆದೆರಡು ಚಲನಚಿತ್ರಗಳಲ್ಲಿ ಫೀಡೆಲ್ ರಚಿಸಿದ ಸಂಗೀತವನ್ನು ಪುನರಾವರ್ತಿಸುವುದರ ಬಗ್ಗೆ ಆಸಕ್ತರಾಗಿರಲಿಲ್ಲ. ಆದರೆ ಮೆಕ್‌ಜಿ ಎಲ್ಫ್‌ಮ್ಯಾನ್ ಈ ಥೀಮುಗಳು ಮತ್ತು ಸರ್ವವ್ಯಾಪೀ ಸದ್ಧುಗಳಿಗೆ ಒಂದು "ವ್ಯಾಗ್ನೇರಿಯನ್ ಗುಣಮಟ್ಟ"ವನ್ನು ನೀಡಬೇಕೆಂದು ಬಯಸಿದರು.[೪೮]

May 19, 2009ರಂದು Reprise Records ಹದಿನೈದು ಟ್ರ್ಯಾಕ್‌ಗಳನ್ನೊಳಗೊಂಡ ಈ ಚಲನಚಿತ್ರದ ಸೌಂಡ್‌ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿತು. ಕಾಮನ್ ಈ ಸೌಂಡ್‌ಟ್ರ್ಯಾಕ್‌ಗಾಗಿ ಒಂದು ಹಾಡನ್ನು ಬರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಾದರೂ,[೮೪] ಆಲಿಸ್ ಇನ್ ಚೇನ್ಸ್ನ "ರೂಸ್ಟರ್" ಮಾತ್ರ ಫೀಚರ್ಡ್ ಹಾಡಾಗಿದೆ.[೮೫] ಸೌಂಡ್‌ಟ್ರ್ಯಾಕ್‌ನಲ್ಲಿ ಒಳಗೊಳ್ಳಲಾಗಿಲ್ಲವಾದರೂ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ ಯಲ್ಲಿ ಕಾಣಿಸಿಕೊಂಡ Guns N' Rosesನ ಸೌಂಡ್‌ಟ್ರ್ಯಾಕ್ "ಯು ಕುಡ್ ಬಿ ಮೈನ್" ಚಲನಚಿತ್ರದ ಒಂದು ದೃಶ್ಯದಲ್ಲಿ ಕೇಳಿಬರುತ್ತದೆ.[೮೬] ನೈನ್ ಇಂಚ್ ನೇಲ್ಸ್ನ "ದ ಡೇ ದ ವರ್ಲ್ಡ್ ವೆಂಟ್ ಅವೇ"ಯನ್ನು ಚಲನಚಿತ್ರದ ಥಿಯೆಟ್ರಿಕಲ್ ಟ್ರೇಲರ್‌ನ ಸಮಯದಲ್ಲಿ ಪ್ರದರ್ಶಿಸಿದರೂ ಇದನ್ನು ಚಲನಚಿತ್ರದ ಸೌಂಡ್‌ಟ್ರಾಕಿನಲ್ಲಿ ಸೇರಿಸಲಾಗಿಲ್ಲ.

ಸೌಂಡ್‌ಟ್ರ್ಯಾಕ್[೮೫]

  1. "ಓಪನಿಂಗ್" – 6:01
  2. "ಆಲ್ ಇಸ್ ಲಾಸ್ಟ್" – 2:45
  3. "ಬ್ರಾಡ್‌ಕಾಸ್ಟ್" – 3:19
  4. "ದ ಹಾರ್ವೆಸ್ಟರ್ ರಿಟರ್ನ್ಸ್" – 2:45
  5. "ಫೈರ್‌ಸೈಡ್" – 1:31
  6. "ನೋ ಪ್ಲಾನ್" – 1:43
  7. "ರಿವೀಲ್ / ದ ಎಸ್ಕೇಪ್" – 7:44
  8. "ಹೈಡ್ರೋಬೋಟ್ ಅಟ್ಯಾಕ್" – 1:49
  9. "ಫೇರ್‌ವೆಲ್" – 1:40
  10. "ಮಾರ್ಕಸ್ ಎಂಟರ್ಸ್ ಸ್ಕೈನೆಟ್" – 3:23
  11. "ಎ ಸೊಲ್ಯೂಶನ್" – 1:44
  12. "ಸಿರೀನಾ" – 2:28
  13. "ಫೈನಲ್ ಕನ್‌ಫ್ರಂಟೇಶನ್" – 4:14
  14. "ಸಾಲ್ವೇಶನ್" – 3:07
  15. "ರೂಸ್ಟರ್" (ಆಲಿಸ್ ಇನ್ ಚೇನ್ಸ್) – 6:14

ವಿವಾದಗಳು

ಚಿತ್ರೀಕರಣದ ವೇಳೆಯಲ್ಲಿ ಛಾಯಾಗ್ರಹಣ ನಿರ್ದೇಶಕ ಶೇನ್ ಹರ್ಲ್‌ಬಟ್ನ ಮೇಲೆ ಸಿಟ್ಟಾದ ಬೇಲ್, ಆತನನ್ನು ಅವಾಚ್ಯವಾಗಿ ನಿಂದಿಸಿದುದೇ ಅಲ್ಲದೆ ಚಲನಚಿತ್ರವನ್ನು ಬಿಟ್ಟುಬಿಡುವ ಬೆದರಿಕೆ ಹಾಕಿದರು.[೮೭][೮೮] ಬೇಲ್ ಇದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದುದೇ ಅಲ್ಲದೆ, ಹರ್ಲ್‌ಬಟ್‌ರೊಂದಿಗಿನ ಮತಭೇದವನ್ನು ಪರಿಹರಿಸಿಕೊಂಡಿರುವುದಾಗಿ ಹೇಳಿದರು, ಮತ್ತು ಈ ಘ್ಹಟನೆ ನಡೆ ನಂತರವೂ ತಾವು ಹಲವಾರು ಘಂಟೆಗಳವರೆಗೆ ಚಿತ್ರೀಕರಣವನ್ನು ಮುಂದುವರಿಸಿದ್ದಾಗಿ ತಿಳಿಸಿದರು.

ಮಾರ್ಚ್ 2009ರಲ್ಲಿ ನಿರ್ಮಾಪಕ ಮೊರಿಟ್ಜ್ ಬೋರ್ಮನ್ ಹ್ಯಾಲ್‌ಸ್ಯೊನ್ ಕಂಪನಿಯ ವಿರುದ್ಧ $160 ಮಿಲಿಯನ್ ಮೊತ್ತಕ್ಕಾಗಿ ಮೊಕದ್ದಮೆ ಹೂಡಿದರು. ಟರ್ಮಿನೇಟರ್ ನ ಹಕ್ಕನ್ನು ಮೇ 2007ರಲ್ಲಿ ಹ್ಯಾಲ್‌ಸ್ಯೊನ್‌ಗೆ ವರ್ಗಾಯಿಸಲು ಏರ್ಪಾಡು ಮಾಡಿದ್ದ ಬೋರ್ಮನ್, ಆ ಕಂಪೆನಿಯ ಇಬ್ಬರು ಮ್ಯಾನೇಜರ್‌ಗಳಾದ ಡೆರೆಕ್ ಆಂಡರ್ಸನ್ ಮತ್ತು ವಿಕ್ಟರ್ ಕುಬಿಚೆಕ್ ಈ ಪ್ರೊಡಕ್ಷನ್ ಅನ್ನು ’ಹೈಜ್ಯಾಕ್’ ಮಾಡಿಕೊಂಡು ತನಗೆ ಬರಬೇಕಾಗಿದ್ದ $2.5 ಮಿಲಿಯನ್ ಮೊತ್ತವನ್ನು ತನಗೆ ಕೊಟ್ಟೇ ಇಲ್ಲವೆಂದು ಆಪಾದನೆ ಮಾಡಿದರು. ಬೋರ್ಮನ್ ತನಗೆ ಆಂಡರ್ಸನ್ ಮತ್ತು ಕುಬಿಚೆಕ್ ಹಣ ನೀಡದಿರುವುದಕ್ಕೆ ಬಜೆಟ್ ವೆಚ್ಚಗಳು ಏರಿರುವುದೇ ಕಾರಣವೆಂದು ಹೇಳಿಕೆ ನೀಡಿ ಅವರಿಗೆ ಸುಮಾರು $1 ಮಿಲಿಯನ್‌ನಷ್ಟು ಸಾಲವಿದೆಯೆಂದು ತಿಳಿಸಿದರು.[೮೯] ಇಷ್ಟೆಲ್ಲ ಆದ ಒಂದು ತಿಂಗಳ ನಂತರ ಇಬ್ಬರ ನಡುವೆಯೂ ಒಂದು "ಸ್ನೇಹಪರ" ಒಪ್ಪಂದವಾಯಿತು.[೯೦]

ಮೇ 20, 2009ರಂದು ಇದರ ಬಗ್ಗೆಯೇ ಹೆಚ್ಚಿನ ಸಂಕೀರ್ಣರೂಪದ ವಿವಾದಗಳುಂಟಾದವು; ಅಂಡರ್ಸನ್ ಮತ್ತು ಕುಬಿಚೆಕ್‌ರಿಗೆ ಟರ್ಮಿನೇಟರ್ ನ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದ್ದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಪೀಟರ್ ಡಿ. ಗ್ರೇವ್ಸ್ ಒಪ್ಪಂದವನ್ನು ಮುರಿದ ಆರೋಪದ ಮೇರೆಗೆ ದಾವೆ ಹೂಡಿ ಅವರು ತನಗೆ $750,000 ಮೊತ್ತವನ್ನು ನೀಡಬೇಕಾಗಿದೆಯೆಂದು ಹೇಳಿದರು.[೪೫]

ಬಿಡುಗಡೆ

ಚಲನಚಿತ್ರವು ಉತ್ತರ ಅಮೆರಿಕಾದಲ್ಲಿ ಮೇ 21, 2009ರಂದು Warner Bros. ಜತೆಗೆ ಬಿಡುಗಡೆಯಾಯಿತು ಮತ್ತು ಅಮೆರಿಕನ್ ಪ್ರೀಮಿಯರ್ ಅನ್ನು ಮೇ 14, 2009ರಂದು ಹಾಲಿವುಡ್ನ ಗ್ರಾಮನ್ಸ್ ಚೈನೀಸ್ ಥಿಯೇಟರ್ನಲ್ಲಿ ನಡೆಸಲಾಯಿತು.[೯೧] ಬೇರೆಲ್ಲಾ ಕಡೆಗೆ ಮತ್ತು ಸಾಗರದಾಚೆಗಿನ ಹಲವಾರು ವಲಯಗಳಲ್ಲಿ ಚಲನಚಿತ್ರವನ್ನು ಜೂನ್ ತಿಂಗಳ ಬೇರೆಬೇರೆ ತಾರೀಖುಗಳಂದು Sony Pictures Entertainment ಬಿಡುಗಡೆ ಮಾಡಿತು. ಇದಕ್ಕೆ ಹೊರತಾಗಿದ್ದ ಒಂದೇ ಪ್ರದೇಶವೆಂದರೆ ಮೆಕ್ಸಿಕೋ, ಏಕೆಂದರೆ, ಸ್ವೈನ್ ಫ್ಲೂ ಸಾಂಕ್ರಾಮಿಕವು ಈ ದೇಶ್ಸದಲ್ಲಿ ವ್ಯಾಪಕವಾಗಿದ್ದ ಕಾರಣದಿಂದಾಗಿ Sony ಚಲನಚಿತ್ರದ ಬಿಡುಗಡೆಯ ದಿನಾಂಕವನ್ನು ಜುಲೈ 31, 2009ಕ್ಕೆ ಮುಂದೂಡಬೇಕಾಯಿತು.[೯೨]

ಇದಕ್ಕೆ Motion Picture Association of Americaವು PG-13 ಶ್ರೇಣಿಯನ್ನು ನೀಡಿದೆ, ಏಕೆಂದರೆ ಇದು ಹಿಂದಿನ R-ಶ್ರೇಣಿಯ ಚಲನಚಿತ್ರಗಳಂತಲ್ಲದೆ "ಸೈ-ಫೈ ಹಿಂಸೆ, ಸಾಹಸ ಮತ್ತು ಭಾಷೆಗಳ ತೀವ್ರಮಟ್ಟದ ದೃಶ್ಯಸರಣಿಯನ್ನು ಒಳಗೊಂಡಿದೆ." [೯೩] ಈ ಚಲನಚಿತ್ರವನ್ನು PG-13 ಪಟ್ಟಿಯೊಂದಿಗೆ ಬಿಡುಗಡೆ ಮಾಡುವ ನಿರ್ಧಾರವು ಅಭಿಮಾನಿಗಳು[೯೪] ಮತ್ತು ಮಾಧ್ಯಮದ ಟೀಕೆಗೆ ಒಳಗಾಯಿತು.[೯೫] ಇದೊಂದೇ ದೃಶ್ಯದ ಕಾರಣದಿಂದಾಗಿ ಯುವ ಪ್ರೇಕ್ಷಕವರ್ಗವನ್ನು ಹೊರಗಿಡುವುದು ಸರಿಯಲ್ಲವೆಂಬ ಕಾರಣದಿಂದ ನಿರ್ದೇಶಕ ಮೆಕ್‌ಜಿ ಮಾರ್ಕಸ್ ಒಬ್ಬ ಖಳನನ್ನು ಒಂದು ಸ್ಕ್ರೂಡ್ರೈವರ್‌ನಿಂದ ತಿವಿಯುವ ದೃಶ್ಯವೊಂದನ್ನು ತೆಗೆದುಹಾಕಿದ ಮೇಲೆ ಶ್ರೇಣಿಯ ನಿರ್ಧಾರವನ್ನು ಕೈಗೊಳ್ಳಲಾಯಿತು. ಅವರು ಮೂನ್ ಬ್ಲಡ್‌ಗುಡ್‌ರ ಒಂದು ಟಾಪ್‌ಲೆಸ್ ದೃಶ್ಯವೊಂದನ್ನೂ ತೆಗೆದುಹಾಕಿದರು, ಏಕೆಂದರೆ, "ಅದು ಒಬ್ಬ ಪುರುಷ ಮತ್ತು ಸ್ತ್ರೀಯ ನಡುವಿನ ನವಿರಾದ ಘಳಿಗೆಯಾಗಿತ್ತು ಮತ್ತು ವಿಟ್ನೆಸ್ ನ ಕೆಲ್ಲೀ ಮೆಕ್‌ಗಿಲ್ಲಿಸ್/ಹ್ಯಾರಿಸನ್ ಫೋರ್ಡ್ ಕ್ಷಣವನ್ನು ಪ್ರತಿಧ್ವನಿಸುವಂತಿರಬೇಕಾಗಿತ್ತು (ಆದರೆ) ಕೊನೆಯಲ್ಲಿ, ಇದು ಸಾಹಸಪ್ರಧಾನ ಚಲನಚಿತ್ರದಲ್ಲಿ ಹುಡುಗಿಯೊಬ್ಬಳು ಸಂತೃಪ್ತಳಾಗಿ ತನ್ನ ಟಾಪ್ ಅನ್ನು ತೆಗೆಯುವಂತೆ ಕಂಡುಬಂದಿತು, ಮತ್ತು ಇದರಿಂದಾಗಿ ಕಥೆಯನ್ನಾಗಲೀ ಪಾತ್ರವನ್ನಾಗಲೀ ತಿರುಚುವುದು ನನಗಿಷ್ಟವಿಲ್ಲ."[೯೬] ನಿರ್ಮಾಪಕರು ಈ ಶ್ರೇಣಿಯನ್ನು ನಿರೀಕ್ಷಿಸಿದ್ದರು, ಕಾರಣ, 2007ರ ಸಾಹಸಪ್ರಧಾನ ಲಿವ್ ಫ್ರೀ ಆರ್ ಡೈ ಹಾರ್ಡ್ ನಂತಹ PG-13 ಚಲನಚಿತ್ರಗಳಲ್ಲಿನ ಹಿಂಸೆಯ ಬಗ್ಗೆ ಆಧುನಿಕ ಉದಾರ ಮನೋಭಾವ.[೪೯]

ವಿಮರ್ಶಾತ್ಮಕ ಸ್ವೀಕಾರ

Rotten Tomatoes ಸಂಗ್ರಹಿಸಿದ 246 ವಿಮರ್ಶೆಗಳನ್ನು ಆಧರಿಸಿ ಹೇಳುವುದಾದಲ್ಲಿ, ಟರ್ಮಿನೇಟರ್ ಸಾಲ್ವೇಶನ್ ಬಗೆಗೆ ಪ್ರೇಕ್ಷಕವರ್ಗವು ಋಣಾತ್ಮಕ ಮನೋಭಾವನೆ ತಾಳಿರುವುದು ಕಂಡುಬರುತ್ತದೆ ಮತ್ತು ಒಟ್ಟಾರೆ ಶೇಕಡಾ 31ರಷ್ಟು ಜನ ಇದನ್ನು ಒಪ್ಪಿಕೊಂಡಿದ್ದಾರೆ.[೯೭] ಹಲವಾರು ಪ್ರಮುಖ ನಿಯತಕಾಲಿಕಗಳು, ಜಾಲತಾಣಗಳು, ದೂರದರ್ಶನ ಮತ್ತು ರೇಡಿಯೋ ಕಾರ್ಯಕ್ರಮಗಳ ಜನಪ್ರಿಯ ಮತ್ತು ಗಣನೀಯ ವಿಮರ್ಶಕರನ್ನು ಹೊಂದಿರುವ Rotten Tomatoesನ ಟಾಪ್ ಕ್ರಿಟಿಕ್ಸ್ ಗುಂಪಿನಲ್ಲಿ,[೯೮] ಚಲನಚಿತ್ರವನ್ನು ಶೇಕಡಾ 30ರಷ್ಟು ಜನರು ಒಪ್ಪಿಕೊಂಡಿದ್ದಾರೆ.[೯೯] ಇದಕ್ಕೆ ಹೋಲಿಸಿದರೆ, ಮುಖ್ಯವಾಹಿನಿಯ ವಿಮರ್ಶಕರ ವಿಮರ್ಶೆಗಳಿಗೆ ಸರಳೀಕರಿಸಿದ 100ರ ಶ್ರೇಯಾಂಕಪಟ್ಟಿಯನ್ನು ನೀಡುವ Metacriticನಲ್ಲಿ ಈ ಚಲನಚಿತ್ರವು 35 ವಿಮರ್ಶೆಗಳನ್ನಾಧರಿಸಿ ಸರಾಸರಿ 52 ಅಂಕಗಳನ್ನು ಗಳಿಸಿದೆ.[೨] ಈ ಮೂರೂ ಜಾಲತಾಣಗಳಲ್ಲಿಯೂ ಈ ಚಲನಚಿತ್ರವು ಟರ್ಮಿನೇಟರ್ ಸರಣಿಯ ಅತಿ ಕಡಿಮೆ ಜನಪ್ರಿಯ ಚಿತ್ರವೆಂಬ ಸ್ಥಾನವನ್ನು ಪಡೆದುಕೊಂಡಿದೆ.

ಚಿಕಾಗೋ ಸನ್-ಟೈಮ್ಸ್ ನ ರಾಜರ್ ಎಬರ್ಟ್ ಚಲನಚಿತ್ರಕ್ಕೆ ನಾಲ್ಕರಲ್ಲಿ ಎರಡು ಸ್ಟಾರ್‌ಗಳನ್ನು ನೀಡುತ್ತಾ "ಇಡೀ ಚಲನಚಿತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರ ಚಿತ್ರಕಥೆಯ ಸಾರಾಂಶವನ್ನು ನಿಮ್ಮೆದುರಿಗಿಡುತ್ತಿದ್ದೇನೆ: ವ್ಯಕ್ತಿಯೊಬ್ಬ ಸಾಯುತ್ತಾನೆ, ಮತ್ತೆ ಅವತರಿಸಿ ಬರುತ್ತಾನೆ, ಇತರರನ್ನು ಭೇಟಿಯಾಗುತ್ತಾನೆ, ಕಾದಾಡುತ್ತಾನೆ. ಕೊನೆಯದು ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ."[೧೦೦] ಹಾಲಿವುಡ್ ರಿಪೋರ್ಟರ್ ನ ಮೈಕೆಲ್ ರೆಖ್ಟ್‌ಶಾಫೆನ್ ಈ ಚಲನಚಿತ್ರವು ಆರ್ನಾಲ್ದ್ ಶ್ವಾರ್ಜೆನೆಗರ್ ಇಲ್ಲದೇ ಸಪ್ಪೆಯಾಗಿದೆಯೆಂದೂ, ತನ್ನ ನಾಟಕೀಯತೆಯ ಮಟ್ಟದಲ್ಲಿ ಇಳಿಮುಖವಾಗಿದೆಯೆಂದೂ ಬರೆದರು.[೧೦೧] ಇದೇ ರೀತಿಯಾಗಿ ಯುಎಸ್‌ಎ ಟುಡೇ ಯ ಕ್ಲಾಡಿಯಾ ಪ್ಯೂಗ್ ಚಲನಚಿತ್ರಕ್ಕೆ 2/4 ಅಂಕಗಳನ್ನು ನೀಡಿ ಅದನ್ನು "ಮೊದಲೇ ಊಹಿಸಬಹುದಾದಂಥದು" ಹಾಗೂ "ನಾಟಕೀಯತೆಯ ಕೊರತೆಯುಳ್ಳದ್ದು" ಎಂದು ಬರೆದರು. ಆಕೆಯ ಪ್ರಕಾರ ಕ್ರಿಶ್ಚಿಯನ್ ಬೇಲ್‌ರ ನಟನೆ "ಒಂದು ಆಯಾಮವನ್ನು ಮಾತ್ರ ಹೊಂದಿತ್ತು, ಆದರೆ ಸ್ಯಾಮ್ ವರ್ದಿಂಗ್‌ಟನ್ ಮತ್ತು ಆಂಟನ್ ಯೆಲ್‌ಶಿನ್‌ರ ನಟನೆ ಉತ್ತಮವಾಗಿತ್ತು.[೧೦೨]

Total Film  '​ನ ವಿಮರ್ಶೆಯು ಚಲನಚಿತ್ರಕ್ಕೆ 4/5 ನೀಡಿ ಈ ರೀತಿಯಾಗಿ ಘೋಷಿಸಿತು: "ಟರ್ಮಿನೇಟರ್‌ನ ಕಥೆಯು ಅಪೋಕ್ಯಾಲಿಪ್ಸ್‌ ನಂತರಕ್ಕೆ ತಕ್ಕನಾದ ಸಾಮರ್ಥ್ಯದಿಂದ ಬಲವರ್ಧನೆ ಮಾಡಿಕೊಳ್ಳುತ್ತದೆ. ಅವಸರದಿಂದ ಕೂಡಿದ ಮತ್ತು ತನ್ನ ಭೂತಕಾಲದೊಡನೆ ಹಲವಾರು ಬಾಂಧವ್ಯದ ಎಳೆಗಳನ್ನು ಹೊಂದಿರುವ ಈ ಚಲನಚಿತ್ರವು ಒಂದು ದೃಢವಾದ ಗುರಿಯೊಂದಿಗೆ ಹೊಸ ಹೆಜ್ಜೆಯನ್ನಿರಿಸಿದೆ. ಮೆಕ್‌ಜಿ ಕ್ಯಾಮೆರಾನ್‌ನಂತೆಯೇ ಒಂದು ತಕ್ಕನಾದ ಸಿಕ್ವೆಲ್ ಅನ್ನು ನೀಡುವರೆಂದು ನಿರೀಕ್ಷೆಮಾಡುತ್ತ ನಮ್ಮ ಬೆರಳುಗಳನ್ನು ಕ್ರಾಸ್ ಮಾಡಿಕೊಂಡಿದ್ದೇವೆ."[೧೦೩] ಎಂಪೈರ್ ಮ್ಯಾಗಜೀನಿನ ಡೆವಿನ್ ಫಾರಾಚಿ ಕೂಡ ಐದರಲ್ಲಿ ನಾಲ್ಕು ಸ್ಟಾರ್‌ಗಳನ್ನು ನೀಡಿದರು ಮತ್ತು ಈ ರೀತಿಯಾಗಿ ಹೇಳಿದರು: "ಮೆಕ್‌ಜಿ ಕಳಾಹೀನವಾಗಿದ್ದ ಫ್ರ್ಯಾಂಚೈಸ್‌ಗೆ ವಾಪಾಸು ಜೀವನದಾನ ಮಾಡಿದ್ದಾರೆ ಮತ್ತು ಎರಡು ದಶಕಗಳ ಹಿಂದೆ ಅಭಿಮಾನಿಗಳು ಮೊದಲ ಬಾರಿಗೆ ಲೋಹದ ಕಾಲೊಂದು ಮನುಷ್ಯನ ತಲೆಬುರುಡೆಯನ್ನು ತುಳಿದು ನುಚ್ಚುನೂರು ಮಾಡುವುದನ್ನು ಕಂಡಾಗಿನಿಂದ ಅರಸುತ್ತಿದ್ದ ಅಪೋಕ್ಯಾಲಿಪ್ಸ್ ನಂತರದ ಆಕ್ಷನ್ ಅನ್ನು ನೀಡಿದ್ದಾರೆ."[೧೦೪] ಆದರೆ CHUDನಲ್ಲಿ ಇವರು, "ಜಾನ್ ಕಾನರ್‌ನ ಪಾತ್ರದಲ್ಲಿ ಅಭಿನಯಿಸಬೇಕೆಂಬ ಬೇಲ್‌ರ ಬಯಕೆಯೇ ಬಹುಶಃ ಚಲನಚಿತ್ರಕ್ಕೆ ಘಾಸಿಯುಂಟುಮಾಡಿದೆ; ಇದರಿಂದಾಗಿ ಕಥೆಯ ಹರಿವು ಮತ್ತು ಆಕಾರವನ್ನು ವಿರೂಪಗೊಳಿಸಲಾಯಿತು." ಎಂದು ಬರೆದಿದ್ದಾರೆ. ಇನ್ನೂ ಮುಂದೆಹೋಗಿ ಅವರು, ಚಲನಚಿತ್ರವು ತನ್ನ ಮೂರನೇ ಅಂಕದಲ್ಲಿ ಬಿರುಕುಬಿಡಲು ಆರಂಭಿಸುತ್ತದೆ ಎಂದು ಹೇಳುತ್ತಾ, "ಮೆಕ್‌ಜಿ ಮತ್ತು ನೋಲನ್ ಚಲನಚಿತ್ರದ ಕೊನೆಯನ್ನು ಕದಡಿಹಾಕಿದ್ದಾರೆ, ಇಲ್ಲಿ ಚಲನಚಿತ್ರಕ್ಕೆ ವಿಕಸನಗೊಂಡ ವಿಶ್ವದ ಬಗೆಗೆ ಹೊಸತಾದದ್ದೇನನ್ನಾದರೂ ಕೊಡುವ ಬದಲು ಹಳತನ್ನೇ ನೀಡಲಾಗಿದೆ (ಫ್ಯಾಕ್ಟರಿಗಳೊಳಗೆ ಮತ್ತೊಂದು ಟರ್ಮಿನೇಟರ್ ಕಾದಾಟ)." ಎಂದಿದ್ದಾರೆ.[೧೦೫] ಇದಕ್ಕೆ ವಿರುದ್ಧವಾಗಿ ಜೇಮ್ಸ್ ಬೆರಾರ್ಡಿನೆಲ್ಲಿ ಚಲನಚಿತ್ರದ ಕೊನೆಯ ಭಾಗವು "ತುಂಡುತುಂಡಾಗಿರುವ, ಅರ್ಥವಾಗದ" ಮೊದಲೆರಡು ಅಂಕಗಳಿಗಿಂತ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೇ ಕಂಡುಬರುವ ಖಳನಾಯಕನ ಕೊರತೆಯು T-800 ಪ್ರತ್ಯಕ್ಷನಾದಾಗಲೇ ನೀಗುವುದು ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.[೧೦೬]

ಲಾಸ್ ಏಂಜೆಲ್ಸ್ ಟೈಮ್ಸ್ ನ ಬೆಟ್ಸೀ ಶಾರ್ಕೀಯವರ ಪ್ರಕಾರ "[ಬೇಲ್‍ನ] ಬಲಶಾಲೀ ವ್ಯಕ್ತಿತ್ವವಾಗಲೀ, ಈ ಚಲನಚಿತ್ರವಾಗಲೀ ಅಥವಾ ಈ ಜಾಗವಾಗಲೀ ಆತನಿಗೆ ತಕ್ಕುದಾದ್ದಿಲ್ಲ" ಮತ್ತು "ಕಥೆಯು ಬೇಲ್‌ನ ಸುತ್ತ ಕುಸಿಯಲು ಆರಂಭವಾದಾಗ ಆ ಚೂರುಗಳನ್ನು ಎತ್ತಿಹಿಡಿಯಲು ವರ್ದಿಂಗ್‌ಟನ್ ಇದ್ದಾನೆ."[೧೦೭] ನ್ಯೂಯಾರ್ಕ್ ಟೈಮ್ಸ್‌ ನ ಎ.ಒ.ಸ್ಕಾಟ್ ಈ ಚಲನಚಿತ್ರವು "ಹಲವಾರು ಪಳಗಿದ ಫ್ರ್ಯಾಂಚೈಸ್ ಚಲನಚಿತ್ರದಲ್ಲಿ ಕೊರತೆಯಾಗಿ ಕಾಡುವ ನಿರ್ದಾಕ್ಷಿಣ್ಯ, ನೇರ ಸಮಗ್ರತೆಯನ್ನು ಹೊಂದಿದೆ" ಮತ್ತು "ಕಥಾ ನಿರೂಪಣೆಯು ಸಮರ್ಥವೂ ಒಳ್ಳೆಯ ಹರಿವನ್ನು ಹೊಂದಿರುವಂಥದೂ ಆಗಿದೆ." [೧೦೮] ಬೆನ್ ಲ್ಯಾನ್ಸ್ ಮತ್ತು ಬೆನ್ ಮ್ಯಾನ್ಕೀವಿಕ್ಜ್ ತಮ್ಮ ಶೋ At the Movies ನಲ್ಲಿ ಈ ಚಲನಚಿತ್ರಕ್ಕೆ ಕ್ರಮಾನುಸಾರವಾಗಿ "ನೋಡಿರಿ" ಮತ್ತು "ನೋಡಬೇಡಿ" ಶ್ರೇಣಿಗಳನ್ನು ನೀಡಿದರು ಹಾಗೂ ಎರಡನೆಯವರು ಇದರ ಬಗ್ಗೆ "ನಾನು ಬಹಳ ಕಾಲದಿಂದಲೂ ಕಾಣದಿದ್ದ ಅತ್ಯಂತ ಕೆಟ್ಟದಾದ ದೊಡ್ಡ ಬಜೆಟಿನ ಸಮ್ಮರ್ ಚಲನಚಿತ್ರ" ಎಂದು ಹೇಳಿದರು.[೧೦೯]

ಈ ಸರಣಿಯ ಹಿಂದಿನ ಎಲ್ಲಾ ಮೂರು ಚಲನಚಿತ್ರಗಳಲ್ಲಿ ನಟಿಸಿದ್ದ ಆರ್ನಾಲ್ಡ್ ಶ್ವಾರ್ಜೆನೆಗರ್, ಟರ್ಮಿನೇಟರ್ ಸಾಲ್ವೇಶನ್ "ಒಂದು ಒಳ್ಳೆಯ ಚಲನಚಿತ್ರ. ನಾನು ಅದರ ಬಗ್ಗೆ ಬಹಳ ಉತ್ಸಾಹಿತನಾಗಿದ್ದೆ" ಎಂದರು.[೧೧೦] ಈ ಸರಣಿಯ ನಿರ್ಮಾತೃ ಜೇಮ್ಸ್ ಕ್ಯಾಮೆರಾನ್ ಇದನ್ನು ಒಂದು "ಆಸಕ್ತಿಕರ ಚಲನಚಿತ್ರ" ಎಂದು ಹೇಳಿದರಲ್ಲದೆ "ನಾನು ಅಂದುಕೊಂಡಿದ್ದಷ್ಟು ಇದನ್ನು ದ್ವೇಷಿಸಲಿಲ್ಲ", ಎಂದು ಹೇಳಿ ಸ್ಯಾಮ್ ವರ್ದಿಂಗ್‌ಟನ್‌ರ ನಟನೆಯನ್ನು ಹೊಗಳಿದರು.[೧೧೧] ದ ಟರ್ಮಿನೇಟರ್ ಮತ್ತು ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ ನಲ್ಲಿ ಸಾರಾ ಕಾನರ್ ಪಾತ್ರ ವಹಿಸಿ ಟರ್ಮಿನೇಟರ್ ಸಾಲ್ವೇಶನ್ ಗೆ ತನ್ನ ದನಿಯನ್ನು ನೀಡಿದ ಲಿಂಡಾ ಹ್ಯಾಮಿಲ್ಟನ್ ಚಲನಚಿತ್ರಕ್ಕೆ "ಶುಭಹಾರೈಕೆ" ನೀಡಿದರು, ಆದರೆ ಆಕೆಯ ಪ್ರಕಾರ "ಈ ಸರಣಿಯು ಎರಡು ಚಲನಚಿತ್ರಗಳಿದ್ದಾಗಲೇ ಸಂಪನ್ನವಾಗಿತ್ತು. ಒಂದು ವೃತ್ತವನ್ನು ತಿರುಗಿಬಿಟ್ಟಿತ್ತು. ಅದೇ ಸಾಕಾಗಿತ್ತು. ಆದರೆ ಹಸುವಿನ ಹಾಲನ್ನು ಕರೆಯಬಯಸುವವರು ಯಾವಾಗಲೂ ಇದ್ದೇ ಇರುತ್ತಾರೆ."[೧೧೨]

ಗಲ್ಲಾ ಪೆಟ್ಟಿಗೆ

ಯು.ಎಸ್‌ನ ರಾಷ್ಟ್ರಾದ್ಯಂತ ಈ ಚಲನಚಿತ್ರದ ಮೊದಲ ಪ್ರದರ್ಶನವನ್ನು May 21, 2009ರ ಗುರುವಾರ ಮಧ್ಯರಾತ್ರೆ 12 ಗಂಟೆಗೆ ಏರ್ಪಡಿಸಲಾಗಿದ್ದು, ಇದು ತನ್ನ ಮಧ್ಯರಾತ್ರಿಯ ಪ್ರದರ್ಶನಗಳಿಂದ $3 ಮಿಲಿಯನ್ ಮತ್ತು ಪ್ರಥಮ ದಿನದಲ್ಲಿಯೇ ಒಟ್ಟು $13.3 ಮಿಲಿಯನ್ ಸಂಪಾದಿಸಿತು.[೧೧೩] ಇದರ ಜತೆಗೇ ಈ ಚಲನಚಿತ್ರವು ಮೆಮೊರಿಯಲ್ ಡೇ ಓಪನಿಂಗ್ ಡೇ ವಾರಾಂತ್ಯದ ಪ್ರದರ್ಶನಗಳಿಂದ $42,558,390ರಷ್ಟು ಹೆಚ್ಚಿನ ಮೊತ್ತವನ್ನು ಗಳಿಸಿತು,[೧೧೪] ಮತ್ತು Night at the Museum: Battle of the Smithsonian ನ ಹಿಂದೆ ಎರಡನೇ ಸ್ಥಾನದಲ್ಲಿದ್ದಿತು ಮತ್ತು ಈ ಸರಣಿಯ ಚಲನಚಿತ್ರಗಳ ಪೈಕಿ ನಂಬರ್ 1 ಸ್ಥಾನದೊಡನೆ ಬಿಡುಗಡೆಯಾಗದ ಪ್ರಥಮ ಚಲನಚಿತ್ರವೆನಿಸಿಕೊಂಡಿತು.[೧೧೫] ಟರ್ಮಿನೇಟರ್ ಸಾಲ್ವೇಶನ್ ತನ್ನ ಅಂತರ್ರಾಷ್ಟ್ರೀಯ ಬಿಡುಗಡೆಯಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಿತು, ಬಿಡುಗಡೆಯಾದ 70 ಪ್ರದೇಶಗಳ ಪೈಕಿ 66ರಲ್ಲಿ ಜೂನ್ ಮೊದಲ ವಾರದುದ್ದಕ್ಕೂ ಮೊದಲನೇ ಸ್ಥಾನದಲ್ಲಿದ್ದಿತು,[೧೧೬] ಮತ್ತು ಮುಂದಿನ ವಾರದಲ್ಲಿಯೂ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಮುಂದುವರೆಯಿತು.[೧೧೭] ಚಲನಚಿತ್ರದ ಒಟ್ಟು ಸ್ಥಳೀಯ ಗಳಿಕೆ $125,322,469, ವಿದೇಶೀಯ ಗಳಿಕೆ $246,723,586, ಮತ್ತು ಒಟ್ಟು ಜಾಗತಿಕ ಗಳಿಕೆ $372,046,055.[೧] ಡಿಸೆಂಬರ್ 2009ರ ಅಂಕಿ ಅಂಶಗಳ ಪ್ರಕಾರ ಈ ಚಲನಚಿತ್ರವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹದಿನಾಲ್ಕನೇ ಸ್ಥಾನದಲ್ಲಿಯೂ ಸ್ಥಳೀಯವಾಗಿ (ಯು.ಎಸ್ ಮತ್ತು ಕೆನಡಾ) ಇಪ್ಪತ್ತಮೂರನೆಯ ಸ್ಥಾನದಲ್ಲಿಯೂ ಇದೆ, ಮತ್ತು ಇದರಿಂದಾಗಿ ಇದು ಸರಣಿಯ ಚಲನಚಿತ್ರಗಳಲ್ಲಿ ಸ್ಥಳೀಯ ಗಳಿಕೆ, ಮೊದಲ ವಾರದ ಗಳಿಕೆ ಹಾಗೂ ಜಾಗತಿಕ ಮಟ್ಟದ ಗಳಿಕೆಗಳಲ್ಲಿ ಅತಿ ಕಡಿಮೆ ಯಶಸ್ಸು ಗಳಿಸಿದ ಚಿತ್ರವಾಗಿ ಉಳಿದುಕೊಂಡಿದೆ.[೧೧೮][೧೧೯][೧೨೦]

ಹೋಂ ಮಿಡಿಯಾ

ಈ ಚಲನಚಿತ್ರದ ಡಿವಿಡಿ ಮತ್ತು ಬ್ಲು-ರೇ ಡಿಸ್ಕ್ಗಳನ್ನು ಡಿಸೆಂಬರ್ 1, 2009ರಂದು ಬಿಡುಗಡೆ ಮಾಡಲಾಯಿತು. ಡಿವಿಡಿಯು ಚಲನಚಿತ್ರದ ಥ್ಯೆಟ್ರಿಕಲ್ ಕಟ್ ಅನ್ನು ಹೊಂದಿದ್ದು, ಮೋಟೋಟರ್ಮಿನೇಟರ್‌ಗಳ ಒಂದು ಫೀಚರೆಟ್ ಅನ್ನು ಹೊಂದಿದೆ. ಬ್ಲು-ರೇಯು ಥಿಯೆಟ್ರಿಕಲ್ ಕಟ್ ಮತ್ತು R-ರೇಟೆಡ್ ಡೈರೆಕ್ಟರ್ಸ್ ಕಟ್ ಅನ್ನು ಕೂಡಾ ಹೊಂದಿದ್ದು, ಮೂರು ನಿಮಿಷಗಳಷ್ಟು ಹೆಚ್ಚು ದೀರ್ಘವಾಗಿದೆ (118 ನಿಮಿಷಗಳು), ಇದರ ಜತೆಗೇ ಬೋನಸ್ ಅಂಶಗಳಾಗಿ ಮ್ಯಾಕ್ಸಿಮಮ್ ಮೂವೀ ಮೋಡ್, ಚಲನಚಿತ್ರ ನಡೆಯುತ್ತಿರುವಾಗ ಅದರ ಬಗ್ಗೆ ನಿರ್ದೇಶಕ ಮೆಕ್‌ಜಿ ಮಾತನಾಡಿರುವ ವಿಡಿಯೋ ಕಮೆಂಟರಿ, ಫೀಚರೆಟ್‍ಗಳು, ಒಂದು ವೀಡಿಯೋ ಆರ್ಕೈವ್ ಹಾಗೂ ಅಧಿಕೃತ ಚಲನಚಿತ್ರದ ಪ್ರಿಕ್ವ್ಲೆ ಕಾಮಿಕ್‌ನ ಪ್ರಥಮ ಆವೃತ್ತಿಯ ಡಿಜಿಟಲ್ ಕಾಮಿಕ್‌ಗಳೂ ಇವೆ. ಎರಡೂ ಅವತರಣಿಕೆಗಳು ಪೋರ್ಟಬಲ್ ಮೀಡಿಯಾ ಪ್ಲೇಯರ್ಗಳ ಸಲುವಾಗಿ ಥಿಯೆಟ್ರಿಕಲ್ ಕಟ್‌ನ ಒಂದು ಡಿಜಿಟಲ್ ಕಾಪಿಯನ್ನೊಳಗೊಂಡಿವೆ.[೧೨೧] ಟಾರ್ಗೆಟ್ ಸ್ಟೋರ್ಸ್ ಮಾತ್ರ ಡಿವಿಡಿಯಲ್ಲಿ ಡೈರೆಕ್ಟರ್ಸ್ ಕಟ್ ಅನ್ನು ಮಾರುವ ಅಧಿಕೃತ ರೀಟೇಲ್ ಮಾರಾಟಗಾರರಾಗಿರುತ್ತಾರೆ.[೧೨೨] ತನ್ನ ಪ್ರಥಮ ರೀಟೇಲ್ ವಾರದಲ್ಲಿ, ಟರ್ಮಿನೇಟರ್ ಸಾಲ್ವೇಶನ್ ಬ್ಲು-ರೇ ಚಾರ್ಟ್‌ಗಳ ಮೊದಲ ಸ್ಥಾನದಲ್ಲಿಯೂ, ಡಿವಿಡಿ ಚಾರ್ಟ್‌ಗಳಲ್ಲಿ ನೈಟ್ ಎಟ್ ದ ಮ್ಯೂಸಿಯಮ್: ಬ್ಯಾಟ್ಲ್ ಆಫ್ ದ ಸ್ಮಿತ್‌ಸೋನಿಯನ್ ನ ನಂತರದ ಎರಡನೆಯ ಸ್ಥಾನದಲ್ಲಿಯೂ ಇದ್ದಿತು.[೧೨೩]

ಸಂಬಂಧಿತ ಇತರೆ

Rubens Barrichello driving his Brawn GP car Brawn BGP 001 with Terminator Salvation sponsorship at the Spanish GP.

ಅಲನ್ ಡೀನ್ ಫಾಸ್ಟರ್‌ನ ಕಾದಂಬರೀಕರಣದ ಜತೆಯಲ್ಲಿಯೇ, ಇದರ ಪ್ರಿಕ್ವೆಲ್ ಕಾದಂಬರಿಯಾದ ಟಿಮೊಥಿ ಜಾಹ್ನ್ ರಚಿತ ಫ್ರಮ್ ದ ಆಶಸ್ ಕೂಡಾ ಬಿಡುಗಡೆಯಾಯಿತು.[೧೨೪][೧೨೫] IDW Publishing ನಾಲ್ಕು ಆವೃತ್ತಿಗಳ ಕಾಮಿಕ್ ಅನ್ನು ಮಾತ್ರವಲ್ಲದೆ, ಒಂದು ಅಡ್ಯಾಪ್ಟೇಶನ್ ಅನ್ನು ಕೂಡ ಬಿಡುಗಡೆ ಮಾಡಿತು.[೧೨೬] ಇದರಲ್ಲಿ ಕಾನರ್ 2017ರಲ್ಲಿ ರೆಸಿಸ್ಟೆನ್ಸ್ ಅನ್ನು ನಡೆಸಿಕೊಂಡು ಹೋಗುತ್ತಿರುವುದನ್ನೂ, ಸಾಮಾನ್ಯ ಜನರು ತಮ್ಮ ನಡುವಿನ ಮತಭೇದಗಳನ್ನು ಮರೆತು ಸ್ಕೈನೆಟ್ ಅನ್ನು ಸೋಲಿಸಲು ಮುಂದಾಗುವುದನ್ನೂ ತೋರಿಸಲಾಗಿದೆ.[೧೨೭] ಪ್ಲೇಮೇಟ್ಸ್ ಟಾಯ್ಸ್, ಸೈಡ್‌ಶೋ ಕಲೆಕ್ಟಿಬಲ್ಸ್, ಹಾಟ್ ಟಾಯ್ಸ್, ಕ್ಯಾರೆಕ್ಟರ್ ಆಪ್ಷನ್ಸ್, ಮತ್ತು DC Unlimited ಮಾರುಕಟ್ಟೆ ಪದಾರ್ಥಗಳನ್ನು ಉತ್ಪಾದಿಸಿದವು,[೧೨೮][೧೨೯] ಜತೆಗೇ Chrysler, Sony, Pizza Hut, ಮತ್ತು 7-Eleven ಇತರೆ ಪ್ರಾಡಕ್ಟ್ ಪ್ಲೇಸ್‌ಮೆಂಟ್ ಭಾಗೀದಾರರಾಗಿದ್ದವು.[೧೩೦][೧೩೧] ಮೇ 23, 2009ರಂದು Six Flags Magic Mountainನಲ್ಲಿ ಚಲನಚಿತ್ರದ ಹೆಸರಿನ ಒಂದು ರೋಲರ್ ಕೋಸ್ಟರ್ ಆರಂಭಗೊಂಡಿತು.[೧೩೨]

ಚಲನಚಿತ್ರವು ಬಿಡುಗಡೆಯಾದ ವಾರದಲ್ಲಿಯೇ ಥರ್ಡ್ ಪರ್ಸನ್ ಶೂಟರ್ ಅನ್ನು ಹೊಂದಿದ್ದ ಅದೇ ಹೆಸರಿನ ವಿಡಿಯೋ ಗೇಮ್ ಒಂದು ಬಿಡುಗಡೆಯಾಯಿತು.[೧೩೩] ಕ್ರಿಶ್ಚಿಯನ್ ಬೇಲ್ ತನ್ನ ಧ್ವನಿ ನೀಡಲು ನಿರಾಕರಿಸಿದ್ದರಿಂದ ಜಾನ್ ಕಾನರ್‌ನ ಪಾತ್ರಕ್ಕೆ ಗಿಡಿಯನ್ ಎಮೆರಿ ತಮ್ಮ ದನಿ ನೀಡಿದರು. ಈ ಗೇಮ್‌ನಲ್ಲಿ ಬಾರ್ನ್ಸ್ ಮತ್ತು ಬ್ಲೇರ್ ವಿಲಿಯಮ್ಸ್‌ನ ಪಾತ್ರಗಳಿಗೆ ಕಾಮನ್ ಮತ್ತು ಮೂನ್ ಬ್ಲಡ್‌ಗುಡ್ ಕ್ರಮಾನುಸಾರ ತಮ್ಮ ದನಿಯನ್ನು ಒದಗಿಸಿದ್ದಾರೆ.[೧೩೪] ಚಲನಚಿತ್ರದಲ್ಲಿ ನಟಿಸದಿದ್ದರೂ ಕೂಡ ರೋಸ್ ಮೆಕ್‌ಗೊವನ್ ಮಾಜೀ ಹೈಸ್ಕೂಲ್ ಟೀಚರ್ ಆಂಜೀ ಸಾಲ್ಟರ್‌ಳ ಪಾತ್ರಕ್ಕೆ ದನಿ ಒದಗಿಸಿದ್ದಾರೆ.[೧೩೫] ಈ ಗೇಮ್ 2016ರಲ್ಲಿ ಟರ್ಮಿನೇಟರ್ 3: ರೈಸ್ ಆಫ್ ದಿ ಮಶೀನ್ಸ್ ನ ನಂತರ ಮತ್ತು ಟರ್ಮಿನೇಟರ್ ಸಾಲ್ವೇಶನ್ ನ ಘಟನೆಗಳಿಗೂ ಮೊದಲು ನಡೆಯುತ್ತದೆ.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಪ್ರಶಸ್ತಿವರ್ಷವಿಭಾಗಫಲಿತಾಂಶತಾರೆ / ತಂತ್ರಜ್ಞರುಮೂಲ:
ಟೀನ್‌ ಚಾಯ್ಸ್ ಪ್ರಶಸ್ತಿಗಳು2009ಚಾಯ್ಸ್ ಚಲನಚಿತ್ರ ನಟ: ಸಾಹಸ ಅಭಿನಯನಾಮನಿರ್ದೇಶನಕ್ರಿಶ್ಚಿಯನ್ ಬೇಲ್[೧೩೬]
ಚಾಯಿಸ್‌ ಚಿತ್ರ ನಟಿ: ಸಾಹಸ ಅಭಿನಯನಾಮನಿರ್ದೇಶನಬ್ರೈಸ್ ಡಲ್ಲಾಸ್ ಹವರ್ಡ್
ಚಾಯ್ಸ್ ಮೂವೀ ಫ್ರೆಶ್ ಫೇಸ್ ಮೇಲ್ನಾಮನಿರ್ದೇಶನಸ್ಯಾಮ್ ವರ್ದಿಂಗ್‌ಟನ್
ಚಾಯ್ಸ್ ಮೂವೀ: ಸಾಹಸ ಅಭಿನಯನಾಮನಿರ್ದೇಶನ
ಚಾಯ್ಸ್ ಸಮ್ಮರ್ ಮೂವೀ: ಸಾಹಸ ಅಭಿನಯನಾಮನಿರ್ದೇಶನ
ಸ್ಯಾಟೆಲೈಟ್‌ ಪ್ರಶಸ್ತಿ2009ಅತ್ಯುತ್ತಮ ಧ್ವನಿ (ಮಿಕ್ಸಿಂಗ್ ಮತ್ತು ಎಡಿಟಿಂಗ್)ನಾಮನಿರ್ದೇಶನಕ್ಯಾಮೆರಾನ್ ಫ್ರ್ಯಾಂಕ್ಲೀ
ಮಾರ್ಕ್ ಉಲಾನೋ
ರಿಚರ್ಡ್ ವ್ಯಾನ್ ಡೈಕ್


ರಾನ್ ಬಾರ್ಟ್‌ಲೆಟ್

[೧೩೭]

ಆಕರಗಳು

ಹೊರಗಿನ ಕೊಂಡಿಗಳು

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಟರ್ಮಿನೇಟರ್ ಸಾಲ್ವೇಶನ್]]


ಟೆಂಪ್ಲೇಟು:Joseph McGinty Nichol

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ