ಜುಂಪಾ ಲಾಹಿರಿ

ಜುಂಪಾ ಲಾಹಿರಿ (ಬಂಗಾಳಿ: ঝুম্পা লাহিড়ী; ಜುಲೈ 11, 1967ರಂದು ಜನನ) ಇವರು ಭಾರತೀಯ ಮೂಲದ ಅಮೆರಿಕಾ ಸಂಜಾತ ಲೇಖಕಿ. ಲಾಹಿರಿಯ ಮೊದಲ ಸಣ್ಣ ಕಥಾ ಸಂಗ್ರಹವಾದ ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್ (1999), 2000ದ ಕಾದಂಬರಿಗಾಗಿನ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿತು, ಮತ್ತು ಇವರ ಮೊದಲ ಕಾದಂಬರಿ ದ ನೇಮ್‌ಸೇಕ್ (2003), ಇದನ್ನು ಇದೆ ಶೀರ್ಷಿಕೆ ಅಡಿಯಲ್ಲಿಯೆ ಚಲನಚಿತ್ರ ಮಾಡಲಾಯಿತು.[೨] ಇವರ ಮೊದಲ ಹೆಸರು ನೀಲಾಂಜಲ ಸುದೇಷ್ಣಾ, ಆದರೆ ಜುಂಪಾ ಎಂದು ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ, ಇವೆರಡು ಹೆಸರುಗಳು "ತಂಬಾ ಚೆನ್ನಾಗಿವೆ" ಇವರು ಎಂದು ಹೇಳುತ್ತಾರೆ.[೩] ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಬರಾಕ್ ಒಬಾಮರವರು ಲಾಹಿರಿಯವರನ್ನು ಕಲೆ ಮತ್ತು ಮಾನವತೆಯ ಮೇಲಿನ ಅಧ್ಯಕ್ಷರ ಮಂಡಳಿಯಲ್ಲಿ ಸದಸ್ಯರಾಗಿ ನೇಮಕ ಮಾಡಿದ್ದಾರೆ.[೪]

Jhumpa Lahiri
ಜನನNilanjana Sudeshna (or Svdeshna) Lahiri
(1967-07-11) ೧೧ ಜುಲೈ ೧೯೬೭ (ವಯಸ್ಸು ೫೭)
ಲಂಡನ್, England
ಪ್ರಕಾರ/ಶೈಲಿnovel, short story collection, Postcolonial
ವಿಷಯIndian American life
ಪ್ರಮುಖ ಕೆಲಸ(ಗಳು)Interpreter of Maladies (1999)
The Namesake (2003)
Unaccustomed Earth (2008)
ಪ್ರಮುಖ ಪ್ರಶಸ್ತಿ(ಗಳು)1999 O. Henry Award
2000 Pulitzer Prize for Fiction

ಪ್ರಭಾವಗಳು
  • Anton Chekhov, Andre Dubus, Mavis Gallant, Alice Munro, Vladimir Nabokov, Leo Tolstoy, William Trevor, Richard Yates[೧]

www.randomhouse.com/kvpa/jhumpalahiri/

ಜೀವನ ಚರಿತ್ರೆ

ಭಾರತೀಯಮೂಲದ ಬಂಗಾಳಿ ವಲಸೆಗಾರರ ಮಗಳಾಗಿ ಲಾಹಿರಿ ಲಂಡನ್‌ನಲ್ಲಿ ಹುಟ್ಟಿದರು. ಇವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಇವರ ಕುಟುಂಬವು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಸಲೆ ಹೋಯಿತು; ಲಾಹಿರಿಯವರು ತಮ್ಮನ್ನು ಅಮೆರಿಕಾದವರೆಂದು ಹೇಳಿಕೊಳ್ಳುತ್ತಾರೆ, "ನಾನು ಇಲ್ಲಿ ಹುಟ್ಟಿಲ್ಲ ಆದರೆ ಇಲ್ಲಿ ತುಂಬಾ ಚೆನ್ನಾಗಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.[೩] ಲಾಹಿರಿ ರೋಡ್ ಐಸ್‌ಲ್ಯಾಂಡ್‌ನ ಕಿಂಗ್ಸ್‌ಟನ್‌ನಲ್ಲಿ ಬೆಳೆದರು, ಇವರ ತಂದೆ ಅಮರ್ ಲಾಹಿರಿಯವರು ರೋಡ್ ಐಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು;[೩] ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್‌ ನ ಕೊನೆಯ ಕಥೆ "ದ ಥರ್ಡ್ ಅ‍ಯ್‌೦ಡ್ ಫೈನಲ್ ಕಾಂಟಿನೆಂಟ್"ನಲ್ಲಿ ಇವರು ನಾಯಕರಾಗಿದ್ದರು.[೫] ಲಾಹಿರಿಯವರ ತಾಯಿಯು ತಮ್ಮ ಮಕ್ಕಳು ಬೆಂಗಾಳಿ ಸಂಪ್ರದಾಯವನ್ನು ತಿಳಿದುಕೊಳ್ಳುತ್ತಾ ಬೆಳೆಯಲಿ ಎಂದು ಬಯಸಿದ್ದರು, ಮತ್ತು ಇವರ ಕುಟುಂಬವು (ಈಗ ಕೋಲ್ಕತ್ತಾ ಎಂದು ಕರೆಯಲಾಗುವ) ಪದೆ ಪದೇ ಕಲ್ಕತ್ತಾದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡುತ್ತಿರುತ್ತದೆ.[೬]

ಕಿಂಗ್ಸ್‌ಟನ್‌, ರೋಡ್ ಐಸ್‌ಲ್ಯಾಂಡ್‌ನಲ್ಲಿ ಲಾಹಿರಿಯವರು ಶಿಶುವಿಹಾರಕ್ಕೆ ಹೋಗಲು ಆರಂಭಿಸಿದಾದ ಇವರ ಮೂಲ ಹೆಸರಿಗಿಂತ ಜುಂಪಾ ಎಂಬ ನೆಚ್ಚಿನ ಹೆಸರನ್ನು ಉಚ್ಛರಿಸಲು ತುಂಬಾ ಸುಲಭವಾಗಿದ್ದರಿಂದ ಇವರ ಶಿಕ್ಷಕಿ ಜುಂಪಾ ಹೆಸರಿನಿಂದಲೇ ಕರೆಯಲು ನಿರ್ಧರಿಸಿದರು.[೩] ಲಾಹಿರಿ ನೆನಪಿಸಿಕೊಳ್ಳುತ್ತಾರೆ, "ನಾನು ನನ್ನ ಹೆಸರಿನಿಂದಾಗಿ ತುಂಬಾ ಮುಜುಗರಕ್ಕೊಳಗಾಗುತ್ತೇನೆ .... ನೀನು ಯಾರು ಎನ್ನುವುದರ ಮೂಲಕ ಒಬ್ಬರಿಗೆ ನೋವನ್ನುಂಟುಮಾಡುತ್ತಿದ್ದಿಯಾ ಎಂದು ಭಾವಿಸುತ್ತಾರೆ." [೭] ಇವರ ಕಾದಂಬರಿ ದ ನೇಮ್‌ಸೇಕ್‌ ನಲ್ಲಿ ಬರುವ ಉಭಯಭಾವನೆ ಹೊಂದಿರುವ ನಾಯಕ ಗೋಗಲ್ ಪಾತ್ರಕ್ಕೆ ಲಾಹಿರಿಯವರು ತಮ್ಮ ಗುರುತಿನ ಬಗೆಗಿನ ಉಭಯಭಾವನೆಯನ್ನೆ ಸ್ಫೂರ್ತಿಯಾಗಿ ಬಳಸಿದ್ದಾರೆ.[೩] ಲಾಹಿರಿಯವರು ದಕ್ಷಿಣ ಕಿಂಗ್ಸ್‌ಟನ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು, ಮತ್ತು 1989ರಲ್ಲಿ ಬರ್ನಾರ್ಡ್ ಕಾಲೇಜಿನಿಂದ ಇಂಗ್ಲೀಶ್ ಸಾಹಿತ್ಯದಲ್ಲಿ ಬಿ.ಎ. ಪದವಿಯನ್ನು ಪಡೆದುಕೊಂಡರು.[೮]

ಲಾಹಿರಿ ಬೋಸ್ಟನ್ ವಿಶ್ವವಿದ್ಯಾಲಯದಿಂದ ಹಲವಾರು ಪದವಿಗಳನ್ನು ಪಡೆದಿದ್ದಾರೆ: ಇಂಗ್ಲೀಷ್ ಎಂ.ಎ., ಸೃಜನಾತ್ಮಕ ಬರವಣಿಗಾಗಿ ಎಂ.ಎಫ್.ಎ., ತುಲನಾತ್ಮಕ ಸಾಹಿತ್ಯದಲ್ಲಿ ಎಂ.ಎ., ಮತ್ತು ಪುನರುಜ್ಜೀವನ ಅಧ್ಯಯನದಲ್ಲಿ ಪಿಎಚ್.ಡಿ. ಪ್ರೊವಿನ್ಸ್‌ಟನ್ ಫೈನ್ ಆರ್ಟ್ಸ್ ವರ್ಕ್ ಸೆಂಟರ್‌ನಿಂದ ಫೆಲೋಶಿಪ್ ಪಡೆದರು, ಇದು ಮುಂದಿನ ಎರಡು ವರ್ಷಗಳವರೆಗೆ ಮುಂದುವರೆಯಿತು.(1997–1998). ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ರೋಡ್ ಐಸ್‌ಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಕಲಿಸಿದರು.

ಲಾಹಿರಿ 2001ರಲ್ಲಿ ಪತ್ರಕರ್ತರಾಗಿದ್ದ ಅಲ್ಬರ್ಟೋ ವೌರ್ವೊಲಿಯಾಸ್-ಬುಷ್‌ರನ್ನು ಮದುವೆಯಾದರು, ನಂತರ ಬುಷ್‌ರು ಟೈಮ್ಸ್ ಲ್ಯಾಟಿನ್ ಅಮೆರಿಕಾದ ಉಪ ಸಂಪಾದಕರಾದರು, (ಈಗ ನೂಯಾರ್ಕಿನ ಅತ್ಯಧಿಕ ಪ್ರಸಾರವುಳ್ಳ ಸ್ಪಾನಿಷ್ ದಿನಪತ್ರಿಕೆ ಮತ್ತು ಅಮೆರಿಕಾದಲ್ಲಿ ಮುಂಚೂಣಿಯಲ್ಲಿರುವ ಪತ್ರಿಕೆ El Diario/La Prensa ದ ಕಾರ್ಯಕಾರಿ ಸಂಪಾದಕರಾಗಿದ್ದಾರೆ.) ಲಾಹಿರಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ತಮ್ಮ ಪತಿ ಮತ್ತು ಇಬ್ಬರು ಮಕ್ಕಳಾದ ಒಕ್ಟಾವಿಯೋ(ಜನನ. 2002) ಮತ್ತು ನೂರ್(ಜನನ. 2005) ಜೊತೆಗೆ ವಾಸವಾಗಿದ್ದಾರೆ.[೭]

ಸಾಹಿತ್ಯ ಜೀವನ

ಲಾಹಿರಿಯವರ ಮೊದಲಿನ ಸಣ್ಣ ಕಥೆಗಳು ಪ್ರಕಾಶರಿಂದ "ಹಲವಾರು ವರ್ಷಗಳ" ಕಾಲ ತಿರಸ್ಕರಿಸಲ್ಪಟ್ಟಿತ್ತು.[೯] 1999ರಲ್ಲಿ ಇವರ ಮೊದಲ ಸಣ್ಣ ಕಥಾ ಸಂಗ್ರಹ, ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್ ಬಿಡುಗಡೆಯಾಯಿತು. ಇದರಲ್ಲಿನ ಕಥೆಗಳು ಅಮೆರಿಕಾದಲ್ಲಿರುವ ಭಾರತೀಯರು ಅಥವಾ ವಲಸೆ ಹೋದ ಭಾರತೀಯರ ಸೂಕ್ಷ್ಮವಾದ ದ್ವಂದಗಳನ್ನು ಬಿಂಬಿಸುತ್ತವೆ, ಉದಾಹರಣೆಗೆ ವೈವಾಹಿಕ ಜೀವನದ ತೊಂದರೆಗಳು, ಗರ್ಭಪಾತ, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ವಸಲೆಗಾರರ ಮೊದಲ ಮತ್ತು ಎರಡನೆಯ ಪೀಳಿಗೆಯ ನಡುವಿನ ಅಭಿಪ್ರಾಯ ಬೇಧವನ್ನು ಒಳಗೊಂಡಿವೆ. ಲಾಹಿರಿಯವರು ನಂತರ ಬರೆಯುತ್ತಾರೆ, "ಪುಸ್ತಕ ಬರೆಯಲು ಆರಂಭಿಸಿದಾಗ ಭಾರತ ಅಮೆರಿಕಾದ ಅನುಭವಗಳ ಕುರಿತಾಗಿಯೇ ಬರೆಯುತ್ತಿದ್ದೇನೆ ಎಂಬುದು ತಿಳಿದಿರಲಿಲ್ಲ. ನಾನು ಬರೆಯುತ್ತಿದ್ದ ಸಮಯದಲ್ಲಿ ನನ್ನ ಮನಸ್ಸಿನಲ್ಲಿದ್ದದ್ದು ನಾನು ನನ್ನ ಬದುಕಿನಲ್ಲಿ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದ ಎರಡು ಪ್ರಪಂಚದ ವಿಷಯವನ್ನು ಪುಟಗಳಲ್ಲಿ ಇಳಿಸಲು ಪ್ರಯತ್ನ ಪಡುತ್ತಿದ್ದೆ. ಆದರೆ ನಾನು ಅಷ್ಟೊಂದು ಧೈರ್ಯವಂತೆ ಆಗಿರಲಿಲ್ಲ. ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಷ್ಟು ಪ್ರಬುದ್ಧತೆ ನನ್ನಲ್ಲಿ ಇರಲಿಲ್ಲ." [೧೦] ಕಥಾ ಸಂಗ್ರಹವು ಅಮೆರಿಕಾದ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು, ಆದರೆ ಲಾಹಿರಿಯವರು ಭಾರತೀಯರ ಬಗೆಗೆ ಸಕಾರಾತ್ಮಕ ಭಾವನೆ ವ್ಯಕ್ತಪಡಿಸಲಿಲ್ಲ ಎಂದು ಭಾರತ ಕೆಲವು ವಿಮರ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.[೧೧] ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್‌ ನ 600,000 ಕಾಪಿಗಳು ಮಾರಾಟವಾದವು ಮತ್ತು 2000ದ ಕಾದಂಬರಿಗಾಗಿನ ಪುಲಿಟ್ಜರ್ ಪ್ರಶಸ್ತಿ ಪಡೆದುಕೊಂಡಿತು (ಕಥಾಸಂಗ್ರಹ ಕೇವಲ ಏಳು ಬಾರಿ ಮಾತ್ರ ಪ್ರಶಸ್ತಿ ಪಡೆದುಕೊಂಡಿದೆ).[೩][೧೨]

2003ರಲ್ಲಿ, ಲಾಹಿರಿ ತಮ್ಮ ಮೊದಲ ಕಾದಂಬರಿ ದ ನೇಮ್‌ಸೇಕ್ ಪ್ರಕಟಿಸಿದರು.[೧೧] ಗಂಗೂಲಿ ಕುಟುಂಬದ ಮೂವತ್ತು ವರ್ಷಗಳ ಅವಧಿಯ ಕಥೆಯನ್ನೊಳಗೊಂಡಿದೆ. ಕಲ್ಕತ್ತಾದಲ್ಲಿ ಜನಿಸಿದ ಯುವ ಪೋಷಕರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗುತ್ತಾರೆ ತಮ್ಮ ಮಕ್ಕಳದ ಗೋಗೊಲ್ ಮತ್ತು ಸಾನಿಯಾರ ಜೊತೆಗೆ ಅಲ್ಲಿ ವಾಸಮಾಡುತ್ತಾರೆ, ಅಲ್ಲಿ ಮಕ್ಕಳು ತಮ್ಮ ಪೋಷಕರ ಜೊತೆಗೆ ನಿರಂತರವಾದ ಪೀಳಿಗೆಯ ಅಂತರವನ್ನು ಹೊಂದುತ್ತಾ ಬೆಳೆಯುತ್ತಾರೆ. ದ ನೇಮ್‌ಸೇಕ್ ಚಲನಚಿತ್ರ ರೂಪಾಂತರ ವು ಮಾರ್ಚ್ 2007ರಂದು ಬಿಡುಗಡೆಯಾಯಿತು, ಮೀರಾ ನಾಯರ್ ನಿರ್ದೇಶಿಸಿದ್ದಾರೆ ಮತ್ತು ಗೋಗೊಲ್ ಪಾತ್ರದ ನಾಯಕರಾಗಿ ಕಾಲ್ ಪೆನ್ ಮತ್ತು ಬಾಲಿವುಡ್ ನಟಿ ಟಬು ಮತ್ತು ತಂದೆಯ ಪಾತ್ರದಲ್ಲಿ ಇರ್ಫಾನ್ ಖಾನ್ ನಟಿಸಿದ್ದಾರೆ.

ಲಾಹಿರಿಯವರ ಎರಡನೇಯ ಸಣ್ಣ ಕಥಾ ಸಂಗ್ರಹ ಅನ್‌ಕಸ್ಟಮ್ಡ್ ಅರ್ಥ್ , ಏಪ್ರಿಲ್ l1 2008ರಂದು ಬಿಡುಗಡೆಯಾಯಿತು. ಅನ್‌ಕಸ್ಟಮ್ಡ್ ಅರ್ಥ್ ಬಿಡುಗಡೆಯಾದ ನಂತರ ದಲ್ಲಿ ನ್ಯೂಯಾರ್ಕ್ ಟೈಮ್ಸ್ ಉತ್ತಮ ಮಾರಾಟ ಕೃತಿಗಳ ಪಟ್ಟಿಯಲ್ಲಿ ಮೊದಲ ಬಾರಿಗೆ ನಂಬರ್ ಸ್ಥಾನ ಪಡೆಯಿತು.[೧೩] ನ್ಯೂಯಾರ್ಕ್ ಟೈಮ್ಸ್ ಬುಕ್ ರಿವ್ಯೂ ಸಂಪಾದಕ, ಡ್ವೈಟ್ ಗಾರ್ನರ್ ಈ ರೀತಿ ಹೇಳಿದ್ದಾರೆ, "ನಿಜವಾಗಿಯು ಹಿಂದೆ ಈ ರೀತಿಯಾದ ಕಥಾ ಪುಸ್ತಕವನ್ನು ತುಂಬಾ ಚೆನ್ನಾಗಿ ಬರೆದದ್ದನ್ನು ನೋಡಿರಲಿಲ್ಲ ಇದು ನೇರವಾಗಿ ನಂ. 1 ಸ್ಥಾನಕ್ಕೆ ಲಗ್ಗೆ ಹಾಕಿತು ; ಇದೊಂದು ಲಾಹಿರಿಯವರ ಹೊಸದಾದ ಪ್ರಭಾವಶಾಲಿಯಾದ ನಿರೂಪಣೆಯಾಗಿದೆ."[೧೩]

ಲಾಹಿರಿ ದ ನ್ಯೂಯಾರ್ಕರ್ ಮ್ಯಾಗಜೀನ್ ಜೊತೆಗೆ ವಿಶಿಷ್ಟವಾದ ಸಂಬಂಧವನ್ನು ಹೊಂದಿದ್ದು ಇವರ ಹಲವಾರು ಸಣ್ಣ ಕಥೆಗಳು ಪ್ರಕಟವಾದದ್ದು ಇದರಲ್ಲಿಯೆ. ಮತ್ತು ದ ಲಾಂಗ್ ವೇ ಹೋಮ್; ಕುಕ್ಕಿಂಗ್ ಲೆಸ್ಸನ್ಸ್, ಒಳಗೊಂಡು ಸಂಗತಿಗಳನ್ನು ಕುರಿತು ರಚಿಸಿದ ಹಲವಾರು ಕೃತಿಗಳು ಪ್ರಕಟವಾಗಿದ್ದವು, ಈ ಕಥೆಯಲ್ಲಿ ಲಾಹಿರಿಯವರು ತಮ್ಮ ತಾಯಿಯ ಜೊತೆಗೆ ಹೊಂದಿದ ಸಂಬಂಧಲ್ಲಿ ಆಹಾರ ಹೇಗೆ ಪ್ರಾಮುಖ್ಯತೆ ಹೊಂದಿದೆ ಎಂಬುದರ ಕುರಿತಾಗಿದೆ.

2005ರಿಂದ, ಲಾಹಿರಿ ಪೆನ್ ಅಮೆರಿಕನ್ ಸೆಂಟರ್‌ನ ಉಪಾಧ್ಯಕ್ಷರಾಗಿದ್ದಾರೆ, ಬರಹಗಾರರ ನಡುವೆ ಗೆಳೆತನ ಮತ್ತು ಬೌದ್ಧಿಕ ಸಾಂಗತ್ಯ ಬೆಳೆಸಲು ರೂಪಿಸಿದ ಸಂಸ್ಥೆ ಇದಾಗಿದೆ.

2010 ಫೆಬ್ರವರಿಯಲ್ಲಿ, ಕಲೆ ಮತ್ತು ಮಾನವತೆಯ ಮೇಲಿನ ಅಧ್ಯಕ್ಷರ ಮಂಡಳಿಯಲ್ಲಿ ಸದಸ್ಯರಾಗಿ ನೇಮಕವಾಗಿದ್ದಾರೆ ಇವರ ಜೊತೆಗೆ ಇನ್ನೂ ಐವರಿದ್ದಾರೆ.[೪]

ಸಾಹಿತ್ಯಕ ದೃಷ್ಟಿ

"ಸರಳವಾದ" ಭಾಷೆ ಮತ್ತು ಪಾತ್ರಗಳ ಮೂಲಕ ಲಾಹಿರಿಯವರ ಬರವಣಿಗೆಯನ್ನು ವಿವರಿಸಲಾಗುತ್ತದೆ, ಅಮೆರಿಕಾಕ್ಕೆ ವಲಸೆಹೋದ ಭಾರತೀಯರು ತಮ್ಮ ಜನ್ಮಸ್ಥಳ ಮತ್ತು ವಾಸಿಸುವ ನೆಲೆಯ ನಡುವಿನ ಸಾಂಸ್ಕೃತಿಕ ಮೌಲ್ಯವನ್ನು ನಿರ್ದೇಶಿಸಬೇಕು.[೨][೧೦]ಲಾಹಿರಿಯವರ ಕಥೆಗಳು ಆತ್ಮಕಥೆಯ ರೂಪದಲ್ಲಿ ಮತ್ತು ತಮ್ಮ ಪೋಷಕರ, ಗೆಳೆಯರ, ಪರಿಚಯದವರ ಮತ್ತು ಇತರೆ ಬೆಂಗಾಳಿ ಸಮುದಾಯದ ಕುಟುಂಬದವರ ಅನುಭವದ ಜೊತೆಗೆ ತಮ್ಮ ಅನುಭವವನ್ನು ಹೊಂದಿರುತ್ತವೆ. ಹೋರಾಟಗಳು, ಆತಂಕಗಳು, ಪಕ್ಷಪಾತದ ಕುರಿತಾಗಿನ ಸೂಕ್ಷ-ವ್ಯತ್ಯಾದಗಳ ಕಾಲಾನುಕ್ರಮದ ಘಟನೆಗಳು, ಮತ್ತು ವಲಸೆಗಾರರ ಮನಸ್ಥಿತಿ ಮತ್ತು ವರ್ತನೆಗಳ ವಿವರಗಳನ್ನು ಲಾಹಿರಿಯವರ ಪಾತ್ರಗಳು ಶೋಧಿಸುತ್ತವೆ.

ಅನ್‌ಕಸ್ಟಮ್ಡ್ ಅರ್ಥ್ ವರೆಗೆ ಮೊದಲ ಭಾರತೀಯ ಅಮೆರಿಕಾ ವಲಸೆಗಾರರ ಮೊದಲ ಪೀಳಿಗೆ ಮತ್ತು ಅವರ ತಮ್ಮ ದೇಶಕ್ಕಿಂತ ಭಿನ್ನವಾದ ಸ್ಥಳದಲ್ಲಿ ತಮ್ಮ ಕುಟುಂಬವನ್ನು ಬೆಳೆಸಲು ನಡೆಸುವ ಹೋರಾಟದ ಕುರಿತು ಗಮನ ಹರಿಸಿದ್ದಾ. ತಮ್ಮ ಮಕ್ಕಳನ್ನು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಪರಿಚಿತರನ್ನಾಗಿ ಮಾಡಲು ಮತ್ತು ಅವರು ಬೆಳೆದ ನಂತರವು ಒಟ್ಟು ಕುಟುಂಬದಲ್ಲಿ ಪೋಷಕರು ಮಕ್ಕಳು, ಮತ್ತು ಮಕ್ಕಳ ಕುಟುಂಬವು ಒಂದೇ ಸೂರಿನಡಿಯಲ್ಲಿ ಬಾಳುವಂತೆ ಮಾಡಲು ಪ್ರಯತ್ನ ಪಡುವುದನ್ನು ಇವರ ಕಥೆಗಳು ವಿವರಿಸುತ್ತವೆ.

ಅನ್‌ಕಸ್ಟಮ್ಡ್ ಅರ್ಥ್್‌ ನಂತರ ಲಾಹಿರಿಯ ಪಾತ್ರಗಳು ಮೊದಲಿನ ಧ್ವನಿಗಳಿಂದ ಹೊರ ಬಂದು ಹೊಸದಾದ ಹಂತದ ಬೆಳವಣಿಗೆ ಆರಂಭಿಸಿತು. ಈ ಕಥೆಗಳು ಎರಡು ಮತ್ತು ಮೂರನೇಯ ಪೀಳಿಗೆಯ ಗತಿಗಳ ಕುರಿತು ಹೆಣೆಯಲಾಗಿದೆ. ಲಾಹಿತ್ರಿಯವರ ಕಥೆಗಳು ವೈಯಕ್ತಿಕ ಅವಶ್ಯಕತೆಗಳಿಗೆ ಒತ್ತು ನೀಡುವತ್ತ ಬದಲಾಗಿ ಮುಂದಿನ ಪೀಳಿಗೆಯು ಅಮೆರಿಕಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತಮ್ಮ ಮೂಲ ದೇಶದಿಂದ ಹೊರಬಂದು ಉತ್ತಮವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಿವೆ ಎಂಬುದರತ್ತ ಗಮನ ನೀಡುತ್ತಿದ್ದಾರೆ. ನಂತರದ ಪೀಳಿಗೆಯು ತಮ್ಮ ವಲಸೆ ಪೋಷಕರು ತಮ್ಮ ಸಮುದಾಯಕ್ಕ ಮೀಸಲಾಗಿ ಮತ್ತು ಇತರೆ ಸಮುದಾಯದ ಜೊತೆಗಿನ ಜವಾಬ್ದಾರಿಗಳಿಂದ ಒತ್ತಾಯ ಪೂರ್ವಕವಾಗಿ ಹೇಗೆ ಬೇರೆಯಾಗುತ್ತಿದ್ದಾರೆ ಎಂಬುದನ್ನು ಕಟ್ಟಿಕೊಡುತ್ತಾರೆ.[೧೪]

ಗ್ರಂಥಸೂಚಿ

ಸಣ್ಣಕಥೆ ಸಂಗ್ರಹಗಳು

  • ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್ (1999)
  • ಅನ್‌ಕಸ್ಟಮ್ಡ್ ಅರ್ಥ್ (2008)

ಕಾದಂಬರಿಗಳು

  • ದ ನೇಮ್‌ಸೇಕ್ (2003)

ಸಣ್ಣ ಕಥೆಗಳು

ಪ್ರಶಸ್ತಿಗಳು

  • 1993 – ಹೆನ್‌ಫೀಲ್ಡ್ ಫೌಂಡೇಶನ್‌ನಿಂದ ಟ್ರಾನ್ಸ್‌ಅಟ್ಲಾಂಟಿಕ್ ಪ್ರಶಸ್ತಿ
  • 1999 – ಓ. ಹೆನ್ರಿ ಪ್ರಶಸ್ತಿ " ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್" ಸಣ್ಣ ಕಥೆಗಾಗಿ
  • 1999 – ಪೆನ್/ಹೆಮಿಂಗ್ವೆ ಪ್ರಶಸ್ತಿ (ವರ್ಷದ ಅತ್ಯುತ್ತಮ ಪ್ರಥಮ ಕಥೆ)ಗಾಗಿ ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್
  • 1999 – " ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್" ಬೆಸ್ಟ್ ಅಮೆರಿಕನ್ ಶಾರ್ಟ್ ಸ್ಟೋರೀಸ್ ಆಗಿ ಆಯ್ಕೆಯಾಗಿದೆ.
  • 2000 –ಅಮೆರಿಕನ್ ಅಕಡೆಮಿ ಆಫ್ ಆರ್ಟ್ಸ್ ಅ‍ಯ್‌೦ಡ್ ಲೆಟರ್ಸ್‌ನಿಂದ ಆ‍ಯ್‌ಡಿಸನ್ ಮೆಟ್‌ಕಾಫ್ ಪ್ರಶಸ್ತಿ
  • 2000 – "ದ ಥರ್ಡ್ ಆ‍ಯ್‌೦ಡ್ ಫೈನಲ್ ಕಾಂಟಿನೆಂಟ್‌" ಬೆಸ್ಟ್ ಅಮೆರಿಕನ್ ಶಾರ್ಟ್ ಸ್ಟೋರೀಸ್ ಆಗಿ ಆಯ್ಕೆಯಾಗಿದೆ.
  • 2000 – ದ ನ್ಯೂಯಾರ್ಕರ್" ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್" ಗಾಗಿ ವರ್ಷದ ಅತ್ಯುತ್ತಮ ಪ್ರಥಮ ಕಥೆ ಪ್ರಶಸ್ತಿ
  • 2000 –ಮೊದಲ ಕಥಾಸಂಗ್ರಹ ಇಂಟರ್‌ಪ್ರೆಟರ್ ಆಫ್ ಮ್ಯಾಲಡೀಸ್‌ ಗಾಗಿ ಕಾದಂಬರಿಗಾಗಿನ ಪುಲಿಟ್ಜರ್ ಪ್ರಶಸ್ತಿ
  • 2000 – "ಇಂಡಿಯನ್ ಟೇಕ್‍ಔಟ್"ಗಾಗಿ ಫುಡ್ & ವೈನ್ ಮ್ಯಾಗಜೀನ್‌ ನಿಂದ ಜೇಮ್ಸ್ ಬಿಯರ್ಡ್ ಫೌಂಡೇಶನ್‌ನ ಎಂ.ಎಫ್.ಕೆ. ಫಿಶರ್ ಡಿಸ್ಟಿಂಗ್ವಿಷ್ಡ್ ರೈಟಿಂಗ್ ಪ್ರಶಸ್ತಿ
  • 2002 – ಗುಡೆನ್‌ಹೈಮ್ ಫೆಲೋಸ್‌ಶಿಪ್
  • 2002 – "ನೋಬಡೀಸ್ ಬಿಜಿನೆಸ್" ಬೆಸ್ಟ್ ಅಮೆರಿಕನ್ ಶಾರ್ಟ್ ಸ್ಟೋರೀಸ್ ಆಗಿ ಆಯ್ಕೆಯಾಗಿದೆ.
  • 2008 – ಅನ್‌ಕಸ್ಟಮ್ಡ್ ಅರ್ಥ್‌ ಗಾಗಿ ಫ್ರ್ಯಾಂಕ್ ಓ‘ ಕಾನರ್ ಇಂಟರ್ನ್ಯಾಷನಲ್ ಶಾರ್ಟ್ ಸ್ಟೋರಿ ಪ್ರಶಸ್ತಿ
  • 2009 –ಅನ್‌ಕಸ್ಟಮ್ಡ್ ಅರ್ಥ್‌ ಗಾಗಿ ಏಷಿಯನ್ ಅಮೆರಿಕನ್ ಲಿಟ್ರರಿ ಪ್ರಶಸ್ತಿ

ಕೊಡುಗೆಗಳು

  • (ಪರಿಚಯ) ದಿ ಮ್ಯಾಜಿಕ್ ಬ್ಯಾರೆಲ್: ಸ್ಟೋರೀಸ್ ಬೆರ್ನಾರ್ಡ್ ಮ್ಯಾಲಮಡ್‌ರಿಂದ, ಫಾರರ್, ಸ್ಟ್ರಾಸ್, ಗಿರೊಕ್ಸ್ /3}, ಜುಲೈ 2003.
  • (ಪರಿಚಯ) ಆರ್.ಕೆ. ನಾರಾಯಣ್‌ರಿಂದ ಮಾಲ್ಗುಡಿ ಡೇಸ್ ಪೆಂಗ್ವಿನ್ ಕ್ಲಾಸಿಕ್ಸ್, ಅಗಸ್ಟ್ 2006.
  • "ರೋಡ್ ಐಸ್‌ಲ್ಯಾಂಡ್" (ಪ್ರಬಂಧ), State by State: A Panoramic Portrait of America ಮ್ಯಾಟ್ ವೇಲ್ಯಾಂಡ್‌ ಮತ್ತು ಸಿನ್ ವಿಲ್ಸ್ಲೆರಿಂದ ಸಂಪಾದನೆ, ಇಕೋ,ಸೆಪ್ಟೆಂಬರ್

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Page ಮಾಡ್ಯೂಲ್:Portal/styles.css has no content.

ಜೀವನ ಚರಿತ್ರೆಗಳು

ಇತರೆ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ