ಜಿ.ಎಸ್.ಜಯದೇವ

*
ಜಿ.ಎಸ್.ಜಯದೇವ:
  • ಜನ್ಮನಾಮ= ಜಯದೇವ.
  • ಜನನ:= 1951 - ಮೈಸೂರು, ಮೈಸೂರು ರಾಜ್ಯ, ಭಾರತ
  • ತಂದೆ :=ಜಿ.ಎಸ್.ಶಿವರುದ್ರಪ್ಪ
  • ತಾಯಿ := ರುದ್ರಾಣಿ
  • ವಿದ್ಯಾಭ್ಯಾಸ: =ಬಿ.ಎಸ್.ಸಿ. ಆನರ್ಸ್ ಎಮ್.ಎಸ್.ಸಿ. ಪದವೀಧರರು
  • ವೃತ್ತಿ-೨ :=ಸಮಾಜಸೇವೆ (ದೀನಬಂದು ಮಕ್ಕಳ ಮನೆ ಎಂಬ ಆಶ್ರಮ ಶಾಲೆ)
  • ವೃತ್ತಿ := ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕ
  • ಭಾಷೆ = ಕನ್ನಡ
  • ರಾಷ್ಟ್ರೀಯತೆ=ಭಾರತೀಯ
  • ಸಕ್ರಿಯ = ೧೯೯೪ ರಿಂದ
  • ಪ್ರಶಸ್ತಿ ;=2019 ರ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
.
  • ಜಿ.ಎಸ್.ಜಯದೇವರವರು ರಾಷ್ಟಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರ ಪುತ್ರ. ಇವರು ಬಿ.ಎಸ್.ಸಿ. ಆನರ್ಸ್ ಎಮ್.ಎಸ್.ಸಿ. ಪದವೀಧರರು ,ಮಾನವೀಯ ಅಂತ:ಕರಣ ಸಾಮಾಜಿಕ ಕಳಕಳಿ ಸೇವಾಮನೋಭಾವ ಇವನ್ನೆಲ್ಲ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿ , ಸ್ವತ: ಶಿಕ್ಷಕರಾಗಿ ಅನುಭವ ಉಳ್ಳವರು ಮೈಸೂರಿನ ಸುತ್ತುಮುತ್ತಲ ಅರಣ್ಯದಂಚಿನಲ್ಲಿರುವ ಗಿರಿಜನರೊಂದಿಗೆ ಹೆಚ್ಚಿನ ಒಡನಾಟ-ಸಂಪರ್ಕ . ಹಾಗಾಗಿ ಹಳ್ಳಿಗಳ ಕಡೆಗೆ ಹೆಚ್ಚಿನ ಗಮನ, ಒವವು ಯಾವುದೇ ಸದ್ದುಗದ್ದಲದ ಪ್ರಚಾರವಿಲ್ಲದೆ ಸಮಾಜಸೇವೆ ಮಾಡುವ ಹಂಬಲ.
  • ದಿಕ್ಕು ದೆಸೆಯಿಲ್ಲದ ಅನಾಧ ನಿರ್ಗತಿಕ ಗಂಡುಮಕ್ಕಳ ಏಳಿಗೆಗಾಗಿ ದೀನಬಂದು ಮಕ್ಕಳ ಮನೆ ಎಂಬ ಆಶ್ರಮ ಶಾಲೆಯನ್ನು ನಡೆಸುತ್ತಿದ್ದಾರೆ. ಚಾಮರಾಜನಗರದ ಸರ್ಕಾರಿ ಪ್ರಾಧಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ದಿಗಾಗಿ ಶಿಕ್ಷಕರಿಗೆ ತರಬೇತಿ ನೀಡುವ ಮುಖಾಂತರ ಶ್ರಮಿಸುತ್ತಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯ ನಿರ್ವಾಹಕ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  • ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್' ನ ಪೋ ಮಾಧವ ಗಾಡ್ಗಿಲ್ ರವರ ನೆರವಿನಿಂದ ಬಿಳಿಗಿರಿರಂಗನ ಬೆಟ್ಟದ ಜೀವ ವೈವಿಧ್ಯತೆ ದಾಖಲಾತಿ ಕಾರ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುತ್ತಾರೆ. ಇದೀಗ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಅಧ್ಯಾಪಕರಾಗಿದ್ದಾರೆ.[೧][೨]

ಪ್ರಶಸ್ತಿ

  • 2019 ರ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ' [೩]

ಗ್ರಂಥರಚನೆ

  • ಶಕ್ತಿಧಾಮದ ಸತ್ಯ ಕಥೆಗಳು[೪]

ಹೆಚ್ಚಿನ ಓದಿಗೆ

ಉಲ್ಲೇಖ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ