ಜಯಮಾಲಾ

ಡಾ. ಜಯಮಾಲ ಒಬ್ಬ ಕನ್ನಡ ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಜಯಮಾಲ
Jayamala, minister of kannada and culture department before kannada-bhavana
ಜನನ
ಜಯಮಾಲಾ

೨೮ ಫೆಬ್ರುವರಿ ೧೯೫೯
ಕುಡ್ಲ, ಪಣಂಬೂರು, ಮಂಗಳೂರು (ಕರ್ನಾಟಕ), ಭಾರತ
ವೃತ್ತಿ(ಗಳು)ನಟಿ, ನಿರ್ಮಾಪಕಿ,ಚಲನಚಿತ್ರ ಕಲಾವಿದೆ ಮತ್ತು ವ್ಯವಸಾಯ
Years active೧೯೭೩–ಪ್ರಸ್ತುತ
ಸಂಗಾತಿರಾಮಚಂದ್ರ ಹೆಚ್ ಎಂ

ವೈಯುಕ್ತಿಕ ವಿವರ

  • ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.[೧]

ಸಿನೇಮಾ ನಂಟು

  • ಹೈಸ್ಕೂಲ್‌ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್‌.ಟೈಲರ್‌ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್‌ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್‌ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು'– ಹೀಗೆ ಸಾಲಾಗಿ ರಾಜ್‌ ಪ್ರಪಂಚದ ಸೂಪರ್‌ಹಿಟ್‌ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.[೨]
  • ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.
  • ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.

ಸಾಧನೆಗಳು

  • ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.
  • 1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ.
  • ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.

ಸೇವೆ

ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ.ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ.ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

ಹುದ್ದೆಗಳು

  1. ಅಧ್ಯಕ್ಷರು- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
  2. ಅಧ್ಯಕ್ಷರು- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ
  3. ಅಧ್ಯಕ್ಷರು- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ
  4. ಸದಸ್ಯರು – ಕರ್ನಾಟಕ ವಿಧಾನ ಪರಿಷತ್
  5. ಸ್ಥಾಪಕ ನಿರ್ದೇಶಕರು, ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ)
  6. ವ್ಯವಸ್ಥಾಪಕ ಧರ್ಮದರ್ಶಿ- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
  7. ಭಾರತೀಯ ಪನೋರಮ-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ)
  8. ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.

ಸಾಹಿತ್ಯಾಸಕಿ

  • ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
  • ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
  • ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
  • ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.

ಪ್ರಶಸ್ತಿಗಳ ವಿವರ

  1. ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ"
  2. ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ"
  3. ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ"
  4. 15ನೇ ಟೋಕಿಯೋ ಅರ್ತ್‍ವಿಷನ್‍ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ"
  5. ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ"
  6. ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ"
  7. . ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ"
  8. ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
  9. ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
  10. ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
  11. ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ"
  12. ಸಿನಿ ಎಕ್ಸ್‍ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ"
  13. ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ"
  14. ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
  15. ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
  16. ರಾಜೀವ್‍ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
  17. ಗ್ಲೋಬಲ್‍ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
  18. ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ"
  19. ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ"
  20. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ"
  21. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ"
  22. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ
  23. ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
  24. 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ

ರಾಜಕೀಯ ಮತ್ತು ಸಮಾಜ ಸೇವೆ

  • ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.
  • 2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
  • 2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
  • ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ
  • 2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ.

ಡಾಕ್ಟರೇಟ್

  • ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.

ಸಚಿವೆ

  • ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ..ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.[೩]

ಜಯಮಾಲ ಅಭಿನಯದ ಕೆಲವು ಚಿತ್ರಗಳು

ಕನ್ನಡ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೭೫ತ್ರಿಮೂರ್ತಿಸಿ.ವಿ.ರಾಜೇಂದ್ರನ್ಡಾ.ರಾಜ್ ಕುಮಾರ್
೧೯೭೫ದಾರಿ ತಪ್ಪಿದ ಮಗಪೆಕೇಟಿ ಶಿವರಾಂಡಾ.ರಾಜ್ ಕುಮಾರ್, ಕಲ್ಪನಾ, ಆರತಿ, ಮಂಜುಳಾ
೧೯೭೬ಪ್ರೇಮದ ಕಾಣಿಕೆವಿ.ಸೋಮಶೇಖರ್ಡಾ.ರಾಜ್ ಕುಮಾರ್, ಆರತಿ
೧೯೭೬ಬಡವರ ಬಂಧುವಿಜಯ್ಡಾ.ರಾಜ್ ಕುಮಾರ್
೧೯೭೬ಯಾರು ಹಿತವರುಪಿ.ಎಸ್.ಮೂರ್ತಿರಾಮ್ ಗೋಪಾಲ್, ವಿಜಯಕಲಾ
೧೯೭೭ಗಿರಿಕನ್ಯೆದೊರೈ-ಭಗವಾನ್ಡಾ.ರಾಜ್ ಕುಮಾರ್
೧೯೭೭ಬಭ್ರುವಾಹನಹುಣಸೂರು ಕೃಷ್ಣಮೂರ್ತಿಡಾ.ರಾಜ್ ಕುಮಾರ್, ಬಿ.ಸರೋಜಾದೇವಿ, ಕಾಂಚನಾ
೧೯೭೮ಶಂಕರ್ ಗುರುವಿ.ಸೋಮಶೇಖರ್ಡಾ.ರಾಜ್ ಕುಮಾರ್, ಕಾಂಚನಾ, ಪದ್ಮಪ್ರಿಯ
೧೯೭೮ಸವಾಲಿಗೆ ಸವಾಲ್ರಮೇಶ್, ಶಿವರಾಂಶ್ರೀಕಾಂತ್
೧೯೭೯ಖಂಡವಿದೆಕೋ ಮಾಂಸವಿದೆಕೋಪಿ.ಲಂಕೇಶ್ಸುರೇಶ್ ಹೆಬ್ಳೀಕರ್, ರೂಪ
೧೯೭೫ಮಧುಚಂದ್ರರಮೇಶ್, ಶಿವರಾಂಶಂಕರ್ ನಾಗ್, ರಾಮಕೃಷ್ಣ
೧೯೮೦ಅಖಂಡ ಬ್ರಹ್ಮಚಾರಿಗಳುವಿಷುಕುಮಾರ್ವಿಷುಕುಮಾರ್, ಜಯಶ್ರೀ ಸುವರ್ಣ
೧೯೮೦ಕಪ್ಪುಕೊಳನಾಗೇಶ್ಅಶೋಕ್
೧೯೮೦ಜನ್ಮ ಜನ್ಮದ ಅನುಬಂಧಶಂಕರ್ ನಾಗ್ಅನಂತ್ ನಾಗ್, ಜಯಂತಿ, ಶಂಕರ್ ನಾಗ್, ಮಂಜುಳಾ
೧೯೮೦ನಮ್ಮಮ್ಮನ ಸೊಸೆವಾದಿರಾಜ್-ಜವಾಹರ್ಮೋಹನ್, ಸುನಂದ, ಲೀಲಾವತಿ
೧೯೮೦ಹಂತಕನ ಸಂಚುಬಿ.ಕೃಷ್ಣನ್ವಿಷ್ಣುವರ್ಧನ್, ಆರತಿ
೧೯೮೧ಅಂತಎಸ್.ವಿ.ರಾಜೇಂದ್ರಸಿಂಗ್ ಬಾಬುಅಂಬರೀಶ್, ಲಕ್ಷ್ಮಿ, ಲತಾ
೧೯೮೧ನಂಬರ್ ಐದು ಎಕ್ಕಎಸ್.ಶಿವಕುಮಾರ್ಶ್ರೀನಾಥ್
೧೯೮೧ನಾಗ ಕಾಳ ಭೈರವತಿಪಟೂರು ರಘುವಿಷ್ಣುವರ್ಧನ್, ಜಯಂತಿ
೧೯೮೧ಭಾಗ್ಯದ ಬೆಳಕುಕೆ.ವಿ.ಎಸ್.ಕುಟುಂಬ ರಾವ್ಆರತಿ, ಮಾನು
೧೯೮೧ಭರ್ಜರಿ ಬೇಟೆನಾಗೇಶ್ಅಂಬರೀಶ್, ಶಂಕರ್ ನಾಗ್, ಸ್ವಪ್ನ
೧೯೮೧ ಮುನಿಯನ ಮಾದರಿದೊರೈ-ಭಗವಾನ್ಜೈಜಗದೀಶ್, ಶಂಕರ್ ನಾಗ್
೧೯೮೧ಸಂಗೀತ (ಚಲನಚಿತ್ರ)ಚಂದ್ರಶೇಖರ್ ಕಂಬಾರಲೋಕೇಶ್
೧೯೮೨ಅಜಿತ್ ವಿ.ಸೋಮಶೇಖರ್ಅಂಬರೀಶ್
೧೯೮೨ಖದೀಮ ಕಳ್ಳರುವಿಜಯ್ಅಂಬರೀಶ್
೧೯೮೨ಧರ್ಮ ದಾರಿ ತಪ್ಪಿತುಬಂಡಾರು ಗಿರಿಬಾಬುಶ್ರೀನಾಥ್, ಶಂಕರ್ ನಾಗ್, ಜಯಂತಿ
೧೯೮೨ಪೆದ್ದ ಗೆದ್ದಭಾರ್ಗವದ್ವಾರಕೀಶ್, ಆರತಿ
೧೯೮೨ಪ್ರೇಮ ಮತ್ಸರಸಿ.ವಿ.ರಾಜೇಂದ್ರನ್ಅಂಬರೀಶ್
೧೯೮೨ರಾಗ ತಾಳಹೆಚ್.ಎಂ.ಕೃಷ್ಣಮೂರ್ತಿಪ್ರಥ್ವಿರಾಜ್ ಸಾಗರ್
೧೯೮೨ಶಂಕರ್ ಸುಂದರ್ಎ.ಟಿ.ರಘುಅಂಬರೀಶ್, ಸ್ವಪ್ನ
೧೯೮೩ಗೆಲುವು ನನ್ನದೆಎಸ್.ಎ.ಚಂದ್ರಶೇಖರ್ಅಂಬರೀಶ್, ಟೈಗರ್ ಪ್ರಭಾಕರ್
೧೯೮೩ಚಂಡಿ ಚಾಮುಂಡಿವಿ.ಸೋಮಶೇಖರ್ಶಂಕರ್ ನಾಗ್, ಟೈಗರ್ ಪ್ರಭಾಕರ್
೧೯೮೩ತಿರುಗುಬಾಣಕೆ.ಎಸ್.ಆರ್.ದಾಸ್ಅಂಬರೀಶ್, ಆರತಿ
೧೯೮೩ನ್ಯಾಯ ಗೆದ್ದಿತುಜೋ ಸೈಮನ್ಟೈಗರ್ ಪ್ರಭಾಕರ್, ಶಂಕರ್ ನಾಗ್, ರೂಪಾದೇವಿ
೧೯೮೩ಪ್ರೇಮಯುದ್ಧಟಿ.ಎಸ್.ನಾಗಾಭರಣಟೈಗರ್ ಪ್ರಭಾಕರ್
೧೯೮೩ಸಿಡಿದೆದ್ದ ಸಹೋದರಜೋ ಸೈಮನ್ವಿಷ್ಣುವರ್ಧನ್, ಆರತಿ
೧೯೮೩ಹೊಸ ತೀರ್ಪುಶಂಕರ್ ನಾಗ್ಅಂಬರೀಶ್, ಮಂಜುಳಾ
೧೯೮೪ಒಂಟಿಧ್ವನಿಟಿ.ಎಸ್.ನಾಗಾಭರಣಅಂಬರೀಶ್, ಮಂಜುಳಾ, ಲೋಕೇಶ್
೧೯೮೪ಗಂಡಭೇರುಂಡಎಸ್.ವಿ.ರಾಜೇಂದ್ರಸಿಂಗ್ ಬಾಬುಅಂಬರೀಶ್, ಶ್ರೀನಾಥ್, ಲಕ್ಷ್ಮಿ
೧೯೮೪ಜಿದ್ದುಡಿ.ರಾಜೇಂದ್ರ ಬಾಬುಟೈಗರ್ ಪ್ರಭಾಕರ್
೧೯೮೪ನಗಬೇಕಮ್ಮ ನಗಬೇಕುಬಿ.ಸುಬ್ಬರಾವ್ಶಂಕರ್ ನಾಗ್, ರಾಮಕೃಷ್ಣ
೧೯೮೪ಪ್ರೇಮವೇ ಬಾಳಿನ ಬೆಳಕುಎ.ವಿ.ಶೇಷಗಿರಿ ರಾವ್ಅನಂತ್ ನಾಗ್, ಆರತಿ
೧೯೮೪ ಬೆಂಕಿ ಬಿರುಗಾಳಿತಿಪಟೂರು ರಘುವಿಷ್ಣುವರ್ಧನ್, ಶಂಕರ್ ನಾಗ್
೧೯೮೪ಬೆದರು ಬೊಂಬೆಭಾರ್ಗವಶಂಕರ್ ನಾಗ್
೧೯೮೪ರಕ್ತ ತಿಲಕಜೋ ಸೈಮನ್ಶಂಕರ್ ನಾಗ್, ಟೈಗರ್ ಪ್ರಭಾಕರ್, ಕಾಂಚನಾ
೧೯೮೪ವಿಘ್ನೇಶ್ವರ ವಾಹನಪಿ.ಎಸ್.ಪ್ರಕಾಶ್ಟೈಗರ್ ಪ್ರಭಾಕರ್
೧೯೮೪ಹುಲಿಯಾದ ಕಾಳಬಿ.ಎಸ್.ರಂಗಾಟೈಗರ್ ಪ್ರಭಾಕರ್
೧೯೮೪ಹೊಸ ಇತಿಹಾಸಡಿ.ರಾಜೇಂದ್ರ ಬಾಬುಟೈಗರ್ ಪ್ರಭಾಕರ್
೧೯೮೫ಪ್ರಳಯ ರುದ್ರಪಿ.ಎಸ್.ಪ್ರಕಾಶ್ಟೈಗರ್ ಪ್ರಭಾಕರ್
೧೯೯೫ಗಡಿಬಿಡಿ ಅಳಿಯಸಾಯಿಪ್ರಕಾಶ್ಶಿವರಾಜ್ ಕುಮಾರ್, ಮಾಲಾಶ್ರೀ, ಮೋಹಿನಿ, ಶ್ರೀನಾಥ್
೧೯೯೬ಗೆಲುವಿನ ಸರದಾರರೇಲಂಗಿ ನರಸಿಂಹ ರಾವ್ರಾಘವೇಂದ್ರ ರಾಜ್ ಕುಮಾರ್, ಶ್ರುತಿ, ಶ್ರೀನಾಥ್
೧೯೯೬ನಿರ್ಬಂಧಹ.ಸು.ರಾಜಶೇಖರ್ಶಶಿಕುಮಾರ್, ಅನಂತ್ ನಾಗ್
೧೯೯೭ತಾಯಿ ಸಾಹೇಬಗಿರೀಶ್ ಕಾಸರವಳ್ಳಿಸುರೇಶ್ ಹೆಬ್ಳೀಕರ್
೨೦೦೪ರೌಡಿ ಅಳಿಯಸಾಯಿಪ್ರಕಾಶ್ಶಿವರಾಜ್ ಕುಮಾರ್, ಪ್ರಿಯಾಂಕ

[೪]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ