ಗಂಧಗರಿಗೆ

ಗಂಧಗರಿಗೆ
ಗಂಧಗರಿಗೆಯ ಸಸಿ(T. ciliata)
Scientific classification
ಸಾಮ್ರಾಜ್ಯ:
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೊಲಿಪ್ಸಿಡ
ಗಣ:
ಸಪಿಂಡೆಲ್ಸ್
ಕುಟುಂಬ:
ಕುಲ:
ಟೂನ
ಪ್ರಜಾತಿ:
T. ciliata
Binomial name
ಟೂನ ಸಿಲಿಯಾಟ
M. Roem.
Synonyms

T. australis

ದಾರುವು

ಗಂಧಗರಿಗೆ(Toon tree)ಆಸ್ಟ್ರೇಲಿಯಾ ಮೂಲದ ಕಾಡು ಮರ.ಇದು ದಕ್ಷಿಣ ಎಷಿಯಾದೆಲ್ಲೆಡೆ ಬೆಳೆಯುತ್ತದೆ. ಇದು ಕರ್ನಾಟಕದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೆಲಿಯೇಸೀ ಕುಟುಂಬಕ್ಕೆ ಸೇರಿದ್ದು ಟೂನ ಸಿಲಿಯಾಟ (Toona ciliata)ಎಂದು ಸಸ್ಯಶಾಸ್ತ್ರೀಯ ಹೆಸರು.ಆಂಗ್ಲ ಭಾಷೆಯಲ್ಲಿ Red ceader,Indian mahogany ಎಂದೂ ಕರೆಯುತ್ತಾರೆ.ಕನ್ನಡದಲ್ಲಿ ನೊಗೆ,ಬೆಳಂದಿ ಮುಂತಾಗಿ ಹೆಸರುಗಳಿವೆ.

ಭಾರತೀಯ ಬೇರೆ ಭಾಷಾಗಳಲ್ಲಿ ಕರೆಯಲಾಗುವ ಹೆಸರು

ಸಸ್ಯದ ಗುಣಲಕ್ಷಣಗಳು

ದೊಡ್ಡ ಪ್ರಮಾಣದ ಮರ[೧].ಎಲೆಯುದುರಿಸುವ ಮರ ಇದು.ಮರ ೪೫ ಮೀಟರುಗಳ ಎತ್ತರ ಬೆಳಯುತ್ತದೆ.ಇದರ ಕಾಂಡ ವ್ಯಾಸ ೨.೦ಮೀಟರು ಗಳಸ್ಟು ಬೆಳಯುತ್ತದೆ.ಹೂವುಗಳು ಬೆಳ್ಳಗಿರುತ್ತವೆ.ಉದ್ದ ೫ಮಿ.ಮೀ ಇರುತ್ತವೆ. ಎಲೆಗಳು ದೊಡ್ಡಗಾತ್ರದ ಸಮಲತಾ ಸಂಯುಕ್ತ ಪರ್ಣಿಗಳಾಗಿದ್ದು(Paripinnate)೩೦ ರಿಂದ ೬೦ ಸೆ.ಮೀ.ವರೆಗೆ ಉದ್ದವಿರುತ್ತದೆ.(ಚಿತ್ರ ನೋಡಿ) ಜನವರಿ ತಿಂಗಳಲ್ಲಿ ಹೊಸತಳಿರು ಕಡುಕೆಂಪು ಬಣ್ಣದಲ್ಲಿ ಹೊರಟು ಸ್ವಲ್ಪ ಸಮಯದಲ್ಲೇ ಉಜ್ವಲ ಹಸಿರಿಗೆ ತಿರುಗುತ್ತದೆ.ಇದು ನೋಡಲು ಬಲು ಸುಂದರ.ದಾರುವು ನಸುಗೆಂಪು ಬಣ್ಣದಲ್ಲಿದ್ದು,ಹೊಳಪಿನಿಂದ ಕೂಡಿದೆ.ದಾರುವು ನಸು ಪರಿಮಳಯುಕ್ತವಾಗಿದೆ.

ಉಪಯೊಗಗಳು

ದಾರುವು ಹಗುರವಾಗಿದ್ದು,ನಸುಗೆಂಪು ಬಣ್ಣ ಹೊಂದಿದೆ.ಚೆನ್ನಾಗಿ ಹೊಳಪು ಬರುವುದರಿಂದ ಹಲಗೆಗಳಾಗಿ ಬಹು ಉಪಯೋಗಿ ಮರವಾಗಿದೆ.ಉತ್ತಮ ದರ್ಜೆಯ ಪದರಹಲಗೆ(Plywood)ತಯಾರಿಕೆಯಲ್ಲಿ,ಟೀ ಪೆಟ್ಟಿಗೆಗಳ ತಯಾರಿಯಲ್ಲಿ,ಗಾಡಿಯ ನೊಗಗಳಿಗೆ ಉಪಯೋಗದಲ್ಲಿದೆ.

ಉಲ್ಲೇಖನಗಳು

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಚಿತ್ರಶಾಲೆ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ