ಕೊಕೇನ್

ರಾಸಾಯನಿಕ ಯೌಗಿಕ

ಕೊಕೇನ್ (ಬೆನ್ ಝಾಯ್ಲ್ ಮೀಥೈಲೆಕ್ ಗೊನಿನ್) ಕೋಕಾ ಗಿಡ[೫] ದ ಎಲೆಗಳಿಂದ ದೊರೆಯುವ ಮಣಿಯ ಆಕಾರವುಳ್ಳ ಒಂದು ಟ್ರೋಪೇನ್ ವನಸ್ಪತಿ ಮೂಲತತ್ವದ ಸಸ್ಯಕ್ಷಾರ (ಆಲ್ಕ್ ಲಾಯ್ಡ್) ಆಲ್ಕಲಾಯ್ಡ್ ಗಳಿಗೆ ಅಂತ್ಯಪ್ರತ್ಯಯ (ಸಫಿಕ್ಸ್) ಆಗಿ ಸೇರಿಸುವ - ಏನ್ ನೊಂದಿಗೆ ಗಿಡದ ಹೆಸರಾದ ಕೋಕಾ ಸೇರಿ ಕೊಕೇನ್ ಎಂಬ ಹೆಸರಿನ ಉದ್ಭವವಾಯಿತು. ಕೊಕೇನ್ ಮೂಲ ನರಮಂಡಲವನ್ನು ಉತ್ತೇನಜಗೊಳಿಸುವ ಮತ್ತು ಹಸಿವೆಯನ್ನು ಕುಂಠಿತಗೊಳಿಸುವ ವಸ್ತುವಾಗಿದೆ. ನಿರ್ದಿಷ್ಟವಾಗಿ ಕೊಕೇನ್ ಸೆರೋತೋನಿನ್-ನೊರೆಪೆನ್ ಫ್ರೈನ್-ಡೋಪಮೈನ್ ಮರುಪ್ರಯೋಗಕ್ಕೆ ಪ್ರತಿರೋಧಕವಾಗಿದ್ದು, ಕ್ಯಾಟೆಕೋಲಮೈನ್ ವಾಹಕ ಜಲಸಸ್ಯ (ಎಕ್ಸೋಜಿನಸ್) ಲಿಗಾಂಡ್ ಗಳಂತಹವುಗಳ ಕಾರ್ಯಶೀಲತೆಗೆ ಪ್ರತಿರೋಧವೊಡ್ಡುತ್ತವೆ. ಮೀಸೋಲಿಂಬಿಕ್ (ಕೈಕಾಲುಗಳ ಒಳಪದರುಗಳ) ರಿವಾರ್ಡ್ ಪಾಥ್ ವೇ(ಚಲನಪಥ)ಯ ಮೇಲೆ ಪರಿಣಾಮ ಬೀರುವುದರ ಫಲವಾಗಿ ಕೊಕೇನ್ ಸೇವನೆ ಒಂದು ಚಟಪ್ರಚೋದಕ[೬] ವಾಗುವುದು.

ಕೊಕೇನ್
Systematic (IUPAC) name
methyl (1R,2R,3S,5S)-3- (benzoyloxy)-8-methyl-8-azabicyclo[3.2.1] octane-2-carboxylate
Clinical data
ಗರ್ಭಧಾರಣೆಯ ವರ್ಗC
ಕಾನೂನು ಸ್ಥಿತಿControlled (S8) (AU) Schedule I (CA) Class A (UK) Schedule II (US)
Dependence liabilityHigh
RoutesTopical, Oral, Insufflation, IV, PO
Pharmacokinetic data
BioavailabilityOral: 33%[೧]
Insufflated: 60[೨]–80%[೩]
Nasal Spray: 25[೪]–43%[೧]
ಚಯಾಪಚಯHepatic CYP3A4
Half-life1 hour
ವಿಸರ್ಜನೆRenal (benzoylecgonine and ecgonine methyl ester)
Identifiers
CAS ಸಂಖ್ಯೆ50-36-2
ATC ಕೋಡ್N01BC01 R02AD03 (WHO), S01HA01 (WHO), S02DA02 (WHO)
ಪಬ್‌ಕೆಮ್CID 5760
ಡ್ರಗ್ ಬ್ಯಾಂಕ್APRD00080
ಕೆಮ್‌ಸ್ಪೈಡರ್10194104
Synonymsmethylbenzoylecgonine, benzoylmethylecgonine
Chemical data
ರಾಸಾಯನಿಕ ಸೂತ್ರC17H21NO4 
Mol. mass303.353 g/mol
SMILES
  • CN3[C@@H]2CC[C@H]3C[C@H](OC(=O)c1ccccc1)[C@@H]2C(=O)OC
Physical data
ಕರಗುವ ಬಿಂದು195 °C (383 °F)
ನೀರಿನಲ್ಲಿ ಕರಗುವಿಕೆ1800 mg/mL (20 °C)
 checkY (what is this?)  (verify)

ವೈದ್ಯಕೀಯೇತರ ಉದ್ದೇಶಗಳಿಗಾಗಿ ಹಾಗೂ ಸರ್ಕಾರದ ಪರವಾನಗಿ ರಹಿತವಾಗಿ ಕೊಕೇನ್ ಹೊಂದುವಿಕೆ, ಬೆಳೆಯುವಿಕೆ ಮತ್ತು ವಿತರಿಸುವಿಕೆ ಕಾನೂನುಬಾಹಿರವೆಂದು ಜಗತ್ತಿನ ಎಲ್ಲೆಡೆಗಳಲ್ಲೂ ಘೋಷಿತವಾಗಿದೆ. ಕೊಕೇನ್ ನನ್ನು ಮುಕ್ತವಾಗಿ ಎಲ್ಲಯೂ ವಿತರಿಸಬಾರದು, ಮಾರಬಾರದು ಎಂಬ ಕಾನೂನು ಎಲ್ಲೆಡೆ ಇದ್ದರೂ, ಮಹತ್ತರವಾದ ದಂಡ ವಿಧಿಸುವಿಕೆ ಸಕಲ ರಾಷ್ಟ್ರಗಳಲ್ಲಿ ಜಾರಿಯಲ್ಲಿದ್ದರೂ, ಕೊಕೇನ್ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಯಕ್ತಿಕ ನೆಲೆಗಳಲ್ಲಿ ವಿಸ್ತ್ರತವಾಗಿ ಉಪಯೋಗಿಸಲ್ಪಡುತ್ತಿದೆ.

ಇತಿಹಾಸ

ಕೋಕಾ ಎಲೆ

ಸುಮಾರು ಸಾವಿರ ವರ್ಷಗಳಿಗೂ ಹಿಂದಿನಿಂದ ದಕ್ಷಿಣ ಅಮೆರಿಕಾದ ಸ್ಥಳೀಕರು ಕೋಕಾ ಎಲೆ (ಎರಿತ್ರಾಕ್ಸಿಲಾನ್ ಕೋಕಾ' )ಗಳನ್ನು ಜಗಿಯುತ್ತಲಿದ್ದು, ಈ ಎಲೆಗಳಲ್ಲಿ ಮಹತ್ತರವಾದ ಪೋಷಕಾಂಶಗಳೂ ಮತ್ತು, ಕೊಕೇನ್ ಒಳಗೊಂಡಂತೆ. ಹೇರಳವಾದ ಆಲ್ಕಲಾಯ್ಡ್ (ಸಸ್ಯಕ್ಷಾರ)ಗಳೂ ಇರುತ್ತಿದ್ದವು. ಈ ಎಲೆಗಳನ್ನು ಅಂದಿಗೂ, ಇಂದಿಗೂ ಜಗತ್ತಿನ ಹಲವಾರು ಬುಡಕಟ್ಟು ಜನಾಂಗದವರು ಜಗಿಯುತ್ತಾರೆ - ಪೆರುವಿನ ಪ್ರಾಚೀನ ಮಮ್ಮಿಗಳಲ್ಲಿ ಕೊಕೇನ್ ಎಲೆಗಳ ಉಳಿಕೆಗಳನ್ನು ಕಾಣಬಹುದಾಗಿದೆ ಮತ್ತು ಆ ಕಾಲದಿಂದಲೂ ಮಡಕೆಗಳ ಮೇಲಿನ ವಿನ್ಯಾಸಗಳಲ್ಲಿ ದವಡೆಯಲ್ಲಿ ಏನನ್ನೋ ಇರಿಸಿಕೊಂಡಿರುವುದರಿಂದ ಉಂಟಾ ಗಲ್ಲದ ುಬ್ಬನ್ನು ಪ್ರತಿಬಿಂಬಿಸುವ ಚಿತ್ರಣಗಳು ಲಭ್ಯವಿವೆ.[೭] ಕೋಕಾ ಎಲೆಗಳು ಮತ್ತು ಲಾಲಾರಸದ ಮಿಶ್ರಣವನ್ನು ಸಣ್ಣ ಶಸ್ತ್ರಚಿಕಿತ್ಸೆಗಳಲ್ಲಿ ಅರಿವಳಿಕೆಯ ವಸ್ತುವಾಗಿ ಸಾಂಪ್ರದಾಯಿಕವಾಗಿ ಆಂದಿನವರು ಉಪಯೋಗಿಸುತ್ತಿದ್ದರು ಎಂಬುದೂ ಸಾಧಾರ.[೮]

ಸ್ಪಾನಿಯರ್ಡರು ದಕ್ಷಿಣ ಅಮೆರಿಕವನ್ನು ಆಕ್ರಮಿಸಿಕೊಂಡಾಗ, ಅಲ್ಲಿನ ಬುಡಕಟ್ಟು ಜನಾಂಗದವರು ಕೊಕೇನ್ ತಮಗೆ ಶಕ್ತಿ ಮತ್ತು ಉತ್ಸಾಹ ನೀಡುತ್ತದೆ ಎಂದುದನ್ನು ಮೊದಮೊದಲು ಅಲ್ಲಗಳೆದು, ಕೊಕೇನ್ ಜಗಿಯುವಿಕೆಯು ಸೈತಾನ ನ ಕೃತ್ಯವೆಂದು ಸಾರಿದರು. ಆದರೆ ಆ ಜನಗಳ ಹೇಳಿಕೆ ನಿಜವೆಂದು ಅರಿವಾದಾಗ ಕೊಕೇನ್ ಬಳಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು, ಎಲೆಗಳ ಮೇಲೆ ತೆರಿಗೆ ಹೇರಿ, ಪೈರಿನ 10% ಮೌಲ್ಯವನ್ನು ತೆರಿಗೆಯಾಗಿ ಸೆಳೆದುಕೊಂಡರು.[೯] 1569ನೆಯ ಇಸವಿಯಲ್ಲಿ ನಿಕೋಲಸ್ ಮೊನಾರ್ಡೆಸ್ ನು ಸ್ಥಳೀಕರು ಜಗಿಯುವ ಕೊಕೇನ್ ಮತ್ತು ತಂಬಾಕಿನ ಮಿಶ್ರಣವು "ಅಗಾಧ ತೃಪ್ತಿದಾಯಕ" ಎಂದು ಬಣ್ಣಿಸಿದನು.

[...when they wished to] make themselves drunk and [...] out of judgment [they chewed a mixture of tobacco and coca leaves which ...] make them go as they were out of their wittes [...][೧೦]

1609ನೆಯ ಇಸವಿಯಲ್ಲಿ ಪಾದ್ರಿ ಬ್ಲಾಸ್ ವ್ಯಾಲೆರಾ ರು ಹೀಗೆ ಬರೆದಿದ್ದಾರೆ:

Coca protects the body from many ailments, and our doctors use it in powdered form to reduce the swelling of wounds, to strengthen broken bones, to expel cold from the body or prevent it from entering, and to cure rotten wounds or sores that are full of maggots. And if it does so much for outward ailments, will not its singular virtue have even greater effect in the entrails of those who eat it?

ಬೇರ್ಪಡಿಸುವಿಕೆ

ಕೋಕಾದ ಉತ್ತೇಜಕ ಮತ್ತು ಹಸಿವನ್ನು ಮುಚ್ಚಿಹಾಕುವ ಗುಣಗಳು ಹಲವು ಶತಕಗಳಿಂದಲೂ ತಿಳಿದಿದ್ದರೂ, ಕೋಕಾದಿಂದ ಕೊಕೇನ್ ಸಸ್ಯಕ್ಷಾರ (ಆಲ್ಕಲಾಯ್ಡ್)ವನ್ನು ಬೇರ್ಪಡಿಸುವ ಕಾರ್ಯವು 1855ರವೆಗೂ ಸಾಧ್ಯವಾಗಿರಲಿಲ್ಲ. ಯೂರೋಪ್ ನ ಹಲವಾರು ವಿಜ್ಞಾನಿಗಳು ಕೊಕೇನ್ ಬೇರ್ಪಡಿಸಲು ಯತ್ನಿಸಿದರಾದರೂ ಎರಡು ಪ್ರಮುಖ ಕಾರಣಗಳಿಂದ ಅವರ ಯತ್ನ ಫಲ ನೀಡಲಿಲ್ಲ:ಅಂದಿನ ರಸಾಯನಶಾಸ್ತ್ರ ಅವಶ್ಯಕವಾದ ಮಟ್ಟಕ್ಕೆ ಬೆಳೆದಿರಲಿಲ್ಲ ಮತ್ತು ಯೂರೇಷಿಯಾ ಪ್ರಾಂತ್ಯಗಳಲ್ಲಿ ಕೋಕಾ ಬೆಳೆಯದ ಕಾರಣದಿಂದಲೂ, ಖಂಡಾಂತರಗೊಂಡ (ಬಹಳ ದಿನ ಹಡಗಿನಲ್ಲೇ ಇರುವಿಕೆಯಿಂದ ಕೊಳೆತ) ಎಲೆಗಳು ಹಡಗಿನಲ್ಲೇ ಕೊಳೆಯುತ್ತಿದ್ದುದರಿಂದಲೂ ಲಭ್ಯವಾದ ಕೊಕೇನ್ ಹಾಳಾಗಿರುತ್ತಿತ್ತು

1855ರಲ್ಲಿ ಜರ್ಮನಿಯ ರಸಾಯನಶಾಸ್ತ್ರ ವಿಜ್ಞಾನಿ ಫ್ರೀಡ್ ರಿಚ್ ಗಾಯ್ಡ್ ಕೆ ಯು ಮೊಟ್ಟಮೊದಲ ಬಾರಿಗೆ ಕೊಕೇನ್ ಆಲ್ಕಲಾಯ್ಡನ್ನು (ಸಸ್ಯಕ್ಷಾರವನ್ನು) ಬೇರ್ಪಡಿಸುವಲ್ಲಿ ಯಶಸ್ವಿಯಾದನು. ಗಾಯ್ಡ್ ಕೆ ಈ ಕ್ಷಾರವನ್ನು "ಎರಿತ್ರೋಕ್ಸಿಲಿನ್" ಎಂದು ಕರೆದು ಇದರ ಬಗ್ಗೆ ವಿವರಣೆಗಳನ್ನು ಆರ್ಕಿವ್ ಡೆರ್ ಫಾರ್ಮಾಜೀ [೧೧] ಯಲ್ಲಿ ಪ್ರಕಟಿಸಿದನು.

1856ರಲ್ಲಿ ನೊವಾರಾ (ಚಕ್ರವರ್ತಿ ಫ್ರಾನ್ಸ್ ಜೋಸೆಫ್ ನು ಗೋಳದ ಮೇಲೊಂದು ಸುತ್ತು ಹಾಕಲು ಕಳಸಿದ ಆಸ್ಟ್ರಿಯಾಯುದ್ಧನೌಕೆ)ದಲ್ಲಿ ಪ್ರಯಾಣಿಸುತ್ತಿದ್ದ ಡಾ. ಕಾರ್ಲ್ ಸ್ಕೀಜರ್ ರನ್ನು ಪ್ರೀಡ್ ರಿಚ್ ಹೋಲರ್ ಎಂಬುವವರು ದಕ್ಷಿಣ ಅಮೆರಿಕದಿಂದ ತಮಗಾಗಿ ಬೃಹತ್ ಪ್ರಮಾಣದ ಕೋಕಾ ಎಲೆಗಳನ್ನು ತಂದುಕೊಡಬೇಕೆಂದು ವಿನಂತಿಸಿಕೊಂಡರು. 1859ರಲ್ಲಿ ಆ ನೌಕೆ ಪ್ರವಾಸಗೈದು ಹಿಂದಿರುಗಿದಾಗ ಹೋಲರ್ ಕೋಕಾ ಎಲೆಗಳಿಂದ ಭರಿತವಾದ ಪೆಟ್ಟಿಗೆಯನ್ನು ಪಡೆದನು. ಹೋಲರ್ ಈ ಎಲೆಗಳನ್ನು ಜರ್ಮನಿಯ ಗಾಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ (ಪಿ ಹೆಚ್ ಡಿ)ಯ ವಿದ್ಯಾರ್ಥಿಯಾಗಿದ್ದ ಆಲ್ಬರ್ಟ್ ನೀಮನ್ ಗೆ ನೀಡಿದರು. ನೀಮನ್ ಈ ಎಲೆಗಳನ್ನು ಸಂಸ್ಕರಿಸುವ ವಿಧಾನವನ್ನು ಅಭಿವೃದ್ಧಿಗೊಳಿಸಿದನು.[೧೨]

ನೀಮನ್ ತನ್ನ ಉಬೆರ್ ಈಯ್ನ್ ನ್ಯೂ ಆರ್ಗನಿಶೆ ಬೇಸ್ ಇನ್ ಡೆನ್ ಕೋಕಾಬ್ಲಾಟ್ಟೆಮ್ (ಆನ್ ಎ ನ್ಯೂ ಆರ್ಗಾನಿಕ್ ಬೇಸ್ ಇನ್ ದಿ ಕೋಕಾ ಲೀವ್ಸ್ ) ಎಂಬ ತಲೆಬರಹದಡಿಯಲ್ಲಿ ಮಂಡಿಸಿದ ಪ್ರಬಂಧದಲ್ಲಿ ತಾನು ಕೊಕೇನನ್ನು ಬೇರ್ಪಡಿಸಲು ತೆಗೆದುಕೊಂಡ ಪ್ರತಿ ಹಂತದ ವಿವರಣೆಯನ್ನು ಸವಿಸ್ತಾರವಾಗಿ ನೀಡಿದನು. ಈ ಪುಸ್ತಕವು 1860ರಲ್ಲಿ ಪ್ರಕಟವಾಗಿದ್ದು, ನೀಮನ್ ಗೆ ಡಾಕ್ಟರೇಟ್ ಗೌರವ ತಂದುಕೊಟ್ಟಿತು. ಈ ಹೊತ್ತಿಗೆ ಈಗ ಬ್ರಿಟಿಷ್ ಗ್ರಂಥಾಲಯ ದಲ್ಲಿ ಲಭ್ಯ. ಆಲ್ಕಲಾಯ್ಡ್ ನ "ವರ್ಣರಹಿತ ಪಾರದರ್ಶಕ ತ್ರಿಕೋಣಾಕೃತಿಯ ಹರಳುಗಳ (ಪ್ರಿಸಮ್ ಆಕಾರದ)"ಬಗ್ಗೆ ಬರೆದ ನೀಮನ್ "ಅದರ ದ್ರಾವಣವು ಕ್ಷಾರಗುಣಯುಕ್ತವಾದ ಪ್ರತಿಕ್ರಿಯೆ ನೀಡುವಂತಿದ್ದು, ಕಹಿ ರುಚಿಯನ್ನು ಹೊಂದಿದ್ದು, ಲಾಲಾರಸ ಸ್ರವಿಸುವಲ್ಲಿ ಪ್ರಚೋದಕವಾಗಿ, ಒಂದು ವಿಧವಾದ ಝೋಮನ್ನು ಹೊಮ್ಮಿಸಿ, ನಾಲಗೆಗೆ ಸೋಕಿಸಿದಾಗ ತಣ್ಣನೆಯ ಅನುಭವ ನೀಡುತ್ತವೆ" ಎಂದಿದ್ದಾರೆ. ಬೇರೆಲ್ಲಾ ಸಸ್ಯಕ್ಷಾರಗಳಂತೆ ಈ ಸಸ್ಯಕ್ಷಾರ (ಆಲ್ಕಲಾಯ್ಡ್)ಕ್ಕೂ ಲ್ಯಾಟಿನ್ ಭಾಷಾಧಾರಿತ -ina ದ ಆಂಗ್ಲರೂಪವಾದ "-ine " aಂತ್ಯಪ್ರತ್ಯಯ (suffix ) ಸೇರಿಸಿದ ನೀಮನ್ ಈ ಸಸ್ಯಕ್ಷಾರವನ್ನು ಕೊಕೇನ್ ಎಂದು ಹೆಸರಿಸಿದ.[೧೨]

ಕೊಕೇನ್ ಕಣಗಳ ರಚನೆಯ ಬಗ್ಗೆ ಮತ್ತು ಅವುಗಳ ಸಂಯೋಜನೆಯ ಬಗ್ಗೆ ಮೊದಲನೆಯ ವಿಶದವಾದ ಮಾಹಿತಿಯನ್ನು ರಿಚರ್ಡ್ ವಿಲ್ ಸ್ಟಾಟರ್ ರವರು 1898ರಲ್ಲಿ ನೀಡಿದರು.[೧೩] ಕೊಕೇನ್ ಗೆ ಸಂಬಂಧಿತವಾದ ನೈಸರ್ಗಿಕ ಉತ್ಪನ್ನವಾದ ಟ್ರಾಪಿನೋನ್ ನಿಂದ ಆರಂಭಿತವಾದ ಈ ಸಂಯೋಜನೆ ಐದು ಹಂತಗಳಲ್ಲಿ ನೆರವೇರಿತು.

ಔಷಧೀಕರಣ

ಈ ಸಸ್ಯಕ್ಷಾರ ಬೆಳಕಿಗೆ ಬರುತ್ತಿರುವಂತೆಯೇ ಪಾಶ್ಚಿಮಾತ್ಯ ವೈದ್ಯಕೀಯವು ಈ ಸಸ್ಯದ ಸಕಲ ಉಪಯೋಗಗಳನ್ನೂ ತನ್ನದಾಗಿಸಿಕೊಳ್ಳಲು ಮುಂದಾಯಿತು. 1879ರಲ್ಲಿ ವುಝ್ ಬರ್ಗ್ ವಿಶ್ವವಿದ್ಯಾಲಯದ ವ್ಯಾಸಿಲಿ ವಾನ್ ಆನ್ರೆಪ್ ಒಂದು ಪ್ರಯೋಗದ ಮೂಲಕ ಈ ದ್ರವ್ಯದ ನೋವುನಿವಾರಕ ಗುಣವನ್ನು ತಿಳಿಯಪಡಿಸಿದನು. ಆತನು ಎರಡು ಜಾಡಿಗಳನ್ನು ತೆಗೆದುಕೊಂಡು, ಒಂದರಲ್ಲಿ ಕೊಕೇನ್-ಉಪ್ಪಿನ ದ್ರಾವಣವನ್ನೂ, ಇನ್ನೊಂದರಲ್ಲಿ ಬರಿದೇ ಉಪ್ಪಿನ ದ್ರಾವಣವನ್ನೂ ತುಂಬಿದನು. ನಂತರ ಒಂದು ಕಪ್ಪೆಯನ್ನು ತೆಗೆದುಕೊಂಡು ಅದರ ೊಂದು ಕಾಲನ್ನು ಚಿಕಿತ್ಸಾ ದ್ರವದಲ್ಲಿಯೂ, ಇನ್ನೊಂದನ್ನು ರಕ್ಷಣಾದ್ರವದಲ್ಲಿಯೂ ಅದ್ದಿ ಹಿಡಿದು, ಎರಡೂ ಕಾಲುಗಳನ್ನು ವಿಧವಿಧವಾದ ಪ್ರಚೋದನೆಗಳಿಗೆ ಒಳಪಡಿಸಿದನು. ಕೊಕೇನ್ ನಲ್ಲಿ ಅದ್ದಿ ಹಿಡಿದಿದ್ದ ಕಪ್ಪೆಯ ಕ಻ಲು ಉಪ್ಪಿನಲ್ಲಿ ಅದ್ದಿ ಹಿಡಿದಿದ್ದ ಕಾಲಿಗಿಂತಲೂ ಬೇರೆಯ ರೀತಿಯ ಪ್ರತಿಕ್ರಿಯೆ ನೀಡಿತು.[೧೪]

ಕಾರ್ಲ್ ಕೋಲರ್ (ಈತ ಸಿಗ್ಮಂಡ್ ಫ್ರಾಯ್ಡ್ ನ ಆತ್ಮೀಯರಲ್ಲೊಬ್ಬನಾಗಿದ್ದು, ಮುಂದೆ ಕೊಕೇನ್ ಬಗ್ಗೆ ಲೇಖನ ಬರೆದವನು) ನೇತ್ರದಂಬಂಧಿತ ದೋಷಪರಿಹಾರಗಳಿಗಾಗಿ ಇದನ್ನು ಉಪಯೋಗಿಸಲು ಒಂದು ಪ್ರಯೋಗ ನಡೆಸಿದನು. 1884ರಲ್ಲಿ ನಡೆದ ಒಂದು ಕುಖ್ಯಾತ ಪ್ರಯೋಗದಲ್ಲಿ ಅವನು ಕೊಕೇನ್ ದ್ರಾವಣವನ್ನು ತನ್ನ ಕಣ್ಣುಗಳಿಗೆ ಹಚ್ಚಿಕೊಂಡು, ಸೂಜಿಯಿಂದ ಕಣ್ಣುಗಳನ್ನು ಚುಚ್ಚಿಕೊಂಡನು. ಅವನ ಗ್ರಹಿಕೆಗಳನ್ನು ಹೀಡಲ್ ಬರ್ಗ್ ಅಪ್ತಾಲ್ಮಾಲಾಜಿಕಲ್ ಸೊಸೈಟಿಗೆ ನೀಡಲಾಯಿತು. 1884ರಲ್ಲಿ ಜೆಲಿನೆಕ್ ಎಂಬ ವಿಜ್ಞಾನಿಯು ಉಸಿರಾಟ ಸಂಬಂಧಿತ ಅಂಗಗಳ ಅರಿವಳಿಕೆಯ ವಸ್ತುವಾಗಿ ಕೊಕೇನನ್ನು ಉಪಯೋಗಿಸಬಹುದೆಂದು ಸಾಬೀತು ಪಡಿಸಿದ. 1885ರಲ್ಲಿ ವಿಲಿಯಮ್ ಹಾಲ್ ಸ್ಟೆಡ್ ನರ-ಸ್ಥಗಿತ ಅರಿವಳಿಕೆ[೧೫] ಯನ್ನು ಜಾಹೀರುಗೊಳಿಸಿದನು ಮತ್ತು ಜೇಮ್ಸ್ ಕಮಿಂಗ್ ನು ಮೂಗು-ಬಾಯಿಗಳೆರಡರಿಂದಲೂ ನೀಡಬಹುದಾದ (ಪೆರಿಡ್ಯೂರಲ್ )ಅರಿವಳಿಕೆ[೧೬] ಯನ್ನು ತೋರ್ಪಡಿಸಿದನು. 1898ರಲ್ಲಿ ಹೀನ್ರಿಚ್ ಕ್ವಿನ್ಕೇ ಕೊಕೇನನ್ನು ಬೆನ್ನೆಲುಬಿನ ಮೂಲಕ ಅರಿವಳಿಕೆಯಾಗಿಯೂ ಉಪಯೋಗಿಸಬಹುದೆಂದು ತೋರಿಸಿಕೊಟ್ಟನು.

ಇಂದು ಕೊಕೇನ್ ವೈದ್ಯಕೀಯದಲ್ಲಿ ವಿರಳವಾಗಿ ಉಪಯೋಗಿಸಲ್ಟಡುತ್ತಿದೆ. ಲೋಕಲ್ ಅನೆಸ್ತೆಟಿಕ್ (ಸ್ಥಾನಿಕ ಅರಿವಳಿಕೆ)ಆಗಿ ಕೊಕೇನ್ ಎಂಬ ಭಾಗವನ್ನು ನೋಡಿ.

ಜನಪ್ರಿಯಗೊಳಿಸುವಿಕೆ

1859ರಲ್ಲಿ ಪೆರುವಿನಲ್ಲಿ ಪೆರುವಿನ ಸ್ಥಳೀಕರು ಕೊಕೇನನ್ನು ಉಪಯೋಗಿಸುತ್ತಿದ್ದುದನ್ನು ಪ್ರತ್ಯಕ್ಷವಾಗಿ ಕಂಡ ಪಾವ್ಲೋ ಮಂಟಿಗಝ್ಝ ಎಂಬ ಇಟಾಲಿಯನ್ ವೈದ್ಯನು ಇಟಲಿಗೆ ಹಿಂದಿರುಗಿ ಪ್ರಯೋಗಗಳಲ್ಲಿ ತೊಡಗಿದನು. ತನ್ನ ಮೇಲೆಯೇ ಕೊಕೇನನ್ನು ಅನೇಕ ರೀತಿ ಪ್ರಯೋಗಿಸಿಕೊಂಡ ಆತನು ಮಿಲಾನ್ ಗೆ ಹಿಂತಿರುಗಿದ ನಂತರ ಕೊಕೇನ್ ನ ಪರಿಣಾಮಗಳನ್ನು ಕುರಿತು ವ್ಯಾಖ್ಯಾನ ಬರೆದನು. ಕೋಕಾ ಮತ್ತು ಕೊಕೇನನ್ನು (ಅವೆರಡೂ ಒಂದೇ ಎಂದು ಅಂದು ಪರಿಗಣಿಸಲಾಗಿತ್ತು) ವೈದ್ಯಕೀಯದಲ್ಲಿ ಉಪಯೋಗಿಸಬಹುದೆಂದೂ, "ರಸಗ್ರಂಥಿಗಳ ಸೂಕ್ತ ಚಾಲನೆಗೆ, ವಾತ ಪರಿಹಾರಕ್ಕೆ ಮತ್ತು ಹಲ್ಲುಗಳನ್ನು ಬಿಳುಪಾಗಿಸಲು" ಇದು ಉಪಯುಕ್ತವೆಂದೂ ಅಭಿಪ್ರಾಯಪಟ್ಟನು.

ಪೋಪ್ ಲಿಯೋ XIII ಕೋಕಾ-ಸಂಸ್ಕರಿತ ವಿನ್.ಮಾರಿಯಾನಿಯನ್ನು ತನ್ನ ಹಿಪ್ ಫ್ಲಾಸ್ಕ್ ನಲ್ಲಿ ಒಯ್ಯುತ್ತಿದ್ದರೆಂದೂ, ಏಂಜೆಲೋ ಮಾರಿಯಾನಿಗೆ ಒಂದು ವ್ಯಾಟಿಕನ್ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಿದರೆಂದೂ ಮಾತಿದೆ.

ಏಂಜೆಲೋ ಮಾರಿಯಾನಿ ಎಂಬ ರಸಾಯನ ತಜ್ಞನು ಮಂಟೆಗಝ್ಝಿಯ ಲೇಖನಗಳಿಂದ ಪ್ರಭಾವಿತನಾಗಿ ಕೋಕಾದ ಆರ್ಥಿಕ ಸಾಧ್ಯತೆಗಳ ಬಗ್ಗೆ ಕುತೂಹಲ ತಳೆದನು. 1863ರಲ್ಲಿ ಮಾರಿಯಾನಿಯು ವಿನ್ ಮಾರಿಯಾನಿ ಎಂಬ ವೈನ್ ಒಂದನ್ನು ಕೋಕಾದ ಎಲೆಗಳಿಂದ ಪರಿಷ್ಕರಿಸಿ ಕೋಕಾವೈನ್ ಎಂಬ ಹೆಸರಿನಲ್ಲಿ ಮಾರತೊಡಗಿದನು. ವೈನ್ ನಲ್ಲಿನ ಎಥೆನಾಲ್ ಅಂಶವು ಕೋಕಾ ಎಲೆಗಳಿಂದ ಕೋಕಾವನ್ನು ಹೀರಿಕೊಂಡುದರಿಂದ ಆ ಪೇಯದ ಪರಿಣಾಮವೇ ಮಾರ್ಪಟ್ಟಿತು. ಆ ವೈನ್ ನಲ್ಲಿ ಪ್ರತಿ ಔನ್ಸ್ ಗೆ 6 ಮಿಲಿಗ್ರಾಂ ಕೊಕೇನ್ ಇದ್ದು, ಅಮೆರಿಕದಲ್ಲಿನ ಇತರ ಪಾನೀಯಗಳಲ್ಲಿ ಇದಕ್ಕಿಂತಲೂ ಹೆಚ್ಚನ ಕೊಕೇನ್ ಅಂಶವಿದ್ದುದರಿಂದ ಅವುಗಳ ಮೇಲಿನ ಪೈಪೋಟಿಗಾಗಿ ರಫ್ತು ಮಾಡಬೇಕಾದ ವಿನ್ ಮಾರಿಯಾನಿಯಲ್ಲಿ ಪ್ರತಿ ಔನ್ಸ್ ಗೆ 7.2 ಮಿಲಿಗ್ರಾಂ ಕೊಕೇನ್ ಬೆರೆಸಲಾಯಿತು. 1886ರಲ್ಲಿ ಜಾನ್ ಸ್ಟೈತ್ ಪೆಂಬರ್ ಟನ್ ರ ತಯಾರಿಕೆಯಾದ ಕೋಕಾ-ಕೋಲಾ ದಲ್ಲಿ 'ಒಂದು ಚಿಟಿಕೆ ಕೋಕಾ ಎಲೆ'ಎಂದಿದ್ದರೂ, ಮುಂದೆ, 1906ರಲ್ಲಿ, ಶುದ್ಧ ಆಹಾರ ಮತ್ತು ಔಷಧಿ ಕಾಯಿದೆ ಜಾರಿಗೆ ಬಂದಮೇಲೆ ಈ ಎಲೆಗಳನ್ನು ಅದರಲ್ಲಿ ಉಪಯೋಗಿಸುವುದನ್ನು ಸ್ಥಗಿತಗೊಳಿಸಲಾಯಿತು. ಮೊದಲ ಇಪ್ಪತ್ತು ವರ್ಷಗಳು ತಯಾರಾದ ಕೋಕಾ-ಕೋಲಾದಲ್ಲಿ ಕೊಕೇನ್ ನ ಅಂಶ ಎಷ್ಟಿತ್ತು ಎಂಬುದು ಅಳವಿಗೆ ಸಿಗದ ಸಂಗತಿ.

1879ರಲ್ಲಿ ಅಫೀಮಿನ ಚಟ ಬಿಡಿಸಲು ಕೊಕೇನನ್ನು ಬಳಸುವುದು ಮೊದಲಾಯಿತು. 1884ರಲ್ಲಿ ಕೊಕೇನನ್ನು ಲೋಕಲ್ ಅನೆಸ್ತೆಟಿಕ್ (ಸ್ಥಾನಿಕ ಅರಿವಳಿಕೆ) ಆಗಿ ಜರ್ಮನಿಯಲ್ಲಿ ತೊಡಗಿಸಿಕೊಳ್ಳಲಾಯಿತು. ಇದೇ ಸಮಯದಲ್ಲಿ ಸಿಗ್ಮಂಡ್ ಫ್ರಾಯ್ಡನು ತನ್ನ ಉಬೆರ್ ಕೋಕಾ ಎಂಬ ಪುಸ್ತಕದಲ್ಲಿ ಕೊಕೇನ್ ------------- ಉಂಟುಮಾಡುವುದೆಂದು ಬರೆದನು.

exhilaration and lasting euphoria, which in no way differs from the normal euphoria of the healthy person...You perceive an increase of self-control and possess more vitality and capacity for work....In other words, you are simply normal, and it is soon hard to believe you are under the influence of any drug....Long intensive physical work is performed without any fatigue...This result is enjoyed without any of the unpleasant after-effects that follow exhilaration brought about by alcohol....Absolutely no craving for the further use of cocaine appears after the first, or even after repeated taking of the drug...

ಚಿತ್ರ:Cocaine tooth drops.jpg
ಕೊಕೇನನ್ನು ಶೀಘ್ರವಾಗಿ ಕಾರ್ಯಗೊಳ್ಳುವ ಅರಿವಳಿಕೆಯಾಗಿ ಮಾರಲಾಗುತ್ತಿತ್ತು.

1885ರಲ್ಲಿ ಅಮೆರಿಕದ ಉತ್ಪಾದಕರಾದ ಪಾರ್ಕ್-ಡೇವಿಸ್ ಕೊಕೇನನ್ನು ಸಿಗರೇಟ್ ಹಾಗೂ ಪುಡಿಗಳ ರೂಪದಲ್ಲಿ ಮಾರತೊಡಗಿದುದಲ್ಲದೆ ಕೊಕೇನ್ ಭರಿತವಾದ, ಸೂಜಿಯ ಮೂಲಕ ನೇರವಾಗಿ ರಕ್ತನಾಳಕ್ಕೇ ತಲುಪಿಸಬಹುದಾದ ಮಿಶ್ರಣಗಳನ್ನೂ ಮಾರತೊಡಗಿತು. ಆ ಕಂಪನಿಯು ತನ್ನ ಕೊಕೇನ್ ಉತ್ಪನ್ನಗಳು "ಆಹಾರದ ಜಾಗವನ್ನು ಇವು ತುಂಬುತ್ತವೆ. ಅಂಜುಬುರುಕರನ್ನು ಧೈರ್ಯಶಾಲಿಗಳನ್ನಾಗಿಸುತ್ತವೆ, ಮೂಕನನ್ನು ವಾಚಾಳಿಯಾಗಿಸುತ್ತವೆ ಮತ್ತು .... ನೋವಿನಿಂದ ನರಳುತ್ತಿರುವವರಿಗೆ ನೋವೇ ಅರಿವಿಗೆ ಬಾರದಂತೆ ಮಾಡುತ್ತವೆ" ಎಂದು ಆಶ್ವಾಸನೆ ಇತ್ತಿತು.

ವಿಕ್ಟೋರಿಯನ್ ಯುಗದ ಅಂತ್ಯದಲ್ಲಿ ಕೊಕೇನ್ ಉಪಯೋಗ ೊಂದು ಚಟ ಎಂದು ಬರವಣಿಗೆ ಗಳಲ್ಲಿ ಉಲ್ಲೇಖವಾಯಿತು. ಉದಾಹರಣೆಗೆ, ಅದನ್ನು ಆರ್ಥರ್ ಕೊನಾನ್ ಡೈಲ್ ರ ಕಲ್ಪಿತ ವ್ಯಕ್ತಿಯಾದ ಷರ್ಲಾಕ್ ಹೋಮ್ಸ್ ನಿಂದ ಚುಚ್ಚುಮದ್ದಾಗಿ ನೀಡಲ್ಪಟ್ಟಿತ್ತು.

20ನೆಯ ಶತಮಾನಸ ಆದಿಯಲ್ಲಿ ಮೆಂಫಿಸ್, ಟೆನ್ನೆಸೀ ಯ ಬಿಯೇಲ್ ಸ್ಟ್ರೀಟ್ ನ ಔಷಧದ ಅಂಗಡಿಯಲ್ಲಿ ಒಂದು ಸಣ್ಣ ಪೆಟ್ಟಿಗೆಗೆ 5ರಿಂದ 10 ಸೆಂಟ್ ಗಳ ಬೆಲೆಗೆ ಕೊಕೇನ್ ಮಾರಲ್ಪಡುತ್ತಿತ್ತು. ಮಿಸಿಸಿಪಿ ನದಿಯಗುಂಟ ಇದ್ದ ನಾವೆಯ ನೌಕರರು ಈ ದ್ರವ್ಯವನ್ನು ಉತ್ತೇಜಕವಾಗಿ ಉಪಯೋಗಿಸುತ್ತಿದ್ದರು ಮತ್ತು ಬಿಳಿಯ ಯಜಮಾನರು ಕರಿಯ ನೌಕರರು ಕೊಕೇನ್ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುತ್ತಿದ್ದರು.[೧೭]

1909ರಲ್ಲಿ ಎರ್ನೆಸ್ಟ್ ಷಾಕಲ್ ಟನ್ "ಫೋರ್ಸ್ ಡ್ ಮಾರ್ಚ್" ಎಂಬ ಗುರುತುಳ್ಳ ಕೊಕೇನ್ ಮಾತ್ರೆಗಳನ್ನು ಅಂಟಾರ್ಟಿಕಾ ಗೆ ತೆಗೆದುಕೊಂಡುಹೋದನು, ಕ್ಯಾಪ್ಟನ್ ಸ್ಕಾಟ್ ಕೂಡಾ ತನ್ನ ದುರಂತಭರಿತ ದಕ್ಷಿಣ ಧ್ರುವ ಪ್ರವಾಸಕ್ಕೆ ತೆರಳಿದಾಗ ಕೊಕೇನ್ ತೆಗೆದುಕೊಂಡು ಹೋಗಿದ್ದನು.[೧೮]

ಪ್ರತಿಬಂಧಕಾಜ್ಞೆ

20ನೆಯ ಶತಮಾನಕ್ಕೆ ಕಾಲಿಡುತ್ತಿದ್ದಂತೆಯೇ ಕೊಕೇನ್ ಚಟಕಾರಕವೆಂದೂ, ಅದರಿಂದ ದುಷ್ಪರಿಣಾಮಗಳು ಆಗುವುವೆಂದೂ ಅಮೆರಿಕದ ಜನತೆ ಮನಗಾಣಲಾರಂಭಿಸಿದರು. ಕೊಕೇನ್ ದುರುಪಯೋಗ ಒಂದು ನೈತಿಕ ಭೀತಿ ಯಾಗಿ ಪರಿಣಮಿಸಿ ವರ್ಣಸಂಬಂಧಿತ ಗಲಭೆ ಮತ್ತು ಸಾಮಾಜಿಕ ಏರುಪೇರುಗಳಿಗೆ ಕೊಕೇನ್ ಕಾರಣವೆಂದು ಕೊಂಡಿ ಹಾಕಲಾಯಿತು. 1903ರಲ್ಲಿ ಅಮೆರಿಕನ್ ಜರ್ನಲ್ ಆಫ್ ಫಾರ್ಮಸಿ ಯು ಕೊಕೇನ್ ಗೆ ದಾಸರಾಗುವವರಲ್ಲಿ ಬಹಳ ಜನ "ಬೊಹೇಮಿಯನ್ನರು, ಜೂಜುಕೋರರು, ಉತ್ತಮ ಮತ್ತು ಕೀಳುಮಟ್ಟದ ವೇಶ್ಯೆಯರು, ರಾತ್ರಿಯ ಕೂಲಿಕಾರರು, ಹೊಟೆಲ್ ನ ನೌಕರರು, ಕಳ್ಳರು, ವಂಚಕರು, ತಲೆಹಿಡುಕರು ಮತ್ತು ದಿನಗೂಲಿಯವರು" ಎಂದು ಸಾರಿತು 1914ರಲ್ಲಿ ಪೆನ್ಸಿಲ್ವೇನಿಯಾ ದ ಸ್ಟೇಟ್ ಫಾರ್ಮಸಿ ಬೋರ್ಡ್ ನ ಡಾ. ಕ್ರಿಸ್ಟೋಫರ್ ಕಾಚ್ ,ವರ್ಣಭೇದದ ಬಗ್ಗೆ ಚುಚ್ಚುನುಡಿಗೆ ಮತ್ತಷ್ಟು ಇಂಬು ನೀಡುವಂತೆ,ಘಂಟಾಘೋಷವಾಗಿ "ಬಿಳಿಯ ಹೆಣ್ಣುಗಳ ಮೇಲೆ ನಡೆಯುವ ಬಹುತೇಕ ದೌರ್ಜನ್ಯಗಳಿಗೆ ಕೊಕೇನ್-ಮತಿಭ್ರಮಿತ ನೀಗ್ರೋ ಮಿದುಳುಗಳೇ ಕಾರಣ" ಎಂದು ಹೇಳಿಕೆ ನೀಡಿದರು. ಸಮೂಹ ಮಾಧ್ಯನಗಳು ಕೊಕೇನ್ ಉಪಯೋಗಿಸುವ ಅಮೆರಿಕಾದ ದಕ್ಷಿಣಭಾಗದ ಪ್ರಾಂತ್ಯಗಳಲ್ಲಿನ ದಕ್ಷಿಣ ಆಫ್ರಿಕಾದ ಅಮೆರಿಕನ್ ಜನರಲ್ಲಿ ಕೊಕೇನ್ ನಿಂದುಂಟಾದ ೊಂದು ಸಾಂಕ್ರಾಮಿಕ ರೋಗ ಹರಡಿದೆ ಎಂದು ಕಥೆ ಹಬ್ಬಿಸಿವಿದರ ಮೂಲಕ ಆ ಕಾಲದಲ್ಲಿ ಇದ್ದ ವರ್ಣಭೇದನೀತಿಯನ್ನು ದುರುಪಯೋಗಿಸಿಕೊಂಡವು. ಅಸಲಿಗೆ ಅಂತಹ ಸಾಂಕ್ರಾಮಿಕ ರೋಗ ಿದ್ದಿತು ಎಂಬುದು ನಿರಾಧಾರವಾದುದು. ಅದೇ ವರ್ಷದಲ್ಲಿ ಹ್ಯಾರಿಸನ್ ಮಾದಕ ದ್ರವ್ಯ ತೆರಿಗೆ ಮಸೂದೆ ಯು ಅರಿಕದಲ್ಲಿ ಕೊಕೇನ್ ನ ಮಾರಾಟ ಮತ್ತು ವಿತರಣೆಯನ್ನು ಕಾನೂನುಬಾಹಿರವೆಂದಿತು. ಈ ಮಸೂದೆಯು ಕೊಕೇನ್ ಮಾದಕ ದ್ರವ್ಯ ಎಂದು ತಪ್ಪಾಗಿ ಘೋಷಿಸಿತು ಮತ್ತು ಈ ತಪ್ಪಾದ ವರ್ಗೀಕರಣ ಹಾಗೆಯೇ ಜನಸಾಮಾನ್ಯರ ಮನದಲ್ಲಿಯೂ ಸ್ಥಾಪಿತವಾಯಿತು. ಮೊದಲೇ ಉಲ್ಲೇಖಿಸಿದಂತೆ ಕೊಕೇನ್ ಉತ್ತೇಜಕ, ಮಾದಕವಲ್ಲ. ಪಾರಿಭಾಷಿಕವಾಗಿ ಕೊಕೇನ್ ಮಾರಾಟ ಮತ್ತು ವಿತರಣೆ ಕಾನೂನುಬಾಹಿರವಾದರೂ, ನೋಂದಾಯಿತ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಇದನ್ನು ವಿತರಿಸಲು ಮತ್ತು ಮಾರಲು ಅನುಮತಿ ಇತ್ತು. ಕೊಕೇನ್ ಅನ್ನು ಮಾದಕವಸ್ತು ಎಂದು ತಪ್ಪಾಗಿ ವರ್ಗೀಕರಣ ಮಾಡಿದುದರಿಂದಲೇ ಸರ್ಕಾರವು ತತ್ಸಂಬಂಧಿತವಾದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲವೆಂಬ ಚರ್ಚೆ ಇಂದಿಗೂ ನಡೆದಿದೆ. 1970ರಲ್ಲಿ ಅಮೆರಿಕವು ಕೊಕೇನ್ ಮಾರಾಟವನ್ನು ನಿರೋಧಿತ ವಸ್ತುಗಳ ಕಾಯಿದೆ ಯ ಅಡಿಯಲ್ಲಿ ಹತೋಟಿಯಲ್ಲಿ ಇಟ್ಟುಕೊಳ್ಳುವವರೆಗೂ ಕೊಕೇನ್ ವ್ಯಾಪಾರ ಅನಿರ್ಬಂಧಿತವಾಗಿ ಸಾಗುತ್ತಿತ್ತು ಮತ್ತು ಅದರಲ್ಲಿ ನಿರತರಾದವರು ವಿರಳವಾಗಿ ಶಿಕ್ಷೆಗೆ ಒಳಗಾಗುತ್ತಿದ್ದರು ಎಂಬುದಕ್ಕೆ ಕಾರಣ ಕೊಕೇನ್ ಬಗ್ಗೆ ನಡೆಯುತ್ತಿದ್ದ ಭೌತಿಕ ಮತ್ತು ನೈತಿಕ ಚರ್ಚೆಗಳೇ ಆಗಿದ್ದವು.

ಆಧುನಿಕ ುಪಯೋಗಗಳು

ಬಹುತೇಕ ರಾಷ್ಟ್ರಗಳಲ್ಲಿ ಕೊಕೇನ್ ಒಂದು ಜನಪ್ರಿಯ ಚೇತೋಹಾರಿ ದ್ರವ್ಯ. ಅಮೆರಿಕದಲ್ಲಿ "ಕ್ರ್ಯಾಕ್" ಕೊಕೇನ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಈ ದ್ರವ್ಯ ಸಾಮಾನ್ಯವಾಗಿ ಬಡವರೇ ಇರುವ ನಗರದ ಒಳ-ಮಾರಿಕಟ್ಟೆಯನ್ನೂ ತಲುಪುವಂತಾಯಿತು. ಕೊಕೇನ್ ಪುಡಿಯ ರೂಪದಲ್ಲಿ ಉಪಯೋಗಿಸಲ್ಪಡುವುದು ಸುಮಾರು ಕಾಲದಿಂದಲೂ ಒಂದೇ ಪ್ರಮಾಣದಲ್ಲಿದ್ದು 1990ರ ದಶಕ ಮತ್ತು 2000ದ ದಶಕದ ಪೂರ್ವಭಾಗದಲ್ಲಿ ಅಮೆಇರಿಕದಲ್ಲಿ ಇದರ ಬಳಕೆ ಹೆಚ್ಚಿದ್ದು, ಇತ್ತೀಚಿನ ವರ್ಷಗಳಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲೂ ಬಹಳ ಜನಪ್ರಿಯವಾಗುತ್ತಿದೆ.

ಎಲ್ಲಾ ವಯಸ್ಸಿನ, ಸಾಮಾಜಿಕ ನೆಲೆಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕಾರಣ ಮತ್ತು ಜೀವನಶೈಲಿಯನ್ನು ಅನುಸರಿಸುತ್ತಿರುವ ಎಲ್ಲಾ ಸಾಮಾಜಿಕಾರ್ಥಿಕ ಸ್ತರಗಳ ಜನರಲ್ಲೂ ಕೊಕೇನ್ ಬಳಕೆ ಕಂಡುಬರುತ್ತದೆ.

ಅಮೆರಿಕದಲ್ಲಿನ ಕೊಕೇನ್ ಮಾರಾಟ ಗಿರಾಕಿ ನೀಡಿದ ಹಣದ ಮೊತ್ತದಲ್ಲಿ $ ಎಪ್ಪತ್ತು ಬಿಲಿಯನ್ ಗೂ ಹೆಚ್ಚು ಎಂದು 2005ರ ಅಂಕಿ ಅಂಶ ತಿಳಿಸುತ್ತದೆ. ಇದು ಸ್ಟಾರ್ ಬಕ್ಸ್ [೧೯][೨೦]ನಂತಹ ಕಾರ್ಪೊರೇಷನ್ ಗಳ ವರಮಾನವನ್ನೂ ಮೀರಿದ ಮೊತ್ತವಾಗಿದೆ. ಅಮೆರಿಕದಲ್ಲಿ ಕೊಕೇನ್ ಗೆ ಬೇಡಿಕೆ ಬಹಳವೇ ಇದ್ದು, ಒಂಟಿ ವಯಸ್ಕರು,ಎಷ್ಟು ಬೇಕಾದರೂ ಸಂಪಾದಿಸಬಲ್ಲ ವೃತ್ತಿನಿರತರು ಮುಂತಾದ ಐಷಾರಾಮೀ ಜೀವನವನ್ನು ನಡೆಸಲು ಸಾಮರ್ಥ್ಯವಿರುವ ಜನರಿಂದ ದಿನೇದಿನೇ ಬೇಡಿಕೆ ಏರುತ್ತಲೇ ಇದೆ. ಕ್ಲಬ್ ಡ್ರಗ್ ಎಂದು ಕರೆಸಿಕೊಳ್ಳುವ ಕೊಕೇನ್ "ಪಾರ್ಟಿ ಕ್ರೌಡ್"ಗಳಲ್ಲಿ ಅಪಾ ರಜನಪ್ರಿಯತೆ ಗಳಿಸಿದೆ.

1995ರಲ್ಲಿ ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಮತ್ತು ಯುನೈಟೆಡ್ ನೇಷನ್ಸ್ ಇಂಟರ್ ರೀಜನಲ್ ಕ್ರೈಮ್ ಎಂಡ್ ಜಸ್ಟಿಸ್ ರಿಸರ್ಚ್ ಇನ್ ಸ್ಟಿಟ್ಯೂಟ್ (UNICRI)ನವರು ಒಂದು ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಮಟ್ಟದಲ್ಲಿ ಕೊಕೇನ್ ಬಗ್ಗೆ ಕೈಗೊಂಡ ಅಧ್ಯಯನದ ಫಲಿತಾಂಶಗಳನ್ನು ಹೊರಗೆಡವಿತು. ಆದರೆ ವರ್ಲ್ಡ್ ಹೆಲ್ತ್ ಅಸೆಂಬ್ಲಿಯಲ್ಲಿ ತೆಗೆದುಕೊಂಡ ನಿರ್ಧಾರದ ಮೇರೆಗೆ ಆ ಅಧ್ಯಯನದ ವಿವರಗಳನ್ನು ಪ್ರಕಟಗೊಳಿಸುವುದನ್ನು ನಿಷೇಧಿಸಿತು. B ಕಮಿಟಿಯ 6ನೆಯ ಸಭೆ ಸೇರಿದಾಗ ಅಮೆರಿಕದ ರಾಯಭಾರಿಯೊಬ್ಬ "WHO ದವರ ಔಷಧಸಂಬಂಧಿತ ಚಟುವಟಿಕೆಗಳು ಸಾಬೀತಾಗಿರುವ ಡ್ರಗ್ ಕಂಟ್ರೋಲ್ ವಿಧಿಗಳನ್ನು ಪುಷ್ಟೀಕರಿಸದಿದ್ದರೆ, ತತ್ಸಂಬಂಧಿತ ಚಟುವಟಿಕೆಗಳಿಗೆ ನಿಗದಿಪಡಿಸಿರುವ ಹಣದ ಮೊತ್ತವನ್ನು ಕಡಿಮೆ ಮಾಡಬೇಕು" ಎಂದು ಧಮಕಿ ಹಾಕಿದನು. ತದನಂತರ ಅಧ್ಯಯನದ ವಿಷಯವನ್ನು ಪ್ರಕಾಶಗೊಳಿಸುವುದನ್ನು ಕೈಬಿಡಲಾಯಿತು. ಆ ಅಧ್ಯಯನದ ಒಂದು ಭಾಗವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.[೨೧] 20 ದೇಶಗಳಲ್ಲಿ ಕೊಕೇನ್ ಉಪಯೋಗಿಸುವುದರ ಬಗ್ಗೆ ಮಾಹಿತಿ ದೊರೆತಿದೆ.

ಕಾನೂನುಬಾಹಿರವಾಗಿ ಕೊಕೇನ್ ಉಪಯೋಗಿಸುವವರಿಗೆ, ಅದರಲ್ಲೂ (ಉತ್ಸಾಹ ಹೆಚ್ಚಿಸಿಕೊಳ್ಳುವ ಬದಲಾಗಿ)ಆಯಾಸ ಪರಿಹಾರಕ್ಕಾಗಿ ದೀರ್ಘಕಾಲದಿಂದಲೂ ಕೊಕೇನನ್ನು ಚಟವಾಗಿ ಸೇವಿಸುವವರಿಗೆ,ತಾವು ಸೇವಿಸುವ ಹೆಚ್ಚು ಪ್ರಮಾಣದ ಕೊಕೇನ್ ಕಲಬೆರಕೆಯದಾಗಿರುವುದು ಸಾಧ್ಯವಿದ್ದು, ಆ ಮಿಶ್ರಿತ ವಸ್ತುಗಳಿಂದ ದುಷ್ಪರಿಣಾಮ ಅಥವಾ ಹಾನಿ ಉಂಟಾಗುವ ಸಂಭವವಿರುತ್ತದೆ. ಕೊಕೇನ್ ನ ಕಟಿಂಗ್ ಅಥವಾ "ಸ್ಟ್ಯಾಂಪಿಂಗ್ ಆನ್" (ಏಮದರೆ ಕಲಬೆರಕೆ ಮಾಡುವುದು)ಮಾಮೂಲಾಗಿಯೇ ನಡೆಯುವ ಕ್ರಿಯೆಯಾಗಿದ್ದು, ನೋವೋಕೇನ್ (ಪ್ರೋಕೇನ್) ನಂತಹ ಕೊಕೇನ್ ಸೇವನೆ ನೀಡುದ ತಾತ್ಕಾಲಿಕ ಅರಿವಳಿಕೆಯ ಅನುಭವವನ್ನೇ ಉಂಟುಪಾಡುವ ರಾಸಾಯನಿಕಗಳನ್ನು ಉಪಯೋಗಿಸಿ, ಕೊಕೇನ್ ಸೇವಿಸುವವರೆಲ್ಲಾ ಸಾರಯುಕ್ತ ಕೊಕೇನ್ ಸೇವಿಸುವುದರಿಂದ ಝೋಮಿನ ಅನುಭವವಾಗುವುದೆಂದು ನಂಬುವುದರಿಂದ ಅದೇ ಪರಿಣಾಮ ಬೀರುವ ಎಫೆಡೈನ್ ಅಥವಾ ಅಂಹದೇ ಉತ್ತೇಜಕ ಬಳಸುವುದರಿಂದ , ಹೃದಯಬಡಿತವು ಹೆಚ್ಚಾಗುತ್ತದೆ. ಕಲಬೆರಕೆಗೆ ಸಾಮಾನ್ಯವಾಗಿ ಉಪಯೋಗಿಸುವ ವಸ್ತುಗಳೆಂದರೆ ಮಾನಿಟಾಲ್, ಕ್ರಿಯಾಟಿನ್ ಅಥವಾ ಗ್ಲೂಕೋಸ್ ನಂತಹ ಜಡ ಸಕ್ಕರೆಗಳು. ಇಂತಹ ಕ್ರಿಯಾತ್ಮಕ ವಸ್ತುಗಳನ್ನು ಬಳಸುವುದರಿಂದ ಕೊಕೇನ್ ಶ್ರೇಷ್ಠಮಟ್ಟದ್ದೆಂದು ಕೊಳ್ಳುಗನಿಗೆ ಸಟೆಯಾದ ಅಭಿಪ್ರಾಯ ಮೂಡುವುದಲ್ಲದೆ ಬೇರೆ ಕಲಬೆರಕೆ ಮಿಶ್ರಣಗಳು ಇಲ್ಲದೆಯೇ ಮಾರುವವನು ಹೆಚ್ಚು ಮಾರಾಟ ಮಾಡಿ ಲಾಭ ಗಳಿಸಲು ಇವು ಸಹಾಯಕವಾಗುತ್ತವೆ.[ಸೂಕ್ತ ಉಲ್ಲೇಖನ ಬೇಕು] ಇಂತಹ ಸಕ್ಕರೆಗಳು ಕಡಿಮೆ ಬೆಲೆಯಲ್ಲಿಯೇ ದೊರೆಯುವುದರಿಂದ ಿವುಗಳನ್ನು ಬೆರೆಸಿ ಮಾರುವುದರಿಂದ ಮಾರುವವನಿಗೆ ಹೆಚ್ಚಿನ ಪ್ರಮಾಣದ ಮಾರಾಟವು ಉತ್ತಮ ಬೆಲೆಯಲ್ಲೇ ಆಗುವುದಲ್ಲದೆ, ಕೊಕೇನ್ ಗೆ ಶ್ರೇಷ್ಠಗುಣಮಟ್ಟದ ರಂಗು ತರುವ ಈ ಸಕ್ಕರೆಗಳು ಬೇರೆ ಕಲಬೆರಕೆ ವಸ್ತುಗಳಿಗಿಂತಲೂ ಸಸ್ತಾ ಅಗಿರುವುದರಿಂದ ತನ್ಮೂಲಕವೂ ಮಾರುವವನಿಗೆ ಲಾಭ ಬರುತ್ತದೆ. ಸಾಮಾನ್ಯವಾಗಿ ಎಲ್ಲಾ ಸ್ಥಳಗಳಲ್ಲಿಯೂ ಕೊಕೇನ್ ಮಾರಾಟಗಾರರು ಸಿಕ್ಕಿಬಿದ್ದರೆ ಬಹಳ ದಂಡ ತೆರಬೇಕಾದುದರಿಂದ ಗಿರಾಕಿಗಳಿಗೆ ಗುಣಮಟ್ಟದ ಬಗ್ಗೆ ಮೋಸ ಮಾಡಿ ಹೆಚ್ಚಿನ ಲಾಭ ಪಡೆಯುವುದು ಮಾರುವವರಲ್ಲಿ ಅನೂಚಾನವಾಗಿ ನಡೆದುಬಂದಿದ ಪದ್ಧತಿಯಾಗಿದೆ.[original research?] 2007ರಲ್ಲಿ ಯೂರೋಪಿಯನ್ ಮಾನೀಟರಿಂಗ್ ಸೆಂಟರ್ ಫಾರ್ ಡ್ರಗ್ಸ್ ಎಂಡ್ ಡ್ರಗ್ ಅಡಿಕ್ಷನ್ (ಮಾದಕ ದ್ರವ್ಯ ಮತ್ತು ದ್ರವ್ಯಸೇವನೆಯ ಚಟ ನಿರೀಕ್ಷಿಸುವ ಯೂರೋಪಿಯನ್ ಕೇಂದ್ರ) ಬೀದಿಯಲ್ಲಿ ಮಾರಾಟವಾಗುವ ಕೊಕೇನ್ ನ ಶುದ್ಧತೆ 5%ಗಿಂತಲೂ ಕಡಿಮೆಯಿರುವುದನ್ನೂ, ಸರಾಸರಿಯಾಗಿ 50%ಗಿಂತಲೂ ಕಡಿಮೆ ಶುದ್ಧತೆ ಇರುವುದೆಂತಲೂ ಋಜುಪಡಿಸಿದೆ.[೨೨]

ಜೈವಿಕ ಸಂಯೋಜನೆ

ಕೊಕೇನ್ ಕಣಗಳ ವಿಶದಪಡಿಸುವಿಕೆ ಮತ್ತು ಸಂಯೋಜನೆಯ ಬಗ್ಗೆ ಮೊದಲಿಗೆ 1898ರಲ್ಲಿ ರಿಚರ್ಡ್ ವಿಲ್ ಸ್ಟಾಟರ್ ಬೆಳಕು ಚೆಲ್ಲಿದರು.[೨೩] ವಿಲ್ ಸ್ಟಾಟರ್ ನು ಕೊಕೇನ್ ಟ್ರಾಪಿನೋನ್ ನಿಂದ ಉತ್ಪತ್ತಿಯಾಗುವುದೆಂದು ವಿಶದೀಕರಿಸಿದನು. ಅವನ ನಂತರ ರಾಬರ್ಟ್ ರಾಬಿನ್ ಸನ್ ಮತ್ತು ಎಡ್ವರ್ಡ್ ಲೀಟೆಯವರು ಕೊಕೇನ್ ಸಂಯೋಜನಾ ಕ್ರಮದ ಬಗ್ಗೆ ಗಮನಾರ್ಹವಾದ ಕೊಡುಗೆಗಳನ್ನು ನೀಡಿದ್ದಾರೆ.

ಎನ್ -ಮೀಥೈಲ್-ಪೈರೋಲಿನಿಯಮ್ ಕ್ಯಾಷನ್ ನ ಜೈವಿಕ ಸಂಯೋಜನೆ

N-ಮೀಥೈಲ್-ಪೈರೋಲಿನಿಯಮ್ ಕ್ಯಾಷನ್ ನ ಜೈವಿಕ ಸಂಯೋಜನೆ

ಕೊಕೇನ್ ನ ಜೈವಿಕ ಸಂಯೋಜನೆಯು ಸಸ್ಯಗಳಲ್ಲಿ ದೊರೆಯುವ ಎಲ್-ಆರ್ನಿಥೈನ್ ಎಂಬ ವಸ್ತುವಿನಿಂದ ದೊರೆಯುವ ಎಲ್-ಗ್ಲೂಟಾಮೈನ್ ನಿಂದ ಆರಂಭಗೊಳ್ಳುತ್ತದೆ. ಟ್ರೋಪಾನೆಟ್ ರಿಂಗ್ ಗೂ ಮೊದಲ ಹಂತದಲ್ಲಿ ಎಲ್-ಆರ್ನಿಥೈನ್ ಮತ್ತು ಎಲ್-ಆರ್ಜಿನೈನ್ ಗಳು ಈ ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಎಡ್ವರ್ಡ್ ಲೀಟೆ[೨೪] ದೃಢಪಡಿಸಿದರು. ಆರ್ನಿಥೈನ್ ನಂತರ ಪೈರಿಡಾಕ್ಸಿಕಲ್ ಫಾಸ್ಫೇಟ್ ಆಧಾರಿತ ಪ್ರಕ್ರಿಯೆಯಾದ ಡಿಕಾರ್ಬಾಕ್ಸಿಲೇಷನ್ ಗೆ ಒಳಗಾಗಿ ಪ್ಯೂಟ್ರೆಸೈನ್ ನನ್ನು ನೀಡುತ್ತದೆ. ಪ್ರಾಣಿಗಳಲ್ಲಾದರೆ ಯೂರಿಯಾ ಉತ್ಪನ್ನಕ್ರಿಯೆಯಲ್ಲೇ ಆರ್ನಿಥೈನ್ ನಿಂದ ಪ್ಯೂಟ್ರೆಸೈನ್ ದೊರಕಿಬಿಡುತ್ತದೆ. ಎಲ್-ಆರ್ನಿಥೈನ್ ಎಲ್-ಆರ್ಜಿನೈನ್ [೨೫] ಆಗಿ ಪರಿವರ್ತಿತಗೊಂಡು ನಂತರ ಪಿಎಲ್ ಪಿ ಯ ಮೂಲಕ ಡಿಕಾರ್ಬಾಕ್ಸಿಲೇಷನ್ ಗೊಳಗಾಗಿ ಆಗ್ಮಟೈನ್ ಆಗಿ ಪರಿವರ್ತಿತವಾಗುತ್ತದೆ. ಹೈಡ್ರಾಲಿಸಿಸ್ (ನೀರಿನ ಸೇರುವಿಕೆಯಿಂದ ಉಂಟಾಗುವ ಸಂಯುಕ್ತದಲ್ಲಿನ ವಿಭಜನೆ)ಮೂಲಕ ಇಮೈನ್ ಎನ್ -ಕಾರ್ಬಾಮಾಯ್ಲ್ ಪ್ಯೂಟ್ರೆಸೈನ್ ಅನ್ನೂ, ಯೂರಿಯಾವು ಪ್ಯೂಟ್ರೆಸೈನ್ ಅನ್ನೂ ನೀಡುತ್ತವೆ. ಪ್ರಾಣಿಗಳು ಹಾಗೂ ಸಸ್ಯಗಳಲ್ಲಿನ ಆರ್ನಿಥೈನನ್ನು ಪ್ಯೂಟ್ರೆಸೈನ್ ಆಗಿ ಪರಿವರ್ತಿಸುವ ವಿಧಿವಿಧಾನಗಳು ಒಂದೇ ದಾರಿಗೆ ಬಂದಿವೆ. SAM-ಆಧಾರಿತವಾದ ಪ್ಯೂಟ್ರೆಸೈನ್ ನ ಎನ್ -ಮಿಥೈಲೇಷನ್ ನಿಂದ ಎನ್ -ಮಿಥೈಲ್ ಪ್ಯೂಟ್ರೆಸೈನ್ ಉತ್ಪತ್ತಿಯಾಗಿ, ಆ ಉತ್ಪನ್ನವು ಡೈಯಾಮೈನ್ ಆಕ್ಸಿಡೇಸ್ ನೊಂದಿಗೆ ಸಂಪರ್ಕ ಹೊಂದಿ ಆಕ್ಸಿಡೇತಿವ್ ಡಿಅಮಿನೇಷನ್ ಮೂಲಕ ಅಮಿನೋ ಆಲ್ಡಿಹೈಡ್ ನ ಜನನಕ್ಕೆ ಕಾರಣವಾಗುತ್ತದೆ. ಸ್ಕಿಫ್ ಬೇಸ್ ರೂಪಗೊಳ್ಳುವ ಮೂಲಕ ಎನ್ -ಮಿಥೈಲ್-Δ 1 ಪೈರೋಲಿನಿಯಮ್ ಕ್ಯಾಷನ್ ನ ಜೈವಿಕ ಸಂಯೋಜನೆಯಾದುದು ದೃಢವಾಗುತ್ತದೆ.

ಕೊಕೇನ್ ನ ಜೈವಿಕಸಂಯೋಜನೆ

ಕೊಕೇನ್ ನ ಜೈವಿಕ ಸಂಯೋಜನೆ

ಕೊಕೇನ್ ರಚನೆಗೆ ಬೇಕಾದ ಹೆಚ್ಚಿನ ಕಾರ್ಬನ್ ಆಟಮ್ ಗಳನ್ನು ಅಸಿಟೈಲ್ - CoA ಯ ೆರಡು ಕಣಗಳನ್ನು ಎನ್ -ಮಿಥೈಲ್-Δ 1 ಪೈರೋಲಿನಿಯಮ್ ಗೆ ಹೊಂದಿಸುವುದರ ಮೂಲಕ ಪಡೆಯಲಾಗುತ್ತದೆ.[೨೬] ಪೈರೋಲಿನಿಯಮ್ ಕ್ಯಾಷನ್ ನೆಡೆಗೆ ನ್ಯೂಕ್ಲಿಯೋಫೈಲ್ ನಂತೆ ವರ್ತಿಸುವ, ಅಸಿಟಿಲ್-CoA ಯಿಂದ ದೊರೆತ ಎನೋಲೇಟ್ ಅನಿಯಾನ್ ನ ಮನ್ನಿಕ್ (Mannich)ರೀತಿಯ ಪ್ರತಿಕ್ರಿಯೆಯು ಮೊದಲ ಅಡಕವಾಗುವುದು. ಕ್ಲೇಯ್ಸನ್ ಘನೀಕರಣದ ಮೂಲಕ ಎರಡನೆಯ ಸಂಕಲನವು ಸಂಭವಿಸುವುದು. ಇದರಿಂದ 2-ಬದಲಿತವಾದ ಪೈರೋಲಿಡಿನ್ ನ ರಾಸೆಮಿಕ್ ಮಿಶ್ರಣವು ಉತ್ಪನ್ನವಾಗುವುದು,ಕ್ಲೇಯ್ಸನ್ ಘನೀಕರಣದಿಂದ ಥಿಯೋಯೆಸ್ಟರ್ ಶೇಖರಿತವಾಗುವುದು. ಟ್ರಾಪಿನೋನ್ ನ ರಚನೆಯು ರಾಸೆಮಿಕ್ ಈಥೈಲ್ [2,3-13C2]೪ (N ಮೀಥೈಲ್-2-ಪೈರೋಲಿಡಿನಿಲ್)-3-ಆಕ್ಸಿಬ್ಯುಟಾನೊಯೇಟ್ ನಿಂದ ಉಂಟಾಗಿ, ಸ್ಟೀರಿಯೋಸೋಮರ್ ನ ಎರಡೂ ಪ್ರಭೇದಗಳಿಗೆ ಆದ್ಯತೆ ಇರುವುದಿಲ್ಲ.[೨೭] ಆದರೆ, ಕೊಕೇನ್ ನ ಜೈವಿಕ ಸಂಯೋಜನೆಯಲ್ಲಿ (S)-ಎನಾಟಿಯೋಮರ್ ಮಾತ್ರ ಕ್ರಮಚಕ್ರದ ರೀತ್ಯಾ ಕೊಕೇನ್ ನ ಟ್ರೋಪೇನ್ ಉಂಗುರದ ವ್ಯವಸ್ಥೆಯನ್ನು ಸ್ಥಾಪಿಸಬಹುದು. ಪ್ರೋಚಿರಲ್ ಮಿಥೈಲಿನ್ ಹೈಡ್ರೋಜನ್ ವಿಂಗಡಣೆಯ ಅಧ್ಯಯನದ ಮೂಲಕ ಈ ಪ್ರತಿಕ್ರಿಯೆಯ ರೂಢಿಬದ್ಧ ಆಯ್ಕೆಯ ಗುಣ (ಸ್ಟೀರಿಯೋಸೆಲೆಕ್ಟಿವಿಟಿ)ವನ್ನು ಮತ್ತೂ ಆಳವಾಗಿ ಪರೀಕ್ಷಿಸಲಾಯಿತು.[೨೮] C-2ವಿನಲ್ಲಿನ ಹೆಚ್ಚುವರಿ ಚಿರಲ್ ಕೇಂದ್ರವೇ ಇದಕ್ಕೆ ಕಾರಣ.[೨೯] ಈ ವಿಧಾನವು ಆಕ್ಸಿಡೇಷನ್ನಿಂದ ಾಗುವಂತಹುದಾಗಿದ್ದು, ಇದರಿಂದ ಪೈರೋಲಿನಿಯಮ್ ಕ್ಯಾಷನ್ ಪುನರುಜ್ಜೀವನಗೊಂಡು, ಎನೋಲೇಟ್ ಅನಿಯಾನ್ ಉತ್ಪಾದನೆಯಾಗಿ, ಕಣ-ಕಣಗಳ ನಡುವೆ ಮ್ಯುಮಿಕ್ ಪ್ರತಿಕ್ರಿಯೆ ಉಂಟಾಗುತ್ತದೆ. ಟ್ರೋಪೇನ್ ಉಂಗುರ ವಿಧಾನವು ಜಲೋದ್ಗತಸಂಯೋಜನಾವಿಭಜನೆ (ಹೈಡ್ರಾಲಿಸಿಸ್)ಗೊಳಗಾಗುತ್ತದೆ, SAM- ಆಧಾರಿತ ಮಿಥೈಲೇಷನ್ ಸಂಭವಿಸುತ್ತದೆ ಮತ್ತು NADPH ಮೂಲಕ ಸಂಕುಚಿತವಾಗಿಮೀತೈಲೆಕ್ ಗೋನೈನ್ ರೂಪಗೊಳ್ಳುತ್ತದೆ. ಕೊಕೇನ್ ಡೀಸ್ಟರ್ ಉಂಟಾಗಲು ಅಬಶ್ಯವಾದ ಬೆನ್ಝಾಯ್ಲ್ ಮೋಯೆಟಿ ಯನ್ನು ಸಿನಾಮಿಕ್ ಆಸಿಡ್ ಮೂಲಕ ಫೆನೈಲಾಲನೈನ್ ನಿಂದ ಸಂಯೋಜಿಸಲಾಗುತ್ತದೆ.[೩೦] ಬೆನ್ಝಾಯ್ಲ್-CoA ನಂತರ ಎರಡೂ ಫಲಿತ ವಸ್ತುಗಳನ್ನು ಏಕೀಕರಿಸುವುದರ ಮೂಲಕ ಕೊಕೇನ್ ಉತ್ಪತ್ತಿಯಾಗುತ್ತದೆ.

ರಾಬರ್ಟ್ ರಾಬಿನ್ಸನ್ ನ ಅಸಿಟೋನ್ ಡೈಕಾರ್ಬಾಕ್ಸಿಲೇಟ್

ರಾಬಿನ್ಸನ್ನರ ಟ್ರೋಪೇನ್ ನ ಜೈವಿಕ ಸಂಯೋಜನೆ

ಟ್ರೋಪೇನ್ ಸಸ್ಯಕ್ಷಾರದ ಜೈವಿಕ ಸಂಯೋಜನೆ ಇಂದಿಗೂ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.ಹೆಮ್ ಸ್ಕೀಡ್ಟ್ ರವರು ರಾಬಿನ್ಸನ್ ನ ಅಸಿಟೋನ್ ಡೈಕಾರ್ಬಾಕ್ಸಿಲೇಟ್ ಈ ರಾಶಾಯನಿಕ ಕ್ರಿಯೆಯನ್ನು ಅರಿಯಲು ಸೂಕ್ತವಾದ ಮಧ್ಯವರ್ತಿಯಾಗಬಹುದೆಂದು ಸೂಚಿಸುತ್ತಾರೆ.[೩೧] N -ಮೀಥೈಲ್-ಪೈರೋಲಿನಿಯಮ್ ಮತ್ತು ಅಸಿಟೋನ್ ಡೈಕಾರ್ಬಾಕ್ಸಿಲೇಟ್ ನ ಘನೀಕರಣದಿಂದ ಆಕ್ಸೋಬ್ಯುಟಿರೇಟ್ ದೊರೆಯುತ್ತದೆ. ಡಿಕಾರ್ಬಾಕ್ಸಿಲೇಷನ್ ನ ಪರಿಣಾಮವಾಗಿ ಟ್ರೋಲೇನ್ ಸಸ್ಯಕ್ಷಾರವು ಉಂಟಾಗುತ್ತದೆ.

ಟ್ರಾಪಿನೋನ್ ಸಂಕೋಚಗೊಳ್ಳುವಿಕೆ

ಟ್ರೋಪೇನ್ ಅನ್ನು ತಗ್ಗಿಸುವಿಕೆ

ಟ್ರೋಪೇನ್ ಅನ್ನು ಸಂಕುಚಿತಗೊಳಿಸುವ ಮಾಧ್ಯಮವಾಗಿ ಹಲವಾರು ಸಸ್ಯರಾಶಿಗಳ ಗುಣ ರೂಪಿಸುವ NADPH -ಆಧಾರಿತ ರಿಡಕ್ಟೇಸ್ ಜೈವಿಕ ಯೋಗವಾಹಕ(ಎನ್ ಝೈಮ್ ಗಳು)ಗಳನ್ನು ಬಳಸಲಾಗುತ್ತದೆ.[೩೨] ಈ ಜಾತಿಯ ಎಲ್ಲಾ ಸಸ್ಯಗಳೂ ಎರಡು ರೀತಿಯ ರಿಡಕ್ಟೇಸ್ ಎನ್ ಝೈಮ್ ಗಳನ್ನು ಹೊಂದಿದ್ದು ಅವು ಟ್ರಾಪಿನೋನ್ ರಿಡಕ್ಟೇಸ್ I ಮತ್ತು ಟ್ರಾಪಿನೋನ್ ರಿಡಕ್ಟೇಸ್ ಈ ಎಂದು ಗುರುತಿಸಲ್ಪಡುತ್ತವೆ. TRI ನಿಂದ ಟ್ರೋಪೈನ್ ಮತ್ತು ತ್ರೀ ಇಂದ ಸ್ಯೂಡೋಟ್ರೋಪೈನ್ ಉತ್ಪತ್ತಿಯಾಗುತ್ತವೆ. ಎನ್ ಝೈಮ್ ಗಳ ಚಲನ ಚಟುವಟಿಕೆ ಮತ್ತು pH/ಚಟುವಟಿಕೆಗಳು ವಿಧವಿಧದ್ದಾದುದರಿಂದ ಮತ್ತು TRII ಗಿಂತಲೂ TRI 25 ಪಟ್ಟು ಹೆಚ್ಚು ಕ್ರಿಯಾಶೀಲವಾದುದರಿಂದಲೂ ಟ್ರಾಪಿನೋನ್ ಅನ್ನು ಸಂಕುಚಿತಗೊಳಿಸುವ ಬಹುತೇಕ ಕ್ರಿಯೆಯು ಟ್ರೋಪೈನ್ ನ TRI ನಿಂದಲೇ ಜರುಗುತ್ತದೆ.[೩೩]

ಔಷಧಶಾಸ್ತ್ರ

ರೂಪ

ಕೊಕೇನ್ ಹೈಡ್ರೋಕ್ಲೋರೈಡ್ ನ ಒಂದು ಹೊರೆ
ಸಂಕ್ಷೇಪಿತ ಕೊಕೇನ್ ಪುಡಿಯ ತುಂಡು

ಶುದ್ಧವಾದ ಕೊಕೇನ್ ಮುತ್ತಿನಂತಹ ಬಿಳುಪಿನ ವಸ್ತು. ಪುಡಿಯ ರೂಪದಲ್ಲಿ ದೊರೆಯುವ ಕೊಕೇನ್ ಕೊಕೇನ್ ಹೈಡ್ರೋಕ್ಲೋರೈಡ್ (CAS 53-21-4) ಲವಣದ ಲಕ್ಷಣವನ್ನು ಹೊಂದಿರುತ್ತದೆ. ಬೀದಿಯಲ್ಲಿ ಮಾರಲ್ಪಡುವ ಕೊಕೇನ್ ಕಲಬೆರಕೆಯುಳ್ಳದ್ದಾಗಿಯೋ ಅಥವಾ ಬೇರೆಯ ವೂರ್ಣಗಳಿಂದ (ಮಿಶ್ರಣ)ತೂಕ ಹೆಚ್ಚಿಸುವ ಉದ್ದೇಶಕ್ಕಾಗಿ "ಕಟ್" (ಬೆರೆಸಲ್ಪಟ್ಟುದೋ) ಆಗಿರುತ್ತದೆ; ಈ ರೀತಿ ಬೆರೆಸಲು ಸಾಮಾನ್ಯವಾಗಿ ಉಪಯೋಗಿಸಲ್ಪಡುವ ವಸ್ತುಗಳೆಂದರೆ ಅಡಿಗೆ ಸೋಡಾ; ಲಾಕ್ಟೋಸ್, ಡೆಕ್ಸ್ ಟ್ರೋಸ್, ಇನೋಸಿಟಾಲ್ ಮತ್ತು ಮನ್ನಿಟಾಲ್ ಎಂಬ ಶರ್ಕರಗಳು ಹಾಗೂ ಲಿಟೋಕೇಯ್ನ್ ಅಥವಾ ಬೆನ್ ಝೋಕೇಯ್ನ್ ಎಂಬ, ಮ್ಯೂಕಸ್ ಆವರಣಗಳನ್ನು ದಡಗುಟ್ಟಿಸುವ ಕೊಕೇನ್ ನ ಗುಣವನ್ನು ನಕಲಿಸುವ, ಸ್ಥಾನಿಕ ಅರಿವಳಿಕೆಗಳು. ಕೊಕೇನ್ ಮೀಥಾಂಫೆಟಾಮೈನ್ ನಂತಹ ಇತರೆ ಪ್ರಚೋದಕ ವಸ್ತುಗಳಿಂದಲೂ "ಕಟ್" ಮಾಡಲ್ಪಡಬಹುದು.[೩೪] ಕಲಬೆರಕೆಯಾದ ಕೊಕೇನ್ ಸಾಮಾನ್ಯವಾಗಿ ಬಿಳಿ, ಪೇಲವ ಅಥವಾ ಗುಲಾಬಿ ಬಣ್ಣ ಹೊಂದಿರುತ್ತದೆ.

"ಕ್ರ್ಯಾಕ್" ಕೊಕೇನ್ ನ ಬಣ್ಣವು ಹಲವಾರು ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತದೆ;ಬಳಸಲ್ಪಟ್ಟ ಕೊಕೇನ್ ನ ಮೂಲ, ತಯಾರಿಕೆಯ ವಿಧಾನ - ಅಮೋನಿಯಾ ಉಪಯೋಗಿಸಿ ಅಡಿಗೆ ಸೋಡಾ ಉಪಯೋಗಿಸಿ - ಮತ್ತು ಕೆಲವು ಅಶುದ್ಧ ಧಾತುಗಳ ಉಪಸ್ಥಿತಿಯ ಮೇಲೆ ಇದರ ಬಣ್ಣ ನಿರ್ಧಾರವಾಗುತ್ತದೆ. ಬಹುತೇಕ ಿದು ಬಿಳಿ, ಹಳದಿವರ್ಣದ ಕ್ರೀಂ ಅಥವಾ ತಿಳಿಕಂದು ಬಣ್ಣದ್ದಾಗಿರುತ್ತದೆ. ಕೊಕೇನ್ ನ ರೂಪ ಅದಕ್ಕೆ ಸೇರಿಸಲ್ಪಡುವ ಕಲಬೆರಕೆ ವಸ್ತುಗಳ ಮೇಲೆ, ಕೊಕೇನ್ ಪುಡಿಯ ಮೂಲ ಮತ್ತು ತಯಾರಿಕೆಯ ವಿಧಾನಗಳ ಮೇಲೆ ಮತ್ತು ಪ್ರತ್ಯಾಮ್ಲಗಳನ್ನು ಗುಣಾಂತರಿಸುವ ಕ್ರಮಗಳ ಮೇಲೆ ನಿರ್ಧರಿತವಾಗುತ್ತದೆ. ಮುಟ್ಟಿದರೆ ಉದುರುವಂತಹ ರೂಪದಿಂದ ಹಿಡಿದು, ಜಿಡ್ಡುಗಟ್ಟಿದ, ಗಟ್ಟಿಯಾದ ಹಾಗೂ ಸುಮಾರು ಹರಳಿನಂತಿರುವವರೆಗೂ ಿದು ರೂಪಗೊಳ್ಳುತ್ತದೆ.

ಕೊಕೇನ್ ನ ರೂಪಗಳು

ಲವಣಗಳು

ಹಲವಾರು ಸಸ್ಯಕ್ಷಾರಗಳಂತೆಯೇ ಕೊಕೇನ್ ಸಹ ಹೈಡ್ರೋಕ್ಲೋರೈಡ್ (HCl)ಮತ್ತು ಸಲ್ಫೇಟ್ -SO4)ನಂತಹ ಲವಣಗಳ ುತ್ಪತ್ತಿಗೆ ಕಾರಣವಾಗಬಲ್ಲದು. ಲವಣಗಳು ಬೇರೆ ಬೇರೆ ದ್ರವಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಕರಗುತ್ತವೆ. ಕೊಕೇನ್ ಹೈಡ್ರೋಕ್ಲೋರೈಡ್ ಸಹ ಿತರೆ ಸಸ್ಯಕ್ಷಾರಗಳ ಹೈಡ್ರೋಕ್ಲೋರೈಡ್ ಗಳಂತೆ ಧೃವೀಕೃತವಾಗಿದ್ದು, ನೀರಿನಲ್ಲಿ ಕರಗುತ್ತದೆ.

ಪ್ರತ್ಯಾಮ್ಲದಂತೆ

ಹೆಸರೇ ಸೂಚಿಸುವಂತೆ "ಫ್ರೀಬೇಸ್" ಕೊಕೇನ್ ನ ಲವಣ ರೂಪಕ್ಕೆ ತದ್ವಿರುದ್ಧವಾದ ಪ್ರತ್ಯಾಮ್ಲ ದ ರೂಪ. ಹೈಡ್ರೋಕ್ಲೋರೈಡ್ ನೀರಿನಲ್ಲಿ ಕರಗುವುದು, ಆದರೆ ಈ ಪ್ರತ್ಯಾಮ್ಲ ನೀರಿನಲ್ಲಿ ಕರಗದು.

ಫ್ರೀಬೇಸ್ ಕೊಕೇನ್ ಸೇದಿದಾಗ ದೊರೆಯುವ ಹೆಚ್ಚಿನ 'ಕಿಕ್' ನ ಹಿನ್ನೆಲೆ ಏನೆಂದರೆ ಕೊಕೇನ್, ಸೇದುವಿಕೆಯಿಂದ, ಪೈರೋಲಿಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗಿ ಸೇದುಗರ ದೇಹದೊಳಕ್ಕೆ ಮೀಥೈಲೆಕ್ ಗೋನಿಡೈನ್ ಅನ್ನು ಸೇರಿಸುತ್ತದೆ. (ಈ ಅಡ್ಡಪರಿಣಾಮವು ಆಘ್ರಾಣಿಸುವ ಅಥವಾ ಚುಚ್ಚುಮದ್ದಿನ ಮೂಲಕ ಪುಡಿಯನ್ನು ತೆಗೆದುಕೊಲ್ಳುವ ಮೂಲಕ ದೊರೆಯುವುದಿಲ್ಲ) ಹಲವು ಅಧ್ಯಯನಗಳ ಪ್ರಕಾರ ಕೊಕೇನ್ ಸೇದುವಿಕೆಯು ಬೇರೆ ವಿಧದಲ್ಲಿ ಕೊಕೇನ್ ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಹೃದಯಕ್ರಿಯೆಗೆ ಮಾರಕ.[೩೫] ಇದರಲ್ಲಿನ ಮೀಥೈಲೆಕ್ ಗೋನಿಡೈನ್ ಯಕ್ರತ್ತಿನ[೩೬] ಮೇಲೂ ಶ್ವಾಸಕೋಶ[೩೭] ಗಳ ಮೇಲೂ ಘೋರ ಪರಿಣಾಮ ಬೀರುವುದೆಂದು ಆ ಅಧ್ಯಯನಗಳು ಹೇಳುತ್ತವೆ.

ಕೊಕೇನ್ ನಲ್ಲಿನ ಬಂಧಕ ಲವಣಗಳನ್ನು ಸಸ್ಯಕ್ಷಾರದ ದ್ರಾವಣದ ಮೂಲಕ ದುರ್ಬಲಗೊಳಿಸುವುದರ ಮೂಲಕ ತಯಾರಿಸಲ್ಪಟ್ಟ ಕೊಕೇನ್ ಧೃವೀಕರಣವಾಗುವ ಗುಣ ಕಳೆಉಕೊಂಡು ಪ್ರತ್ಯಾಮ್ಲ ರೂಪದ ಕೊಕೇನ್ ಆಗುತ್ತದೆ. ಅದನ್ನು ಮತ್ತೂ ಜಲರೂಪದ ಕರಗಿಸುವ ವಸ್ತುವಿನಿಂದ ಪರಿಷ್ಕರಿಸಿ ದ್ರವ-ದ್ರವದಿಂದ ಹೊರಸೆಳೆಯಲಾಗುತ್ತದೆ.

ಕ್ರ್ಯಾಕ್ ಕೊಕೇನ್

ಕ್ರ್ಯಾಕ್ ಕೊಕೇನನ್ನು ಸೇದುತ್ತಿರುವ ಮಹಿಳೆ.

ಜ್ರ್ಯಾಕ್ ಸಡಿಲ-ಪ್ರತ್ಯಾಮ್ಲ (ಫ್ರೀಬೇಸ್)ದ ರೂಪದಲ್ಲಿರುವ, ಕೆಳದರ್ಜೆಯ ಗುಣವುಳ್ಳ,ಸೋಡಿಯಮ್ ಬೈಕಾರ್ಬೊನೇಟ್ ನಿಂದ ಕಲುಷಿತವಾದ ಕೊಕೇನ್. ಫ್ರೀಬೇಸ್ ಮತ್ತು ಕ್ರ್ಯಾಕನ್ನು ಬಹುತೇಕ ಧೂಮಪಾನದ ರೀತ್ಯಾ ಸೇವಿಸುವರು.[೩೮] ಈ ಹೆಸರು ಇದಕ್ಕೆ ಬರಲು ಕಾರಣ ಕಲುಷಭರಿತವಾದ ಈ ಕೊಕೇನನ್ನು ಕಾಯಿಸಿದಾಗ ಹೊರಡುವ ಚಿಟಿಚಿಟಿ ಸದ್ದು!(ತತ್ಕಾರಣ ಶಬ್ದಾನುಕರಣ ನಾಮಧೇಯ)[೩೯]

ಕೋಕಾ ಎಲೆಯ ದ್ರಾಗಣಗಳು

ಕೋಕಾ ಗಿಡಮೂಲಿಕೆಯ ದ್ರಾವಣ(ಇದನ್ನು ಕೋಕಾ ಟೀ ಎಂದೂ ಕರೆಉತ್ತಾರೆ)ವನ್ನು ಕೋಕಾ-ಎಲೆ ಬೆಳೆಯುವ ದೇಶಗಳಲ್ಲಿ, ಜಗದ ಇತರೆಡೆಗಳಲ್ಲಿ ಇತರೆ ವೈಕ್ಯಕೀಯ ದ್ರಾವಣಗಳನ್ನು ತಯಾರಿಸುವಷ್ಟು ಮಟ್ಟಿಗೇ, ಉತ್ಪಾದಿಸುತ್ತಾರೆ. ಪೆರು ಮತ್ತು ಬೊಲಿವಿಯಾ ದೇಶಗಳು ಒಣಗಿದ ಕೋಕಾ ಎಲೆಗಳನ್ನು ಸಂಸ್ಕರಣ ಚೀಲಗಳ ರೂಪದಲ್ಲಿ "ಕೋಕಾ ಟೀ" ಎಂಬ ಹೆಸರಿನಲ್ಲಿ ಕಾನೂನಿನ ಚೌಕಟ್ಟಿನಲ್ಲಿ, ಮುಕ್ತವಾಗಿ ಮಾರಾಟಮಾಡಲು ಅವಕಾಶವಿತ್ತಿವೆ. ಪೆರುವಿನ ಕಝ್ ಕೋ ನಗರ ಮತ್ತು ಬೊಲಿವಿಯಾದ ಲಾಪಾಝ್ ನಗರಗಳಿಗೆ ಭೇಟಿಯಿತ್ತವರನ್ನು, ಅವರು ಅತಿ ಎತ್ತರದ ಸ್ಥಳದಲ್ಲಿರುವುದರಿಂದ ಉಂಟಾಗುವ ಅಸ್ವಸ್ಥತೆಯನ್ನು ಹೋಗಲಾಡಿಸುವ ನೆಪದಲ್ಲಿ, ಕೋಕಾ ಎಲೆಗಳಿಂದ ತಯಾರಿಸಲ್ಪಟ್ಟ ದ್ರಾವಣ(ಟೀ ಪಾಟ್ ಗಳಲ್ಲಿ ಇಡೀ ಕೋಕಾ ಎಲೆಗಳನ್ನು ಕುದಿಸಿ ತಯಾರಿಸಿದ)ಗಳನ್ನು ನೀಡುವುದರ ಮೂಲಕ ಸ್ವಾಗತಿಸುತ್ತಾರೆ. ಕೋಕಾ ಟೀ ಕುಟಿಯುವುದರಿಂದ ಕೊಂಚ ಉತ್ತೇಜನ ಉಂಟಾಗಿ ಮನ ಪ್ರಫುಲ್ಲವಾಗುತ್ತದೆ. ಇದರಿಂದ ಬಾಯಿ ಝೋಮು ಹಿಡಿಯುವುದು ಅಥವಾ ಕೊಕೇನ್ ಸೇದಿದಾಗ ಉಂಟಾಗುವ 'ಧಿಂ' ಭಾವವೂ ಆಗುವುದಿಲ್ಲ. ಕೊಕೇನ್ ಒಂದು ಭೂತವೆಂಬ ಅನಿಸಿಕೆಯನ್ನು ಹೋಗಲಾಡಿಸಲೋಸುಗ, ಇದನ್ನು ಮಾರಾಟ ಮಾಡುವವರು, ಕೋಕಾ ಎಲೆಗಳಿಂದ ತಯಾರಾದ ದ್ರಾವಣದ ಸೇವನೆಯಿಂದ ಉಂಟಾಗುವ ಪರಿಣಾಮಗಳು ಕೆಳದರ್ಜೆಯ ಸಸ್ಯಕ್ಷಾರಗಳಿಂದ ಆಗುವುದು ಎಂಬ ನಿರಾಧಾರವಾದ ಹೇಳಿಕೆಗಳನ್ನು ನೀಡಿ,ಪ್ರಮಾಣ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠವಾದ, ತಮ್ಮಿಂದ ತಯಾರಾದ ಮೊದಲನೆಯ ದರ್ಜೆಯ ಶುದ್ಧ ಕೊಕೇನ್ ಅಂತಹ ಪರಿಣಾಮ ನೀಡದು ಎನ್ನುವರು.

ಕೊಕೇನ್ ಚಟ ಬಿಡಿಸಲು ಈ ದ್ರಾವಣ ಸಹಕಾರಿ ಎಂದು ಅಂತಹವರ ಚಿಕಿತ್ಸೆಯಲ್ಲಿ ಇದನ್ನು ಬಳಸುವರು. ಪೆರುವಿನ ಲೀಮಾ ದಲ್ಲಿ ನಡೆಸಿದ ಒಂದು ಚರ್ಚಾತ್ಮಕ ಅಧ್ಯಯನವು 23 ಕೋಕಾ-ಪೇಸ್ಟ್ ಚಟಗ್ರಸ್ತರ ಚಟ ಬಿಡಿಸುವ ಯತ್ನದಲ್ಲಿ ಸಲಹೆಗಳನ್ನಷ್ಟೇ ಅಲ್ಲದೆ ಕೋಕಾ ಎಲೆಗಳಿಂದ ತಯಾರಾದ ದ್ರಾವಣವನ್ನೂ ಚಿಕಿತ್ಸಾಕ್ರಮದ ಅಂಗವಾಗಿ ನೀಡಲಾಗಿತ್ತು. ಚಿಕಿತ್ಸಾವಧಿಯಲ್ಲಿ ಚಟದ ಮರುಕಳಿಕೆ ತಿಂಗಳಿಗೆ ಸರಾಸರಿ ನಾಲ್ಕರಿಂದ, ಕೋಕಾ ಎಎಯ ದ್ರಾವಣದ ಸೇವನೆಯ ನಂತರ, ಚಿಕಿತ್ಸಾವಧಿಯಲ್ಲಿ, ಒಂದಕ್ಕೆ ಇಳಿಯಿತು. ಚಟದಿಂದ ಮುಕ್ತವಾಗಿರುವ ಅವಧಿಯು ಚಿಕಿತ್ಸೆಗೆ ಮುನ್ನ ಇದ್ದ 32 ದಿನಗಳಿಂದ ಚಿಕಿತ್ಸಾವಧಿಯಲ್ಲಿ 217 ದಿನಗಳಿಗೆ ತಲುಪಿತು. ಈ ಫಲಿತಾಂಶಗಳು ಕೊಕೇನ್ ಗೆ ದಾಸರಾಗಿರುವವರ ಚಟ ಮರುಕಳಿಕೆಯನ್ನು ತಪ್ಪಿಸಲು ಸಲಹೆ ಮತ್ತು ಕೋಕಾ ಎಕೆಗಳ ದ್ರಾವಣ ನೀಡುವಿಕೆಯು ಫಲಕಾರಿಯೆಂದು ಸೂಚಿಸುತ್ತವೆ.[೪೦] ಈ ಫಲಿತಾಂಶಗಳಿಂದ ದೊರೆತ ಗಾಢವಾದ ಸೂಚನೆಯೆಂದರೆ ಕೋಕಾ ಎಲೆಗಳ ದ್ರಾವಣಗಳಲ್ಲಿ ಪ್ರಧಾನವಾಗಿ ಔಷಧೀಯ ಸತ್ವಗಳನ್ನು ಹೊಂದಿದ್ದು ಆಹಾರದ(ಮೆಟಬೊಲೈಟ್) ಗುಣ ಪಡೆದಿರುವುದು ಕೊಕೇನೇ ಹೊರತು ಅನ್ಯ ಸಸ್ಯಕ್ಷಾರಗಳಲ್ಲ ಎಂಬ ಅಂಶ.

ಕೊಕೇನ್ ಎಲೆಗಳ ದ್ರಾವಣ ಸೇವಿಸಿದವರ ಮೂತ್ರದಲ್ಲಿ ಕೊಕೇನ್ ಮೆಟಬೊಲೈಟ್ ಆದ ಬೆನ್ಝಾಲೆಕ್ಗೋನೈನ್ ಅನ್ನು ಗೊತ್ತುಹಚ್ಚಬಹುದು.

ತೆಗೆದುಕೊಳ್ಳುವ ವಿಧಾನಗಳು

ಬಾಯಿಯ ಮೂಲಕ

ಅಡಿಗೆ ಸೋಡಾ, ಕೊಕೇನ್ ಮತ್ತು ಕೊಂಚ ನೀರನ್ನು ಹೊಂದಿರುವ ಚಮಚ"ಬಡವನ" ಕೊಕೇನ್ ಉತ್ಪಾದನೆಯಲ್ಲಿ ಉಪಯೋಗಿಸಲಾಗುವುದು.

ಬಹಳ ಜನರು ಕೊಕೇನ್ ಪುಡಿಯನ್ನು ವಸಡು(ಗಮ್)ಗಳ ಮೇಲೆ ಸವರಿಕೊಂಡು ಅಥವಾ ಸಿಗರೇಟ್ ನ ಫಿಲ್ಟರ್ ಭಾಗಕ್ಕೆ ಸವರಿ ಅದನ್ನು ಸೇದಿವ ಮೂಲಕ ವಸಡು ಮತ್ತು ಹಲ್ಲುಗಳ ಭಾಗದಲ್ಲಿ ಒಂದು ನಿಧವಾದ ಝೋಮನ್ನು(ನಂಬ್ ನೆಸ್) ಅನುಭವಿಸುವುದರಿಂದ ೀ ರೀತಿಯ ಕೊಕೇನ್ ಸೇವನೆಯನ್ನು "ನಂಬೀಸ್", "ಗಮ್ಮರ್ಸ್" ಅಥವಾ "ಕೋಕಾ ಫಫ್ಸ್" ಎಂದು ಕರೆಯುವುದು ರೂಢಿಯಾಗಿದೆ. ಬಹುತೇಕ ಕೊಕೇನನ್ನು ಆಘ್ರಾಣಿಸುವ ಮೂಲಕ ಸೇವಿಸಿದ ನಂತರ ಉಳಿದ ಕೊಂಚ ಪ್ರಮಾಣವನ್ನು ಸೇವಿಸಲು ಈ ಕ್ರಮ ಬಳಸುತ್ತಾರೆ. ಯಾವುದಾದರೂ ಸುತ್ತಲುಪಯೋಗಿಸುವ ಕಾಗದದಲ್ಲಿ ಕೊಕೇನನ್ನು ಸುತ್ತ, ಆ ಕಾಗದದ ಸಮೇತ ಅದನ್ನು ನುಂಗುವುದು ಸೇವನೆಯ ಮತ್ತೊಂದು ಕ್ರಮ. ಹೀಗೆ ಸೇವಿಸಲ್ಪಟ್ಟುದ್ದನ್ನು ಹಲವೆಡೆ "ಸ್ನೋ ಬಾಂಬ್" ಎನ್ನಲಾಗುತ್ತದೆ.

ಕೋಕಾ ಎಲೆ

ಕೋಕಾ ಎಲೆಗಳನ್ನು ಲಿಂಬೆಹಣ್ಣಿನಂತಹ ಸಸ್ಯಕ್ಷಾರದೊಂದಿಗೆ ಬೆರೆಸಿ, ವೀಳ್ಯದಂತೆ ಮಡಚಿ, ವಸಡು ಮತ್ತು ಗಲ್ಲದ ನಡುವೆ ಒತ್ತರಿಸಿಟ್ಟುಕೊಂಡು (ಜಗಿಯಲು ಉಪಯೋಗಿಸುವ ತಂಬಾಕು ಜಗಿಯುವಂತೆಯೇ)ಅದರಿಂದ ಬಂದ ರಸವನ್ನು ಹೀರಿಕೊಳ್ಳುತ್ತಾರೆ. ಆ ರಸವನ್ನು ಒಳಗೆನಗನೆಯೊಳಗಿರುವ ಮ್ಯೂಕಸ್ ಪದರಗಳು ಹೀರಿಕೊಲ್ಲುತ್ತವೆ ಮತ್ತು ನುಂಗಿದ ರಸ ಕರುಳಿನ ಪೆರಗಳನ್ನು ಸೇರುತ್ತದೆ. ಅಲ್ಲದೆ, ಕೋಕಾ ಎಲೆಗಳನ್ನು ದ್ರವದಲ್ಲಿ ಅದ್ದಿಟ್ಟು ಟೀ ರೀತಿಯೂ ಸೇವಿಸಬಹುದು. ಆಹಾರದ ರೂಪದಲ್ಲಿ ತೆಗೆದುಕೊಮಡ ಕೊಕೇನ್ ಹೆಚ್ಚು ಪರಿಣಾಮ ಬೀರುವುದಿಲ್ಲ. ಕೋಕಾ ಎಲೆಗಳು ಕೊಕೇನ್ ಅಲ್ಲವಾದ್ದರಿಂದ ಅದು ನಿಷೇಧಿತ ವಸ್ತುವಲ್ಲ, ಅವನ್ನು ಆಹಾರವಾಗಿ ಸೇವಿಸುವುದು ಕಾನೂನುಬಾಹಿರವಲ್ಲ; ಹಾಗಾಗಿ ಕೋಕಾ ಎಲೆ ತಿನ್ನುವುದಕ್ಕೆ ಶಿಕ್ಷೆ ವಿಧಿದುವುದು ಸಲ್ಲ ಎಂಬುದು ಕೋಕಾ ಸೇವನೆಯ ಪರವಾಗಿರುವವರ ವಾದ. ಕೊಕೇನ್ ಒಂದನ್ನೇ ಸೇವಿಸಿದಾಗ ಅದು ಜಲಸಂಸ್ಕರಣಗೊಳ್ಳುವುದರಿಂದ ಜಠರದಲ್ಲಿನ ಆಮ್ಲದ ಪ್ರಭಾವದಿಂದ ಜಡವಾಗುತ್ತದೆ, ಸುಲಭವಾಗಿ ಹೀರಲ್ಪಡುವುದಿಲ್ಲ. ಲಿಂಬೆಯಂತಹ ಪ್ರಬಲ ಸಸ್ಯಕ್ಷಾರದೊಂದಿಗೆ ಮಿಶ್ರಣವಾದಾಗ ಮಾತ್ರ ಅದು ಜಠರದಿಂದ ರಕ್ತದೊಳಕ್ಕೆ ಹೀರಲ್ಪಡುತ್ತದೆ. ಬಾಯಿಯಿಂದ ಸೇವಿಸಲ್ಪಟ್ಟ ಕೊಕೇನ್ ಹೀರಿಕೊಳ್ಳುವಿಕೆ ಕಡಿಮೆ ಪ್ರಮಾಣದ್ದಾಗಲು ಮತ್ತೆರಡು ಕಾರಣಗಳಿವೆ. ಮೊದಲಿಗೆ, ಈ ಮದ್ದು ಯಕೃತ್ತಿನಲ್ಲಿ ವಿಚ್ಛಿನ್ನಗೊಳ್ಳುತ್ತದೆ. ಮತ್ತೆ ಬಾಯಲ್ಲಿನ ರಕ್ತನಾಳಗಳು ಮತ್ತು ಕಂಠನಾಳಗಳು ಕೊನೇನ್ ನ ಸಂಪರ್ಕಕ್ಕೆ ಬರುತ್ತಿರುವಂತೆಯೇ ಸಂಕುಚಿತವಾಗುತ್ತವೆ. ಇದರಿಂದ ಈ ದ್ರವ್ಯವು ಪರಿಣಾಮ ಬೀರುವ ಸ್ಥಳದ ವಿಸ್ತಾರ ಕಡಿಮೆಯಾಗುತ್ತದೆ. ಆದರೆ ಬರಿದೇ ಕೋಕಾ ಎಲೆಯ ದ್ರಾವಣಗಳನ್ನು ಕುಡಿದವರ ಮೂತ್ರದಲ್ಲೂ ಕೊಕೇನ್ ಮೆಟಬಾಲೈಟ್ ಗಳು ಕಂಡುಬರುತ್ತವೆ. ಆದ್ದರಿಂದ, ವಾಸ್ತವವಾಗಿ ಈ ರೀತಿಯ ಕೊಕೇನ್ ಸೇವನೆ ಸೇವನೆಯ ಮತ್ತೊಂದು ಬಗೆಯಷ್ಟೇ, ಅದರಲ್ಲೂ ಪರಿಣಾಮಹೀನವಾದುದು.

ಬಾಯಿಯಿಂದ ಸೇವಿಸಲ್ಪಟ್ಟ ಕೊಕೇನ್ ರಕ್ತದಲ್ಲಿ ಸೇರಲು ಸುಮಾರು 30 ನಿಮಿಷಗಳು ಹಿಡಿಯುತ್ತವೆ. ನಿಯಂತ್ರಿತ ಸ್ಥಿತಿಗಳಲ್ಲಿ ಇದರ ಹೀರುವಿಕೆ 60% ಎಂದು ಕಂಡುಬಂದರೂ, ಸಾಧಾರಣವಾಗಿ ಸೇವಿಸಲ್ಪಟ್ಟ ಮೂರನೆಯ ಒಂದು ಭಾಗ ಮಾತ್ರ ಬಾಯಿಯಿಂದ ಸೇವಿಸುವ ವಿಧಾನದಲ್ಲಿ ಹೀರಲ್ಪಡುತ್ತದೆ. ಮಂದಗತಿಯ ಹೀರುವಿಕೆಯಿಂದ ದೇಹ (ಫಿಸಿಯಾಲಾಜಿಕಲ್) ಮತ್ತು ಮನಸ್ಸುಗಳ (ಸೈಕೋಟ್ರಾಪಿಕ್) ಮೇಲೆ ಹೀಗೆ ಸೇವಿಸಲ್ಪಟ್ಟ ಕೊಕೇನ್ ಪರಿಣಾಮ ಬೀರಲು 60 ನಿಮಿಷಗಳು ಬೇಕಾದೀತು. ಪರಿಣಾಮ ಬೀರುವುದು ನಿಧಾನವಾದರೂ, ಉತ್ತುಂಗವನ್ನು ಮುಟ್ಟಿದ ನಂತರ ಒಂದು ಗಂಟೆಯವರೆಗೂ ಪರಿಣಾಮ ಇರುತ್ತದೆ.

ಜನಸಾಮಾನ್ಯರ ನಂಬಿಕೆಗೆ ವಿರುದ್ಧವಾಗಿ, ಆಹಾರ ರೀತ್ಯಾ ಅಥವಾ ಆಘ್ರಾಣಿಸುವುದರ ಮೂಲಕ, ಹೇಗೇ ತೆಗೆದುಕೊಂಡರೂ ಕೊಕೇನ್ ಹೀರಲ್ಪಡುವ ಪ್ರಮಾಣ ಒಂದೇ - 30ರಿಂದ 60%. ಬಾಯಿಯ ಮೂಲಕ ಸೇವಿಸುವುದಕ್ಕಿಂತಲೂ ಆಘ್ರಾಣಿಸಲ್ಪಡುವ ಮಾರ್ಗದಲ್ಲಿ ವೇಗವಾದ ಹೀರಿಕೊಳ್ಳುವಿಕೆ ಇರುವುದರಿಂದ ಕೊಕೇನ್ ಸೇವನೆಯ ಗರಿಷ್ಠ ಪರಿಣಾಮ ಆ ಮಾರಗದಲ್ಲಿ ಬೇಗ ದೊರೆಯುತ್ತದೆ. ಆಘ್ರಾಣಿತ ಕೊಕೇನ್ ದೈಹಿಕ ಪರಿಣಾಮವನ್ನು 40 ನಿಮಿಷಗಳಲ್ಲೂ, ಮೆದುಳಿನ ಪ್ರಚೋದನೆಯನ್ನು 20 ನಿಮಿಷಗಳಲ್ಲೂ ಸಂಭಾವ್ಯವಾಗಿಸುವುದು. ಆದರೆ ಪರಿಣಾಮ ಉಳಿಯುವುದು ಮಾತ್ರ, ಬಾಯಲ್ಲಿ ಸೇವಿಸಿದಷ್ಟೇ ಆದ 5ರಿಂದ 10 ನಿಮಿಷಗಳು. ಮೂಗಿನಿಂದ ಸೆಳೆದುಕೊಳ್ಳಲ್ಪಡುವ ಕೊಕೇನ್ ನ ಪರಿಣಾಮವು ದೈಹಿಕ ಹಾಗೂ ಮಾನಸಿಕ ಮಟ್ಟದಲ್ಲಿ ಗರಷ್ಠ ಪರಿಣಾಮ ಮುಟ್ಟಿದ ಮೇಲೂ ಸುಮಾರು 40ರಿಂದ 60 ನಿಮಿಷಗಳವರೆಗೂ ಇರುತ್ತದೆ.[೪೧]

ಪೆರು, ಬೊಲಿವಿಯಾದಂತಹ ಕೋಕಾ ಉತ್ಪಾದಿಸುವ ದೇಶಗಳಲ್ಲಿ ಶಿಖರ ಅಸ್ವಸ್ಥತೆ (ಆಲ್ಟಿಟ್ಯೂಡ್ ಸಿಕ್ ನೆಸ್) ಶಮನಗೊಳಿಸಲು ಮೇಟ್ ಡಿ ಕೋಕಾ ಅಥವಾ ಕೋಕಾ ಎಲೆಯ ದ್ರಾವಣಗಳನ್ನು ಸೇವಿಸಲು ನೀಡುವುದು ಒಂದು ಸಂಪ್ರದಾಯವಾಗಿದೆ. ಈ ವಿಧದ ಸೇವನೆಯನ್ನು ದಕ್ಷಿಣ ಾಫ್ರಿಕಾದ ಬುಡಕಟ್ಟು ಜನರು ಶತಮಾನಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಬುಡಕಟ್ಟಿನ ನೆಲೆಯಿಂದ ಬುಡಕಟ್ಟಿನ ನೆಲೆಗಳಿಗೆ ಸಂದೇಶ ಒಯ್ಯುತ್ತಿದ್ದ ದೂತರ ಆಯಾಸ ಪರಿಹಾರ ಹಾಗೂ ಶಕ್ತಿವರ್ಧಕವಾಗಿ ಪುರಾತನ ಕಾಲದಲ್ಲಿ ಕೋಕಾ ಎಲೆಗಳ ದ್ರಾವಣಗಳನ್ನು ನೀಡಲಾಗುತ್ತಿತ್ತು.

1986ರಲ್ಲಿ "ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್" ಪತ್ರಿಕೆಯು ಅಮೆರಿಕದಲ್ಲಿನ ಆಹಾರ ಮಳಿಗೆಗಳು ಒಣಗಿದ ಕೋಕಾ ಎಲೆಗಳನ್ನು "ಹೆಲ್ತ್" ಇನ್ ಕಾ ಟೀ ಎಂಬ ದ್ರಾವಣ ತಯಾರಿಸುವ ಸಲುವಾಗಿ ಮಾರುತ್ತಿರುವವೆಂದು ಬಹಿರಂಗ ಪಡಿಸಿತು.[೪೨] ಅದರ ಪ್ಯಾಕ್ ಮೇಲೆ "ಕೊಕೇನ್ ರಹಿತ" ಎಂದಿದ್ದರೂ ಕೊಕೇನ್ ತೆಗೆಯುವಂತಹ ಯಾವುದೇ ಕಾರ್ಯವೂ ನಡೆದಿರಲಿಲ್ಲ. ಈ ಟೀಯನ್ನು ದಿನಕ್ಕೆ ಎರಡು ಬಟ್ಟಲು ಸೇವಿಸಿದರೆ ಉತ್ಸಾಹದ ಸೆಲೆ ಸ್ವಲ್ಪ ಹೆಚ್ಚಿ, ಹೃದಯಬಡಿತ ಹೆಚ್ಚಾಗಿ, ಮನಃಸ್ಥಿತಿ ಉತ್ತಮವಾಗಿ ಮತ್ತು ಈ ದ್ರಾವಣದಿಂದ ಯಾವುದೇ ಹಾನಿಯುಂಟಾಗದೆಂದು ಆ ಲೇಖನ ತಿಳಿಸಿತು. ಈ ಲೇಖನದ ನಂತರವೂ ಅಮೆರಿಕದ ಪೂರ್ವತೀರದಲ್ಲಿರುವ ಪ್ರದೇಶಗಳಾದ ಹವಾಯೀ, ಷಿಕಾಗೋ. ಇಲಿನಾಯ್ಸ್, ಹಾಗೂ ಜಾರ್ಜಿಯಾ ಗಳಲ್ಲಿ ಹಲವಾರು ಹಡಗುಗಳಿಂದ DEA ಯು ಈ ಟೀ ಪೊಟ್ಟಣಗಳನ್ನು ವಶಪಡಿಸಿಕೊಂಡಿತಲ್ಲದೆ ಈ ವಸ್ತುವನ್ನು ಅಂಗಡಿಗಳಿಂದಲೂ ಹೊರಹಾಕಲಾಯಿತು,

ಆಘ್ರಾಣಿಸುವಿಕೆ

ಆಘ್ರಾಣಿಸುವಿಕೆ (ಸಾಮಾನ್ಯವಾಗಿ ಸ್ನಾರ್ಟಿಂಗ್, ಸ್ನಿಫಿಂಗ್ ಅಥವಾ ಬ್ಲೋಯಿಂಗ್ ಎಂದು ಬಳಕೆಯಲ್ಲಿರುವ)ಯು ಪಾಶ್ಚಿಮಾತ್ಯರು ಸರ್ವೇಸಾಮಾನ್ಯವಾಗಿ ಮೋಜಿಗಾಗಿ ಕೊಕೇನ್ ಪುಡಿಯನ್ನು ಸೇವಿಸುವ ರೀತಿ. ಪುಡಿಯನ್ನು ಮೂಗಿನ ಹೊಳ್ಳೆಗಳಿಂದ ಸೆಳೆದುಕೊಂಡಾಗ ಅದನ್ನು ಮೂಗಿನಲ್ಲಿನ ಮ್ಯೂಕಸ್ ಪದರಗಳು ಮತ್ತು ಪೊಳ್ಳುಭಾಗ(ಸೈನಸ್)ಗಳು ಹೀರಿಕೊಳ್ಳುತ್ತವೆ. ಕೊಕೇನನ್ನು ಮೂಗಿನ ಹೊಳ್ಳೆಗಳ ಮೂಲಕ ಒಳಸೆಳೆದುಕೊಂಡಾಗ ಮೂಗಿನಲ್ಲಿನ ಮ್ಯೂಕಸ್ ಪೆದರಗಳು 30%ನಿಂದ 60%ವರೆಗೂ ಇದನ್ನು ಹೀರಿಕೊಳ್ಳುತ್ತವೆ ಹಾಗೂ ಹೆಚ್ಚು ಹೆಚ್ಚು ಸೆಳೆದುಕೊಂಡಷ್ಟೂ ಹೀರುವಿಕೆಯ ಅಂಶ ಹೆಚ್ಚುತ್ತದೆ. ಮ್ಯೂಕಸ್ ಪದರಗಳ ಮೂಲಕ ಹೀರಿಕೊಳ್ಳದ ಕೊಕೇನ್ ಸಿಂಬಳ ದಲ್ಲಿ ಸೇರಿ("ಡ್ರಿಪ್" ಎಂದು ಕರೆಯಲ್ಪಡುವ ಇದನ್ನು ಕೆಲವರು ಹಿತವಾದುದೆಂದು, ಕೆಲವರು ಅಹಿತವಾದುದೆಂದೂ ಹೇಳುವರು) ಸುಂಗಲ್ಪಡುತ್ತದೆ. ಕೊಕೇನ್ ಉಪಯೋಗಿಸುವವರ ಬಗ್ಗೆ ಮಾಸಿದ ಅಧ್ಯಯನದ ಪ್ರಕಾರ ಕೊಕೇನ್ ನ ಪರಿಣಾಮಗಳ ಉತ್ತುಂಗವನ್ನು ತಲುಪಲು ಸರಾಸರಿ 14.6 ನಿಮಿಷಗಳು ಹಿಡಿಯುತ್ತದೆ. ಮೂಗಿನ ಒಳಭಾಗಕ್ಕೆ ಆಗುವ ಹಾನಿಗೆ ಕೊಕೇನ್ ಮೂಗಿನ ರಕ್ತನಾಳಗಳ–ನ್ನು ಸಂಕುಚಿತಗೊಳಿಸುವ ಕಾರಣ ಆ ಭಾಗಕ್ಕೆ ರಕ್ತ, ಆಮ್ಲಜನಕ/ಪೌಷ್ಟಿಕಾಂಶಗಳು ಹರಿದುಬರದಿರುವುದೇ– ಆಗಿದೆ.

ಕೊಕೇನನ್ನು ಮೂಗಿನಿಂದ ೊಳಸೆಳೆಯುವ ಮೊದಲು ಕೊಕೇನ್ ಪುಡಿಯನ್ನು ನುಣುಪಾದ ಕಣಗಳಾಗಿ ಪರಿವರ್ತಿಸಿಕೊಳ್ಳಬೇಕು. ಶುದ್ಧವಾದ ಕೊಕೇನ್,ಒದ್ದೆಯಾದಾಗ (ಸರಿಯಾಗಿ ಶೇಖರಿಸದಿದ್ದಾಗ) ಗೆಡ್ಡೆಗಟ್ಟಿ ಮೂಗಿನ ಮೂಲಕ ತೆಗೆದುಕೊಳ್ಳುವುದು ತೊಂದರೆಯಾಗುವುದಾದರೂ, ಒದ್ದೆಯಿಲ್ಲದ ಮಾಮೂಲು ರೀತಿಯಲ್ಲರುವಾಗ ಸುಲಭವಾಗಿ ಧೂಳಾಗಿ ಪರಿವರ್ತಿತವಾಗುತ್ತದೆ.

ಸುರುಳಿ ಸುತ್ತಲ್ಪಟ್ಟ ಬ್ಯಾಕ್ ನೋಟುಗಳು, ಪೊಳ್ಲಾಗಿಸಲ್ಪಟ್ಟ ಪೆನ್ ಗಳು, ತುಂಡರಿಸಿದ ಸೆಳೆಕೊಳವೆಗಳು (ಸ್ಟ್ರಾಗಳು), ಬೀಗದಕೈಗಳ ಚೂಪಾದ ತು್ದಿಗಳು, ವಿಶೇಷವಾಗಿ ತಯಾರಿಸಿದ ಚಮಚಗಳು, ಉದ್ದನೆಯ ಉಗುರುಗಳು ಮತ್ತು ಶುಚಿಯಾದ ಟ್ಯಾಂಪನ್ (ಸ್ಯಾನಿಟರಿ ನ್ಯಾಪ್ ಕಿನ್)ಗಳನ್ನು ಕೊಕೇನನ್ನು ಒಳಗೆಳೆದುಕೊಳ್ಳಲು ಉಪಯೋಗಿಸುತ್ತಾರೆ. ಹೀಗೆ ಉಪಯೋಗಿಸಲ್ಪಡುವ ವಸ್ತುಗಳನ್ನು "ಟೂಟರ್ಸ್" ಎಂದು ಕರೆಯುತ್ತಾರೆ. ಕೊಕೇನನ್ನು ಸಮನಾಗಿರುವ, ಗಟ್ಟಿಯಾದ ವಸ್ತುವಿನ ಮೇಲೆ (ಕನ್ನಡಿ, ಸಿಡಿ ಕೇಸ್, ಪುಸ್ತಕ ಇತ್ಯಾದಿ) ಸುರಿದು, "ಬಂಪ್ಸ್", "ಲೈನ್ಸ್" ಅಥವಾ "ರೈಲ್ಸ್" (ಗೆಡ್ಡೆಗಳು, ರೇಖೆಗಳು ಅಥವಾ ರೈಲಿನ ಕಂಬಿಗಳು - ಹರಡಿದ ಆಕಾರದ ಆಧಾರದ ಮೇರೆಗೆ) ಆಗಿ ವಿಂಗಡಿಸಿ ನಂತೆ ಒಳಸೆಳೆಯಲ್ಪಡುತ್ತದೆ.[೪೩] ಕೊಕೇನ್ ನ ಪರಿಣಾಮವನ್ನು ಮೀರುವಂತಹ ಗುಣವು ಕೊಂಚ ಸಮಯ(ಗಂಟೆಗಳಲ್ಲೇ)ದಲ್ಲೇ ಆಗಿಬಿಡುವುದರಿಂದ ಹೆಚ್ಚು ಹೆಚ್ಚು ಲೈನ್ ಗಳನ್ನು ಸೆಳೆದುಕೊಳ್ಳುವುದರ ಮೂಲಕ ಹೆಚ್ಚಿನ ಪರಿಣಾಮ ಪಡೆಯಲು ಮುಂದಾಗುವುದಾಗುತ್ತದೆ.

ಬಾಂಕೋವ್ಸ್ ಕಿ ಮತ್ತು ಮೆಹ್ತಾ[೪೪] ರ ಅಧ್ಯಯನವು ಒಂದೇ ಸೂಜಿಯನ್ನು ಒಬ್ಬರಿಗಿಂತ ಹೆಚ್ಚು ಜನ ಉಪಯೋಗಿಸಿ ಚುಚ್ಚುಮದ್ದು ಪಡೆದಾಗ ಆಗುವಂತೆಯೇ ಕೊಕೇನ್ ಸೆಳೆದುಕೊಳ್ಳಲು ಒಂದೇ ಸೆಳೆಕೊಳವೆಯನ್ನು ಹಲವಾರು ಜನ ಉಪಯೋಗಿಸುವುದರಿಂದ ಹೆಪಟೈಟಿಸ್ C[೪೫] ನಂತಹ ರಕ್ತ ಸಂಬಂಧಿತ ರೋಗಗಳು ಉಂಟಾಗುತ್ತವೆ ಎನ್ನುತ್ತದೆ.

ಅಮೆರಿಕದಲ್ಲಿ 1992ರಷ್ಟು ಹಿಂದೆಯೇ ಕೊಕೇನ್ ಪುಡಿಯ ಮಾರಾಟ, ವಿತರಣೆ ಮತ್ತಿತರ ಸೊಕೇನ್ ಸಂಬಂಧಿತ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದವರನ್ನು ಫೆಡೆರಲ್ ಅಧಿಕಾರಿಗಳು ಶಿಕ್ಷೆಗೆ ಗುರಿಪಡಿಸಿದ್ದು, ಅದರಲ್ಲಿ ಹೆಚ್ಚಿನವರು ಹಿಸ್ಪಾನಿಕ್ ಗಳೇ ಆಗಿದ್ದರು. ಹಿಸ್ಪಾನಿಕೇತರ ಬಿಳಿಯರು ಮತ್ತು ಹಿಸ್ಪಾನಿಕೇತರ ವರ್ಣೀಯರುಗಳಿಗಿಂತಲೂ ಹಿಸ್ಪಾನಿಕರೇ ಕೊಕೇನ್ ಸಂಬಂಧಿತ ಅಪರಾಧಗಳಿಗೆ ಹೆಚ್ಚು ಶಿಕ್ಷೆ ಅನುಭವಿಸಿದರು.[೪೬]

ಸೂಜಿಯ ಮೂಲಕ ಹೊಂದುವಿಕೆ

ಕೊಕೇನ್ ದ್ರವ್ಯದ ಸೂಜಿಮದ್ದು (ಸೂಜಿಯ ಮೂಲಕ ತೆಗೆದುಕೊಳ್ಳುವಿಕೆ) ರಕ್ತದಲ್ಲಿ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ದ್ರವ್ಯ ಸೇರಲು ನೆರವಾಗುತ್ತದೆ. ಇತರ ವಿಧಗಳಲ್ಲಿ ತೆಗೆದುಕೊಳ್ಳುವುದಕ್ಕಿಂತಲೂ ಭಿನ್ನವಾದ ಪರಿಣಾಮಗಳಾದ ಚುಚ್ಚುಮದ್ದು ತೆಗೆದುಕೊಂಡ ಕೆಲವೇ ಕ್ಷಣಗಲ್ಲಿ, 2ರಿಂದ ೫ ನಿಮಷಗಳವರೆಗೂ ಇರುವ ಟಿನ್ನಿಟಸ್ ಒಳಗೊಂಡ ಕಿವಿಯಲ್ಲಿನ ಗುಂಯ್ ಗುಡುವಿಕೆ(ಸಾಮಾನ್ಯವಾಗಿ 120ಮಿಲಿಗ್ರಾಂಗಿಂತಲೂ ಹೆಚ್ಚು ಸೇವಿಸಿದಾಗ) ಮತ್ತು ಅಸ್ಪಷ್ಟವಾದ ಕೇಳುವಿಕೆಗಳು ಈ ವಿಧದಲ್ಲಿ ಉಂಟಾಗುತ್ತವೆ. ಇದನ್ನು ರೂಢಿಗತವಾಗಿ "ಬೆಲ್ ರಿಂಗರ್" ಎನ್ನುತ್ತಾರೆ.[೪೭] ಈ ವಿಧವಾಗಿ ಕೊಕೇನ್ ಉಪಯೋಗಿಸುವವರು ಪರಿಣಾಮದ ಉತ್ತುಂಗವನ್ನು 3.1 ನಿಮಿಷಗಳಲ್ಲೇ ತಲುಪುವರೆಂದು ಒಂದು ಸಮೀಕ್ಷೆ ಹೇಳುತ್ತದೆ. ಹಾಗೆ ಉಂಟಾದ ಹಿತವಾದ ಅನುಭವವು ಬೇಗನೆ ಇಲ್ಲವಾಗುತ್ತದೆ. ಕೊಕೇನ್ ನ ವಿಷಮ ಪರಿಣಾಮಗಳೇ ಅಲ್ಲದೆ ಕೊಕೇನ್ ಗೆ ಬೆರೆಸಲ್ಪಟ್ಟ ಕರಗಲಾರದ ಕಲ್ಮಷಗಳಿಂದ ರಕ್ತಚಾಲನೆಗೆ ತಡೆಯೊಡ್ಡುವ ಎಂಬೋಲಿ (ಗೆಡ್ಡೆಗಳು)ಯೂ ತಲೆದೋರಬಹುದು. ಎಲ್ಲಾ ಸೂಜಿಯ ಮೂಲಕ ತೆಗೆದುಕೊಲ್ಳುವ ನಿಷೇಧಿತ ವಸ್ತುಗಳಂತೆಯೇ ಸ್ಟೆರಿಲೈಜ್ (ಕುದಿಯುವ ನೀರಿನಲ್ಲಿ ಅದ್ದಿಟ್ಟ) ಮಾಡಲ್ಪಟ್ಟ ಸೂಜಿಗಳು ಸಿಗದೆ ಅಥವಾ ಅಂತಹವನ್ನು ಉಪಯೋಗಿಸದೆ ಇರುವುದರಿಂದ ಬರುವಂತಹ ನೆತ್ತರ ಮೂಲಕ ಉಂಟಾಗುವ ಸೋಂಕುಗಳು ಉಂಟಾಗುತ್ತವೆ.

ಕೊಕೇನ್ ಮತ್ತು ಹೆರಾಯಿನ್ ಗಳ ಸಿರಿಂಜ್ ಮೂಲಕ ಪಡೆದ "ಸ್ಪೀಡ್ ಬಾಲ್" ಎಂಬ ಮಿಶ್ರಣವು ಎಷ್ಟು ಜನಪ್ರಿಯ[ಸೂಕ್ತ ಉಲ್ಲೇಖನ ಬೇಕು] ವಾಗಿದೆಯೋ ಅಷ್ಟೇ ಹಾನಿಕಾರಿಯೂ ಆಗಿದ್ದು, ಎರಡೂ ಮಾದಕಗಳ ಗುಣಗಳು ಒಂದಕ್ಕೊಂದು ಪೂರಕವಾಗುವುದರ ಮೂಲಕ ತೆಗೆದುಕೊಂಡ ಪ್ರಮಾಣ ಹೆಚ್ಚಾದುದನ್ನು ಮರೆಮಾಚುವುದರ ಮೂಲಕ ಚಟವನ್ನು ವೃದ್ಧಿಸುತ್ತದೆ. ಹೀಗೆ ಹೆಚ್ಚು ಪ್ರಮಾಣದ ಸೇವನೆ (ಓವರ್ ಡೋಸ್)ನಿಂದ ತಾರೆಯರಾದ ಜಾನ್ ಬೆಲ್ಯುಷಿ, ಕ್ರಿಸ್ ಫಾರ್ಲೇ, ಮಿಚ್ ಹೆಡ್ ಬರ್ಗ್, ರಿವರ್ ಫೋನೀಕ್ಸ್ ಹಾಗೂ ಲಾಯ್ನೆ ಸ್ಟಾಲೀಯರನ್ನಲ್ಲದೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಕೊಕೇನ್ ಚಟದ ಪ್ರಕೃತಿಯ ಬಗ್ಗೆ ಅರಿಯಲು ಪ್ರಾಯೋಗಿಕವಾಗಿ ಕೊಕೇನನ್ನು ಫ್ರೂಟ್ ಫ್ಲೈ (ಒಂದು ವಿಧವಾದ ನೊಣದ ಜಾತಿಯ ಕೀಟ)ನಂತಹವುಗಳಿಗೆ ಸೂಜಿಯ ಮೂಲಕ ನೀಡುವುದರ ಮೂಲಕ ಸಾಧ್ಯವಾಗುವುದು.[೪೮]

ಧೂಮಪಾನದ ರೀತ್ಯಾ ಸೇದುವಿಕೆ

ಧೂಮಪಾನದ ರೀತ್ಯಾ ಸೇದುವುದೂ ಸಹ ಕೊಕೇನ್ ಸೇವಿಸುವ ಒಂದು ಕ್ರಮ. ಘನರೂಪದ ಕೊಕೇನನ್ನು ಅನಿಲರೂಪ ಧರಿಸುವವರೆಗೂ ಕಾಯಿಸಿ, ಬಂದ ಆವಿಯನ್ನು ಮೂಗಿನ ಮೂಲಕ ಸೇದುವುದು ಕ್ರಮ.[೪೯]

2000ದ ಇಸವಿಯಲ್ಲಿ ಬ್ರೂಕ್ ಹ್ಯಾವನ್ ನ್ಯಾಷನಲ್ ಲ್ಯಾಬೊರೇಟರಿ ಮೆಡಿಕಲ್ ಡಿಪಾರ್ಟ್ ಮೆಂಟ್ ಸ್ಟಡಿ (ಬ್ರೂಕ್ ಹ್ಯಾವನ್ ರಾಷ್ಟ್ರೀಯ ವೈದ್ಯಕೀಯ ಪ್ರಯೋದಾಲಯ ಇಲಾಖೆಯ ಅಧ್ಯಯನ)ಯಲ್ಲಿ ಭಾಗವಹಿಸಿದ್ದ ೩೨ ಜನ ಕೊಕೇನ್ ಚಟಗ್ರಸ್ತರು "ಪೀಕ್ ಹೈ" (ಮಾದಕತೆಯ ಉತ್ತುಂಗ) ತಲುಪಲು ಸರಾಸರಿ 1.4+/- 0.5 ನಿಮಿಷಗಳು ಬೇಕಾಗುವುದೆಂದರು.[೫೦]

ಫ್ರೀಬೇಸ್ ಅಥವಾ ಕ್ರ್ಯಾಕ್ ಕೊಕೇನನ್ನು ಸೇದಲು ಸಾಮಾನ್ಯವಾಗಿ "ಲವ್ ರೋಸ್ ಸ್ ಎಂಬ ಕಾಗದದ ಗುಲಾಬಿಯನ್ನು ಲಗತ್ತಿಸಿರುವ, ಒಲವಿನ ಕಾಣಿಕೆ[೫೧] ಗಳೆಂದು ಪ್ರಚಲಿತವಾದ, ಚಿಕ್ಕ ಗಾಜಿನ ಟ್ಯೂಬ್ ಗಳಿಂದ ತಯಾರಿಸಲ್ಪಟ್ಟ ಪೈಪ್ ಅನ್ನು ಉಪಯೋಗಿಸುತ್ತಾರೆ. ಇವುಗಳನ್ನು ಕೆಲವೊಮ್ಮೆ "ಸ್ಟೆಮ್ಸ್", "ಹಾರ್ನ್ಸ್", "ಬ್ಲಾಸ್ಟರ್ಸ್" ಮತ್ತು "ಸ್ಟ್ರೈಟ್ ಷೂಟರ್ಸ್" ಎಂದು ಕರೆಯುತ್ತಾರೆ. ಚೊಕ್ಕವಾದ, ಭಾರವಿರುವ ಚಿಕ್ಕದಾದ ತಾಮ್ರದ ಅಥವಾ ಕೆಲವೊಮ್ಮೆ ಸ್ಟೇನ್ ಲೆಸ್ ಸ್ಟೀಲ್ ನ ಉಜ್ಜುರಟ್ಟು–,"ಬ್ರಿಲ್ಲೋ" ಎಂದು ಕರೆಯಲ್ಪಡುವ ರಟ್ಟು(ಮೂಲತಃ ಬ್ರಿಲ್ಲೋ ರೆಟ್ಟುಗಳಲ್ಲಿ ಸಾಬೂನು ಇರುವುದರಿಂದ ಅವನ್ನು ಉಪಯೋಗಿಸುವುದಿಲ್ಲ) ಅಥವಾ "ಚೋರ್" ಎಂದು ನಾಮಾಂಕಿತವಾದ "ಚೋರ್ ಬಾಯ್" ಬ್ರಾಂಡಿನ ತಾಮ್ರದ ಉಜ್ಜುರಟ್ಟು– ಗಳನ್ನು ಕುಂಠಿತಗೊಳಿಸುವ ಪ್ರತ್ಯಾಮ್ಲ ಮತ್ತು ಹರಿವನ್ನು ನಿಯಂತ್ರಿಸುವ ಸಾಧನವಾಗಿಸಿಕೊಂಡು "ರಾಕ್" ಗಳನ್ನು ಇವುಗಳಲ್ಲಿರಿಸಿ ಕಾಯಿಸುವುದರ ಮೂಲಕ ಆವಿಗೊಳಿಸುತ್ತಾರೆ. ಕ್ರ್ಯಾಕ್ ಸೇದುವವರು ಕೆಲವೊಮ್ಮೆ ಸೋಡಾ ಡಬ್ಬಿಗಳ ತಳದಲ್ಲಿ ಒಂದು ರಂಧ್ರ ಕೊರೆದು ಅದರ ಮೂಲಕ ಸೇದುತ್ತಾರೆ.

ಕ್ರ್ಯಾಕನ್ನು ಪೈಪ್ ನ ತುದಿಗೆ ಇರಿಸಿ ಸೇದಲಾಗುತ್ತದೆ; ಅದರ ಸನಿಹಕ್ಕೆ ಹಿಡಿದ ಉರಿಯಿಂದ ಉಂಟಾದ ಆವಿಯನ್ನು ಸೇದುಗನು ಎಳೆದುಕೊಳ್ಳುತ್ತಾನೆ. ಹೀಗೆ ಸೇದಿದ ತಕ್ಷಣ ದೊರೆಯುವ ಪರಿಣಾಮವು ಪ್ರಬಲವಾದದ್ದಾಗಿದ್ದರೂ ಹೆಚ್ಚು ಕಾಲ ಇರುವುದಿಲ್ಲ–; ಐದರಿಂದ ಹದಿನೈದು ನಿಮಿಷಗಳಿದ್ದರೆ ಹೆಚ್ಚು.

ಕೊಕೇನ್, ಸೇದುವಾಗ ಕೆಲವೊಮ್ಮೆ ಅದರ ಜೊತೆಗೆ ಕಾನ್ನಾಬಿಸ್ ಅನ್ನೂ ಅದರೊಡನೆ ಸುರುಳಿ ಸುತ್ತಿ 'ಜಾಯಿಂಟ್' ಅಥವಾ ಬ್ಲಂಟ್ ಆಗಿ ಸೇದಲಾಗುತ್ತದೆ. ಪುಡಿರೂಪದ ಕೊಕೇನನ್ನೂ ಕೆಲವೊಮ್ಮೆ ಸೇದಿದರೂ ಶಾಖ ನೀಡಿದಾಗ ಅದರಲ್ಲಿನ ರಾಸಾಯನಗಳು ನಾಶವಾಗುತ್ತವೆ. ಸೇದುಗರು ಕೊಕೇನನ್ನು ಕೆಲವೊಮ್ಮೆ ಮಾರಿಜ್ವಾನಾದ ಮೇಲೆ ಸಿಂಪಡಿಸಿ ಸೇವಿಸುತ್ತಾರೆ.

ಕೊಕೇನ್ ಸೇವಿಸುವ ಮತ್ತು ಕೊಕೇನ್ ಗೆ ಸಂಬಂಧಿತ ವಸ್ತಗಳನ್ನು ಕರೆಯುವ ಅಥವಾ ವರ್ಣಿಸುವ ಭಾಷೆಯು ಒಂದೊಂದು ಕಡೆ ಒಂದೊಂದು ರೀತಿ ಇದ್ದು, ಬೀದಿಯಲ್ಲಿ ಮಾರಲ್ಪಡುವ ಕೊಕೇನನ್ನು ಪ್ಯಾಕ್ ಮಾಡುವ ವಿಧಾನಗಳೂ ಸಹ ವಿವಿಧ ಬಗೆಯವಾಗಿರುತ್ತವೆ.

ಭೌತಿಕ ರಚನಾಕ್ರಮ

ಕೊಕೇನ್ ನೇರವಾಗಿ ಡಾಟ೧ ವಾಹಕದೊಡನೆ ಸೇರಿ ಆಂಫೆಟಮೈನ್ ಗಳಿಗಿಂತಲೂ ಪುನಶ್ಚೇತನಕ್ರಿಯೆಗೆ ಪ್ರಬಲವಾದ ತಡೆಯೊಡ್ಡಿ ರಂಜಕದೊಡನೆ ಅದನ್ನು ಸೇರಿಸಿ ಅಂತರ್ಗತವಾಗಿಸುತ್ತದೆ. ಇದರ ಬದಲು ಪ್ರಮುಖವಾಗಿ DAT ಹೊಮ್ಮಿಸಿ (ಕೊಕೇನ್ ಈ ಕಾರ್ಯವೆಸಗದು) ಮತ್ತು ಅದನ್ನು ದ್ವಿತೀಯಸ್ಥಾನಕ್ಕೆ ಮಾತ್ರ ಪುನಶ್ಚೇತನವಾಗದಂತೆ ತಡೆಯೊಡ್ಡಿ ಮತ್ತು ಇನ್ನೂ ಸಣ್ಣದಾದ, ಕೊಕೇನ್ ಗಿಂತಲೂ ಭಿನ್ನವಾದ ಚಟುವಟಿಕಗಳನ್ನೊಳಗೊಳಿಸಿ, ವಿರುದ್ಧ ದಿಕ್ಕಿನಿಂದ DATಗೆ ದೃಢಪಡಿಸುವುದು/ದೆಸೆಗೊಳಿಸುವುದು ಉತ್ತಮ.

ಕೊಕೇನ್ ನ ಔಷಧೀಯಪದಾರ್ಥಶಕ್ತಿಯು ಸಂಕೀರ್ಣವಾದ ಸಂದೇಶವಾಹಕನರಗಳ ಪರಸ್ಪರ ಸಂಬಂಧಗಳನ್ನು ಒಳಗೊಂಡಿದೆ. (ಸೆರೋಟೋನಿನ್:ಡೋಪಾಮೈನ್ = 2:3, ಸೆರೋಟೋನಿನ್ : ನೋರೆಪೈನ್ ಫ್ರೈನ್ = 2:5 ಪ್ರಮಾನದಲ್ಲಿರುವ ಮೂಷಿಕಗಳಲ್ಲಿ ಮಾನೋ ಅಮೈನ್ ನ ಹೆಚ್ಚುವಿಕೆಯನ್ನು ನಿರೋಧಿಸುವುದು)ಕೊಕೇನ್ ನ ಅತಿ ಹೆಚ್ಚು ಅಧ್ಯಯನ ಮಾಡಲ್ಪಟ್ಟ, ಪ್ರಧಾನ ನರಮಂಡಲದ ಮೇಲಿನ ದುಷ್ಪರಿಣಾಮವೆಂದರೆ ರವಾನಕ ಪ್ರೋಟೀನ್ ಆದ ದೋಪಾಮೈನ್ ಗೆ ತಡೆಯೊಡ್ಡುವುದು. ನರಗಳು ಸಂದೇಶ ಕಳುಹಿಸುವಾಗ ಉದ್ಭವವಾಗುವ ಡೋಪಾಮೈನ್ ಸಂದೇಶವಾಹಕವನ್ನು ಸಾಮಾನ್ಯವಾಗಿ ವಾಹಕಗಳ ಮೂಲಕ ಪುನಃಸ್ಥಾಪಿಸಲಾಗುತ್ತದೆ; ಎಂದರೆ, ವಾಹಕವು ಸಂದೇಶಪ್ರೇಷಕವನ್ನು ಒಗ್ಗೂಡಿಸಿ ಅದನ್ನು ಸೈನಾಪ್ಟಿಕ್ ಸಂದಿನಿಂದ ಪ್ರೀಸೈನಾಪ್ಟಿಕ್ ನರಕೋಶಗಳಿಗೆ ಹೊರಗೆಡವುತ್ತದೆ. ಅಲ್ಲಿ ಅದನ್ನು ಶೇಖರಣಾಕೋಶಗಳಲ್ಲಿ ಸಂಗ್ರಹಿಸಲಾಗುತ್ತದೆ. ದೋಪಾಮೈನ್ ವಾಹಕದಲ್ಲಿ ಕೊಕೇನ್ ಬಲವಾಗಿ ಲಗತ್ತಾಗುವುದರ ಮೂಲಕ ಒಂದು ಜಟಿಲತೆಯನ್ನು ಸೃಷ್ಟಿಸಿ ವಾಹಕಗಳ ಕ್ರಿಯೆಗೆ ಅಡ್ಡಿಯೊಡ್ಡುತ್ತದೆ. ದೋಪಾಮೈನ್ ವಾಹಕವು ತನ್ನ ಮರುಉದ್ದೀಪನಕಾರ್ಯವನ್ನು ಮಾಡಲು ಅಸಮರ್ಥವಾಗುತ್ತದೆ ಮತ್ತು ಈ ವಿಧದಲ್ಲಿ ಡೋಪಾಮೈನ್ ಸೈನಾಪ್ಟಿಕ್ ಕೋಶದಲ್ಲಿ ಸೇರುತ್ತದೆ. ಇದರಿಂದ ಗ್ರಾಹಕನರಕೋಶ (ರಿಸೆಪ್ಟಿವ್ ನ್ಯೂರಾನ್)ಗಳ ಮೇಲಿನ ಡೋಪಮೈನ್ ರಿಸೆಪ್ಟರ್ (ಸ್ವೀಕಾರಕಗಳು)ಗಳಲ್ಲಿ ಪ್ರಬಲವಾದ ಮತ್ತು ಸುದೀರ್ಘವಾದ ಸೈನಾಪ್ಟಿಕ್ ಪರಿಣಾಮದ ನಂತರದ ಡೋಪಾಮೈನರ್ಜಿಕ್ ಸೂಚನೆಗಳು ಉಂಟಾಗುತ್ತವೆ. ಕೊಕೇನ್ ಉಪಯೋಗ ಚಟವಾಗುತ್ತಾ ಹೋದಂತೆ, ಕೊಕೇನ್ ಗೆ ಬಹುಕಾಲ ತನ್ನನ್ನ ತಾನೇ ತೊಡಗಿಸಿಕೊಮಡಂತೆ,ಡೋಪಾಮೈನ್ ರಿಸೆಪ್ಟರ್ ಗಳ ನಿಯಂತ್ರಣಕುಂಠಿತಗೊಳುವಿಕೆ ಮತ್ತು ಹೆಚ್ಚುವರಿದ ಸೂಚನಾ ವಿನಿಮಯ ಗಳ ಮೂಲಕ ಸಾಧಾರಣ ಡೋಪಾಮೈನರ್ಜಿಕ್ ಸೂಚನಾಕ್ರಮದ (ಎಂದರೆ ಕೊಕೇನ್ ರಹಿತವಾದ) ಹೋಮೋಸ್ಟ್ಯಾಟಿಕ್ ಡಿಸ್ ರೆಗ್ಯುಲೇಷನ್ ಗೆ ಎಡೆಮಾಡಿಕೊಡುತ್ತದೆ. ದೀರ್ಘಕಾಲ ಕೊಕೇನ್ ಬಳಕೆಯಿಂದ ಕುಂಠಿತವಾದ ಡೋಪಾಮೈನರ್ಜಿಕ್ ಸೂಚನಾಗಿಧಿಯ ಪರಿಣಾಮವಾಗಿ ಖಿನ್ನತೆ ತಲೆದೋರಿ, ಮಿದುಳಿನ ಕೊಡುಗೆಯ ಕೇಂದ್ರ(ಸಂದೇಶಗಳನ್ನು ಉತ್ಪಾದಿಸಿ, ರವಾನಿಸುವ ಭಾಗ) ವನ್ನು ಸೂಕ್ಷ್ಮಗೊಳಿಸಿ ಕ್ರಿಯಾಶೀಲತೆಯು ಕೊಕೇನ್ ಆಧಾರಿತವಾಗುವಂತಾಗಿಬಿಡಬಹುದು. (ಉದಾಹರಣೆಗೆ ಹೆಚ್ಚಿನ ಕೊಕೇನ್ ತೆಗೆದುಕೊಂಡಾಗ ಮಾತ್ರ ಹೆಚ್ಚಿನ ಡೋಪಾಮೈನರ್ಜಿಕ್ ಸೂಚನೆಗಳ ಉತ್ಪತ್ತಿಯಾಗುವಿಕೆ) ಹೀಗೆ ಸೂಕ್ಷ್ಮಗೊಂಡ ಮಿದುಳಿನಿಂದ ಹೊರಬರಲಾರದಂತಹ ಚಟ ವೃದ್ಧಿಸಿ ಕೊಕೇನ್ ಮತ್ತೆ ಮತ್ತೆ ಬಳಸುವಂತಾಗುವುದಲ್ಲದೆ ಅದರ ಮೇಲಿನ ಅವಲಂಬಿಕೆಯೂ ಹೆಚ್ಚುವುದು.

ಡೋಪಾಮೈನ್ ಭರಿತ ಸ್ಥಳಗಳಾದ ವೆಂಟ್ರಲ್ ತೆಗ್ ಮೆಂಟಲ್ ಭಾಗ, ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ಮತ್ತು ಪ್ರೀಫ್ರಂಟಲ್(ಕೊಂಚ ಹಿಂದಿನ) ಕಾರ್ಟೆಕ್ಸ್ ಭಾಗಗಳು ಪದೇ ಪದೇ ಕೊಕೇನ್ ಚಟದ ಅಧ್ಯಯನಕ್ಕೆ ಒಳಗಾಗಿವೆ. ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ನಲ್ಲಿ ಕೊನೆಗೊಳ್ಳುವ ಹಾಗೂ ವೆಂಟ್ರಲ್ ತೆಗ್ ಮೆಂಟಲ್ ಭಾಗದಲ್ಲಿ ಆರಂಭವಾಗುವ ಡೋಪಾಮೈನರ್ಜಿಕ್ ನರಕೋಶಗಳುಳ್ಳ ಪಥವು ವಿಶೇಷ ಗಮನ ಸೆಳೆದಿದೆ. ಈ ಹರವು ಒಂದು "ಕೊಡುಗೆ ಕೇಂದ್ರ"ವಾಗಿ ವರ್ತಿಸಬಹುದೆಂದು ಎನಿಸುತ್ತದೆ; ಏಕೆಂದರೆ ಈ ಭಾಗವು ನೈಸರ್ಗಿಕ ಕೊಡುಗೆಗಳಾದ ಆಹಾರ ಮತ್ತು ಲೈಂಗಿಕತೆಯ ಸ್ವೀಕೃತಿಗೆ ಸ್ಪಂದಿಸುವುದಷ್ಟೇ ಅಲ್ಲದೆ ಕೊಕೇನ್ ನಂತಹ ಉತ್ತೇಜಕಕ ವಸ್ತುಗಳನ್ನು ತೆಗೆದುಕೊಂಡಾಗ ಸಹ ಚಟುವಟಿಕೆಯಿಂದ ಕೂಡುವುದು ಕಂಡುಬರುತ್ತದೆ.[೫೨] ನರವಿಜ್ಞಾನಿಗಳಲ್ಲಿ ಕೊಡುಗೆ ಕೇಂದ್ರದ ವಿಷಯದಲ್ಲಿ ಡೋಪಾಮೈನ್ ನ ಕೈವಾಡ ಇಂತಹುದೇ ಎಂಬುದರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ, ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ನಲ್ಲಿ ಡೋಪಾಮೈನ್ ಸ್ರವಿಸುವಿಕೆಯುಕೊಕೇನ್ ನ ಕೊಡುಗೆಯ ಪರಿಣಾಮ(ರಿವಾರ್ಡಿಂಗ್ ಎಫೆಕ್ಟ್ಸ್)ಕ್ಕೆ ಸ್ವಲ್ಪವಾದರೂ ಕಾರಣವಾಗುವುದು ಎಂದು ಅಭಿಪ್ರಾಯ ಪಡುತ್ತಾರೆ. ಪ್ರಯೋಗಾಲಯಗಳಲ್ಲಿ ತಾವೇ ಕೊಕೇನ್ ಸೇವಿಸಲು ತರಬೇತಿ ಪಡೆದಿರುವ ಡೋಪಾಮೈನ್ ಪ್ರತಿರೋಧಕಗಳನ್ನು ಮೇಲ್ಕಾಣಿಸಿದ ತರಬೇತಿ ಪಡೆದ ಮೂಷಿಕಗಳ ಜ್ಯೂಕ್ಲಿಯಸ್ ಅಕ್ಯುಂಬೆನ್ಸ್ ಗೆ ನೀಡಿದಾಗ ಕೊಕೇನ್ ನ ಹಿಡಿತ ತಪ್ಪಿದುದು ಕಂಡುಬಂದಿತು.(ಎಂದರೆ ಮೊದಮೊದಲಿಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ತೋರಿಸಿ ನಂತರ ಸಂಪೂರ್ಣ ನಿಲ್ಲಿಸಿದವು)ತನ್ಮೂಲಕ ಕೊಕೇನ್ ನ ಶಕ್ತಿದಾಯಕತೆ(ಎಂದರೆ ಕೊಡುಗೆ)ಯಿಂದ ಮೂಷಿಕಗಳು ಹೊರಬಂದುವೆಂದೂ, ಕೊಕೇನ್ ಗೆ ಗೋಗರೆಯುವ ಗುಣದಿಂದ ದೂರವಾದವೆಂದೂ ತಿಳಿದುಬಂದಿತು.

ಸೆರೋಟಿನಿನ್ (5-ಹೈಡ್ರಾಕ್ಸಿಟ್ರಿಪ್ಟಾಮೈನ್, 5-HT)ನ ಮೇಲಿನ ಕೊಕೇನ್ ನ ಪ್ರಭಾವವು ಹಲವಾರು ಸೆರೋಟಿನಿನ್ ಗ್ರಾಹಕತಂತುಗಳಲ್ಲಿ ವೇದ್ಯವಾಗುತ್ತದೆ; ಕೊಕೇನ್ 5-HT3 ರ ಮರು-ಉದ್ದೀಪನಕ್ಕೆ ಬಲವಾದ ಪ್ರತಿರೋಧ ಒಡ್ಡುತ್ತದೆ. ಕೊಕೇನ್ ಸೇವನೆಗೆ ಹೊಂದಿಕೊಂಡ ಮೂಷಿಕಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ 5-HT3 ಗ್ರಾಹಕತಂತುಗಳು ಕಂಡುಬರುವುದು ಈ ಗುಣವನ್ನು ಪ್ರದರ್ಶಿಸುತ್ತದೆ, ಆದರೆ ಈ ಕ್ರಿಯೆಯಲ್ಲಿ 5-HT3ಯ ಪರಿಣಾಮದ ನಿರ್ದಿಷ್ಟ ರೂಪ ವ್ಯಕ್ತವಾಗಿಲ್ಲ.[೫೩] 5-HT2 ರಿಸೆಪ್ಟರ್ (ಗ್ರಾಹಕತಂತು)ಗಳು (ಪ್ರಮುಖವಾಗಿ 5-HT2AR, 5-HT2BR and 5-HT2CR ಗಳ ಒಳಪಂಗಡದವುಗಳು)ಕೊಕೇನ್ ಸೇವನೆಯಿಂದ ಕಂಡುಬರುವ ಹೈಪರ್ ಆಕ್ಟಿವಿಟಿ (ತೀವ್ರಚಟುವಟಿಕೆ)ಸಂಭವಿಸಲು ಪ್ರಚೋದಿಸುತ್ತವೆ.[೫೪]

ಮೇಲ್ಕಂಡ ರಚನಾಕ್ರಮವಲ್ಲದೆ ಕೊಕೇನ್ DAT ಪ್ರೇಷಕಗಳು ಮುಕ್ತವಾದ ಹೊರ-ಮೈಯ ದೃಢೀತರಣದ ಸ್ಥಿರಪಡಿಸುವಿಕೆಯ ರೀತ್ಯಾ ರಚಿತವಾಗುವುದೆಂದು ಪ್ರದರ್ಶಿಸಲಾಗಿದೆ. ಆದರೆ ಬೇರೆ ಉತ್ತೇಜಕಗಳು (ಫೆನೆಥೈಲಮೈನ್ ನಂತಹವು) ಕೇವಲ ಆವೃತವಾದ ದೃಢೀಕ್ಋತತೆಗಳನ್ನು ಮಾತ್ರ ಸ್ಥಿರಗೊಳಿಸುತ್ತವೆ. ಅಲ್ಲದೆ, ಆಮ್ಫಿಟಮೈನ್ ಮತ್ತು ತತ್ಸಮಾನವಾದ ಕಣಗಳು ಸೇರುವುದರಿಂದಲೂ ಉತ್ಪನ್ನವಾಗುವ DATಯಲ್ಲಿರುವ ಹೈಡ್ರೋಜನ್ ಬಂಧವನ್ನೂ ತಡೆಯುವಂತಹ ರೀತಿಯಲ್ಲಿ ಕೊಕೇನ್ ಬಂಧಗಳು ರಚಿತವಾಗುತ್ತವೆ. ಕೊಕೇನ್ ಕಣಗಳು ಒಂದಕ್ಕೊಂದು ಎಷ್ಟು ಬಿಗಿಯಾಗಿ ಬೆಸೆದುಕೊಂಡಿರುತ್ತವೆಂದರೆ ಹೈಡ್ರೋಜನ್ ಬಂಧಗಳು ರಚಿನೆಯಾಗಲು ಇವುಗಳ ಬಂಧ ನಿರೋಧಕವಾಗುತ್ತವೆ. ಪ್ರೇಷಕಗಳಿಗೆ ಅಗತ್ಯವಾದುದು ವಸ್ತುವನ್ನು ರೂಢೀಗತಮಾಡಿಕೊಳ್ಳುವ ಪ್ರಕ್ರಿಯೆಯಲ್ಲ, ದೃಢೀಕರಣ ಮತ್ತು ಬಂಧಕ್ಕೊಳಗಾಗುವ ಗುಣಗಳು; ಎಲ್ಲಿ ಮತ್ತು ಹೇಗೆ ಪ್ರೇಷಕ ಕಣಗಳೊಂದಿಗೆ ಬಂಧಗೊಳ್ಳುತ್ತವೆ ಎಂಬುದೆಂದು ಒಂದು ಸಂಶೋಧನೆಯು ಸೂಚಿಸುತ್ತದೆ.[೫೫]

ಸಿಗ್ಮಾ ರಿಸೆಪ್ಟರ್ (ಕರ್ಷಕಗಳು) ಕೊಕೇನ್ ನಿಂದ ಪರಿಣಾಮಿತವಾಗಲು ಕಾರಣ ಕೊಕೇನ್ ಸಿಗ್ಮಾ ಬಂಧಕಗಳನ್ನು ಸಡಿಲಗೊಳಿಸುವಿಕೆಯೇ ಆಗಿದೆ.[೫೬] ಇವಲ್ಲದೆ ಕೊಕೇನ್ NMDA ಮತ್ತು D1 ಡೋಪಾಮೈನ್ ಕರ್ಷಕ (ರಿಸೆಪ್ಟರ್)ಗಳಂತಹ ನಿರ್ದಿಷ್ಟವಾದ ಕರ್ಷಕಗಳ ಮೇಲೂ ಕ್ರಿಯಾಶೀಲವ಻ಗುವುದು ವ್ಯಕ್ತವಾಗಿದೆ.[೫೭]

ಕೊಕೇನ್ ಸೋಡಿಯಮ್ ಚಾನಲ್ (ಪಥ)ಗಳನ್ನು ತಡೆಯೊಡ್ಡಿ ತನ್ಮೂಲಕ ಚಟುವಟಿಕೆಯ ಸಾಮರ್ಥ್ಯವು ವ್ಋದ್ಧಿಯಾಗುವುದನ್ನು ಕುಂಠಿತಗೊಳಿಸುವುದು; ಹೀಗೆ, ಲಿಗ್ನೋಕೇಯ್ನ್ ಮತ್ತು ನೋವೋಕೇಯ್ನ್ ಗಳಂತೆಯೇ ಇದೂ ಸಹ ಸ್ಥಾನಿಕ ಅರಿವಳಿಕೆಯ ವಸ್ತುವಾಗಿ ಪರಿಣಾಮ ಬೀರುತ್ತದೆ. ಸೋಡಿಯಮ್ ಅವಲಂಬಿತ ಪ್ರೇಷಕ ಸ್ಥಾನಗಳನ್ನು ಆ ಪ್ರೇಷಕಗಳ ಮರು-ಉದ್ದೀಪನಕ್ಕೆ ಪ್ರತ್ಯೇಕ ರಚನಾಕ್ರಿಯೆಯನ್ನೇ ಉದ್ದೇಶವಾಗಿರಿಸಿಕೊಡು, ಡೋಪೋಮೈನ್ ಮತ್ತು ಸೆರೋತೋನಿನ್ ಸ್ಥಾನಗಳನ್ನು ಬಂಧಗೊಳಿಸುವ ಕಾರ್ಯಕ್ಕೆ ಕೊಕೇನ್ ಅವಶ್ಯ; ಕೊಕೇನ್ ನಿಂದಲೇ ಉಗಮವಾದ ಫೆನೈಲ್ ಟ್ರೋಪೇನ್ ಗಳಿಗೆ ಸಮಾನವಾದ, ಡೋಪಾಮೈನ್-ಸೆರಾಟೋನಿನ್ ತೆಗೆಯಲ್ಪಟ್ಟ ಅಥವಾ ಅವೆರಡೂ ಇಲ್ಲವೇ ಇಲ್ಲದ ಆಮ್ಫಿಟಾಮೈನ್ ದರ್ಜೆಯ ಉತ್ತೇಜಕಗಳಿಗಿಂತಲೂ ವಿಭಿನ್ನವಾಗಿ ಸ್ಥಾನಿಕ ಅರಿವಳಿಕೆಯಲ್ಲಿ ಕೊಕೇನ್ ಅದ್ವಿತೀಯವಾಗಿದೆ. ಇದಲ್ಲದೆ ಕಪ್ಪ-ಓಪಿಯಾಯ್ಡ್ ಕರ್ಷಕ ಸ್ಥಳಗಳಲ್ಲೂ ಉದ್ದೇಶಿತ ಬಂಭರಚನೆಗಾಗಿ ಕೊಕೇನ್ ಉಪಯುಕ್ತ.[೫೮] ಕೊಕೇನ್ ರಕ್ತನಾಳಗಳನ್ನು ಸಂಕುಚಿತಗೊಳಿಸುವುದರಿಂದ ಸಣ್ಣ ಶಸ್ತ್ರಕ್ರಿಯೆಯ ಸಮಯದಲ್ಲಿ ರಕ್ತಸ್ರಾವ ಕಡಿಮೆಯಾಗಲು ಸಹಾಯಕವಾಗುತ್ತದೆ. ಕೊಕೇನ್ ನ ಚಲನಶೀಲತೆಯನ್ನು ವೃದ್ಧಿಸುವುದರ ಗುಣದ ಹಿನ್ನೆಲೆ ಸಬ್ ಸ್ಟಾನ್ಷಿಯಾ ನೈಗ್ರಾದಿಂದ ಡೋಪಾಮೈನರ್ಜಿಕ್ ರವಾನೆಗೊಳಿಸುವುದನ್ನು ವೃದ್ಧಿಗೊಳಿಸುವುದೇ ಇರಬಹುದು. ಕೊಕೇನ್ ವರ್ತಿಸುವ ರೀತಿಗೆ ಸಿರ್ಕಾಡಿಯನ್ ರಚನಾಶೈಲಿ[೫೯] ಮತ್ತು ಕ್ಲಾಕ್ ಜೀನ್ಸ್ [೬೦] ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆಧುನಿಕ ಸಂಶೋಧನೆಗಳು ಸೂಚಿಸುತ್ತವೆ.

ನಿಕೋಟಿನ್ ಮಿದುಳಲ್ಲಿನ ಡೋಪಾಮೈನ್ ಮಟ್ಟವನ್ನು ಏರಿಸುವುದರಿಂದ ಹಲವಾರು ಜನ ಕೊಕೇನ್ ಸೇವನೆಯೊಂದಿಗೆ ತಂಬಾಕು ವಿನ ಉತ್ಪನ್ನಗಳನ್ನು ಕೊಕೇನ್ ಸೇವಿಸುವಾಗ ಸೇವಿಸುವುದರಿಂದ 'ಹಿತ'ದ ಪರಿಣಾಮ ಹೆಚ್ಚುವುದೆಂದು ಮನಗಳಡಿದ್ದಾರೆ. ಆದರೆ ಇದರಿಂದ ಬಯಸದ ಪರಿಣಾಮಗಳು ಉಂಟಾಗಬಹುದು; ಕೊಕೇನ್ ಸೇವಿಸುವ ಸಮಯದಲ್ಲಿ ಹತೋಟಿ ಮೀರಿದ ಸರಣಿ ಧೂಮಪಾನ (ಚೈನ್ ಸ್ಮೋಕಿಂಗ್)(ಸಾಮಾನ್ಯವಾಗಿ ಸಿಗರೇಟ್ ಸೇದದವರೂ ಕೊಕೇನ್ ಸೇವಿಸುವಾಗ ಚೈನ್ ಸ್ಮೋಕಿಂಗ್ ಮಾಡುವುದು ಕಂಡುಬಂದಿದೆ)ವಲ್ಲದೆ ತಂಬಾಕಿನಿಂದ ಆರೋಗ್ಯಕ್ಕೆ ಹಾನಿಕಾರಕವಾದ ಪರಿಣಾಮಗಳು ಮತ್ತು ಹೃದಯದ ನಾಳಗಳ ಮೇಲೆ ಒತ್ತಡವೂ ಬೀಳುತ್ತದೆ.

ಕಿರಕಿರಿ, ಪ್ರಕ್ಷುಬ್ಧ ಮನಸ್ಸು, ಚಡಪಡಿಕೆ, ಮತಿವಿಕಲ್ಪ ಮತ್ತು ಸದ್ದಿನ ಭ್ರಾಂತಿಯಲ್ಲದೆ ಕೊಕೇನ್ ಹಲವು ಅಪಾಯಕಾರಿ ಶಾರೀರಿಕ ಪರಿಸ್ಥಿತಿಗಳಿಗೂ ಕಾರಣವಾಗಬಹುದು. ಹೃದಯಬಡಿತದಲ್ಲಿ ಏರುಪೇರು, ಹೃದಯಾಘಾತ, ಎದೆನೋವುಗಳನ್ನಲ್ಲದೆ ಶ್ವಾಸೋಚ್ಛಾಸಕ್ಕೂ ಅಡ್ಡಿಪಡಿಸಬಹುದು. ಜೊತೆಗೆ ಲಕ್ವ, ಸೆಟೆದುಕೊಳ್ಳುವಿಕೆ ಮತ್ತು ತಲೆಶೂಲೆ ಹೆಚ್ಚು ಕೊಕೇನ್ ಉಪಯೋಗಿಸುವವರಲ್ಲಿ ಸರ್ವೇಸಾಮಾನ್ಯ.

ಕೊಕೇನ್ ಆಹಾರ ಸೇವನಾ ಪ್ರಮಾಣವನ್ನು ತಗ್ಗಿಸುವುದು; ಕೊಕೇನ್ ಬಹುಕಾಲ ಯಪಯೋಗಿಸುವವರಿಗೆ ಹಸಿವೆ ಆಗುವುದು ವಿರಳ, ಆದ್ದರಿಂದ ಪೌಷ್ಟಿಕಾಂಶಗಳ ತೀವ್ರ ಕೊರತೆ ಮತ್ತು ತೂಕ ನಷ್ಟವಾಗುವುದಾಗುತ್ತವೆ. ನವೀನ ಪರಿಸರ ಹಾಗೂ ಹೊಸ ಸ್ಥಳಗಳಲ್ಲಿ ಮತ್ತು ಹೊಸ ಉತ್ತೇಜಕಗಳ ಜೊತೆ ಕೊಕೇನ್ ಸೇವಿಸಿದಾಗ ಻ದರ ಪರಿಣಾಮ ಮತ್ತೂ ಶಕ್ತಿಪೂರ್ಣವಾಗಿರುತ್ತದೆ.[೬೧]

ಮೆಟಾಬಾಲಿಸಮ್ (ರಾಸಾಯನಿಕ ಪರಿವರ್ತನೆ) ಮತ್ತು ವಿಸರ್ಜನೆ

ಕೊಕೇನ್ ಬಹಳವೇ ಮೆಟಾಬೊಲೈಜ್ (ರಾಸಾಯನಿಕ ಪರಿವರ್ತನೆ) ಆಗುವುದು, ಮುಖ್ಯವಾಗಿ ಯಕೃತ್ತಿನಲ್ಲಿ, ಕೇವಲ 1%ವಿಸರ್ಜಿತ, ಬದಲಾಗದ ಕೊಕೇನ್ ಮೂತ್ರದಲ್ಲಿರುವುದು. ಮೆಟಾಬಾಲಿಸಮ್ ನಲ್ಲಿ ಪ್ರಮುಖ ಪಾತ್ರ ವಹಿಸುವುದು ಹೈಡ್ರಾಲಯಟಿಕ್ ಎಸ್ಟರ್ ಕ್ಲೀವೇಜ್, ಆದ್ದರಿಂದ ಹೊರಹಾಕಲ್ಪಟ್ಟ ಮೆಟಾಬಾಲೈಟ್ (ರಾಸಾಯನಿಕ ಪರಿವರ್ತಕ)ಗಳಲ್ಲಿ ಬಹುತೇಕ ಪ್ರಮು ಖಪರಿವರ್ತಕವಾದ ಬೆನ್ಝಾಯ್ಲೆಕ್ಗೋನೈನ್ (BE), ಮತ್ತು ಇತರೆ ಗಮನಾರ್ಹ ಪರಿವರ್ತಕಗಳಾದ ಎಕ್ಗೋನೈನ್ ಮೀಥೈಲ್ ಎಸ್ಟರ್ (EME), ಎಕ್ಗೋನೈನ್ ಗಳು ಸಣ್ಣ ಪ್ರಮಾಣದಲ್ಲಿ ಹೊರಹಾಕಲ್ಪಟ್ಟಿರುತ್ತವೆ. ಇವಲ್ಲದೆ ಕೊಕೇನ್ ನ ಕಿರಿಯ ಮೆಟಾಬಾಲೈಟ್ ಗಳಾದ ಕೊಕೇನೇತರ ವಸ್ತುಗಳಾದ P-ಹೈಡ್ರಾಕ್ಸಿಕೊಕೇನ್, m-ಹೈಡ್ರಾಕ್ಸಿಕೊಕೇನ್, p-ಹೈಡ್ರಾಕ್ಸಿಬೆನ್ಝಾಯ್ಲೆಕ್ಗೋನೈನ್ (pOHBE) ಮತ್ತು m-ಹೈಡ್ರಾಕ್ಸಿಬೆನ್ಝಾಯ್ಲೆಕ್ಗೋನೈನ್ ಗಳು ಇರುತ್ತವೆ.[೬೨] ಇವುಗಳಲ್ಲದೆ ಮಾನವನ ಶರೀರದಲ್ಲಿ ಕೊಕೇನ್ ಮೆಟಾಬಾಲಿಸಂಗೆ ಹೊರತಾದ ಮೆಟಾಬಾಲೈಟ್ ಗಳು ಸಂಭವಿಸುವುವು; ಉದಾಹರಣೆಗೆ ಮೀಥೈಲೆಕ್ಗೋನೈನ್ ಪೈರಾಲಿಸಿಸ್ ಎಂಬ ಪ್ರಕ್ರಿಯೆಯ ಮೂಲಕ ಹೊರಹೊಮ್ಮುತ್ತದೆ.

ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವೈಖರಿಯನ್ನಾಧರಿಸಿ, ಕೊಕೇನ್ ಮೆಟಾಬಾಲೈಟ್ ಗಳು ಮೂತ್ರದಲ್ಲಿ ಕಂಡುಬರುತ್ತವೆ. ಕೊಕೇನ್ ತೆಗೆದುಕೊಂಡ ನಾಲ್ಕು ಗಂಟೆಗಳಲ್ಲಿ ಬೆನ್ಝಾಯ್ಲೆಕ್ಗೋನೈನ್ ಮೂತ್ರದಲ್ಲಿ ಕಂಡು ಬರುವುದು ಹಾಗೂ 150ಮಿಲಿಗ್ರಾಂ/ಮಿಲಿಲೀಟರ್ ಗಿಂತ ಹೆಚ್ಚಿನ ಸಾಂದ್ರತೆಯಿದ್ದಲ್ಲಿ ಸೇವನೆಯ ಕಾಲದಿಂದ ೆಂಟು ದಿನಗಳವರೆಗೂ ಕಂಡುಬರುತ್ತದೆ. ಕೊಕೇನ್ ಉಪಯೋಗಿಸುವಾಗ ತಲೆಯಲ್ಲಿರುವ ಕೂದಲು ಉದುರಿಹೋಗುವವರೆಗೂ ಅಥವಾ ಬೋಳಿಸುವವರೆಗೂ ಕೊಕೇನ್ ಶೇಖರಣೆಯ ಮೆಟಾಬಾಲೈಟ್ ಗಳನ್ನು ಕೂದಲಿನಲ್ಲೂ ಗ್ರಹಿಸಬಹುದು.

ಆಲ್ಕೋಹಾಲ್ ನೊಂದಿಗೆ ಕೊಕೇನ್ ಸೇವಿಸಿದಾಗ ಇವೆರಡೂ ಪಿತ್ತಜನಕಾಂಗದಲ್ಲಿ ಸೇರಿ ಕೋಕಾಎಥಿಲೀನ್ ಉದ್ಭವವಾಗುತ್ತದೆ. ಕೊಕೇನ್ ಗಿಂತಲೂ ಕೋಕಾಎಥಿಲೀನ್ ಹೆಚ್ಚು 'ಹಿತ'ಭಾವಪ್ರಚೋದಕವೂ (ಯೂಫೋರಿಗೆನಿಕ್), ಹೃದಯದ ರಕ್ತನಾಳಗಳಿಗೆ(ಕಾರ್ಡಿಯೋವ್ಯಾಸ್ ಕ್ಯುಲಾರ್) ಹೆಚ್ಚು ವಿಷಕಾರಕವೂ ಆಗುವುದೆಂದು ಸಮೀಕ್ಷೆಗಳ ಸೂಚನೆ.[೬೩][೬೪][೬೫]

ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಮೆಣಸಿನ ಸಿಂಪಡಣೆ ಯಲ್ಲಿರುವ ಕ್ಯಾಪ್ಸೈಸಿನ್ ಜೊತೆಗೆ ಕೊಕೇನ್ ಸೇರಿದರೆ ಪರಿಣಾಮ ಮಾರಣಾಂತಕವೆಂದು ಕಂಡುಬಂದಿದೆ. ಆದರೆ ಅವುಗಳು ಯಾವ ರೀತಿ ಪರಸ್ಪರ ಪ್ರತಿಕ್ರಿಯಿಸುತ್ತವೆ ಎಂಬುದು ತಿಳಿದುಬಂದಿಲ್ಲ.[೬೬][೬೭]

ಪರಿಣಾಮಗಳು ಮತ್ತು ಆರೋಗ್ಯದ ವಿಷಯಗಳು

ಕೊಕೇನ್ ಒಂದು ಪ್ರಬಲ ನರಮಂಡಲ ಉತ್ತೇಜಕ.[೬೮] ಸೇವಿಸಿದ ರೀತಿಯನ್ನವಲಂಬಿಸಿ ಅದರ ಪರಿಣಾಮವು 15 -30 ನಿಮಿಷಗಳಿಂದ ೊಂದು ಗಂಟೆಯವರೆಗೂ ಇರಬಹುದು.[೬೯]

ಕೊಕೇನ್ ಜಾಗರೂಕತೆಯನ್ನು ಹೆಚ್ಚಿಸುತ್ತದೆ, ಸುಸ್ಥಿತಿಯಲ್ಲಿರುವಂತಹ ಭಾವ ಮೂಡಿಸುತ್ತದೆ ಮತ್ತು ಕ್ಷೇಮಭಾವ, ಶಕ್ತಿ, ಚಲನ ಚಟುವಟಿಕೆಗಳು, ಸಮರ್ಥನೆಂಬ ಭಾವ ಮತ್ತು ಲೈಂಗಿಕತೆಯನ್ನು ಹೆಚ್ಚಿಸುತ್ತದೆ. ವ್ಯಾಯಾಮ ಸಂಬಂಧಿತ ಆಟಗಳಲ್ಲಿ ಪ್ರದರ್ಶನ ುತ್ತಮಗೊಳ್ಳಬಹುದು. ಆತಮಕ, ಮತಿವಿಕಲ್ಪ ಮತ್ತು ನೆಮ್ಮದಿರಹಿತತೆಗಳೂ ಆಗಾಗ್ಗೆ ತಲೆದೋರುತ್ತವೆ. ಪ್ರಮಾಣ ಹೆಚ್ಚಿದಂತೆ ನಡುಕ, ಸನ್ನಿವಾಯು ಮತ್ತು ಹೆಚ್ಚಿದ ದೇಹದ ುಷ್ಣತೆಗಳು ಕಾಣಬರುತ್ತವೆ.[೬೮]

ಅನಿಷೇಧಿತ, ಕಾನೂನು ಒಪ್ಪುವ ವಸ್ತುಗಳಾದ ಆಲ್ಕೋಹಾಲ್ ಮತ್ತು ತಂಬಾಕಿನಿಂದ ಉಂಟಾಗುವ ಅನಾರೋಗ್ಯಗಳು ಕೊಕೇನ್ ಉಪಯೋಗದಿಂದಾಗುವ ಅನಾರೋಗ್ಯಗಳಿಗಿಂತಲೂ ಹೆಚ್ಚು. ಕೊಕೇನನ್ನು ಯಾವಾಗಲೋ ಒಮ್ಮೆ ಉಪಯೋಗಿಸಿದರೆ ಅದರಿಂದ ಸಣ್ಣ ಪ್ರಮಾಣದ ಅಥವಾ ತೀವ್ರತರವಾದ ಯಾವುದೇ ಶಾರೀರಿಕ ಅಥವಾ ಸಾಮಾಜಿಕ ತೊಂದರೆಗಳು ಉದ್ಭವಿಸುವುದಿಲ್ಲ.[೭೦][೭೧]

ತೀವ್ರ

ಹೆಚ್ಚಿನ ಅಥವಾ ದೀರ್ಘಕಾಲಿಕ ಸೇವನೆಯಿಂದ ನವೆ, ಟಾಕಿಕಾರ್ಡಿಯಲ್ (ವೇಗದ ಹೃದಯಬಡಿತ), ಚಿತ್ತವಿಕಾರ ಮತ್ತು ವಿಕಲ್ಪಿತ ಭ್ರಾಂತಿ ಗಳು ಉಂಟಾಗಬಹುದು. ಬಲು ಹೆಚ್ಚಿನ ಪ್ರಮಾಣದ ಸೇವನೆ ತಾಕಿಯಾರರ್ಹಿತ್ಮಿಯಾಸ ಎಂಬ ಖಾಯಿಲೆ ಮತ್ತು ಅತಿಯಾದ ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಪ್ರಾಣಾಂತಿಕವಾಗಬಲ್ಲ ಇವು ಸೇವಿಸುವವನಿಗೆ ಹೃದಯಸಂಬಂಧಿತ ಖಾಯಿಲೆಗಳಿದ್ದರಂತೂ ಯಮನಿಗೆ ಕರೆ ಕಳುಹಿಸಿದಂತೆಯೇ ಸೈ.[ಸೂಕ್ತ ಉಲ್ಲೇಖನ ಬೇಕು] ಇಲಿಗಳಿಗೆ ಕರುಳು ಪರೆಗಳ ಮೂಲಕ ನೀಡಲ್ಪಟ್ಟಾಗ ಕೊಕೇನ್ ನ LD 50 ಯು 95.1ಮಿ.ಗ್ರಾಂ/ಕಿ.ಗ್ರಾಂ ಇರುವುದು ಗೋಚರಿಸಿತು.[೭೨] ಇಂತಹ ವಿಷಕಾರಕತ್ತವು ಹೃದಯಸ್ಥಂಭನವನ್ನೂ, ಉಸಿರಾಟದ ಮತ್ತು ಮಿದುಳಿನ ರಕ್ತಚಲನೆಯ ತೆಂದರೆಯನ್ನೂ ಉಂಟುಮಾಡುತ್ತದೆ. ಪರಿಣಾಮವಾಗಿ ಉಸಿರಾಟ ಸ್ಥಗಿತತೆ, ಲಕ್ವ, ಮಿದುಳಿನಲ್ಲಿ ರಕ್ತಹೆಪ್ಪುಗಟ್ಟುವಿಕೆ ಅಥವಾ ಹೃದಯಾಘಾತದ ಮೂಲಕ ಸಾವು ಸಂಭವಿಸಬಹುದು. ಕೊಕೇನ್ ಬಹಳ ಉಷ್ಣಕಾರಕ ವಾಗಲು ಕಾರಣವೇನೆಂದರೆ ಉತ್ತೇಜನಕ್ರಿಯೆ ಮತ್ತು ಮಾಂಸಖಂಡಗಳ ಚಟುವಟಿಕೆಗಳಲ್ಲಿ ಬಹಳ ಶಾಖ ಉತ್ಪತ್ತಿಯಾಗುತ್ತದೆ. ಶಾಖ ಪೋಲಾಗದಂತೆ ಅಪಾರವಾದ ರಕ್ತನಾಳಗಳಸಂಕುಚನ ವು ತಡೆಯುತ್ತದೆ. ಕೊಕೇನ್ ನಿಂದಾಗುವ ಹೈಪರ್ಥರ್ಮಿಯಾ ದಿಂದ ಮಾಂಸಖಂಡಗಳ ಜೀವಕೋಶಗಳು ಮತ್ತು ಮಯೋಗ್ಲೋಬಿನ್ಯೂರಿಯಾ ದಿಂದ ಮೂತ್ರಪಿಂಡವೈಫಲ್ಯವೂ ಉಂಟಾಗಬಹುದು. ಬೆನ್ಝೋಡಯಾಝೆಪೈನ್ ವುಳ್ಳ ಉಪಶಮನಕಾರಕ ವಸ್ತುಗಳಾದ ಡಯಾಝೆಪಾಮ್ (ವ್ಯಾಲಿಯಮ್)ನಂತಹ ಔಷಧಗಳನ್ನು ತುರ್ತುಚಿಕಿತ್ಸೆಯಲ್ಲಿ ನೀಡುವುದರ ಮೂಲಕ ಹೃದಯಬಡಿತ ಮತ್ತು ರಕ್ತಡೊತ್ತಡಗಳನ್ನು ಹತೋಟಿಗೆ ತರಲೆತ್ನಿಸಲಾಗುತ್ತದೆ. ಶರೀರದ ಶಾಖ ತಗ್ಗಿಸುವಿಕೆ (ಮಂಜುಗಡ್ಡೆ, ತಣ್ಣನೆಯ ಕಂಬಳಿಗಳು, ಇತ್ಯಾದಿ)ಮತ್ತು ಪ್ಯಾರಾಸಿಟೆಮಾಲ್ (ಅಸಿಟಾಮೈನೋಫೆನ್)ಗಳನ್ನು ಹೈಪರ್ಥೆರ್ಮಿಯಾಗೆ ನೀಡಬಹದು, ನಂತರದ ಬೆಳವಣಿಗೆ ಅಥವಾ ತೊಂದರೆಗಳಿಗನುಗುಣವಾಗಿ ಸಿರ್ದಿಷ್ಟ ಚಿಕಿತ್ಸೆಗಳನ್ನು ನೀಡಬಹುದು.[೭೩] ಕೊಕೇನ್ ಓವರ್ ಡೋಸ್ (ತೀವ್ರತರ ಸೇವನೆ)ಗೆ ಯಾವುದೇ ನಿರ್ದಿಷ್ಟವಾದ ಪ್ರತಿವಿಷ (ವಿಷಮಾರಕ)ವಿಲ್ಲ, ಡೆಕ್ಸ್ಮಿಡೆಟೋಮಿಡೈನ್ ಮತ್ತು ರಿಮ್ಕಾಝೋಲ್ ಗಳ ಮೂಲಕ ಪ್ರಾಣಿಗಳಲ್ಲಿನ ಕೊಕೇನಧಿಕತೆಯನ್ನು ಉಪಶಮನಗೊಳಿಸಬಹುದೆಂದು ಕಂಡುಬಂದಿದ್ದರೂ ಮನುಷ್ಯನ ಮೇಲೆ ಯಾವುದೇ ಅಧಿಕೃತ ಪ್ರಯೋಗಗಳನ್ನು ಇದುವರೆಗೂ ನಡೆಸಿಲ್ಲ.[ಸೂಕ್ತ ಉಲ್ಲೇಖನ ಬೇಕು]

ರೋಗಿಯು ವೈದ್ಯರ ಬಳಿ ಬರಲಾಗದಂತಹ ಅಥವಾ ಬರದಂತಹವನಾಗಿದ್ದರೆ. ಕೊಕೇನಧಿಕತೆಯಿಂದ ಮೆದು-ಸುಮಾರು ತಾಕಿಕಾರ್ಡಿಯಲ್ (ಹೃದಯಸಂಬಂಧಿತ)ತೊಂದರೆಯಾದರೆ,(ಏಂದರೆ ನಾಡಿಬಡಿತ 120ಕ್ಕಿಂತಲೂ ಹೆಚ್ಚಾದರೆ) ಮೊದಲಿಗೆ 20 ಮಿಲಿಗ್ರಾಂ ಬಾಯಿಯ ಮೂಲಕ ತೆಗೆದುಕೊಳ್ಳಲಾಗುವ ಡಯಾಝೆಪಾಮ್ ಅಥವಾ ಅದಕ್ಕೆ ಸಮನಾದ ಬೆನ್ಝೋಡಯಾ ಝಿಪೈನ್ (ಉದಾ: 2 ಮಿ.ಗ್ರಾಂ. ಲೋರಾಝೆಪಾಮ್) ನೀಡಬಹುದು. ಅಸಿಟಾಮಿನೋಫೆನ್ ಮತ್ತು ಶರೀರದ ಶಾಖ ತಗ್ಗಿಸುವುದನ್ನು ಅಲ್ಪ ಹೈಪರ್ಥೆರ್ಮಿಯಾ ಗುಣಪಡಿಸಲು ನೀಡಬಹುದು(<39 C). ಆದರೆ ಹೃದಯಸಂಬಂಧಿತ ಖಾಯಿಲೆಗಳು ಮತ್ತು ಹೆಚ್ಚಿನ ರಕ್ತದೊತ್ತಡದಿಂದ ನರಳುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆಗಳು ಸಾಲದಾಗಿ ಹೃದಯಸ್ಥಂಭನ ಅಥವಾ ಲಕ್ವ ಹೊಡೆಯುವ ಸಾಧ್ಯತೆಗಳಿರುವುದರಿಂದ ಜಾಗ್ರತೆ ವ್ಐದ್ಯಕೀಯ ಚಿಕಿತ್ಸೆ ನೀಡುವುದು ಅಗತ್ಯ. ಅಂತೆಯೇ ಬೆನ್ಝೋಡಯಾಝೆಪೈನ್ ನಿಂದ ಹೃದಯಬಡಿತದ ವೇಗ ತಗ್ಗದೆ, ದೇಹದ ಶಾಖ ಹೆಚ್ಚುತ್ತಲೇ ಹೋದರೆ ತಕ್ಷಣ ವೈದ್ಯರ ಸಹಾಯ ಪಡೆಯಬೇಕು.[೭೪][೭೫][೭೬]

ನ್ಯೂಕ್ಲಿಯಸ್ ಅಕ್ಯುಂಬೆನ್ಸ್ (ಮಿದುಳಿನ ಸಂತೋಷಜನಕ ಕೇಂದ್ರ) ನಲ್ಲಿ ಡೋಪಾಮೈನ್ ಮತ್ತು ಸೆರೋಟೋನಿನ್ ನ ಪ್ರಮಾಣ ಹೆಚ್ಚಿಸುವಿಕೆಯೇ ಕೊಕೇನ್ ಉಂಟುಮಾಡುವ ಪ್ರಮುಖ ಪರಿಣಾಮ; ಆದರೆ ಕೊಕೇನನ್ನು ಜಡ ವಸ್ತುಗಳಾಗಿ ಪರಿವರ್ತಿಸುವ ಮೆಟಾಬಾಲಿಸಮ್ ಚಟುವಟಿಕೆಗಳಿಂದ ಮತ್ತು ಮುಖ್ಯವಾಗಿ ಟಾಕಿಫೈಲಾಕ್ಸಿಸ್ ಪ್ರೇಷಕ ಮೂಲಗಳ ತಗ್ಗುವಿಕೆಯಿಂದ ಈ ಪರಿಣಾಮ ನಿರ್ನಾಮವಾಗುತ್ತದೆ. ಇವನ್ನು, ಉತ್ತುಂಗವನ್ನು ತಲುಪಿದ ತಕ್ಷಣ "ಕ್ರ್ಯಾಷ್" ಆಗುವಂತಾದಾಗ ಆಗುವ ಖಿನ್ನತೆಯಂತೆ ಅನುಭವಕ್ಕೆ ತಂದುಕೊಳ್ಳಬಹುದು ದೀರ್ಘಕಾಲಿಕ ಕೊಕೇನ್ ಉಪಯೋಗದಲ್ಲಿ ಮತ್ತೂ ರಚನಾಕ್ರಮಗಳು ಸಂಭವಿಸುವುವು. ಹೀಗೆ "ಕ್ರ್ಯಾಷ್" ಆದಾಗ ಇಡೀ ದೇಹದ ಮಾಂಸಖಂಡಗಳಲ್ಲಿ "ಜಿಟರ್ರ್ಸ್" ಎಂದು ಕರೆಯಲ್ಪಡುವ ಸೆಳೆತ, ಮಾಂಸಖಂಡಗಳ ದುರ್ಬಲತೆ, ತಲೆಶೂಲೆ, ತಲೆಸುತ್ತುವಿಕೆ ಮತ್ತು ಆತ್ಮಹತ್ಯೆಯ ಆಲೋಚನೆಗಳ ತಲೆದೋರುವಿಕೆಗಳು ಸಂಭವಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಗರ್ಭಿಣಿಯರು ಕೊಕೇನ್ ಸೇವಿಸಿದರೆ ದಿನಗಳು ತುಂಬುವ ಮೊದಲೇ ಹೆರಿಗೆಯಾಗುವ ಸಾಧ್ಯತೆಗಳಿದ್ದು ಅಬ್ರಪ್ ಷಿಯೋ ಪ್ಲಾಸೆಂಟಾ (ಗರ್ಭಕೋಶದಿಂದ 'ಮಾಸು' ಬೇರೆಯಾಗುವುದರಿಂದಾಗುವ ರಕ್ತಸ್ರಾವ)ಗೆ ಎಡನೀಡುವುದೆಂದು ಅಧ್ಯಯನಗಳು ತೋರಿಸಿವೆ.[೭೭][೭೮]

ದೀರ್ಘಕಾಲಿಕ

ದೀರ್ಘಕಾಲಿಕ ಕೊಕೇನ್ ಬಳಕೆಯ ಪ್ರಮುಖ ಪರಿಣಾಮಗಳು.

ದೀರ್ಘಕಾಲಿ ಕೊಕೇನ್ ಸೇವನೆಯು, ವೈಪರೀತ್ಯಗಳನ್ನು ಸರಿದೂಗಿಸುವ ಸಲುವಾಗಿ, ಮಿದುಳಿನ ಜೀವಕೋಶಗಳು ಸಂದೇಶಪ್ರೇಷಕಗಳ ಮಟ್ಟದಲ್ಲಿ ತೀವ್ರತಮ ಏರುಪೇರು ಆಗುವುದಕ್ಕೂ ಹೊಂದಿಕೊಳ್ಳಲು ಅನುವು ಮಾಡುತ್ತದೆ. ಸ್ವಿಚ್ ಆನ್ ಮಾಡಿದಾಗ ದೀಪ ಬರುವಂತೆ ಮತ್ತು ಆಫ್ ಮಾಡಿದಾಗ ಹೋಗುವಂತೆ, ಕರ್ಷಕ (ರಿಸೆಪ್ಟರ್)ಗಳೂ ಜೀವಕೋಶಗಳ ಮೇಲ್ಮೈಯಿಂದ ಹೋಗುವುದು, ಬರುವುದು ಆಗುತ್ತದೆ ಅಥವಾ ಅವುಗಳು ಬಂಧಕದಲ್ಲಿ ಜೊತೆಯಾಗುವ ವಸ್ತುಗಳ (ದ್ರವಗಳ–) ರಚನಾಕ್ರಮಕ್ಕೆ ಓಳಗಾಗುವ ರೀತಿಯನ್ನು ನೀಚ-ಊರ್ಧ್ವನಿಯಂತ್ರಣ ಕ್ರಮಕ್ಕೆ ಬದಲಿಸಿಕೊಳ್ಳುತ್ತವೆ. ಆದರೆ, ಕೊಕೇನ್ ದಾಸರು ವಯಸ್ಸಿಗೆ ತಕ್ಕ ಹಾಗೆ ಸ್ಟ್ರೈಟಲ್ DAT ಸ್ಥಳಗಳ ನ್ನು ಕಳೆದುಕೊಲ್ಲದಿರುವುದರಿಂದ ಕೊಕೇನ್ ಡೋಪಾಮೈನ್ ನ್ಯೂರಾನ್ ಗಳ ಬಗ್ಗೆ ನರರಕ್ಷಣಾ ಗುಣಗಳನ್ನು ಹೊಂದಿದೆ ಎಂಬ ಸೂಚನೆ ಕಂಡುಬರುತ್ತದೆ.[೭೯] ತೀರದ ಹಸಿವು, ನೋವುಗಳು, ನಿದ್ರಾಹೀನತೆ/ಅತಿನಿದ್ರೆ ಮತ್ತು ಸದಾ ಸೋರುತ್ತಿರುವ ಮೂಗು - ಈ ಲಕ್ಷಣಗಳ ಅನುಭವವು ಬಹಳ ಅಹಿತಕರವಾಗಿರುವುದೆಂದು ಬಣ್ಣಿಸಲಾಗಿದೆ. ಬಹಳ ಕೊಕೇನ್ ತೆಗೆದುಕೊಳ್ಳುವರಲ್ಲಿ ಖಿನ್ನತೆ ಮತ್ತು ಆತ್ಮಹತ್ಯಾ ವಾಂಛೆ ತಲೆದೋರುತ್ತದೆ. ಕಡೆಗೆ, ವೆಸಿಕ್ಯುಲರ್ ಮಾನೋ ಅಮೈನ್ ರವಾನಕಗಳು, ನ್ಯೂರೋಫಿಲಮೆಂಟ್ ಪ್ರೋಟೀನ್ ಗಳು ಮತ್ತು ಇತರೆ ರೂಪರಚನೆಗಳ ಬದಲಾವಣೆಗಳು ಕಂಡುಬರುವುದರ ಮೂಲಕ ದೋಪಾಮೈನ್ ನ್ಯೂರಾನ್ ಗಳು ಹಾನಿಗೊಂಡಿರುವುದನ್ನು ಸೂಚಿಸುತ್ತವೆ. ಇವುಗಳ ಪರಿಣಾಮವಾಗಿ ಕೊಕೇನ್ ನ ಪರಿಣಾಮಗಳ ಬಗ್ಗೆ ಒಂದು ತಾಳಿಕೆ ಮೂಡತೊಡಗಿ, ಬೀರುವ ಪರಿಣಾಮವೇ ಬೀರಬೇಕಾದರೆ ಹೆಚ್ಚು ಹೆಚ್ಚು ಸೇವನೆ ಬೇಕಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮಾಮೂಲಿನ ಪ್ರಮಾಣದ ಸೆರೋಟೋನಿನ್ ಮತ್ತು ಡೋಪಮೈನ್ ಮೆದುಳಿನಲ್ಲಿ ಕಡಿಮೆಯಾಗಲು ಡಿಸ್ಫೋರಿಯಾ ಮತ್ತು ಖಿನ್ನತೆಗಳು, ಆರಂಭಿಕ ಅಮಲಿನ ಶಿಖರ ದಾಟಿದನಂತರ, ಮೂಡುತ್ತವೆ. ಅದರಿಂದ ದೂರಸರಿಯುವುದು ಅಪಾಯಕಾರಿಯಲ್ಲವಲ್ಲದೆ ಪುನಃಸ್ಥಾಪಕವೂ ಹೌದು. ಕೊಕೇನ್ ನಿಂದ ದೂರಸರಿಯುವುದರ ಲಕ್ಷಣಗಳ ಒರೆಗಲ್ಲೆಂದರೆ ಖಿನ್ನತೆ, ಆಯಾಸ, ದುಃಸ್ವಪ್ನಗಳು, ನಿದ್ರಾಹೀನತೆ ಅಥವಾ ಅತಿನಿದ್ರೆ, ಲಿಂಗೋದ್ರೇಕಹೀನತೆ, ಅತಿಯಾದ ಆಹಾರ ಸೇವನೆ, ಮಾನಸಿಕ (ಆಲೋಚನಾ)ಶಕ್ತಿಯು ನಿಧಾನವಾಗುವಿಕೆ ಅಥವಾ ಕಿರಿಕಿರಿ ಮತ್ತು ಆತಂಕ.[ಸೂಕ್ತ ಉಲ್ಲೇಖನ ಬೇಕು]

ಕೊಕೇನ್ ನ ದೀರ್ಘಕಾಲದ ಸೇವನೆಯಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳೆಂದರೆ ಹೆಮೋಪ್ಟಿಸಿಸ್ (ರಕ್ತಸಂಬಂಧಿತ ಖಾಯಿಲೆ), ಬ್ರಾಂಕೋಸ್ಪಾಸ್ಮ್ (ಶ್ವಾಸನಾಳಗಳ ಸೆಳೆತ), ಪ್ರೂರಿಟಸ್, ಜ್ವರ, ಸ್ರಾವ ಹೀನವಾಗುವಂತೆ ವ್ಯಾಪಕವಾಗಿ ಆಲ್ವಿಯೋಲೈಗಳಲ್ಲಿ ಸೇರುವಿಕೆ, ಪಲ್ಮನರಿ (ಪುಪ್ಪಸದ)ಮತ್ತು ಸಿಸ್ಟಮಿಕ್ (ದೇಹವ್ಯವಸ್ಥೆಯ) ಈಸಿನೋಫಿಲಿಯಾ, ಎದೆನೋವು, ಶ್ವಾಸಕೋಶದ ತೊಂದರೆಗಳು, ಗಂಟಲು ಹುಣ್ಣು, ಉಬ್ಬಸ, ಗೊಗ್ಗರು ಧ್ವನಿ, ಡಿಸ್ಪ್ ನಿಯಾ(ಹ್ರಸ್ವವಾದ ಉಸಿರಾಟ) ಮತ್ತು ಫ್ಲೂ ಮಾದರಿಯ ನೋವುಗಳ ಲಕ್ಷಣಗಳು. ಕೊಕೇನ್ ಸೇದುವುದರಿಮದ ರಾಸಾಯನಿಕವಾಗಿ ದಂತಗಳ ಎನಾಮಲ್ ನಾಶಪಡಿಸಿ ದಂತಕ್ಷಯ ಉಂಟಿಮಾಡುವುದೆಂಬ ನಂಬಿಕೆ ಸರಿಯಾದುದಲ್ಲ. ಆದರೆ ಕೊಕೇನ್ ಹಲವೊಮ್ಮೆ ಅನೈಚ್ಛಿಕವಾಗಿ ಹಲ್ಲುಮಸೆಯುವಂತೆ ಪ್ರೇರೇಪಿಸುವ(ಬ್ರೂಕ್ಷಿಸಮ್ ಎಂಬ ಕ್ರಿಯೆ) ಕಾರಣ ದಂತಗಳ ಎನಾಮಲ್ ಹಾಳಾಗಿ ಜಿಂಜಿವೈಟಿಸ್ ಖಾಯಿಲೆ ತಲೆದೋರಬಹುದು.[೮೦]

ದೀರ್ಘಕಾಲಿ ಮೂಗಿನಿಂದ ಸೇಚನೆಯಿಂದ ಹೊಳ್ಳೆಗಳನ್ನು ಬೇರ್ಪಡಿಸುವ ಕಾರ್ಟಿಲೇಜ್ (ಮೃದುವಾದ ಎಲುಬು)(ಸೆಪ್ಟಮ್ ನಾಸಿ) ಯ ಕ್ಷೀಣತೆಗೆ ಕಾರಣವಾಗಿ, ಕಾಲಾಂತರದಲ್ಲಿ ಆ ಮೂಳೆ ಇಲ್ಲದಂತಾಗಿಸುವುದು. ಕೊಕೇನ್ ಹೈಡ್ರಾಕ್ಲೋರೈಡ್ ನಿಂದ ಕೊಕೇನನ್ನು ಹೀರಿಕೊಳ್ಳುವುದರಿಂದ ಉಳಿದ ಹೈಡ್ರೋಕ್ಲೋರೈಡ್ ಅಂಶದಿಂದ ಅಳ್ಳಕವಾದ ಹೈಡ್ರೋಕ್ಲೋರಿಕ್ ಆಸಿಡ್ ತಯಾರಾಗುತ್ತದೆ.[೮೧]

ಕೊಕೇನ್ ದೇಹದಲ್ಲಿನ ರೋಗನಿರೋಧಕಶಕ್ತಿಯನ್ನು ಕುಂಟಿತಗೊಳಿಸುವ ಅಪಾಯವಿರುವುದಲ್ಲದೆ ಜೀವಕೋಶಗಳನ್ನು ಬೆಸೆಯುವ ಟಿಶ್ಯೂಗಳ ಸಂಬಂಧಿತ ಖಾಯಿಲೆಗಳಾದ ಲ್ಯೂಪಸ್, ಗುಡ್ ಪ್ಯಾಸ್ಚರ್ ರೋಗ, ವ್ಯಾಸ್ಕುಲೈಟಿಸ್, ಗ್ಲಾಮೆರುಲೋನೆಫ್ರಿಟಿಸ್, ಸ್ಟೀವನ್ಸ್-ಜಾನ್ಸನ್ ಲಕ್ಷಣಗಳು ಮತ್ತು ಇತರ ರೋಗಗಳನ್ನು ಉಂಟುಮಾಡುತ್ತದೆ.[೮೨][೮೩][೮೪][೮೫] ಕೊಕೇನ್ ಹಲವಾರು ಮೂತ್ರಪಿಂಡ ಸಂಬಂಧಿತ ಖಾಯಿಲೆಗಳನ್ನು ತರಬಲ್ಲದಲ್ಲದೆ ಮೂತ್ರಪಿಂಡ ನಿಷ್ಕ್ರಿಯವಾಗಲೂ ಕಾರಣವಾಗುವುದು.[೮೬][೮೭]

ಕೊಕೇನ್ ಸೇವನೆಯಿಂದ ಹೆಮೊರೇಜಿಕ್ ಮತ್ತು ಇಷೆಮಿಕ್ ಎಂಬ ಎರಡು ರೀತಿಯ ಲಕ್ವಗಳೂ[೮೮] ಹೊಡೆಯುವ ಅಪಾಯ ಹೆಚ್ಚುತ್ತದೆ. ಕೊಕೇನ್ ಇನ್ಫಾರ್ಕ್ಷನ್ (ಟೊಶ್ಯೂಗಳ ನಾಶ)ಗಳುಂಟಾಗುವ ಸಂಭವತೆ ಹೆಚ್ಚಿಸಿ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ನಂತಹವುಗಳನ್ನು ಒಡ್ಡುತ್ತದೆ.[೮೯]

ಚಟ

ದಿನನಿತ್ಯ ಕೊಕೇನ್ ಬಳಸುವುದರಿಂದ ಮಾನಸಿಕವಾಗಿ ಕೊಕೇನ್ ಅವಲಂಬನ ಅಥವಾ ಚಟ ಹತ್ತಿಕೊಳ್ಳುತ್ತದೆ. ಕೊಕೇನ್ ಅವಲಂಬನದಿಂದ ಶರೀರಕ್ಕೆ ಹಾನಿ, ಸೋಮಾರಿತನ, ಮಾನಸಿಕ ರೋಗಗಳು, ಖಿನ್ನತೆ ಮತ್ತು ಅತಿಪ್ರಮಾಣದ ಸೇವನೆಯಿಂದ ಸಾವು ಸಂಭವ.

ಸ್ಥಾನಿಕ ಅರಿವಳಿಕೆಯಾಗಿ ಕೊಕೇನ್

ವೈದ್ಯಕೀಯ ುಪಯೋಗಗಳಿಗಾಗಿ ಕೊಕೇನ್ ಹೈಡ್ರೋಕ್ಲೋರೈಡ್.

ಐತಿಹಾಸಿಕ ದಾಖಲೆಗಳ ಮೇರೆಗೆ ಕೊಕೇನ್ ಕಣ್ಣು ಮತ್ತು ಮೂಗಿನ ಶಸ್ತ್ರಚಿಕಿತ್ಸೆಗಳಿಗೆ ಅರಿವಳಿಕೆಯ ವಸ್ತುವಾಗಿ ಬಳಸಲಾಗುತ್ತಿದ್ದು, ಈಗ ಬೆಚ್ಚಾಗಿ ಮೂಗಿನ ಮತ್ತು ಕಣ್ಣಿನ ಬಳಿಯ ಮೂಳೆಯ ಬಳಿಯ ನಾಳದ (ಲ್ಯಾಕ್ರಿಮಲ್ ನಾಳ) ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ುಪಯೋಗಿಸಲ್ಪಡುತ್ತಿದೆ. ಇದರ ಪ್ರಮುಖ ಕೊರತೆಗಳೆಂದರೆ ರಕ್ತನಾಳಗಳನ್ನು ಸಂಕುಚಿತಗೊಳಿಸುವಿಕೆ ಮತ್ತು ಹೃದಯನಾಳಗಳಲ್ಲಿ ವಿಷತ್ವ ಹರಡುವಿಕೆ. ನಿರ್ದಿಷ್ಟವಾಗಿ ಅದೇ ಬೇಕೆಂದಾಗ ಕೊಕೇನ್ ಒದಗಿಸಲಾಗುವುದಾದರೂ, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಕೊಕೇನ್ ಬದಲು ಸಂಯೋಜಿತ ಸ್ಥಾನಿಕ ಅರಿವಳಿಕೆಗಳಾದ ಬೆನ್ ಝೋಕೇಯ್ನ್, ಪ್ರೊಪಾರಾಕೇಯ್ನ್, ಲಿಗ್ನೋಕೇಯ್ನ್/ಝೈಲೋಕೇಯ್ನ್/ಲಿಡೋಕೇಯ್ನ್ ಮತ್ತು ಟೆಟ್ರಾಕೇಯ್ನ್ ಗಳನ್ನು ಬಳಸಲಾಗುತ್ತಿದೆ. ಶಸ್ತ್ರಚಿಕಿತ್ಸಾ ಸಮಯದಲ್ಲಿ ರಕ್ತನಾಳಗಳ ಸಂಕೋಚನ ಅಗತ್ಯವಿದ್ದಲ್ಲಿ (ಹಾಗಿದ್ದಾಗ ರಕ್ತಸ್ರಾವ ಕಡಿಮೆಯಾಗುವುದರಿಂದ) ಅರಿವಳಿಕೆಗಳಿಗೆ ರಕ್ತನಾಳಸಂಕೋಚಕಗಳಾದ ಫೆನೈಲೆಫ್ರೈನ್ ಅಥವಾ ಎಪಿನೆಫ್ರೈನ್ ಗಳನ್ನು ಸೇರಿಸಲಾಗುತ್ತದೆ. ಬಾಯಿ ಮತ್ತು ಶ್ವಾಸಕೋಶಗಳ ಹುಣ್ಣಿನ ಚಿಕಿತ್ಸೆಯ ಸಮಯದಲ್ಲಿ ಇದನ್ನು ಸ್ಥಾನಿಕ ಅರಿವಳಿಕೆಯಾಗಿ ಆಸ್ಟ್ರೇಲಿಯಾದಲ್ಲಿ ಈಗ ಬಳಸಲಾಗುತ್ತಿದೆ. ಕೆಲವು ENT (ಕಿವಿ, ಮೂಗು, ಗಂಟಲು)ತಜ್ಷರು ಒಮ್ಮೊಮ್ಮೆ ಮೂಗಿಗೆ ಶಾಖ ತಟ್ಟಿಸುವಂತಹ ಕಾಟೆರೈಝೇಷನ್ (ಬರೆ ಹಾಕುವಿಕೆ) ಚಿಕಿತ್ಸಾವಿಧಾನಗಳಲ್ಲಿ ಕೊಕೇನನ್ನು ಬಳಸುತ್ತಾರೆ. ಈ ಚಿಕಿತ್ಸಾಕ್ರಮದಲ್ಲಿ ಹತ್ತಿ ಉಣ್ಣೆ (ಕಾಡನ್ ವುಲ್)ಯ ಉಂಡೆಗಳನ್ನು ಕೊಕೇನ್ ನಲ್ಲಿ ಅದ್ದಿ ಮೂಗಿನ ಹೊಳ್ಳೆಗಳಲ್ಲಿ 10-15 ನಿಮಿಷಗಳ ನಂತರ ಶಾಖ (ಬರೆ) ನೀಡಲಾಗುವುದು. ಇದರಿಂದ ಮೂಗಿನ ಭಾಗ ದಡಗಟ್ಟುವಿಕೆ ಮತ್ತು ರಕ್ತನಾಳಸಂಕೋಚ ಎರಡೂ ಏಕಕಾಲದಲ್ಲಿ ನೆರವೇರುವುವು. ಹೀಗೆ ಉಪಯೋಗಿಸಿದಾಗಲೂ ಸಹ ಬಳಸಲ್ಪಟ್ಟ ಕೊಕೇನ್ ನ ಕೊಂಚ ಅಂಶ ಬಾಯಿ ಅಥವಾ ಮೂಗಿನ ಪದರಗಳ ಮೂಲಕ ದೇಹಕ್ಕೆ ಸೇರಿ ಕೊಂಚ ಪರಿಣಾಮಗಳು ಆಗಬಹುದು.

2005ರಲ್ಲಿ ಪಾರ್ಕಿನ್ ಸನ್ ಖಾಯಿಲೆಯ ಸ್ವಭಾವ ಪರೀಕ್ಷಣೆಗಾಗಿ ಕ್ಯೋಟೋ ವಿಶ್ವವಿದ್ಯಾಲಯದ ಆಸ್ಪತ್ರೆ ಯವರು ಕೊಕೇನನ್ನು ಫೆನೈಲೆಫ್ರೈನ್ ನೊಡನೆ ಜೊತೆಗೂಡಿಸಿ ಕಣ್ಣಿಗೆ ಹಾಕುವ ದ್ರವ (ಐ ಡ್ರಾಪ್ಸ್)ದ ರೂಪದಲ್ಲಿ ಉಪಯೋಗಿಸುವುದನ್ನು ಪ್ರಸ್ತಾಪಿಸಿದರು.[೯೦]

ಪದದ ವ್ಯುತ್ಪತ್ತಿ

"ಕೊಕೇನ್" ಪದವು "ಕೋಕಾ" ಪದದಿಂದ ಉಗಮವಾಗಿದ್ದು ಅಂತ್ಯಪ್ರತ್ಯಯ (ಸಫಿಕ್ಸ್)ವಾದ ಏನ್ ಎಂಬುದು ಅದನ್ನು ಸ್ಥಾನಿಕ ಅರಿವಳಿಕೆ(ಲೋಕಲ್ ಅನೆಸ್ತೆಟಿಕ್)ಯಾಗಿ ಉಪಯೋಗಿಸುವುದರಿಮದ ಸೇರಿಸಲಾಯಿತು. ಏನ್ ಎಂಬ ಸಫಿಕ್ಸನ್ನು (ಅಂತ್ಯಪ್ರತ್ಯಯವನ್ನು) ಸಂಯೋಜಿತ ಸ್ಥಾನಿಕ ಅರಿವಳಿಕೆಗಳ ಹೆಸರಿಗೆ ಜೋಡಿಸಿ ಉಪಯೋಗಿಸುವುದು ಪದ್ಧತಿ.

ಪ್ರಸ್ತುತ ನಿಷೇಧ

ಮಾದಕ ದ್ರವ್ಯಗಳ ವಿಷಯವಾಗಿ ಏಕ ಸಮಿತಿ ಮತ್ತು ಯುನೈಟೆಡ್ ನೇಷನ್ಸ್ ನ ಮಾದಕ ದ್ರವ್ಯಗಳ ಮತ್ತು ಮಾನಸಿಕ ಪರಿಣಾಮ ಬೀರುವ ವಸ್ತುಗಳ ವಾಣಿಜ್ಯ ನಿಷೇಧ ಸಮಿತಿ ಗಳ ನಿಯಂತ್ರಣದ ರೀತ್ಯಾ ಕೊಕೇನ್ ನ ಉತ್ಪಾದನೆ, ವಿತರಣೆ ಮತ್ತು ಮಾರಾಟಗಳು ಹತೋಟಿಯಲ್ಲಿ (ಮತ್ತು ಬಹತೇಕ ದೇಶಗಳಲ್ಲಿ ಕಾನೂನುಬಾಹಿರವೂ) ಬಂಧಿತವಾಗಿದೆ. ಅಮೆರಿಕದಲ್ಲಿ ಕೊಕೇನ್ ನ ತಯಾರಿಕೆ, ಆಮದು, ಹೊಂದುವಿಕೆ ಮತ್ತು ವಿತರಣೆಯನ್ನು 1970ರ ನಿಷೇಧಿತ ವಸ್ತುಗಳ ಮಸೂದೆ(ಕಂಟ್ರೋಲ್ಡ್ ಸಬ್ ಸ್ಟೆನ್ಸಸ್ ಆಕ್ಟ್) ಯ ಅಡಿಯಲ್ಲಿ ನಿಯಂತ್ರಿಸಲಾಗಿದೆ.

ಪೆರು ಮತ್ತು ಬೊಲಿವಿಯಾದಂತಹ ದೇಶಗಳು ಸ್ಥಳೀಯ ಬುಡಕಟ್ಟು ಜನಾಂಗ ದವರು ಸಾಂಪ್ರದಾಯಿಕ ಸೇವನೆಗಾಗಿ ಅಗತ್ಯವಾದ ಕೋಕಾ ಎಲೆಗಳ ವ್ಯವಸಾಯ ಕೈಗೊಳ್ಳಲು ಅನುಮತಿಸುತ್ತವಾದರೂ ಕೊಕೇನ್ ನ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುತ್ತವೆ. ಅಲ್ಲದೆ ಯೂರೋಪ್ ನ ಕೆಲವು ಭಾಗಗಳು ಮತ್ತು ಆಸ್ಟ್ರೇಲಿಯಾ ಸಂಸ್ಕರಿತ ಕೊಕೇನನ್ನು ವೈದ್ಯಕೀಯ ಅವಶ್ಯಕತೆಗಳಿಗೆ ಉಪಯೋಗಿಸಲು ಅನುಮತಿಸುತ್ತವೆ.

ನಿಷೇಧದ ಪರಿಣಾಮ

2004ರಲ್ಲಿ ಯುನೈಟೆಡ್ ನೇಷನ್ಸ್ ನೀಡಿದ ಮಾಹಿತಿಯ ಪ್ರಕಾರ, ಕಾನೂನು ಜಾರಿಪಡಿಸುವ ಅಧಿಕಾರಿಗಳು ವಿಶ್ವದಾದ್ಯಂತ 589 ಮೆಟ್ರಿಕ್ ಟನ್ ಗಳಷ್ಟು ಕೊಕೇನನ್ನು ವಶಪಡಿಸಿಕೊಂಡರು. ಕೊಲಂಬಿಯಾವು 188 ಟನ್, ಯುನೈಟೆಡ್ ಸ್ಟೇಟ್ಸ್ 166 ಟನ್, ಯೂರೋಪ್ 79 ಟನ್, ಪೆರು 14 ಟನ್, ಬೊಲಿವಿಯಾ 9 ಟನ್ ಮತ್ತು ವಿಶ್ವದ ಇತರ ದೇಶಗಳು 133 ಟನ್ ಗಳಷ್ಟು ಕೊಕೇನನ್ನು ವಶಪಡಿಸಿಕೊಂಡವು.[೯೧]

ನಿಷೇಧಿತ ವ್ಯಾಪಾರ

ಕೊಕೇನ್ ಇಟ್ಟಿಗೆಗಳು, ಸಾಮಾನ್ಯವಾಗಿ ಕೊಕೇನನ್ನು ಸಾಗಿಸುವಾಗ ಇರುವ ಆಕಾರ.

ಉತ್ಪಾದನಾ ಕ್ರಿಯಯಲ್ಲಿ ಹಲವು ಸ್ತರಗಳಲ್ಲಿ ಕೊಕೇನನ್ನು "ಹಾರ್ಡ್ ಡ್ರಗ್" (ಕಟ್ಟಾ ಮಾದಕದ್ರವ್ಯ) ಎಂದು ಪರಿಗಣಿಸಿ, ಹೊಂದಿರುವುದಕ್ಕೆ ಮತ್ತು ರವಾನೆಮಾಡುವುದಕ್ಕೆ ಹಲವಾರು ರೀತಿಯ ದಂಡಗಳನ್ನು ವಿಧಿಸಲಾಗುತ್ತದೆ. ಬೇಡಿಕೆ ಕಡಿಮೆಯಾಗದೆ ಅಷ್ಟೇ ಇರುವುದರಿಂದ ಕಾಳಸಂತೆಯಲ್ಲಿ ಕೊಕೇನ್ ದುಬಾರಿಯಾಗುತ್ತದೆ. ಕೊಆಕಾ ಎಲೆಗಳಂತಹ, ಸಂಸ್ಕರಿಸೆದಿರುವ ಕೊಕೇನಿನ ಕೊಳ್ಳು-ಮಾರುವಿಕೆ ಆಗಾಗ್ಗೆ ನಡೆದರೂ ಅದು ಬಹಳ ಅಪರೂಪ. ಏಕೆಂದರೆ ಪುಡಿಯ ರೂಪದ ಕೊಕೇನನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುವುದು ಅದಕ್ಕಿಂತಲೂ ಸುಲಭ ಮತ್ತು ಹೆಚ್ಚು ಲಾಭಕರ. ಮಾರುಕಟ್ಟೆಯಲ್ಲಿ ಇದರ ಮಾರಾಟ ಬೃಹತ್ ಮಾದರಿಯದಾಗಿದೆ: ಜನರಿಗೆ ತಲುಪುವ ಮಟ್ಟದಲ್ಲಿನ ಗ್ರಾಂಗೆ $100 ಬೆಲೆಯ 770 ಟನ್ ಕೊಕೇನ್ = ಸುಮಾರು $77 ಬಿಲಿಯನ್![ಸೂಕ್ತ ಉಲ್ಲೇಖನ ಬೇಕು]

ಉತ್ಪಾದನೆ

ಜಗತ್ತಿನ ಅತಿ ಹೆಚ್ಚು ಕೊಕೇನ್ ಉತ್ಪಾದನೆ ಕೊಲಂಬಿಯಾದಲ್ಲಿ ಆಗುತ್ತದೆ.[೯೨]ವೈಯುಕ್ತಿಕ ಉಪಯೋಗಗಳಿಗಾಗಿ ಸಣ್ಣ ಪ್ರಮಾಣದ ಕೊಕೇನನ್ನು ಹೊಂದಲು ಕೊಲಂಬಿಯಾವು 1994ಲ್ಲಿ ಕಾನೂನು ರೀತ್ಯಾ ಅವಕಾಶ ನೀಡಿದರೂ ಕೊಕೇನ್ ನ ಮಾರಾಟ ನಿಷೇಧ ಜಾರಿಯಲ್ಲಿದ್ದುದರಿಂದ ಸ್ಥಳೀಯವಾಗಿ ಕೋಕಾ ಬೆಳೆಯುವುದು ಹೆಚ್ಚಿ ಸ್ಥಳೀಯರ ಬೇಡಿಕೆಯನ್ನು ಹೆಚ್ಚುಕಡಿಮೆ ಪೂರೈಸಿತು.

ಜಗತ್ತಿನಲ್ಲಿ ವಾರ್ಷಿಕವಾಗಿ ಬೆಳೆಯುವ ಕೊಕೇನ್ ನ ಮೂರನೆಯ ಒಂದು ಭಾಗದಷ್ಟನ್ನು ಕೊಲಂಬಿಯಾ ಉತ್ಪಾದಿಸುತ್ತಿದ್ದು, ಅದಕ್ಕಾಗಿ ಕೊಕೇನ್ ನ ಮೂಲವಸ್ತುಗಳನ್ನು ಪೆರುವಿನಿಂದ(ಪ್ರಮುಖವಾಗಿ ಹುವಾಲ್ಲಾಗ ಕಣಿವೆಯಿಂದ)ಬೊಲಿವಿಯಾದಿಂದ ಆಮದು ಮಾಡಿಕೊಳ್ಳುವುದಲ್ಲದೆ ತಮ್ಮಲ್ಲೇ ಬೆಳೆದ ಕೋಕಾದಿಂದಲೂ ತೆಗೆದುಕೊಳ್ಳುತ್ತಾರೆ. 1998ರಲ್ಲಿ ಕೊಲಂಬಿಯಾದಲ್ಲಿ ಬೆಳೆದ ಕಟಾವಿಗೆ ಅನುವಾದ ಕೋಕಾ ಗಿಡಗಳಿಂದ 28.5% ಹೆಚ್ಚಿನ ಇಳುವರಿಯಾಯಿತು. ಅದೇ ಸಮಯದಲ್ಲಿ ಪೆರು ಮತ್ತು ಬೊಲಿವಿಯಾಗಳಲ್ಲಿ ಬೆಳೆಯ ಇಳುವರಿ ಇಳಿಮುಖವಾದುದರಿಂದ ಕೊಲಂಬಿಯಾವು, 1990ರ ದಶಕದಲ್ಲಿ, ಜಗದಲ್ಲೇ ಅತಿ ಹೆಚ್ಚು ಕೋಕಾ ವ್ಯವಸಾಯ ಭೂಮಿಯನ್ನು ಹೊಂದಿದ ದೇಶವಾಯಿತು. ಬುಡಕಟ್ಟು ಜನರಿಂದ, ತಮ್ಮ ಸಾಂಪ್ರದಾಯಿಕ ಸಂದರ್ಭಗಳಿಗೆ ಬೇಕಾದ, ಸರ್ಕಾರದ ಅನುಮತಿಯ ಮೇರೆಗೆ ಬೆಳೆಸುವ, ಕೋಕಾದ ಬೆಳೆಯು,ದೇಶದ ಕೋಕಾ ಬೆಳೆಗೆ ಹೋಲಿಸಿದರೆ ತಿಲಪಮಾತ್ರವಷ್ಟೆ. ಹೀಗೆ ದೇಶವೇ ಬೆಳೆಸುವ ಬೆಳೆಯ ಬಹುಪಾಲು ಕಾನೂನುಬಾಹಿರ ಮಾದಕವಸ್ತು ವ್ಯಾಪಾರಕ್ಕೆ ಉಪಯೋಗಿಸಲ್ಪಡುತ್ತದೆ.

ಕೊಕೇನ್ ಬೆಳೆಯುವ ಜಮೀನುಗಳನ್ನೇ ಬಂಜರಾಗಿಸಲು ಮಾಡಿದ ಯತ್ನದಿಂದ ಕೊಲಂಬಿಯಾದ ಹಲವಾರು ಕೋಕಾ ಬೆಳೆಯುವ ಪ್ರದೇಶಗಳಲ್ಲಿ ಕೃಷಿ ವಾಣಿಜ್ಯಕ್ಕೆ ಧಕ್ಕೆಯಾಗಿ, ಆ ಬಂಜರುಕ್ರಿಯಗೆ ತೀವ್ರ ಪ್ರತಿರೋಧ ಒಡ್ಡುವ ಕೋಕಾ ತಳಿಗಳು ಉತ್ಪನ್ನವಾಗಿವೆ. ಈ ತಳಿಗಳು ನೈಸರ್ಗಿಕ ಕೊಡುಗೆಗಳೋ ಅಥವಾ ಮನುಜನ ಕೈವಾಡದಿಂದ ಬಲವಂತವಾಗಿ ಬದಲಾದ ಗುಣಗಳುಳ್ಳವೋ ಎಂಬುದು ಅಸ್ಪಷ್ಟ. ಈ ತಳಿಗಳು ಮೊದಲ ತಳಿಗಳಿಗಿಂತಲೂ ಸಾರಯುಕ್ತವಾಗಿದ್ದು, ರಫ್ತು ಮಾಡಲು ಕಾರಣವಾದ ಮಾದಕವಸ್ತು ಉದ್ಯಮನಿರತರಿಗೆ ಪ್ರತಿ ಕಾರ್ಟೆಲ್ ಗೂ ಹೆಚ್ಚು ಹೆಚ್ಚಿನ ಲಾಭ ದೊರಕಿತು. ಉತ್ಪಾದನೆಯು ಕೆಲಕಾಲ ಕುಂಠಿತವಾದರೂ, ದೊಡ್ಡ ಜಮೀನುದಾರರಿಗಿಂತಲೂ, ಸಣ್ಣ ರೈತರೂ ಕೋಕಾ ಬೆಳೆಯಲು ಆರಂಭಿಸಿದಮೇಲೆ ಸಾಕಷ್ಟು ಪ್ರಮಾಣದಲ್ಲಿ ಕೋಕಾ ದೊರೆಯುವಂತಾಯಿತು.

ಕೋಕಾ ಕೃಷಿಯು ರೈತರಿಗೆ ಆಕರ್ಷಕವೂ, ಕೆಲವೊಮ್ಮೆ ಅನಿವಾರ್ಯವೂ ಆಗಿದೆ; ಎಂದೂ ಕಡಿಮೆಯಾಗದ ಜಾಗತಿಕ ಮಟ್ಟದ ಬೇಡಿಕೆ, ಇತರೆ ಉದ್ಯೋಗಾವಕಾಶಗಳು ಇಲ್ಲದಿರುವಿಕೆ, ಬೇರೆ ಬೆಳೆಗಳು ತರುವ ಅತಿ ಕಡಿಮೆ ಲಾಭ, ಬಂಜರು ಮಾಡಲ್ಪಟ್ಟ ಕೊಕೇನೇತರ ಜಮೀನುಗಳು ಮತ್ತು ಕೊಕೇನಿನ ಹೊಸ ತಳಿಗಳ ವ್ಯಾಪಕತೆಗಳನ್ನು ಬೆಳೆಗಾರರು ತೂಗಿ ನೀಡಿ ಆರ್ಥಿಕವಾಗಿ ಕೋಕಾವೇ ಲಾಭ ಹಾಗೂ ಉದ್ಯೋಗಗಳೆರಡಕ್ಕು ಸರಿಯಾದ ಬೆಳೆಯೆಂದು ಮನಗಂಡು, ಅದಕ್ಕೆ ಆಕರ್ಷಿತರಾಗಿದ್ದಾರೆ.

2000-2004ರ ಆಂಡ್ರಿಯನ್ ಪ್ರದೇಶದ ಕೋಕಾ ಕೃಷಿ ಮತ್ತು ಶುದ್ಧ ಕೊಕೇನ್ ಉತ್ಪಾದನೆಯ ಸಾಧ್ಯತೆಗಳ ಅಂದಾಜು
[೯೩]
20002001200220032004
ಒಟ್ಟು ಕೃಷಿ(km)187522182007.516631662
ಶುದ್ಧವಾದ ಕೊಕೇನ್ ಉತ್ಪಾದನೆಯ ಸಾಧ್ಯತೆ ಟನ್ ಗಳು770925830680645

ಸಂಯೋಜನೆ

ನೈಸರ್ಗಿಕ ಮೂಲಗಳಿಂದ ುತ್ಪನ್ನವಾದ ಕೊಕೇನ್ ಸುಲಭವಾಗಿ ಕಣ್ಣಿಗೆ ಬೀಳುವ ಸಾಧ್ಯತೆಗಳು ಹೆಚ್ಚಾದುದರಿಂದ ಮತ್ತು ತೀರದ ಹೊರಗಣ ಮೂಲಗಳು ನಂಬಲರ್ಹವಾದುದು ವಿರಳವಾದುದರಿಂದ ಹಾಗೂ ಅಂತರರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ಹೆಚ್ಚು ಅಪಾಯಗಳಿರುವುದರಿಂದ, ಸಂಯೋಜಿತ ಕೊಕೇನ್ ಕಾನೂನುಬಾಹಿರವಾಗಿ ನಡೆಸುವ ಉದ್ಯಮಕ್ಕೆ ವರದಾನವಾಗಿ ಪರಿಣಮಿಸುತ್ತದೆ. ಈ ಕೊಕೇನನ್ನು ಗೋಪ್ಯವಾಗಿರುವ ಪ್ರಯೋಗಾಲಯಗಳಲ್ಲಿ ತಯಾರಿಸಿ ವಿತರಿಸಬಹುದು. ಮೀಥಾಂಫೆಟಾಮೈನ್ ಈ ರೀತಿ ಕಾನೂನಿಗೆ ಹೊರತಾಗಿ ಮಾರಲ್ಪಡುವ ಸಂಯೋಜಿತ ಕೊಕೇನ್ ಗಳಲ್ಲೊಂದು. ಆದರೆ ನೈಸರ್ಗಿಕ ಕೊಕೇನ್ ಇಂದಿಗೂ ಕಡಿಮೆ ಖರ್ಚಿನ ಮತ್ತು ಉತ್ತಮ ಗುಣಮಟ್ಟದ ಕೊಕೇನ್ ಪೂರೈಕೆಯಾಗಿದೆ. ಸಂಪೂರ್ಣ ಕೊಕೇನ್ ಸಂಯೋಜನೆ ಮಾಡುವುದು ಬಹಳ ಅಪರೂಪ. ಕೊಕೇನ್ ನ ಪ್ರತಿರೂಪಗಳ ರಚನೆ (ಕೊಕೇನ್ ನಲ್ಲಿ 4 ಚಿರಲ್ ಕೇಂದ್ರಗಳಿವೆ - 1R,2R,3S,5S - ಆದ್ದರಿಂದ 16 ವಿಧದ ಪ್ರತಿರೂಪಗಳು ಮತ್ತು ಅದರ ಬಿಂಬಗಳನ್ನು ನಿರ್ಮಿಸುವುದು ಸಾಧ್ಯ) ಮತ್ತು ಸಂಯೋಜಿತವಾಗುವಾಗ ದೊರೆಯು ಅಡ್ಡ ಉತ್ಪನ್ನ (ಬೈಪ್ರಾಡಕ್ಟ್) ಗಳಿಂದ ಕೊಕೇನ್ ನ ಶುದ್ಧತೆ ಮತ್ತು ಇಳುವರಿ ತಗ್ಗುತ್ತವೆ. ಗಮನಿಸಿ, 'ಸಿಂಥೆಟಿಕ್ ಕೊಕೇನ್' ಮತ್ತು 'ನ್ಯೂ ಕೊಕೇನ್' ಎಂಬ ಹೆಸರುಗಳನ್ನು ಫೆನ್ಸಿಕ್ಲಿಡೈನ್ (PCP) ಮತ್ತು ಇತರೆ ರೂಪಿತ ಮಾದಕದ್ರವ್ಯಗಳಿಗೆ ತಪ್ಪಾಗಿ ಆರೋಪಿಸಲಾಗುತ್ತದೆ.

ಸಾಗಣಿಕೆ ಮತ್ತು ವಿತರಣೆ

ಕಾರಂಗೋದಲ್ಲಿ ಕಳ್ಳಸಾಗಣೆ ಮಾಡಲ್ಪಟ್ಟ ಕೊಕೇನ್, ೨೦೦೮.

ವ್ಯವಸ್ಥಿತವಾಗಿ ಕಾರ್ಯವೆಸಗುವ ಕ್ರಿಮಿನಲ್ ಗ್ಯಾಂಗ್ ಗಳು ಕೊಕೇನ್ ದಂಧೆಯನ್ನು ವ್ಯಾಪಕವಾಗಿ ನಡೆಸಿಕೊಂಡುಬರುತ್ತಿವೆ. ಕೊಕೇನ್ ನ ಬಹವಂಶವನ್ನು ಬೆಳೆಯುವುದದು ಮತ್ತು ಉತ್ಪಾದಿಸುವುದು ದಕ್ಷಿಣ ಅಮೆರಿಕ ದಲ್ಲಿ, ಅದರಲ್ಲೂ ಕೊಲಂಬಿಯಾ, ಬೊಲಿವಿಯಾ, ಪೆರು ಪ್ರಾಂತ್ಯಗಳಲ್ಲಿ ಮತ್ತು ಅಮೆರಿಕ ಮತ್ತು ಯೂರೋಪ್ ಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಅಮೆರಿಕವು ಜಗತ್ತಿನ ಅತಿ ಹೆಚ್ಚು ಕೊಕೇನ್ ಸೇವಿಸುವವರ ತಾಣವಾಗಿದೆ[೯೪] ಯಾದುದರಿಂದ ಅಲ್ಲಿ ಅದನ್ನು ಬಹಳ ದುಬಾರಿ ಬೆಲೆಗೆ ಮಾರುತ್ತಾರೆ. ಸಾಮಾನ್ಯವಾಗಿ US ನಲ್ಲಿ ಒಂದು ಗ್ರಾಂಗೆ $80–$೧೨೦ ಮತ್ತು 3.5ಗ್ರಾಂಗಳಿಗೆ (ಔನ್ಸ್ ನ 1/8 ಭಾಗ ಅಥವಾ ಒಂದು "ಎಯ್ಟ್ ಬಾಲ್) $250–300.

ಕೆರಿಬಿಯನ್ ಮತ್ತು ಮೆಕ್ಸಿಕನ್ ಮಾರ್ಗಗಳು

ಕೊಕೇನ್ ಸರಕುಗಳು ಹಡಗಿನಲ್ಲಿ ದಕ್ಷಿಣ ಅಮೆರಿಕದಿಂದ ಹೊರಟು ಮೆಕ್ಸಿಕೋ ಅಥವಾ ಮಧ್ಯ ಅಮೆರಿಕಾದ ತಲುಪಿ, ಅಲ್ಲಿಂದ ಭೂಸಾರಿಗೆ ಅಥವಾ ವಿಮಾನದ ಮೂಲಕ ುತ್ತರ ಮೆಕ್ಸಿಕೋದ ವಿತರಣಾ ಸ್ಥಳಗಳಿಗೆ ರವಾನೆಯಾಗುತ್ತವೆ. ಅಲ್ಲಿ ಕೊಕೇನನ್ನು ಸಣ್ಣಸಣ್ಣ ಹೊರೆಗಳಾಗಿ ವಿಂಗಡಿಸಿ U.S.-ಮೆಕ್ಸಿಕೋ ಗಡಿಯ ಮೂಲಕ ಕಳ್ಳಸಾಗಣೆ ಮಾಡಲ್ಪಡುತ್ತದೆ. .ಅಮೆರಿಕದಲ್ಲಿನ ಪ್ರಮುಖ ಆಮದು ಕೇಂದ್ರಗಳೆಂದರೆ ಅರಿಝೋನಾ, ದಕ್ಷಿಣ ಕ್ಯಾಲಿಫೋರ್ನಿಯಾ, ದಕ್ಷಿಣ ಫ್ಲೋರಿಡಾ ಮತ್ತು ಟೆಕ್ಸಾಸ್. ಸಾಮಾನ್ಯವಾಗಿ, ಭೂವಾಹನಗಳನ್ನು U.S.-ಮೆಕ್ಸಿಕೋ ಗಡಿ ಮೀರಿ ಓಡಿಸಲಾಗುತ್ತದೆ (ಚಾಲನಗೊಳಿಸಲಾಗುತ್ತದೆ). ಕೊಕೇನ್ ನ ಅರವತ್ತೈದು ಪ್ರತಿಶತಾಂಶ ಮೆಕ್ಸಿಕೋ ಮೂಲಕ ಅಮೆರಿಕವನ್ನು ಸೇರಿದರೆ ಮಿಕ್ಕ ಮೂವತ್ತೈದು ಪ್ರತಿಶತದ ಬಹು ಭಾಗವು ಫ್ಲೋರಿಡಾ ಮೂಲಕ ರವಾನೆಯಾಗುತ್ತದೆ.[೯೫]

ಕೊಲಂಬಿಯಾ ಮೂಲದ ಕೊಕೇನ್ ಸಾಗಣೆದಾರರು, ಮತ್ತು ಇತ್ತೀಚೆಗೆ ಮೆಕ್ಸಿಕೋದವರು,ಇಡೀ ಕೆರಿಬಿಯನ್, ಬಹಾಮಾ ಸರಣಿದ್ವೀಪಗಳು ಮತ್ತು ದಕ್ಷಿಣ ಫ್ಲೋರಿಡಾ ಗಳಲ್ಲಿ ಕಳ್ಳಸಾಗಣೆ ಮಾಡಲು ಹಲವಾರು ಸ್ತರಗಳನ್ನು ರೂಪಿಸಿಕೊಂಡಿದ್ದಾರೆ. ಕೊಕೇನನ್ನು ಸಾಗಿಸಲು ಆವರು ಆಗಾಗ್ಗೆ ಡೊಮಿನಿಕನ್ ರಿಪಬ್ಲಿಕ್ ಅಥವಾ ಮೆಕ್ಸಿಕೋದಿಂದ ಸಾಗಣೆದಾರರನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುತ್ತಾರೆ. ಆ ಸಾಗಣೆದಾರರು ಕೊಕೇನನ್ನು ಅಮೆರಿಕದ ಮಾರುಕಟ್ಟೆಗೆ ತಲುಪಿಸಲು ನಾನಾ ಕಳ್ಳಮಾರ್ಗಗಳನ್ನು ಉಪಯೋಗಿಸುತ್ತಾರೆ. ಇವುಗಳಲ್ಲಿ ಬಹಾಮಾ ದ್ವೀಪಗಳಲ್ಲಿ ಅಥವಾ ಪ್ಯುಯೆರ್ಟೋ ರಿಕೋದ ತೀರದ ಆಚೆಗೆ 500-700 ಕಿಲೋಗ್ರಾಮನಷ್ಟು ಕೊಕೇನನ್ನು ವಿಮಾನದಿಂದ ಕೆಳಗೆ ಬಿಸುಡುವುದು, ಸಮುದ್ರಮಧ್ಯದಲ್ಲಿ ದೋಣಿಯಿಂದ ದೋಣಿಗೆ 500–2,೦೦೦ ಕಿಲೋಗ್ರಾಂ ರವಾನಿಸುವುದು ಮತ್ತು ಮಿಯಾಮಿ ಬಂದರಿನ ಮೂಲಕ ವ್ಯಾಪಾರದ ಸರಕಾಗಿ ಟನ್ ಗಟ್ಟಲೆ ಕೊಕೇನನ್ನು ಕಳುಹಿಸುವುದೂ ಸೇರಿವೆ.

ಚಿಲಿ ಮಾರ್ಗ

ಕೊಕೇನ್ ಸಾಗಣೆಯ ಮತ್ತೊಂದು ಮಾರ್ಗ ಚಿಲಿಯ ಮೂಲಕವಾಗಿದೆ. ಬೊಲಿವಿಯಾಗೆ ಬಹಳ ಹತ್ತಿರದಲ್ಲಿ ಚಿಲಿಯ ಉತ್ತರದ ಬಂದರುಗಳು ಇರುವುದರಿಂದ ಬೊಲಿವಿಯಾದಲ್ಲಿ ಉತ್ಪನ್ನವಾದ ಸರಕನ್ನು ಈ ದಾರಿಯಲ್ಲಿ ಸಾಗಿಸಲಾಗುತ್ತದೆ. ಮರುಭೂಮಿಯಂತೆ ಒಣಗಿರುವ ಬೊಲಿವಿಯಾ-ಚಿಲಿ ಗಡಿಯನ್ನು ಸುಲಭವಾಗಿ 4x4 ವಾಹನಗಳಲ್ಲಿ ದಾಟಿ ನಂತರ ಲಿಕ್ವಿಕ್ಯೂ ಮತ್ತು ಆಂಟೋಫಾಗಸ್ಟಾ ಬಂದರುಗಳಿಗೆ ಸಾಗಿ ಸೇರಬಹುದು. ಚಿಲಿಯಲ್ಲಿ ಪೆರು ಮತ್ತು ಬೊಲಿವಿಯಾಗಳಿಗಿಂತಲೂ ಕೊಕೇನ್ ಹೆಚ್ಚು ಬೆಲೆಗೆ ಮಾರಲಾಗುತ್ತದೆ. ಆದರೆ ಕೊಕೇನ್ ನ ಕೊನೆಯ ತಾಣ ಯೂರೋಪ್ ನ ಸ್ಪೇಯ್ನ್ ದೇಶ. ಇಲ್ಲಿ ದಕ್ಷಿಣ ಅಮೆರಿಕದಿಂದ ಬಂದು ನೆಲೆಸಿದವರು ಮಾದಕದ್ರವ್ಯಗಳ ವ್ಯಾಪಾರದ ಒಂದು ದೊಡ್ಡ ಜಾಲವನ್ನೇ ಹೊಂದಿದ್ದಾರೆ.

ತಂತ್ರಗಳು

ಕೊಕೇನನ್ನು ಕಿಲೋಗ್ರಾಂ ಪ್ರಮಾಣದಲ್ಲಿ ಗಡಿಯಿಂದ ಹೊರಗೊಯ್ಯಲು ಅದನ್ನು ಒಯ್ಯುವಂತಹ, "ಮ್ಯೂಲ್ಸ್"(ಆಥವಾ "ಮುಲಾಸ್")ಗಳೆಂದು ಕರೆಯಲ್ಪಡುವ ಜನರನ್ನು ಉಪಯೋಗಿಸುತ್ತಾರೆ. ಈ ಮ್ಯೂಲ್ ಗಳು ಆ ಚೀಲಗಳನ್ನು ಕಾನೂನುರೀತ್ಯಾ, ಎಂದರೆ ಬಂದರು ಅಥವಾ ವಿಮಾನನಿಲ್ದಾಣದಿಂದ, ಗಡಿ ದಾಟುವುದರ ಮೂಲಕ ಅಥವಾ ಕಾನೂನಿನ ಚೌಕಟ್ಟಿಗೆ ಸಿಗದಂತೆ ಬೇರೆಲ್ಲಿಂದಲಾದರೂ ಅದನ್ನು ಸಾಗಿಸುತ್ತಾರೆ. ಮಾದಕವಸ್ತಗಳನ್ನು ಅವರ ಕಾಲಿಗೆ ಅಥವಾ ಸೊಂಟಕ್ಕೆ ಲಗತ್ತಿಸಿಯೋ ಅಥವಾ ಅವರ ಚೀಲಗಳಲ್ಲಿ ಅವಿಸಿಟ್ಟೋ ಅಥವಾ ಅವರ ದೇಹದಲ್ಲಿ ಬಚ್ಚಿಟ್ಟೋ ಕಳುಹಲಾಗುತ್ತದೆ. ಮ್ಯೂಲ್ ಕಾನೂನಿಗೆ ಸಿಗದೆ ಗಡಿ ದಾಟಿದರೆ ಆ ಗ್ಯಾಂಗ್ ಗಳಿಗೆ ಹೇರಳ ಲಾಭವಾಗುತ್ತದೆ. ಆದರೆ ಅವನೋ ಅಥವಾ ಅವಳೋ ಸಿಕ್ಕಿಹಾಕಿಕೊಂಡರೆ ಆ ಗ್ಯಾಂಗ್ ಗಳು ತಮ್ಮ ಸಂಪರ್ಕವನ್ನು ಕಡಿದುಕೊಳ್ಳುತ್ತವೆ ಮತ್ತು ಆ ಮ್ಯೂಲ್ ಸಾಮಾನ್ಯವಾಗಿ ತಾನೇ ಕಳ್ಳಸಾಗಣೆಯ ಆರೋಪ ಹೊತ್ತು ಶಿಕ್ಷೆಗೆ ಸಜ್ಜಾಗಬೇಕಾಗುತ್ತದೆ.

ಪಶ್ಚಿಮ ಕೆರಿಬಿಯನ್-ಗಲ್ಫ್ ಆಫ್ ಮೆಕ್ಸಿಕೋ ಪ್ರದೇಶದ ವಿತರಣಾ ಕೇಂದ್ರಗಳಿಗೆ ಕೊಕೇನನ್ನು ಕಳ್ಳಸಾಗಣೆ ಮಾಡಲು ದೊಡ್ಡ ಸರಕು ಒಯ್ಯುವ ಹಡಗುಗಳನ್ನೂ ಉಪಯೋಗಿಸಲಾಗುತ್ತದೆ. ಈ ಹಡಗುಗಳು 150-200 ಅಡಿ (50-80 ಮೀಟರ್) ಉದ್ದದ ಕರಾವಳಿ ಸರಕುಸಾಗಿಸುವ ಹಡಗುಗಳಾಗಿದ್ದು ಸರಾಸರಿ 2.5 ಟನ್ ಗಳಷ್ಟು ಕೊಕೇನನ್ನು ಒಯ್ಯುತ್ತವೆ. ಮೀನುಗಾರಿಕೆಯ ವ್ಯಾಪಾರದ ಹಡಗುಗಳನ್ನೂ ಕಳ್ಳಸಾಗಣೆ ಕಾರ್ಯಕ್ಕೆ ಬಳಸಲಾಗುತ್ತದೆ. ಹೆಚ್ಚು ಮೋಜಿನ ವಹಿವಾಟುಗಳಿರುವ ಪ್ರದೇಶಗಳಲ್ಲಿ ಕಳ್ಳಸಾಗಣೆದಾರರೂ ಗೋ-ಫಾಸ್ಟ್ ಬೋಟ್ ನಂತಹ, ಸ್ಥಳೀಯ ಜನಾಂಗದವರು ಉಪಯೋಗಿಸುವ ನಾವೆಗಳನ್ನೇ ಬಳಸುತ್ತಾರೆ.

ಅತ್ಯಾಧುನಿಕವಾದ ದ್ರಗ್ ಸಬ್ಸ್ ಇತ್ತೀಚಿಗೆ ಕೊಕೇನನ್ನು ಉತ್ತರ ಕೊಲಂಬಿಯಾದಿಂದ ರವಾನಿಸಲು ಮಾದಕದ್ರವ್ಯ ದಂಧೆಯವರು ಉಪಯೋಗಿಸುತ್ತಿರುವ ಸಾಧನವೆಂದು ಮಾರ್ಚ್ 20, 2008 ರ ಒಂದು ವರದಿ ಹೇಳುತ್ತದೆ. ಈ ಸಬ್ ಮೆರಿನ್ ಗಳು ಮೊದಲಿಗೆ ಮಾದಕದ್ರವ್ಯಮಾರಾಟದ ಯುದ್ಧದಲ್ಲಿ ಒಂದು ಥಳುಕಿನ ಸಾಧನ ಮಾತ್ರವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ವೇಗದಲ್ಲೂ, ಸಮುದ್ರಯಾನಕ್ಕೆಯೋಗ್ಯವಾದ ಗುಣಗಳಿಂದಲೂ ಮತ್ತು ಈ ಮೊದಲಿನ ಮಾದರಿಯವುಗಳಿಗಿಂತಲೂ ಹೆಚ್ಚಿನ ಹೊರೆ ಹೊರಲು ಸಮರ್ಥವಾಗಿರುವುದರಿಂದಲೂ ಅವುಗಳ ಬಳಕೆ ಹೆಚ್ಚುತ್ತಿದೆಯೆಂದು ಅವುಗಳನ್ನು (ಸಬ್ ಮೆರೀನ್ ಗಳನ್ನು) ಹಿಡಿದವರ ಅಂಬೋಣವಾಗಿದೆ.[೯೬]

ಗ್ರಾಹಕರಿಗೆ ಮಾರಾಟ

ಕೊಕೇನ್ ಎಲ್ಲಾ ಪ್ರಮುಖ ರಾಷ್ಟ್ರಗಳ ಎಲ್ಲಾ ಪ್ರಮುಖ ನಗರಗಳಲ್ಲೂ ಸುನಭವಾಗಿ ದೊರೆಯುತ್ತದೆ. ಸಮ್ಮರ್ 1998 ಪಲ್ಸ್ ಚೆಕ್ ಎಂಬ, U.S. ಆಫೀಸ್ ಆಫ್ ನ್ಯಾಷನಲ್ ಡ್ರಗ್ ಕಂಟ್ರೋಲ್ ಪಾಲಿಸಿ ಪ್ರಕಟಿಸಿದ ವರದಿಯು ಕೊಕೇನ್ ಉಪಯೋಗವು ದೇಶದ ಉದ್ದಗಲಕ್ಕೂ ಸ್ಥಿರವಾಗಿದೆ, ಸ್ಯಾನ್ ಡೀಗೋ, ಬ್ರಿಡ್ಜ್ ಪೋರ್ಟ್, ಮಿಯಾಮಿ ಮತ್ತು ಬೋಸ್ಟನ್ ನಲ್ಲಿ ಕೊಂಚ ಹೆಚ್ಚಾಗಿದೆಯೆಂಬ ಸುದ್ದಿಯಿದೆ ಎನ್ನುತ್ತದೆ. ಪಶ್ಚಿಮ ದೇಶಗಳಲ್ಲಿ ಕೊಕೇನ್ ಬಳಕೆ ಕಡಿಮೆಯಿದ್ದು, ಇದಕ್ಕೆ ಕಾರಣ ಕೊಕೇನ್ ಬದಲಾಗಿ ಮೀಥಾಂಫೆಟಾಮೈನ್ ಅನ್ನು ಸೇವಿಸುತ್ತಿದ್ದಾರೆ ಎಂದಿದೆ; ಮೀಥಾಂಫೆಟಾಮೈನ್ ಕೊಕೇನ್ ಗಿಂತಲೂ ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ದೀರ್ಘಕಾಲಿಕ ಅಮಲನ್ನು ನೀಡುತ್ತದೆ. ಕೊಕೇನ್ ಬಳಸುವವರ ಸಂಖ್ಯೆ ಈಗಲೂ ಬಹಳವೇ ಇದ್ದು ನಗರದಲ್ಲಿ ವಾಸಿಸುವ ಯುವಕರು ಇದಕ್ಕೆ ಹೆಚ್ಚು ದಾಸರಾಗುತ್ತಿದ್ದಾರೆ.

ಈ ಮೊದಲಿಗೆ ಹೇಳಿದಂತಷ್ಟೇ ಅಲ್ಲದೆ, ಕೊಕೇನನ್ನು "ಬಿಲ್ ಸೈಝ್" ಗಳಲ್ಲು ನೀಡಲಾಗುವುದು. ಉದಾಹರಣೆಗೆ $10ಕ್ಕೆ ಒಂದು "ಡೈಮ್ ಬ್ಯಾಗ್", ಎಂದರೆ ಬಹಳ ಸಣ್ಣ ಪ್ರಮಾಣದ, (0.1–0.15 g)ಕೊಕೇನ್ 20 ಡಾಲರ್ ಗೆ .15–.3 g. ಆದರೆ ಲೋಯರ್ ಟೆಕ್ಸಾಸ್ ನಲ್ಲಿ ಕೊಕೇನ್ ಪಡೆಯುವುದು ಸುಲಭವಾದುದರಿಂದ ಮಾರಾಟದ ಬೆಲೆಯೂ ಕಡಿಮೆಯಿರುತ್ತದೆ. 0.4g ಡೈಮ್ ಚೀಲಕ್ಕೆ $10, 0.8-1.0 ಗ್ರಾಮಗೆ $20 ಮತ್ತು ಒಂದು 8-ಬಾಲ್ (3.5g) $60 ರಿಂದ $80 ಡಾಲರ್ ಗಳಿಗೆ ಮಾರಾಟವಾಗುತ್ತದೆ. ಮಾರುವವನು ಮತ್ತು ಕೊಕೆಣ್ ನ ಗುಣಮಟ್ಟದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಈ ಪ್ರಮಾಣಗಳು ಮತ್ತು ದರಗಳು ಯುವಕರಿಗೆ ಅತಿ ಪ್ರಿಯವಾದವು; ಏಕೆಂದರೆ ಈ ಪ್ರಮಾಣಗಳನ್ನು ದೇಹದಲ್ಲಿ ಬಚ್ಚಿಟ್ಟುಕೊಳ್ಳುವುದು ಸುಲಭ ಮತ್ತು ದರಗಳು ಬಲು ಕಡಿಮೆ. ಗುಣಮಟ್ಟ ಮತ್ತು ದರಗಳು ಪೂರೈಕೆ ಮತ್ತು ಬೇಡಿಕೆಗಳ ಆಧಾರದ ಮೇಲೆ ಇದ್ದಕ್ಕಿದ್ದಂತೆ ಬದಲಾಗಬಹುದು; ಅಂತೆಯೇ ಭೌಗೋಳಿಕ ಪ್ರದೇಶಗಳ ಆಧಾರವಾಗಿಯೂ ದರ ಬದಲಾಗಬಹುದು.[೯೭]

ಯೂರೋಪಿಯನ್ ಮಾನೀಟರಿಂಗ್ ಸೆಂಟರ್ ಫಾರ್ ಡ್ರಗ್ಸ್ ಅಂಡ್ ಡ್ರಗ್ ಅಡಿಕ್ಷನ್ (ಮಾದಕ ವಸ್ತುಗಳು ಮತ್ತು ಮಾದಕದ್ರವ್ಯವ್ಯಸನ ನಿರೀಕ್ಷಣಾ ಕೇಂದ್ರ, ಯೂರೋಪ್) ಯೂರೋಪಿಯನ್ ಬಹುತೇಕ ದೇಶಗಳಲ್ಲಿ ಕೊಕೇನ್ ನ ಮಾರಾಟದ ಬೆಲೆಯು ಪ್ರತಿ ಗ್ರಾಂಗೆ 50€ ರಿಂದ 75€ ಇದೆ, ಸೈಪ್ರಸ್, ರೋಮಾನಿಯಾ, ಸ್ವೀಡನ್ ಮತ್ತು ಟರ್ಕಿಗಳಲ್ಲಿ ಮಾತ್ರ ಇದಕ್ಕಿಂತಲೂ ಹೆಚ್ಚಿನ ಬೆಲೆ ಇದೆ ಎಂದು ವರದಿ ಮಾಡಿದೆ.[೯೮]

ಕೊಕೇನ್ ಚೀಲಗಳು, ಹಣ್ಣಿನ ರುಚಿಯೊಂದಿಗೆ ಕಲಬೆರಕೆಗೊಂಡದ್ದು.

ಬಳಕೆ

ಜಾಗತಿಕ ವಾರ್ಷಿಕ ಕೊಕೇನ್ ಬಳಕೆಯು, ಈಗಿನ ಮಾಹಿತಿಯ ಪ್ರಕಾರ, ಸುಮಾರು 600 ಮೆಟ್ರಿಕ್ ಟನ್ ಗಳಾಗಿದ್ದು, ಅಮೆರಿಕವು ಸುಮಾರು 300 ಮೆಟ್ರಿಕ್ ಟನ್ ಗಳನ್ನು, ಎಂದರೆ ವಿಶ್ವದ ಸುಮಾರು 50% ಅನ್ನೂ, ಯೂರೋಪ್ ಸುಮಾರು 250 ಟನ್, ಎಂದರೆ 25% ಅನ್ನೂ, ಮತ್ತು ವಿಶ್ವದ ಇತರೆ ದೇಶಗಳು ಉಳಿದ 25% ಆದ 150 ಟನ್ ಗಳಷ್ಟು ಕೊಕೇನನ್ನೂ ಬಳಸುತ್ತವೆ(ಸೇವಿಸುತ್ತವೆ).[೯೯]

ಕೊಕೇನ್ ಗೆ ಸೇರಿಸುವ ಮಿಶ್ರಣಗಳು (ಕಲುಷತೆಗಳು)

ಕೊಕೇನ್ ಅನ್ನು ಹಲವಾರು ವಸ್ತುಗಳೊಡನೆ "ಕಟ್" (ಮಿಶ್ರ) ಮಾಡಲಾಗುತ್ತದೆ. ಅವುಗಳು:

ಅರಿವಳಿಕೆಗಳು (ಅನೆಸ್ತೆಟಿಕ್ಸ್)

  • ಲಿಡೋಕೇಯ್ನ್
  • ಬೆನ್ಝೋಕೇಯ್ನ್
  • ಪ್ರೋಕೇಯ್ನ್

ಇತರೆ ಉತ್ತೇಜಕಗಳು :

ಜಡ ಪುಡಿಗಳು:

ಉಪಯೋಗ

2007ರ ಯುನೈಟೆಡ್ ನೇಷನ್ಸ್ ನ ವರದಿಯ ಪ್ರಕಾರ ಸ್ಪೇಯ್ನ್ ಜಗತ್ತಿನ ಎಲ್ಲಾ ದೇಶಗಳಿಗಿಂತಲೂ ಹೆಚ್ಚು ಕೊಕೇನನ್ನು ಉಪಯೋಗಿಸುತ್ತದೆ. ( ಹೋದ ವರ್ಷ 3% ವಯಸ್ಕರು)[೧೦೦] ಕೊಕೇನ್ ಉಪಯೋಗಿಸುವುದು 1,5% ಅಥವಾ ಅದಕ್ಕಿಂತಲೂ ಹೆಚ್ಚಾಗಿರುವ ಇತರ ದೇಶಗಳೆಂದರೆಯುನೈಟೆಡ್ ಸ್ಟೇಟ್ಸ್ (2.8%, ಇಂಗ್ಲೆಂಡ್ ಮತ್ತು ವೇಲ್ಸ್ (2.4%), ಕೆನಡಾ (2.3%), ಇಟಲಿ (2.1%), ಬೊಲಿವಿಯಾ (1.9%), ಚಿಲಿ (1.8%), ಮತ್ತು ಸ್ಕಾಟ್ ಲ್ಯಾಂಡ್ (1.5%)[೧೦೦]

ಯುನೈಟೆಡ್ ಸ್ಟೇಟ್ಸ್ ನಲ್ಲಿ

ಸಾಮಾನ್ಯ ಬಳಕೆ

ಕೊಕೇನ್ ಅಮೆರಿಕದ ಅತ್ಯಂತ ಜನಪ್ರಿಯ ಮಾದಕವಸ್ತುಗಳಲ್ಲಿ ಎರಡನೆಯದು (ಮಾರಿಜ್ವಾನಾ ಮೊದಲನೆಯದು)[೧೦೧] ಮತ್ತು ಅಮೆರಿಕ ಕೊಕೇನ್ ಬಳಸುವುದರಲ್ಲಿ ವಿಶ್ವದಲ್ಲೇ ಮೊದಲನೆಯ ರಾಷ್ಟ್ರ.[೯೪] ಕೊಕೇನನ್ನು ಸಾಮನ್ಯವಾಗಿ ಮಧ್ಯಮವರ್ಗದ ಮತ್ತು ಮೇಲ್ವರ್ಗದ ಪಂಗಡದವರು ಉಪಯೋಗಿಸುತ್ತಾರೆ. ಪಾರ್ಟಿ ದ್ರಗ್ ಆಗಿ ಕೊಕೇನ್ ಕಾಲೇಜ್ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚು. ವಿವಿಧ ವಯಸ್ಸಿನ, ಜಾತಿಯ ಮತ್ತು ಉದ್ಯೋಗಗಳಲ್ಲಿನ ಜನರು ಕೊಕೇನ್ ಬಳಸುತ್ತಾರೆ. 1970 ಮತ್ತು 80ರ ದಶಕಗಳಲ್ಲಿ ಈ ದ್ರವ್ಯವು , ಕೊಕೇನ್ ಬಳಕೆಯು ಸ್ಟುಡಿಯೋ 54 ರಂತಹ ಹಲವಾರು ಡಿಸ್ಕೋಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತಿದ್ದು, ಜನಪ್ರಿಯವಾಗಿದ್ದುದರಿಂದ, ಡಿಸ್ಕೋ ಸಂಸ್ಕೃತಿಯವರಿಗೆ ಬಹಳ ಪ್ರಿಯವಾಯಿತು.

ದಿ ನ್ಯಾಷನಲ್ ಹೌಸ್ ಹೋಲ್ಡ್ ಸರ್ವೇ ಆನ್ ಡ್ರಗ್ ಅಬ್ಯೂಸ್ (NHSDA)(ಮಾದಕವ್ಯಸನ ಕುರಿತು ರಾಷ್ಟ್ರೀಯ ಕುಟುಂಬ ಸಮೀಕ್ಷೆ )1999ರಲ್ಲಿ ಕೊಕೇನನ್ನು 3.7 ಮಿಲಿಯನ್ ಅಮೆರಿಕನ್ನರು, ಎಂದರೆ 1.7% ಕುಟುಂಬಗಳ 12ಚರ್ಷ ಮತ್ತು ಮೇಲ್ಪಟ್ಟ ಜನರು ಬಳಸುತ್ತಾರೆಂದು ವರದಿ ಮಾಡಿತು. ನಿಯತವಾಗಿ (ತಿಂಗಳಿಗೆ ಒಂದು ಬಾರಿಯಾದರೂ) ಕೊಕೇನ್ ಉಪಯೋಗಿಸುವವರ ಸಂಖ್ಯೆ ದಿನದಿನಕ್ಕೂ ಬದಲಾಗುವುದರಿಂದ ಅವರ ಸಂಖ್ಯೆ ಇಷ್ಟೇ ಎಂದು ಹೇಳಲಾಗದಾದರೂ ಸುಮಾರು 1.5 ಮಿಲಿಯನ್ ಗಳಷ್ಟು ಎಂಬ ಒಂದು ಅಂದಾಜನ್ನು ಸಂಶೋಧನ ಸಮಿತಿಯೂ ಒಪ್ಪಿದೆ.

1999ಕ್ಕೆ 6 ವರ್ಷಗಳ ಹಿಂದಕ್ಕೂ, ಅಂದಿಗೂ ಕೊಕೇನ್ ಬಳಕೆಯು ಗಮನಾರ್ಹವಾಗಿ ಬದಲಾಗಿರದಿದ್ದರೂ, ಮೊಡಲ ಬಾರಿಗೆ ಕೊಕೇನ್ ಬಳಸುವವರ ಸಂಖ್ಯೆಯು 1991ರ 574,೦೦೦ ರಿಂದ 1998–ರಲ್ಲಿ 934,೦೦೦ ವನ್ನು ತಲುಪಿ, 63%ನಷ್ಟು ಹೆಚ್ಚಿತು. ಈ ಅಂಕಿ ಅಂಶಗಳು ಕೊಕೇನ್ ಅಮೆರಿಕದಲ್ಲಿ ಇನ್ನೂ ವ್ಯಾಪಕವಾಗಿ ಹರಡಿರುವುದನ್ನು ಸೂಚಿಸಿದರೂ, ಕೊಕೇನ್ ಬಳಕೆಯು ೧೯೮೦ ರ ದಶಕದಲ್ಲಿದ್ದ ಬಳಕೆಗಿಂತಲೂ ಗಮನಾರ್ಹವಾಗಿ ಕಡಿಮೆಯಾಗಿತ್ತು.

ಯುವಕರಲ್ಲಿ ಬಳಕೆ

1999ರ ಮಾನೀಟರಿಂಗ್ ದ ಫ್ಯೂಚರ್ (MTF) ಸಮೀಕ್ಷೆಯು 1990ರ ದಶಕದಲ್ಲಿ ಪುಡಿ ಕೊಕೇನ್ ಅನ್ನು ಬಳಸುವ ಅಮೆರಿಕನ್ ವಿದ್ಯಾರ್ಥಿಗಳ ಅನುಪಾತವು ಹೆಚ್ಚಿತು ಎಂದು ವರದಿ ನೀಡಿತು. 1991ರಲ್ಲಿ ಎಂಟನೆಯ ದರ್ಜೆಯ 2.3% ಜನರು ತಾವು ಜೀವನದಲ್ಲಿ ಒಮ್ಮೆಯಾದರೂ ಕೊಕೇನನ್ನು ಬಳಸಿದ್ದೆವೆಂದು ಹೇಳಿದರು. ಈ ಸಂಖ್ಯೆ 1999ರಲ್ಲಿ 4.7% ಗೆ ಏರಿತು. ಅದಕ್ಕಿಂತಲೂ ಹೆಚ್ಚಿನ ದರ್ಜೆಯವರಿಗೆ 1992ರಲ್ಲಿ ಹೆಚ್ಚಳವು ಆರಂಭವಾಗಿ 1999ರ ಆದಿಯವರೆಗೂ ಹಾಗೆಯೇ ಮುಂದುವರೆಯಿತು. ಈ ಸಂವತ್ಸರಗಳ ಅಂತರದಲ್ಲಿ, ಜೀವಿತಾವಧಿಯಲ್ಲಿ ಕೊಕೇನ್ ಉಪಯೋಗಿಸಿದವರ ಸಂಖ್ಯೆ ಹತ್ತನೆಯ ದರ್ಜೆಯವರಲ್ಲಿ 3.3% ನಿಂದ 7.7% ಗೂ, ಪ್ರೌಢಶಾಲೆಯ ಹಿರಿಯರಲ್ಲಿ (ಹೈಸ್ಕೂಲ್ ಸೀನಿಯರ್ಸ್) 6.1% ನಿಂದ 9.8% ಗೂ ಏರಿತು. MTF ಪ್ರಕಾರ, ಕ್ರ್ಯಾಕ್ ಕೊಕೇನ್ ನ ಜೀವಿತಾವಧಿಯ ಸೇವನೆಯೂ ಎಂಟನೆಯ-, ಹತ್ತನೆಯ-, ಮತ್ತು ಹನ್ನೆರಡನೆಯ ದರ್ಜೆಯವರಲ್ಲೂ 1991ರ ಸರಾಸರಿ 2% 1999ರಲ್ಲಿ 3.9% ಗೆ ಏರಿತು.

ಕೊಕೇನ್ ನ ಅಪಾಯಗಳ ಬಗ್ಗೆ ಅರಿವು ಮತ್ತು ಕ್ರ್ಯಾಕ್ ಮತ್ತು ಕೊಕೇನ್ ಬಳಸುವವರ ಬಗ್ಗೆ ತಿರಸ್ಕಾರ ಮೂಡಿದುದರ ಕಾರಣ ಕೊಕೇನ್ ಮತ್ತು ಕ್ರ್ಯಾಕ್ ಎರಡೂ 1990ರ ದಶಕದಲ್ಲಿ ಮೂರೂ ಶ್ರೇಣಿಗಳಲ್ಲಿ ಬಳಸಲ್ಪಡುವುದು ಕಡಿಮೆಯಾಯಿತು. 1999ರಲ್ಲಿ NHSDA ಯು ಪ್ರತಿ ತಿಂಗಳು ಅತಿ ಹೆಚ್ಚು ಕೊಕೇನ್ ಬಳಸುವವರು 18-25 ವರ್ಷದವರೆಂದೂ, 1997 ರ 1.2%ನಿಂದ 1999ರಲ್ಲಿ ಅವರ ಸಂಖ್ಯೆ 1.7% ತಲುಪಿತೆಂದೂ ಸಾರುತ್ತದೆ. 1996ಕ್ಕಿಂತಲೂ 1998ರಲ್ಲಿ 26-34 ವರ್ಷದವರಲ್ಲಿ ಈ ಸಂಖ್ಯೆ ಕಡಿಮೆಯಾಯಿತು, ಆದರೆ 12-17 ವರ್ಷದವರಲ್ಲಿ ಮತ್ತು 35+ ರವರಲ್ಲಿ ಕೊಕೇನ್ ಬಳಸುವವರ ಸಂಖ್ಯೆ ಹೆಚ್ಚಾಯಿತು. ಅಧ್ಯಯನಗಳು ಜನರು ಕೊಕೇನ್ ಪ್ರಯೋಗಿಸಿಕೊಳ್ಳುವುದನ್ನು ಕಿರಿಯ ವಯದಲ್ಲೇ ಆರಂಭಿಸುತ್ತಿದ್ದಾರೇಂದು ಸೂಚಿಸುತ್ತವೆ. ಕೊಕೇನ್ ಉಪಯೋಗಿಸುವವರ ಸರಾಸರಿ ವಯಸ್ಸು 1992ರಲ್ಲಿನ 23.6 ರಿಂದ 1998ರಲ್ಲಿ 20,6 ವರ್ಷಕ್ಕೆ ಇಳಿಯಿತೆಂದು NHSDA ಕಂಡುಕೊಂಡಿತು.

ಯೂರೋಪ್ ನಲ್ಲಿ

ಸಾಮಾನ್ಯ ಬಳಕೆ

ಕೊಕೇನ್ ಯೂರೋಪ್ ನವರು ಮೋಜಿಗಾಗಿ ಉಪಯೋಗಿಸುವ ಅತ್ಯಂತ ಜನಪ್ರಿಯ ಮಾದಕವಸ್ತುಗಳಲ್ಲಿ ಎರಡನೆಯದು (ಮಾರಿಜ್ವಾನಾ ಮೊದಲನೆಯದು) 1990ನೆಯ ದಶಕದ ಮಧ್ಯಭಾಗದಿಂದಲೂ ಯೂರೋಪಿನಲ್ಲಿ ಕೊಕೇನ್ ನ ಬಳಕೆಯು ಹೆಚ್ಚುತ್ತಲೇ ಇದ್ದು, ಬಳಕೆಯ ಪ್ರಮಾಣ, ಕ್ಷಿಪ್ರತೆ ಮತ್ತು ವಿಧಾನಗಳು ದೇಶ-ದೇಶಕ್ಕೂ ಬದಲಾಗುತ್ತವೆ. ಅತಿ ಹೆಚ್ಚು ಪ್ರಮಾಣದಲ್ಲಿ ಕೊಕೇನ್ ಉಪಯೋಗಿಸುವ ದೇಶಗಳೆಂದರೆ: ಯುನೈಟೆಡ್ ಕಿಂಗ್ ಡಮ್, ಸ್ಪೇಯ್ನ್, ಇಟಲಿ ಮತ್ತು ಐರ್ಲೆಂಡ್.

ಒಂದು ಅಂದಾಜಿನ ಪ್ರಕಾರ 12 ಮಿಲಿಯನ್ ಯೂರೋಪಿಯನ್ನರು (3.6%) ಕೊಕೇನನ್ನು ಒಮ್ಮೆಯಾದರೂ ಬಳಸಿದ್ದು, ಕಲೆದ ವರ್ಷ 4 ಮಿಲಿಯನ್ ಮತ್ತು ಹೋದ ತಿಂಗಳು 2 ಮಿಲಿಯನ್ (0.5%) ಯೂರೋಪಿಯನ್ನರು ಕೊಕೇನ್ ಹಳಸಿದ್ದಾರೆ.

ಯುವ ವಯಸ್ಕರಲ್ಲಿ ಕೊಕೇನ್ ಬಳಕೆ

ಕಳೆದ ವರ್ಷ ಕೊಕೇನ್ ಉಪಯೋಗಿಸಿದ ಸುಮಾರು 3.5 ಮಿಲಿಯನ್ ಅಥವಾ 87.5% ಕೊಕೇನ್ ಸೇವಿಸಿದವರು ಯುವ ವಯಸ್ಕರು (15ರಿಂದ 34ರ ವಯಸ್ಸಿನವರು) ಈ ಜನರಲ್ಲಿ ಕೊಕೇನ್ ಬಳಕೆ ಪ್ರಮುಖವಾಗಿ ಕಂಡುಬರುತ್ತದೆ: ಸ್ಪೇಯ್ನ್, ಡೆನ್ ಮಾರ್ಕ್, ಐರ್ಲೆಂಡ್ ಮತ್ತು ಯುನೈಟೆಡ್ ಕಿಂಗ್ ಡಂನಲ್ಲಿ 4% ನಿಂದ 7% ಗಂಡಸರು ಕಡೆಯ ವರ್ಷದಲ್ಲಿ ಕೊಕೇನನ್ನು ಬಳಸಿದ್ದಾರೆ ಕೊಕೇನ್ ಬಳಸುವ ಗಂಡು ಮತ್ತು ಹೆಣ್ಣಿನ ಅನುಪಾತವು ಸುಮಾರು 3.8:1, ಆದರೆ ಈ ಅಂಕಿ-ಅಂಶಗಳು ಆಯಾ ದೇಶಗಳಿಗನುಗುಣವಾಗಿ 1:1 ನಿಂದ 13:೧ ವರೆಗೂ ಬದಲಾಗುತ್ತವೆ.[೧೦೨]

ಇವನ್ನೂ ಗಮನಿಸಿ

  • ಕೊಕೇನ್ ನ ಜೈವಿಕ ಸಂಯೋಜನೆ (ಬಯೋಸಿಂಥೆಸಿಸ್ ಆಫ್ ಕೊಕೇನ್)
  • ಕಪ್ಪು ಕೊಕೇನ್
  • ಕೋಕಾ
  • ಕೋಕಾ ನಿರ್ಮೂಲನ
  • ಕೋಕಾ ಮ್ಯೂಸಿಯಮ್
  • ಕೊಕೇನ್ (ಡಾಟಾ ಪೇಜ್)
  • ಕೊಕೇನ್ ಪೇಸ್ಟ್ ("ಪಾಕೋ")
  • ಕೊಲಂಬಿಯಾದ ಜನಪ್ರಿಯ ಸಂಸ್ಕೃತಿ
  • ಕ್ರ್ಯಾಕ್ ಬೇಬಿ
  • ಕ್ರ್ಯಾಕ್ ಸಾಂಕ್ರಾಮಿಕ
  • ಕ್ರ್ಯಾಕ್ ಶ್ವಾಸಕೋಶ
  • ಕ್ರ್ಯಾಕ್ ಕೊಳವೆ
  • ಕಸ್ಕೋಹೈಗ್ರೈನ್
  • ಮಾದಕವ್ಯಸನ
  • ಮಾದಕದ್ರವ್ಯದ ಸೂಜಿಮದ್ದು
  • ಮಾದಕದ್ರವ್ಯಗಳು ಮತ್ತು ವೇಶ್ಯಾವೃತ್ತಿ
  • ಎಕ್ಗೋನೈನ್ ಬೆನ್ಝೋಯೇಟ್
  • ಎಂಟೋಮಾಟಾಕ್ಸಿಕಾಲಜಿ
  • ಮಹಾ ಸೇವಿಸುವಿಕೆ (ದ ಗ್ರೇಟ್ ಬಿಂಜ್)
  • ಹೈಡ್ರಾಕ್ಸಿಟ್ರೋಪಾಕೊಕೇನ್
  • ಶುಚಿತ್ವ
  • ಕೊಕೇನ್ ನ ಸಮಾನವಸ್ತುಗಳ ಪಟ್ಟಿ
  • ಮೀಥೈಲೆಕ್ಗೋನೈನ್ ಸಿನ್ನಾಮೇಟ್
  • ಮನಚಲನಗೊಳಿಸುವ ಮಾದಕವಸ್ತು
  • ನನ್ನ ಮೇಲೊಂದು ದಂ ಎಳೆ (ಟೇಕ್ ಎ ವಿಫ್ ಆನ್ ಮಿ)
  • ವ್ಯಾನೋಕ್ಸೆರೈನ್

ಆಕರಗಳು

ಬಾಹ್ಯ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ