ಕೆ.ಎಸ್.ಎಲ್.ಸ್ವಾಮಿ



ರವಿ ಎಂದೇ ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುವ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ )'ಕೆ.ಎಸ್.ಎಲ್.ಸ್ವಾಮಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ಮಂಡ್ಯ ಜಿಲ್ಲೆಯ ಕೃಶ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇವರ ಹುಟ್ಟೂರು. [೧]ಜಿ.ವಿ.ಅಯ್ಯರ್ ಮತ್ತು ಎಂ.ಆರ್.ವಿಠಲ್ ಅವರ ಸಹಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ರವಿಯವರ ನಿರ್ದೇಶನದ ಮೊದಲ ಚಲನಚಿತ್ರ ತೂಗುದೀಪ. ಗಾಂಧಿನಗರ, ಭಾಗ್ಯಜ್ಯೋತಿ, ಮಲಯ ಮಾರುತ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಇವರು, ತಮ್ಮ ಗುರು ಪುಟ್ಟಣ್ಣ ಅವರ ನಿಧನದಿಂದ ಅಪೂರ್ಣಗೊಂಡಿದ್ದ ಮಸಣದ ಹೂವು ಮತ್ತು "ಸಾವಿರ ಮೆಟ್ಟಿಲು" ಚಿತ್ರಗಳನ್ನು ಮುಂದುವರೆಸಿ, ಪೂರ್ತಿಯಾಗಿ ನಿರ್ದೇಶಿಸಿದರು. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮೊದಲಾದಂತೆ ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರನಟಿ ಬಿ.ವಿ.ರಾಧ ಇವರ ಪತ್ನಿ.[೨]

ಕೆ.ಎಸ್.ಎಲ್.ಸ್ವಾಮಿ

೧೯೯೦ರಲ್ಲಿ ಇವರ ನಿರ್ದೇಶನದ "ಜಂಬೂ ಸವಾರಿ" ಅತ್ಯುತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರಪತಿಯವರ "ಸ್ವರ್ಣ ಕಮಲ"ಪಡೆದು, ಮುಂದೆ ಜರ್ಮನಿಯ ಕೈಂಡರ್ ಚಲನಚಿತ್ರೋತ್ಸವ (೧೯೯೦) ಹಾಗೂ ಟೆಹರಾನ್ ಚಿತ್ರೋತ್ಸವದಲ್ಲಿ (೧೯೯೧) ಪಾಲ್ಗೊಂಡಿತ್ತು. ಇವರ ನಿರ್ದೇಶನದ ಆರು ಮೂರು ಒಂಬತ್ತು ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ಇವರು ಸುಮಾರು ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.


ನಿರ್ದೇಶಿರುವ ಚಿತ್ರಗಳು

1. ತೂಗುದೀಪ

2. ಗಾಂಧೀನಗರ

3. ಲಗ್ನಪತ್ರಿಕೆ

4. ಭಾಗ್ಯದ ಭಾಗಿಲು

5. ಕುಳ್ಳ ಏಜೆಂಟ್ ೦೦೦

6. ದೇವರ ದುಡ್ಡು

7. ಕೃಷ್ಣ ರುಕ್ಮಿಣಿ ಸತ್ಯಭಾಮ

8. ಅರಿಶಿನ ಕುಂಕುಮ

9. ಲಕ್ಶ್ಮಿ ಸರಸ್ವತಿ

10. ಮಾಗಿಯ ಕನಸು

11. ಮುಗ್ಧ ಮಾನವ

12. ಭಾಗ್ಯ ಜ್ಯೋತಿ

13. ಮಲಯ ಮಾರುತ

14. ಡ್ರೈವರ್ ಹನುಮಂತು

15. ಜಿಮ್ಮಿ ಗಲ್ಲು

16. ಮತ್ತೆ ವಸಂತ

17. ಮಿಥಿಲೆಯ ಸೀತೆಯರು

18. ದೇವರು ಕೊಟ್ಟ ತಂಗಿ

19. ಭಲೆ ಅದೃಷ್ಟವೋ ಅದೃಷ್ಟ

20.ರಾಮ ಲಕ್ಶ್ಮಣ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ