ಕಾಂತ ಮಸೂರ

thumb[ಶಾಶ್ವತವಾಗಿ ಮಡಿದ ಕೊಂಡಿ]

ಕಾಂತ ಮಸೂರ ಎಲೆಕ್ಟ್ರಾನ್ ದೂಲಗಳನ್ನು ಅಭಿಸರಿಸಲು (ಕನ್ವರ್ಜ್) ಉಪಯೋಗಿಸುವ ಕಾಂತಕ್ಷೇತ್ರ (ಮ್ಯಾಗ್ನೆಟಿಕ್ ಲೆನ್ಸ್). ಬೆಳಕಿನ ಕಿರಣಗಳನ್ನು ಗಾಜಿನ ಮಸೂರ ಬಾಗಿಸಿ ಅಭಿಸರಿಸುವ ರೀತಿಯಲ್ಲಿ ಇದು ಎಲೆಕ್ಟ್ರಾನುಗಳನ್ನು ಬಾಗಿಸಿ ಅಭಿಸರಿಸುತ್ತದೆ.

294x294px[ಶಾಶ್ವತವಾಗಿ ಮಡಿದ ಕೊಂಡಿ]
294x294px[ಶಾಶ್ವತವಾಗಿ ಮಡಿದ ಕೊಂಡಿ]
ಮಯೆರ್-ಲೀಬ್ನಿಟ್ಜ್[ಶಾಶ್ವತವಾಗಿ ಮಡಿದ ಕೊಂಡಿ] ಪ್ರಯೋಗಾಲಯದಲ್ಲಿ ಮ್ಯೂನಿಕ್ ಲೆನ್ಸ್ (ಕ್ವಾಡ್ರುಪೋಲ್ ಮ್ಯಾಗ್ನೆಟ್) ನ ಉಪ ಪ್ರಕಾರ


ಚಿತ್ರ 1ರಲ್ಲಿ ತೋರಿಸಿರುವಂಥ ಒಂದು ಸುರುಳಿಯ ಮೂಲಕ ವಿದ್ಯುತ್ತನ್ನು ಹರಿಸಿದರೆ ಅದರ ಅಕ್ಷನೇರದಲ್ಲಿ ಕಾಂತಕ್ಷೇತ್ರ (ಚುಕ್ಕಿಗೆರೆ) ಉಂಟಾಗುತ್ತದೆ. ಈಗ ಇದರ ಅಕ್ಷನೇರದಲ್ಲಿ ಎಲೆಕ್ಟ್ರಾನುಗಳ ಒಂದು ಅಪಸರಣ ದೊಲವನ್ನು ಕಳುಹಿಸಿದರೆ ಎಲೆಕ್ಟ್ರಾನುಗಳು ಮುಂದೆ ಸ್ವಲ್ಪ ದೂರದಲ್ಲಿ ಅಭಿಸರಿಸುತ್ತವೆ.[೧]

ಚಿತ್ರ (2)ರಲ್ಲಿ ತೋರಿಸಿರುವಂತೆ ಸ್ವಲ್ಪ ತೆರಪು ಉಳ್ಳ ಮಿದು ಕಬ್ಬಿಣ ಕವಚದಲ್ಲಿ ಒಂದು ಸುರುಳಿಯನ್ನು ಸುತ್ತಿ ಅದರಲ್ಲಿ ವಿದ್ಯುತ್ತನ್ನು ಹರಿಸಿದರೆ ಅಲ್ಲಿ ಉಂಟಾಗುವ ಕಾಂತಕ್ಷೇತ್ರ (ಚುಕ್ಕಿಗೆರೆ) ಕಾಂತ ಮಸೂರದಂತೆ ವರ್ತಿಸುತ್ತದೆ.[೨]

ಕಾಂತ ಮಸೂರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಮತ್ತು ಹೆಚ್ಚು ವೋಲ್ಟೇಜಿನ ಕ್ಯಾಥೋಡ್ ಕಿರಣ ಕವಾಟಗಳಲ್ಲಿ ಉಪಯೋಗಿಸುತ್ತಾರೆ. ಕಾಂತ ಮಸೂರ ಉಂಟುಮಾಡುವ ಬಿಂಬ ಬಾಗಿರುತ್ತದೆ. ಈ ಬಾಗುವಿಕೆ ಕಾಂತಕ್ಷೇತ್ರವನ್ನವಲಂಬಿಸಿರುವುದು.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ