ಕರ್ಮಯೋಗ

ಕರ್ಮಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಕರ್ಮಯೋಗವೂ ಒಂದು.'ಕರ್ಮ' ಎಂಬ ಶಬ್ದವು 'ಕೃ' ಎಂಬ ಧಾತುವಿನಿಂದ ಹುಟ್ಟಿರುತ್ತದೆ.'ಕೃ' ಎಂದರೆ ಮಾಡುವುದು,ವ್ಯವಹರಿಸುವುದು ಮುಂತಾಗಿ ಅರ್ಥಗಳಿವೆ. ಹಾಗಾಗಿ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ.ಹಿಂದೂಧರ್ಮದಲ್ಲಿ ಪ್ರತಿಪಾದಿಸಿದಂತೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ ಮಾಡುತ್ತಲೇ ಇರುತ್ತಾನೆ. ಈ ಕರ್ಮಗಳಿಂದ ಜೀವಿಗೆ ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲ ದೊರೆಯುತ್ತದೆ.ಈ ರೀತಿ ಕೆಲಸಗಳನ್ನು ಮಾಡುತ್ತಾ ಅದಕ್ಕೆ ಪ್ರತಿಫಲಗಳನ್ನು ಪಡೆಯುತ್ತಾ ಜೀವಿಯು 'ಕರ್ಮಬಂಧ'ಕ್ಕೆ ಒಳಗಾಗುತ್ತಾನೆ.ಇದರಿಂದಾಗಿ ಮತ್ತೆ ಮತ್ತೆ ಹುಟ್ಟು ಸಾವುಗಳ ಚಕ್ರಕ್ಕೆ ಸಿಲುಕುತ್ತಾನೆ.ತಾನು ಮಾಡುವ ಕೆಲಸಗಳಿಂದ ಯಾವಾಗ 'ಕರ್ಮಬಂಧ'ಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮಮುಕ್ತನಾಗುತ್ತಾನೆ.ಒಂದೆಡೆ ಕೆಲಸಗಳು ಜೀವಿಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜೀವಿಯ ಕರ್ಮವಿಮೋಚನೆಗೆ ಸಾಧನವಾಗುತ್ತದೆ.ಈ ರೀತಿ ಜೀವಿಯು ಮಾಡುವ ಕೆಲಸಗಳನ್ನು ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳು ಜೀವಿಯ ಆತ್ಮಸಾಕ್ಷಾತ್ಕಾರಕ್ಕೆ,ಮುಕ್ತಿಗೆ ಸಾಧನವನ್ನಾಗಿಸುವುದೇ ಕರ್ಮಯೋಗ.

ಕರ್ಮಯೋಗದ ಮುಖ್ಯ ತತ್ವಗಳು

ಅರ್ಜುನ ಹೇಳಿದನು (ಹೇಳಿದ್ದು)

  • ಜನಾರ್ಧನನೆ, ಕರ್ಮಕ್ಕಿಂತ ಜ್ಞಾನವು ಹೆಚ್ಚಿನದಾದರೆ ನನಗೆ ಕರ್ಮದಲ್ಲಿ ಏಕೆ ತೊಡಗಿಸುತ್ತಿದ್ದೀಯ ? ಗೊಂದಲವಾಗಿದೆ ನಾನು ಯಾವುದನ್ನು ಅನುಸರಿಸಬೇಕು ನಿಶ್ಚಿತವಾಗಿ ಹೇಳು.
  • ( ಟಿ : ಕರ್ಮ-ಕರ್ಮಯೋಗ, ಜ್ಞಾನ-ಜ್ಞಾನಯೋಗ ಅಸೆ, ಮೋಹ ಹಿಂಗಿದ- ಆತ್ಮ ಜ್ಞಾನದಿಂದ ಮೋಕ್ಷ ; ಅದು ಗುರಿಯಾದರೆ, ಯುದ್ಧವೆಂಬ ಘೋರ ಕರ್ಮವೇಕೆ ? ನೋಡಿ: ಈಶಾವಾಸ್ಯೋಪನಿಷತ್ )
  • ಭಗವಂತನು ಹೇಳಿದನು (ಹೇಳಿದ್ದು):
  • ಜ್ಞಾನಯೋಗದಿಂದ ಕರ್ಮಯೋಗವನ್ನು ಪ್ರತ್ಯೇಕಿಸಿ ಹೇಳತ್ತಾನೆ
  • ಜ್ಞಾನಿಗೆ (ಸಾಂಖ್ಯರಿಗೆ) ಜ್ಞಾನಯೋಗ (ಸಾಂಖ್ಯಯೋಗ) ; ಮತ್ತು ಸಾಧಕನಿಗೆ (ಯೋಗಿಗೆ) ಕರ್ಮಯೋಗವೆಂದು ಎರಡುಬಗೆ.ಯಾರೂ ಯಾವ ಕ್ರಿಯೆಯನ್ನೂ ಮಾಡದೆ ಇರುವುದು ಆಗವುದಿಲ್ಲ. ಒಂದೊಮ್ಮೆ ಅವನು ದೈಹಿಕ ಕ್ರಿಯೆಗಳನ್ನು ಬಿಟ್ಟರೂ ಮಾನಸಿಕವಾಗಿ ಕ್ರಿಯಾಶೀಲನಾಗಿರುವನು. ಆವನು ಕರ್ಮಗಳನ್ನು ಬಿಟ್ಟ ಮಾತ್ರಕ್ಕೆ ಜ್ಞಾನಿಯೆನಿಸನು, ಆದರೆ ಠಕ್ಕನೆನಿಸುವನು. ಆದ್ದರಿಂದ ಸಾಧಕನು ಕರ್ಮದ ಫಲವನ್ನು ಬಯಸದೆ ಈಶ್ವರನಿಗೆ ಪ್ರೀತಿಯಾಗಲೆಂದು ಕರ್ಮವನ್ನು (ಕರ್ತವ್ಯವನ್ನು) ಮಾಡಬೇಕು. ನೀನು ಹಾಗೆ ಕರ್ಮಸಂಗದಿಂದ ಮುಕ್ತನಾಗಿ ಕರ್ಮದಲ್ಲಿ ತೊಡಗು.(೩-೯) ; ಇನ್ನು ಯಾಜ್ಞಿಕ ಕರ್ಮಗಳಲ್ಲಿ, ನಮಗೆ ದೇವತೆಗಳಿಂದ (ಪ್ರಕೃತಿಯ ಅಧಿದೇವತೆಗಳು) ಮಳೆ ಬೆಳೆಗಳಾಗುವುದರಿಂದ ನಾವು ಉಣ್ಣುವುದನ್ನು ಅವರಿಗೆ ಅರ್ಪಿಸಿ ಉಣ್ಣಬೇಕು.

ಕರ್ಮಯೋಗಿಯ ಗುಣಯೋಗ್ಯತೆಗಳು

  • ಜ್ಞಾನಯೋಗಿಗಳಿಗೆ ಕರ್ಮದ ಆಚರಣೆ : ಆತ್ಮದಲ್ಲಿ ತೃಪರಾದ ಜ್ಞಾನಿಗಳಿಗೆ ಯಜ್ಞ ಮತ್ತು ಇತರೆ ಕರ್ಮದಲ್ಲಿ ತೊಡಗಬೇಕೆಂಬ ಕಟ್ಟಳೆ ಇಲ್ಲ. ಬಿಟ್ಟರೆ ದೋಷವಿಲ್ಲ. ಅಂಥವರು ಅಸಕ್ತರಾಗಿ(ಅ+ಸಕ್ತ; ಸಂಗ ರಹಿತ) ಕರ್ಮಾಚರಣೆ ಮಾಡುವರು. ನೀನೂ (ಜ್ಞಾನಿಗಳ ಮಾರ್ಗದಲ್ಲಿ )ಫಲದಾಸೆಯಿಲ್ಲದೆ ಕರ್ತವ್ಯ(ಕರ್ಮ) ದಲ್ಲಿ ನಿರತನಾಗು. ಹಿಂದೆ ಜ್ಞಾನಿಗಳಾದ ಜನಕಾದಿಗಳು ಲೋಕಸಂಗ್ರಹಕ್ಕಾಗಿ (ಜನೋಪಕ್ಕಾರಕ್ಕಾಗಿ- ಸಾಮಾನ್ಯ ಜನರಿಗೆ ಮಾದರಿಯಾಗಿ) ಕರ್ಮದಲಿ ತೊಡಗಿದ್ದರು. ದೊಡ್ಡವರನ್ನು ಸಾಮಾನ್ಯರು ಅನುಸರಿಸುತ್ತಾರೆ. ಆದ್ದರಿಂದ ಜ್ಞಾನಿಗಳೂ ಸತ್ಕರ್ಮದಲ್ಲಿ ನಿರತರಾಗಿರಬೇಕು. ನನಗೆ ಕರ್ಮಮಾಡವುದರಿಂದ ಯಾವ ಪ್ರಯೋಜನವೂ, ಅದರ ಬಯಕೆಯೂ ಇಲ್ಲದಿದ್ದರೂ ಸತತ ಕರ್ಮದಲ್ಲಿ ತೊಡಗಿದ್ದೇನೆ. ಏಕೆಂದರೆ ನನ್ನನ್ನು ಅನುಸರಿಸುವವರು ಕರ್ಮಗಳನ್ನು(ಕರ್ತವ್ಯವನ್ನು) ಬಿಟ್ಟು ಹಾಳಾಗಬಾರದು ಎಂಬ ಕಾರಣದಿಂದ (ಕರ್ಮದಲ್ಲಿ ನಿರತನಾಗಿದ್ದೇನೆ.)

ಜ್ಞಾನಿ ಮತ್ತು ಪ್ರಾಪಂಚಿಕ ಧರ್ಮ

  • ಜ್ಞಾನಿಗಳು ಪ್ರಾಪಂಚಿಕ ಧರ್ಮ ವನ್ನು ಸಾಮಾನ್ಯರಂತೆಯೇ ಅದರಲ್ಲಿ ಅಸಕ್ತನಾಗಿ (ಫಲದಾಸೆ ಇಲ್ಲದೆ) ಅನುಸರಿಸಬೇಕು. ಎಲ್ಲರೊಳಗೊಂದಾಗಿ ಇರಬೇಕು. ಫಲಾಪೇಕ್ಷೆಯಿಂದ ಕರ್ಮ ಮತ್ತು ಯಜ್ಞದಲ್ಲಿ ತೊಡಗಿರುವವರಿಗೆ ಅಸಂಗತ್ವ (ಜ್ಞಾನಯೋಗ) ಹೇಳಿ ಬುದ್ಧಿ ಕೆಡಿಸಬಾರದು. ಅವರೊಡನೆ ಸೇರಿ ಕೆಲಸ ಮಾಡಬೇಕು. ಇದು ಪ್ರಪಂಚ ಧರ್ಮ ; ಅದನ್ನು ಕೆಡಿಸಬಾರದು. ಸಾಮಾನ್ಯರು ಎಲ್ಲಾ ತಾನು ಮಾಡಿದ್ದೆಂದು ಅಹಂಕಾರ ಪಡುತ್ತಾರೆ. ತಿಳಿದವರು, ಜ್ಞಾನಯೋಗಕ್ಕೆ ಮಾನಸಿಕವಾಗಿ ಸಿದ್ಧರಾಗದ ಅವರನ್ನು ವಿಚಲಿತಗೊಳಿಸಿ ಬುದ್ಧಿಕೆಡಿಸಬಾರದು. (ನೀನಾದರೋ ಉತ್ತಮನು, ನೀನು ಎಲ್ಲಾಕರ್ಮಗಳ ಫಲವನ್ನೂ ನನಗೆ (ಭಗವಂತನಿಗೆ) ಅರ್ಪಿಸಿ ಈವಿಷಾದವನ್ನು ಬಿಟ್ಟು ಯುದ್ಧಮಾಡು. ನಿನಗೆ ಪಾಪ ಅಂಟದು. ಬಯಕೆ ಸಿಟ್ಟು ಮೊದಲಾದ ಹುಟ್ಟಿನಿಂದ ಬಂದ ಪ್ರಕೃತಿ ಧರ್ಮವು ಬಲವಾದದ್ದು. ಅದನ್ನು (ಸಾಮಾನ್ಯರು) ಜ್ಞಾನಿಗಳು ಕೂಡಾ ನಿಗ್ರಹಿಸಲಾರರು. ನೀನು ತಿಳಿದವನು ಈ ಬಯಕೆ, ದುಃಖ, ಸಿಟ್ಟು, ಇಂದ್ರಿಯಗಳ ಸ್ವಬಾವೆಂದು ಅದನ್ನು ಬೇರ್ಪಡಿಸಿ ತಿಳಿದು, ಅದಕ್ಕೆ ವಶನಾಗಬೇಡ. ಎಂದನು.
  • ಜ್ಞಾನ-ಕರ್ಮಯೋಗಗಳ ಜೊತೆಗೆ ಪ್ರಾಪಂಚಿಕ -ಪ್ರಕೃತಿ ಧರ್ಮ ಅನುಸರಣೆ : - ಶ್ರೇಯಾನ್ ಸ್ವಧರ್ಮೊ ವಿಗುಣಃ | ಸ್ವಧರ್ಮಾತ್ ಸ್ವನುಷ್ಟಿತಾತ್ || ಸ್ವಧರ್ಮೇ ನಿಧನಂ ಶ್ರೇಯಃ |ಪರಧರ್ಮೋ ಭಯಾವಹಃ || ನಿನ್ನದು ಹುಟ್ಟುಧರ್ಮ (ಪ್ರಕೃತಿ ಧರ್ಮ) ಕ್ಷತ್ರಿಯ ಧರ್ಮ. ಸ್ವಧರ್ಮದಲ್ಲಿ ಕೊರತೆ ಇದ್ದರೂ, ಅದನ್ನು ಅನುಸರಿಸುವುದು ಶ್ರೇಯಸ್ಸು ; ಹುಟ್ಟು ಗುಣಕ್ಕೆ ವಿರುದ್ಧವಾದ ಮತ್ತೊಬ್ಬರ ಧರ್ಮ ಹೆದರಿಕೆಯನ್ನುಂಟುಮಾಡುತ್ತದೆ.

ಕರ್ಮಯೋಗದ ಸಾಧನೆಗಳು

  • ಕರ್ಮಯೋಗದಿಂದ ಆತ್ಮ ಜ್ಞಾನ ಪಡೆಯುವ ಬಗೆ :
  • ಆರ್ಜುನ ಹಿಂದಿನ ಪ್ರಕೃತಿ ಧರ್ಮದ ವಿಷಯಕ್ಕೇ ಬಂದು ಕೇಳಿದ : ಮನಷ್ಯ ತಪ್ಪು ಎಂದು ಗೊತ್ತಿದ್ದರೂ, ಇಷ್ಟವಲ್ಲದಿದ್ದರೂ ಯಾವ ಒತ್ತಡಕ್ಕೆ ಸಿಲುಕಿ ಪಾಪ ಕೆಲಸ (ತಪ್ಪು) ಮಾಡುತ್ತಾನೆ
  • ಭಗವಂತನ ಉತ್ತರ : ಪ್ರಕೃತಿ ಧರ್ಮವಾದ ರಜೋಗುಣವು ಮಾನವನ ಬಯಕೆ, ಸಿಟ್ಟುಗಳಿಗೆ (ಕಾಮ, ಕ್ರೋಧ) ಕಾರಣ. ಬಯಕೆ, ಸಿಟ್ಟುಗಳಿಗೆ ಕಾರಣ- ಇಂದ್ರಿಯಗಳು, ಮನಸ್ಸು, ಬುದ್ಧಿ ; ಆತ್ಮವನ್ನು ಆವರಿಸಿರುವ, ಮರೆ ಮಾಡಿರುವ, ಇವಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಇಂದ್ರಿಯಗಳನ್ನು ಬಿಗಿಹಿಡಿದು ಇವನ್ನು ವಿಚಾರದಿಂದ ಗೆಲ್ಲು..
  • ಉಪಸಂಹಾರ :[ಬದಲಾಯಿಸಿ]
  • ಇಂದ್ರಿಯಾಣಿ ಪರಣ್ಯಾಹುಃ| ಇಂದ್ರಿಯೇಭ್ಯಃ ಪರಂ ಮನಃ ||
  • ಮನಸಸ್ತು ಪರಾಬುದ್ಧಿಃ | ಯೋ ಬುದ್ಧೇ ಪರತಸ್ತು ಸ : ||
  • ಏವಂಬುದ್ಧೇ ಪರಂ ಬುದ್ಧ್ವಾ | ಸಂಸ್ತಭ್ಯಾತ್ಮಾನಮಾತ್ಮನಾ||
  • ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ ||
  • (ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ -ಆನೇಕ ರೂಪಹೊಂದಬಲ್ಲ ಗೆಲ್ಲುವುದು ಕಷ್ಟವಾದ ಈ ಬಯಕೆ ಎಂಬ ಶತ್ರುವನ್ನು ಕೊಂದುಹಾಕು.)
  • ಇಂದ್ರಿಯಗಳು ಪ್ರಬಲವಾದವು, ಅದಕ್ಕಿಂತ ಹೆಚ್ಚಿನದು ಮನಸ್ಸು, ಅದರ ಮೇಲಿನದು ಬುದ್ಧಿ , ಅದಕ್ಕಿಂತ ಮೇಲಿನದು ಆತ್ಮ ತತ್ವ . ಇದನ್ನು ವಿಚಾರಮಾಡಿ ತಿಳಿದು ಅವುಗಳನ್ನು ಒಂದರಲ್ಲೊಂದರಂತೆ ಲಯ ಮಾಡಿ, ಆ ಜಯಿಸಲಸಾಧ್ಯವಾದ ಇಂದ್ರಿಯಗಳು, ಮನ, ಬುದ್ದಿ, ಬಯಕೆ ಗಳನ್ನು ಗೆಲ್ಲು ; ಆತ್ಮನಲ್ಲಿ ನೆಲೆನಿಲ್ಲು .
  • (ಟಿಪ್ಪಣಿ : ವಿಚಾರ ಶಕ್ತಿಯಿಂದ ತಿಳಿದು, ಆತ್ಮನಲ್ಲಿ ನೆಲೆನಿಂತು ಅವಗಳನ್ನು (ಇಂದ್ರಿಯಗಳು, ಮನಸ್ಸು, ಬುದ್ಧಿ, ಇವುಗಳಲ್ಲಿರುವ ಬಯಕೆಗಳು , ನಾನಾ ರೂಪಗಳನ್ನು ಹೊಂದಬಲ್ಲ ಇವನ್ನು ) - ಒಂದರಲ್ಲೊದರಂತೆ ಲಯ ಮಾಡು.
  • ಟಿ : - ಎಂದರೆ , ಬಲಿಷ್ಠ ವಾದ ಇಂದ್ರಿಯಗಳನ್ನು ಮನಸ್ಸಿನಲ್ಲಿ, ಮನಸ್ಸನ್ನು ಬುದ್ಧಿಯಲ್ಲಿ , ಬುದ್ಧಿಯನ್ನು {ಚಿತ್ತದಲ್ಲಿ-ಚಿತ್ತವನ್ನು} ಆತ್ಮದಲ್ಲಿ ಲಯಗೊಳಿಸಬೇಕು

ಹೀಗೆ ಕರ್ಮಯೋಗ ಮತ್ತು ವಿಚಾರ ದಿಂದ ಆತ್ಮನಲ್ಲಿ ನೆಲೆನಿಲ್ಲುವ ಬಗೆಯನ್ನು ಭಗವಂತನು ಅರ್ಜುನನಿಗೆ ತಿಳಿಸಿದನು.

  • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಯೋಗೋ ನಾಮ ತೃತೀಯೋsದ್ಯಾಯಃ)

[೧]

ಕರ್ಮಯೋಗಿಗಳ ಉದಾಹರಣೆ


  • ಕರ್ಮಯೋಗವನ್ನು ಅರಿಯಲು ಆ ಯೋಗವನ್ನು ಅನುಸರಿಸಿದವರ ಜೀವನವನ್ನೂ ಆದರ್ಶಗಳನ್ನೂ ನೋಡಿದರೆ ಸ್ವಲ್ಪ ಮಟ್ಟಿಗೆ ಕರ್ಮಯೋಗದ ರಹಸ್ಯ ತಿಳಿಯಬಹುದು. ಕರ್ಮಯೋಗವೆಂಬ ಪದ ಭಗವದ್ಗೀತೆಯಲ್ಲಿ ಮಾತ್ರ ಬಂದಂತೆ ಕಾಣುವುದು. ಆದ್ದರಿಂದ ಅದರ ಸರಳ ಅರ್ಥವನ್ನು ಭಗವದ್ಗೀತೆಯಲ್ಲಿಯೇ ನೋಡುವುದು ಉತ್ತಮ (ಶೇಕ್ಸಪಿಯರನನ್ನು ಅರ್ಥ ಮಾಡಿಕೊಳ್ಳಲು ಅವನ ನಾಟಕಗಳನ್ನೇ ಓದು ಎಂಬ ಗಾದೆ ಇದೆ)

ಅಸಕ್ತೋಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ (೩-೧೯)ಎಂಬುದು ಅದರ ಸಾರ. ಅನಾಸಕ್ತಿಯಿಂದ,- ಫಲದ ಬಗ್ಗೆ ಆಸಕ್ತಿ ಇಲ್ಲದೆ ಅಸಕ್ತನಾಗಿ ತನ್ನ ಕರ್ತವ್ಯ ವೆಂದು ತಿಳಿದು, ಕರ್ಮ ರತನಾಗಬೇಕು; ಹಾಗಾದರೆ ಪರಮಾಪ್ನೋತಿ -ಪರಮಾತ್ಮನನ್ನು ಪಡೆಯುತ್ತಾನೆ. ಇದರ ಮರ್ಮವನ್ನು ಶ್ರೀಕೃಷ್ಣನು ಕೊನೆಯ ಏಳು ಶ್ಲೋಕಗಳಲ್ಲಿ ಹೇಳುತ್ತಾನೆ. ರಜೋಗುಣ ದಿಂದ ಬಿಡುಗಡೆ ಹೊಂದಿ;- ಎಂದರೆ ಕಾಮ(ಬಯಕೆ), ಕ್ರೋಧ(ದ್ವೇಷ), ಲೋಭ (ಅತಿಯಾಸೆ), ಮೋಹ, ಮದ, ಮತ್ಸರ, ಇವುಗಳನ್ನು ಗೆಲ್ಲಬೇಕು: ಬಯಕೆ, ದ್ವೇಷ, ಕ್ರೋಧ ಇಲ್ಲದ ಸ್ಥಿತಿ. ತಲಪಬೇಕು; ಕರ್ಮಯೋಗದ ಅತುನ್ನತ ಸ್ಥಿ ತಿಯಲ್ಲಿ -ಸಂಸ್ತಭ್ಯಾತ್ಮಾನಮಾತ್ಮನಾ (೩-೪೩)- ತನ್ನ ಆತ್ಮವನ್ನು ಪರಮಾತ್ಮನಲ್ಲಿ ನೆಲೆಗೊಳಿಸಬೇಕು ಇದು ಕರ್ಮಯೋಗದ ಸಿದ್ಧಿ. (ಜ್ಞಾನಯೋಗಿಗೆ ಸಮ) ಬಯಕೆಯೇ ಇಲ್ಲದ, ದ್ವೇಷವೇ ಇಲ್ಲದ ಸ್ಥಿತಿ ತಲುಪವುದು ಅತಿ ಉನ್ನತ ಯೋಗ ಸ್ಥಿತಿ.

  • ಕರ್ಮಯೋಗವನ್ನು ಅನುಸರಿಸಿದವರ ಬಾಳನ್ನು ನೋಡಿದರೆ ಅದನ್ನು ಅರಿಯಲು ಹೆಚ್ಚು ಸಹಾಯಕ :-
  • ಇದನ್ನು ಅರಿತು ಸಾಗಿದ ನಮ್ಮ ಹತ್ತಿರದವರು : ಸ್ವಾಮಿ ವಿವೇಕಾನಂದರು -ಒಂದು ಕ್ಷಣವನ್ನೂ ವ್ಯರ್ಥಮಾಡದೆ ಲೋಕಹಿತಕ್ಕಾಗಿ ದುಡಿದರು.

ಲೋಕಮಾನ್ಯ ಬಾಲಗಂಗಾಧರ ತಿಲಕರು ಇಡೀ ಭಗವದ್ಗೀತೆಗೆ ಕರ್ಮಯೋಗದ ಪರವಾದ ವಿವರವಾದ ವ್ಯಾಖ್ಯಾನ ಬರೆದಿದ್ದಾರೆ. ಮತ್ತು ತಮ್ಮ ಜೀವನವನ್ನೂ ಕರ್ಮಯೋಗದ ಮಾರ್ಗದಲ್ಲಿ ಕಳೆದಿದ್ದಾರೆ. ಗಾಂಧೀಜೀಯವರು ಗೀತೆಯೇ ತಮ್ಮ ಬಾಳಿನ ಮಾರ್ಗ ದರ್ಶಕವೆಂದು ಕರ್ಮಯೋಗವನ್ನು ಅನುಸರಿಸಿದ್ದಾರೆ. ಹಾಗಾಗಿ ಅವರದು ಕೋಪ ,ದ್ವೇಷ ಇಲ್ಲದ ದಾರಿ ( ಸಂತ ಗಾಂಧೀಜೀ) -(ಉಳಿದವರಿಗೆ - ಸಾಮಾನ್ಯರಿಗೆ ಮಾರ್ಗ ದರ್ಶನ; -ಕಾಮ,ಕ್ರೋಧ ,ದ್ವೇಷ, ಇದ್ದ ಕೆಲವು ಜನರಿಗೆ ಅವರದು ತಪ್ಪು ದಾರಿ !)ಕರ್ಮಯೋಗದ ಅತ್ಯುನ್ನತ ಸ್ಥಿತಿಗೆ ತಲುಪದಿದ್ದರೂ , ಆ ಮಾರ್ಗದಲ್ಲಿ ನಡೆದವರು ನಾಡಿಗೆ ಮಾರ್ಗದರ್ಶಕರಾದವರು ನಮ್ಮ ಕಾಲದವರೇ ಬಹಳ ಜನರಿದ್ದಾರೆ.

  • ಸರ್ ಎಮ್. ವಿಶ್ವೇಶ್ವರಯ್ಯನವರು, ಗಾಂಧೀಜೀ ಶಿಷ್ಯರಾದ ಶ್ರೀ ಡಿ. ವಿ ಗುಂಡಪ್ಪನವರು, ಸ್ವಾತಂತ್ರ ಹೋರಾಟಗಾರ ಮತ್ತು ಗಾಂಧೀಜೀ ಶಿಷ್ಯರಾದ ಶ್ರೀ ಎಚ್. ನರಸಿಂಹಯ್ಯನವರು (ನ್ಯಾಶನಲ್ ಕಾಲೇಜು ಪ್ರಾಂಶುಪಾಲರಾಗಿದ್ದರು, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದವರು). ಈಗ ಹಾಲಿ ವಯಸ್ಸಾಗಿರುವ ಸ್ವಾತಂತ್ರ ಹೋರಾಟಗಾರ ಮತ್ತು ಗಾಂಧೀಜೀ ಶಿಷ್ಯರಾದ ಎಚ್.ಎಸ್.ದೊರೆಸ್ವಾಮಿಯವರು. ಸಿದ್ದಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು , ಇನ್ನೂ ಅನೇಕರು; ಕು.ವಂ.ಪು.ರವರು ಬರೆದ ನೇಗಿಲಯೋಗಿಯಂತೆ ಎಲೆ ಮರೆಯ ಕಾಯಿಯಂತೆ ಅಹಂಕಾರ, ದ್ವೇಷ, ಅತಿಯಾಸೆ ತೊರೆದು ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಟರಾಗಿ ಕೆಲಸ ಮಾಡುತ್ತಿರವವರು ನೂರಾರು - ಸಾವಿರಾರು ಜನರಿದ್ದಾರೆ.
  • ಶ್ರೀಕೃಷ್ಣ ನು ಹೇಳಿದಂತೆ ಜನಕ ಮಹಾರಾಜನಂತೆ, ಅನಾಸಕ್ತರಾಗಿ, ರಾಗ ದ್ವೇಷಗಳನ್ನು ದಾಟಿ,- ಕುಟುಂಬದ ಹಿತ, ಸಮಾಜದ ಹಿತ ಎರಡನ್ನೂ ಪಾಲಿಸುತ್ತಾ ಕರ್ತವ್ಯ ನಿರತರಾಗಿರುವವರು ಕರ್ಮಯೋಗಿಗಳೆಂದು ಅಥವಾ ಕರ್ಮಯೋಗದ ಸಾಧಕರೆಂದು ಭಾವಿಸಬೇಕು.

[೨][೩][೪]

ಗೀತೆಗಳು

  • ಕಾನನದಿ ಮಲ್ಲಿಗೆಯು
  • ಮೌನದಿಂ ಬಿರಿದು ತಾನೆಲೆಯ ಪಿಂತಿರ್ದು
  • ತನ್ನ ಸೌರಭವ ಸೂಸಿ ನಲವಿಂ , (ಇರುವ)ವನಸುಮದೊಳು ಎನ್ನ ಮನವ (ಜೀವನವ)
  • ನನುಗೊಳಿಸು ಗುರುವೆ ಹೇ ದೇವಾ ||
  • ಎಂದು ಶ್ರೀ ಡಿವಿಜಿ ಪ್ರಾರ್ಥಿಸಿದ್ದಾರೆ. [೫]

ಕರ್ಮಯೋಗಿಯಬಗ್ಗೆ ಕವಿಯ ಗೀತೆ


  • ನೇಗಿಲ ಹಿಡಿದಾ ಹೊಲದೊಳು ಹಾಡುತ
  • ಉಳುವಾ ಯೋಗಿಯ ನೋಡಲ್ಲಿ.
  • ಫಲವನು ಬಯಸದ ಸೇವೆಯೆ ಪೂಜೆಯು
  • ಕರ್ಮವೆ ಇಹಪರ ಸಾಧನವು.
  • ಕಷ್ಟದೊಳನ್ನವ ದುಡಿವನೆ ತ್ಯಾಗಿ
  • ಸೃಷ್ಟಿನಿಯಮದೊಳಗವನೇ ಭೋಗಿ.
  • ಯಾರೂ ಅರಿಯದ ನೇಗಿಲ ಯೋಗಿಯೆ
  • ಲೋಕಕೆ ಅನ್ನವನೀಯುವನು.
  • ಹೆಸರ ನು ಬಯಸದೆ ಅತಿಸುಖಕೆಳಸದೆ
  • ದುಡಿವನು ಗೌರವಕಾಶಿಸದೆ.
  • ನೇಗಿಲಕುಳದೊಳಗಡಗಿದೆ ಕರ್ಮ;
  • ನೇಗಿಲ ಮೇಲೆಯೆ ನಿಂತಿದೆ ಧರ್ಮ.
  • ಕು.ವೆಂ.ಪು.

[೬]

ಬಾಹ್ಯ ಸಂಪರ್ಕಗಳು

ನೋಡಿ

ಉಲ್ಲೇಖ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ