ಕರ್ನಾಟಕ ಸಂಘ, ಮುಂಬಯಿ

ಕರ್ನಾಟಕ ಸಂಘ,ಮಾಟುಂಗ (ಪಶ್ಚಿಮ), ಮುಂಬಯಿಮುಂಬಯಿ ನಗರದ ಹಳೆಯ ಕನ್ನಡ ಸಂಘಗಳಲ್ಲಿ ಒಂದು. ಮಾಟುಂಗದಲ್ಲಿರುವ(ಪೂರ್ವ),‘ ಮುಂಬಯಿ ಕನ್ನಡ ಸಂಘ’ ಈಗ ತನ್ನ ಹೊಸಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮುಂಬಯಿನ ಇನ್ನೊಂದು ಮಹತ್ವದ 'ಕರ್ನಾಟಕ ಸಂಘ, ಮೈಸೂರ್ ಅಸೋಸಿಯೇಷನ್, ಮುಂಬಯಿ,'ಸಕ್ರಿಯವಾಗಿ ಕನ್ನಡ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ. ಯಕ್ಷಗಾನ, ನಾಟಕಗಳು, ನೃತ್ಯ,ಶಾಸ್ತ್ರೀಯ ಸಂಗೀತ, ಸಾಹಿತ್ಯ ಕಮ್ಮಟಗಳು, ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.ಮುಂಬಯಿ ಚಲನಶೀಲ ಸಂಘಟನೆಗಳಲ್ಲಿ ಒಂದಾದ ಕರ್ನಾಟಕ ಸಂಘ ತನ್ನ 83 ವರ್ಷಗಳ ಅವಧಿಯಲ್ಲಿ ಬಹಳ ಅರ್ಥಪೂರ್ಣ ಮತ್ತು ಅಪ್ರತಿಮ ಸಾಧನೆಗಳನ್ನು ಮಾಡಿದೆ.ಕರ್ನಾಟಕ ಸಂಘವು ಮುಂಬಯಿ–ಮಹಾರಾಷ್ಟ್ರ ರಾಜ್ಯಗಳ ನಡುವೆ ರಾಯಭಾರಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದು ಕರ್ನಾಟಕದ ಜನರ ಗಮನ ಸೆಳೆಯುವಂತಹ ಅನೇಕ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿರಿಸುವಲ್ಲಿ, ಕನ್ನಡದ ಜಾಗೃತಿ ಮೂಡಿಸುವಲ್ಲಿ ಸದಾಕ್ರಿಯಾಶೀಲವಾಗಿರುವ ಕರ್ನಾಟಕ ಸಂಘದ ಚಟುವಟಿಕೆಗಳಿಗೆ ಸದಸ್ಯರ ಸಹಕಾರ ನಿರಂತರ ಸಿಗುತ್ತಿರಲಿ. ಸಾಹಿತ್ಯ ಸಂಸ್ಕೃತಿ – ಸಮಾವೇಶ, ಕಲಾಭಾರತಿ, ಸಾಹಿತ್ಯ ಭಾರತಿ, ಮಕ್ಕಳ ಮೇಳ … ಇತ್ಯಾದಿ ಪ್ರಮುಖ ಕಾರ್ಯಕ್ರಮಗಳ ಜೊತೆ, ವರದರಾಜ ಆದ್ಯ ಪ್ರಶಸ್ತಿ, ಸಾಧನಾ ಶಿಖರ ಪ್ರಶಸ್ತಿ, ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ… ಇಂತಹ ಪ್ರಶಸ್ತಿಗಳನ್ನೂ ನೀಡುತ್ತಿರುವ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದ ಮೂಲಕ ನೂರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ.

ವಿಳಾಸ

ಡಾ.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಮ್ ರಸ್ತೆ, ಮಾಟುಂಗಾ ರೋಡ್ (ಪಶ್ಚಿಮ), ಮುಂಬಯಿ -16.

ಕೊಂಡಿಗಳು

http://karnatakasanghamumbai.com/library.html

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ