ಕಯಾಕ್

ಕಯಾಕ್ : ಉತ್ತರ ಏಷ್ಯ ಮತ್ತು ಉತ್ತರ ಯುರೋಪಿನಲ್ಲಿ ಪುರ್ವೇತಿಹಾಸ ಯುಗದಲ್ಲಿ ಸಮುದ್ರ ಮತ್ತು ನದಿಗಳ ಸಾರಿಗೆಗೆ ಉಪಯೋಗಿಸುತ್ತಿದ್ದ ಚರ್ಮದೋಣಿಯ ಎಸ್ಕಿಮೋ ಹೆಸರು. ಐತಿಹಾಸಿಕಯುಗದಲ್ಲಿ ಸಹ ಇದು ಕೆಲವು ಜನಾಂಗಗಳಲ್ಲಿ ಉಳಿದು ಬಂದಿತ್ತು. ಜಲಚರಗಳ ಬೇಟೆಗಾಗಿ ಒಬ್ಬೊಬ್ಬ ಎಸ್ಕಿಮೋವೂ ಒಂದೊಂದು ದೋಣಿ ಬಳಸುವುದು ವಾಡಿಕೆಯಾಗಿತ್ತಾದರೂ ಕೆಲವುಬಾರಿ ಇಬ್ಬರು ಅಥವಾ ಮೂವರು ಬಳಸುವಂಥ ಕಯಾಕುಗಳೂ ಇದ್ದವು. ಹಗುರಾದ ಮರದ ಚೌಕಟ್ಟಿಗೆ ಸೀಲ್ ಮೃಗದ ಚರ್ಮವನ್ನು ಹೊದ್ದಿಸಿ ಹೊಲಿದು ಈ ದೋಣಿಗಳನ್ನು ನಿರ್ಮಿಸುತ್ತಿದ್ದರು. ನಾವಿಕನೂ ಸೀಲ್ ಮೃಗದ ಚರ್ಮದ ಉಡುಪನ್ನು ಧರಿಸಿ ಸಮುದ್ರದ ನೀರಿನಿಂದ ರಕ್ಷಣೆ ಪಡೆಯುತ್ತಿದ್ದ. ಈ ದೋಣಿಯಲ್ಲಿ ಜೋಡಿಸಿಟ್ಟ ತಟ್ಟೆ, ಈಟಿ,ಗಾಳವನ್ನು ಭದ್ರವಾಗಿ ಹಿಡಿದಿಡುವ ಪಟ್ಟಿ, ಇತರ ಒಂದೆರಡು ಆಯುಧಗಳು- ಇವನ್ನು ಮಾತ್ರ ಒಯ್ಯಬಹುದಾಗಿತ್ತು. ಇದು ಬಹಳ ಹಗುರಾದ ಮತ್ತು ಸುಲಭವಾಗಿ ನಡೆಸಬಹುದಾಗಿದ್ದ ದೋಣಿ.

Man wearing helmet sitting in fiberglass boat, paddling through frothy water
Whitewater kayaker at Great Falls, Virginia
Man sitting with legs covered in boat that tapers to a point at each end holding long, pointed, wooden pole
Inuit seal hunter in a kayak, armed with a harpoon

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ