ಒಲಂಪಿಯ

ಒಲಂಪಿಯ: ಗ್ರೀಸಿನ ಪಶ್ಚಿಮ ಪೆಲಿಪೊನೀಸ್ನ ಒಂದು ಸ್ಥಳ, ಪುರಾತನ ಗ್ರೀಕರ ಜ್ಯೂಸ್ ದೇವತಾಕ್ಷೇತ್ರ. ಸಮುದ್ರದಿಂದ ಸುಮಾರು 16 ಕಿಮೀ ದೂರದಲ್ಲಿ, ಆಲ್ಫೀಯಸ್ ಮತ್ತು ಕ್ಲೇಡಿಯಸ್ ನದಿಗಳ ಸಂಗಮದ ಬಳಿ, ಕ್ರೋನಿಯಸ್ ಬೆಟ್ಟದ ತಪ್ಪಲಿನ ವಿಶಾಲ ಕಣಿವೆಯ ಹಸಿರು ನೆಲದ ಮೇಲೆ, ಪ್ರಾಚೀನ ವೈಭವದ ಮೂಕಸಾಕ್ಷಿಯಾಗಿ ಪವಡಿಸಿದೆ.

ಒಲಂಪಿಯ
municipality
Location of ಒಲಂಪಿಯ
Coordinates: 37°38′18″N 21°37′48″E / 37.63833°N 21.63000°E / 37.63833; 21.63000
Area code26240
ಯುನೆಸ್ಕೋ ವಿಶ್ವ ಪರಂಪರೆಯ ತಾಣ
ಅಧಿಕೃತ ಹೆಸರುArchaeological Site of Olympia
ಮಾನದಂಡCultural: i, ii, iii, iv, vi
ಉಲ್ಲೇಖಗಳು517
ಶಾಸನ1989 (13th Session)
ವಿಸ್ತೀರ್ಣ105.6 ha
ಬಫರ್ ವಲಯ1,458.18 ha

ಅನೇಕ ದೃಷ್ಟಿಗಳಲ್ಲಿ ಇದು ಅಧಿಕೃತ ಗ್ರೀಕ್ ಧರ್ಮದ ಕೇಂದ್ರವಾಗಿತ್ತು. ಅಖಿಲ ಗ್ರೀಕರ ಮಾನ್ಯಧರ್ಮವೆನಿಸಬೇಕೆಂದು ಸೆಣಸಾಡುತ್ತಿದ್ದ ಕೆಲವು ಪಂಗಡಗಳ ಪೈಕಿ ಇಲ್ಲಿಯದೂ ಒಂದು. ಅಷ್ಟೇ ಅಲ್ಲ, ಇದೇ ಪ್ರಧಾನವಾಗಿತ್ತು; ನಾಲ್ಕು ವರ್ಷಗಳಿಗೊಮ್ಮೆ ಇಲ್ಲಿ ನಡೆಯುತ್ತಿದ್ದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲೂ ಅವನ್ನು ವೀಕ್ಷಿಸಲೂ ಇಡೀ ಗ್ರೀಕ್ ಪ್ರಪಂಚದಿಂದಲೇ ಅಲ್ಲದೆ ಹೊರಗಿನಿಂದಲೂ ಜನ ಬರುತ್ತಿದ್ದರು. ಪರಸ್ಪರವಾಗಿ ಕಾದಾಡುತ್ತಿದ್ದ ಗ್ರೀಕ್ ರಾಜ್ಯಗಳ ನಡುವೆ ಆಗ್ಗೆ ತಾತ್ಕಾಲಿಕವಾಗಿ ಶಾಂತಿ ಏರ್ಪಾಡಾಗುತ್ತಿತ್ತು.

ಒಲಿಂಪಿಯದ ದೇವಾಲಯದ ಐತಿಹ್ಯ ಅಷ್ಟೇನೂ ಸ್ಫುಟವಾಗಿಲ್ಲ. ಇದು ಆಶ್ಚರ್ಯಕರ, ಪ್ರ.ಶ.ಪು.ಸು. 11ನೆಯ ಶತಮಾನದಲ್ಲಿ, ಡೋರಿಯನ್ ಆಕ್ರಮಣ ಕಾಲದಲ್ಲಿ ಇಲ್ಲಿಯ ಪಂಥ ಆರಂಭವಾಗಿರಬೇಕು. ಚತುರ್ವಾರ್ಷಿಕ ಕ್ರೀಡಾ ವ್ಯವಸ್ಥೆ ಪ್ರ.ಶ.ಪು. 776ರಲ್ಲಿ ಸ್ಥಾಪಿತವಾದಾಗ ಗ್ರೀಕ್ ಪ್ರಪಂಚ ಈ ಚರ್ತುವಾರ್ಷಿಕ ಎಣಿಕೆ ಕ್ರಮವನ್ನು ಒಪ್ಪಿಕೊಂಡಿತು; ಸ್ಥಳೀಯ ಪಂಚಾಂಗ ಯಾವುದೇ ಇರಲಿ, ಪ್ರತಿಯೊಬ್ಬರೂ ಒಲಿಂಪಿಕ್ ಹಬ್ಬಗಳಿಗೆ ಅನುಗುಣವಾದ ಕಾಲಗಣನೆಯನ್ನು ಸ್ವೀಕರಿಸಿದರು. ಅಲ್ಲಿಂದ ಮುಂದೆ ಧಾರ್ಮಿಕವಾಗಿಯೂ ಶಿಲ್ಪದೃಷ್ಟಿಯಿಂದಲೂ ಇಲ್ಲಿಯ ದೇವಾಲಯ ಪರಿಪರಿಯಾಗಿ ಶೋಭಿಸಿತು. ಮ್ಲೇಂಛರ ಪವಿತ್ರ ಮಂದಿರಗಳನ್ನೆಲ್ಲ ನೆಲಸಮ ಮಾಡಬೇಕೆಂಬ ಥಿಯೋಡೋಷಿಯಸನ ಆಜ್ಞೆಗೆ ಅನುಸಾರವಾಗಿ ಇಲ್ಲಿಯ ದೇವಾಲಯಗಳು ಪ್ರ.ಶ. 426ರಲ್ಲಿ ನಾಶವಾದವು. ಪ್ರ.ಶ. 393ರಲ್ಲಿ ನಡೆದದ್ದೇ ಪುರಾತನ ಒಲಿಂಪಿಯದ ಕೊಟ್ಟಕೊನೆಯ ಕ್ರೀಡೋತ್ಸವ.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ