ಎ. ಸೂರ್ಯ ಪ್ರಕಾಶ್

ಡಾ.ಅರಕಲಗೂಡು ಸೂರ್ಯಪ್ರಕಾಶ್[೧] ಪ್ರಸಾರ ಭಾರತಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.[೨] ಸೂರ್ಯ ಪ್ರಕಾಶ್, ಟಿವಿ ಮತ್ತು ಮುದ್ರಣ ಮಾಧ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತ, ಜೀ ನ್ಯೂಸ್‍ನಲ್ಲಿ ಸಂಪಾದಕ, ದಿ ಪಯೋನಿರ್‍ನಲ್ಲಿ ಕಾರ್ಯನಿರ್ವಾಹಕ ಸಂಪಾದಕ, ಬ್ಯಾಂಕಾಕ್ ಮತ್ತು ಸಿಂಗಾಪುರದಲ್ಲಿ ಪ್ರಕಟವಾಗುವ ಏಷ್ಯಾ ಟೈಮ್ಸ್ ದೈನಿಕದಲ್ಲಿ ಇಂಡಿಯಾ ಎಡಿಟರ್, ಈ ನಾಡು ನ್ಯೂಸ್‌ಪೇಪರ್ ಸಮೂಹದ ರಾಜಕೀಯ ವಿಚಾರದ ಸಂಪಾದಕ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿ ಬ್ಯುರೋ ಮುಖ್ಯಸ್ಥರಾಗಿ, ಸೂರ್ಯ ಪ್ರಕಾಶ್ ಕಾರ್ಯ ನಿರ್ವಹಿಸಿದ್ದರು. ಮೂರು ವರ್ಷ ಅವಧಿಯ ಈ ಪ್ರತಿಷ್ಠಿತ ಹುದ್ದೆಗೆ, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ನೇತೃತ್ವದ ಮೂವರು ಸದಸ್ಯರ ಸಮಿತಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ ಚೇರ್‍ಪರ್ಸನ್, ಮಾರ್ಕಾಂಡೇಯ ಕಟ್ಜು, ಬಿಲಾಲ್ ಜುಲ್ಕ, ಸೆಕ್ರೆಟರಿ ಮಿನಿಸ್ಟ್ರಿ ಆಫ್ ಇನ್ ಫಾರ್ಮೇಶನ್ ಅಂಡ್ ಬ್ರಾಡ್ಕಾಸ್ಟಿಂಗ್‍ರವರ ಜೊತೆ ಸಮಾಲೋಚಿಸಿ, ಸೂರ್ಯ ಪ್ರಕಾಶರ ನಿಯುಕ್ತಿಮಾಡಿದ್ದಾರೆ.[೩] ಸೂರ್ಯ ಪ್ರಕಾಶರ ಹೆಸರನ್ನು ಶಿಫಾರಸು ಮಾಡಿ ನೇಮಕ ಪ್ರಕ್ರಿಯೆ ಮುಗಿದಿದೆ. ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ಸೂರ್ಯ ಪ್ರಕಾಶ್ ಜತೆಗೆ ೧೦ ಕ್ಕೂ ಹೆಚ್ಚು ಹೆಸರುಗಳು ಸ್ಪರ್ಧೆಯಲ್ಲಿದ್ದವು. ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಒ.ಪಿ. ಕೇಜ್ರಿವಾಲ್, ಮಾಜಿ ಪತ್ರಕರ್ತ ಹಾಗೂ ಬಿಜೆಪಿ ಸದಸ್ಯ ಬಲಬೀರ್ ಪುಂಜ್ ಹಾಗೂ ಹಿರಿಯ ಪತ್ರಕರ್ತ, ಸ್ವಪನ್‌ದಾಸ್ ಗುಪ್ತ, ಮೊದಲಾದವರೂ ಸ್ಪರ್ಧಿಸಿದ್ದರು. ಹಿಂದೆ ಪ್ರಸಾರ ಭಾರತಿ ಅಧ್ಯಕ್ಷೆಯಾಗಿದ್ದ ಹಿರಿಯ ಪತ್ರಕರ್ತೆ, ಮೃಣಾಲ್ ಪಾಂಡೆ, ಅವರ ಅಧಿಕಾರಾವಧಿ ೨೦೧೪ ರ ಏಪ್ರಿಲ್ ೩೦ ಕ್ಕೆ ಮುಕ್ತಾಯವಾಗಿತ್ತು.

ಸೂರ್ಯ ಪ್ರಕಾಶರ ಪರಿಚಯ

ಒಬ್ಬ ಸಮರ್ಥ ಮೀಡಿಯಾ ಪರಿಣಿತರಾದ ಸೂರ್ಯಪ್ರಕಾಶ್,[೪] ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದಂತೆ ತಮ್ಮ ಪತ್ರಿಕಾ ವಿಶ್ಲೇಷಣೆ, ಅಧ್ಯಯನಗಳು ಬುದ್ದಿಜೀವಿಗಳೆಲ್ಲರ ಗಮನ ಸೆಳೆದಿವೆ. ಅಂಕಣಕಾರರಾಗಿಯೂ ಅಪಾರ ಓದುಗ ವಲಯವನ್ನು ಅವರು ಸೃಷ್ಟಿಸಿಕೊಂಡಿದ್ದರು. ಹೊಸದಿಲ್ಲಿಯ ಫಿಲ್ಮ್ ಅ್ಯಂಡ್ ಮೀಡಿಯಾ ಶಾಲೆ ಮತ್ತು ಪಯೋನೀರ್ ಮೀಡಿಯಾ ಶಾಲೆಗಳ ಸಂಸ್ಥಾಪಕ-ನಿರ್ದೇಶಕರಾಗಿ ಇವರ ಸೇವೆ ಹಿರಿದು. ಪ್ರಸ್ತುತ ಸೂರ್ಯ ಪ್ರಕಾಶ್ ಅವರು 'ಪಯೋನೀರ್' ಪತ್ರಿಕೆಯ ಸಲಹಾ ಸಂಪಾದಕ, ದಿಲ್ಲಿ ಮೂಲದ ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ಗೌರವ ಸದಸ್ಯ[೫] ರಾಗಿದ್ದಾರೆ.

ಜನನ, ಶಿಕ್ಷಣ, ವೃತ್ತಿ

ಮೈಸೂರು ವಿಶ್ವವಿದ್ಯಾಲಯದಿಂದ ಸೋಷಿಯಾಲಜಿಯಲ್ಲಿ ಮಾಸ್ಟರ್ಸ್ ಪದವಿ ಗಳಿಸಿದರು. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಹೊಂದಿದ್ದಾರೆ. What Ails Indian Parliament (HarperCollins, 1995) ಎಂಬ ಪುಸ್ತಕವನ್ನು ಬರೆದಿದ್ದಾರೆ. ದೆಹಲಿ ಮೂಲದ ಚಿಂತಕರ ಕೂಟವಾದ ವಿವೇಕಾನಂದ ಪ್ರತಿಶ್ಠಾನ ತೊಡಗಿಕೊಂಡಿರುವ ಎಲೆಕ್ಟ್ರಾನಿಕ್ ಮಾಧ್ಯಮ್ ಕ್ಷೇತ್ರದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಜೀ ನ್ಯೂಸ್, ದಿ ಪಯೊನೀರ್, ಏಶ್ಯಾ ಟೈಮ್ಸ್, ಆಫ್ ಇಂಡಿಯ ಎಡಿತರ್, ಈನಾಡು, ಇಂಡಿಯನ್ ಎಕ್ಸ್ ಪ್ರೆಸ್, ಪಯೊನೀರ್ ಮೀಡಿಯ ಶಾಲೆಗಳ ಸಂಸ್ಥಾಪಕ ನಿರ್ದೇಶಕ ಇತ್ಯಾದಿ.[೬]

ಪ್ರಸಾರ ಭಾರತಿ ಕಾರ್ಯವ್ಯಾಪ್ತಿ

ರಾಷ್ಟ್ರದ ಬಹುದೊಡ್ಡ ಪ್ರಸಾರ ವ್ಯಾಪ್ತಿಯನ್ನು ಹೊಂದಿದ ಪ್ರಸಾರ ಭಾರತಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವ್ಯಾಪ್ತಿಯಲ್ಲಿನ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ ನಿರ್ವಹಣೆ ಹೊಣೆಗಾರಿಕೆಯನ್ನು ಹೊಂದಿದೆ. ೧೯೯೯ ರಲ್ಲೇ ಭಾರತದ ಸಂಸತ್ ಕಾಯ್ದೆಯನ್ವಯ ರೂಪಿಸಲಾಯಿತು. ಪ್ರಸಾರ ಭಾರತಿ ಮಂಡಳಿಯು,

  • ಒಬ್ಬ ಅಧ್ಯಕ್ಷ,
  • ಕಾರ್ಯನಿರ್ವಾಹಕ ಸದಸ್ಯ(ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ),
  • ಇಬ್ಬರು ಸದಸ್ಯರು,
  • ಆರು ಮಂದಿ ಅರೆಕಾಲೀಕ ಸದಸ್ಯರನ್ನು ಒಳಗೊಂಡಿರುತ್ತದೆ.

ಡಾ. ಅರಕಲಗೂಡು ಸೂರ್ಯಪ್ರಕಾಶ್,[೭] ರಾಷ್ಟ್ರದ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಆಳವಾದ ಚಿಂತನೆಗಳನ್ನು ಹೊಂದಿದ ಪತ್ರಕರ್ತ. ವಲಸೆಹೋದ ಪ್ರತಿಭಾವಂತ ಕುಟುಂಬ, ಸೋದರ ಡಾ. ಅರಕಲಗೂಡು ರಾಮದಾಸ್, ದೇಶದ ಪ್ರತಿಷ್ಠಿತ ಏಮ್ಸ್ (AIMS) ವೈದ್ಯಕೀಯ ಸಂಸ್ಥೆಯಲ್ಲಿ ಬೈಪಾಸ್ ಸರ್ಜರಿ ವಿಭಾಗದ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೂರ್ಯ ಪ್ರಕಾಶರ ಸೋದರ

ಸೂರ್ಯಪ್ರಕಾಶ್ ರ, ಸೋದರ, ಡಾ. ರಾಮದಾಸ್, ಭಾರತದ ಮಾಜಿ ಪ್ರಧಾನಿ, ಡಾ. ಮನಮೋಹನ ಸಿಂಗ್, ರವರು, ದೆಹಲಿಯ ಏಮ್ಸ್(AIMS) ನಲ್ಲಿ ಬೈಪಾಸ್ ಸರ್ಜರಿ ಚಿಕಿತ್ಸೆಗೆ ಒಳಗಾಗಿದ್ದಾಗ ಅವರ ಸರ್ಜರಿಯನ್ನು ನಿರ್ವಹಿಸಿದ್ದರು. ಆಗ, ಪ್ರಧಾನಿಯವರ ಚಿಕಿತ್ಸಾ ತಂಡದ ನೇತೃತ್ವವನ್ನು ವಹಿಸಿದ್ದರು. ಅರಕಲಗೂಡು ಸೂರ್ಯಪ್ರಕಾಶರ ಕುಟುಂಬ ದಶಕಗಳ ಹಿಂದೆಯೇ ಉದ್ಯೋಗದ ಸಲುವಾಗಿ ಬೆಂಗಳೂರು ಪಟ್ಟಣ ತೊರೆದಿದ್ದರು. ೨೦೦೪ ರಲ್ಲಿ ನಡೆದ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಮಾಯಾವತಿ, ಸರ್ಕಾರಿ ವೆಚ್ಚದಲ್ಲಿ ಪಕ್ಷದ ಮುಖಂಡ ಕಾನ್ಷಿರಾಂ, ಆನೆ, ಮತ್ತು ಮಾಯಾವತಿ ವಿಗ್ರಹಗಳನ್ನು ಸ್ಥಾಪಿಸಿದ ಬಗ್ಗೆ ಆಕ್ಷೇಪವೆತ್ತಿದ್ದರು. ಕಳೆದ ೬೦ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹೇಗೆ ಸರಕಾರಿ ಯೋಜನೆಗಳಿಗೆ ಗಾಂಧಿ ಕುಟುಂಬದ ಹೆಸರನ್ನು ಬಳಸಿಕೊಂಡಿದೆ ಎಂಬುದರ ವಿವರ ಅಧ್ಯಯನ ನಡೆಸಿ, ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿ, ರಾಷ್ಟ್ರದಾದ್ಯಂತ ಮೀಡಿಯ ಸುದ್ದಿಗೆ ಗ್ರಾಸವಾಗಿದ್ದರು. ರಾಷ್ಟ್ರದ ಥಿಂಕ್ ಟ್ಯಾಂಕ್ ಸದಸ್ಯರ ಪೈಕಿ, ಸೂರ್ಯ ಪ್ರಕಾಶರೂ ಒಬ್ಬರು, ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೂರ್ಯಪ್ರಕಾಸ್ ನಿರ್ವಹಿಸಿದ ಹುದ್ದೆಗಳು ಹಲವಾರು :

  • ಕಳೆದ ಎರಡೂವರ ದಶಕಗಳಿಂದ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸಮಾಡುತ್ತಾ ಬಂದಿದ್ದಾರೆ.
  • ಝೀ ಸುದ್ದಿ ವಾಹಿನಿ ಸಂಪಾದಕ,
  • ಪಯೋನೀರ್ ಪತ್ರಿಕೆ ಕಾರ್ಯ ನಿರ್ವಾಹಕ ಸಂಪಾದಕ,
  • ಏಷ್ಯನ್ ಟೈಮ್ಸ್ ಸಿಂಗಾಪುರ್, ಮತ್ತು ಬ್ಯಾಂಕಾಕ್ ಆವೃತ್ತಿಯ ಸಂಪಾದಕ,
  • ಈ ನಾಡು ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕ, ಸದ್ಯದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ೧೯೭೧ ರಲ್ಲಿ ಇಂಡಿಯನ್ ಎಕ್ಸ್ಪ್ರೆಶ್ ಪತ್ರಿಕೆಯ ಬೆಂಗಳೂರು ವರದಿಗಾರನಾಗಿ ಪತ್ರಿಕಾರಂಗ ಪ್ರವೇಶಿಸಿದ್ದರು.

ಪ್ರಶಸ್ತಿಗಳು, ಮತ್ತು ನಿಭಾಯಿಸಿದ ಹುದ್ದೆಗಳು

  • ೧೯೯೨ ರಲ್ಲಿ, ಭಾರತೀಯ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಅಭ್ಯಾಸಮಾಡಲು ಕೆ.ಕೆ.ಬಿರ್ಲಾ ಫೆಲೋಶಿಪ್ ಪ್ರದಾನಮಾಡಲಾಯಿತು.
  • ೧೯೯೩ ರಲ್ಲಿ, ಜರ್ಮನ್ ಬಂಡೆಸ್ಟಾಗ್ ನ ಕಾರ್ಯಪದ್ದತಿಯನ್ನು ಅಭ್ಯಾಸಮಾಡಲು ಪ್ರೆಡರಿಕ್ ಎಲ್ಬರ್ಟ್ ಫೌಂಡೇಶನ್ ಫೆಲೋಶಿಪ್ ದೊರೆಯಿತು.
  • ಬ್ರಿಟನ್ ಮತ್ತು ಜರ್ಮನಿಯ ಪಾರ್ಲಿಮೆಂಟ್ ಕಾರ್ಯ ನಿರ್ವಹಣೆಯ ವ್ಯವಸ್ಥೆಯನ್ನು ಅಭ್ಯಾಸಮಾಡಲು ದೇಶ-ವಿದೇಶಕ್ಕೆ ಹೋಗಿದ್ದರು.
  • ಪಾರ್ಲಿಮೆಂಟರಿ ಇನ್‍ಸ್ಟಿಟ್ಯೂಟ್ಸ್ ಗಳ ಬಗ್ಗೆ ಸ್ಟಡಿ ಮಾಡುವ ವಿಶೇಷಜ್ಞರಿಗೆ ಪ್ರತಿವರ್ಷವೂ ನೀಡುವ ಪ್ರಶಸ್ತಿಯ ಲೋಕ್ ಸಭಾ ಫೆಲೋಶಿಪ್ ಕಮಿಟಿಯ ಸದಸ್ಯರಾಗಿದ್ದರು.
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ
  • ದ ಇನ್‍ಸ್ಟಿಟ್ಯೂಟ್ ಆಫ್ ಪಾಲಿಸಿ ಸ್ಟಡೀಸ್ ನಿಂದ ಸರ್ದಾರ್ ಪಟೇಲ್ ಫೆಲೊಶಿಪ್,
  • ದ ಕರ್ನಾಟಕ ಪತ್ರಿಕ ಅಕಾಡೆಮಿ ಪ್ರಶಸ್ತಿ
  • ನಿರ್ಭೀತ ಪತ್ರಿಕೋದ್ಯಮದ ಅನುಕರಣೆಗಾಗಿ, ದ ಬಿಪಿನ್ ಚಂದ್ರ ಪಾಲ್ ಸನ್ಮಾನ್,
  • ಕೆ.ಕೆ.ಬಿರ್ಲಾ ಫೆಲೋಶಿಪ್ ಮತ್ತು ಫ್ರೆಡರಿಕ್ ಎಬರ್ಟ್ ಫೆಲೋಶಿಪ್

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ